ಸತ್ಯವನ್ನೇ ನುಡಿಸು ಗುರುವೇ ನರವಿಲ್ಲದ ಜಿಹ್ವೆಯೋಳ್ ! ಸ್ಥಿರವಾಗಿ ನೆಲೆಸು ಗುರುವೇ ಮರ್ಕಟ ಈ ಮನದೊಳ್ !

Thursday 25 February 2010

"ಭಾವನೆಗಳ ಒಡತಿ ನನ್ನ ಮುದ್ದು ಗೆಳತಿ"




ಹೌದು ಈ ಜೀವನ ಅನ್ನೂದು ಎರಡು ಕಂಬಿಗಳ ಮೇಲೆ ಚಲಿಸೋ ರೈಲಿನತರಹ, ನಮ್ಮ ನಮ್ಮ ನಿಲ್ದಾಣ ಬರುವ ತನಕ ನಾವು ಕಾಯ್ಲೆ ಬೇಕು ಅಷ್ಟರೊಳಗೆ ನಮಗೆ ಎಷ್ಟೊಂದು ಅನುಭವಗಳಾಗಿರುತ್ತವೆ ಆಲ್ವಾ ! ಈ ಪಯಣದಲ್ಲಿ ಎಷ್ಟೋ ತಿರುವುಗಳು ಸಿಗ್ತವೆ, ಎಷ್ಟೋ ಜನ ಬಂದು ಇಳಿದು ಕಣ್ಮರೆಯಾಗಿ ಹೋಗ್ತಾರೆ ಅವೆಲ್ಲ ಒಂದು ಸಣ್ಣ ನೆನಪು ಅನ್ನಬಹುದು ಆದ್ರೆ ಈ ರೈಲು ಬಂಡಿಯಾ ಪಯಣದಲ್ಲಿ ಪರಿಚಯವಾಗಿ ಈ ಮನಸ್ಸಿನಲ್ಲಿ ಶಾಶ್ವತ ವಾಗಿ ಉಳಿದು ಕೊನೆಗೆ ಒಂದು ದಿನ ಈ ಬಿಳಿ ಹಾಳೆ ಮೇಲೆ ಅವರ ನೆನಪುಗಳನ್ನ ನನ್ನ ಈ ಕೈ ಗಳಿಂದ ದಾಖಲಿಸುವಂತೆ ಮಾಡ್ತಾರಲ್ಲ ಅಂತಹ ಒಬ್ಬ ಗೆಳತಿನ ನಾ ಹೇಗೆ ಮರೆಯಲಿ, No,Never ಸಾಧ್ಯವಿಲ್ಲದ ಮಾತು. ಆ ಗೆಳತಿನ ಮರೆಯೋದಕ್ಕೆ ಆಗೋಲ್ಲ ಏಕೆಂದರೆ ಅವಳು ನನ್ನ ನೆನಪಿನ ಮಡಿಲಲ್ಲಿ ನೆನಪಾಗಿ ಉಳಿದಿದ್ದಾಳೆ.

ನೆನಪಿನ ಅಂಗಳದಿ
ನೆನಪಿನ ರಂಗೋಲಿ ಇಟ್ಟು
ನೆನಪಿನ ಬಣ್ಣ ತುಂಬುವ ಮುನ್ನ
ನೆನಪಲ್ಲೇ ನೆನಪಾಗಿ ಹೋದ
"ನನ್ನ ಮುದ್ದು ಗೆಳತಿ ಭಾವನೆಗಳ ಒಡತಿ"

ನಿಜಾ, ನಾನು ಹೇಳ್ತಾ ಇರೋದು ನನ್ನ ನೆನಪುಗಳ ಮಡಿಲಲ್ಲಿ ಕೇವಲ ನೆನಪಾಗಿ ಉಳಿದಿರೋ ನನ್ನ ಗೆಳತಿ ಒಬ್ಬಳ ಬಗ್ಗೆ, ಗೆಳತಿ ಅಂದಾಕ್ಷಣ ದಿನಗಳ, ತಿಂಗಳುಗಳ ಅಥವಾ ವರ್ಷಗಳಿಂದ ಪರಿಚಯವಿರುವ ಗೆಳತಿಯ ಬಗ್ಗೆ ನಾ ಹೇಳ್ತಾ ಇಲ್ಲ, ಅವಳು ಅಮೂಲ್ಯವಾದ ಕೆಲವೇ ಕಲವು ಘಂಟೆಗಳ ಗೆಳತಿಯ ಬಗ್ಗೆ,
ಅಂದು ಭಾನುವಾರ, ಆಫೀಸ್ನಲ್ಲಿ ಎರಡು ದಿನ ರಜಾ ಹಾಕಿ ನಾನು ಬೆಂಗಳೂರಿನಿಂದ ದಾವಣಗೆರೆಗೆ ಬೆಳಗ್ಗೆ 6 ಘಂಟೆಯಾ ರೈಲಿಗೆ ಹೋಗ ಬೇಕಿತ್ತು , ಹೇಗೋ ರೈಲ್ವೆ ಸ್ಟೇಷನ್ ತಲುಪಿ ಕ್ವೀ ನಲ್ಲಿ ಟಿಕೆಟ್ ತೆಗೆದುಕೊಂಡು ಪ್ಲಾಟ್ ಫಾರ್ಮ್ ಗೆ ಬರುವಷ್ಟರಲ್ಲಿ ರೈಲ್ ಹೊರಟ್ಟಿತ್ತು ತಕ್ಷಣವೇ ನನ್ನ ಕಾಲುಗಳು ಸಕ್ರಿಯಗೊಂಡು ಓಡಲಾರಂಬಿಸಿದವು ಧೈರ್ಯಮಾಡಿ ಹತ್ತೇ ಬಿಟ್ಟೆ, ನಾನು ಹತ್ತುವುದನ್ನೇ ನೋಡುತ್ತಿದ್ದ ಕೆಲವರು ಹತ್ತಿದ ಮೇಲೆ ಸ್ವಲ್ಪ ಬುದ್ದಿವಾದ ಹೇಳಿದರು ಆ ಬುದ್ದಿವಾದದ ಮಾತುಗಳು ಇಷ್ಟೇ "ಚಲಿಸುವ ರೈಲುಗಾಡಿಯನ್ನು ಹತ್ತ ಬಾರದು" ಅಂತ, ಎಷ್ಟೇ ಅಗಲಿ ಆ ಮಾತುಗಳನ್ನು ಹೇಳಿದವರು ನನಗಿಂತ ಹಿರಿಯರು ಅಲ್ಲದೆ ನನ್ನ ಹಿತೈಷಿಗಳೆಂದುಕೊಂಡು ನಮ್ರತೆಯಿಂದ ಇನ್ನು ಮುಂದೆ ಈ ಥರ ತಪ್ಪು ಮಾಡೋದಿಲ್ಲ ಎಂದು ಹೇಳುತ್ತಾ ಬೋಗಿಯ ಒಳಗೆ ನುಸುಳಿದೆ, ಓಡಿ ಬಂದ ರಭಸಕ್ಕೆ ನನ್ನ ಬಾಯಲ್ಲಾ ಒಣಗಿ ಬಾಯಾರಿಕೆ ಯಾಗಿತ್ತು, ನೀರಿಗಾಗಿ ಬ್ಯಾಗಗೆ ಕೈ ಹಾಕಿ ವಾಟರ್ ಬಾಟಲ್ ತೆಗೆದುಕೊಂಡು ನೀರು ಕುಡಿಯೋಣವೆಂದು ಬಾಟಲ್ ಎತ್ತಿದೆ ಕಣ್ಣು ಮುಚ್ಚಿ ಮೊರ್ನಾಲ್ಕು ಗುಟುಕು ನೀರು ಕುಡಿದು ಒಂದು ನಿಮಿಷ ಅಕ್ಕ ಪಕ್ಕ ಕಣ್ಣಾಡಿಸಿದೆ ಆಗಲೇ ನನ್ನ ಬುದ್ಧಿಗೆ ಅರಿವಾಗಿದ್ದು ನಾನು ಹತ್ತಿರುವುದು ರೆಸೆರ್ವೇಶನ್ ಕೋಚ್ ಅಂತ ತಕ್ಷಣ ಕೈಯಲ್ಲಿದ್ದ ಬಾಟಲನ್ನು ಬ್ಯಾಗಿಗೆ ಹಾಕಿಕೊಂಡು ರೈಲಿನ ಬಾಗಿಲ ಬಳಿ ಹೋಗಿ ನಿಂತೆ ಅಷ್ಟರಲ್ಲಿ ಮಲ್ಲೇಶ್ವರಂ ಸ್ಟಾಪ್ ಬಂತು ಅಲ್ಲಿಂದ ಇಳಿದು ಕೊಂಡು ಹಿಂದಿನ ಜನರಲ ಕೋಚ್ ನಲ್ಲಿ ಹತ್ತಿಕೊಂಡೆ.
ಅದೇನೋ ಗಾದೆ ಇದೆಯಲ್ಲ "ಪಾಪಿ ಸಮುದ್ರಕ್ಕೊದ್ರು ಮೊಳಕಾಲ್ಮಠ ನೀರು" ಅಂದಂಗೆ ಆ ಬೋಗಿಯಲ್ಲಿ ಒಂದು ಸೀಟು ಖಾಲಿ ಇರ್ಲಿಲ್ಲ , ಏನ್ ಮಾಡೋದು ಪಾಲಿಗೆ ಬಂದಿದ್ದು ಪಂಚಾಮೃತ ಅನ್ನಕೊಂಡು ಬೋಗಿ ಒಳಗೆ ಹೋದೆ ಕೊನೇಲಿ ಒಂದೇ ಒಂದು ಸೀಟು ಖಾಲಿ ಇತ್ತು ಅಬ್ಬಾ ಅಂತು ಇಂತೂ ಸೀಟು ಸಿಕ್ತಲ್ಲ ಅಂತ ಖುಷಿಯಿಂದ ಹೋಗಿ ಕೂತುಕೊಂಡೆ, ಪಕ್ಕ ತಿರುಗಿ ನೋಡಿದೆ ನನ್ನ ಪಕ್ಕ ಒಂದು ಹುಡುಗಿ ಕೊತಿದ್ಲು, ನನಗೆ ಈ ಹುಡುಗಿರನ್ನ ಕಂಡ್ರೆ ಸ್ವಲ್ಪ ಸಂಕೋಚ ಹೇಗೋ ಅರ್ಜೆಸ್ಟ್ ಮಾಡ್ಕೊಂಡು ಕೂತುಕೊಂಡೆ, ಟೈಮ್ ಪಾಸ್ಗೆ ಅಂತ ತುಂಬಾ ದಿನಗಳ ಮೇಲೆ ಒಂದು ಕನ್ನಡ ನ್ಯೂಸ್ ಪೇಪರ್ ತಗೊಂಡಿದ್ದೆ ಅದನ್ನ ತೆಗೆದು ಓದುತ್ತ ಕುಳಿತೆ, ಯಾವ ಪೇಜ್ ನಲ್ಲಿ ನೋಡಿದ್ರು ಬರಿ ಕೊಲೆ, ಸುಲಿಗೆ,ದರೋಡೆ ಬಿಟ್ರೆ ಈ ಹಾಳು ರಾಜಕಾರಣದ ಬಗ್ಗೆನೇ ಇತ್ತು ಯಾಕೋ ಓದೋಕೆ ಇಂಟರೆಸ್ಟ್ ಬರಲಿಲ್ಲ ಆ ಪೇಪರ್ ನ ಎದರುಗಡೆ ಸೀಟಿನ ಕಂಬಿಯಲ್ಲಿ ಸಿಗಸಿ ಹಾಗೆ ಕಣ್ಣು ಮುಂಚಿಕೊಂಡು ಕೂತೆ, ಎಲ್ಲೋ ಯಾರೋ ಮಾತನಾಡಿಸಿದ ಹಾಗೆ ಆಯ್ತು , ರಾತ್ರಿ ಊರಿಗೆ ಹೋಗೋ ಸಡಗರದಲ್ಲಿ ನಿದ್ದೆ ಸರಿಯಾಗಿ ಮಾಡಿರಲಿಲ್ಲ ಹಾಗಾಗಿ ನಿದ್ದೆ ಬೇರೆ ಎಳಿತಾ ಇತ್ತು ಅಷ್ಟೊಂದು ಗಮನಕ್ಕೆ ತೆಗೆದುಕೊಳ್ಳಲಿಲ್ಲ, ಮತ್ತದೇ ಧ್ವನಿ "If You don't mind" ನಾನು ನಿಮ್ಮ ಪೇಪರ್ ಓದ ಬಹುದ ಅಂತ ನನ್ನ ಪಕ್ಕದಲ್ಲಿ ಕುಳಿತಿದ್ದ ಹುಡುಗಿ ಕೇಳಿದ್ಲು, ನನಾದ್ರು ಹೇಗೆ ಇಲ್ಲ ಅನ್ಲಿ ಹುಡುಗಿ ಬೇರೆ ಈ ಮನಸು ಕರಗಿ ನೀರಾಗಿ ಬಿಡ್ತು " ಅಯ್ಯೋ ಪೇಪರ್ ತಾನೇ ತಗೊಳ್ಳಿ " ಅಂತ ನಾನೇ ಎತ್ತಿ ಕೊಟ್ಟು ಮತ್ತೆ ಕಣ್ಣು ಮುಚ್ಚಿ ಕುಳಿತೆ ನಿದ್ದೆ ಹೇಗೆ ಬಂತೋ ಗೊತ್ತಿಲ್ಲ ಎಷ್ಟೋ ಹೊತ್ತಿನ ಮೇಲೆ ಎಚ್ಚರವಾಯಿತು ಆ ಹುಡುಗಿ ಇನ್ನು ಪೇಪರ್ ಓದುತ್ತಾನೆ ಇದ್ಲು "ದುಡ್ಡು ಕೊಟ್ಟು ತಗೊಂಡ ನಾನೇ ಓದ್ಲಿಲ್ಲ ಇವಳೇನು ಓದುತ್ತಿದ್ದಳಪ್ಪ" ಅಂತ ಮನಸ್ಸಿನಲ್ಲೇ ಅನ್ಕೊಂಡು ಆಕಳಿಸಿದೆ ಅಷ್ಟರಲ್ಲಿ ಆ ಹುಡುಗಿ ಏನ್ ಸರ್ ನಿದ್ದೆ ಆಯ್ತಾ ಅಂತ ಕೇಳ್ತಾ ಪೇಪರ್ ಮಡಚಿ ನನ್ನ ಕೈಗೆ ಕೊಟ್ಟು ಥ್ಯಾಂಕ್ಸ್ ಹೇಳಿದ್ಲು ಆಗ ನಾನು ಪ್ರತಿಯಾಗಿ ಆಯ್ತು ಮೇಡಂ ನಿಮ್ಮದು ನಿದ್ದೆ ಆಯ್ತಾ ಅಂತ ಕೇಳಿದೆ? ಆ ಹುಡುಗಿಗೆ ಸ್ವಲ್ಪ ಗಲಿಬಿಲಿ ಆಯ್ತು ಅನಿಸುತ್ತೆ, ನಂತರ ನಗ್ತಾ ಹ್ಹೋ..... ಆಯ್ತು ನಿನ್ನೆ ರಾತ್ರಿ ಅಂತ ಹೇಳಿದ್ಲು ನಾನು ಮತ್ತೇನು ಮಾತನಾಡ್ಲಿಲ್ಲಾ ಆಗ ನೀವು ತುಂಬಾ ಚನ್ನಾಗಿ ಕಾಮಿಡಿ ಮಾಡ್ತೀರಾ ಕಣ್ರೀ ಅಂದ್ಲು, ನಾನು ಕಾಮಿಡಿ ಎಲ್ಲಿ ಮಾಡ್ದೆ ಅಂದೆ. ಮತ್ತೆ ಇನ್ನೆನ್ರಿ ನಾವು ಯಾರನ್ನಾದ್ರು ಊಟ ಆಯ್ತಾ ಅಂತ ಕೇಳಿದ್ರೆ ಹ್ಹೋ ,,,,,, ಆಯ್ತು ನಿಮ್ಮದು ಆಯ್ತಾ ಅಂತ ಕೇಳ್ತಾರೆ ಆದರೆ ನಿಮಗೆ ನಿದ್ದೆ ಆಯ್ತಾ ಅಂತ ಕೇಳಿದ್ರೆ ನಿಮ್ಮದು ಆಯ್ತಾ ಅಂತ ಕೇಳ್ತಿರಲ್ಲ ಅದು ಕಾಮಿಡಿ ಅಲ್ವ! ನನಗೆ ನಗುನೆ ತಡೆಯೋಕೆ ಅಗ್ತಾ ಇಲ್ಲಾ ಅಂತ ಒಂದೇ ಉಸಿರಿನಲ್ಲಿ ಹೇಳಿ ಬಿಟ್ಲು. ಅಲ್ಲಿಂದ ಶುರುವಾಯ್ತು ನಮ್ಮಿಬ್ಬರ ಪರಿಚಯ ನನ್ನ ಬಗ್ಗೆ ಆ ಹುಡುಗ ಎಲ್ಲಾ ತಿಳಿದುಕೊಂಡಳು ನಾನು ಏನ್ ಮಾಡ್ತಾ ಇದೀನಿ?, ಎಲ್ಲಿರೋದು?,ಯಾವ ಊರು? ಅಷ್ಟೇ ಏಕೆ ನನ್ನ ಮನೇಲಿ ಯಾರ್ಯರು ಇದ್ದಾರೆ? ಅಂತ ಕೇಳಿ ತಿಳಿದು ಕೊಂಡಳು ಅವಳ ಅಷ್ಟೋ ಪ್ರೆಶ್ನೆಗಳಿಗೆ ಉತ್ತರ ಕೊಟ್ಟು ಕೊಟ್ಟು ಸುಸ್ತಾಗಿ ಬಿಟ್ತು, ಅಲ್ಲಿತನಕ ಅವಳನ್ನ ಅಷ್ಟೊಂದು ಸರಿಯಾಗಿ ನೋಡಿರಲಿಲ್ಲ ಅವಳ ಮುಖದಲ್ಲಿ ಎಷ್ಟೋ ಮುಗ್ದತೆ ಇತ್ತು ಅಂದ್ರೆ " ಬಿಳಿ ಇರೋದೆಲ್ಲ ಹಾಲು ಅಂತ ನಂಬಿರೋ ಮಗುವಿನ ಮನಸ್ಸು " ಅಂತಹ ಮನಸ್ಸಲ್ಲಿ ಎಲ್ಲೋ ಒಂದು ಕಡೆ ಹೇಳಲಾರದಷ್ಟು ದುಃಖ ತುಂಬಿದೆ ಅಂತ ಅವಳ ಮುಖವನ್ನು ದೃಷ್ಟಿಸಿ ನೋಡಿದಾಗಲೇ ನನಗೆ ಗೊತ್ತಾಗಿದ್ದು. ಯಾರನ್ನು ನಾನು ಅವರ ಜೀವನದ ಬಗ್ಗೆ ಕೇಳಿದವನು ಅಲ್ಲ ಆದ್ರೆ ಅವತ್ತೆಕು ನನ್ನ ಮನಸ್ಸು ತಡೆಯಲಿಲ್ಲ ನಾನೇ ಕೇಳಿಬಿಟ್ಟೆ

ನಗುವ ಮೊಗದ ಹೊವಲ್ಲಿ
ಮಾತು ಮಾತಿಗೂ ಯಾಕಿಷ್ಟು ಅಸಮದಾನ !
ಕೇಳು ಗೆಳತಿ ಹೇಳಬೇಕೆ
ನಾನು ಏನಾದರು ಸಮಾದಾನ !
ಹೇಳಿಕೊಳ್ಳೋ ಅಂತ ದುಃಖ ಏನು ಇಲ್ಲ, ಎಲ್ಲ ಹೆಣ್ಣಿಗೆ ಈ ವಯಸ್ಸಲ್ಲಿ ಎದುರಾಗೋ ಒಂದು ದೊಡ್ಡ ಸಮಸ್ಯೆ ನನಗು ಈಗ ಎದುರಾಗಿದೆ ಅದರಲ್ಲೂ ಈ ಮದ್ಯಮ ವರ್ಗದ ಜನರಿಗೆ ಈ ಸಮಸ್ಯೆ ಬರಬಾರದು ಅಂತ ಹೇಳಿ ಸ್ವಲ್ಪ ಹೊತ್ತು ಸುಮ್ಮನೆ ಕೂತಳು, ಮತ್ತೆ ನಾನು ಮಾತನಾಡಿದೆ ಏನಾದ್ರೂ ಮನೆಯಲ್ಲಿ ತೊಂದ್ರೆ ಇದೇನಾ ? ಸಮಸ್ಯೆ ಅಂದ್ರೆ ಯಾವರೀತಿಯದು ? ಅಂತ ಕೇಳಿದೆ, ಆಗಲೇ ಬಿಚಿಟ್ಟಿದ್ದು ನನ್ನ ಗೆಳತಿ ತನ್ನ ಭಾವನೆಗಳ ಒಳ ನೋವನ್ನ

ಗೆಳತಿ : ನಾನು ಇನ್ನು ಓದುತ್ತ ಇದೀನಿ ಅಕ್ಕನಿಗೆ ಈಗಾಗಲೇ ಮಧುವೆ ಮಾಡಿ ಎರಡು ವರ್ಷಗಳಾಯ್ತು ನನಗೆ ಒಬ್ಬಳು ತಂಗಿ ಬೇರೆ ಇದಾಳೆ ಇನ್ನು ಚಿಕ್ಕವಳು ಮನೆಯಲ್ಲಿ ಅಪ್ಪ ಅಮ್ಮ ಎಲ್ಲರು ಚನ್ನಾಗಿದಿವಿ. ಆದ್ರೆ ,,,,,!!!

ನಾನು : ಆದ್ರೆ ಇನ್ನೇನು ಎಲ್ಲ ಚನ್ನಾಗಿದ್ದಿರ ಇಲ್ಲಿ ಸಮಸ್ಯೆ ಆದರು ಏನು ?

ಗೆಳತಿ : ಮಧುವೆ............... ಮಧುವೆ............. ಇದೆ ಒಂದು ದೊಡ್ಡ ಸಮಸ್ಯೆ ಆಗಿದೆ ರೀ

ನಾನು ಮೊದ್ಲೇ ತಲೆಯಲ್ಲಿ ಹುಳ ಬಿಟ್ಕೊಂಡಿದ್ದೆ ಇವಳು ಹೇಳಿದ್ದು ಕೇಳಿ ನನಗೆ ಚನ್ನಾಗಿದ್ದ ತಲೆ ಗಿರಗಿರ ಅಂತ ತಿರಗ್ತಾ ಇತ್ತು ! ಅಲ್ಲ ರೀ ನಮ್ಮೂರಲ್ಲಿ ಎಲ್ಲ ಹುಡುಗಿರು ಮಧುವೆ ಅಂದ್ರೆ ಎಷ್ಟು ಖುಷಿಯಾಗಿರ್ತರೆ ನಿಮಗೇನ್ರಿ ಆಗಿದೆ ಮಧುವೇನೆ ಒಂದು ಸಮಸ್ಯೆ ಅಂತಿರಲ್ಲ ಯಾಕೆ ಹುಡುಗ ಚನ್ನಾಗಿಲ್ವ ?

ಗೆಳತಿ : ಹಾಗಲ್ಲ ರೀ ಹುಡುಗ ಚನ್ನಾಗಿದನೆ ಆದ್ರೆ ನಾನು ಇನ್ನು ಓದು ಬೇಕು ಅನ್ಕೊಂಡಿದ್ದೇನೆ ಆದ್ರೆ ನಮ್ಮ ಮನೇಲಿ ಎಲ್ಲರು ನನ್ನ ಮಧುವೆ ಬಗ್ಗೆನೇ ಯೋಚನೆ, ಈ ತಂದೆ ತಾಯಿಗಳೇ ಇಷ್ಟು ಮಗಳು ವಯಸ್ಸಿಗೆ ಬಂದ್ಲು ಅಂದ್ರೆ ಸಾಕು ಮೊದ್ಲು ಯೋಚನೆ ಮಾಡೋದೇ ಮಧುವೆ ಬಗ್ಗೆ , ನಮ್ಮ ಭಾವನೆಗಳಿಗೆ ಇಲ್ಲಿ ಬೆಲೆ ಇಲ್ಲ, ಒಂದು ರೀತಿ ಇದರಲ್ಲಿ ಅವರದು ತಪ್ಪೇನು ಇಲ್ಲ ಎಲ್ಲ ಈ ಬಡತನ. ಅದಕ್ಕೆ ಹೇಳಿದ್ದು ಹುಟ್ಟಿದ್ದರೆ ಈ ಮದ್ಯಮ ವರ್ಗದಲ್ಲಿ ಹುಟ್ಟುಬಾರ್ದು ಒಂದುವೇಳೆ ಹುಟ್ಟಿದ್ರು ಹೆಣ್ಣಾಗಿ ಮಾತ್ರ ಹುಟ್ಟುಬಾರ್ದು (ಕಣ್ಣಿನಲ್ಲಿ ತಡೆಯಲಾಗದ ಕಣ್ಣಿರು) ನಾನು ಹೋಗ್ಲಿ ಬಿಡಿ ಇದೆಲ್ಲ ಸಾಮಾನ್ಯ ಅಂತ ಸಮಾದಾನ ಮಾಡಿದೆ.

ಜೀವನ ಒಂದು ತೊಗುಯ್ಯಲೇ
ಮರೆಯಬೇಡಮ್ಮ
ಬಾಳಲಿ ಕದನ ನಿಲ್ಲದ ಪಯಣ
ತಾಳ್ಮೆ ಬೇಕಮ್ಮ !

ಇದು ನೆನ್ನೆ ಮೊನ್ನೆಯ ಸಮಸ್ಯೆ ಅಲ್ಲ ಯಾವಾಗ ಹೆಣ್ಣು ಈ ಭೂಮಿ ಮೇಲೆ ಕಾಲಿಟ್ಲೋ ಅಂದಿನಿಂದ ಇಂದಿನಹೊರೆಗೂ ಈ ಬಡತನ, ವರದಕ್ಷಿಣೆ, ಕಣ್ಣಿರು ಅವಳ ಬೆನ್ನ ಹಿಂದೇನೆ ಬಂದಿದೆ ಅಲ್ವ ! ಇಲ್ಲಿ ನಾನಾದರು ಬರಿ ಮಾತುಗಳಿಂದ ಸಮಾದಾನ ಮಾಡಿ ಸಾಂತ್ವನ ಹೇಳ ಬಹುದು ಆದ್ರೆ ಈ ಸಮಸ್ಯೆ ಅನ್ನೋ ಸಮಸ್ಯೆಗಳನ್ನ ಕೊನೆಗಾಣಿಸೋಕೆ ಆ ಬ್ರಮ್ಹನಿಂದಲೂ ಆಗೋಲ್ಲ ಅನಿಸುತ್ತೆ ಅಲ್ವ !

ಕೈಯಲಿದ್ದ ಕರ್ಚಿಪ್ ನಿಂದ ಕಣ್ಣಿರನ್ನು ಒರೆಸಿಕೊಂಡು ನನ್ನ ಆ ಮುದ್ದು ಗೆಳತಿ ಮತ್ತೆ ಮಾತನಾಡ ತೊಡಗಿದಳು. ಅದೇನೋ ಗೊತ್ತಿಲ್ಲ ಕಣ್ರೀ ನಿಮ್ಮ ನೋಡಿದ ತಕ್ಷಣ ನನ್ನ ಎಲ್ಲ ನೋವಗಳನ್ನ ನಿಮ್ಮ ಜೊತೆ ಶೇರ್ ಮಾಡ್ಕೊಬೇಕು ಅನಿಸಿತ್ತು ಅದಕ್ಕೆ ಎಲ್ಲ ನಿಮ್ಗೆ ಹೇಳ್ತಾ ಇದೀನಿ ಈ ಥರನಾದ್ರು ನಾನು ನನ್ನ ಭಾವನಗಳನ್ನ ನಿಮ್ಮ ಜೊತೆ ಹಂಚಿಕೊಂಡು ನನ್ನ ದುಃಖನ ಕಡಿಮೆ ಮಾಡಿಕೊಳ್ತಾ ಇದೀನಿ ಏನು ತಪ್ಪು ತಿಳ್ಕೊಬೇಡಿ ಅಂದ್ಲು ಅಷ್ಟರಲ್ಲಿ ಅವಳ ಸ್ಟಾಪ್ ಬಂತು ಕೈಯಲ್ಲಿ ಬ್ಯಾಗ್ ತಗೊಂಡು ಇಳಿದಳು ರೈಲ್ ಹೊರೋಡೋಕೆ ಇನ್ನು ಟೈಮ್ ಇತ್ತು ಅದಕ್ಕೆ ಜೊತೆಗೆ ನಾನು ಇಳಿದೆ ಮತ್ತೆ ಯಾವಾಗ್ ಸಿಗ್ತಿರ ಅಂತ ಕೇಳ್ದೆ ಅವಳು "ನನ್ನ ಕಡೆ ಒಮ್ಮೆ ನೋಡಿ ಮಂಜು ನೀವು ಯಾರು ಏನು ಅಂತ ಗೊತ್ತಿಲ್ಲ ಆದ್ರೆ ನಿನ್ನಂತ ಒಳ್ಳೆ ಹುಡುಗ ನನಗೆ ಸಿಗ್ತನೋ ಇಲ್ವೋ ! ನಿನಗೆ ಮಾತ್ರ ಒಳ್ಳೆ ಹುಡುಗಿ ಸಿಗ್ಲಿ ನಿಮ್ಮನ್ನ ನೋಡೋ ಋಣ ಇತ್ತು ಅಂದ್ರೆ ಮತ್ತೆ ನಾವಿಬ್ರು ಸಿಕ್ಕೆ ಸಿಗ್ತಿವಿ " ಅಮ್ಮನ್ನ ಚನ್ನಾಗಿ ನೋಡಿಕೊಳ್ಳಿ ನಿಮ್ಮ ಜೊತೆ ಕಳೆದ ಈ ಕೆಲವು ಕ್ಷಣಗಳು ನನ್ನ ಜೀವನ ಇರೋತನಕ ಮರೆಯೋಲ್ಲ (ನಿಲ್ಲದ ಕಣ್ಣಿರು). ಅಷ್ಟರಲ್ಲಿ ರೈಲ್ ಹೊರಡ್ತು ನನಗೆ ರೈಲ್ ಹತ್ತೋ ಮನಸ್ಸಿರಲಿಲ್ಲ ಕೈ ಕುಲಕಿ ಶುಭಕೋರಿ ಮತ್ತೆ ಮೆಲ್ಲನೆ ದ್ವನಿಯಲ್ಲಿ "ನೀವು ಎಲ್ಲೇ ಇದ್ರೂ ಚನ್ನಗಿರಿ ನಿಮ್ಮ ಮುಂದಿನ ಜೀವನ ಇನ್ನು ಚನ್ನಗಿರುತ್ತೆ " ದೇವರು ನಿಮ್ಮನ್ನ ಕಾಪಾಡ್ತಾನೆ ಅಂದೇ ರೈಲ್ ಹೋಗ್ತಾನೆ ಇತ್ತು ನಾನು ಇನ್ನು ಅವಳನ್ನೇ ನೋಡ್ತಾ ನಿಂತಿದ್ದೆ ಆಗ ಆ ಗೆಳತಿ ತನ್ನ ಕೈಯಲ್ಲಿದ ಬ್ಯಾಗ್ ಬಿಟ್ಟು ನನ್ನ ಕೈ ಹಿಡಿದು ರೈಲ್ ಹೋಗ್ತಾ ಇದೇ ಬೇಗ ಹತ್ತಿ ಅಂತ ನನ್ನ ತಳ್ಳಿದ್ಲು........

ಅದೇ ಕೊನೆ ನಾನು ಆ ಗೆಳತಿನ ನೋಡಿದ್ದು ಇಲ್ಲಿಗೆ ಒಂದುವರೆವರ್ಷ ಆಯ್ತು ಅನಿಸುತ್ತೆ ಆ ಗೆಳತಿ ಹೇಳಿದಂಗೆ ಮತ್ತೆ ಅವಳನ್ನ ನೋಡೋ ಋಣ ಬರುತ್ತಾ .................... ? ? ? ಬಂದೆ ಬರುತ್ತೆ ಅಂತ ಹೇಳ್ತಾ ಇದೇ ನನ್ನ ಮನಸ್ಸೂ ಅದಕ್ಕೆ ಇದುವರೆಗೂ ನಾನು ಅದೇ ರೈಲ್ ಗೆ ಹೋಗ್ತಾ ಇರ್ತೀನಿ ಒಂದಲ್ಲ ಒಂದು ದಿನ ಆ ಋಣ ಕೊಡಿ ಬಂದ್ರೆ ಅದೇ ರೈಲ್ ನಲ್ಲಿ ಅದೇ ಬೋಗಿನಲ್ಲಿ "ಅವಳ ಗಂಡನ ಜೊತೆ ನನ್ನ ಮುದ್ದು ಗೆಳತಿ ಕೈಯಲ್ಲೊಂದು ಮಗು" ನೋಡೇ ನೋಡ್ತೀನಿ ಇದು ಅವಳ ಕನಸ್ಸು ನನ್ನ ಕನಸ್ಸು ಕೊಡ ನಮ್ಮಿಬ್ಬರ ಸ್ನೇಹಮಯ ಕನಸು ನನಸು ಆಗುತ್ತೆ ಅಲ್ವ !

ನೆನಪಿನ ಅಂಗಳದಿ
ನೆನಪಿನ ರಂಗೋಲಿ ಇಟ್ಟು
ನೆನಪಿನ ಬಣ್ಣ ತುಂಬುವ ಮುನ್ನ
ನೆನಪಲ್ಲೇ ನೆನಪಾಗಿ ಹೋದ
"ನನ್ನ ಮುದ್ದು ಗೆಳತಿ ಭಾವನೆಗಳ ಒಡತಿ"
ಎಲ್ಲೇ ಇರು ಹೇಗೆ ಇರು ಚನ್ನಾಗಿರು
ಇಂತಿ ನಿನ್ನ ಕೆಲವೇ ಕೆಲವು ಘಂಟೆಗಳ
ಗೆಳೆಯ ನಿನ್ನ ಸ್ನೇಹದ ಸೇವಕ
ದೊಡ್ಡಮನಿ.ಎಂ.ಮಂಜು.