ಸತ್ಯವನ್ನೇ ನುಡಿಸು ಗುರುವೇ ನರವಿಲ್ಲದ ಜಿಹ್ವೆಯೋಳ್ ! ಸ್ಥಿರವಾಗಿ ನೆಲೆಸು ಗುರುವೇ ಮರ್ಕಟ ಈ ಮನದೊಳ್ !

Monday 30 August 2010

ನಾನು ಲಟ್ಟಣಿಕೆ ಮತ್ತೆ ಚಪಾತಿ..!

ದೋ ಭಾನುವಾರ ಶುದ್ಧ ಸೋಮಾರಿಗಳ ವಾರ ನಾನೋ ಮೊದ್ಲೇ ಸೋಮಾರಿ ಘಂಟೆ 11 ಆದ್ರು ಏಳೋ ದಿಲ್ಲ ಅಂತದ್ರಲ್ಲಿ ಮೊನ್ನೆ ಯಾಕೋ ಬೇಗ ಎಚ್ಚರ ಆಯ್ತು ಬೇಗ ಅಂದ್ರೆ ಎಷ್ಟು ಬೇಗ ಗೊತ್ತ ರೀ ಇನ್ನು 9 ಘಂಟೆ ಆಗಿತ್ತು ಛೇ.. ಯಾಕಪ್ಪ ಇಷ್ಟ ಬೇಗ ಎಚ್ಚರ ಆಯ್ತು ಅನ್ಕೊಂಡು ಕಣ್ಣು ಬಿಟ್ಟು ಶ್ರೀ ಕೃಷ್ಣ ಪರಮಾತ್ಮನ ಫೋಟೋ ನೋಡಿ ಕೈ ಮುಗಿದು ಎದ್ದೆ, ಅವತ್ತು ನನ್ನ ಫ್ರೆಂಡ್ ರೂಮ್ ನಲ್ಲಿ ಇರ್ಲಿಲ್ಲ ಬೆಳಗ್ಗೆ ಬೆಳಗ್ಗೆನೇ ಏನೋ ವರ್ಕ್ ಇದೇ ಬರೋದು ಸಂಜೆ ಆಗುತ್ತೆ ಅಂತ ಹೋಗಿದ್ದ ಹೊಟ್ಟೆ ಯಾಕೋ ತುಂಬಾ ಹಸಿತ ಇತ್ತು ಎಲ್ಲಾ ಮುಗಿಸ್ಕೊಂಡು ಕಾಫಿ ಕುಡಿಯೋಣ ಅಂತ ಬೇಕರಿಗೆ ಹೋದೆ ಅಲ್ಲಿಂದ ಕಾಫಿ ಕುಡಿದು ಮತ್ತೆ ರೂಮ್ ಗೆ ಬಂದೆ ಸ್ನಾನ ಮಾಡೋಣ ಅಂತ ನೀರು ಕಾಯೋಕೆ ಇಡೋಣ ಅಂತಿದ್ದೆ ಹೊಟ್ಟೆ ಯಾಕೋ ತುಂಬಾನೇ ಹಸಿತ ಇತ್ತು ಹೋ ಈಗ ಸ್ನಾನ ಮಾಡೋದು ಬೇಡ ಹೋಟೆಲ್ ಗೆ ಹೋಗಿ ಏನಾದ್ರು ತಿಂದು ಬಿಟ್ಟು ಆಮೇಲೆ ಸ್ನಾನ ಮಾಡೋಣ ಅಂತ ರೂಮ್ ಬಿಟ್ಟು ಹೊರಗಡೆ ಬಂದೆ ಅದೇನ್ ತಿಳಿತೋ ಏನೋ ನನ್ನ ಬುದ್ಧಿಗೆ ಅಲ್ಲಾ ಇವತ್ತಾದ್ರೂ ಹೋಟೆಲ್ ಊಟ ಬಿಟ್ಟು ರೂಮ್ ನಲ್ಲೆ ಏನಾದ್ರು ಮಾಡಿಕೊಳ್ಳೋಣ ಅಂತ ಮನಸ್ಸು ಅನಿಸುತ್ತೆ ಅನಿಸಿದ್ಧನ ಮಾಡೋದೇ ಮಂಜು ಸ್ಟೈಲ್ ಅಲ್ವ ..! 

ಸರಿ ಏನ್ ಮಾಡೋದು ಹೊಟ್ಟೆ ಬೇರೆ ಹಸಿತ ಇದೇ ಬೇಗ ಅಗೋ ಅಂತದ್ದು ಮಾಡ್ಬೇಕು ಅಂತ ಅಂಗಡಿಗೆ ಹೋಗಿ 1 ಕೆ ಜಿ ಚಪಾತಿ ಕೊಡಿ ಅಂದೇ ಪಾಪ ಶೆಟ್ಟಿಗೆ ಬೆಳಗ್ಗೆ ಬೆಳಗ್ಗೆ ತಲೆ ಕೆಟ್ಟೋಯ್ತು ಅನಿಸುತ್ತೆ ನನ್ನ ಮಾತು ಕೇಳಿ ಆಮೇಲೆ ನಾನೇ ಸಾರೀ ಸಾರೀ ಚಪಾತಿ ಹಿಟ್ಟು ಕೊಡಿ 1 ಕೆ ಜಿ ಅಂದೇ ಆ ಆಸಾಮಿ ಏನು ಮಾತಾಡದನೆ ಕೊಟ್ರು ನಾನು ತಗೊಂಡು ಬಂದೆ ಸರಿ ಈಗ ಚಪಾತಿ ಮಾಡಬೇಕಲ ಅಂತ ಸ್ವಲ್ಪ ಚಪಾತಿ ಹಿಟ್ನ ಪಾತ್ರೆಗೆ ಹಾಕಿ ನೀರು ಹಾಕಿ ಕಲಿಸಿದೆ ನೀರು ಸ್ವಲ್ಪ ಜಾಸ್ತಿ ಆಯ್ತು ಅಂತ ಮತ್ತೆ ಹಿಟ್ಟು ಹಾಕ್ದೆ ಮತ್ತೆ ಛೆ.. ಛೆ .. ಹಿಟ್ಟು ಫುಲ್ ಗಟ್ಟಿ ಆಯ್ತು ಅಂತ ಮತ್ತೆ ನೀರು ಹಾಕಿದೆ ಹೀಗೆ ಮಾಡ್ತಾ ಮಾಡ್ತಾ ಟೈಮ್ ನೋಡಿದೆ ಆಗಲೇ 9:30 ಆಗಿತ್ತು ಹಿಟ್ನ ಚಾಕು ತಗೊಂಡು ಪೀಸ್ ಪೀಸ್ ಮಾಡಿದೆ ಅದು ೯ ಪೀಸ್ ಆಯ್ತು ಅರೆ ಒಂಬತ್ತು ಆಯ್ತಲ್ಲ ಅಂತ ಎಲ್ಲದರಲ್ಲೂ ಸ್ವಲ್ಪ ಸ್ವಲ್ಪ ತಗೊಂಡು ಮತ್ತೊಂದು ಪೀಸ್ ಮಾಡಿ ಅಲ್ಲಿಗೆ ಹತ್ತು ಪೀಸ್ ಮಾಡಿದೆ ಈಗ ಮುಂದಿನ ಕಾರ್ಯ ಪೀಸ್  ಗಳನ್ನೆಲ್ಲ ಉದ್ದುಬೇಕು ಉದ್ದೋಕೆ ಲಟ್ಟಣಿಕೆ ಮಣಿ ತಗೊಂಡೋ ಕೆಳಗಡೆ ಒಂದು ಯಾವೊದೋ ನ್ಯೂಸ್ ಪೇಪರ್  ತಗೊಂಡು ಅಗಲವಾಗಿ ಹಾಸಿ ಅದರಮೇಲೆ ಚಪಾತಿ ಮಣೆ ಇಟ್ಟೆ ( ಅಮ್ಮ ಚಪಾತಿ ಉದ್ದುವಾಗ ಚಪಾತಿ ಹಿಟ್ಟು ನೆಲದಲ್ಲಿ ಬಿಳುತ್ತೆ ಅಂತ ಆ ಥರ ಪೇಪರ್ ಹಾಕ್ತ ಇದ್ರೂ ಅದನ್ನ ನೋಡಿದ್ದ ನೆನಪು ) ಹ್ಮಂ ಮೊಬೈಲ್ ನಲ್ಲಿ ಮ್ಯೂಸಿಕ್ ಹಾಕಿದ್ದೆ ಪಲ್ಲವಿ ಅವರು " ನೀ ಇಲ್ಲದೆ ನನಗೇನಿದೆ " ಅಂತ ಹಾಡ್ತಾ ಇದ್ರೂ ಕೇಳೋಕೆ ತುಂಬಾ ಚನ್ನಾಗಿತ್ತು ಕೇಳ್ತಾ ಕೇಳ್ತಾ ಚಪಾತಿ ಉದ್ದೋಕೆ ಶುರು ಮಾಡಿದೆ. ಅವಾಗ ಟೈಮ್  ಹತ್ತು ಘಂಟೆಗೆ ಹತ್ತು ನಿಮಿಷ ಕಮ್ಮಿ ಇತ್ತು. 

ನಿಮ್ಮಾಣೆ ಕಣ್ರೀ ನಾನು ಭೂ ಪಟದಲ್ಲಿ ಯಾವ ಯಾವ ದೇಶ ಯಾವ ಯಾವ ಶೇಪ್ ನಲ್ಲಿ ಇವೆ ಅಂತ ಗೊತ್ತಿರ್ಲಿಲ್ಲ (ಭಾರತ ಶ್ರೀಲಂಕ ಬಿಟ್ಟು ) ಅದೇನು ನನ್ನ ಭಾಗ್ಯನೋ ಏನು ನಾನು ಉದ್ದಿದ ಮೊದಲ ಚಪಾತಿಯಲ್ಲಿ ಪಾಕಿಸ್ತಾನ ಎರಡನೇ ಚಪಾತಿಯಲ್ಲಿ  ಆಫ್ಘಾನಿಸ್ತಾನ ಇನ್ನೊಂದರಲ್ಲಿ ಬಾಂಗ್ಲಾದೇಶ ಮತ್ತೊಂದರಲ್ಲಿ ಅಂತು ಬಿಡಿ100% ಶ್ರೀಲಂಕಾನೇ ಆಗಿತ್ತು ಇದನೆಲ್ಲ ನೋಡಿ ಜೀವನ ಪಾವನ ಆಯ್ತು ಅನ್ಕೊಂಡೆ   ಅವನ್ನೆಲ್ಲ  ಉದ್ದಿ ಉದ್ದಿ ಒಂದು ತಟ್ಟೆ ಮೇಲೆ ಹಾಕ್ತ ಇದ್ದೆ ಅವೋ ಒಂದ್ರು ಮೇಲೆ ಒಂದು ಒಂದ್ರು ಮೇಲೆ ಒಂದು ಹಾಕಿದ್ರಿಂದ ಅಂಟಿಕೊಂಡಗ್ಗೆ ಇದ್ವು  ನಾನು ಅಷ್ಟು ಗಮನಿಸಿರಲಿಲ್ಲ. ಕಣ್ಣು ಮತ್ತೆ ಟೈಮ್ ಕಡೆ ಹೋಯ್ತು ಆಗಲೇ 10:30 ಆಗಿತ್ತು ಹೊಟ್ಟೆ ಹಸಿವು ಜಾಸ್ತಿ ಆಗ್ತಾನೆ ಇತ್ತು.

     ಮುಂದೆ ಉದ್ದಿದ್ದ ಚಪಾತಿಗಳನ್ನ ಹಂಚಿನಲ್ಲಿ ಬೇಯಿಸಬೇಕು ಅಂತ ಹಂಚು ಗ್ಯಾಸ್ ಮೇಲೆ ಇಟ್ಟು ಒಂದೊಂದೇ ಚಪಾತಿ ಬೇಯಿಸೋಕೆ ತಯಾರಾದೆ ಚಮಚದಿಂದ ಹಂಚ ಮೇಲೆ ಎಣ್ಣೆ ಹಾಕೋದು ಕೈಗೆ ಸಿಕ್ಕ ದೇಶಗಳನ್ನ ಹಂಚ ಮೇಲೆ ಹಾಕಿ ಬೇಯಿಸ್ತ ಹೋದೆ ಸ್ವಲ್ಪ ಹೊತ್ತಿಗೆ ವಾಸನೆ ಬರ್ತಾ ಇತ್ತು ಅವಾಗ ನನಗೆ ಅನಿಸ್ತು ಈಗ ಚಪಾತಿ ಬೆಂದಿದೆ ತಿರುಗಿಸಿ ಹಾಕಬೇಕು ಅಂತ ತಿರುಗಿಸಿ ಹಾಕ್ದೆ...... ಏನು ಜಾದು ಮಾಡ್ತು ರೀ ಆ ಹಂಚು ಬಿಳಿ ಇದ್ದ ಚಪಾತಿನೆಲ್ಲಾ ನನ್ನ ಕೂದ್ಲುಗಿಂತ ಕಪ್ಪುಗೆ ಮಾಡಿಬಿಟ್ಟಿತ್ತು ಅದು ಕಪ್ಪು ಆಗೋದಿರ್ಲಿ ಅವನೆಲ್ಲ ಬೇಯಿಸೋ ಅಷ್ಟರಲ್ಲಿ ನನ್ನ ಕೈ ಎಷ್ಟು ಸಲ ಸುಟ್ಟು ಹೋಗಿತ್ತೋ ಲೆಕ್ಕ ಇಲ್ಲಾ ಹಸಿವು ಬೇರೆ ತಾಳೋಕೆ ಆಗ್ತಾ ಇರ್ಲಿಲ್ಲ ಮತ್ತೆ ಟೈಮ್  ನೋಡಿಕೊಂಡೆ ಆಗಲೇ ಸರಿಯಾಗಿ ೧೨.೦೦ ಆಗಿತ್ತು ಮೊಬೈಲ್ ನಲ್ಲಿ "ಆಹಾ ಭಾಗ್ಯವೇ ಇದು ಎಂತ ಸಮಯವೂ" ಅಶ್ವಥ್ ಅವರು ಹಾಡ್ತಾ ಇದ್ರೂ ನನ್ನ ಭಾಗ್ಯದ ಕಡೆ ಒಮ್ಮೆ ಯೋಚಿಸಿ ಇದೆಲ್ಲ ಬೇಕಾಗಿತ್ತಾ ನನಗೆ ಹೋಟೆಲ್ ಗೆ ಹೋಗಿದ್ರೆ ಆರಾಮಾಗಿ ತಿಂದು ಬರ್ತಾ ಇದ್ದೆ ಅನ್ಕೊಂಡೆ. 

ಅಂತು ಇಂತೂ ಚಪಾತಿ ಎಲ್ಲಾ ಬೇಯಿಸಿ ಹಂಚು ಕೆಳಗಡೆ ಇಟ್ಟು ಗ್ಯಾಸ್ ಆಫ್ ಮಾಡಿದೆ. ಚಪಾತಿ ಉದ್ದು ಮಣಿ ಲಟ್ಟಣಿಕೆ ಅಲ್ಲೇ ಬಿಟ್ಟಿದ್ದೆ ಎತ್ತಿ ಸೈಡ್ ನಲ್ಲಿ ಇಡೋಣ ಅಂತ ಮಣಿ ಲಟ್ಟಣಿಕೆನ ತಗ್ದು ಮೇಲೆ ಇಟ್ಟಿ ಮಣೆ  ಕೆಳಗಡೆ ಪೇಪರ್ ಹಸಿದ್ದೆ ಅದನ್ನು ತಗೆಯೋಣ ಅಂತ ಕೈ ಹಾಕ್ದೆ ... !  ಇದೊಂದು ಕಡಿಮೆ ಆಗಿತ್ತು ನನ್ನ ಭಾಗ್ಯಕ್ಕೆ ಆ ಪೇಪರ್ ಕೈ ನಲ್ಲಿ ತಗೊಂಡು ನೋಡ್ತೀನಿ ಶ್ರೀ ಶ್ರೀ ಶ್ರೀ ನಿತ್ಯಾನಂದ ಸ್ವಾಮಿಗಳು ಫ್ರಂಟ್ ಪೇಜ್ ನಲ್ಲಿ ಯಾರಿಗೋ ಆಶೀರ್ವಾದ ಮಾಡೋ ಸ್ಟೈಲ್ ನಲ್ಲಿ ನಿಂತಿದ್ರು ಅಲ್ಲಿಗೆ ನನ್ನ ಜನ್ಮ ಫುಲ್ ಪಾವನವಾಯ್ತು ಅನ್ಕೊಂಡು ಅದನ್ನ ಮುದುರಿ ಕಸದ ಡಬ್ಬಕ್ಕೆ ಹಾಕಿ..... ಇನ್ನೇನು ಎಲ್ಲಾ ಮುಗಿತು ಚಪಾತಿ ತಿನ್ನೋಣ ಅಂತ ಪ್ಲೇಟ್ ಗೆ ಚಪಾತಿ ಹಾಕೊಂಡೆ ಆಮೇಲೆ ಅನಿಸ್ತು ನನಗೆ "ಮಂಜಾ ನೀ ತುಸು ನೀರಲ್ಲಿ ಮುಳುಗಿಲ್ಲ ಬರೋಬ್ಬರಿ ಸಮುದ್ರದಲ್ಲೇ ಮುಳುಗಿದಿಯ ಚಪಾತಿ ಜೊತೆ ತಿನ್ನೋಕೆ ಏನಿದೆ ಅಂತ ಚಪಾತಿ ಮಾಡಿದಿಯ ಅಮ್ಮ ಕಳಿಸಿದ್ದ ಚಟ್ನಿ ಪುಡಿ ಫುಲ್ ಖಾಲಿ ಆಗಿದೆ... ಅಲ್ಲಿಗೆ ಆಗ್ಲೇ ೧೨.೨೦ ಆಗಿತ್ತು .  ಅಂಗಡಿಗೆ ಹೋಗಿ ಬಾಳೆ ಹಣ್ಣೋ ಇಲ್ಲಾ ಕಿಸ್ಸನ್ ಜಾಮೋ ತಂದು ತಿನ್ನೋಣ ಅಂತ ಮತ್ತೆ ಹೊರಗಡೆ ಹೋದೆ ನನ್ನ ಗಮನ ಮತ್ತೆ ಹೋಟೆಲ್ ಕಡೆ ಹೋಯ್ತು ಅಲ್ಲಾ ಹೋಟೆಲ್ ಗೆ ಹೋಗಿದ್ರೆ ಚಪಾತಿ ಜೊತೆ ಚಟ್ನಿ ಇಲ್ಲಾ ಪಲ್ಯ ಏನಾದ್ರು ಕೊಡ್ತಾರೆ ನಾನು ಯಾಕೆ ಪಲ್ಯ ಮಾಡ್ಕೋ ಬಾರ್ದು ಅಂತ ಅನ್ಕೊಳ್ತಾ ಇರುವಾಗ್ಲೇ ಗಾಡಿಯಲ್ಲಿ ಒಬ್ಬ ಅವರೆಕಾಯಿ.... ಅವರೆಕಾಯಿ..... ಅಂತ ಕೂಗ್ತಾ ಬರ್ತಾ ಇದ್ದ ಸರಿ ಅವರೆಕಾಯಿ ಪಲ್ಯ ಮಾಡೋಣ ಅಂತ ಆತನ ಹತ್ರ ಹೋಗಿ ೧ ಕಿಲೋ ಅವರೆಕಾಯಿ ತಗೊಂಡು ರೂಮ್ ಗೆ ಬಂದೆ, ನನಗೆ ಬೆಳಗ್ಗೆ ಯಿಂದ ಎಷ್ಟು ಹೊಟ್ಟೆ ಹಸಿದ್ರು ಸಮಾಧಾನದಿಂದ ಇದ್ದೆ ಕಣ್ರೀ ಈ ಅವರೆಕಾಯಿ ಯಾವಾಗ ತಗೊಂಡು ಬಂದನೋ ಅವಗಿಂದ ನನ್ನ ಮೇಲೆ ನನಗೆ ಸಿಕ್ಕಪಟ್ಟೆ ಕೋಪ ಬಂತು ಯಾಕೆ ಅಂತ ಗೊತ್ತ ನಾ ತಂದಿದ್ದು  ಅವರೆಕಾಯಿನ ಅದನ್ನ ಸಿಪ್ಪೆ ಬಿಡಿಸಿ ಕಾಳು ಹೊರಗೆ ತೆಗಿಬೇಕಿತ್ತು ಈಗಲೇ ಟೈಮ್ ಇಷ್ಟೊಂದು ಆಗಿದೆ ಇನ್ನು ಇದನೆಲ್ಲ ಒಂದೊಂದೇ ಬಿಡಿಸಿ ಬಿಡಿಸಿ ಪಲ್ಯ ಮಾಡೋದ್ರಲ್ಲಿ ನನ್ನ ಕತೆ ಮುಗಿತು ಅನ್ಕೊಂಡೆ.

ನಾನು ಒಂಥರಾ ಲೂಸ್ ಮಾಡಬೇಕು ಅಂದಿದ್ದನ್ನ ಮಾಡೋತನಕ ಬಿಡೋನಲ್ಲ ತ್ರಿವಿಕ್ರಮನಥರ "ಛಲ ಬಿಡದ ಮಲ್ಲ " ಅಂತಾರಲ್ಲ ಹಾಗೆ ನಿಜ ಹೇಳ್ಬೇಕು ಅಂದ್ರೆ ನನಗೆ ಸರಿಯಾಗಿ ಅನ್ನನೆ ಮಾಡೋಕೆ ಬರೋದಿಲ್ಲ ಅಂತದ್ರಲ್ಲಿ ಚಪಾತಿ ಮಾಡಿ ಪಲ್ಯ ಮಾಡ್ತಾ ಇದೀನಿ ಅಂತ ನನಗೆ ನಾನೇ ಬೆನ್ನು ತಟ್ಟಿಕೊಂಡೆ.

ಹೇಗಾದ್ರು ಮಾಡಿ ಅವರೆಕಾಯಿ ಪಲ್ಯ ಮಾಡಬೇಕಲ್ಲ ಹೇಗೆ ಮಾಡೋದು ಅಂತ ಅಮ್ಮನಿಗೆ ಕಾಲ್ ಮಾಡಿ ಕೇಳ್ದೆ 
ನಾನು :-  ಅಮ್ಮ ಅವರೆಕಾಯಿ ಪಲ್ಯ ಮಾಡ್ತಾ ಇದೀನಿ ಹೆಂಗೆ ಮಾಡೋದು 

ಅಮ್ಮ :-  ನನ್ನ ಯಾಕೆ ಕೇಳ್ತಿಯ ನಿನ್ನ ಕುಟ್ ಕುಟ್ ಫ್ರೆಂಡ್ಸ್ ಹುಡುಗಿರ್ನ ಕೇಳಬೇಕಿತ್ತು ಹೇಳಿಕೊಡ್ತ ಇದ್ರೂ ( ಕುಟ್ ಕುಟ್ ಅಂದ್ರೆ ಆರ್ಕುಟ್ ಫ್ರೆಂಡ್ಸ್ ಅಂತ, ಅಮ್ಮ  ಹಾಗೆ ಹೇಳೋಕು ಒಂದು  ಕಾರಣ ಇದೇ ಇದೇ ಥರ ನಾನು ಅಡುಗೆ ಮಾಡ್ಬೇಕು ಅಂತ ನನ್ನ ಆರ್ಕುಟ್ ಗೆಳತಿಗೆ ಕಾಲ್ ಮಾಡಿ ಕೇಳಿ ಹೇಗೆ ಮಾಡೋದು ಅಂತ ಕಲ್ತಿದ್ದೇ ಅದನ್ನ ಅಮ್ಮನಿಗೆ ಹೇಳಿದ್ದೆ ಅದಕ್ಕೆ ಹಾಗೆ ಹೇಳಿದ್ರು ) ನಾನೇನು ಮಾತಾಡಲಿಲ್ಲ ಸುಮ್ನೆ ಇದ್ದೆ ಅಷ್ಟರಲ್ಲೇ ಅಮ್ಮನೇ ಹೇಗೆ ಮಾಡ್ಬೇಕು ಅಂತ ಹೇಳಿ, ಊಟ ಮಾಡಿ ಮತ್ತೆ ಕಾಲ್ ಮಾಡು ಅಂತನು ಹೇಳಿದ್ರು ಆ ಥರ ಯಾಕೆ ಹೇಳಿದರೋ ಗೊತ್ತಿಲ್ಲ ನಾನು ಹ್ಮಂ ಹ್ಮಂ ಅಂದು ಕಾಲ್ ಕಟ್ ಮಾಡಿ ಟೈಮ್ ನೋಡಿದೆ 1 ಘಂಟೆ ಇನ್ನು ಆಗಿರಲಿಲ್ಲ ಅನ್ನೋ ಸಮಾಧಾನ ಇನ್ನು ಹದಿನೈದು ನಿಮಿಷ ಕಳುದ್ರೆ 1 ಘಂಟೆ ಆಗುತ್ತೆ ಅನ್ನೋ ಆತಂಕದಲ್ಲೇ ಇದ್ದೆ ನನ್ನ ಮೊಬೈಲ್ ನಲ್ಲಿ "ಬದುಕು ಮಾಯೆಯ ಮಾಟ" ಅನ್ನೋ ಹಾಡು ಅಶ್ವಥ್ ಅವರು ಹಾಡ್ತಾನೆ ಇದ್ರೂ ನಾನು ಕೇಳ್ತಾ ಕೇಳ್ತಾ ಅವರೆಕಾಯಿಗಳನ್ನ ಬಿಡುಸ್ತ ಹೋದೆ ಬೆರಳುಗಳಿಗೆ ಸ್ವಲ್ಪ ಕಷ್ಟ ಆದ್ರು ಕಷ್ಟ ಪಟ್ಟು ಬಿಡಿಸಿದೆ.

ಮೇಲೆ ಕೈಗೆ ಈರುಳ್ಳಿ ತಗೊಂಡೆ ಹೆಚ್ಚೋಕೆ ತಯಾರಾದೆ ಒಂದೇ ಒಂದು ಈರುಳ್ಳಿ ಅರ್ಧ ಭಾಗ ಮಾಡಿದ್ದು ಅಸ್ಟೇ ಕಣ್ರೀ ಅಷ್ಟರಲ್ಲಿ ನನ್ನ ಕಣ್ಣುಗಳು ಧಾರಾಕಾರವಾಗಿ ಮಳೆ ಥರ ಕಣ್ಣಿರು ಸುರುಸ್ತ ಇತ್ತು  ಅಶ್ವಥ್ ಅವರಿಗೂ ನನ್ನ ಪಾಡು ನೋಡೋಕೆ ಆಗದೆ "ಆಕಾಶ ಬಿಕ್ಕುತ್ತಿದೆ" ಅಂತ ಹಾಡು ಚೇಂಜ್ ಮಾಡಿ ಬಿಟ್ರು  ನಾನು ಹಾಗೋ ಹೀಗೋ ಎಲ್ಲಾ ಹೆಚ್ಚಿಬಿಟ್ಟು ಅಮ್ಮ ಹೇಳಿದ ಹಾಗೆ ಮಾಡ್ತಾ ಹೋದೆ ಅಲ್ಲಿಗೆ ಪಲ್ಯ ತಯಾರ್ ಆಯ್ತು ಟೈಮ್ ಆಗಲೇ 1:30 ಸರಿಯಾಗಿ ಆಗಿತ್ತು ಅಬ್ಬಾ ಎಲ್ಲಾ ಮುಗಿತು ಇನ್ನೇನು ಊಟ ಮಾಡೋಣ ಅಂತ ತಟ್ಟೆಗೆ ಚಪಾತಿ ಹಾಕೊಂಡು ಪಲ್ಯ ಹಾಕೊಂಡು ಇನ್ನೇನು ತಿನ್ನಬೇಕು ಅನ್ನೋ ಅಷ್ಟ್ರಲ್ಲಿ ಅಮ್ಮ ಹೇಳಿದ್ದ ಮಾತು ನೆನಪಾಯ್ತು "ಊಟ ಮಾಡಿ ಮತ್ತೆ ಕಾಲ್ ಮಾಡು...!" ಯಾಕೋ ಸ್ವಲ್ಪ ಭಯ ಆಯ್ತು ಅದ್ರು ಏನು ಆಗಿದ್ದು ಅಗ್ಲಿಯ ಅಂತ ತುತ್ತು ಬಾಯಿಯಲ್ಲಿ ಇಟ್ಟೆ ಸಿಕ್ಕಾಪಟ್ಟೆ ಖಾರ ಸ್ವಲ್ಪನು ಉಪ್ಪು ಇರ್ಲಿಲ್ಲ ಅಡುಗೆ ಮಾಡೋ ಸಡಗರದಲ್ಲಿ ಉಪ್ಪು ಹಾಕೋದೇ ಮರ್ತಿದ್ದೆ. ಹೇಗೋ ಊಟ ಮಾಡಿ ಮೇಲೆ ಎದ್ದು ತಟ್ಟೆನೆಲ್ಲ ಸೈಡ್ನಲ್ಲಿ ಇಟ್ಟೆ.. ಅಷ್ಟ್ರಲ್ಲಿ  ನಿದ್ದೆ ಎಳಿತ ಇತ್ತು ಹಾಗೆ ಹಾಸಿಗೆ ಮೇಲೆ ಮಲಕೊಂಡೆ...! 

ಎಷ್ಟೋ ಹೊತ್ತಾದ್ ಮೇಲೆ ಕಣ್ಣು ಬಿಟ್ಟೆ ಟೈಮ್ ನೋಡಿಕೊಂಡೆ ಆಗಲೇ ಸಂಜೆ ಆಗಿತ್ತು ಅಬ್ಬಾ ಬಡ ಜೀವ ಬದುಕಿದೆ ಇನ್ನು ಅನ್ಕೊಂಡು ಮೇಲೆ ಎದ್ದೆ ಎದ್ರುಗಡೆ ಶ್ರೀ ಕೃಷ್ಣ ಪರಮಾತ್ಮನ ಫೋಟೋ ನೋಡಿ ಕೈ ಮುಗಿಬೇಕು ಅನಿಸಿದರು ಬೆಳಗ್ಗೆ ಒನ್ ಟೈಮ್ ಮುಗಿದಿದ್ಕೆ ಜೀವನ ಪೂರ್ತಿ ಮರೆದೆ ಇರೋ ಅನುಭವಾಗಿದೆ ಅನ್ಕೊಂಡು ಮುಗಿಲಿಲ್ಲ 

ಗ್ಯಾಸ್ ಪಕ್ಕ ಇದ್ದ ಲಟ್ಟಣಿಕೆ, ಮಣಿ ಮತ್ತೆ ಉಳಿದ್ದಿದ ಚಪಾತಿಗಳು ನನ್ನ ನೋಡಿ ನಗ್ತಾ ಇವೆ ಅನಿಸಿದರು ನನಗು ಅವಕ್ಕೂ ಸಂಬಂಧನೆ ಇಲ್ಲಾ ಅನ್ಕೊಂಡು ಮೊಬೈಲ್ ನಲ್ಲಿ ಸಾಂಗ್ ಹಾಕ್ದೆ ಪಲ್ಲವಿ ಮೇಡಂ ಮತ್ತೆ ಇಂಪಾಗಿ ಹಾಡೋಕೆ ಶುರು ಮಾಡಿದ್ರು "ನೀನಿಲ್ಲದೆ ನನಗೇನಿದೆ ಮನಸೆಲ್ಲಾ ನಿನ್ನಲ್ಲೆ ನೆಲೆಯಾಗಿದೆ ಕನಸೆಲ್ಲಾ ಕಣ್ಣಲ್ಲೆ ಸೆಲೆಯಾಗಿದೆ"



ನಿಮ್ಮ ಹುಡುಗ
?ದೊಡ್ಡಮನಿ.ಮಂಜು
        97424 95837