ಸತ್ಯವನ್ನೇ ನುಡಿಸು ಗುರುವೇ ನರವಿಲ್ಲದ ಜಿಹ್ವೆಯೋಳ್ ! ಸ್ಥಿರವಾಗಿ ನೆಲೆಸು ಗುರುವೇ ಮರ್ಕಟ ಈ ಮನದೊಳ್ !

Friday 24 July 2009

“ಬತ್ತಿ ಹೋದ ಸಂಗೀತ "ಗಂಗೆ"


ಬತ್ತಿ ಹೋದ ಸಂಗೀತ "ಗಂಗೆ" ಗಂಗೂಬಾಯಿ ಹಾನಗಲ್ ರವರನ್ನು ಮೌನದಲ್ಲಿ ಸ್ಮರಿಸುತ್ತ
ಹಿಂದೂಸ್ತಾನಿ ಸಂಗೀತ ಲೋಕದ ಶ್ರೇಷ್ಟ ಗಾಯಕಿ ಗಂಗೂಬಾಯಿ ಹಾನಗಲ್ ಬಗ್ಗೆ ನಾನು ನನ್ನ ಸಣ್ಣ ವಯಸ್ಸಿನಲ್ಲಿ ಪಠ್ಯ ಒಂದರ ಮೊಲಕ ತಿಳಿದುಕೊಂಡಿದ್ದೆ ಹಿಂದೂಸ್ತಾನಿ ಸಂಗೀತ ಮಯಾವಾಗುತ್ತಿರುವ ಈ ಸಮಯದಲ್ಲಿ ಸಂಗಿತದ ಕೋಟೆ ಕಟ್ಟಿ ಮೆರೆದ ಮಹಾನ್ ವ್ಯಕ್ತಿ ನಮ್ಮ ನಾಡಿನ ಗಂಗೊಬಾಯಿ ಹಾನಗಲ್.


ಆಗ ನಂದು ತುಂಬಾ ಸಣ್ಣ ವಯಸ್ಸು ಅದೇನೋ ಹೇಳ್ತಾರಲ್ಲ "ಬಾಯಲ್ಲಿ ಬೇರಲಿಟ್ರೆ ಕಚ್ಚೋಕು ಬರಲ್ಲ" ಅಂತಹ ವಯಸ್ಸು ನನ್ನದು, ಅಂದು ಒಂದು ದಿನ ನನ್ನ ಶಾಲೆಯಲ್ಲಿ ತುಂಬಾ ನಿಶ್ಯಾಬ್ದದಿಂದ ಕೂಡಿತ್ತು ಅದೇನೋ ಗೊತ್ತಿಲ್ಲ ಎಲ್ಲರು ಅಂದು ಉತ್ಸಾಹದಿಂದ ಕೊತಿದ್ವಿ ಈ ದಿನಕ್ಕಾಗಿ ಕಾಯ್ತಾ ಇದ್ವಿ ಏಕೆಂದರೆ ಅಂದಿನ ವಿಷಯ ಕನ್ನಡ ಗದ್ಯ ಭಾಗದ ಗಂಗೂಬಾಯಿ ಹಾನಗಲ್ ಅವರ ಜೀವನದ
ಬಗ್ಗೆ ಪಾಠ ಮಾಡ್ತಾ ಇದ್ರು ನಿಜಾ ಹೇಳ್ಬೇಕು ಅಂದ್ರೆ ಅಂದಿನ ಪಾಠನಮ್ಮ ಜೊತೆ ಇದ್ದರೆಗಂಗೂಬಾಯಿ ಹಾನಗಲ್ ನಮ್ಮ ಜೊತೆ ಇದ್ದರೆ ಅನಿಸುತ್ತೆ ಅಲ್ವ !

ಅವರನ್ನ ನಾನು ತುಂಬಾ ಹತ್ತಿರದಿಂದ ನೋಡ್ಬೇಕು ಅಂತ ನನಗೆ ತುಂಬಾನೆ ಆಸೆ ಇತ್ತು ಏಕೆಂದರೆ ಅವರ ಅಭಿಮಾನಿಗಳಲ್ಲಿ ನಾನು ಒಬ್ಬ, ಅಭಿಮಾನಿ ಅಂದಾಕ್ಷಣ ನನಗೆ ಶಾಸ್ತ್ರೀಯ ಸಂಗೀತದ ಬಗ್ಗೆ ಜ್ಞಾನ ಏನು ಇಲ್ಲ ಆದ್ರೆ ಸಂಗೀತ ಕೇಳುವ ಹುಚ್ಚು ಕೇಳುತ್ತಾ ಹಾಡುವ ಹವ್ಯಾಸ ನನಗಿದೆ ಹಾಗಾಗಿ ನಾನು ಸಂಗೀತ ಯಾವುದೇ ಒಂದು ಎಳೆಯನ್ನು ಸಹ ಗೌರವಿಸುತಿನಿ. ಈ ನಾಲ್ಕು ಸಾಲುಗಳು ನನ್ನ ಬ್ಲಾಗ್ ನಲ್ಲಿ ಬರೀಬೇಕು ಅದನ್ನ ಎಲ್ಲರು ಓದಿ ನನ್ನ ಕಾಮೆಂಟ್ಸ್ ಗಳ ಲಿಸ್ಟ್ ಬೆಳಿಬೇಕು ಅಂತ ನಾನು ಬರಿತ ಇಲ್ಲ ನಮ್ಮ ನಿಮ್ಮೆಲ್ಲರನ್ನು ಅಗಲಿದ
ಗಂಗೂಬಾಯಿ ಹಾನಗಲ್ ಅವರಿಗೆ ಈ ಮೊಲಕ ನಾನು ಶ್ರದ್ದಾಂಜಲಿ ಸಲ್ಲಿಸುತ್ತಿದ್ದೇನೆ.

ಪ್ರೀತಿಯ ನನ್ನ ಗೆಳೆಯ/ಗೆಳತಿಯರೆ ಇವತ್ತು ನಾವೇನಾದರೂ ಸಾದಿಸ ಬೇಕು ಅಂದು ಕೊಂಡು ಹೊರಟರೆ ನಮ್ಮ ಹಿಂದೆ ಮಾದ್ಯಮಗಳ ಮುಖಾಂತರ ಪ್ರಚಾರ ಸಿಗುತ್ತೆ ಆದರೆ ಯವುದೇ ಪ್ರಚಾರವಿಲ್ಲದೆ ಇಡಿ ವಿಶ್ವವನ್ನೇ ತನ್ನ ಕಡೆಗೆ ಸೆಳೆದುಕೊಂಡ
ಸಂಗೀತ ಲೋಕದ ಶ್ರೇಷ್ಟ ಗಾಯಕಿ ನಮ್ಮ ಗಂಗೂಬಾಯಿ ಹಾನಗಲ್ . ಇದೋ ತಾಯಿ ನಿನಗೆ ನನ್ನ ನಮನ.

ನನ್ನಿಂದ ಇದಿನಿಯ ವರೆಗೂ ಏನನ್ನು ಸಾಡಿಸಲು ಆಗಿಲ್ಲ ಅಂತ ನಾನು ಯಾವತ್ತು ಕೊರಗುವುದಿಲ್ಲ ಏಕೆಂದರೆ "
ಸಾದನೆ ಮಾಡಿದವರ ಸ್ಮರಿಸುವುದೇ ಒಂದು ದೊಡ್ಡ ಸಾದನೆ ಅಲ್ವ !


ಬತ್ತಿ ಹೋದ ಸಂಗೀತದ ನದಿಯನ್ನು "ಗಂಗೆ"ಯಂತೆ ತುಂಬಿಸಲು ಮತ್ತೆ ನೀ ಹುಟ್ಟಿಬಾ"

ಇಂತಿ

ತೇವವಾದ ಕಣ್ಣೀರಿನ ರೆಪ್ಪೆಯಲ್ಲಿ
ನಿಮ್ಮ ದೊಡಮನಿ.ಮಂಜು

Monday 20 July 2009

ಈ ಪ್ರೀತಿನೆ ಹೀಗೆ !

ನಿಜಾ ಅಲ್ವ !
ಈ ಪ್ರೀತಿನೆ ಹೀಗೆ ಯಾವಾಗ ಯಾರಿಂದ ಯಾರಿಗೆ ಹೇಗೆ ಹುಟ್ಟುತ್ತೆ ಅನ್ನೋದು ಯಾರಿಗೂ ಗೊತ್ತಿರಲ್ಲ ! ಪ್ರೀತಿ ಮಾಡೋರ್ನ ಕೇಳಿ ನೋಡಿ ಅವರೆಲ್ಲ ಹೇಳೋದು ಇಷ್ಟೇ "ಮಗ ಅವಳನ್ನ ನೋಡಿದ ತಕ್ಷಣ ನನಗೆ ಅವಳು ಇಷ್ಟ ಆಗಿಬಿಟ್ಲು " ಇನ್ನು ಕೆಲವರ್ನ ಕೇಳಿ ನೋಡಿ "ಅದೇಕೋ ಗೊತ್ತಿಲ್ಲ ಕಣೆ ಅವನು ಅಂದ್ರೆ ನನಗೆ ತುಂಬಾ ಇಷ್ಟ " ಅಂತಾರೆ ನಿಜಾ ಹೇಳಬೇಕು ಅಂದ್ರೆ ಅವರಲ್ಲಿ ಈ ಪ್ರೀತಿ ಹುಟ್ಟೋಕೆ ಏನು ಕಾರಣ ಅಂತ ಅವರಿಗೆ ಗೊತ್ತಿರಲ್ಲ ಅಥವಾ ನಾನು ಅವನ/ಅವಳನ್ನ ಯಾಕೆ ಲವ್ ಮಾಡ್ತಾ ಇದೀನಿ ಅಂತ ಗೊತ್ತಿರಲ್ಲ ಆದ್ರು ಅವರೆಲ್ಲ ಲವ್ ಮಾಡ್ತಾನೆ ಇರ್ತಾರೆ ಅಲ್ವ !

ಒಂದು ಸರ್ವೇ ಪ್ರಕಾರ ಒಬ್ಬ ಹುಡುಗಿ ಒಬ್ಬ ಹುಡುಗನ್ನ ಇಷ್ಟ ಪಡ್ತಾ ಇದ್ದಾಳೆ ಅಂದ್ರೆ ಅವನಲ್ಲಿ ಇರೋ ಒಳ್ಳೆಯ ತನ, ನಿಸ್ವರ್ತ ಸ್ನೇಹ, ಪರಿಶುದ್ದ ಮನಸ್ಸು ಅಥವಾ ಯಾವುದೊ ಒಂದು ಕಾರಣಕ್ಕೆ ಅವಳಿಗೆ ಇಷ್ಟ ಆಗಿರ್ತಾನೆ ಆದ್ರೆ ಇನ್ನು ಕೆಲವರು ಹಾಗಲ್ಲ "ದಿನಕೊಂದು ಬೈಕ್ ತಗೊಂಡು ಫಿಲಂ ತೋರಿಸಿ ಅಲ್ಲಿ ಇಲ್ಲಿ ಸುತ್ತುಹರಿಸಿ ಕೇಳಿದನ್ನೆಲ್ಲ ಕೊಡಿಸುವಂತ ಹುಡುಗನ್ನೇ ಇಷ್ಟ ಪಡ್ತಾರೆ "
ಹಾಗಾದ್ರೆ ಪ್ರೀತಿ ಅಂದ್ರೆ ಇದೇನಾ ?

ಅಲ್ಲ !
ಅದು ಕೇವಲ ಆಕರ್ಷಣೆ ಮಾತ್ರ "ಪ್ರೀತಿ ಅನ್ನೋದು ಒಂದು ತಪಸ್ಸು". ಅದು ನಮಗೆ ಬೇಕೆಂದಾಗ ಬಯಸೋಕೆ, ಬೇಡ ಅಂದಾಗ ಬಿಸಾಡೋಕೆ ಮರದಲ್ಲಿ ಇರೋ ಹಣ್ಣು ಅಲ್ಲ ಮನೇಲಿ ಸಾಕೋ ಗಿಳಿನು ಅಲ್ಲ . ಈ ಪ್ರೀತಿ ಹುಟ್ಟುಬೇಕಾದ್ರೆ ಯಾರಿಗೂ ಹೇಳಿ ಕೇಳಿ ಹುಟ್ಟಲ್ಲ ಹುಟ್ಟೋಕೆ ಯಾರ ಅಪ್ಪಣೆನು ಬೇಕಿಲ್ಲ ಯಾಕೆಂದರೆ

ಹೇಳಿ ಬರುವುದು ಜೀವನ.
ಹೇಳದೆ ಬರುವುದು ಸಾವು.
ತಿಳಿದು ತಿಳಿಯದೆ ಆಗುವುದು ಪ್ರೀತಿ.

ಪ್ರೀತಿನ ಪ್ರೀತಿಯಿಂದ ಪ್ರೀತಿಸಿದರೆ ಪ್ರೀತಿ ಪ್ರೀತಿಯಾಗಿರುತ್ತೆ ಏಕೆಂದರೆ ಪ್ರೀತಿಯನ್ನು ಪ್ರೀತಿಸುವ ಪ್ರೀತಿ ಪ್ರೀತಿಗಾಗಿ ಪ್ರೀತಿಸುವ ಪ್ರೀತಿಯನ್ನು ಪ್ರೀತಿಸುತ್ತದೆ ! ಅಲ್ವ !

Saturday 18 July 2009

ನಿನ್ನ ಕಿರು ನಗೆ !



ನನ್ನ ನೀ
ಒಂದು ಕ್ಷಣವೂ
ಪ್ರೀತಿಸದಿದ್ದರು ಚಿಂತೆಯಿಲ್ಲ
ಕಡೆಯ ಪಕ್ಷ
ನಿನ್ನ ಕಿರು ನಗೆಯ ವರವ
ಕೊಡುವುದಾದರೆ ಚಿತೆಯಿಂದ
ಎದ್ದು ಬಂದು ಸ್ವೀಕರಿಸುವೆ
ಮರು ಜನ್ಮಕೆ ಕರುಣಿಸುವುದಾದರೆ
ಈ ಕ್ಷಣವೇ ಮಡಿದು
ನನ್ನೊಲವಿನ ಗೋರಿಯಾಗುವೆ,,,,,

"ದೇವರಲ್ಲೊಂದು ಪ್ರಾರ್ಥನೆ"


ನನ್ನ ಎರಡು ಕಣ್ಣುಗಳು
ಕುರುಡಾಗಿ ಹೋಗಲಿ ದೇವರೇ,,,,,
ನನ್ನವಳ ಸೌಂದರ್ಯ ನಾ ಕಂಡ ದಿನವೇ,,,,,

ನನ್ನ ಎರಡು ಕಿವಿಗಳು
ಕಿವುಡಾಗಿ ಹೋಗಲಿ ದೇವರೇ,,,,,
ನನ್ನವಳ ಮಧುರ ಸ್ವರವನ್ನು
ಕೇಳಿದ ತಕ್ಷಣವೇ,,,,,

ನಾ ನಾಡುವ ಮಾತುಗಳೆಲ್ಲ
ನಿಂತು ಹೋಗಲಿ ದೇವರೇ,,,,,
ನನ್ನ ಪ್ರೀತಿ ನನ್ನವಳಿಗೆ ಹೇಳಿದ
ಮರುಕ್ಷಣವೇ,,,,,

ನನ್ನ ಈ ಉಸಿರೇ
ನಿಂತು ಹೋಗಲಿ ದೇವರೇ,,,,,
ನನ್ನವಳು ನನ್ನ ನೋಡಿ
ನಕ್ಕ ಕ್ಷಣವೇ,,,,,

ನನ್ನ ಉಸಿರುನಿಂತ ಬಳಿಕ
ಅವಳ ದಾರಿಯಲಿ ನನ್ನನ್ನು
ಶಿಲೆಯಾಗಿ ಮಾಡು ದೇವರೇ,,,,,
ಆ ಶಿಲೆಯಲ್ಲು ನನ್ನ ಹೃದಯ
ಅವಳ ಹೆಸರನ್ನೇ ಜಪಿಸುತದ್ದೆ,,,,,

*******

Friday 17 July 2009

ಸದ್ದು ಗೆಳತಿ


ನೀ ಬರುವ ದಾರಿಯಲಿ
ಮಾಡಬೇಡ ಗೆಳತಿ
ನಿನ್ನ ಕೈ ಬಳೆಗಳ ಸದ್ದು

ಅದಕ್ಕೂ
ಕಾದು ಕೊತಿರುತ್ತವೆ
ನರಹದ್ದು

*******

ಗೋರಿ !


ಅವಳಿಗಾಗಿ ಕಾಯುತಿದ್ದೆ ನಾ ಅಂದು
ಅವಳಂದುಕೊಂಡಿದ್ದಳು ನನ್ನ ಪ್ರೀತಿ ಸುಳ್ಳೆಂದು
ನನಗಾಗಿ ಕಾಯುತ್ತಾ ಕುಳಿತಿದ್ದಾಳೆ ನನಗಿಂದು
ಅವಳಿಗೇನು ಗೊತ್ತು ತಾನು ನಿಂತಿರುವುದು
ನನ್ನ ಗೋರಿಯ ಮೇಲೆಂದು

Thursday 16 July 2009

ಯಾರವರು ?

ಯಾರೋ ನನ್ನ ಕರೆದರು
ಕರೆದು ಕರವ ಹಿಡಿದರು
ಕರವ ಹಿಡಿದು ಅರಿವಿನೆಡೆಗೆ ತಳ್ಳಿ ದೂರವಾದರು
ಎಲ್ಲಿಯವರು ಯಾರವರು ?


ದುಗುಡವೆಲ್ಲ ತೊಳೆದರು
ನಗೆಯ ಹೊನಲ ಹರಿಸಿದರು
ನವಿಲಗರಿಯ ಮೇಲೆ ನಡೆಸಿ ಹಾಲು-ತುಪ್ಪ ಎರೆದರು
ಎಲ್ಲಿಯವರು ಯಾರವರು ?


ಬರಡು ಭೂಮಿ ನಡುವೆ ನಿಲಿಸಿ
ಫಲದ ಬೀಜಾ ಬೀತ್ತಿಸಿದರು
ನೇಗಿಲ ಹಿಡಿವ ಯೋಗಿಯಮಾಡಿ ಮಳೆಯಾಗಿ ಸುರಿದರು
ಎಲ್ಲಿಯವರು ಯಾರವರು ?


ಮುಗ್ದ ಮುಖದ ಮನಸಿನಲ್ಲಿ
ಮಡಿಲ ಮಮತೆ ತೋರಿದರು
ಒಮ್ಮೆ ಕೊಗಿ ತಿರುಗುವಲ್ಲಿ ಯಾಕೆ ಮಾಯವಾದರು
ಎಲ್ಲಿಯವರು
ಯಾರವರು ?


ಕಡಲ
ತೀರದಲ್ಲಿ ಹಿಡಿದು
ಕೈಯ ಕಾಡ ಅಡವಿಯಲ್ಲಿ
ಬಿಟ್ಟರು ಬೆಚ್ಚಿ ಕೊಗಿ ಕರೆದರೊನು ಯಾಕೆ ಕೇಳದಾದರು
ಎಲ್ಲಿಯವರು ಯಾರವರು ?

* * * * * * *