ಮರಿಬೇಕು ಅಂದುಕೊಂಡ ಕೆಲವು ನೆನಪುಗಳು ಪದೇ ಪದೇ ನೆನಪಾಗ್ತಾ ಈ ಮನಸ್ಸನ್ನ ಕೆಣಕಿ ಕಾಡುತ್ತವೆ. ಕೆಲವು ಪ್ರತಿಬಿಂಬಗಳು ಹೀಗೆ, ನನ್ನಿಂದ ಅವಳು ದೂರ ಆದ್ಲು ! ತಪ್ಪು ತಪ್ಪು ನನ್ನಿಂದ ಅವ್ಳು ದೂರ ಆಗ್ಲಿಲ್ಲ ಅವಳಿಂದ ನಾನೇ ದೂರ ಆದೆ, ಆದ್ರೆ ಅವಳ ನೆನಪುಗಳನ್ನ ಮಾತ್ರ ನಾ ದೂರ ಮಾಡೊಕಾಗ್ಲಿಲ್ಲ ಯಾಕಂದ್ರೆ
"ನೆನಪುಗಳು
ಪಾಪಾಸ್ ಕಳ್ಳಿಯಂತೆ
ಅವು ಬರಡು ಭೂಮಿಯನ್ನು
ಬಿಡೋದಿಲ್ಲ"
ಇನ್ನು ಈ ಸಣ್ಣ ಹೃದಯನ ಬಿಡುತ್ತಾ ಹೇಳಿ ? ಅದ್ರಲ್ಲೂ ನನ್ನಂತ ಮೃದು ಹೃದಯನ ಬಿಡೋದುಂಟ. ಅವನ್ಯಾರೋ ತಲೆಕೆಟ್ಟು ಈ ಹೃದಯಕ್ಕೆ ಕೈ ಹಾಕಿ ಪರ ಪರ ಅಂತ ಕೆರ್ಕೊಂಡು ಬಿಟ್ನಂತೆ ಪಾಪ ಅಲ್ವ ! ಕೊನೆಗೆ ಅದರ ನೋವು ತಾಳಕಾಗ್ದೆ "ಪ್ರೀತಿ ಮಧುರ ತ್ಯಾಗ ಅಮರ" ಅಂದನಂತೆ, ಈ ಪ್ರೀತಿನೆ ಹೀಗೆ ಯಾವ ಕಾಫಿ ಶಾಪ್ ನಲ್ಲಿ ಶುರುವಾಗಿ ಯಾವ ವೈನ್ ಶಾಪ್ ನಲ್ಲಿ ಕೊನೆಯಾಗುತ್ತೆ ಅಂತ ಯಾರಿಗೂ ಗೊತ್ತಿರಲ್ಲ ಅಲ್ವ !
ಅಯ್ಯೋ ಬಿಡಿ ನಮಗ್ಯಾಕೆ ಬೇರೆಯವರ ಲವ್ ಸ್ಟೋರಿ :-)
ಅದೇಕೋ ಇವತ್ತು ಈ ಮುಸ್ಸಂಜೆ ಮಳೆಲಿ ಆ ಹುಡುಗಿ ನೆನಪಾದ್ಲು, ನಾನು ಅವಳ ಊರಲ್ಲಿ ಅವಳ ಜೊತೆ ಕಳೆದ ದಿನಗಳೆಲ್ಲ ಮತ್ತೆ ಈ ತುಂತುರು ಮಳೆಲಿ ಕಣ್ಣ ಮುಂದೆ ನಿಲ್ತಾ ಇದ್ವು ಯಾಕಂದ್ರೆ ಈ ತುಂತುರು ಮಳೆಯಲ್ಲೇ ಅವಳು ನನಗೆ ಸಿಕ್ಕಿದ್ದು.
"ಬಿರುಸಿನಿಂದ ಸುರಿಯುತಿತ್ತು
ತುಂತುರು ಮಳೆ
ಮೋಡದ ತುದಿಯಲಿ
ಕೇಳುತಿತ್ತು ಒಲವಿನ ಕರೆ
ತನು ಮನವೆಲ್ಲ ತೊಯ್ದು
ನಡುಗುತಿತ್ತು ಅವಳ ಕೆನ್ನೆ
ಕೊಡೆ ಹಿಡಿದು ಮೇಲು ನಕ್ಕ
ಹುಡುಗಿ ನೀ ನನ್ನವಳೇ ? ? ?"
( ನಮ್ಮಪ್ಪನಾಣೆ ಅಲ್ಲಾ ಅನಿಸುತ್ತೆ ...! )
ಆ ಸಂಜೆ ಅವಳು ನನಗೆ ಸಿಗದೇ ಇದ್ದಿದ್ರೆ ನನ್ನ ಬದುಕಲ್ಲಿ ಬರೋ ಪ್ರತಿ ಸಂಜೆಗಳಿಗೆ ಅರ್ಥನೇ ಇರ್ತಿರ್ಲಿಲ್ಲ ಅನಿಸುತ್ತೆ ! ಹ್ಹ... ಹ್ಹ... ಹ್ಹ... ಆ ಥರ ಅನ್ಕೊಂಡ್ರೆ ನನ್ನ ಅಂತ ಮೂರ್ಖ ಈ ಭೂಮಿಮೇಲೆ ಯಾರು ಸಿಗೋಲ್ಲ..! ಅದಕ್ಕೆ ನನ್ನ ಆರ್ಕುಟ್ ಫ್ರೆಂಡ್ ಒಬ್ಳು ಹೇಳ್ತಾ ಇದ್ಲು ನಿಂದು ಕಲ್ಲು ಹೃದಯ ಕಣೋ ಅಂತ :-) ಅದು ನಿಜವಾಗಲು ನಿಜ :-)
-:ಕಥೆ ಈಗ ಪ್ರಾರಂಭ :- ಮಳೆಯಲ್ಲೇ ಮಳೆಯಾದ ಮನಸ್ಸು ;-
ಅವತ್ತು ಸಂಜೆ ಸರಿಯಾಗಿ ಐದು ಘಂಟೆ ನಾನು ನನ್ನ ಸ್ನೇಹಿತರು college ಮುಗಿಸಿಕೊಂಡು busಗಾಗಿ ಕಾಯ್ತಾ ಇದ್ವಿ, ತುಂತುರು ಮಳೆ ಬೇರೆ ಬಸ್ ತಂಗುದಾಣ ಬೇರೆ ಇರ್ಲಿಲ್ಲ ಆಸರೆಗಾಗಿ ಮರದ ಪಕ್ಕ ಹರಟೆ ಹೊಡೆಯುತ್ತ ನಿಂತುಕೊಂಡು ಇದ್ವಿ ಅವಳು ಅವಳ Friends ಜೊತೆ ನಾವು ನಿಂತಿದ್ದ ಮರದ ಪಕ್ಕ ಬಂದು ನಿಂತಕೊಂಡು ನನ್ನೇ ನೋಡ್ತಾ ಇದ್ಲು ..! ಅದನ್ನ ನನ್ನ ಗೆಳೆಯ ಉಮೇಶ್ ನೋಡಿ ಲೇ,,,,, ಮಂಜು ಆ ಹುಡುಗಿ ನಿನಗೆ ಗೊತ್ತೇನೋ ಅಂತ ಕೇಳ್ದ ಯಾರೋ! ಅಂತ ತಿರುಗಿ ನೋಡಿ ಇಲ್ಲಾ ಕಣೋ ಗೊತ್ತಿಲ್ಲ ,,,,, ಯಾಕೆ ? ಅಂದೇ ಯಾಕು ಇಲ್ಲ ತುಂಬಾ ಹೊತ್ತಿಂದ ಅವಳು ನಿನ್ನೆ ನೋಡ್ತಾ ಇದ್ಲು ಅದಕ್ಕೆ ಕೇಳಿದೆ ಅಂದ ಅಷ್ಟರಲ್ಲಿ ನಾನು ಹೋಗಬೇಕಾದ Bus ಬಂತು ಮಳೆ ತುಂಬಾ ಜೋರಾಗಿ ಬರ್ತಾ ಇತ್ತು ನಾನು ಬಸ್ ಹತ್ತಬೇಕು ಅಂತ ಹೋದಾಗ ಹಿಂದಿನಿಂದ ಯಾರೋ ನನ್ನ ಕರೆದಹಾಗೆ ಆಯ್ತು ತಿರುಗಿ ನೋಡಿದಾಗ ಅಚ್ಚರಿ ಕಾದಿತ್ತು ಅಬ್ಬಾ !! ಅಂತಹ ಚಳಿಯಲ್ಲೂ ಮೈ ಬಿಸಿಯಾಗಿ ಬೆವರು ಮಳೆ ನೀರಿನೊಂದಿಗೆ ಬೆರೆತು ಹೋಯ್ತು "ಮಳೆಯಲ್ಲಿ ಹೆಚ್ಚು ನೆನಿಬೇಡಿ ಶೀತವಾಗುತ್ತೆ" ಅಂತ ಹೇಳಿ ಕೊಡೆ ಹಿಡಿದುಕೊಂಡು ನನ್ನ ಜೊತೆ ಬಸ್ ಹತ್ತಿದ್ದು ಅವಳೇನಾ ?
(ಹೌದು ಇಷ್ಟೋತ್ತು ನನ್ನ ನೋಡ್ತಾ ನಿಂತಿದ್ದ ಅದೇ ಹುಡುಗಿ "ಸಂಜೆ ಮಳೆಯ ಹುಡುಗಿ" )
ಅಲ್ಲಿಂದ 15 ನಿಮಿಷಗಳ ಪಯಣದಲ್ಲಿ ನಾನು ಅವಳ ಪರಿಚಯ ಮಾಡಿಕೊಳ್ಳುವಂತಹ ಸಾಹಸಕ್ಕೆ ಕೈಹಾಕಲಿಲ್ಲ, ನಾನು ಇಳಿಯುವ ಸ್ಟಾಪ್ ಬಂತು ಇಳಿದು ಕೊಂಡು ಹೊರಟೆ, ಅವಳನ್ನ ನಾ ತಿರುಗಿ ಸಹ ನೋಡಲಿಲ್ಲ, ಆದರೆ ಅವಳು ನನ್ನ ಹಿಂದೆಯೇ ಬರ್ತಾ ಇರೋದು ಅವಳು ನನ್ನ ಮತ್ತೆ ಮಾತಾಡಿಸಿದಾಗಲೇ ಗೊತ್ತಾಗಿದ್ದು, ಅದೆಷ್ಟು ಬೇಗ ನನ್ನ ಪರಿಚಯ ಮಾಡಿಕೊಂಡಳು.
ನೀನು ಯಾರೋ
ನಾನು ಯಾರೋ
ನಡುವೆ ಎಷ್ಟೋ ಅಂತರ !
ಆದರು
ಬಯಸಿತೇಕೆ ನಿನ್ನ ಮನವು
ನನ್ನ ಮನದ ಪರಿಚಯ !!!,,,,,,,,
"ಕಟ್ಟಿಕೊಂಡ ಕನಸುಗಳ ನಡುವೆ ಸುಟ್ಟುಹೋದ ಅವಳ ಪ್ರೀತಿ"
ನೀನು ಸಹ ಅದೇ ಊರಿನವಳು ಅಂತ ನನಗೆ ಗೊತ್ತಾಗಿದ್ದೇ ಅಂದು, ಹೌದು,,, ಊರಿಗೆ ಹೊಸಬರ ಅಂತ ನೀ ಕೇಳಿದೆಯಲ್ಲ ಅದು ನಿಜ ನಾನು ನಿಮ್ಮ ಊರಿಗೆ ಬಂದು ಕೇವಲ ಎರಡು ತಿಂಗಳು ಕಳೆದಿತ್ತು ನನ್ನ ವಿದ್ಯಾಭ್ಯಾಸ ಮುಂದುವರೆಸಲು ನಿಮ್ಮ ಊರಿಗೆ ಬಂದು ನೆಲೆಸಿದ್ದೆ, ಅದು ಬಿಡು ನನ್ನದು ಒಂದು ಹಳೆಯ Flashback. ನೀ ಯಾವತ್ತು ನನ್ನ ಬಗ್ಗೆ ನನ್ನ ಜೀವನದ ಬಗ್ಗೆ ವಿಚಾರಿಸಲಿಲ್ಲ ಅದು ನೀನು ಮಾಡಿದ ಒಂದು ದೊಡ್ಡ ತಪ್ಪು!, ಅದೇಕೆ ನನ್ನ ಮೇಲೆ ನಿನಗೆ ಅಷ್ಟೊಂದು ಆಸಕ್ತಿ ಅಂತ ಗೊತ್ತಿಲ್ಲ ನಾನು ಇಲ್ಲದ ಸಮಯ ನೋಡಿ ಯಾವುದೊ ಪುಸ್ತಕ ಕೇಳುವ ನೆಪದಲ್ಲಿ ನನ್ನ ಮನೆಗೆ ಬಂದು ನನ್ನ ಅಮ್ಮ, ಅಕ್ಕ ನನ್ನ ತಮ್ಮ ಎಲ್ಲರನ್ನೂ ಪರಿಚಯ ಮಾಡಿಕೊಂಡು ಹೋದೆಯಲ್ಲ ನಿಜಕ್ಕೋ ನಿನ್ನ ಮೆಚ್ಚಲೇ ಬೇಕು ಅಲ್ವ .
ಮೆಚ್ಚಿಕೊಂಡೆ
ಹಚ್ಚಿಕೊಂಡೆ
ನಿನ್ನನೆಕೋ ಕಾಣೆನು!
ನಿದ್ದೆಯಲ್ಲೂ
ವಿದ್ಯೆಯಲ್ಲೂ
ನಿನ್ನ ಕಂಡು ಕಾಣೆನು!
ಕನಸಿನಲ್ಲೂ
ಮನಸಿನಲ್ಲೂ
ಮರೆತು ನಿನ್ನ ಮರೆಯೇನು !
ಕಂದಾ ನಿನಗೆ ನೆನಪಿದೆಯಾ ಅವತ್ತು ನಿನ್ನ Birthday ಇತ್ತು ನೀನು ನನಗೋಸ್ಕರ ಗಣೇಶನ ದೇವಸ್ಥಾನದಲ್ಲಿ ಕಾಯ್ತಾ ಇದ್ದೆ But ನಾ ಮಾತ್ರ ಬರ್ಲಿಲ್ಲ ನನಗೆ ಗೋತ್ತು ನನ್ನ ಮೇಲೆ ನಿನಗೆ ತುಂಬಾ ಕೋಪ ಇದೆ ಅಂತ, ನಾನೂ ಬರಬೇಕು,,,, ನಿನಗೆ wish ಮಾಡ್ಬೇಕು ಅಂತನೇ ಇದ್ದೆ ಆದ್ರೆ ಯಾವುದೂ ಕಾರಣದಿಂದ ನಿನ್ನ ನೋಡೋಕೆ ಆಗ್ಲಿಲ್ಲ ,Please ಬೇಜಾರ್ ಮಾಡ್ಕೋಬೇಡ.
ನೀನು ನನಗೆ ಪರಿಚಯ ಆದ ದಿನದಿಂದ ಪ್ರತಿ ಸಂಜೆ ಆ ಮಳೆಲಿ ನಿನ್ನ ಜೊತೆ ನೆನೆಯುತ್ತ ಅದೆಷ್ಟು ಹೊತ್ತು ಮಾತಾಡ್ತಾ ಇದ್ವಿ ನಿನಗೆ ನೆನಪಿದೆನ, ನನಗಂತೂ ಈ ಬೆಂಗಳೂರ್ ಮುಸ್ಸಂಜೆ ಮಳೆಲಿ ನಿನ್ನ ನೆನಸಿಕೊಂಡ್ರೆ ಇಗ್ಲು ನೀನೆ ನನ್ನ ಪಕ್ಕ ಇದ್ದೀಯ ಅನಿಸುತ್ತೆ ಏಕೆಂದರೆ ನನಗಂತ ಉಳಿದಿರೋದು ನೀನು ಕೊಟ್ಟ ಆ ಮುಸ್ಸಂಜೆ ನೆನೆಪುಗಳು ಮಾತ್ರ. ಅದೆಷ್ಟು ಚನ್ನಾಗಿ ನೀ ನನ್ನ ಆಗಾಗ "ಮಂಜು" ಅಂತ ಕರಿತಾ ಇದ್ದೆ ಈ ಮಂಜು ಅಂದ್ರೆ ಅಷ್ಟೊಂದು ಇಷ್ಟನಾ, ಹುಚ್ಚಿ ಕಣೇ ನೀನು ಮಂಜು ಸ್ವಲ್ಪ ಬಿಸಿಲು ಬಿದ್ರೆ ಕೈಗೆ ಸಿಗದೇ ಕರಗಿ ಹೋಗ್ತಾನೆ ಅನ್ನೋದು ಗೊತ್ತಿರ್ಲಿಲ್ವ ? ? .
ಎಲ್ಲಾ ಹುಡುಗ್ರು ತನ್ನ ಹುಡುಗಿಗಾಗಿ ಕಾದ್ರೆ ನೀನು ಮಾತ್ರ ನನಗೋಸ್ಕರ ಪ್ರತಿ ಸಂಜೆ ಕಾಯ್ತಾ ಇದ್ದೆಲ್ಲ
ಅದು ಯಾಕೆ ? ? ?
ನಾನಿನ್ನ ತುಂಬಾ ಪ್ರೀತಿಸ್ತೀನಿ ಅಂದು ನನ್ನ ಮೈಯಲ್ಲಿ ವಿಧ್ಯುತ್ ಸಂಚಲನ ಮಾಡಿಸಿದೆ ಅಲ್ವ
ಅದು ಯಾಕೆ ? ? ?
ನಿನ್ನ ಎಲ್ಲಾ ನೋವುಗಳಿಗೆ ಸ್ಪಂದಿಸಿ ಸಾಂತ್ವಾನ ಹೇಳಿ ನಿನ್ನ ನಗುಸ್ತ ಇದ್ದ ನನ್ನ ಒಳ್ಳೆ ಫ್ರೆಂಡ್ ಅಂದು
ಲವ್ ಯೌ ಅಂದ್ಯಲ್ಲ ಅದು ಯಾಕೆ ?
ಈ ಪ್ರಶ್ನೆಗಳಿಗೆ ಉತ್ತರ ನನಗೆ ಸಿಗೋಲ್ಲ ಅಂತ ಗೊತ್ತು ಯಾಕದ್ರೆ ನೀ ನನ್ನ ಲವ್ ಮಾಡ್ತಾ ಇದೀನಿ ನಿನ್ನ ಒಪಿನಿಯನ್ ತಿಳಿಸು ಅಂದ ಆ ತುಂತುರು ಮಳೆಯ ಸಂಜೆಯಿಂದನೆ ನಾ ನಿನ್ನಿಂದ ತುಂಬಾ ತುಂಬಾನೇ ದೂರಾದೆ ಒಂದು ದಿನ ಟೈಮ್ ಕೊಡು ಅಂದು ಇಂದಿಗೂ ನಿನ್ನ ಕೈಸಿಗದ "ಮರೀಚಿಕೆ" ಆದೆ , ಅದರಲ್ಲಿ ನನ್ನ ತಪ್ಪು ಏನು ಇಲ್ಲಾ ಎಲ್ಲಾ ನಿನ್ನಿಂದ ಅಷ್ಟೇ...!
ನಿಜ ನನ್ನ ಮುಗ್ಧತೆ, ಮಗುವಿನ ಹೃದಯ, ನನ್ನ ನಗು ಇವೆಲ್ಲ ನಿನಗೆ ಇಷ್ಟ ಅಂತ ಗೊತ್ತು, ಇಷ್ಟ ಪಟ್ಟಿದೆಲ್ಲ ನಮಗೆ ಸಿಗುತ್ತಾ ? ಕಷ್ಟ ಅಲ್ವ..!
ನಿನ್ನ ನೆನಪುಗಳಿಗೆ ಇಂದಿಗೆ ಐದಾರು ವರ್ಷಗಳೇ ಉರುಳಿವೆ ಏಪ್ರಿಲ್ 17 ನಿನ್ನ ಬರ್ತ್ಡೇ ಅದು ನನಗೆ ಗೊತ್ತಾಗಿದ್ದು, ಒಮ್ಮೆ ನೀನು ಬರೆದು ಕೊಟ್ಟ "ಆಟೋಗ್ರಾಪ್" ಬುಕ್ ತಗ್ದು ನೋಡ್ತಾ ಇರುವಾಗ..!
ಈಗ್ಲೂ ನನಗೆ ತುಂಬಾ ನೆನಪಾಗೋದು ಅವತ್ತು ನೀನು ಕೇಳ್ದೆ ಅಲ್ವ ಮಂಜು ಬೆಂಗಳೊರಿಗೆ ಹೋಗಿದ್ದೆ ಅಲ್ವ ಕೆಲಸ ಸಿಕ್ತಾ ಅಂತ ನಾನು ಇಲ್ಲಾ ಸಿಗ್ಲಿಲ್ಲ ಬೇಜಾರಾಯ್ತು ವಾಪಸ್ ಬಂದೆ ಅಂದೇ ಅದಕ್ಕೆ ನೀನು ಹೇಳ್ದೆ "ಹಾಕಿರೋ ಚಪ್ಪಲಿ ಸವಿಬೇಕು ಕಣೋ" ಕಷ್ಟ ಪಡ್ಡೆ ಏನು ಸಿಗೋಲ್ಲ ಅಂತ, ಆ ಮಾತು ನಿಜ ಅನಿಸುತ್ತೆ ಇವತ್ತು ಇದೇ ಬೆಂಗಳೂರ್ ನಲ್ಲಿ ನಾನು ಕೆಲಸ ಮಾಡ್ತಾ ಇದೀನಿ ಒಳ್ಳೆ ಕೆಲಸ ಕೂಡ ಸಿಕ್ಕಿದೆ..! ಆದರೆ "ನನ್ನಿಂದ ನಿನಗೆ ರಿಪ್ಲೈ ಮಾತ್ರ ಸಿಕ್ಕಿಲ್ಲ......ಸಿಗೋಲ್ಲ". ಒಂದಲ್ಲ ಒಂದು ದಿನ ನೀ ನನ್ನ ಬ್ಲಾಗ್ ನೋಡ್ತೀಯ ಆಕಸ್ಮಾತ್ ನೋಡಿದ್ರೆ ಈ ಕೆಳಗಿನ ಕವನ ಓದಿ ಸರಿಯಾಗಿ ಅರ್ಥ ಮಾಡ್ಕೋ...! ನಿನಗೆ ಬೇಕಾದ ರಿಪ್ಲೈ ಇದ್ರಲ್ಲಿ ಇದೆ .
"ನಗುತಲಿರು ನಗುವಿನ ಸುಮವೇ
ನಗಿಸೋನ ನಗುವಿನ ಜೊತೆಗೆ
ಕರೆದಿಕೋ ಮೋಹಕ ಒಲವೇ
ನೀನಿರುವ ಮನಸಿನ ಮನೆಗೆ
ನಾನಂತೂ ನಿನಗೆ ಮರೀಚಿಕೆ....!"
(ಇಲ್ಲಿನ ಎಲ್ಲ ಭಾವಚಿತ್ರಗಳ ಕೃಪೆ : ಅಂತರಜಾಲ)
"ಮರೆಯದಿರು ಗೆಳತಿ
ನನ್ನ ಸವಿ ಸ್ನೇಹವ
ಮರೆಯಲಾರೆ ಎಂದು
ನಿನ್ನ ಜೊತೆ ಕಳೆದ ಅಮೂಲ್ಯ ಕ್ಷಣವ....!
ಹ್ಮಂ ಹ್ಮಂ ಹ್ಮಂ ಹೀಗೆ ಹೇಳ್ತಾ ಹೋದ್ರೆ ಈ ಬರವಣೆಗೆ ಮುಗಿಯೋದಿಲ್ಲ ಇದನ್ನ ಇಲ್ಲಿಗೆ ಸ್ಟಾಪ್ ಮಾಡೋಣ ಡಿಯರ್ ಫ್ರೆಂಡ್ಸ್ ಕೊನೆದಾಗಿ ನಾನು ಏನ್ ಹೇಳೋಕೆ ಇಷ್ಟ ಪಡ್ತೀನಿ ಅಂದ್ರೆ "ಸ್ನೇಹ ಎಂದಿಗೂ ಸ್ನೇಹವಾಗಿರ್ಲಿ ಅದನ್ನ ಈ ಪ್ರೀತಿ ಪ್ರೇಮ ಅಂತ ಬದಲಾಯಿಸೋ ಪ್ರಯತ್ನ ಮಾಡ್ಬೇಡಿ....! ಪ್ರೀತಿ ಹುಟ್ಟೋಕೆ ಸ್ನೇಹ ಸಲುಗೆಗಳು ಒಂದು ರೀತಿಯಲ್ಲಿ ಕಾರಣ ಆದ್ರೆ ಎಲ್ಲಾ ಸ್ನೇಹ ನಿಮ್ಮ ಬಾಳ ಸಂಗಾತಿಯಾಗೋಲ್ಲ"
"ನಿಮ್ಮ ಫ್ರೆಂಡ್ ಜೊತೆ ನೀವು ನಿಮ್ಮ ಎಲ್ಲಾ ರೀತಿಯ ಫೀಲಿಂಗ್ ನ ಹಚ್ಚ್ಕೋ ಬಹುದು ಬಟ್ ಅದೇ ಫ್ರೆಂಡ್ ನಿಮ್ಮ ಜೀವನದಲ್ಲಿ ಸಂಗಾತಿ ಆಗಿ ಬಂದಾಗ ನಿಮ್ಮೆಲ್ಲ ಫೀಲಿಗ್ ಗಳನ್ನ ಅವರ ಜೊತೆ ಶೇರ್ ಮಾಡಿಕೊಳ್ಳೋಕೆ ಆಗೋಲ್ಲ"
"ಅದೆಷ್ಟು ಜನರ ಲೈಫ್ ನಲ್ಲಿ ಇದೇ ಥರ ಎಷ್ಟೋ ಲವ್ ಅನ್ನೋ ಆಕರ್ಷಣೆ ಬಂದು ಹೋಗಿರುತ್ತೆ, ಆ ಏಜ್ ಅನ್ನೋದೇ ಹಾಗೆ ಕಣ್ಣಿಗೆ ಕಾಣೋದೆಲ್ಲ ಬೇಕು ಅನ್ನೋ ಭಾವನೆ, ಅದು ನನಗೆ ಬೇಕು ಅನ್ನೋ ಯಾತನೆ"
ಲವ್ ಅನ್ನೋ ಪದದ ಆಕರ್ಷಣೆ ಮತ್ತು ಅದ್ರಿಂದ ಉಂಟಾಗೋ ನವಿರಾದ ಸಂಚಲನ ನನ್ನಲ್ಲಿ ಹುಟ್ಟಿದ್ದೇ ಈ ಹುಡುಗಿಯ ಪ್ರೊಪೋಸ್ ಯಿಂದ ಒಂದು ಮಾತಲ್ಲಿ ಹೇಳ್ಬೇಕು ಅಂದ್ರೆ ನನ್ನ ಪ್ರೊಪೋಸ್ ಮಾಡಿದ ಮೊಟ್ಟ ಮೊದಲ ಮರೆಯದ ಗೆಳತಿ ಈ "ಸಂಜೆ ಮಳೆಯ ಹುಡುಗಿ"
ಆಯ್ಯೋ ಬಿಡಿ ನನ್ನ ಪ್ರೊಪೋಸ್ ಗಳ ಬಗ್ಗೆ ಹೇಳ್ತಾ ಹೋದ್ರೆ ಮುಂದೆ ಓದೋಕೆ ನಿಮ್ಮ ಕಣ್ಣು ಇರಲ್ಲ ಕೇಳೋಕೆ ಕಿವಿ ಇರೋಲ್ಲ ;-)
ನಾನು ಯಾವದೇ ಲೇಖನ ಬರೆದರು ಕೊನೆಯದಾಗಿ ನನ್ನ ಕಾಡೋದು ಹೇಗೆ ಈ ಲೇಖನನ ಸಂಹಾರ (ಮುಗಿಸಬೇಕು) ಮಾಡ್ಬೇಕು ಅಂತ ಕಷ್ಟ ಆದ್ರು ಮಾಡಲೇ ಬೇಕಲ್ವ ಅದಕ್ಕೆ ಕೊನೆದಾಗಿ ಎರಡು ಲೈನ್ ಗಳಲ್ಲಿ ಈ ಲೇಖನಕ್ಕೆ ನಾಂದಿ ಹೇಳ್ತೀನಿ ಸರಿಯಾಗಿ ಓದಿ ತಿಳ್ಕೊಳ್ಳಿ..!
"ಅಂದು ಇಂದು ಎಂದೂ ಮಂಜು ಎಂದೆಂದೂ"
ಸಿಂಗಲ್
SINGLE
ಸಿಂಗಲ್
SINGLE
ಸಿಂಗಲ್
SINGLE
ಸಿಂಗಲ್
SINGLE
ಬೇಡ ಬೇಡ ನಂಬಬೇಡಿ
Now I am single
But
Ready to mingle
"ಮತ್ತೆ ಸಿಗ್ತೀನಿ ರೀ ರೈಲ್ ಹುಡುಗಿ ಜೊತೆ ಈಗಲೇ ಎಲ್ಲಾ ಟಿಕೆಟ್ ಬುಕ್ ಮಾಡಿ"
~$ಮರೀಚಿಕೆ$~
ದೊಡ್ಡಮನಿ.ಮಂಜು?
+919742495837