ಸತ್ಯವನ್ನೇ ನುಡಿಸು ಗುರುವೇ ನರವಿಲ್ಲದ ಜಿಹ್ವೆಯೋಳ್ ! ಸ್ಥಿರವಾಗಿ ನೆಲೆಸು ಗುರುವೇ ಮರ್ಕಟ ಈ ಮನದೊಳ್ !

Monday 4 October 2010

ಗೋವಿಂದನ ಗಾದೆ ಪುರಾಣ ...!





ಪಾತಿ ಕತೆ ಮುಗಿದು ಹೋಯ್ತು ಸರ್ ಬೇರೆಯೇನಾದ್ರು ಬರೀರಿ ಅಂತ ತುಂಬಾ ಫ್ರೆಂಡ್ಸ್ ಮೇಲ್ ಮಾಡಿದ್ರು ಚಾಟ್ ಮಾಡಿದ್ರು ಕಾಲ್ ಮಾಡಿ ಕೂಡ ಹೇಳಿದ್ರು ನಾನು ಅವರಿಗೆಲ್ಲ ತಾಳಿ ತಾಳಿ ಒಂದು ಮೂವತ್ತು ದಿನ ಓಡಲಿ ಆಮೇಲೆ ಏನಾದ್ರು ಬರೆಯೋಣ ಅಂತ ಹೇಳಿ ಸಮಾಧಾನ ಮಾಡಿದ್ದೆ ಈಗ ನೋಡಿ 30 ದಿನ ಆಗಿದೆ ಏನ್ ಬರೀಬೇಕು ಅಂತ ಗೊತ್ತಾಗ್ತಾ ಇಲ್ಲಾ ಆದ್ರು ಬರಿಲೇ ಬೇಕು ಅಂತ ಇರೋ ಬರೋ ಎನರ್ಜಿನೆಲ್ಲ ಉಪಯೋಗಿಸಿ ಇದನ್ನ ಬರ್ದಿದೀನಿ ಕಾರಣ ಮೂನ್ನೆ ಯಾರೋ ನನಗೆ ಫೋನ್ ಮಾಡಿ "ಮಲ್ಟಿ ಟ್ಯಾಲೆಂಟ್ ಮಂಜು" ಅಂತ ಬಿರುದು ಕೊಟ್ರು ಅಲ್ದೆ ಯಾರೋ ಒಬ್ರು ಕಾಮೆಂಟ್ಸ್ ಕೊಡ ಹಾಕಿದ್ರು, ಈ ಕಂದಾ, ಮುದ್ದು, ಬಂಗಾರ, ಚಿನ್ನ, ರನ್ನ ಇನ್ನು ಹೇಳ್ಬೇಕು ಅಂದ್ರೆ ಪೊರ್ಕಿ, ಲೂಸು, ಮೆಂಟ್ಲು, ಪೋಲಿ ಅಂತೆಲ್ಲಾ ಕೊಟ್ಟ ಹುಡುಗೀರ ಬಿರುದುಗಳಿಗಿಂತ ಇದ್ಯಾಕೋ ಹಾರ್ಟ್ ಟಚ್ ಮಾಡ್ತು ರೀ ಅದಕ್ಕೆ ಒಂದು ಕಾನ್ಸೆಪ್ಟ್  ತಗೊಂಡು ಈ ಪುರಾಣ ಬರ್ದಿದೀನಿ. ನೀವು ಕಷ್ಟ ಪಟ್ಟಾದರು ಓದಿ ಮುಗಿಯೋ ತನಕ ಬಿಡುಬೇಡಿ ಒಂದೇ ಟೈಮ್ ಓದುಬೇಕು ಗಮನ ಇಟ್ಟು ಓದಿ ಓದುವಾಗ ಎಲ್ಲೂ ನಿಲ್ಲಿಸಬಾರ್ದು ತುಂಬಾ ಹುಷಾರು ಯಾಕಂದ್ರೆ ನಾನು ಒಂದು ನಿಮಗೆ ಪ್ರಶ್ನೆ ಕೇಳ್ತೀನಿ ಜಾಗ್ರತೆ ಉತ್ತರ ಕೊಟ್ಟವರಿಗೆ ಸೂಕ್ತ ಬಹುಮಾನ ಇದೆ. 

     ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಅಂತ ಹೇಳ್ತಾರಲ್ಲ ಅದು ನಿಜ ಇರ್ಬೇಕು ಕಣ್ರೀ ಆನೆ ನಡೆದದ್ದೇ ದಾರಿ ಅನ್ನೋ ಹಾಗೆ ನಮ್ಮ ಗೋವಿಂದ ನಡೆದದ್ದೇ ದಾರಿ ಯಾರು ಮಾತು ಕೇಳೋನಲ್ಲ ಅವನದೇ ಹಠ...... ಹೀಗಿರುವಾಗ ಕೆಲವೊಬ್ರು ಅವನಿಗೆ ಊರಿಗೊಂದು ದಾರಿ ಆದ್ರೆ ಎಡವಟ್ಟನಿಗೆ ಒಂದು ದಾರಿ ಅಂತ ಬೆನ್ನು ಹಿಂದೇ ಹೇಳ್ತಾ ಇದ್ರೂ ಅವನು ಕೇಳಿದ್ರು ಕೇಳ್ದೆ ಇರೋ ಥರ ಇರ್ತಾ ಇದ್ದಾ . ಯಾಕಂದ್ರೆ ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತ ? ? ? ? 

ಈಗ ನೇರವಾಗಿ ವಿಷಯಕ್ಕೆ ಬರೋಣ ಕುಂತು ತಿಂದರೆ ಕುಡಿಕೆ ಹೊನ್ನು ಸಾಲದು ಅಂತ ದೊಡ್ಡವರು ಹೇಳಿದರೆ ಅಲ್ವ  ಅಲ್ದೆ  ಕೈ ಕೆಸರಾದರೆ ಬಾಯಿ ಮೊಸರು ಅಂತ ನಾನು ಚಿಕ್ಕವನಿರುವಾಗ ನಮ್ಮ ಟೀಚರ್ ಹೇಳ್ತಾ ಇದ್ರೂ  ಈಗ ನಮ್ಮ ಗೋವಿಂದ ಓದಿದ್ದು ಆಯ್ತು ಎಲ್ಲಾದ್ರು ಕೆಲಸ ಹುಡುಕೋಣ ಅಂತ ಯೋಚನೆ ಮಾಡ್ತಾ ಕೂತಿದ್ದ   ಅದೇನೋ ಹೇಳ್ತಾರಲ್ಲ ಕೆಟ್ಟು ಪಟ್ಟಣ ಸೇರು ಅಂತ ಆದರೆ ಇವನು ಇನ್ನು ಕೆಟ್ಟು ಹೋಗಿರಲಿಲ್ಲ...! ನೋಡೋಕೆ ಸಾದು ಥರ ಇದ್ದಾ, ತನ್ನ ಊರಲ್ಲಿ ಕೆಲಸ ಮಾಡೋಕೆ ಇಷ್ಟ ಇರಲಿಲ್ಲ ಅವನಿಗೆ ಅದಕ್ಕೆ ಬೆಂಗಳೂರಿಗೆ ಹೋಗಿ ಏನಾದ್ರು ಮಾಡೋಣ ಅಂತ ಯೋಚನೆ ಮಾಡ್ತಾ ಇರುವಾಗಲೇ ರೋಗಿ ಬಯಸಿದ್ದು ಹಾಲು ಅನ್ನ ವೈದ್ಯ ಹೇಳಿದ್ದು ಹಾಲು ಅನ್ನ ಅನ್ನೋ ಹಾಗೆ ಹಾಗೋ ಹೀಗೋ ಒಬ್ಬ ಪರಿಚಯ ಆಗಿ ಗೋವಿಂದನ್ನ ಬೆಂಗಳೂರಿಗೆ ಕರ್ಕೊಂಡು ಬಂದ, ಅವ್ನೋ.... ಮಾತು ಬೆಳ್ಳಿ ಮೌನ ಬಂಗಾರ ಥರ ಹೊಸ ಜಾಗ... ಹೊಸ ಫ್ರೆಂಡ್ಸ್.... ಹೇಗೋ ಹೊಂದಿ ಕೊಂಡಿದ್ದ ಬಂದು ಸ್ವಲ್ಪ ದಿನದಲ್ಲೇ ಕೆಲಸ ಸಿಕ್ತು,  ಪಾಲಿಗೆ ಬಂದಿದ್ದು ಪಂಚಾಮೃತ ಅಲ್ವ ಸಿಕ್ಕ ಕೆಲಸ ಸರಿಯಾಗಿ ಮಾಡಿಕೊಂಡು ಹೋಗ್ತಾ ತಿಂಗಳಿಗೆ ಸರಿಯಾಗಿ ಸಂಬಳ ತಗೊಂಡು ಆರಾಮಗಿದ್ದ. ಈ ಬೆಂಗಳೂರ್ ಸಿಟಿಗೆ ಬಂದಮೇಲೆ ಅವನಿಗೆ ದುಡಿಮೆಯೇ ದುಡ್ಡಿನ ತಾಯಿ ಅನ್ನೋದು ಅರಿವಾಯ್ತು, ಅವನಾದ್ರು ಒಂದೇ ಹತ್ರ ಎಷ್ಟು ದಿನ ಅಂತ ಕೆಲಸ ಮಾಡ್ತಾನೆ ಬೆರಳು ತೋರಿಸಿದರೆ ಹಸ್ತ ನುಂಗೋ ವಂಶ ಅವಂದು ಆಗಲೇ ಫುಲ್ ಕೆಲಸ ಕಲ್ತಿದ್ದ ನಯಶಾಲಿ ಆದವನು ಜಯಶಾಲಿ ಆದನು ಅಂತ  ಬೇರೆಕಡೆ ಎಲ್ಲೇ ಹೋದ್ರು ಬದುಕ್ತೀನಿ ಅನ್ನೋ ಧೈರ್ಯದಿಂದ ಬೇರೆ ಕೆಲಸಕ್ಕೆ ಸೇರ್ಕೊಂಡ. 

ರವಿ ಕಾಣದನ್ನ ಕವಿ ಕಂಡ ಅನ್ನೋ ಮಾತು ಎಷ್ಟು ನಿಜ ರೀ ಒಂದು ದಿನ ಗೋವಿಂದ ಹೊಟ್ಟೆ ತುಂಬಾ ಊಟ ಮಾಡಿ ಮಲ್ಕೊಂಡಿದ್ದ ರಾತ್ರಿ ಕನಸಲ್ಲಿ ಕಾಜೋಲ್ ಜೊತೆ ಶೂಟಿಂಗ್ ಇತ್ತು  ಐಶ್ವರ್ಯ  ಆಕಡೆ ಇಂದ ಗೋ...ಗೋ....ಗೋ... ಗೋವಿಂದಾ........... ಅಂತ ಓಡಿ ಬರ್ತಾ ಇದ್ಲು ಈ ಕಡೆ ಇಂದ ಗೋವಿಂದ .............ಐಶ್ವರ್ಯ  ಅಂತ ಓಡಿ ಬರ್ತಾ ಇದ್ದ ಇನ್ನೇನು ಇಬ್ರು ಹತ್ರ ಬಂದ್ರು ಬಂದ್ರು ಬಂದೆ ಬಿಟ್ರು ಅನ್ನೋ ಅಷ್ಟರಲ್ಲಿ  ಶಿವ ಪೂಜೆಲಿ ಕರಡಿ ಬಿಟ್ಟಂತೆ  ಅವ್ನ ಫ್ರೆಂಡ್ ಗೋವಿಂದ ಯಾಕೋ ಈ ಥರ ಕೂಗ್ತಾ ಇದೀಯ ಬೆಳಗ್ಗೆ 8 ಘಂಟೆ ಆಯ್ತು ಎದ್ದೇಳೋ ಅಂತ ಎಬ್ಬಿಸಿ ಬಿಟ್ಟ ಕಣ್ರೀ ಪಾಪ ಗೋವಿಂದನ ಕನಸು ಅಲ್ಲಿಗೆ ಮುಕ್ತಯಾ ಆಯ್ತು ಹಿಂಗಾಗಬಾರ್ದಿತ್ತು ಅಲ್ವ !  ಹೋಗ್ಲಿ ಬಿಡಿ ಅದ್ಯಾಕೆ ಈಗ ಕೊಂಕಣ ಸುತ್ತಿ ಮೈಲಾರಕ್ಕೆ ಯಾಕ ಬರೋದು ನೇರ ವಿಷ್ಯಕ್ಕೆ ಬರೋಣ, ಹುಟ್ಟು ಗುಣ ಸುಟ್ರು ಹೋಗೋಲ್ಲ ಅಂತಾರೆ ಅಂತದ್ರಲ್ಲಿ ಈ ಗೋವಿಂದನಿಗೆ  ರಾತ್ರಿ ಮಲ್ಗೊವಾಗ ಒಂದು ಬೀಡಿ ಸೇದೋ ಅಭ್ಯಾಸ ಇತ್ತು ಅವತ್ತೊಂದು ದಿನ ಹೊರಗಡೆ ಹೋಗಿ ಬೀಡಿ ಸೇದೋಣ ಅಂತ ಅನ್ಕೊಂಡ ಆದ್ರೆ ತುಂಬಾ ಮಳೆ ಬರ್ತಾ ಇತ್ತು ಫ್ರೆಂಡ್ಸ್ ಎಲ್ಲಾ ಮಲ್ಕೊಂಡಿರೋದು ನೋಡಿ ತಾನು ಇದ್ದಲ್ಲೇ ಬೀಡಿ ಹಚ್ಚಿಕೊಂಡು ಸೇದುತ್ತ ಕೂತ, ಬೀಡಿ ಹಾಚ್ಚೋವಾಗಿ ಬೆಂಕಿ ಕಡ್ಡಿ ಗೀರಿ ಅದೆಲ್ಲಿ ಎಸೆದ್ನೋ ಏನೋ ಸ್ವಲ್ಪ ಹೊತ್ತಲ್ಲೇ ಇಡಿ ಮನೆಗೆ ಬೆಂಕಿ ಹತ್ತಿ ಹೋಯ್ತು ಕೋತಿ ತಾನು ಕೆಡೋದಲ್ದೆ ವನನೆಲ್ಲ ಕೆಡಿಸ್ತು ಅನ್ನೊ ಮಾತು ಜೊತೆಗಿದ್ದ ಫ್ರೆಂಡ್ಸ್ ಬಾಯಲ್ಲಿ ಬಂದ್ರು ಯಾರು ಅವನಿಗೆ ಏನು ಅನ್ಲಿಲ್ಲ ಯಾಕಂದ್ರೆ ಅವನನ್ನ ಕೆಡೋಥರ ಮಾಡಿದ್ದೆ ಅವರು. ನಾಯಿ ಬಾಲ ಯಾವತ್ತಿದ್ರೂ ಡೊಂಕು ಅಲ್ವ ಕಡ್ಡಿನ ಗುಡ್ಡ ಮಾಡೋ ಸ್ವಭಾವ ನಮ್ಮ ಗೋವಿಂದಂದು ಪಕ್ಕದ ಮನೆ ಪದ್ಮಕ್ಕನ ಮಗಳು ಕಾಲೇಜ್ ಮುಗಿಸ್ಕೊಂಡು ಬೈಕ್ ನಲ್ಲಿ ಒಬ್ಬ ಹುಡುಗನ ಜೊತೆ ಸುತ್ತೊದನ್ನ ನೋಡಿ ಸೀದಾ ಪದ್ಮಕ್ಕನ ಮನೆಗೆ ಹೋಗಿ ನಿಮ್ಮ ಮಗಳು ಇದಾಳಲ್ಲ ಅವಳು ಅದ್ಯಾರೋ ಹುಡುಗುನ್ ಜೊತೆ ಹಾಗೆ ಹೀಗೆ ಅಂತೆಲ್ಲ ಇಲ್ದೆ ಇರೋದನ್ನೆಲ್ಲ ಹೇಳಿ ಪದ್ಮಕ್ಕನ ಕೈಲಿ ನಾಯಿ ಥರ ಹೊಡಿಸ್ಕೊಂಡಿದ್ದ ಯಾಕಂದ್ರೆ ಪದ್ಮಕ್ಕನ ಮಗಳ ಜೊತೆ ಇದ್ದದ್ದು ಪದ್ಮಕ್ಕನ ಅಳಿಯ ಮಗಳಿಗೆ ಮದುವೆ ಮಾಡಿ ಇನ್ನು 3 ತಿಂಗಳು ಆಗಿರಲಿಲ್ಲ..! ಕೆಲಸವಿಲ್ಲದ ಆಚಾರಿ ಮಗನ ತಲೆ ಕೆತ್ತಿದಂತೆ ಇವನು ಏನಾದ್ರು ಒಂದು ಮಾಡ್ತಾ ಇರ್ತಾನೆ ಕೊಚ್ಚೆ ಮೇಲೆ ಕಲ್ಲು ಹಾಕಿ ಸಿಡಿಸ್ಕೊಳ್ಳೋದು ನಮ್ಮ ಗೋವಿಂದನಿಗೆ ಹೊಸದಲ್ಲ ಬಿಡಿ.

ಗೋವಿಂದನ ಈ ಆಟಗಳನ್ನ ನೋಡಿ ಬೆಂಗಳೂರು ಬಿಡಿಸಿ ಊರಲ್ಲಿ ಹೊಲ ಗದ್ದೆ ನೋಡ್ಕೊಂಡು ಇರು ಅಂತ ಹೇಳಿ ಅಪ್ಪ ಅಮ್ಮ ಅವನಿಗೆ ಒಂದು ಮದುವೆ ಮಾಡ್ತಾರೆ ಮದುವೆ ಆದ ಸ್ವಲ್ಪ ದಿನದಲ್ಲೇ ಹೆಣ್ಣು ಕೊಟ್ಟ ತಂದೆ ತಾಯಿ ಗಿಣಿ ಸಾಕಿ ಗಿದಗನ ಕೈಗೆ ಕೊಟ್ವಿ ಅಂತ ಗೊತ್ತಾಗುತ್ತೆ ಹೀಗಿರುವಾಗ ಹಬ್ಬಕ್ಕೆ ಅಂತ ಹೆಂಡ್ತಿ ಜೊತೆ ಮಾವನ ಮನೆಗೆ ಹೋದ್ರೆ ಅತ್ತೆ ಗೌರಿ ಹಬ್ಬಕ್ಕೆ ಬಂದ ಗತಿಗೆಟ್ಟ ಅಳಿಯ ಅಂತ ಮನಸ್ಸಲ್ಲೇ ಅನ್ಕೊಂಡು ಸ್ನಾನಕ್ಕೆ ಅಂತ ಬಚ್ಚಲ ಮನೆಗೆ ಕಳಿಸಿದ್ರೆ ತಾನು ಸ್ನಾನ ಮಾಡೋದು ಬಿಟ್ಟು ಹಂಚು ತಗೆದು ಪಕ್ಕದ ಮನೆಯವರು ಸ್ನಾನ ಮಾಡೋದು ನೋಡಿ ಸಿಕ್ಕು ಬಿದ್ದು ಊರೆಲ್ಲ ಸೇರಿ ಹೊಡಿಯೋಕು ಮುಂಚೆ ಹೆಂಡ್ತಿ ಕರ್ಕೊಂಡು ಹೇಳ್ದೆ ಕೇಳ್ದೆ ಊರು ಬಿಟ್ಟು ತನ್ನೂರಿಗೆ ಬಂದಿದ್ದ. ಇವನ ತರ್ಲೆಗಳನ್ನ ನೋಡಿ ನೋಡಿ ಸಾಕಾಗಿದ್ದ ಅವನ ಹೆಂಡ್ತಿಗೆ ಜೀವನ ತಾಳ ತಪ್ಪಿದ ಬಾಳು ತಾಳಲಾರದ ಗೋಳು ಆಗಿತ್ತು.

ಹಂಗು ಹಿಂಗು ಗೋವಿಂದ ಕಷ್ಟ ಪಟ್ಟು ಒಂದು ಮಗುನ ತನ್ನ ಹೆಂಡ್ತಿ ಕೈಗೆ ಕೊಟ್ಟಿದ್ದ. ಅದೋ ಗಂಡು ಮಗು ಆ ಮಗು ಬಗ್ಗೆ ಹೇಳ್ಬೇಕು ಅಂದ್ರೆ ಎಲ್ಲಾ ಗೋವಿಂದನ ಥರಾನೆ ಅಪ್ಪ ಗುಡಿ ಕಟ್ಟಿದರೆ ಮಗ ಕಳಸ ಇಟ್ಟ ಅನ್ನೋದಕ್ಕೆ ಆ ಮಗುನೆ ಸಾಕು. ಇನ್ನು ನಮ್ಮ ಗೋವಿಂದನ ಕಂಡ್ರೆ  ಹೆತ್ತೋರ್ಗೆ ಹೆಗ್ಗಣ ಮುದ್ದು ಕಟ್ಗೊಂಡೋರ್ಗೆ ಕೋಡಂಗಿ ಮುದ್ದು ಅನ್ನೋದನ್ನ ಅವನ ತಂದೆ ತಾಯಿ ಅಲ್ದೆ ಹೆಂಡ್ತಿ ಕೊಡ ನಿಜ ಮಾಡಿ ಬಿಟ್ಟಿದ್ರು ಅವನು ಬದಲಾಗೊಲ್ಲ ಅಂತ ಗೊತ್ತಿದ್ದೇ ಅವರು ಅವನಿಗೆ ಬುದ್ಧಿ ಹೇಳೋಕೆ ಹೋಗ್ತಾ ಇರ್ಲಿಲ್ಲ ಯಾಕಂದ್ರೆ ಬೋರ್ಗಲ್ಲ ಮೇಲೆ ನೀರು ಸುರಿದಂತೆ ಏನೆ ಹೇಳಿದ್ರು ಉಪಯೋಗ ಇಲ್ಲಾ ಅಂತ ಸುಮ್ನೆ ಇರ್ತಾ ಇದ್ರೂ. 

ಹೋಗ್ಲಿ ಬಿಡಿ ನಿಮಗ್ಯಾಕೆ  ಆ ಮುಸಿಕಿನೊಳಗೆ ಗುದ್ದಿಸಿಕೊಳ್ಳೋ ಗೋವಿಂದನ ವಿಚಾರ ಓದಿದ್ದು ಆಯ್ತಲ್ಲ ಅವನ ಕಥೆ,  ನಾನು ನಿಮಗೆ ಮೊದ್ಲೇ ಹೇಳಿದ್ದೆ ಒಂದು ಪ್ರಶ್ನೆ ಕೇಳ್ತೀನಿ ಅಂತ ಆ ಟೈಮ್ ಬಂದಿದ್ದೆ ಈಗ ಹೇಳಿ 

1. ಈ ಪುರಾಣದಲ್ಲಿ ಒಟ್ಟು ಎಷ್ಟು ಗಾದೆಗಳು ಇವೆ ?
2. ಇಲ್ಲಿ ಇರುವ ಗಾದೆಗಳಲ್ಲಿ ಅತಿ ಚಿಕ್ಕ ಗಾದೆ ಯಾವ್ದು ?

 ಸರಿಯಾಗಿ ಹೇಳಿದ ಮೊದಲ 3 ಆತ್ಮೀಯರಿಗೆ ಸೂಕ್ತ ಬಹುಮಾನ ಇರುತ್ತೆ ಮರೆಯ ಬೇಡಿ ತ್ವರೆ ಮಾಡಿ ...!






       ನಿಮ್ಮ ಹುಡುಗ

?ದೊಡ್ಡಮನಿ.ಮಂಜು

         97424 95837