ಸತ್ಯವನ್ನೇ ನುಡಿಸು ಗುರುವೇ ನರವಿಲ್ಲದ ಜಿಹ್ವೆಯೋಳ್ ! ಸ್ಥಿರವಾಗಿ ನೆಲೆಸು ಗುರುವೇ ಮರ್ಕಟ ಈ ಮನದೊಳ್ !

Tuesday 3 May 2011

"ರೀಲ್ ಹುಡುಗಿಯ ಜೊತೆ ರೈಲ್ ಹುಡುಗ"


ರೈಲ್ ಗೂ ನನಗು ಬಿಡದ ನಂಟು ಅನಿಸುತ್ತೆ ನಾನು ಹೆಚ್ಚು ರೈಲ್ ಗೆ, ರೈಲ್ವೆ ಸ್ಟೇಷನ್ ಗೆ ಹೋಗೋದಿಲ್ಲ ಅತಿ ವಿರಳ ಯಾವಾಗಾದ್ರೂ ಅಪರೂಪಕ್ಕೆ ಅಂತ ಹೋದ್ರೆ ಏನಾದ್ರು ಒಂದು ಘಟನೆಗಳು ನಡೆದೇ ನಡೆಯುತ್ತೆ ಅದರಲ್ಲಿ ಸಂಶಯನೇ ಇಲ್ಲಾ...! 


ಹಿಂದೇ ಒಮ್ಮೆ ನಿಮ್ಮ ಜೊತೆ ರೈಲ್ ನಲ್ಲಿ ನನಗೆ ಆಕಸ್ಮಾತ್ ಸಿಕ್ಕ ಒಂದು ಹುಡುಗಿಯ ಭಾವನೆಗಳನ್ನ ಹೊತ್ತು ನಿಮ್ಮ ಮುಂದೆ ಬಂದಿದ್ದೆ ಅದು ಮನಕರಗುವ, ಕಣ್ಣ ಹನಿ ಕಣ್ಣಿಂದ ಜಾರುವ ಒಂದು ಸಣ್ಣ ಕಥೆ ಆದ್ರೆ ಈಗ ನಿಮ್ಮ ಮುಂದೆ ತಂದಿರೋದು ತಲೆ ಹರಟೆ ಹುಡುಗ ಹುಡುಗಿಯ ಪಕ್ಕ 420 ಕಥೆ ಓದಿ...! 

ಆಕೆ ಒಳ್ಳೆ ಗೆಳತಿ..!  ನಾನು ಒಳ್ಳೆ ಗೆಳೆಯ..! ಅದ್ರಲ್ಲಿ ಡೌಟ್ ಇಲ್ಲಾ..! 

ಆಕೆ ತುಂಬಾ ಸಾಫ್ಟ್ ...! ನಾನು ತುಂಬಾನೇ ಸಾಫ್ಟ್ ..! ಅದರಲ್ಲೂ ಡೌಟ್ ಇಲ್ಲಾ..! 

ಆಕೆ ಒಳ್ಳೆ ಹುಡುಗಿ...!  ನಾನು ಒಳ್ಳೆ >>>>>ಬೇಡ ಬಿಡಿ ಕಿವಿಗೆ ಒಳ್ಳೇದಲ್ಲ ...! 

ಈ ರೈಲು, ಈ ಭಾನುವಾರಗಳಿಗೆ ನನ್ನ ಕಂಡ್ರೆ ತುಂಬಾ ಇಷ್ಟ ಅನಿಸುತ್ತೆ , ನಾನು ಬರೆಯೋ ಎಲ್ಲಾ ಲೇಖನಗಳು  ಹೆಚ್ಚು ಭಾನುವಾರದ್ದೆ ಆಗಿರುತ್ತೆ ಆಶ್ಚರ್ಯ ಅಲ್ವ..! 

ಅವತ್ತು ಭಾನುವಾರ ಬೆಳಗ್ಗೆ ಎದ್ದು ನನ್ನ ಫ್ರೆಂಡ್ ಜೊತೆ ಯಾವದಾದ್ರು ಒಂದು ಕನ್ನಡ ಸಿನಿಮಾ ನೋಡೋಕೆ ಹೋಗೋಣ ಅಂತ ಇದ್ದೆ ಆದ್ರೆ ನನ್ನ ಫ್ರೆಂಡ್ ಅದು ಯಾವ ಹುಡುಗಿ ಕೈಗೆ ಕೊಟ್ಟು ಬಂದಿದ್ನೋ ಏನೋ ಚಂಡಾಟ ಆಡೋಕೆ ಅವನ ಮನಸನ್ನಯಾಕೋ ಬೇಡ ಮೂಡ ಇಲ್ಲ ಅಂದ, ಸರಿ ಅಂತ ನಾನು ಸುಮ್ನಾದೆ ಆಮೇಲೆ ಸ್ನಾನ ಮಾಡಿ ಫುಲ್ ಡ್ರಿಂ ಆಗಿ ಯಾರನ್ನೋ ಮೀಟ್ ಮಾಡೋಕೆ ಅಂತ ಮೆಜೆಸ್ಟಿಕ್ ಕಡೆ ಹೋದೆ ಅವರನ್ನು ಮೀಟ್ ಮಾಡಿ ಬರುವಾಗ ಎರಡು ಗೊಂಬೆಗಳನ್ನ (Teddy bear) ತಗೊಂಡಿದ್ದೆ ಒಂದು ದೊಡ್ಡದು ಇನ್ನೊಂದು ಸ್ವಲ್ಪ ಚಿಕ್ಕದು ತುಂಬಾ ಮುದ್ದಾಗಿದ್ವು. ಹಾಗೂ ಹೀಗೂ ಟೈಮ್ ಪಾಸು ಮಾಡಿಕೊಂಡು ರೂಮ್ ಗೆ ಬರೋಣ ಅಂತ ಟೈಮ್ ನೋಡ್ಕೊಂಡೆ 1 ಘಂಟೆ 45 ನಿಮಿಷ ಆಗಿತ್ತು ಅವಾಗ ನಾನು ಮೆಜೆಸ್ಟಿಕ್ ನಲ್ಲಿ ಇದ್ದೆ ಅದು ಯಾಕೋ ನನ್ನ ಗಮನ ನನ್ನ ಫ್ರೆಂಡ್ ಅದೇ "ರೀಲ್ ಹುಡುಗಿ" ಕಡೆ ಹೋಯ್ತು ಅವಳು ಇರೋದು ಚನ್ನೈ ನಲ್ಲಿ ಬೆಂಗಳೂರಿಂದ ಚನ್ನೈಗೆ ಹೋಗಿ ಸ್ವಲ್ಪ ದಿನ ಆಯ್ತು ತುಂಬಾ ಒಳ್ಳೆ ಫ್ರೆಂಡ್ ಅಲ್ದೆ ಆರ್ಕುಟ್ ಫ್ರೆಂಡ್  ಅವಳ ಪರಿಚಯ ನನಗೆ ತುಂಬಾ ಇತ್ತು ಒಂದೆರಡು ಸಲ ಅವಳು ಬೆಂಗಳೂರ್ ನಲ್ಲಿ ಇದ್ದಾಗ ಮೀಟ್ ಕೊಡ ಆಗಿದ್ದೆ, ಪಾನಿ ಪೂರಿ ಸಹ ಜೊತೆಗೆ ತಿಂದಿದ್ವಿ....! ಅದರಲ್ಲೂ ಪುಟ್ಬಾತ್ ಮೇಲೆ ಸಿಗೋ ಪಾನಿ ಪೂರಿ ಅಂದ್ರೆ ಪ್ರಾಣ ಅವಳಿಗೆ. ನನ್ನ ಫ್ರೆಂಡ್ಸ್ ಎಲ್ಲಾ ನನ್ನ ಮಂಜು ಅಂತ ಇಲ್ಲಾ ಬಾಬು ಅಂತ ( ನನ್ನ ಮತ್ತೊಂದು ಹೆಸರು "ಬಾಬು" ಅದು ಕೇವಲ ದಾವಣಗೆರೆಯಲ್ಲಿ ಮಾತ್ರ ಪ್ರಚಲಿತ ) ಇನ್ನು ಕೆಲವರು ನನಗೆ ಅವರಿಗೆ ಇಷ್ಟ ಬಂದ ರೀತಿ ಕರೀತಾರೆ ಅವೆಲ್ಲ ಅವರರವರ ಆಸೆ, ಇಚ್ಛೆ, ಪ್ರೀತಿ ನಾನು ಯಾರಿಗೂ ಏನು ಹೇಳೋಲ್ಲ ನಿಮ್ ಇಷ್ಟ ಬಂದ ರೀತಿ ಕರೀರಿ ಅಂತೀನಿ ಆದ್ರೆ ಈ "ರೀಲ್ ಹುಡುಗಿ" ನನಗೆ ಇಟ್ಟ ಹೆಸರು ಅಂದ್ರೆ "ಕಂದಾ" ಅಂತ, ನಾನು ಯಾವಾಗಲೇ  ಮೆಸೇಜ್ ಮಾಡ್ಲಿ ಯಾವಾಗಲೇ ಕಾಲ್ ಮಾಡ್ಲಿ ಕಂದಾ ಅಂತ ಹೇಳ್ದೆ ಮಾತು ಆಕೆ ಬಾಯಿಂದ ಹೊರಡೋಲ್ಲ ಅದಕ್ಕೆ ನಾನು ಆಕೆಗೆ ಕಂದಾ ಅಂತಾನೆ ಕರೆಯೋದು. ಈಗ್ಲೂ ನಾನು ಫೋನ್ ನಲ್ಲಿ ಮಾತಾಡುವಾಗ ಕೆಲವರ ಜೊತೆ ಕಂದಾ ಅಂತಾನೆ ಮಾತಾಡ್ತಾ ಇರ್ತೀನಿ, ನನ್ನ ಜೊತೆ ಮಾತಾಡೋ ಆರ್ಕುಟ್ ಫ್ರೆಂಡ್ಸ್ ಗೆ ಫೇಸ್ ಬುಕ್ ಫ್ರೆಂಡ್ಸ್ ಗೆ ಅದರ ಅನುಭವ ತುಂಬಾನೇ ಆಗಿದೆ ಅನಿಸುತ್ತೆ ಅಲ್ವ ..! 

"ಅಳಿಯದ  ನೆನಪುಗಳ
ತಂಗಾಳಿಯೇ ನೀ ಕಂದಾ
ಪೆದ್ದು ಪೆದ್ದು ಮಾತುಗಳ  
ಚಂದದ ನಗುವು ನೀ ಕಂದಾ 
ನನ್ನ ನಿನ್ನ ಪವಿತ್ರ ಸ್ನೇಹಕೆ 
ನೀ ಇಟ್ಟ ಹೆಸರು "ಕಂದಾ"

ಅಯ್ಯೋ ನಾನು ಏನೋ ಹೇಳೋಕೆ ಹೋಗಿ ಏನೇನೊ ಹೇಳ್ತಾ ಇದೀನಿ ಅಲ್ವ ..! ಹಲೋ ಯಾರು ಹಾಗಂತ ಹೇಳಿದ್ದು ನಾನು ಹೇಳ್ಬೇಕಾಗಿರೋದನ್ನೇ ಹೇಳ್ತಾ ಇದೀನಿ ಹ್ಹ... ಹ್ಹ... ಹ್ಹ... ಓಕೆ ಓಕೆ ಈಗ ಸೀದಾ ವಿಷಯಕ್ಕೆ ಬರೋಣ ಅದೇನೋ ಹೇಳ್ತಾ ಇದ್ನಲ್ಲ ಹಾ.. ಹಾ.. ಹಾ.. ಈಗ ನೆನಪಾಯ್ತು ಅದೇ ಅವತ್ತು ಭಾನುವಾರ ಟೈಮ್ ನೋಡಿಕೊಂಡೆ ಆಗಲೇ 1 ಘಂಟೆ 45 ನಿಮಿಷ ಆಗಿತ್ತು ಅವಾಗ್ಲೇ ನಾನು ಮೆಜೆಸ್ಟಿಕ್ ನಲ್ಲಿ ಇದ್ದೆ  ಅವಾಗ ಈ ಹುಡುಗಿ ನೆನಪಾದ್ಲು ತಕ್ಷಣ ಕಾಲ್ ಮಾಡಿ ಬಿಟ್ಟೆ 

ರೈಲ್ ಹುಡುಗ (ಅಂದ್ರೆ ನಾನು) :- ಹೈ ಕಂದಾ 

ರೀಲ್ ಹುಡುಗಿ (ಅಂದ್ರೆ ಅವಳು) :- ಹೈ ಕಂದಾ ಹೇಗಿದ್ದೀಯ  ?

ರೈಲ್  :- ಫೈನ ನೀನು ಹೇಗಿದ್ದೀಯ ಕಂದಾ ?

ರೀಲ್  :- ಪರವಾಗಿಲ್ಲ ಕಣೋ ಚನ್ನಾಗಿದಿನಿ 

ರೈಲ್   :-  ಮತ್ತೆ ಬೆಂಗಳೂರ್ಗೆ ಬಂದ್ರೆ ಮೀಟ್ ಆಗ್ತೀನಿ ಅಂದಿದ್ದೆ ಎಲ್ಲಿದಿಯ ಈಗ 

ರೀಲ್   :-  ಸಾರೀ ಕಣೋ ಟೈಮ್ ಆಗ್ಲಿಲ್ಲ ಈಗ ಹೊರಡುತ್ತಾ ಇದೀನಿ ಮಜೆಸ್ಟಿಕ್ ನಲ್ಲಿ ಚನ್ನೈ ಟ್ರೈ ನಲ್ಲಿ ಇದೀನಿ 

ರೈಲ್   :-  ನಿಜನಾ ಕಂದಾ ರೀಲ್ ಏನು ಬಿಡ್ತಿಲ್ಲ ತಾನೇ 

ರೀಲ್   :-  ಅಯ್ಯೋ ಇಲ್ಲಾ ಕಣೋ ನಿಜವಾಗಲು ಬೇಕಾದರೆ ಬಂದು ನೋಡು 

ರೈಲ್   :-  ಸರಿ ತಾಳು ಬರ್ತೀನಿ ಗೊತ್ತಾಗುತ್ತೆ ರೀಲೋ ರಿಯಲ್ಲೋ ಅಂತ 

ರೀಲ್   :-  ಏನ್ ತಮಾಷೆ ಮಾಡ್ತಿಯ ಎಲ್ಲಿದಿಯ ನೀನು ಈಗ ?

ರೈಲ್   :-  ಇಲ್ಲಾ ಕಂದಾ ಮಜೆಸ್ಟಿಕ್ ನಲ್ಲಿ ಇದೀನಿ 10 ನಿಮಿಷದಲ್ಲಿ ನಿನ್ ಹತ್ರ ಬರ್ತೀನಿ ನೋಡ್ತಾ ಇರು 

ರೀಲ್   :-  ಹೌದೇನೋ ಬೇಗಾ ಬಾರೋ ನನಗೆ ಫುಲ್ ಖುಷಿ ಆಗ್ತಾ ಇದೇ ಬೇಗ ಬೇಗ ಬಾ 2 ಘಂಟೆಗೆ ಟ್ರೈನ್ 
             ಹೊರಡುತ್ತೆ 

ರೈಲ್   :-  ನಾನು ಬರ್ದೇ ಆ ರೈಲ್ ಮುಂದೆ ಹೋಗೋಲ್ಲ ಬರ್ತಾ ಇದೀನಿ 

ರೀಲ್   :- ಓಕೆ ಓಕೆ ಬೇಗ ಬಾ 

ನೋಡಿ ಚೈಂಜ್ ಕತೆ :-  ನೋಡೋಕೆ ಆಗೋಲ್ಲ ಓದಿ ;-)

ಸರಿ ನಾನು ಶಿವ ಅಂತ ಮೆಜೆಸ್ಟಿಕ್ ನಿಂದ ಆ ಕ್ರೌಡ್ ನಲ್ಲಿ ಹಾಗೂ ಹೀಗೂ ನುಗ್ಗಿ ತಳ್ಳಿ ಒಂದೇ ಉಸಿರಲ್ಲಿ ರೈಲ್ವೆ ಸ್ಟೇಷನ್ ಉಳಗೆ ಹೋದೆ ರೈಲ್ ಹೊರಡೋಕೆ ಟೈಮ್ ಹತ್ರ ಬಂದಿತ್ತು ಸರಿ ಇನ್ನೇನು ಒಳಗೆ ಹೋಗೋಣ ಅಂತ ಅನ್ಕೊಂಡೆ ತಕ್ಷಣ ನೆನಪಾಯ್ತು ಉಳಗೆ ಹೋಗೋಕೆ ಫ್ಲಾಟ್ ಫಾರಂ ಟಿಕೆಟ್ ತಗೋ ಬೇಕು ಅಂತ ಹ್ಮಂ ತಗೊಳೋಣ ಅಂತ ನೋಡಿದ್ರೆ ಫ್ಲಾಟ್ ಫಾರಂ ಟಿಕೆಟ್  ತಗೊಳೋಕೆ ನಿಂತಿದ್ದ ಜನರ ಕ್ಯೂ ನೋಡಿ ತಲೆ ಗಿರ್  ಅಂತು ಹಂಗು ಹಿಂಗು ಕ್ಯೂ ನಲ್ಲಿ ಮಧ್ಯಕ್ಕೆ ಹೋಗಿ ಸೇರ್ಕೊಂಡೆ ಸದ್ಯ ಯಾರು ಏನು ಅನ್ಲಿಲ್ಲ ಇನ್ನೇನು ಟಿಕೆಟ್ ತಗೋಬೇಕು ಅಂತ ಜೆಬ್ ಗೆ ಕೈ ಹಾಕಿ ನೂರ್ರು ನೋಟು ಕೊಟ್ಟು ಒಂದು ಫ್ಲಾಟ್ ಫಾರಂ ಟಿಕೆಟ್ ಕೊಡಿ ಅಂದೇ  ಆ  ಟಿಕೆಟ್ ಕೊಡೊ ಮೇಡಂ ಚೈಂಜ್  ಇಲ್ಲಾ ಚೈಂಜ್ ಕೊಡಿ ಅಂದ್ಲು ನನ್ನ ಬಟ್ಟೆ ಬಿಚ್ಚಿ ಹುಡುಕಿದರು ನನ್ನ ಹತ್ರ ಚೈಂಜ್  ಇರ್ಲಿಲ್ಲ, ರಿಕ್ವೆಸ್ಟ್ ಮಾಡಿಕೊಂಡರು ಚೈಂಜ್ ಇಲ್ಲಾ ಅಂತ ಮುಲಾಜಿಲ್ದೆ ಹೇಳಿದ್ರು ತಕ್ಷಣ ತಲೆ ಓಡಿಸಿ ಪಕ್ಕದಲ್ಲೇ ಒಂದು ಅಂಗಡಿಗೆ ಹೋಗಿ "Coca Cola" ಕೊಡಿ ಆಫ್ ಲೀಟರ್ ಅಂದೇ ಅವನು ಸರ್ Cola ಇಲ್ಲಾ "Miranda" ಇದೇ ಅಂತ ರಾಗ ತಗ್ದಾ ಅಯ್ಯೋ ಯಾವ್ದೋ ಒಂದು ಬೇಗ ಕೊಡಪ್ಪ ಅಂದು ತಗೊಂಡು ಮತ್ತೆ ಕ್ಯೂ ನಿಂತು ಹಾಗೂ ಹೀಗೂ ಟಿಕೆಟ್ ತಗೊಂಡು ಒಳಗೆ ಹೋಗಿ ಮತ್ತೆ ಫೋನ್ ಮಾಡಿದೆ  

ಚಿಕ್ಕು ಬುಕ್ಕು ರೈಲು :-

ಈ ಕಡೆಯಿಂದ :- ಕಂದಾ ನಾ ಇಲ್ಲೆ ಇದೀನಿ ಚನ್ನೈ ಟ್ರೈನ್ ಹತ್ರ ಯಾವ ಬಾಕ್ಸ್ (ಬೋಗಿ)ನಲ್ಲಿ ಇದೀಯ ನೀನು

ಆ ಕಡೆಯಿಂದ :-  ಹಾಗೆ ಮುಂದೆ ಬಾರೋ ನಾ ಮುಂದೆ ಇದೀನಿ 

ಅವಳು ಹೇಳಿದ್ದು ಮುಂದೆ ಬಾ ಅಂತ,  ನಾನು ಅನ್ಕೊಂಡೆ ನನ್ನ ಮುಂದೆ ಅಂತ ಮೊದ್ಲೇ ನನಗೆ ರೈಲ್ ಗಳ ಹಿಂದೇ ಮುಂದೆ ಒಂದು ಗೊತ್ತಾಗೊಲ್ಲ ಹೋದೆ ಹೋದೆ ಹೋದೆ ಕೊನೆ ಬೋಗಿತನಕ ಹೋಗಿ ಆಮೇಲೆ ಕಾಲ್ ಮಾಡಿದೆ ಕಂದಾ ಎಲ್ಲಿದಿಯ ನಾನು ಕೊನೆಗೆ ಬಂದಿದೀನಿ ಅಷ್ಟ್ರಲ್ಲಿ ರೈಲ್ ಹೊರಡ್ತಾ ಇತ್ತು, ಸರಿ ಕಂದಾ ಮತ್ತೆ ಯಾವಾಗಾದ್ರೂ ಸಿಗೋಣ ಟ್ರೈನ್ move ಆಗ್ತಾ ಇದೆ ಅಂತ ಹೇಳೋಣ ಅಂತ ಇದ್ದೆ ಅಷ್ಟ್ರಲ್ಲಿ ಅವ್ಳು 

ಕಂದಾ :-  ಅಯ್ಯೋ ಟ್ರೈನ್ Move ಆಗ್ತಾ ಇದೇ ಬೇಗ ಬಾರೋ, 

ನಾನು :-  ಆಯ್ಯೋ ನಿನ್ನ ತಲೆ ಟ್ರೈನ್ ಹೋಗ್ತಾ ಇದೇ ಬಾ ಬಾ ಅಂದ್ರೆ ಏನ್ ಹರ್ಕೊಂಡು ಬರ್ಲಾ 

ಕಂದಾ :- ಲೇ ಟ್ರೈನ್ ಹತ್ತೋ  ಅದನ್ನ ಹೇಳಿಕೊಡಬೇಕಾ 

ನಾನು :- ಒಹ್ ಒಹ್ ಒಹ್ ನಾನೇನು ಸೂಪರ್ ಮ್ಯಾನಾ, ಸ್ಪೈಡರ್ ಮಾನ್ಯಾ  ಇಲ್ಲಾ ಫಿಲ್ಮ್ ಹೀರೋನಾ ಹೋಗೋ ಟ್ರೈನ್ ಗೆ ಹತ್ತೋಕೆ 

ಕಂದಾ :- ಲೋ ಅವರಿಗಿಂತ ನೀನೇನು ಕಮ್ಮಿಯಿಲ್ಲ ಬೇಗ ಹತ್ತೋ 

ಈ ಥರ ಡೈಲಾಗ್ ಕೇಳಿದ್ಮೇಲೆ ಹೇಗ್ರಿ ಸುಮ್ನೆ ಇರ್ಲಿ ಆಗಿದ್ದು ಆಗ್ಲಿ ಅಂತ ಹೋಗ್ತಾ ಇರೋ ರೈಲ್ ಗೆ ಹತ್ತಿಕೊಂಡೆ  

( ಹಾಗೆ ಇಮೇಜ್ ಮಾಡಿಕೊಳ್ಳಿ ರವಿಚಂದ್ರನ್ ಯಾರೇ ನೀನು ಚಲುವೆ ಫಿಲ್ಮ್ ನಲ್ಲಿ  ಹೋಗ್ತಾ ಇರೋ ಟ್ರೈನ್ ಗೆ ಹತ್ತೋ ಹಾಗೆ ಜೊತೆಗೆ ಬ್ಯಾಕ್ ಗ್ರೌಂಡ್ ನಲ್ಲಿ ಮ್ಯೂಸಿಕ್

ಹೇಳಿ ಕೇಳಿ ಚನ್ನೈ ಗೆ ಹೋಗ್ತಾ ಇರೋ ರೈಲು, ಟಾರ್ಚ್ ಹಾಕಿ ಹುಡುಕಿದರು ಕನ್ನಡಿಗರ ಮುಖಗಳು ಒಂದು ಕಾಣೋಲ್ಲ ನಾನೂ ಅಪ್ಪಟ ಕನ್ನಡಿಗ  ಅಷ್ಟೊಂದು ಜನಗಳಲ್ಲಿ ನಾನೊಬ್ಬನೇ "ವೀರ ಕನ್ನಡಿಗ" ಹಾಗೂ ಹೀಗೂ ಎಲ್ಲರನ್ನು ಸರ್ಸ್ಕೊಂಡು ಮುಂದಿನ ಬೋಗಿ ಗೆ ಹೋಗೋಣ ಅಂತ ಹೋಗ್ತಾ ಇದ್ದೆ  ಎಲ್ಲಿ ತನಕ ಹೋಗೋಕೆ ಸಾದ್ಯ ಎರಡು ಬೋಗಿ ದಾಟಿದ್ದೆ ಹೆಚ್ಚು ಮುಂದೆ ಹೋಗೋಕೆ ದಾರಿ ಇರ್ಲಿಲ್ಲ..! ಸರಿ ಒಳ್ಳೆ ಪಜೀತಿ ಆಯ್ತಲ್ಲ ಅನ್ಕೊಂಡೆ ಮತ್ತೆ ಕಾಲ್ ಮಾಡಿದೆ ಅದೇನೋ ಹೇಳ್ತಾರಲ್ಲ ಪಾಪಿ ಸಮುದ್ರಕ್ಕೊಂದ್ರು ....... ಓಲ್ಡ್ ಗಾದೆ ಬೇಡ ನ್ಯೂ ಗಾದೆ ಕೇಳಿ "ಪಾಪಿ ಟವರ್ ಹತ್ತಿದ್ರು ಚೊಟ್ಟುದ್ದ ಸಿಗ್ನಲ್" ಅನ್ನೋ ಹಾಗೆ ಅವಳಿಗೆ ಕಾಲ್ ಮಾಡೋಕೆ ಸಿಗ್ನಲ್ ಸಿಗ್ಲಿಲ್ಲ ರೀ ನನ್ನ ಚಿಂತೆಲಿ ನಾನು ಇದ್ರೆ ಪಕ್ಕದಲ್ಲಿ ಯಾರೋ ಸರ್ ಸರ್ 10 ರೂಪಾಯಿ ಕೊಡಿ ತುಂಬಾ ದೂರ ಹೋಗ್ಬೇಕು ದುಡ್ಡು ಕಳ್ದು ಹೋಗಿದೆ ಅಂದ ಅದು ಅಲ್ಪ ಸ್ವಲ್ಪ ಕನ್ನಡದಲ್ಲಿ, ಜೀವ ಬಂತು ನನಗೆ ಅನ್ಕೊಂಡೆ ಆದ್ರು 10 ರುಪಾಯಿ ಕೇಳ್ತಾ ಇದಾನೆ ನೋಡೋಕೆ ಕಷ್ಟದಲ್ಲಿ ಇರ್ಬೇಕು ಅನಿಸ್ತು ಅಲ್ದೆ ಕೆಲವರಿಗೆ ಇದೇ ಕೆಲಸ ಸುಳ್ಳು ಹೇಳಿ ದುಡ್ಡು ತಗೋಳೋದು ನಾನು ಮುಂದೆ ಮಾತಾಡೋಕೆ ಹೋಗಲಿಲ್ಲ ಆದ್ರೆ ಅವನು ಬಿಡಲಿಲ್ಲ ತಲೆ ಕೆಟ್ಟು 10 ರೂಪಾಯಿ ಕೊಟ್ಟು  ಮುಂದೆ ಯಾವ ಸ್ಟಾಪ್ ಇದೇ ಅಂದೇ ಅವನು ಸರ್ ಸದ್ಯಕ್ಕೆ ಯಾವದೇ ಸ್ಟಾಪ್ ಇಲ್ಲಾ ಅಂದ ಒಹ್ "ಚಿಟ್ಟೆ ಹಿಂದೇ ಬಂದು ಕೆಟ್ಟೆ" ಅನ್ಕೊಂಡೆ ಅಷ್ಟ್ರಲ್ಲಿ ಮತ್ತೆ ಅವಳೇ ಕಾಲ್ ಮಾಡಿದ್ಲು ತಪ್ಪು ತಪ್ಪು ಮಿಸ್ ಕಾಲ್ ಮತ್ತೆ ನಾನು ಮಾಡಿ ಹೇಳ್ದೆ ಅಯ್ಯೋ ಹತ್ತಿರ ಯಾವದೇ ಸ್ಟಾಪ್ ಇಲ್ವಂತೆ ಮುಂದೆ ಏನ್ ಮಾಡ್ಬೇಕು ಅಂದೇ ಅಯ್ಯೋ ಯಾರೋ ಹೇಳಿದ್ದು ಇದೇ ಇನ್ನೊಂದು ಹತ್ತು ನಿಮಿಷ ಬರುತ್ತೆ ಇಳಿದು ಬಿಟ್ಟು ಬೇಗ ಬೇಗ ಮುಂದೆ ಬಾ ಆಯ್ತಾ ಅಂದು ಕಟ್ ಮಾಡಿದ್ಲು ಸರಿ ಏನ್ ಮಾಡೋಕೆ ಆಗುತ್ತೆ ಅಂತ ಹೊರಗಡೆ ನೋಡ್ತಾ ನಿಂತಿದ್ದೆ 

ಟಿಕೆಟು ರಹಿತ ಪ್ರಯಾಣ ದಂಡಕ್ಕೆ ಆಹ್ವಾನ :-) 

ಪಕ್ಕದಲ್ಲಿ ಯಾರೋ ಏನೋ ಮಾತಾಡ್ತಾ ಇದ್ರೂ ನಾನು ಕೇಳಿದ್ರು ಕೇಳ್ದೆ ಇರು ಥರ ಇದ್ದೆ ಯಾಕಂದ್ರೆ ಅದು ತಮಿಳು ಅವರು ಮಾತಾಡುವಾಗ ನಡುವೆ ನಡುವೆ ಟಿಕೆಟ್ ಚೆಕ್ಕಿಂಗ್.....! ಟಿಕೆಟ್ ಚೆಕ್ಕಿಂಗ್....! ಅವಾಗ್ಲೇ ನನಗೆ ಹೊಳೆದಿದ್ದು ನನ್ನ ಹತ್ರ ಫ್ಲಾಟ್ ಫಾರಂ ಟಿಕೆಟ್ ಮಾತ್ರ ಇರುದು ಚನ್ನೈ ಟಿಕೆಟ್ ಅಲ್ಲಾ ಅಂತ ಅಪ್ಪಿ ತಪ್ಪಿ ಚೆಕ್ಕಿಂಗ್ ಆಫೀಸೆರ್ ಬಂದ್ರೆ ನನ್  ಕತೆ ಮುಗಿತು ಅನ್ಕೊಂಡೆ ಏನ್ ಮಾಡೋಕೆ ಆಗೋಲ್ಲ ನೀರಿಗೆ ಇಳಿದಿದಿನಿ ಈಜ್ಲೇ ಬೇಕು ಅಂತ ನನಗೆ ನಾನೇ ಸಮಾಧಾನ ಮಾಡಿಕೊಂಡೆ ಅಷ್ಟರಲ್ಲಿ ಟ್ರೈನ್ ಸ್ಲೋ ಆಗ್ತಾ ಇತ್ತು ಸ್ವಲ್ಪ ಕುಶಿ ಆಯ್ತು ಸ್ಟಾಪ್ ಬಂತು ಟ್ರೈನ್ ಇಂದ ಇಳಿದು ತಡ ಮಾಡಿದ್ರೆ ಕಷ್ಟ ಅಂತ ಮುಂದೆ ಮುಂದೆ ಓಡ್ತಾ ಇದ್ದೆ  ಸುಳ್ಳು ಸುಳ್ಳು ಹಂಗಂತ ನಾನು ಅನ್ಕೊಂಡಿದ್ದೆ ಅಲ್ಲಿ ಕ್ರೌಡ್ ನಲ್ಲಿ ಎಲ್ಲಾ ಟ್ರೈನ್  ಹತ್ತೊರ್ ನನ್ನ ಓಡೋಕೆ ಬಿಡ್ತಾ ಇರ್ಲಿಲ್ಲ ಆದ್ರು ಕಷ್ಟ ಪಟ್ಟು ಸೆಲ್ ಫೋನ್ ನಲ್ಲಿ ಮಾತಾಡ್ತಾ ಮಾತಾಡ್ತಾ ಹೋದೆ ಅಂತು ಇಂತೂ ಕಂದಾ ಟ್ರೈನ್ ಡೋರ್ ಹತ್ರ ನಿಂತು ಇದ್ಲು ಇನ್ನೇನು ಹತ್ರ ಹೋಗ್ಬೇಕು ಮತ್ತೆ ಟ್ರೈನ್ Move ಆಯ್ತು  ಒಳ್ಳೆ ಕಥೆ ಆಯ್ತಾ ಅಲ್ಲಾ ಅನ್ಕೊಂಡು ಕೈಯಲ್ಲಿ ಇದ್ದ  Miranda ಬಾಟ್ಲು ಕೊಟ್ಟು ಸರಿ ಕಂದಾ ಬೈ ಮತ್ತೆ ಫೋನ್ ಮಾಡ್ತೀನಿ ಅಂದೇ ಅವಳು ಬಾಟ್ಲು ತಗೋಳೋದು ಬಿಟ್ಟು ನನ್ನ  ಹತ್ತೋ ಬೇಗ ಅಂತ ಕೈ ಕೊಟ್ಳು ಹುಡುಗಿ  ಕೈ ಕೊಡ್ತಾಳೆ ಅಂದ್ರೆ ಬಿಡೋದು ಉಂಟಾ ಹಿಡ್ಕೊಂಡೆ ಟ್ರೈನ್ ಫಾಸ್ಟ ಆಗಿ move  ಆಗ್ತಾ ಇತ್ತು  ಅದರಲ್ಲೂ ಹತ್ತಿಕೊಂಡೆ ಅಲ್ಲಿಂದ ಸೀದಾ ಅವಳಿದ್ದ ಸೀಟ್ ಗೆ ಹೋಗಿ ಕೂತುಕೊಂಡು ಕೈಯಲ್ಲಿದ್ದ ಬಾಟಲು ತಗೊಂಡು ತೃಪ್ತಿ ಆಗೋ ತನಕ ಕುಡುದು ಎರಡು ಗೊಂಬೆಗಳನ್ನ (Teddy bear) ಅವಳ ಕೈಗೆ ಇಟ್ಟು "ನನ್ನೇನು ಚನ್ನೈ ಗೆ ಕರ್ಕೊಂಡು ಹೋಗೋ ಪ್ಲಾನ್ ಮಾಡಿದಿಯ ಹೇಗೆ" ಅಂದೇ ಹ್ಹ ಹ್ಹ ಹ್ಹ ಇಲ್ಲಾ ಬಾ ನೆಕ್ಷ್ಟ್ ಸ್ಟಾಪ್ ನಲ್ಲಿ ಇಳಿಯುವಂತೆ ಅಂತ ಎದ್ದು ಬರೋದ್ರಲ್ಲಿ ಸ್ಟಾಪ್ ಬಂತು ನಿಜ ಹೇಳ್ಬೇಕು ಅಂದ್ರೆ ಸ್ಟಾಪ್ ಅಲ್ವೇ ಅಲ್ಲ...! ಸ್ಟಾಪ್ಗಿಂತ ಮುಂಚೆನೇ ರೈಲ್ ನಿಂತಿತ್ತು ನಾನು ಅಬ್ಬೇಪಾರಿ ಥರ ಇಳಿದು ಯಾವ ಕಡೆ ಹೋದ್ರೆ ಮಜೆಸ್ಟಿಕ್ ಸಿಗುತ್ತೆ ಅಂತ ಯೋಚನೆ ಮಾಡ್ತಾ ಮಾಡ್ತಾ ನನ್ನ ಕಂದಾಗೆ ಟಾಟ ಮಾಡ್ತಾ ಮಾಡ್ತಾ ಅಂತು ಇಂತೂ ಹೇಗೋ ರೂಮ್ ಸೇರಿದೆ ..!

Moral of the story :- ಚಿಟ್ಟೆ ಸಹವಾಸ ಸಂಡೇ ಫುಲ್ ವನವಾಸ...! 



   ~$ಮರೀಚಿಕೆ$~
ದೊಡ್ಡಮನಿ.ಮಂಜು?
+919742495837