ಸತ್ಯವನ್ನೇ ನುಡಿಸು ಗುರುವೇ ನರವಿಲ್ಲದ ಜಿಹ್ವೆಯೋಳ್ ! ಸ್ಥಿರವಾಗಿ ನೆಲೆಸು ಗುರುವೇ ಮರ್ಕಟ ಈ ಮನದೊಳ್ !

Wednesday, 22 December 2010

ಮರೀಚಿಕೆ...♥...♥...♥ಮೊನ್ನೆ ಹಾವೇರಿಯಿಂದ ಪ್ರಭು ಅನ್ನೋರು ನನಗೆ ಕಾಲ್ ಮಾಡಿ ಕುಶಲೋಪರಿ ವಿಚಾರಿಸಿದರು ತುಂಬಾ ಚನ್ನಾಗಿ ಮಾತಾಡಿದ್ರು ಮಾತಾಡ್ತಾ ಮಾತಾಡ್ತಾ ಏನ್ ದೊಡ್ಡಮನಿ ನಿಮ್ಮ ಮುಂದಿನ ಲೇಖನ ಯಾವ್ದು ಅಂತ ಕೇಳಿದ್ರು ನಾನು ಹೇಳ್ದೆ ಇಲ್ಲಾ ಸರ್ ಸ್ವಲ್ಪ ಬ್ಯುಸಿ ಆಗಿದಿನಿ ಯಾವದೇ ಬ್ಲಾಗ್ ಕಡೆ ಮುಖಾ ಮಾಡಿಲ್ಲ ಟೈಮ್ ಸಿಕ್ಕಾಗ ಮಾಡ್ತೀನಿ ಅಂದೇ ಸರಿ ಸರ್ ಆದಷ್ಟು ಬೇಗ ಮುಖಾ ಮಾಡಿ ಅಂತ ಹೇಳಿದ್ರು ಆಯ್ತು ಅಂದೆ ಆಮೇಲೆ ಅವರೇ ವಿಷಯಕ್ಕೆ ಬಂದ್ರು,


ಮಂಜು ಈ ಬಿಕ್ಕಳಿಕೆ ಬಂದ್ರೆ ಯಾರೋ ನಮ್ಮನ್ನ ನೆನಪು ಮಾಡಿಕೊಳ್ತಾ ಇದಾರೆ ಅಂತಾರೆ ಇದೆಲ್ಲ ನಿಜ ಅನಿಸುತ್ತಾ ನಿಮಗೆ ??????

ಪ್ರಭು ಕೇಳಿದ್ದು ಈ ಪ್ರಶ್ನೆ ಈಗ ಉತ್ತರ ಹೇಳ್ಬೇಕು ಅಲ್ವ ನಾನು ಅವರಿಗೆ ಫೋನ್ ಹೇಳಿದ ಥರ ಇಲ್ಲಿ ಹೇಳಿದ್ರೆ ಚನ್ನಾಗಿರೋಲ್ಲ ನಾನು ನನ್ನ ಬ್ಲಾಗ್ ಸ್ಟೈಲ್ ನಲ್ಲೆ ಹೇಳ್ತಾ ಹೋಗ್ತೀನಿ ಸ್ವಲ್ಪ ಕಷ್ಟ ಆದ್ರು ಇಷ್ಟಪಟ್ಟು ಓದಿ...♥...♥...♥

ಮರೀಚಿಕೆ ಈಗ ಪ್ರಾರಂಭ ...♥ ...♥ ...♥

ಹೇಮಂತ :- ಲೇ ಮಂಜು ನೀರು ಕುಡಿಯೋ ಬಿಕ್ಕಳಿಕೆ ನಿಲ್ಲುತ್ತೆ

ಉಮೇಶ :- ಲೇ.. ಹೇಮಾ ಅವ್ನು ಒಂದಲ್ಲ ಹತ್ತು ಲೋಟ ನೀರು ಕುಡಿದರು ಅವನಿಗೆ ಆ ಬಿಕ್ಕಳಿಕೆ ನಿಲ್ಲೋಲ್ಲ ಬಿಡೋ

ಹೇಮಂತ :- ಯಾಕೆ ನಿಲ್ಲಲ್ಲ ?

ಉಮೇಶ :- ಅದು ಅವನಿಗೆ ನನಗೆ ಮಾತ್ರ ಗೊತ್ತು...!

ಹೇಮಂತ :- ನನ್ನ ಮಗನೆ ತಲೇಲಿ ಹುಳ ಬಿಡಬೇಡ ಸರಿಯಾಗಿ ಹೇಳು ಅದೇನು

ಉಮೇಶ :- ನೀರು ಕುಡಿದರೆ ನಿಲ್ಲೋ ಬಿಕ್ಕಳಿಕೆ ಅಲ್ಲಾ ಅವನಿಗೆ ಬಂದಿರೋದು

ಹೇಮಂತ :- ನೀರು ಕುಡಿದನೆ ಬಿಕ್ಕಳಿಕೆ ಹೇಗೋ ನಿಲ್ಲುತ್ತೆ

ಉಮೇಶ :- ಅವನು ನೀರು ಕುಡಿದನೆ ಬಿಕ್ಕಳಿಕೆ ನುಲ್ಲುಸ್ತಾನೆ ಗೊತ್ತಾ

ಹೇಮಂತ :- ಒಹ್ ಹೌದ ಮತ್ತೆ ನಿಲ್ಲಿಸೋಕೆ ಹೇಳು ನೋಡೋಣ

ಉಮೇಶ :- ಸರಿ ನೋಡು ಈಗ, ಮಂಜಾ ಸಾಕು ನಿಲ್ಸೋ

(ಹ್ಹ ಹ್ಹ ಹ್ಹ ಅವಾಗ ನನ್ನ ಬಿಕ್ಕಳಿಕೆ ನಿಲ್ತು )

ಹೇಮಂತ :- ಲೋ ಹೇಗೋ ಸಾಧ್ಯ ಇದೆಲ್ಲ.

ನಾನು :- ಲೋ ಇಷ್ಟೇ ಕಣೋ ನಿನಗೆ ಬಿಕ್ಕಳಿಕೆ ಬಂದಾಗ ನಿನ್ನ ಯಾರೋ ನೆನಸಿಕೊಳ್ತಾ ಇರ್ತಾರೆ ಆಗ ಅವರನ್ನ ನೀನು ನೆನಪು ಮಾಡಿಕೊಂಡು ಅವರ ಹೆಸರು ಮನಸಲ್ಲೇ ಮೆಲಕು ಹಾಕು ಸಾಕು ಇಮಿಡಿಯಟ್ ನಿಲ್ಲುತ್ತೆ ಅಷ್ಟೇ

ಹೇಮಂತ :- ನನ್ನ ಮಕ್ಳ ನನ್ನೇನು ಬಕ್ರ ಅಂದುಕೊಂಡ್ರ ಇಲ್ದೆ ಇರೋದನ್ನೆಲ್ಲ ಹೇಳಿ ಡ್ರಾಮ ಮಾಡ್ತಿರ

ಉಮೇಶ :- ಅಯ್ಯೋ ಇಲ್ಲಪ್ಪ ಅದು ನಿಜಾನೆ ನಾನು ಕೆಲವೊಂದು ಸರಿ ಅದೇ ಥರ ಟ್ರೈ ಮಾಡಿದಿನಿ

ಹೇಮಂತ :- ಇಷ್ಟಕ್ಕೂ ನಮ್ಮನ ಅವರೇ ನೆನಪಿಸಿಕೊಳ್ತಾ ಇದಾರೆ ಅಂತ ಹೇಗೆ ಗೊತ್ತಾಗುತ್ತೆ ? ? ?

ನಾನು :- ನೋಡು ಈಗ ನಿನಗೆ ಬಿಕ್ಕಳಿಗೆ ಬಂತು ಅಂತ ತಿಳ್ಕ್ಕೋ ಅವಾಗ ನಿನಗೆ ಮನಸಿಗೆ ತುಂಬಾ ಹತ್ತಿರ ಅನಿಸಿರೋರ್ನ ನೆನಪು ಮಾಡೋಕೆ ಅದಾಗ ಅದೇ ನಿಲ್ಲುತ್ತೆ

ಉಮೇಶ :- ಈ ಕರಿಯಾ ಮುಂಡಾನಾ ಯಾರು ನೆನಪು ಮಾಡಿಕೊಳ್ತಾರೆ ಬಿಡೋ ಬಿಕ್ಕಳಿಕೆ ಬರೋಕೆ
(ಹೇಮಂತ್ ಗೆ ನಮ್ಮ ಕಾಲೇಜ್ ಲೆಕ್ಚರ್ ಇಟ್ಟ ಹೆಸರು ಕರಿಯಾ ಮುಂಡಾ ಅಂತ ಯಾಕಂದ್ರೆ ಅಷ್ಟೊಂದು ಬ್ಲಾಕ್ ಇದ್ದ ಅವನು, ನನಗೆ ಆ ಹೆಸರಿನ ಅರ್ಥ ಇದುವರೆಗೂ ಗೊತ್ತಾಗಿಲ್ಲ ಬಟ್ ಕರೆಯೌದ್ ಮಾತ್ರ ಯಾರು ಬಿಟ್ಟಿಲ್ಲ)

ಹೇಮಂತ :- ಥೂ ನನ್ನ ಮಕ್ಳ ಹಾಳಾಗಿ ಹೋಗ್ರಿ

ಉಮೇಶ :- ನೀನು ಅದೇ ಆಗು

ಹೇಮಂತ :- ಹ್ಮಂ ಹೋಗ್ಲಿ ನೀನು ಬಿಕ್ಕಳಿಕೆ ಬಂದಾಗ ಯಾರನ್ನ ನೆನಪು ಮಾಡಿಕೊಳ್ತಿಯ ಅವರ ಹೆಸರು ಏನು ?

ನಾನು :- ಮರೀಚಿಕೆ..♥...♥...♥ ಅಂತ

ಹೇಮಂತ :- ಈ ಥರ ಹೆಸರು ಯಾರಾದ್ರೂ ಇಟ್ಕೋಳ್ತರ

ಉಮೇಶ :- ಯಾರು ಇಟ್ಟಿದಲ್ಲ ಅವನೇ ಇಟ್ಟಿರೋದು

ಹೇಮಂತ :- ಅಂದ್ರೆ ?

ಉಮೇಶ :- ನಿಂಗೆ ನಿಜವಾದ ಹೆಸರು ಗೊತ್ತಾಗಬಾರ್ದು ಅಂತ ಆ ಹೆಸರು ಹೇಳಿದನೆ ತಮ್ದು ತಮಟೆ ಬಾಯಿ ಅಲ್ವ ಅದಕ್ಕೆ

ಹೇಮಂತ :- ಥೂ ನನ್ನ ಮಕ್ಳ ಹಾಳಾಗಿ ಹೋಗ್ರಿ

ಉಮೇಶ್ :- ಬರ್ತೀಯ ನೀನು

ಹೇಮಂತ :- ಏನಕ್ಕೆ ?

ಉಮೇಶ :- ಹಾಳಾಗೋಕೆ ಜೊತೆಗೆ

ಹೇಮಂತ :- ಹ್ಮಂ ಹಿಂಗೆ ಇದ್ರೆ ನಿಮ್ ಜೊತೆ ನನ್ನ ಹಾಳು ಮಾಡ್ತಿರ

ಉಮೇಶ :- ಒಹ್ ! ನಾವು ಆ ಥರ ಅಲ್ಲಾ ! ನಾವು ಹುಡುಗ್ರನೆಲ್ಲ ಹಾಳು ಮಾಡೋಲ್ಲ

ನಾನು :- ಸಾಕು ನಿಲ್ಲಿಸ್ರೋ ಒಬ್ಬನಿಗಾದ್ರು ಎಂ.ಎಂ.ಇದೇನಾ

ಹೇಮಂತ :- ಎಂ.ಎಂ. ಹಾಗಂದ್ರೇನು

ನಾನು :- ಮಾನ ಮರ್ಯಾದೆ ಅಂತ

ಹೇಮಂತ :- ಥೂ ನನ್ನ ಮಕ್ಳ ಹಾಳಾಗಿ ಹೋಗ್ರಿ ನಿಮ್ ಜೊತೆ ಇದ್ರೆ ನಾನು ಮೆಂಟ್ಲು ಆಗ್ತೀನಿ.

ಉಮೇಶ್ :- ಬ......ರ್ತೀ......ಯ ನೀನು..........!

ಇಲ್ಲಿದೆ ಮನಸ್ಸುಗಳ ತರಂಗ...♥...♥...♥

ಬಿಡಿ ನನ್ನ ಕಾಲೇಜ್ ಲೈಫ್ ಬಗ್ಗೆ ಹೇಳ್ತಾ ಹೋದ್ರೆ ಕೊನೇನೆ ಇರೋಲ್ಲ ಈಗ ಸೀದ ವಿಷಯಕ್ಕೆ ಬರೋಣ.

ಹೌದು ಬಿಕ್ಕಳಿಕೆ ಅನ್ನೋದೇ ಹೀಗೆ, ನಿಮ್ಮ ನಮ್ಮ ಮನೇಲಿ ಯಾರಾದ್ರೂ ಹಿರಿಯ ವಯಸ್ಸಿನೋರು ಇದ್ರೆ ಬಿಕ್ಕಳಿಕೆ ಬಂದ ತಕ್ಷಣ ಹೇಳೋ ಮಾತು ಯಾರೋ ನಿನ್ನ ನೆನಪು ಮಾಡಿಕೊಳ್ತಾ ಇದಾರೆ ಅಂತ, ಕೆಲವು ಕಡೆ ಯಾರೋ ಬೈತಾ ಇದಾರೆ ಅಂತನು ಹೇಳ್ತಾರೆ.

ಇದನ್ನ ನೀವು ಮೋಡ ನಂಬಿಕೆ ಅಂತಿರ ? ಇಲ್ಲಾ ಇದು ನಿಜ ಅಂತಿರ ?

ನೀವು ಏನ್ ಅನ್ನಿ ನಾನು ಮಾತ್ರ ಇದು ಸತ್ಯ ಅಂತಾನೆ ಹೇಳೋದು ಏಕಂದ್ರೆ ನನಗೆ ತುಂಬಾನೇ ಅನುಭವವಾಗಿದೆ ಇದರಲ್ಲಿ ಒಂದು ಸಲ ಹೀಗೆ ನಮ್ಮ ಕಾಲೇಜ್ ನಲ್ಲಿ ಬಿಕ್ಕಳಿಕೆ ಶುರುವಾಯ್ತು ಹತ್ರ ನೀರು ಇರ್ಲಿಲ್ಲ ಹೊರಗಡೆ ಹೋಗಿ ನೀರು ಕುಡಿಯೋಣ ಅಂದ್ರೆ ಲೆಕ್ಚರ್ ಕ್ಲಾಸ್ ತಗೊಂಡಿದ್ರು ಕೇಳೋಕೆ ಮನಸ್ಸು ಬರ್ಲಿಲ್ಲ ಆಗಲೇ ಸ್ವಲ್ಪ ತಲೆ ಓಡಿಸಿದೆ ನನಗೆ ಇಷ್ಟವಾದವರನೆಲ್ಲ ನೆನಪು ಮಾಡಿಕೊಳ್ತಾ ಬಂದೆ ಹ್ಮಂ ಹ್ಮಂ ನಿಲ್ಲಲಿಲ್ಲ ಆಗಲೇ ಬಿಕ್ಕಳಿಕೆ ಸೌಂಡ್ ಜಾಸ್ತಿ ಆಗಿ ಕ್ಲಾಸ್ ಗೆಲ್ಲ ಕೇಳ್ತಾ ಇತ್ತು ಅಷ್ಟರಲ್ಲಿ ಒಂದು ಹೆಸರು ನನಪಿಗೆ ಬಂತು ನೋಡಿ ನೆನಸ್ಕೊಂಡು ಬಿಟ್ಟೆ ತಕ್ಷಣ ನಿಲ್ಲೋದಾ ನನ್ನ ಪುಣ್ಯಕ್ಕೆ ಆ ಹೆಸರು ಬೇಗನೆ ನೆನಪಾಯ್ತು ಇಲ್ಲಾ ಅಂದಿದ್ರೆ ಆ ಲೆಕ್ಚರ್ ಕೈಯಲ್ಲಿ ಸಿಕ್ಕಪಟ್ಟೆ ಬೈಸ್ಕೋ ಬೇಕಿತ್ತು.

ಅವತ್ತಿಂದ ಇವತ್ತಿನ ವರೆಗೂ ನನ್ನ ಬಿಕ್ಕಳಿಕೆ ತಡೆಯೋಕೆ ಆ ಹೆಸರು ಸಾಕು ಈಗ್ಲೂ ಕೆಲವೊಮ್ಮೆ ಅಮ್ಮ ನ ಜೊತೆ ಫೋನ್ ನಲ್ಲಿ ಮಾತಾಡುವಾಗ ಬಿಕ್ಕಳಿಕೆ ಬರುತ್ತೆ ಅಮ್ಮ ಹೇಳ್ತಾ ಇರ್ತಾರೆ ನೀರು ಕುಡಿಯೋ ಅಂತ ನಾನು ಆಗ ಆ ಹೆಸರು ನೆನಸಿಕೊಳ್ತಿನಿ ಬಿಕ್ಕಳಿಕೆ ನಿಲ್ಲುತ್ತೆ ಮತ್ತೆ ಅಮ್ಮ ಕೇಳ್ತಾರೆ ನೀರು ಕುಡುದ್ಯಾ ಅಂತ ಆಗ ಹೇಳ್ತೀನಿ ಇಲ್ಲಾ ಅಮ್ಮ ಯಾರನ್ನೋ ನೆನಪು ಮಾಡಿಕೊಂಡೆ ನಿಲ್ತು ಅಂತ ನಮ್ಮ ಆಮನಿಗೆ ಅಷ್ಟು ಸಾಕು ಸ್ಟಾರ್ಟ್ ಮಾಡಿಕೊಳ್ತಾರೆ "ಯಾರನ್ನ ನೆನಸ್ಕೊಂಡೆ ? " "ಎಲ್ಲಿದಾರೆ ? " "ಹುಡುಗನ ಹುಡುಗಿನ ?" ಅಂತ ಅವಕೆಲ್ಲ ಉತ್ತರ ಕೊಟ್ರೆ ಉಳಿಗಾಲ ಇಲ್ಲಾ ಅಂತ ನನಗೆ ಗೊತ್ತು ಅದಕ್ಕೆ ಬೇರೆ ಏನೇನೊ ಮಾತಾಡಿ ಟಾಪಿಕ್ ಚೇಂಜ್ ಮಾಡ್ತೀನಿ ಯಾಕೆ ಬೇಕು ಅಲ್ವ ಆ ಮರೀಚಿಕೆ..♥...♥...♥ಹೆಸರು ಹೇಳೋದು

ನಗೆ ಅನಿಸುತ್ತೆ, ನಾವು ನೀವು ಎಲ್ಲೋ ಇರ್ತಿವಿ ಫೋನ್ ನಲ್ಲಿ ಮಾತಾಡ್ತೀವಿ ಅದು ಹೇಗೆ ಸಾದ್ಯ ???? ಯಾರೋ ಫೋನ್ ಅನ್ನೋದನ್ನ ಕಂಡು ಹಿಡಿದ್ರು ಇವತ್ತು ನಾವು ನಮ್ಮಿಂದ ಎಸ್ಟೋ ದೂರ ಇರೋರ್ ಜೊತೆ ಮಾತಡ್ತಿವಿ ಇದಕ್ಕೆಲ್ಲ ಕಾರಣ ಮನುಷ್ಯನ ಬುದ್ಧಿ ಶಕ್ತಿ, ಕಣ್ಣಿಗೆ ಕಾಣದ ತರಂಗಗಳು...!

ಹಾಗೆ "ಮನುಷ್ಯ ಅನ್ನೋ ಮನುಷ್ಯನಲ್ಲಿರುವ ಮನಸ್ಸುಗಳಿಗೂ ಮನಸ್ಸು ಅಂತ ಇರುತ್ತೆ ಆ ಮನಸುಗಳು ಸಹ ಮನಸ್ಸಲ್ಲಿ ಇರೋ ಮನಸ್ಸಿನೊಂದಿಗೆ ಮನಸ್ಸು ಕೊಟ್ಟು ಮನಸಾರೆ ಮನಸ್ಸು ಬಿಚ್ಚಿ ಮಾತಾಡುತ್ತವೆ" ಆ ಮನಸ್ಸುಗಳ ನಡುವೆ ನನಗೂ ನಿಮಗೂ ಗೊತ್ತಿಲ್ದೆ ಇರೋ ಯಾವ್ದೋ ಒಂದು ಅದ್ಬುತ ಶಕ್ತಿ ತರಂಗಗಳ ಮೂಲಕ ಮನಸುಗಳ ಮಿಲನಕ್ಕೆ ನಾಂದಿಯಾಗಿದೆ....!

ನೀವು ಗಮನಿಸಿರ್ತಿರ ಅವಳಿ ಜವಳಿ ಮಕ್ಕಳು ಇದ್ರೆ ಒಬ್ಬ ಮಗುಗೆ ಜ್ವರ ಬಂದ್ರೆ ಇನ್ನೊದು ಮಗು ಎಷ್ಟೇ ದೂರ ಇದ್ರೂ ಆ ಮಗುಗು ಜ್ವರ ಬಂದಿರುತ್ತೆ ಈ ಥರ ಉದಾಹರಣೆಗಳು ಸಿನಿಮಾಗಳಲ್ಲಿ ತುಂಬಾ ಇವೆ ಅದು ನಮಗೂ ಗೊತ್ತು ಆದರೆ ಅದಕ್ಕೆ ತಜ್ಞರು ಅವರದೇ ಆದ ರೀತಿನಲ್ಲಿ ವಿವರಣೆ ನಿಡ್ತಾರೆ ಅದಕ್ಕೆ ನಾವು ವಿಜ್ಞಾನ ಅಂತಿವಿ ಅದೇ ಒಬ್ಬ ಹಳ್ಳಿಯವ ಅದರ ಬಗ್ಗೆ ತನ್ನ ಮಾತಿನಲ್ಲಿ ಸರಳವಾಗಿ ವಿವರಣೆ ಕೊಟ್ರೆ ಅದೇ ನಾವೇ ಅಜ್ಞಾನ, ಮೋಡ ನಂಬಿಕೆ ಅಂತೆಲ್ಲ ಕರಿತಿವಿ ಅಲ್ವ ..!

ಈಗ್ಲೂ ಕಾಲ ಮಿಂಚಿಲ್ಲ ನಿಮಗೂ ಬಿಕ್ಕಳಿಕೆ ಬರುತ್ತೆ ಬಂದಾಗ ಒಂದು ಸಾರಿ ನಿಮ್ಮನ್ನ ಇಷ್ಟ ಪಡೋ ಇಲ್ಲಾ ನಿಮ್ಮ ಮನಸ್ಸಲ್ಲಿರೋ ಹೆಸರನ್ನ ನೆನೆಸಿಕೊಂಡು ನೋಡಿ ಮನಸ್ಸುಗಳ ತರಂಗದ ಅರಿವು ನಿಮಗೂ ಆಗುತ್ತೆ..!

ಮನಸ್ಸಲ್ಲಿ ಇರೋರು ಅಂದ್ರೆ ಲವರ್ ಅಂತ ಎಷ್ಟೋ ಜನ ತಪ್ಪು ಕಲ್ಪನೆಯಲ್ಲಿ ಮುಳುಗಿದರೆ, ನಿಮ್ಮನ್ನ ನೆನಪು ಮಾಡಿಕೊಳ್ಳೋಕೆ ನಿಮ್ನ ಪ್ರೀತಿ ಮಾಡ್ತಾ ಇರೋರೆ ಆಗಬೇಕು ಅಂತ ಇಲ್ಲಾ ತಾಯಿ, ತಂದೆ, ಅಕ್ಕ ತಮ್ಮ ಇಲ್ಲಾ ಎಂದೋ ಬಸ್ ಸ್ಟಾಪ್ ನಲ್ಲಿ ಸಿಕ್ಕು ಪರಿಚಯ ಆಗಿ ಇವತ್ತು ನಿಮ್ ಜೊತೆ ಸಂಪರ್ಕದಲ್ಲಿ ಇಲ್ದೇ ಇರೋರು ಆಗಿರಬಹುದು, ಇಲ್ಲಾ ನಿಮ್ಮ ಕಲ್ಪನೆಯಲ್ಲಿ ಹುಟ್ಟಿಕೊಂಡ ನಿಮ್ಮ ಬಾಳ ಸಂಗಾತಿಯಾಗಿರಬಹುದು ಅಂತಹ ಪಾತ್ರಗಳಿಗೆ ನಾನು ಮರೀಚಿಕೆ..♥...♥...♥ ಅಂತ ಕರೆಯೋಕೆ ಇಷ್ಟ ಪಡ್ತೀನಿ.

"ನಾನಂತೂ ಪ್ರೇಮಿ ಅಲ್ಲಾ, ಯಾವದೇ ಪ್ರೇಮದಲ್ಲಿ ಬಿದ್ದಿಲ್ಲ , ಆದ್ರು ಮರೆಯದ ಮರೀಚಿಕೆಯ ಹೆಸರು ಮಾತ್ರ ಇನ್ನು ಮರೆತಿಲ್ಲ"
♥...♥...♥..♥...♥...♥..♥...♥...♥
ಕಣ್ಣಿಗೆ ಕಾಣದ ಓ ಮನವೇ
ನೆನಪಿನಂಗಳದ ಓ ತನುವೇ
ನೀ ಎಂದು ನೆನಪಾಗಿರು
ನೆನಪಿನ ತೋಟದ ಹೂವಾಗಿರು
ನೀ ನನ್ನ ನೆನೆದಾಗ ಬಿಕ್ಕಳಿಕೆಯ
ಮೊದಲ ಗುರುತು ನಿನಾಗಿರು
♥...♥...♥..♥...♥...♥..♥...♥...♥

ನೀನಾಗು ಎಂದು ನನ್ನ ಕೈ ಸಿಗದ ಮರೀಚಿಕೆ
ನೀನಾಗು ಎಂದು ನನ್ನ ಮರೆಯದ ಮರೀಚಿಕೆ
ನೀನಾಗು ಎಂದು ನನ್ನ ಮನತುಂಬುವ ಮರೀಚಿಕೆ...!
♥...♥...♥..♥...♥...♥..♥...♥...♥..♥...♥..♥...♥...♥..♥...♥...♥

"ಕ್ರಿಸ್ಮಸ್ ಹಬ್ಬದ ಶುಭಾಶಯಗಳೊಂದಿಗೆ"

ಇಂತಿ
ಮರೆಯಲಾರದ ಮರೀಚಿಕೆ

?
ಮಂಜು ದೊಡ್ಡಮನಿ...♥...♥..♥
9742495837

Monday, 4 October 2010

ಗೋವಿಂದನ ಗಾದೆ ಪುರಾಣ ...!

ಪಾತಿ ಕತೆ ಮುಗಿದು ಹೋಯ್ತು ಸರ್ ಬೇರೆಯೇನಾದ್ರು ಬರೀರಿ ಅಂತ ತುಂಬಾ ಫ್ರೆಂಡ್ಸ್ ಮೇಲ್ ಮಾಡಿದ್ರು ಚಾಟ್ ಮಾಡಿದ್ರು ಕಾಲ್ ಮಾಡಿ ಕೂಡ ಹೇಳಿದ್ರು ನಾನು ಅವರಿಗೆಲ್ಲ ತಾಳಿ ತಾಳಿ ಒಂದು ಮೂವತ್ತು ದಿನ ಓಡಲಿ ಆಮೇಲೆ ಏನಾದ್ರು ಬರೆಯೋಣ ಅಂತ ಹೇಳಿ ಸಮಾಧಾನ ಮಾಡಿದ್ದೆ ಈಗ ನೋಡಿ 30 ದಿನ ಆಗಿದೆ ಏನ್ ಬರೀಬೇಕು ಅಂತ ಗೊತ್ತಾಗ್ತಾ ಇಲ್ಲಾ ಆದ್ರು ಬರಿಲೇ ಬೇಕು ಅಂತ ಇರೋ ಬರೋ ಎನರ್ಜಿನೆಲ್ಲ ಉಪಯೋಗಿಸಿ ಇದನ್ನ ಬರ್ದಿದೀನಿ ಕಾರಣ ಮೂನ್ನೆ ಯಾರೋ ನನಗೆ ಫೋನ್ ಮಾಡಿ "ಮಲ್ಟಿ ಟ್ಯಾಲೆಂಟ್ ಮಂಜು" ಅಂತ ಬಿರುದು ಕೊಟ್ರು ಅಲ್ದೆ ಯಾರೋ ಒಬ್ರು ಕಾಮೆಂಟ್ಸ್ ಕೊಡ ಹಾಕಿದ್ರು, ಈ ಕಂದಾ, ಮುದ್ದು, ಬಂಗಾರ, ಚಿನ್ನ, ರನ್ನ ಇನ್ನು ಹೇಳ್ಬೇಕು ಅಂದ್ರೆ ಪೊರ್ಕಿ, ಲೂಸು, ಮೆಂಟ್ಲು, ಪೋಲಿ ಅಂತೆಲ್ಲಾ ಕೊಟ್ಟ ಹುಡುಗೀರ ಬಿರುದುಗಳಿಗಿಂತ ಇದ್ಯಾಕೋ ಹಾರ್ಟ್ ಟಚ್ ಮಾಡ್ತು ರೀ ಅದಕ್ಕೆ ಒಂದು ಕಾನ್ಸೆಪ್ಟ್  ತಗೊಂಡು ಈ ಪುರಾಣ ಬರ್ದಿದೀನಿ. ನೀವು ಕಷ್ಟ ಪಟ್ಟಾದರು ಓದಿ ಮುಗಿಯೋ ತನಕ ಬಿಡುಬೇಡಿ ಒಂದೇ ಟೈಮ್ ಓದುಬೇಕು ಗಮನ ಇಟ್ಟು ಓದಿ ಓದುವಾಗ ಎಲ್ಲೂ ನಿಲ್ಲಿಸಬಾರ್ದು ತುಂಬಾ ಹುಷಾರು ಯಾಕಂದ್ರೆ ನಾನು ಒಂದು ನಿಮಗೆ ಪ್ರಶ್ನೆ ಕೇಳ್ತೀನಿ ಜಾಗ್ರತೆ ಉತ್ತರ ಕೊಟ್ಟವರಿಗೆ ಸೂಕ್ತ ಬಹುಮಾನ ಇದೆ. 

     ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಅಂತ ಹೇಳ್ತಾರಲ್ಲ ಅದು ನಿಜ ಇರ್ಬೇಕು ಕಣ್ರೀ ಆನೆ ನಡೆದದ್ದೇ ದಾರಿ ಅನ್ನೋ ಹಾಗೆ ನಮ್ಮ ಗೋವಿಂದ ನಡೆದದ್ದೇ ದಾರಿ ಯಾರು ಮಾತು ಕೇಳೋನಲ್ಲ ಅವನದೇ ಹಠ...... ಹೀಗಿರುವಾಗ ಕೆಲವೊಬ್ರು ಅವನಿಗೆ ಊರಿಗೊಂದು ದಾರಿ ಆದ್ರೆ ಎಡವಟ್ಟನಿಗೆ ಒಂದು ದಾರಿ ಅಂತ ಬೆನ್ನು ಹಿಂದೇ ಹೇಳ್ತಾ ಇದ್ರೂ ಅವನು ಕೇಳಿದ್ರು ಕೇಳ್ದೆ ಇರೋ ಥರ ಇರ್ತಾ ಇದ್ದಾ . ಯಾಕಂದ್ರೆ ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತ ? ? ? ? 

ಈಗ ನೇರವಾಗಿ ವಿಷಯಕ್ಕೆ ಬರೋಣ ಕುಂತು ತಿಂದರೆ ಕುಡಿಕೆ ಹೊನ್ನು ಸಾಲದು ಅಂತ ದೊಡ್ಡವರು ಹೇಳಿದರೆ ಅಲ್ವ  ಅಲ್ದೆ  ಕೈ ಕೆಸರಾದರೆ ಬಾಯಿ ಮೊಸರು ಅಂತ ನಾನು ಚಿಕ್ಕವನಿರುವಾಗ ನಮ್ಮ ಟೀಚರ್ ಹೇಳ್ತಾ ಇದ್ರೂ  ಈಗ ನಮ್ಮ ಗೋವಿಂದ ಓದಿದ್ದು ಆಯ್ತು ಎಲ್ಲಾದ್ರು ಕೆಲಸ ಹುಡುಕೋಣ ಅಂತ ಯೋಚನೆ ಮಾಡ್ತಾ ಕೂತಿದ್ದ   ಅದೇನೋ ಹೇಳ್ತಾರಲ್ಲ ಕೆಟ್ಟು ಪಟ್ಟಣ ಸೇರು ಅಂತ ಆದರೆ ಇವನು ಇನ್ನು ಕೆಟ್ಟು ಹೋಗಿರಲಿಲ್ಲ...! ನೋಡೋಕೆ ಸಾದು ಥರ ಇದ್ದಾ, ತನ್ನ ಊರಲ್ಲಿ ಕೆಲಸ ಮಾಡೋಕೆ ಇಷ್ಟ ಇರಲಿಲ್ಲ ಅವನಿಗೆ ಅದಕ್ಕೆ ಬೆಂಗಳೂರಿಗೆ ಹೋಗಿ ಏನಾದ್ರು ಮಾಡೋಣ ಅಂತ ಯೋಚನೆ ಮಾಡ್ತಾ ಇರುವಾಗಲೇ ರೋಗಿ ಬಯಸಿದ್ದು ಹಾಲು ಅನ್ನ ವೈದ್ಯ ಹೇಳಿದ್ದು ಹಾಲು ಅನ್ನ ಅನ್ನೋ ಹಾಗೆ ಹಾಗೋ ಹೀಗೋ ಒಬ್ಬ ಪರಿಚಯ ಆಗಿ ಗೋವಿಂದನ್ನ ಬೆಂಗಳೂರಿಗೆ ಕರ್ಕೊಂಡು ಬಂದ, ಅವ್ನೋ.... ಮಾತು ಬೆಳ್ಳಿ ಮೌನ ಬಂಗಾರ ಥರ ಹೊಸ ಜಾಗ... ಹೊಸ ಫ್ರೆಂಡ್ಸ್.... ಹೇಗೋ ಹೊಂದಿ ಕೊಂಡಿದ್ದ ಬಂದು ಸ್ವಲ್ಪ ದಿನದಲ್ಲೇ ಕೆಲಸ ಸಿಕ್ತು,  ಪಾಲಿಗೆ ಬಂದಿದ್ದು ಪಂಚಾಮೃತ ಅಲ್ವ ಸಿಕ್ಕ ಕೆಲಸ ಸರಿಯಾಗಿ ಮಾಡಿಕೊಂಡು ಹೋಗ್ತಾ ತಿಂಗಳಿಗೆ ಸರಿಯಾಗಿ ಸಂಬಳ ತಗೊಂಡು ಆರಾಮಗಿದ್ದ. ಈ ಬೆಂಗಳೂರ್ ಸಿಟಿಗೆ ಬಂದಮೇಲೆ ಅವನಿಗೆ ದುಡಿಮೆಯೇ ದುಡ್ಡಿನ ತಾಯಿ ಅನ್ನೋದು ಅರಿವಾಯ್ತು, ಅವನಾದ್ರು ಒಂದೇ ಹತ್ರ ಎಷ್ಟು ದಿನ ಅಂತ ಕೆಲಸ ಮಾಡ್ತಾನೆ ಬೆರಳು ತೋರಿಸಿದರೆ ಹಸ್ತ ನುಂಗೋ ವಂಶ ಅವಂದು ಆಗಲೇ ಫುಲ್ ಕೆಲಸ ಕಲ್ತಿದ್ದ ನಯಶಾಲಿ ಆದವನು ಜಯಶಾಲಿ ಆದನು ಅಂತ  ಬೇರೆಕಡೆ ಎಲ್ಲೇ ಹೋದ್ರು ಬದುಕ್ತೀನಿ ಅನ್ನೋ ಧೈರ್ಯದಿಂದ ಬೇರೆ ಕೆಲಸಕ್ಕೆ ಸೇರ್ಕೊಂಡ. 

ರವಿ ಕಾಣದನ್ನ ಕವಿ ಕಂಡ ಅನ್ನೋ ಮಾತು ಎಷ್ಟು ನಿಜ ರೀ ಒಂದು ದಿನ ಗೋವಿಂದ ಹೊಟ್ಟೆ ತುಂಬಾ ಊಟ ಮಾಡಿ ಮಲ್ಕೊಂಡಿದ್ದ ರಾತ್ರಿ ಕನಸಲ್ಲಿ ಕಾಜೋಲ್ ಜೊತೆ ಶೂಟಿಂಗ್ ಇತ್ತು  ಐಶ್ವರ್ಯ  ಆಕಡೆ ಇಂದ ಗೋ...ಗೋ....ಗೋ... ಗೋವಿಂದಾ........... ಅಂತ ಓಡಿ ಬರ್ತಾ ಇದ್ಲು ಈ ಕಡೆ ಇಂದ ಗೋವಿಂದ .............ಐಶ್ವರ್ಯ  ಅಂತ ಓಡಿ ಬರ್ತಾ ಇದ್ದ ಇನ್ನೇನು ಇಬ್ರು ಹತ್ರ ಬಂದ್ರು ಬಂದ್ರು ಬಂದೆ ಬಿಟ್ರು ಅನ್ನೋ ಅಷ್ಟರಲ್ಲಿ  ಶಿವ ಪೂಜೆಲಿ ಕರಡಿ ಬಿಟ್ಟಂತೆ  ಅವ್ನ ಫ್ರೆಂಡ್ ಗೋವಿಂದ ಯಾಕೋ ಈ ಥರ ಕೂಗ್ತಾ ಇದೀಯ ಬೆಳಗ್ಗೆ 8 ಘಂಟೆ ಆಯ್ತು ಎದ್ದೇಳೋ ಅಂತ ಎಬ್ಬಿಸಿ ಬಿಟ್ಟ ಕಣ್ರೀ ಪಾಪ ಗೋವಿಂದನ ಕನಸು ಅಲ್ಲಿಗೆ ಮುಕ್ತಯಾ ಆಯ್ತು ಹಿಂಗಾಗಬಾರ್ದಿತ್ತು ಅಲ್ವ !  ಹೋಗ್ಲಿ ಬಿಡಿ ಅದ್ಯಾಕೆ ಈಗ ಕೊಂಕಣ ಸುತ್ತಿ ಮೈಲಾರಕ್ಕೆ ಯಾಕ ಬರೋದು ನೇರ ವಿಷ್ಯಕ್ಕೆ ಬರೋಣ, ಹುಟ್ಟು ಗುಣ ಸುಟ್ರು ಹೋಗೋಲ್ಲ ಅಂತಾರೆ ಅಂತದ್ರಲ್ಲಿ ಈ ಗೋವಿಂದನಿಗೆ  ರಾತ್ರಿ ಮಲ್ಗೊವಾಗ ಒಂದು ಬೀಡಿ ಸೇದೋ ಅಭ್ಯಾಸ ಇತ್ತು ಅವತ್ತೊಂದು ದಿನ ಹೊರಗಡೆ ಹೋಗಿ ಬೀಡಿ ಸೇದೋಣ ಅಂತ ಅನ್ಕೊಂಡ ಆದ್ರೆ ತುಂಬಾ ಮಳೆ ಬರ್ತಾ ಇತ್ತು ಫ್ರೆಂಡ್ಸ್ ಎಲ್ಲಾ ಮಲ್ಕೊಂಡಿರೋದು ನೋಡಿ ತಾನು ಇದ್ದಲ್ಲೇ ಬೀಡಿ ಹಚ್ಚಿಕೊಂಡು ಸೇದುತ್ತ ಕೂತ, ಬೀಡಿ ಹಾಚ್ಚೋವಾಗಿ ಬೆಂಕಿ ಕಡ್ಡಿ ಗೀರಿ ಅದೆಲ್ಲಿ ಎಸೆದ್ನೋ ಏನೋ ಸ್ವಲ್ಪ ಹೊತ್ತಲ್ಲೇ ಇಡಿ ಮನೆಗೆ ಬೆಂಕಿ ಹತ್ತಿ ಹೋಯ್ತು ಕೋತಿ ತಾನು ಕೆಡೋದಲ್ದೆ ವನನೆಲ್ಲ ಕೆಡಿಸ್ತು ಅನ್ನೊ ಮಾತು ಜೊತೆಗಿದ್ದ ಫ್ರೆಂಡ್ಸ್ ಬಾಯಲ್ಲಿ ಬಂದ್ರು ಯಾರು ಅವನಿಗೆ ಏನು ಅನ್ಲಿಲ್ಲ ಯಾಕಂದ್ರೆ ಅವನನ್ನ ಕೆಡೋಥರ ಮಾಡಿದ್ದೆ ಅವರು. ನಾಯಿ ಬಾಲ ಯಾವತ್ತಿದ್ರೂ ಡೊಂಕು ಅಲ್ವ ಕಡ್ಡಿನ ಗುಡ್ಡ ಮಾಡೋ ಸ್ವಭಾವ ನಮ್ಮ ಗೋವಿಂದಂದು ಪಕ್ಕದ ಮನೆ ಪದ್ಮಕ್ಕನ ಮಗಳು ಕಾಲೇಜ್ ಮುಗಿಸ್ಕೊಂಡು ಬೈಕ್ ನಲ್ಲಿ ಒಬ್ಬ ಹುಡುಗನ ಜೊತೆ ಸುತ್ತೊದನ್ನ ನೋಡಿ ಸೀದಾ ಪದ್ಮಕ್ಕನ ಮನೆಗೆ ಹೋಗಿ ನಿಮ್ಮ ಮಗಳು ಇದಾಳಲ್ಲ ಅವಳು ಅದ್ಯಾರೋ ಹುಡುಗುನ್ ಜೊತೆ ಹಾಗೆ ಹೀಗೆ ಅಂತೆಲ್ಲ ಇಲ್ದೆ ಇರೋದನ್ನೆಲ್ಲ ಹೇಳಿ ಪದ್ಮಕ್ಕನ ಕೈಲಿ ನಾಯಿ ಥರ ಹೊಡಿಸ್ಕೊಂಡಿದ್ದ ಯಾಕಂದ್ರೆ ಪದ್ಮಕ್ಕನ ಮಗಳ ಜೊತೆ ಇದ್ದದ್ದು ಪದ್ಮಕ್ಕನ ಅಳಿಯ ಮಗಳಿಗೆ ಮದುವೆ ಮಾಡಿ ಇನ್ನು 3 ತಿಂಗಳು ಆಗಿರಲಿಲ್ಲ..! ಕೆಲಸವಿಲ್ಲದ ಆಚಾರಿ ಮಗನ ತಲೆ ಕೆತ್ತಿದಂತೆ ಇವನು ಏನಾದ್ರು ಒಂದು ಮಾಡ್ತಾ ಇರ್ತಾನೆ ಕೊಚ್ಚೆ ಮೇಲೆ ಕಲ್ಲು ಹಾಕಿ ಸಿಡಿಸ್ಕೊಳ್ಳೋದು ನಮ್ಮ ಗೋವಿಂದನಿಗೆ ಹೊಸದಲ್ಲ ಬಿಡಿ.

ಗೋವಿಂದನ ಈ ಆಟಗಳನ್ನ ನೋಡಿ ಬೆಂಗಳೂರು ಬಿಡಿಸಿ ಊರಲ್ಲಿ ಹೊಲ ಗದ್ದೆ ನೋಡ್ಕೊಂಡು ಇರು ಅಂತ ಹೇಳಿ ಅಪ್ಪ ಅಮ್ಮ ಅವನಿಗೆ ಒಂದು ಮದುವೆ ಮಾಡ್ತಾರೆ ಮದುವೆ ಆದ ಸ್ವಲ್ಪ ದಿನದಲ್ಲೇ ಹೆಣ್ಣು ಕೊಟ್ಟ ತಂದೆ ತಾಯಿ ಗಿಣಿ ಸಾಕಿ ಗಿದಗನ ಕೈಗೆ ಕೊಟ್ವಿ ಅಂತ ಗೊತ್ತಾಗುತ್ತೆ ಹೀಗಿರುವಾಗ ಹಬ್ಬಕ್ಕೆ ಅಂತ ಹೆಂಡ್ತಿ ಜೊತೆ ಮಾವನ ಮನೆಗೆ ಹೋದ್ರೆ ಅತ್ತೆ ಗೌರಿ ಹಬ್ಬಕ್ಕೆ ಬಂದ ಗತಿಗೆಟ್ಟ ಅಳಿಯ ಅಂತ ಮನಸ್ಸಲ್ಲೇ ಅನ್ಕೊಂಡು ಸ್ನಾನಕ್ಕೆ ಅಂತ ಬಚ್ಚಲ ಮನೆಗೆ ಕಳಿಸಿದ್ರೆ ತಾನು ಸ್ನಾನ ಮಾಡೋದು ಬಿಟ್ಟು ಹಂಚು ತಗೆದು ಪಕ್ಕದ ಮನೆಯವರು ಸ್ನಾನ ಮಾಡೋದು ನೋಡಿ ಸಿಕ್ಕು ಬಿದ್ದು ಊರೆಲ್ಲ ಸೇರಿ ಹೊಡಿಯೋಕು ಮುಂಚೆ ಹೆಂಡ್ತಿ ಕರ್ಕೊಂಡು ಹೇಳ್ದೆ ಕೇಳ್ದೆ ಊರು ಬಿಟ್ಟು ತನ್ನೂರಿಗೆ ಬಂದಿದ್ದ. ಇವನ ತರ್ಲೆಗಳನ್ನ ನೋಡಿ ನೋಡಿ ಸಾಕಾಗಿದ್ದ ಅವನ ಹೆಂಡ್ತಿಗೆ ಜೀವನ ತಾಳ ತಪ್ಪಿದ ಬಾಳು ತಾಳಲಾರದ ಗೋಳು ಆಗಿತ್ತು.

ಹಂಗು ಹಿಂಗು ಗೋವಿಂದ ಕಷ್ಟ ಪಟ್ಟು ಒಂದು ಮಗುನ ತನ್ನ ಹೆಂಡ್ತಿ ಕೈಗೆ ಕೊಟ್ಟಿದ್ದ. ಅದೋ ಗಂಡು ಮಗು ಆ ಮಗು ಬಗ್ಗೆ ಹೇಳ್ಬೇಕು ಅಂದ್ರೆ ಎಲ್ಲಾ ಗೋವಿಂದನ ಥರಾನೆ ಅಪ್ಪ ಗುಡಿ ಕಟ್ಟಿದರೆ ಮಗ ಕಳಸ ಇಟ್ಟ ಅನ್ನೋದಕ್ಕೆ ಆ ಮಗುನೆ ಸಾಕು. ಇನ್ನು ನಮ್ಮ ಗೋವಿಂದನ ಕಂಡ್ರೆ  ಹೆತ್ತೋರ್ಗೆ ಹೆಗ್ಗಣ ಮುದ್ದು ಕಟ್ಗೊಂಡೋರ್ಗೆ ಕೋಡಂಗಿ ಮುದ್ದು ಅನ್ನೋದನ್ನ ಅವನ ತಂದೆ ತಾಯಿ ಅಲ್ದೆ ಹೆಂಡ್ತಿ ಕೊಡ ನಿಜ ಮಾಡಿ ಬಿಟ್ಟಿದ್ರು ಅವನು ಬದಲಾಗೊಲ್ಲ ಅಂತ ಗೊತ್ತಿದ್ದೇ ಅವರು ಅವನಿಗೆ ಬುದ್ಧಿ ಹೇಳೋಕೆ ಹೋಗ್ತಾ ಇರ್ಲಿಲ್ಲ ಯಾಕಂದ್ರೆ ಬೋರ್ಗಲ್ಲ ಮೇಲೆ ನೀರು ಸುರಿದಂತೆ ಏನೆ ಹೇಳಿದ್ರು ಉಪಯೋಗ ಇಲ್ಲಾ ಅಂತ ಸುಮ್ನೆ ಇರ್ತಾ ಇದ್ರೂ. 

ಹೋಗ್ಲಿ ಬಿಡಿ ನಿಮಗ್ಯಾಕೆ  ಆ ಮುಸಿಕಿನೊಳಗೆ ಗುದ್ದಿಸಿಕೊಳ್ಳೋ ಗೋವಿಂದನ ವಿಚಾರ ಓದಿದ್ದು ಆಯ್ತಲ್ಲ ಅವನ ಕಥೆ,  ನಾನು ನಿಮಗೆ ಮೊದ್ಲೇ ಹೇಳಿದ್ದೆ ಒಂದು ಪ್ರಶ್ನೆ ಕೇಳ್ತೀನಿ ಅಂತ ಆ ಟೈಮ್ ಬಂದಿದ್ದೆ ಈಗ ಹೇಳಿ 

1. ಈ ಪುರಾಣದಲ್ಲಿ ಒಟ್ಟು ಎಷ್ಟು ಗಾದೆಗಳು ಇವೆ ?
2. ಇಲ್ಲಿ ಇರುವ ಗಾದೆಗಳಲ್ಲಿ ಅತಿ ಚಿಕ್ಕ ಗಾದೆ ಯಾವ್ದು ?

 ಸರಿಯಾಗಿ ಹೇಳಿದ ಮೊದಲ 3 ಆತ್ಮೀಯರಿಗೆ ಸೂಕ್ತ ಬಹುಮಾನ ಇರುತ್ತೆ ಮರೆಯ ಬೇಡಿ ತ್ವರೆ ಮಾಡಿ ...!


       ನಿಮ್ಮ ಹುಡುಗ

?ದೊಡ್ಡಮನಿ.ಮಂಜು

         97424 95837

Wednesday, 8 September 2010

ಮಂಜು ಹೀಗೇನೆ ..!

ಪಂಚರಂಗಿ ಚಿತ್ರದ "ಲೈಫು ಇಷ್ಟೇನೇ" for a change
"ಮಂಜು ಹೀಗೇನೆ"Monday, 30 August 2010

ನಾನು ಲಟ್ಟಣಿಕೆ ಮತ್ತೆ ಚಪಾತಿ..!

ದೋ ಭಾನುವಾರ ಶುದ್ಧ ಸೋಮಾರಿಗಳ ವಾರ ನಾನೋ ಮೊದ್ಲೇ ಸೋಮಾರಿ ಘಂಟೆ 11 ಆದ್ರು ಏಳೋ ದಿಲ್ಲ ಅಂತದ್ರಲ್ಲಿ ಮೊನ್ನೆ ಯಾಕೋ ಬೇಗ ಎಚ್ಚರ ಆಯ್ತು ಬೇಗ ಅಂದ್ರೆ ಎಷ್ಟು ಬೇಗ ಗೊತ್ತ ರೀ ಇನ್ನು 9 ಘಂಟೆ ಆಗಿತ್ತು ಛೇ.. ಯಾಕಪ್ಪ ಇಷ್ಟ ಬೇಗ ಎಚ್ಚರ ಆಯ್ತು ಅನ್ಕೊಂಡು ಕಣ್ಣು ಬಿಟ್ಟು ಶ್ರೀ ಕೃಷ್ಣ ಪರಮಾತ್ಮನ ಫೋಟೋ ನೋಡಿ ಕೈ ಮುಗಿದು ಎದ್ದೆ, ಅವತ್ತು ನನ್ನ ಫ್ರೆಂಡ್ ರೂಮ್ ನಲ್ಲಿ ಇರ್ಲಿಲ್ಲ ಬೆಳಗ್ಗೆ ಬೆಳಗ್ಗೆನೇ ಏನೋ ವರ್ಕ್ ಇದೇ ಬರೋದು ಸಂಜೆ ಆಗುತ್ತೆ ಅಂತ ಹೋಗಿದ್ದ ಹೊಟ್ಟೆ ಯಾಕೋ ತುಂಬಾ ಹಸಿತ ಇತ್ತು ಎಲ್ಲಾ ಮುಗಿಸ್ಕೊಂಡು ಕಾಫಿ ಕುಡಿಯೋಣ ಅಂತ ಬೇಕರಿಗೆ ಹೋದೆ ಅಲ್ಲಿಂದ ಕಾಫಿ ಕುಡಿದು ಮತ್ತೆ ರೂಮ್ ಗೆ ಬಂದೆ ಸ್ನಾನ ಮಾಡೋಣ ಅಂತ ನೀರು ಕಾಯೋಕೆ ಇಡೋಣ ಅಂತಿದ್ದೆ ಹೊಟ್ಟೆ ಯಾಕೋ ತುಂಬಾನೇ ಹಸಿತ ಇತ್ತು ಹೋ ಈಗ ಸ್ನಾನ ಮಾಡೋದು ಬೇಡ ಹೋಟೆಲ್ ಗೆ ಹೋಗಿ ಏನಾದ್ರು ತಿಂದು ಬಿಟ್ಟು ಆಮೇಲೆ ಸ್ನಾನ ಮಾಡೋಣ ಅಂತ ರೂಮ್ ಬಿಟ್ಟು ಹೊರಗಡೆ ಬಂದೆ ಅದೇನ್ ತಿಳಿತೋ ಏನೋ ನನ್ನ ಬುದ್ಧಿಗೆ ಅಲ್ಲಾ ಇವತ್ತಾದ್ರೂ ಹೋಟೆಲ್ ಊಟ ಬಿಟ್ಟು ರೂಮ್ ನಲ್ಲೆ ಏನಾದ್ರು ಮಾಡಿಕೊಳ್ಳೋಣ ಅಂತ ಮನಸ್ಸು ಅನಿಸುತ್ತೆ ಅನಿಸಿದ್ಧನ ಮಾಡೋದೇ ಮಂಜು ಸ್ಟೈಲ್ ಅಲ್ವ ..! 

ಸರಿ ಏನ್ ಮಾಡೋದು ಹೊಟ್ಟೆ ಬೇರೆ ಹಸಿತ ಇದೇ ಬೇಗ ಅಗೋ ಅಂತದ್ದು ಮಾಡ್ಬೇಕು ಅಂತ ಅಂಗಡಿಗೆ ಹೋಗಿ 1 ಕೆ ಜಿ ಚಪಾತಿ ಕೊಡಿ ಅಂದೇ ಪಾಪ ಶೆಟ್ಟಿಗೆ ಬೆಳಗ್ಗೆ ಬೆಳಗ್ಗೆ ತಲೆ ಕೆಟ್ಟೋಯ್ತು ಅನಿಸುತ್ತೆ ನನ್ನ ಮಾತು ಕೇಳಿ ಆಮೇಲೆ ನಾನೇ ಸಾರೀ ಸಾರೀ ಚಪಾತಿ ಹಿಟ್ಟು ಕೊಡಿ 1 ಕೆ ಜಿ ಅಂದೇ ಆ ಆಸಾಮಿ ಏನು ಮಾತಾಡದನೆ ಕೊಟ್ರು ನಾನು ತಗೊಂಡು ಬಂದೆ ಸರಿ ಈಗ ಚಪಾತಿ ಮಾಡಬೇಕಲ ಅಂತ ಸ್ವಲ್ಪ ಚಪಾತಿ ಹಿಟ್ನ ಪಾತ್ರೆಗೆ ಹಾಕಿ ನೀರು ಹಾಕಿ ಕಲಿಸಿದೆ ನೀರು ಸ್ವಲ್ಪ ಜಾಸ್ತಿ ಆಯ್ತು ಅಂತ ಮತ್ತೆ ಹಿಟ್ಟು ಹಾಕ್ದೆ ಮತ್ತೆ ಛೆ.. ಛೆ .. ಹಿಟ್ಟು ಫುಲ್ ಗಟ್ಟಿ ಆಯ್ತು ಅಂತ ಮತ್ತೆ ನೀರು ಹಾಕಿದೆ ಹೀಗೆ ಮಾಡ್ತಾ ಮಾಡ್ತಾ ಟೈಮ್ ನೋಡಿದೆ ಆಗಲೇ 9:30 ಆಗಿತ್ತು ಹಿಟ್ನ ಚಾಕು ತಗೊಂಡು ಪೀಸ್ ಪೀಸ್ ಮಾಡಿದೆ ಅದು ೯ ಪೀಸ್ ಆಯ್ತು ಅರೆ ಒಂಬತ್ತು ಆಯ್ತಲ್ಲ ಅಂತ ಎಲ್ಲದರಲ್ಲೂ ಸ್ವಲ್ಪ ಸ್ವಲ್ಪ ತಗೊಂಡು ಮತ್ತೊಂದು ಪೀಸ್ ಮಾಡಿ ಅಲ್ಲಿಗೆ ಹತ್ತು ಪೀಸ್ ಮಾಡಿದೆ ಈಗ ಮುಂದಿನ ಕಾರ್ಯ ಪೀಸ್  ಗಳನ್ನೆಲ್ಲ ಉದ್ದುಬೇಕು ಉದ್ದೋಕೆ ಲಟ್ಟಣಿಕೆ ಮಣಿ ತಗೊಂಡೋ ಕೆಳಗಡೆ ಒಂದು ಯಾವೊದೋ ನ್ಯೂಸ್ ಪೇಪರ್  ತಗೊಂಡು ಅಗಲವಾಗಿ ಹಾಸಿ ಅದರಮೇಲೆ ಚಪಾತಿ ಮಣೆ ಇಟ್ಟೆ ( ಅಮ್ಮ ಚಪಾತಿ ಉದ್ದುವಾಗ ಚಪಾತಿ ಹಿಟ್ಟು ನೆಲದಲ್ಲಿ ಬಿಳುತ್ತೆ ಅಂತ ಆ ಥರ ಪೇಪರ್ ಹಾಕ್ತ ಇದ್ರೂ ಅದನ್ನ ನೋಡಿದ್ದ ನೆನಪು ) ಹ್ಮಂ ಮೊಬೈಲ್ ನಲ್ಲಿ ಮ್ಯೂಸಿಕ್ ಹಾಕಿದ್ದೆ ಪಲ್ಲವಿ ಅವರು " ನೀ ಇಲ್ಲದೆ ನನಗೇನಿದೆ " ಅಂತ ಹಾಡ್ತಾ ಇದ್ರೂ ಕೇಳೋಕೆ ತುಂಬಾ ಚನ್ನಾಗಿತ್ತು ಕೇಳ್ತಾ ಕೇಳ್ತಾ ಚಪಾತಿ ಉದ್ದೋಕೆ ಶುರು ಮಾಡಿದೆ. ಅವಾಗ ಟೈಮ್  ಹತ್ತು ಘಂಟೆಗೆ ಹತ್ತು ನಿಮಿಷ ಕಮ್ಮಿ ಇತ್ತು. 

ನಿಮ್ಮಾಣೆ ಕಣ್ರೀ ನಾನು ಭೂ ಪಟದಲ್ಲಿ ಯಾವ ಯಾವ ದೇಶ ಯಾವ ಯಾವ ಶೇಪ್ ನಲ್ಲಿ ಇವೆ ಅಂತ ಗೊತ್ತಿರ್ಲಿಲ್ಲ (ಭಾರತ ಶ್ರೀಲಂಕ ಬಿಟ್ಟು ) ಅದೇನು ನನ್ನ ಭಾಗ್ಯನೋ ಏನು ನಾನು ಉದ್ದಿದ ಮೊದಲ ಚಪಾತಿಯಲ್ಲಿ ಪಾಕಿಸ್ತಾನ ಎರಡನೇ ಚಪಾತಿಯಲ್ಲಿ  ಆಫ್ಘಾನಿಸ್ತಾನ ಇನ್ನೊಂದರಲ್ಲಿ ಬಾಂಗ್ಲಾದೇಶ ಮತ್ತೊಂದರಲ್ಲಿ ಅಂತು ಬಿಡಿ100% ಶ್ರೀಲಂಕಾನೇ ಆಗಿತ್ತು ಇದನೆಲ್ಲ ನೋಡಿ ಜೀವನ ಪಾವನ ಆಯ್ತು ಅನ್ಕೊಂಡೆ   ಅವನ್ನೆಲ್ಲ  ಉದ್ದಿ ಉದ್ದಿ ಒಂದು ತಟ್ಟೆ ಮೇಲೆ ಹಾಕ್ತ ಇದ್ದೆ ಅವೋ ಒಂದ್ರು ಮೇಲೆ ಒಂದು ಒಂದ್ರು ಮೇಲೆ ಒಂದು ಹಾಕಿದ್ರಿಂದ ಅಂಟಿಕೊಂಡಗ್ಗೆ ಇದ್ವು  ನಾನು ಅಷ್ಟು ಗಮನಿಸಿರಲಿಲ್ಲ. ಕಣ್ಣು ಮತ್ತೆ ಟೈಮ್ ಕಡೆ ಹೋಯ್ತು ಆಗಲೇ 10:30 ಆಗಿತ್ತು ಹೊಟ್ಟೆ ಹಸಿವು ಜಾಸ್ತಿ ಆಗ್ತಾನೆ ಇತ್ತು.

     ಮುಂದೆ ಉದ್ದಿದ್ದ ಚಪಾತಿಗಳನ್ನ ಹಂಚಿನಲ್ಲಿ ಬೇಯಿಸಬೇಕು ಅಂತ ಹಂಚು ಗ್ಯಾಸ್ ಮೇಲೆ ಇಟ್ಟು ಒಂದೊಂದೇ ಚಪಾತಿ ಬೇಯಿಸೋಕೆ ತಯಾರಾದೆ ಚಮಚದಿಂದ ಹಂಚ ಮೇಲೆ ಎಣ್ಣೆ ಹಾಕೋದು ಕೈಗೆ ಸಿಕ್ಕ ದೇಶಗಳನ್ನ ಹಂಚ ಮೇಲೆ ಹಾಕಿ ಬೇಯಿಸ್ತ ಹೋದೆ ಸ್ವಲ್ಪ ಹೊತ್ತಿಗೆ ವಾಸನೆ ಬರ್ತಾ ಇತ್ತು ಅವಾಗ ನನಗೆ ಅನಿಸ್ತು ಈಗ ಚಪಾತಿ ಬೆಂದಿದೆ ತಿರುಗಿಸಿ ಹಾಕಬೇಕು ಅಂತ ತಿರುಗಿಸಿ ಹಾಕ್ದೆ...... ಏನು ಜಾದು ಮಾಡ್ತು ರೀ ಆ ಹಂಚು ಬಿಳಿ ಇದ್ದ ಚಪಾತಿನೆಲ್ಲಾ ನನ್ನ ಕೂದ್ಲುಗಿಂತ ಕಪ್ಪುಗೆ ಮಾಡಿಬಿಟ್ಟಿತ್ತು ಅದು ಕಪ್ಪು ಆಗೋದಿರ್ಲಿ ಅವನೆಲ್ಲ ಬೇಯಿಸೋ ಅಷ್ಟರಲ್ಲಿ ನನ್ನ ಕೈ ಎಷ್ಟು ಸಲ ಸುಟ್ಟು ಹೋಗಿತ್ತೋ ಲೆಕ್ಕ ಇಲ್ಲಾ ಹಸಿವು ಬೇರೆ ತಾಳೋಕೆ ಆಗ್ತಾ ಇರ್ಲಿಲ್ಲ ಮತ್ತೆ ಟೈಮ್  ನೋಡಿಕೊಂಡೆ ಆಗಲೇ ಸರಿಯಾಗಿ ೧೨.೦೦ ಆಗಿತ್ತು ಮೊಬೈಲ್ ನಲ್ಲಿ "ಆಹಾ ಭಾಗ್ಯವೇ ಇದು ಎಂತ ಸಮಯವೂ" ಅಶ್ವಥ್ ಅವರು ಹಾಡ್ತಾ ಇದ್ರೂ ನನ್ನ ಭಾಗ್ಯದ ಕಡೆ ಒಮ್ಮೆ ಯೋಚಿಸಿ ಇದೆಲ್ಲ ಬೇಕಾಗಿತ್ತಾ ನನಗೆ ಹೋಟೆಲ್ ಗೆ ಹೋಗಿದ್ರೆ ಆರಾಮಾಗಿ ತಿಂದು ಬರ್ತಾ ಇದ್ದೆ ಅನ್ಕೊಂಡೆ. 

ಅಂತು ಇಂತೂ ಚಪಾತಿ ಎಲ್ಲಾ ಬೇಯಿಸಿ ಹಂಚು ಕೆಳಗಡೆ ಇಟ್ಟು ಗ್ಯಾಸ್ ಆಫ್ ಮಾಡಿದೆ. ಚಪಾತಿ ಉದ್ದು ಮಣಿ ಲಟ್ಟಣಿಕೆ ಅಲ್ಲೇ ಬಿಟ್ಟಿದ್ದೆ ಎತ್ತಿ ಸೈಡ್ ನಲ್ಲಿ ಇಡೋಣ ಅಂತ ಮಣಿ ಲಟ್ಟಣಿಕೆನ ತಗ್ದು ಮೇಲೆ ಇಟ್ಟಿ ಮಣೆ  ಕೆಳಗಡೆ ಪೇಪರ್ ಹಸಿದ್ದೆ ಅದನ್ನು ತಗೆಯೋಣ ಅಂತ ಕೈ ಹಾಕ್ದೆ ... !  ಇದೊಂದು ಕಡಿಮೆ ಆಗಿತ್ತು ನನ್ನ ಭಾಗ್ಯಕ್ಕೆ ಆ ಪೇಪರ್ ಕೈ ನಲ್ಲಿ ತಗೊಂಡು ನೋಡ್ತೀನಿ ಶ್ರೀ ಶ್ರೀ ಶ್ರೀ ನಿತ್ಯಾನಂದ ಸ್ವಾಮಿಗಳು ಫ್ರಂಟ್ ಪೇಜ್ ನಲ್ಲಿ ಯಾರಿಗೋ ಆಶೀರ್ವಾದ ಮಾಡೋ ಸ್ಟೈಲ್ ನಲ್ಲಿ ನಿಂತಿದ್ರು ಅಲ್ಲಿಗೆ ನನ್ನ ಜನ್ಮ ಫುಲ್ ಪಾವನವಾಯ್ತು ಅನ್ಕೊಂಡು ಅದನ್ನ ಮುದುರಿ ಕಸದ ಡಬ್ಬಕ್ಕೆ ಹಾಕಿ..... ಇನ್ನೇನು ಎಲ್ಲಾ ಮುಗಿತು ಚಪಾತಿ ತಿನ್ನೋಣ ಅಂತ ಪ್ಲೇಟ್ ಗೆ ಚಪಾತಿ ಹಾಕೊಂಡೆ ಆಮೇಲೆ ಅನಿಸ್ತು ನನಗೆ "ಮಂಜಾ ನೀ ತುಸು ನೀರಲ್ಲಿ ಮುಳುಗಿಲ್ಲ ಬರೋಬ್ಬರಿ ಸಮುದ್ರದಲ್ಲೇ ಮುಳುಗಿದಿಯ ಚಪಾತಿ ಜೊತೆ ತಿನ್ನೋಕೆ ಏನಿದೆ ಅಂತ ಚಪಾತಿ ಮಾಡಿದಿಯ ಅಮ್ಮ ಕಳಿಸಿದ್ದ ಚಟ್ನಿ ಪುಡಿ ಫುಲ್ ಖಾಲಿ ಆಗಿದೆ... ಅಲ್ಲಿಗೆ ಆಗ್ಲೇ ೧೨.೨೦ ಆಗಿತ್ತು .  ಅಂಗಡಿಗೆ ಹೋಗಿ ಬಾಳೆ ಹಣ್ಣೋ ಇಲ್ಲಾ ಕಿಸ್ಸನ್ ಜಾಮೋ ತಂದು ತಿನ್ನೋಣ ಅಂತ ಮತ್ತೆ ಹೊರಗಡೆ ಹೋದೆ ನನ್ನ ಗಮನ ಮತ್ತೆ ಹೋಟೆಲ್ ಕಡೆ ಹೋಯ್ತು ಅಲ್ಲಾ ಹೋಟೆಲ್ ಗೆ ಹೋಗಿದ್ರೆ ಚಪಾತಿ ಜೊತೆ ಚಟ್ನಿ ಇಲ್ಲಾ ಪಲ್ಯ ಏನಾದ್ರು ಕೊಡ್ತಾರೆ ನಾನು ಯಾಕೆ ಪಲ್ಯ ಮಾಡ್ಕೋ ಬಾರ್ದು ಅಂತ ಅನ್ಕೊಳ್ತಾ ಇರುವಾಗ್ಲೇ ಗಾಡಿಯಲ್ಲಿ ಒಬ್ಬ ಅವರೆಕಾಯಿ.... ಅವರೆಕಾಯಿ..... ಅಂತ ಕೂಗ್ತಾ ಬರ್ತಾ ಇದ್ದ ಸರಿ ಅವರೆಕಾಯಿ ಪಲ್ಯ ಮಾಡೋಣ ಅಂತ ಆತನ ಹತ್ರ ಹೋಗಿ ೧ ಕಿಲೋ ಅವರೆಕಾಯಿ ತಗೊಂಡು ರೂಮ್ ಗೆ ಬಂದೆ, ನನಗೆ ಬೆಳಗ್ಗೆ ಯಿಂದ ಎಷ್ಟು ಹೊಟ್ಟೆ ಹಸಿದ್ರು ಸಮಾಧಾನದಿಂದ ಇದ್ದೆ ಕಣ್ರೀ ಈ ಅವರೆಕಾಯಿ ಯಾವಾಗ ತಗೊಂಡು ಬಂದನೋ ಅವಗಿಂದ ನನ್ನ ಮೇಲೆ ನನಗೆ ಸಿಕ್ಕಪಟ್ಟೆ ಕೋಪ ಬಂತು ಯಾಕೆ ಅಂತ ಗೊತ್ತ ನಾ ತಂದಿದ್ದು  ಅವರೆಕಾಯಿನ ಅದನ್ನ ಸಿಪ್ಪೆ ಬಿಡಿಸಿ ಕಾಳು ಹೊರಗೆ ತೆಗಿಬೇಕಿತ್ತು ಈಗಲೇ ಟೈಮ್ ಇಷ್ಟೊಂದು ಆಗಿದೆ ಇನ್ನು ಇದನೆಲ್ಲ ಒಂದೊಂದೇ ಬಿಡಿಸಿ ಬಿಡಿಸಿ ಪಲ್ಯ ಮಾಡೋದ್ರಲ್ಲಿ ನನ್ನ ಕತೆ ಮುಗಿತು ಅನ್ಕೊಂಡೆ.

ನಾನು ಒಂಥರಾ ಲೂಸ್ ಮಾಡಬೇಕು ಅಂದಿದ್ದನ್ನ ಮಾಡೋತನಕ ಬಿಡೋನಲ್ಲ ತ್ರಿವಿಕ್ರಮನಥರ "ಛಲ ಬಿಡದ ಮಲ್ಲ " ಅಂತಾರಲ್ಲ ಹಾಗೆ ನಿಜ ಹೇಳ್ಬೇಕು ಅಂದ್ರೆ ನನಗೆ ಸರಿಯಾಗಿ ಅನ್ನನೆ ಮಾಡೋಕೆ ಬರೋದಿಲ್ಲ ಅಂತದ್ರಲ್ಲಿ ಚಪಾತಿ ಮಾಡಿ ಪಲ್ಯ ಮಾಡ್ತಾ ಇದೀನಿ ಅಂತ ನನಗೆ ನಾನೇ ಬೆನ್ನು ತಟ್ಟಿಕೊಂಡೆ.

ಹೇಗಾದ್ರು ಮಾಡಿ ಅವರೆಕಾಯಿ ಪಲ್ಯ ಮಾಡಬೇಕಲ್ಲ ಹೇಗೆ ಮಾಡೋದು ಅಂತ ಅಮ್ಮನಿಗೆ ಕಾಲ್ ಮಾಡಿ ಕೇಳ್ದೆ 
ನಾನು :-  ಅಮ್ಮ ಅವರೆಕಾಯಿ ಪಲ್ಯ ಮಾಡ್ತಾ ಇದೀನಿ ಹೆಂಗೆ ಮಾಡೋದು 

ಅಮ್ಮ :-  ನನ್ನ ಯಾಕೆ ಕೇಳ್ತಿಯ ನಿನ್ನ ಕುಟ್ ಕುಟ್ ಫ್ರೆಂಡ್ಸ್ ಹುಡುಗಿರ್ನ ಕೇಳಬೇಕಿತ್ತು ಹೇಳಿಕೊಡ್ತ ಇದ್ರೂ ( ಕುಟ್ ಕುಟ್ ಅಂದ್ರೆ ಆರ್ಕುಟ್ ಫ್ರೆಂಡ್ಸ್ ಅಂತ, ಅಮ್ಮ  ಹಾಗೆ ಹೇಳೋಕು ಒಂದು  ಕಾರಣ ಇದೇ ಇದೇ ಥರ ನಾನು ಅಡುಗೆ ಮಾಡ್ಬೇಕು ಅಂತ ನನ್ನ ಆರ್ಕುಟ್ ಗೆಳತಿಗೆ ಕಾಲ್ ಮಾಡಿ ಕೇಳಿ ಹೇಗೆ ಮಾಡೋದು ಅಂತ ಕಲ್ತಿದ್ದೇ ಅದನ್ನ ಅಮ್ಮನಿಗೆ ಹೇಳಿದ್ದೆ ಅದಕ್ಕೆ ಹಾಗೆ ಹೇಳಿದ್ರು ) ನಾನೇನು ಮಾತಾಡಲಿಲ್ಲ ಸುಮ್ನೆ ಇದ್ದೆ ಅಷ್ಟರಲ್ಲೇ ಅಮ್ಮನೇ ಹೇಗೆ ಮಾಡ್ಬೇಕು ಅಂತ ಹೇಳಿ, ಊಟ ಮಾಡಿ ಮತ್ತೆ ಕಾಲ್ ಮಾಡು ಅಂತನು ಹೇಳಿದ್ರು ಆ ಥರ ಯಾಕೆ ಹೇಳಿದರೋ ಗೊತ್ತಿಲ್ಲ ನಾನು ಹ್ಮಂ ಹ್ಮಂ ಅಂದು ಕಾಲ್ ಕಟ್ ಮಾಡಿ ಟೈಮ್ ನೋಡಿದೆ 1 ಘಂಟೆ ಇನ್ನು ಆಗಿರಲಿಲ್ಲ ಅನ್ನೋ ಸಮಾಧಾನ ಇನ್ನು ಹದಿನೈದು ನಿಮಿಷ ಕಳುದ್ರೆ 1 ಘಂಟೆ ಆಗುತ್ತೆ ಅನ್ನೋ ಆತಂಕದಲ್ಲೇ ಇದ್ದೆ ನನ್ನ ಮೊಬೈಲ್ ನಲ್ಲಿ "ಬದುಕು ಮಾಯೆಯ ಮಾಟ" ಅನ್ನೋ ಹಾಡು ಅಶ್ವಥ್ ಅವರು ಹಾಡ್ತಾನೆ ಇದ್ರೂ ನಾನು ಕೇಳ್ತಾ ಕೇಳ್ತಾ ಅವರೆಕಾಯಿಗಳನ್ನ ಬಿಡುಸ್ತ ಹೋದೆ ಬೆರಳುಗಳಿಗೆ ಸ್ವಲ್ಪ ಕಷ್ಟ ಆದ್ರು ಕಷ್ಟ ಪಟ್ಟು ಬಿಡಿಸಿದೆ.

ಮೇಲೆ ಕೈಗೆ ಈರುಳ್ಳಿ ತಗೊಂಡೆ ಹೆಚ್ಚೋಕೆ ತಯಾರಾದೆ ಒಂದೇ ಒಂದು ಈರುಳ್ಳಿ ಅರ್ಧ ಭಾಗ ಮಾಡಿದ್ದು ಅಸ್ಟೇ ಕಣ್ರೀ ಅಷ್ಟರಲ್ಲಿ ನನ್ನ ಕಣ್ಣುಗಳು ಧಾರಾಕಾರವಾಗಿ ಮಳೆ ಥರ ಕಣ್ಣಿರು ಸುರುಸ್ತ ಇತ್ತು  ಅಶ್ವಥ್ ಅವರಿಗೂ ನನ್ನ ಪಾಡು ನೋಡೋಕೆ ಆಗದೆ "ಆಕಾಶ ಬಿಕ್ಕುತ್ತಿದೆ" ಅಂತ ಹಾಡು ಚೇಂಜ್ ಮಾಡಿ ಬಿಟ್ರು  ನಾನು ಹಾಗೋ ಹೀಗೋ ಎಲ್ಲಾ ಹೆಚ್ಚಿಬಿಟ್ಟು ಅಮ್ಮ ಹೇಳಿದ ಹಾಗೆ ಮಾಡ್ತಾ ಹೋದೆ ಅಲ್ಲಿಗೆ ಪಲ್ಯ ತಯಾರ್ ಆಯ್ತು ಟೈಮ್ ಆಗಲೇ 1:30 ಸರಿಯಾಗಿ ಆಗಿತ್ತು ಅಬ್ಬಾ ಎಲ್ಲಾ ಮುಗಿತು ಇನ್ನೇನು ಊಟ ಮಾಡೋಣ ಅಂತ ತಟ್ಟೆಗೆ ಚಪಾತಿ ಹಾಕೊಂಡು ಪಲ್ಯ ಹಾಕೊಂಡು ಇನ್ನೇನು ತಿನ್ನಬೇಕು ಅನ್ನೋ ಅಷ್ಟ್ರಲ್ಲಿ ಅಮ್ಮ ಹೇಳಿದ್ದ ಮಾತು ನೆನಪಾಯ್ತು "ಊಟ ಮಾಡಿ ಮತ್ತೆ ಕಾಲ್ ಮಾಡು...!" ಯಾಕೋ ಸ್ವಲ್ಪ ಭಯ ಆಯ್ತು ಅದ್ರು ಏನು ಆಗಿದ್ದು ಅಗ್ಲಿಯ ಅಂತ ತುತ್ತು ಬಾಯಿಯಲ್ಲಿ ಇಟ್ಟೆ ಸಿಕ್ಕಾಪಟ್ಟೆ ಖಾರ ಸ್ವಲ್ಪನು ಉಪ್ಪು ಇರ್ಲಿಲ್ಲ ಅಡುಗೆ ಮಾಡೋ ಸಡಗರದಲ್ಲಿ ಉಪ್ಪು ಹಾಕೋದೇ ಮರ್ತಿದ್ದೆ. ಹೇಗೋ ಊಟ ಮಾಡಿ ಮೇಲೆ ಎದ್ದು ತಟ್ಟೆನೆಲ್ಲ ಸೈಡ್ನಲ್ಲಿ ಇಟ್ಟೆ.. ಅಷ್ಟ್ರಲ್ಲಿ  ನಿದ್ದೆ ಎಳಿತ ಇತ್ತು ಹಾಗೆ ಹಾಸಿಗೆ ಮೇಲೆ ಮಲಕೊಂಡೆ...! 

ಎಷ್ಟೋ ಹೊತ್ತಾದ್ ಮೇಲೆ ಕಣ್ಣು ಬಿಟ್ಟೆ ಟೈಮ್ ನೋಡಿಕೊಂಡೆ ಆಗಲೇ ಸಂಜೆ ಆಗಿತ್ತು ಅಬ್ಬಾ ಬಡ ಜೀವ ಬದುಕಿದೆ ಇನ್ನು ಅನ್ಕೊಂಡು ಮೇಲೆ ಎದ್ದೆ ಎದ್ರುಗಡೆ ಶ್ರೀ ಕೃಷ್ಣ ಪರಮಾತ್ಮನ ಫೋಟೋ ನೋಡಿ ಕೈ ಮುಗಿಬೇಕು ಅನಿಸಿದರು ಬೆಳಗ್ಗೆ ಒನ್ ಟೈಮ್ ಮುಗಿದಿದ್ಕೆ ಜೀವನ ಪೂರ್ತಿ ಮರೆದೆ ಇರೋ ಅನುಭವಾಗಿದೆ ಅನ್ಕೊಂಡು ಮುಗಿಲಿಲ್ಲ 

ಗ್ಯಾಸ್ ಪಕ್ಕ ಇದ್ದ ಲಟ್ಟಣಿಕೆ, ಮಣಿ ಮತ್ತೆ ಉಳಿದ್ದಿದ ಚಪಾತಿಗಳು ನನ್ನ ನೋಡಿ ನಗ್ತಾ ಇವೆ ಅನಿಸಿದರು ನನಗು ಅವಕ್ಕೂ ಸಂಬಂಧನೆ ಇಲ್ಲಾ ಅನ್ಕೊಂಡು ಮೊಬೈಲ್ ನಲ್ಲಿ ಸಾಂಗ್ ಹಾಕ್ದೆ ಪಲ್ಲವಿ ಮೇಡಂ ಮತ್ತೆ ಇಂಪಾಗಿ ಹಾಡೋಕೆ ಶುರು ಮಾಡಿದ್ರು "ನೀನಿಲ್ಲದೆ ನನಗೇನಿದೆ ಮನಸೆಲ್ಲಾ ನಿನ್ನಲ್ಲೆ ನೆಲೆಯಾಗಿದೆ ಕನಸೆಲ್ಲಾ ಕಣ್ಣಲ್ಲೆ ಸೆಲೆಯಾಗಿದೆ"ನಿಮ್ಮ ಹುಡುಗ
?ದೊಡ್ಡಮನಿ.ಮಂಜು
        97424 95837

Tuesday, 15 June 2010

I MISS YOU

ಓದುವ ಮುನ್ನ:-
ನನ್ನ ಕಲ್ಪನೆಗೆ ಬಣ್ಣ ತುಂಬಿ ಈ ಕತೆ ಹುಟ್ಟೋಕೆ ಕಾರಣರಾದ ಆರ್ಕುಟ್ ಗೆಳತಿ ಶಿಲ್ಪ ಗೆ ತುಂಬ ಥ್ಯಾಂಕ್ಸ್ ಹೇಳ್ತಾ ಇದೀನಿ.
"ಹೂ ಬಾಡಿ ಹೋಗುತ್ತೆ ಅಂತ ಗೊತ್ತಿದ್ರು
ಪ್ರೀತಿಗೆ ಅರ್ಥನೇ ಗೊತ್ತಿಲ್ದಿರೋ ಒಂದು ಹೃದಯಕ್ಕೆ
ಪ್ರಾಣ ಲೆಕ್ಕಿಸದೆ ಆ ಹೂ ನಾ ತಂದು ಕೊಟ್ಟೆ
ಇನ್ನು ಏನು ಅರಿಯದ ಪುಟ್ಟ ಹೃದಯದ
ಈ ಪ್ರೀತಿಗೆ ಇಲ್ಲಾ ಅಂತಿನಾ ಇಲ್ಲೇ ಇರು ಬರ್ತೀನಿ"ಅರೆ ಮಲೆನಾಡಿನ ಚಿಕ್ಕ ಊರು ಆ ಊರಲ್ಲಿ ಇದದ್ದು ಕೇವಲ ಬೆರಳೆಣಿಕೆ ಅಷ್ಟು ಜನ ಅದ್ರಲ್ಲಿ ಊರಿನ ಶ್ರೀಮಂತ ತಂದೆ ಒಬ್ಬನ ಮಗಳೇ ನವ್ಯ ಆ ಊರಿನ ಪಕ್ಕದಲ್ಲೇ ಇರೋ ಚಿಕ್ಕ ಹಳ್ಳಿಯ ಮದ್ಯಮ ವರ್ಗದ ತಾಯಿ ಒಬ್ಬಳ ಮಗ ಮನು,

ಮನು ಮತ್ತು ನವ್ಯ ತುಂಬಾ ದಿನಗಳಿಂದ ಒಳ್ಳೆ ಫ್ರೆಂಡ್ಸ್ ಹೀಗೆ ಗೆಳತನ ಮುಂದುವರೆದು ಒಳ್ಳೆ ಪ್ರೇಮಿಗಳು ಆಗ್ತಾರೆ ಒಬ್ಬರನ್ನ ಬಿಟ್ಟು ಒಬ್ರು ಇರೋದಿಲ್ಲ ಪ್ರತಿ ದಿನ ಸಂಜೆ ಊರಿಂದ ಸ್ವಲ್ಪ ದೂರ ಇರೋ ಬೆಟ್ಟದಲ್ಲೇ ಅವರಿಬ್ಬರ ಭೇಟಿ ಮನು ಮನೆಯಲ್ಲಿ ಅವನ ತಾಯಿ ಬಿಟ್ರೆ ಬೇರೆ ಯಾರು ಇಲ್ಲಾ ಮನು ಆಗ್ಲೇ ತನ್ನ ತಾಯಿಗೆ ನವ್ಯಳ ಬಗ್ಗೆ ಹೇಳಿ ಮದುವೆಗೆ ಒಪ್ಪಿಗೆ ತಗೊಂಡಿರ್ತನೆ ಆದ್ರೆ ನವ್ಯಳಗೆ ತಾಯಿರೋದಿಲ್ಲ ಎಲ್ಲಾನು ತಂದೇನೆ ಸ್ವಲ್ಪ ಕಟು ಹೃದಯದವರು ಅಲ್ದೆ ತುಂಬಾ ಶ್ರೀಮಂತ ಅನ್ನೋ ಅಹಂ ಬೇರೆ ಹಾಗಾಗಿ ನವ್ಯ ಯಾವತ್ತು ಮನು ಬಗ್ಗೆ ತನ್ನ ಲವ್ ಬಗ್ಗೆ ತಂದೆ ಹತ್ರ ಹೇಳಿರಲಿಲ್ಲ ತಾಯಿ ಇಲ್ದೆ ಬೆಳೆದ ನವ್ಯ ತನ್ನ ತಂದೆ ಎದ್ರುಗೆ ನಿಂತು ಮಾತಾಡೋಕೆ ಹೆದ್ರುತ ಇದ್ಲು

(ಸಂಜೆ ಒಂದರ ಬೆಟ್ಟದ ಮೇಲೆ)

ನವ್ಯ : ಲೋ ನಾನು ಹೇಳೋದು ಕೇಳ್ತಿಯ ಸ್ವಲ್ಪ ..!

ಮನು : ಕೇಳ್ತಾನೆ ಇದಿನಲ್ಲ ಇನ್ನು ಏನು ಕೇಳಬೇಕು ಇಲ್ಲಿಂದ ಬಿಳ್ಬೇಕಾ ..?

ನವ್ಯ : ಲೋ ಗೂಬೆ ನಾನು ಬಿಳು ಅಂತ ಹೇಳಿದ್ನಾ ! ಸ್ವಲ್ಪ ಮುಂದೆ ಹೋಗು ಕೈಗೆ ಸಿಗುತ್ತೆ ..!

ಮನು : ಇನ್ನು ಮುಂದೆ ಹೋದ್ರೆ ಅಷ್ಟೇ ನನ್ನ ಕತೆ, ಕಾಲು ಜಾರಿ ಬಿದ್ರೆ ನನ್ನ ಮುಳೇನು ಸಿಗೋಲ್ಲ

ನವ್ಯ : ನಿನಗೆ ಮೂಳೆ ಬೇರೆ ಇದೇನಾ ... ?

ಮನು : ಏನ್ ಜೋಕ್ ಮಾಡ್ತಾ ಇದಿಯಾ, ಈ ಚಿಕ್ಕ ಹೂವಿಗೋಸ್ಕರ ನಾನು ಪ್ರಾಣನು ಲೆಕ್ಕಿಸದೆ ಈ ಬೆಟ್ಟದ ತುದಿಗೆ ಬಂದಿದೀನಿ ನೀನು ನೋಡಿದ್ರೆ ಜೋಕ್ ಮಾಡ್ತಾ ಇದಿಯಾ ..!

ನವ್ಯ : ಹೇ ಇಲ್ಲಾ ಕಣೋ ಸುಮ್ನೆ ತಮಾಷೆ ಮಾಡ್ತಾ ಇದ್ದೆ ಬೇಗಾ ತಗೊಂಡು ಬಾರೋ

ಮನು : ತಾಳು ಬಂದೆ

ನವ್ಯ : ಹುಷಾರು ಕಣೋ

ಮನು : ಉಫ್ ..... ಸುಸ್ತಾಯ್ತು ಕಣೆ ತಗೋ ಹೂವು :)

ನವ್ಯ : ತುಂಬಾ ಥ್ಯಾಂಕ್ಸ್ ಕಣೋ

ಮನು : ಅಷ್ಟೇನಾ .. ?

ನವ್ಯ : ಇನ್ನೇನು ಹೇಳ್ಬೇಕು ?

ಮನು : ಅಲ್ಲಾ ನಾನು ನೀನು ಕೇಳ್ದೆ ಅಂತ ಕಷ್ಟ ಪಟ್ಟು ಹೂವು ತಂದು ಕೊಟ್ಟಿದೀನಿ ಬೇರೆ ಏನಾದ್ರು ಹೇಳ್ಬೇಕು ಅನಿಸ್ತ ಇಲ್ವಾ !

ನವ್ಯ : ಐ ಲವ್ ಯೌ ಅಂತ ಹೇಳಬೇಕಿತ್ತ .. ?

ಮನು : ನಿನಗೆ ಅಷ್ಟೊಂದು ಧೈರ್ಯ ಇಲ್ಲಾ ಬಿಡು

ನವ್ಯ : ಲೇ. . . . ಲೂಸ್ ........ ಧೈರ್ಯ ಇಲ್ದನೆ ನಿನ್ನ ಲವ್ ಮಾಡಿದ್ನ ನಾನು.. ?

ಮನು : ಒಂದು ಸಾರಿ ಐ ಲವ್ ಯೌ ಅಂತ ಹೇಳೋಕೆ ಒಂದು ಘಂಟೆ ಟೈಮ್ ತಗೊಂಡಿದ್ದೆ ನೀನು ನೆನಪಿದೆನಾ ....

ನವ್ಯ : ಹೌದು ಕಣೋ ನೀನು ಜೊತೆ ಇದ್ರೆ ನನಗೆ ಮಾತೆ ಹೊರಡಲ್ಲ ನಿನ್ನ ಜೊತೆ ಹೀಗೆ ಸುಮ್ನೆ ಕುತುಕೊಳ್ಳೋಣ ಅನಿಸುತ್ತೆ ನಾನು ನಿನ್ನಿಂದ ಎಲ್ಲಿ ದೂರ ಆಗ್ತಿನೋ ಅನ್ನೋ ಭಯ ಆದ್ರೆ ಒಂದು ನಿಜ ಕಣೋ ನಿನ್ನ ಬಿಟ್ಟು ಮಾತ್ರ ಬಾಳೋದಿಲ್ಲ ಹೇಗಾದ್ರು ಮಾಡಿ ಅಪ್ಪನ ಒಪ್ಪಿಸಿ ನಿನ್ನೆ ಮಧುವೆ ಆಗ್ತೀನಿ... :)

ಮನು : ಆಗ್ತೀನಿ ಅಲ್ಲಾ ಆಗೇ ಆಗ್ತೀನಿ ಅಂತ ಹೇಳು :)

ನವ್ಯ : ಆಯ್ತು ಬಿಡೋ ಲೋ.. ಒಂದು ವಿಷಯ ಕೇಳ್ಲ .. ?

ಮನು : ಹ್ಮ ಕೇಳು ಡಿಯರ್ ?

ನವ್ಯ : ಆಕಸ್ಮಾತ್ ನಾನೇನಾದ್ರು ನಿನ್ನ ಬಿಟ್ಟು ಬೇರೆ ಯಾರನಾದ್ರು ಮದುವೆ ಆದ್ರೆ ನೀನು ಏನೋ ಮಾಡ್ತಿಯ ? ? ?

ಮನು : ನಾನೇನು ಮಾಡ್ಲಿ ನಾನು ಬೇರೆಯಾರ್ನಾದ್ರು ಮಧುವೆ ಆಗ್ತೀನಿ ಸಿಂಪಲ್ :)

ನವ್ಯ : ಅಯ್ಯೋ ಅಷ್ಟೇನಾ ನಾನೆಲ್ಲೋ ನನ್ನ ನೆನಪಲ್ಲಿ ಬಾಟಲಿ ಹಿಡ್ಕೊಂಡು ರೋಡ್ ರೋಡ್ ಅಲಿತಿಯ ಅನ್ಕೊಂಡಿದ್ದೆ

ಮನು : ಸರಿ ಸರಿ ಬಾ ಟೈಮ್ ಆಯ್ತು ಹೋಗೋಣ ನಿಮ್ಮ ಅಪ್ಪ ಕಾಯ್ತಾ ಇರ್ತಾರೆ ನಿನಗೆ ಯಾವಗಲು ತಮಾಷೇನೆ

ನವ್ಯ : ತಮಾಷೆ ಅಲ್ಲಾ ಕಣೋ ನಿಜವಾಗಲು ಕೇಳ್ತಾ ಇದೀನಿ ಹೇಳೋ ? ಹೋಗ್ಲಿ ನಾನು ನನ್ನ ಮದುವೆಗೆ ನಿನ್ನ ಇನ್ವೈಟ್ ಮಾಡಿದ್ರೆ ಏನ್ ಅಂತ ವಿಶ್ ಮಾಡ್ತಿಯ ..?

ಮನು : ಒಳ್ಳೆ ಸಹವಾಸ ಅಯ್ತಲ್ವೆ ನಿಂದು ! ನನ್ನಿಂದ ಮಿಸ್ ಆದ ಈ ಮಿಸ್ ಗೆ ಏನು ವಿಶ್ ಮಾಡ್ಲಿ ಐ ಮಿಸ್ ಯೌ ಡಿಯರ್ ಅಂತೀನಿ ಅಸ್ಟೇ ..!

ನವ್ಯ : ಅಷ್ಟೇನಾ .. ?

ಮನು : ಮತ್ತೇನು ಹೇಳ್ಬೇಕು ಎಲ್ಲಾ ಆದಮೇಲೆ ?

ನವ್ಯ : ನಾನೆಲ್ಲೋ ನನ್ನ ಸಿಕ್ಕಾಪಟ್ಟೆ ಬೈದು ಮಧುವೆ ಮನೇಲಿ ಗಲಾಟೆ ಮಾಡ್ತಿಯ ಅನ್ಕೊಂಡಿದ್ದೆ ಹ್ಹ ಹ್ಹ ಹ್ಹ ಹ್ಹ

ಮನು : ಒಂದಂತ್ತು ನಿಜ ಕಣೆ ನನ್ನ ಜಾಗದಲ್ಲಿ ನಿನ್ನ ಜೊತೆ ನನ್ನ ಬಿಟ್ಟು ಬೇರೆಯಾರನ್ನದ್ರು ನಾ ನೋಡ್ದೆ ಅಂತ ಇಟ್ಕೋ.... ಅವತ್ತೇ ನನ್ನ ಕೊನೆ ಅಂತ ತಿಳ್ಕೋ

ನವ್ಯ : ಈಗ ಆ ಹಳೆ ಫಿಲ್ಮ್ ಡೈಲಾಗ್ ಬೇಕಾ ನಿನಗೆ ..?

ಮನು : ಅಂದ್ರೆ ನಾನು ಯಾವ್ದೋ ಫಿಲ್ಮ್ ಡೈಲಾಗ್ ಹೇಳ್ತಾ ಇದೀನಿ ಅಂತನಾ.. ?

ನವ್ಯ : ಸುಮ್ನೆ ತಮಾಷೆ ಮಾಡ್ದೆ ಕಣೋ ನಿನ್ನ ಬಿಟ್ಟು ಒಂದು ನಿಮಿಷನು ಇರೋಕೆ ಆಗೋಲ್ಲ ನನಗೆ, ಐದು ವರ್ಷದಿಂದ ಲವ್ ಮಾಡ್ತಾ ಇದೀನಿ ಅದು ಹೇಗೆ ಬೇರೆ ಮಧುವೆ ಆಗ್ತೀನಿ ಹೇಳು ..? ಅಪ್ಪನ್ನ ಬಿಟ್ಟು ಬೇಕಾದ್ರೂ ಬರ್ತೀನಿ ನಿನ್ನ ಬಿಟ್ಟು ಮಾತ್ರ ಹೋಗೋಲ್ಲ ನನ್ನಾಣೆ :) ಇವತ್ತು ತುಂಬಾ ನಿನ್ನ ನೋಯಿಸಿಬಿಟ್ಟೆ ಅನಿಸುತ್ತೆ ಬಾ ಹೋಗೋಣ ಟೈಮ್ ಆಯ್ತು !

( ಮಧ್ಯ ರಾತ್ರಿ )

ನವ್ಯ : ಹಲೋ ಮನು ಏನೋ ಮಾಡ್ತಾ ಇದೀಯ

ಮನು : ಎಲ್ಲಾ ಲೈಟ್ ಆಫ್ ಮಾಡಿಕೊಂಡು ರಾ..ರಾ...ಸರಸಕು ರಾ...ರಾ. ಸಾಂಗ್ ಗೆ ಡಾನ್ಸ್ ಮಾಡ್ತಾ ಇದೀನಿ

ನವ್ಯ : ಲೋ... ಗೂಬೆ ತಮಾಷೆ ಮಾಡ್ಬೇಡ್ವೋ

ಮನು : ತಮಾಷೆ ನಾನ್ ಮಾಡ್ತಾ ಇದಿನ ನಿನ್ ಮಾಡ್ತಾ ಇದೀಯ ಅಲ್ಲಾ ಮಧ್ಯ ರಾತ್ರಿ ಕಾಲ್ ಮಾಡಿ ಏನ್ ಮಾಡ್ತಾ ಇದೀಯ ಅಂತ ಕೇಳ್ತಿಯಲ್ಲ ರಾತ್ರಿ ಏನ್ ಮಾಡ್ತಾರೆ ..?

ನವ್ಯ : ಏನಾದ್ರು ಮಾಡು ನನಗೀಗ ಆ ಹೂವು ಬೇಕು ಅಷ್ಟೇ

ಮನು : ಯಾವ್ ಹೂವು ಡಿಯರ್ ?

ನವ್ಯ : ಅದೇ ಸಂಜೆ ನೀನು ಆ ಬೆಟ್ಟದ ತುದಿಗೆ ಹೋಗಿ ತಗೊಂಡು ಬಂದಲ್ಲ ಅದು ಕಣೋ

ಮನು : ಅದನ್ನ ಅವಗ್ಲೆ ಕೊಟ್ನಲ್ಲ ನವ್ಯ

ನವ್ಯ : Sorry ಕಣೋ ನಾನು ನಿನ್ನ್ನ ಜೊತೆ ಮಾತಾಡ್ತಾ ಅದನ್ನ ಅಲ್ಲೇ ಬಿಟ್ಟು ಬಿಟ್ಟೆ ಲೋ ಪ್ಲೀಸ್ ಕಣೋ ನನಗೆ ಅದು ಬೇಕು ಹೇಗಾದ್ರು ಮಾಡಿ ತಗೊಂಡು ಬಾರೋ

ಮನು : ಆಯ್ತು ಬೆಳಗ್ಗೆ ತಗೊಂಡು ಬಂದು ಕೊಡ್ತೀನಿ ಈಗ ಮಲ್ಕೋ

ನವ್ಯ : ಲೋ ನನಗೆ ಈಗಲೇ ಬೇಕು ಕಣೋ ನನಗೋಸ್ಕರ ಅಷ್ಟು ಮಾಡಲ್ವ ಪ್ಲೀಸ್ ಕಣೋ ನೀನು ಇಷ್ಟೇನಾ ನಿನ್ನ ಲವ್.

ಮನು : ಹೇ ಚಿನ್ನು ನನ್ನ ಲವ್ ಮೇಲೆ ನಿನಗೆ ಡೌಟಾ ತಾಳು ಇನ್ನೊಂದು ಘಂಟೆಲಿ ಆ ಹೂವು ನಿನ್ನ ಕೈಯಲ್ಲಿ ಇರುತ್ತೆ

( ಮನು ಫೋನ್ ಸ್ವಿಚ್ ಆಫ್ ಮಾಡ್ತಾನೆ )

ನವ್ಯ : ಹಲೋ... ಹಲೋ... ಮನು ನಾನು ಸುಮ್ನೆ ಹೇಳ್ದೆ ಕಣೋ ಹಲೋ...

*

*

*

*

ಸ್ವಲ್ಪ ಸಮಯದ ನಂತರ ಮನು ಮತ್ತೆ ನವ್ಯಗೆ ಫೋನ್ ಮಾಡ್ತಾನೆ

ನವ್ಯ : ಹಲೋ ಏನೋ ಮದ್ಯ ರಾತ್ರಿ ನಿಂದು

ಮನು : ಹೂವು ಬೇಕು ಅಂದೆಲ್ಲ ತಗೊಂಡು ಬಂದಿದೀನಿ ನಿಮ್ಮ ಮನೆ ಹತ್ರದಲ್ಲೆ ಇದೀನಿ ಬಾ ಅಂದ್ರೆ ಮನೆ ಗೆ ಬರ್ತೀನಿ

ನವ್ಯ : ಲೋ ಗೂಬೆ ಇಷ್ಟೊತ್ತಲ್ಲಿ ಯಾಕೋ ಮನೆಗೆ ಬರ್ತೀಯ, ಅಪ್ಪ ನೋಡಿದ್ರೆ ಕಷ್ಟ ಕಣೋ ಹೂವು ಬೇಕಾದ್ರೆ ಬೆಳಗ್ಗೆ ತಗೋತೀನಿ ಈಗ ಹೋಗು.......
ನಾನೇನು ಸುಮ್ನೆ ತಮಷೆ ಮಾಡೋಕೆ ಹೇಳ್ದೆ ಅದನ್ನೇ ನೀನು ನಿಜ ಅನ್ಕೊಂಡು ಇಷ್ಟೊತ್ತಲ್ಲಿ ಆ ಬೆಟ್ಟಕ್ಕೆ ಹೋಗಿದಿಯಲ್ಲ ಏನ ಹುಚ್ಚನೋ ನೀನು

ಮನು : ನಿಜ ಕಣೆ ನಾನು ಹುಚ್ಚನೆ ನಿನ್ನ್ನ ಲವ್ ನಲ್ಲಿ ಬಿದ್ದಿರೋ ದೊಡ್ಡ ಹುಚ್ಚ, ನೀನು ನನಗೆ ನಿನ್ನ ಲವ್ ಇಷ್ಟೇನಾ ಅಂತ ಕೇಳ್ದೆ ಅಲ್ವ ಅದಕ್ಕೆ ನನ್ನ ಲವ್ ಏನು ಅಂತ ಗೊತ್ತಾಗಲಿ ಅಂತ ತಗೊಂಡು ಬಂದೆ, ಪರವಾಗಿಲ್ಲ ನಿನ್ನು ಮಲ್ಕೋ ನಾನು ಬೆಳಗ್ಗೆನೇ ಕೊಡ್ತೀನಿ

ನವ್ಯ : ಓಕೆ ಬೈ ಕಣೋ ಹುಷಾರಾಗಿ ಹೋಗು ಹೋಗ್ತಾ ರಸ್ತೆ ಸರಿ ಇಲ್ಲಾ ಮಳೆ ಬೇರೆ ಬರೋಹಾಗಿದೆ

ಮನು : ನಿನ್ನ ಮುಂದೆ ಆ ಮಳೆ ಯಾವ ಲೆಕ್ಕ ಬಿಡು..... ಸರಿ ನಿನ್ ಮಲ್ಕೋ

ನವ್ಯ : I Miss you da

ಮನು : No chance ನಾನು ಯಾವಾಗಲು ನಿನ್ನ ಜೊತೇನೆ ಇರ್ತೀನಿ ಆರಾಮಾಗಿ ನಿದ್ದೆ ಮಾಡು

ನವ್ಯ : Really I Miss You da... .... ... ಹಲೋ... ಹಲೋ... ಮನು

ಮನು : ಒಹ್ ಬ್ಯಾಟರಿ ಲೋ ಸ್ವಿಚ್ ಆಫ್

ಮನು ಅಲ್ಲಿಂದ ಮನೆಗೆ ಹೋಗಬೇಕಾದ್ರೆ ಮಳೆ ಬರ್ತಾ ಇರುತ್ತೆ ಅಲ್ದೆ ರಸ್ತೆ ಹಾಳಾಗಿರುತ್ತೆ ಬೈಕ್ನಾ ಹೆಡ್ ಲೈಟ್ ಬೇರೆ ಕೆಡುತ್ತೆ ನಡು ರಾತ್ರಿ ಕತ್ತಲಲ್ಲಿ ದಾರಿನೇ ಕಾಣತ ಇರೋದಿಲ್ಲ ಮನೆ ಮುಟ್ಟೋಕೆ ಇನ್ನು ೧ ಕಿ.ಲೋ.ಮೀಟರ್ ಇರುತ್ತೆ ಅದರಲ್ಲೂ ಹೇಗೋ ಮನೆ ಸೇರ್ಕೊಳ್ಳೋಣ ಅಂತ ನಿದಾನಕ್ಕೆ ಬೈಕ್ ನಲ್ಲಿ ಹೋಗ್ತಾ ಇರುವಾಗ ನೋಡ್ತಾ ನೋಡ್ತಾನೆ ಹಿಂದಿಂದ ಒಂದು ಲಾರಿ ಬಂದು ಮನು ಬೈಕ್ ಮೇಲೆ ಹಾದು ಹೋಗುತ್ತೆ.....! ! !.... ? ? ?


ಮನುಗೆ ಆಕ್ಸಿಡೆಂಟ್ ಆಗಿರೋ ವಿಷಯ ನವ್ಯಗೆ ಗೊತ್ತಾಗಿದ್ದೆ ತಡ ನೋಡ್ಬೇಕು ಅಂತ ತುಂಬಾ ಪ್ರಯತ್ನ ಪಡ್ತಾಳೆ ಆದ್ರೆ ಮನೆಯಲ್ಲಿ ಇವಳ ಮನುನ ವಿಷಯ ತಿಳಿದು ನವ್ಯಗೆ 2 ದಿನದಲ್ಲೇ ಬಲವಂತವಾಗಿ ಬೇರೆ ಒಬ್ಬನ ಜೊತೆ ಮಧುವೆ ಮಾಡಿ ಬಿಡ್ತಾರೆ, ಮನಸ್ಸು ಒಪ್ಪದೆ ಇದ್ರೂ ಅಪ್ಪನ ಮಾತಿಗೆ ಹೆದರಿ ಮದುವೆ ಆಗ್ತಾಳೆ.

ಆದ್ರು ಮನಸ್ಸು ಎಲ್ಲೋ ಒಂದು ಕಡೆ ಪ್ರತಿ ನಿಮಿಷನು I MissYou ಮನು ಅಂತ ನಿಟ್ಟುಸಿರು ಬಿಡ್ತಾ ಇರುತ್ತೆ ! ಬಿಡ್ಲೇ ಬೇಕು ಅಲ್ವ !

*

*

*

*

*

*

( ಐದು ವರ್ಷಗಳ ನಂತರ )


ಮನು ಅದೇ ಬೆಟ್ಟದ ಮೇಲೆ ಏನೋ ಯೋಚನೆ ಮಾಡ್ತಾ ಕುತಿರ್ತನೆ ಕಣ್ಣಲ್ಲಿ ನೀರು ತುಂಬಿಕೊಂಡು ತನ್ನ ದುಃಖನಾ ಯಾರಿಗೂ ಹೇಳ್ದೆ ಒಬ್ಬನೇ ನೋವು ಅನುಭವಿಸುತ್ತ ಹುಚ್ಚನ್ ಥರ ಆಗಿರ್ತಾನೆ, ತನ್ನ ತಾಯಿ ಒಬ್ಬಳನ್ನ ಬಿಟ್ಟು ಯಾರ್ ಜೋತೆನು ಮಾತಾಡೋಕೆ ಇಷ್ಟ ಪಡೋಲ್ಲ ತಾನಾಯ್ತು ತನ್ನ ಕೆಲಸ ಆಯ್ತು ಆದ್ರೆ ಸ್ವಲ್ಪ ದಿನಗಳ ಹಿಂದೇ ಅವ್ಳು ಇವನ ಬಿಟ್ಟು ಹೋದ್ಲು,

ಪ್ರತಿ ಸಂಜೆ ಈ ಬೆಟ್ಟಕ್ಕೆ ಬರೋದು ಮಾತ್ರ ಮರಿಥ ಇರ್ಲಿಲ್ಲ ತನಗೆ ಸಾಕಾಗೋ ತನಕ ಇಲ್ಲಿ ಕೂತು ಒಬ್ನೇ ಕಣ್ಣೀರ್ ಹಾಕ್ತ ಇರ್ತಾನೆ ಆಮೇಲೆ ಮನೆಗೆ ಎದ್ದು ಹೋಗ್ತಾನೆ ಹೀಗಿರುವಾಗ ಒಂದು ದಿನ ಮನು ಬೆಟ್ಟದ ಮೇಲೆ ಕಣ್ಣು ಮುಚ್ಚಿ ಕುಳ್ತಿರ್ತನೆ ಯಾರು ಹಿಂದಲಿಂದ ಬಂದು ಒಂದು ಪುಟ್ಟ ಕೈಗಳು ಅವನ ಕಣ್ಣು ಮುಚ್ಚುತ್ತವೆ. ಆ ಕೈಗಳ ಸ್ಪರ್ಶದಿಂದ ಮತ್ತೆ ಮನುಗೆ ಜೀವ ಬಂದಂತೆ ಭಾಸವಾಗುತ್ತೆ ಆ ಕೈಗಳನ್ನ ಹಿಡಿದು ತಿರುಗಿ ನೋಡಿದಾಗ ಅವನಿಗೆ ತುಂಬಾ ಆಶ್ಚರ್ಯ ಆಗುತ್ತೆ ಪರಿಚಯನೇ ಇರದೆ ಇರೋ ಒಂದು ಮುದ್ದಾದ ಚಿಕ್ಕ ಮಗು ಇವನಿಗೆ ಆ ಮುಖನ ಎಲ್ಲೋ ನೋಡಿದ ನೆನಪು ಆ ಮಗುನ ತನ್ನ ಹತ್ರ ಕರ್ದು . . .

ಮನು : ಯಾರು ಕಂದಾ ನೀನು ? ನಿನ್ನ ಹೆಸರೇನು ?

ಮಗು : ಅಂಕಲ್ ನಾನು ಪ್ರೀತಿ ಅಂತ

ಮನು : (ಅಕ್ಕ ಪಕ್ಕ ನೋಡಿ) ಒಹ್ ಈ ಬೆಟ್ಟದಮೇಲೆ ಹೇಗೆ ಬಂದೆ ಯಾರು ಜೊತೆಗೆ ಇಲ್ವಾ

ಮಗು : ಇಲ್ಲಾ ಅಂಕಲ್ ನಾನು ಮಮ್ಮಿ ಡ್ಯಾಡಿ ಜೊತೆ ಬಂದಿದ್ದೆ ಅವರೆಲ್ಲ ಆ ಕಡೆ ದೇವಸ್ತಾನಕ್ಕೆ ಹೋದ್ರು

ಮನು : ಮತ್ತೆ ನೀನ್ಯಾಕೆ ಇಲ್ಲಿಗೆ ಬಂದೆ ಹಾಗೆಲ್ಲ ಅಮ್ಮನ ಬಿಟ್ಟು ಬರ್ತರ

ಮಗು : ಅಲ್ಲಿ ನೋಡಿ ಆ ಹೂ ಕಾಣುತ್ತ ಇದೆಯಲ್ಲ ಅದನ್ನ ನಾನು ದ್ಯದಿಗೆ ಕಿತ್ತು ಕೊಡು ಅಂದೇ ಹ್ಹ ಹ್ಹ ಹ್ಹ ಡ್ಯಾಡಿ ಬೆತ್ತ ಹತ್ತೋಕೆ ಆಗ್ದನೆ ಹೆದರಿಕೊಂಡು ನನಗೆ ಬೈದ್ರು ಅದಕ್ಕೆ ನಾನು ಗೊತ್ತಿಲ್ಲದಂತೆ ಇಲ್ಲಿಗೆ ಬಂದೆ ಅಂಕಲ್ ಅಂಕಲ್ ನಿವಾದ್ರು ಆ ಹುವುನಾ ತಂದು ಕೊಡ್ತೀರ ನನಗೆ ಅದು ಬೇಕು ಇಲ್ಲಾಂದ್ರೆ ನಾನೇ ಹೋಗಿ ತಗೋತೀನಿ

ಮನು : ಹೇ ನಿಂತ್ಕೋ ಪುಟ ನಾನೇ ತಂದು ಕೊಡ್ತೀನಿ ಬಾ ಇಲ್ಲಿಯ

ಮಗು : ನಿಜವಾಗಲು ತಂದು ಕೊಡ್ತಿರಾ.... ಪ್ರಾಮಿಸ್ ಹಾಕಿ

ಮನು : ನಿಜ ಕಂದಾ ಹೂಬಾಡಿ ಹೋಗುತ್ತೆ ಅಂತ ಗೊತ್ತಿದ್ರು ಪ್ರೀತಿಗೆ ಅರ್ಥನೇ ಗೊತ್ತಿಲ್ದಿರೋ ಒಂದು ಹೃದಯಕ್ಕೆ ಪ್ರಾಣ ಲೆಕ್ಕಿಸದೆ ಆ ಹೂ ನಾ ತಂದು ಕೊಟ್ಟೆ ಇನ್ನು ಏನು ಅರೆಯದು ಪುಟ್ಟ ಹೃದಯದ ಈ ಪ್ರೀತಿಗೆ ಇಲ್ಲಾ ಅಂತಿನಾ ಇಲ್ಲೇ ಇರು ಬರ್ತೀನಿ

( ಮನು ಮೇಲಕ್ಕೆ ಏಳಲಾರದೆ ಎದ್ದು ಕುಂಟುತ್ತ ಹೂವು ಕೀಳಲು ಹೋಗ್ತಾನೆ )

ಮಗು : ಅಂಕಲ್ ನಿಮ್ ಕಾಲಿಗೆ ಏನಾಗಿದೆ ಯಾಕ ಕುಂಟುತ್ತಾ ಇದಿರಾ

ಮನು : ಅದಾ 5 ವರ್ಷದ ಹಿಂದೇ ರಾತ್ರಿ ಬೈಕ್ ಅಲ್ಲಿ ಬರುವಾಗ ಆಕ್ಸಿಡೆಂಟ್ ಆಗಿ ಹೀಗಾಗಿದೆ ಎಲ್ಲಾ ಹಣೆ ಬರಹ

ಮಗು : ಅಂಕಲ್ ನನಗೆ ಹೂವು ಬೇಡ ನೀವು ಹೇಗೆ ಅಷ್ಟೊಂದು ತುದಿಗೆ ಹೋಗ್ತಿರಾ ನನಗೆ ಭಯ ಆಗುತ್ತೆ

ಮನು : ಹ್ಹ ಹ್ಹ ಹ್ಹ ನನ್ನ ನಡೆಯೋದು ನೋಡಿ ನೀನು ಹಾಗೆ ಹೇಳ್ತಾ ಇದೀಯ ನನಗೆ ಗೊತ್ತು ನನಗೆ ಆ ಬೆಟ್ಟದ ತುದಿ ಹೊಸದೇನು ಅಲ್ಲಾ ನೀನು ಇಲ್ಲೇ ಇರು ಕಂದಾ ನಾನು ಆ ಹೂವುನ ತಗೊಂಡು ಬರ್ತೀನಿ

ಮಗು : ಅಂಕಲ್ ಬೇಡ ಅಂಕಲ್ ಪ್ಲೀಸ್

(ಮಗುನಿನ ಮಾತು ಗಮನಕ್ಕೆ ಕಿವಿಗೆ ಹಾಕೊಲ್ದಾನೆ ಮನು ಹೂವಿಗಾಗಿ ಬೆಟ್ಟದ ತುದಿಗೆ ಹೋಗಿ ಹೂವುನಾ ಕಿತ್ತು ಕೈಯಲ್ಲಿ ಇಟ್ಕೊಂಡು ಇಳಿಯುವಾಗ ಕಾಲು ಜಾರಿ ಪ್ರಪಾತಕ್ಕೆ ಬಿಳೋ ಅಷ್ಟರಲ್ಲಿ ಮತ್ತೆ ಮಗು ಕುಗುತ್ತೆ

ಮಗು : ಅಂಕಲ್ I MISS YOU ಅಂಕಲ್

ಮನುಗೆ ನಾನು ಬದುಕ್ತೀನಿ ಅನ್ನೋ ನಂಬಿಕೇನೆ ಕಳ್ಕೊಂಡು ಇರ್ತಾನೆ ಮಗುವಿನ I MISS YOU ಅನ್ನೋ ಮಾತು ಕೆಲ್ದಾಕ್ಷಣ ತಾನು ಬದುಕಬೇಕು ಅಂದಕೊಂಡು ಹಾಗೂ ಹೀಗೆ ಕಷ್ಟ ಪಟ್ಟು ಮೇಲೆ ಬರ್ತಾನೆ ಬದುಕ್ತು ಬಡಪಾಯಿ ಜೀವ ಅಂತ ನಗು ಮುಖದಲ್ಲಿ ಮಗು ಕಡೆ ನೋಡ್ತಾನೆ ಸುತ್ತಲು ಸಾಯುವಾಗ ಬಂದು ಕಾಪಾಡದೆ ಇರೋ ಜನ ಅದ್ಯಾವುದರ ಅರಿವಿಲ್ಲದೆ ಮಗುವನ್ನೇ ಹುಡುಕುತ್ತ ಇರೋ ಕಣ್ಣುಗಳು.......

ಮಗು ಯಾರನ್ನೋ ಅಪ್ಪಿಕೊಂಡು ಬಿಕ್ಕಿ ಬಿಕ್ಕಿ ಅಳುತ್ತಿದೆ ಹತ್ತಿರ ಹೋಗಿ ಕೈಯಲ್ಲಿರೋ ಹೂ ಕೊಡೋಣ ಅಂತ ನಿಧಾನವಾಗಿ ಇಳಿದು ಬರ್ತಾನೆ ಅಷ್ಟರಲ್ಲಿ ಮಗು ಮನು ಹತ್ರ ಓಡಿ ಬಂದು ಅಪ್ಪಿಕೊಂಡು ಅಳುತ್ತೆ

ಮನು : ತಗೋ ಕಂದಾ ಹೂ

ಮಗು : ನಿಮಗೇನು ಆಗಿಲ್ಲ ಅಲ್ವ ! sorry ಅಂಕಲ್

ಮನು : ಇಲ್ಲಾ ಕಂದಾ ಏನು ಆಗಿಲ್ಲ ತಗೋ ಈ ಹೂ ನಾಅಷ್ಟರಲ್ಲಿ ಆ ಮಗುವಿನ ತಾಯಿ ಓಡಿ ಒಮ್ಮೆ ಮನು ನಾ ನೋಡ್ತಾಳೆ ಮೊದ್ಲು ಮೊದ್ಲು ಕಣ್ಣುಗಳು ಅವನನ್ನ ಗುರುತಿಸದೆ ಇದ್ರೂ ಮನಸ್ಸು ಮಾತ್ರ ಅವನ ಗುರುತು ಹಿಡಿದು ಕಣ್ಣಲ್ಲಿ ನೀರು ತುಂಬಿಕೊಂಡು ದುಃಖದಲ್ಲಿ ಮನು ಹೇಗಿದಿಯೋ ಏನೋ ಹೇಗಾಗಿದಿಯಲ್ಲೋ ನನ್ನ ಕ್ಷಮಿಸಿ ಬಿಡೋ ನಾನು ನಿನಗೆ ಮೋಸ ಮಾಡಿದ್ಯೇ ...ಅಂತ ಒಂದೇ ಸಮನೆ ಅವನ ಕೈ ಹಿಡಿದು ಅಳ್ತಾ ಇರುವಾಗ ನವ್ಯಳ ಗಂಡ ಬಂದು ಮಗುನ ಎತ್ತಿಕೊಂಡು ಪಕ್ಕದಲ್ಲೇ ನಿಲ್ತಾನೆ

ಮನು : ಹೇ... ನವ್ಯ ನೀನು ಇಲ್ಲಿ...... ಅಂತು ಬಂದ್ಯಲ್ಲಾ ನನ್ನ ನೋಡೋಕೆ........
ಸಾಯೋಕು ಆಗದೆ ಬದುಕೊಕು ಆಗದೆ ಪ್ರತಿ ಕ್ಷಣನು ನಿನ್ನ ನೆನಪಲ್ಲೇ ಕೊರುಗ್ತಾ ಇದ್ದೆ ಮೋಸ ನಿನ್ ಮಾಡ್ಲಿಲ್ಲ ನಮ್ಮ ಲೈಫ್ ನಲ್ಲಿ ಆ ವಿಧಿ ಮಾಡ್ತು ಅಷ್ಟರಲ್ಲಿ ನವ್ಯಳ ಗಂಡ ಬಂದು ಭುಜದ ಮೇಲೆ ಕೈ ಇಟ್ಟು ನವ್ಯ ಹೋಗೋಣ್ವಾ ಅಂತ ಕರಿತನೆ ನವ್ಯನ್ನ ನೋಡ್ತಾ ನೋಡ್ತಾ ಮನು ಮಾತು ನಿಲ್ಲಿಸಿ ಸುಮ್ನಾಗ್ತಾನೆ ಈ ಕಡೆ ಮಗು ಒಂದೇ ಸಮನೆ ಅಳ್ತಾ ಇರುತ್ತೆ ಕಣ್ಣಲ್ಲಿ ನೀರು ತುಂಬಿಕೊಡು ಸುತ್ತುಗಟ್ಟಿದ ಜನ ಆಗಲೇ ನವ್ಯ ಗೆ ಮನು ಆಡಿದ್ದ ಮಾತುಗಳು ನೆನಪಾಗ್ತವೆ "ಒಂದಂತ್ತು ನಿಜ ಕಣೆ ನನ್ನ ಜಾಗದಲ್ಲಿ ನಿನ್ನ ಜೊತೆ ನನ್ನ ಬಿಟ್ಟು ಬೇರೆಯಾರನ್ನದ್ರು ನಾ ನೋಡ್ದೆ ಅಂತ ಇಟ್ಕೋ.... ಅವತ್ತೇ ನನ್ನ ಕೊನೆ ಅಂತ ತಿಳ್ಕೋ" ಅದನ್ನೇ ನೆನಪು ಮಾಡಿಕೊಳ್ತಾ ಮಾಡಿಕೊಳ್ತಾ ನವ್ಯಳ ಹೃದಯಾ ಬಡಿತ ನಿಲ್ಲುತ್ತೆ ಹಾಗೆ ಕಣ್ಣು ಮುಚ್ಚುತಾಳೆ


ಹೌದು ನವ್ಯಗೆ ಹೃದಯ ಸಂಭಂಧಿ ಕಾಯಿಲೆ ಇತ್ತು ತನ್ನ ಪ್ರಿತಿಬಗ್ಗೆ ಗಂಡ ಹತ್ರ ಎಲ್ಲಾ ಹೇಳಿಕೊಂಡಿದ್ಲು ಅದಕ್ಕೆ ಮನು ಸಿಗಬಹುದು ಒಂದು ಸರಿ ನೋಡ್ಬೇಕು ಅಂತಾನೆ ಗಂಡನೇ ಜೊತೆ ಸುಮಾರು ಐದು ವರ್ಷಗಳ ನಂತರ ಇಲ್ಲಿಗೆ ಬಂದಿದ್ಲು


ಹಾಗಾದ್ರೆ ಇಲ್ಲಿ ಮಿಸ್ ಆಗಿದ್ದು ಯಾರು ?

ಮಿಸ್ ಮಾಡಿಕೊಂಡಿದ್ದು ಯಾರು ?

ಅಮರ ಪ್ರೇಮ ಅಂದ್ರೆ ಇದೇನಾ ?

ನಿಜವಾದ ಪ್ರೀತಿ ಸಾವಲ್ಲೇ ಕೊನೆ ಕಾಣುತ್ತ ?

ಕೊನೆ ಏನು ಕಾಣುತ್ತೋ ಬಿಡುತ್ತೋ ಗೊತ್ತಿಲ್ಲ ಈ ಸ್ಟೋರಿ ಓದಿದ ನಿಮಗೆ ನಿಮ್ಮ ಕಣ್ಣಿನಲ್ಲಿರೋ ಒಂದು ಹನಿಯಾದ್ರು ಕೆನ್ನೆ ಮೇಲೆ ಜಾರಿ ಕೊನೆ ಕಂಡೆ ಕಾಣುತ್ತೆ ಯಾಕಂದ್ರೆ ನಿಮಗೂ ಹೃದಯ ಇದೇ ಅಲ್ವ !


ನಿಮ್ಮ ಹುಡುಗ
?ದೊಡ್ಡಮನಿ.ಮಂಜು