ಸತ್ಯವನ್ನೇ ನುಡಿಸು ಗುರುವೇ ನರವಿಲ್ಲದ ಜಿಹ್ವೆಯೋಳ್ ! ಸ್ಥಿರವಾಗಿ ನೆಲೆಸು ಗುರುವೇ ಮರ್ಕಟ ಈ ಮನದೊಳ್ !

Thursday, 14 April 2011

ಸಂಜೆ ಮಳೆಯ ಹುಡುಗಿ..!





ರಿಬೇಕು ಅಂದುಕೊಂಡ ಕೆಲವು ನೆನಪುಗಳು ಪದೇ ಪದೇ ನೆನಪಾಗ್ತಾ ಈ ಮನಸ್ಸನ್ನ ಕೆಣಕಿ ಕಾಡುತ್ತವೆ. ಕೆಲವು ಪ್ರತಿಬಿಂಬಗಳು ಹೀಗೆ,  ನನ್ನಿಂದ ಅವಳು ದೂರ ಆದ್ಲು  ! ತಪ್ಪು ತಪ್ಪು ನನ್ನಿಂದ ಅವ್ಳು ದೂರ ಆಗ್ಲಿಲ್ಲ ಅವಳಿಂದ ನಾನೇ ದೂರ ಆದೆ, ಆದ್ರೆ ಅವಳ ನೆನಪುಗಳನ್ನ ಮಾತ್ರ ನಾ ದೂರ ಮಾಡೊಕಾಗ್ಲಿಲ್ಲ ಯಾಕಂದ್ರೆ 

"ನೆನಪುಗಳು 
ಪಾಪಾಸ್ ಕಳ್ಳಿಯಂತೆ
ಅವು ಬರಡು ಭೂಮಿಯನ್ನು
ಬಿಡೋದಿಲ್ಲ"

 ಇನ್ನು ಈ ಸಣ್ಣ ಹೃದಯನ ಬಿಡುತ್ತಾ ಹೇಳಿ ?  ಅದ್ರಲ್ಲೂ ನನ್ನಂತ ಮೃದು ಹೃದಯನ  ಬಿಡೋದುಂಟ. ಅವನ್ಯಾರೋ ತಲೆಕೆಟ್ಟು ಈ ಹೃದಯಕ್ಕೆ ಕೈ ಹಾಕಿ ಪರ ಪರ ಅಂತ ಕೆರ್ಕೊಂಡು ಬಿಟ್ನಂತೆ ಪಾಪ ಅಲ್ವ ! ಕೊನೆಗೆ ಅದರ ನೋವು ತಾಳಕಾಗ್ದೆ "ಪ್ರೀತಿ ಮಧುರ ತ್ಯಾಗ ಅಮರ" ಅಂದನಂತೆ, ಈ ಪ್ರೀತಿನೆ ಹೀಗೆ ಯಾವ ಕಾಫಿ ಶಾಪ್ ನಲ್ಲಿ ಶುರುವಾಗಿ ಯಾವ ವೈನ್ ಶಾಪ್ ನಲ್ಲಿ ಕೊನೆಯಾಗುತ್ತೆ ಅಂತ ಯಾರಿಗೂ ಗೊತ್ತಿರಲ್ಲ ಅಲ್ವ !

ಅಯ್ಯೋ ಬಿಡಿ ನಮಗ್ಯಾಕೆ ಬೇರೆಯವರ ಲವ್ ಸ್ಟೋರಿ :-) 

  ಅದೇಕೋ ಇವತ್ತು ಈ ಮುಸ್ಸಂಜೆ ಮಳೆಲಿ ಆ ಹುಡುಗಿ ನೆನಪಾದ್ಲು, ನಾನು ಅವಳ ಊರಲ್ಲಿ ಅವಳ ಜೊತೆ ಕಳೆದ ದಿನಗಳೆಲ್ಲ ಮತ್ತೆ ಈ ತುಂತುರು ಮಳೆಲಿ ಕಣ್ಣ ಮುಂದೆ ನಿಲ್ತಾ ಇದ್ವು ಯಾಕಂದ್ರೆ ಈ ತುಂತುರು ಮಳೆಯಲ್ಲೇ ಅವಳು ನನಗೆ ಸಿಕ್ಕಿದ್ದು.


"ಬಿರುಸಿನಿಂದ ಸುರಿಯುತಿತ್ತು

ತುಂತುರು ಮಳೆ

ಮೋಡದ ತುದಿಯಲಿ  

ಕೇಳುತಿತ್ತು ಒಲವಿನ ಕರೆ

ತನು ಮನವೆಲ್ಲ ತೊಯ್ದು 

ನಡುಗುತಿತ್ತು ಅವಳ ಕೆನ್ನೆ

ಕೊಡೆ ಹಿಡಿದು ಮೇಲು ನಕ್ಕ

ಹುಡುಗಿ ನೀ ನನ್ನವಳೇ ? ? ?"

( ನಮ್ಮಪ್ಪನಾಣೆ ಅಲ್ಲಾ ಅನಿಸುತ್ತೆ ...! )

ಆ ಸಂಜೆ ಅವಳು ನನಗೆ ಸಿಗದೇ ಇದ್ದಿದ್ರೆ ನನ್ನ ಬದುಕಲ್ಲಿ ಬರೋ ಪ್ರತಿ ಸಂಜೆಗಳಿಗೆ ಅರ್ಥನೇ ಇರ್ತಿರ್ಲಿಲ್ಲ ಅನಿಸುತ್ತೆ ! ಹ್ಹ... ಹ್ಹ... ಹ್ಹ...  ಆ ಥರ ಅನ್ಕೊಂಡ್ರೆ ನನ್ನ ಅಂತ ಮೂರ್ಖ ಈ ಭೂಮಿಮೇಲೆ ಯಾರು ಸಿಗೋಲ್ಲ..! ಅದಕ್ಕೆ ನನ್ನ ಆರ್ಕುಟ್ ಫ್ರೆಂಡ್ ಒಬ್ಳು ಹೇಳ್ತಾ ಇದ್ಲು ನಿಂದು ಕಲ್ಲು ಹೃದಯ ಕಣೋ ಅಂತ :-) ಅದು ನಿಜವಾಗಲು ನಿಜ :-) 

-:ಕಥೆ ಈಗ ಪ್ರಾರಂಭ :-  ಮಳೆಯಲ್ಲೇ ಮಳೆಯಾದ ಮನಸ್ಸು ;-

ಅವತ್ತು ಸಂಜೆ ಸರಿಯಾಗಿ ಐದು ಘಂಟೆ ನಾನು ನನ್ನ ಸ್ನೇಹಿತರು college ಮುಗಿಸಿಕೊಂಡು busಗಾಗಿ  ಕಾಯ್ತಾ ಇದ್ವಿ, ತುಂತುರು ಮಳೆ ಬೇರೆ ಬಸ್ ತಂಗುದಾಣ ಬೇರೆ ಇರ್ಲಿಲ್ಲ ಆಸರೆಗಾಗಿ ಮರದ ಪಕ್ಕ ಹರಟೆ ಹೊಡೆಯುತ್ತ  ನಿಂತುಕೊಂಡು ಇದ್ವಿ ಅವಳು ಅವಳ Friends ಜೊತೆ ನಾವು ನಿಂತಿದ್ದ ಮರದ ಪಕ್ಕ ಬಂದು ನಿಂತಕೊಂಡು ನನ್ನೇ ನೋಡ್ತಾ ಇದ್ಲು ..!  ಅದನ್ನ ನನ್ನ ಗೆಳೆಯ ಉಮೇಶ್ ನೋಡಿ ಲೇ,,,,, ಮಂಜು ಆ ಹುಡುಗಿ ನಿನಗೆ ಗೊತ್ತೇನೋ ಅಂತ ಕೇಳ್ದ ಯಾರೋ!  ಅಂತ ತಿರುಗಿ ನೋಡಿ ಇಲ್ಲಾ ಕಣೋ ಗೊತ್ತಿಲ್ಲ ,,,,, ಯಾಕೆ ? ಅಂದೇ ಯಾಕು ಇಲ್ಲ ತುಂಬಾ ಹೊತ್ತಿಂದ ಅವಳು ನಿನ್ನೆ ನೋಡ್ತಾ ಇದ್ಲು ಅದಕ್ಕೆ ಕೇಳಿದೆ ಅಂದ ಅಷ್ಟರಲ್ಲಿ ನಾನು ಹೋಗಬೇಕಾದ Bus ಬಂತು ಮಳೆ ತುಂಬಾ ಜೋರಾಗಿ ಬರ್ತಾ ಇತ್ತು ನಾನು ಬಸ್ ಹತ್ತಬೇಕು ಅಂತ ಹೋದಾಗ ಹಿಂದಿನಿಂದ ಯಾರೋ ನನ್ನ ಕರೆದಹಾಗೆ ಆಯ್ತು ತಿರುಗಿ ನೋಡಿದಾಗ ಅಚ್ಚರಿ ಕಾದಿತ್ತು ಅಬ್ಬಾ !! ಅಂತಹ ಚಳಿಯಲ್ಲೂ ಮೈ ಬಿಸಿಯಾಗಿ ಬೆವರು ಮಳೆ ನೀರಿನೊಂದಿಗೆ ಬೆರೆತು ಹೋಯ್ತು "ಮಳೆಯಲ್ಲಿ ಹೆಚ್ಚು ನೆನಿಬೇಡಿ ಶೀತವಾಗುತ್ತೆ" ಅಂತ ಹೇಳಿ ಕೊಡೆ ಹಿಡಿದುಕೊಂಡು ನನ್ನ ಜೊತೆ ಬಸ್ ಹತ್ತಿದ್ದು ಅವಳೇನಾ ? 

(ಹೌದು ಇಷ್ಟೋತ್ತು ನನ್ನ ನೋಡ್ತಾ ನಿಂತಿದ್ದ ಅದೇ ಹುಡುಗಿ "ಸಂಜೆ ಮಳೆಯ ಹುಡುಗಿ" ) 

ಅಲ್ಲಿಂದ 15 ನಿಮಿಷಗಳ ಪಯಣದಲ್ಲಿ ನಾನು ಅವಳ ಪರಿಚಯ ಮಾಡಿಕೊಳ್ಳುವಂತಹ ಸಾಹಸಕ್ಕೆ ಕೈಹಾಕಲಿಲ್ಲ,  ನಾನು ಇಳಿಯುವ ಸ್ಟಾಪ್ ಬಂತು ಇಳಿದು ಕೊಂಡು ಹೊರಟೆ, ಅವಳನ್ನ ನಾ ತಿರುಗಿ ಸಹ ನೋಡಲಿಲ್ಲ, ಆದರೆ ಅವಳು ನನ್ನ ಹಿಂದೆಯೇ ಬರ್ತಾ ಇರೋದು ಅವಳು ನನ್ನ ಮತ್ತೆ ಮಾತಾಡಿಸಿದಾಗಲೇ ಗೊತ್ತಾಗಿದ್ದು, ಅದೆಷ್ಟು ಬೇಗ ನನ್ನ ಪರಿಚಯ ಮಾಡಿಕೊಂಡಳು.


ನೀನು ಯಾರೋ
ನಾನು ಯಾರೋ
ನಡುವೆ ಎಷ್ಟೋ ಅಂತರ !

ಆದರು

ಬಯಸಿತೇಕೆ ನಿನ್ನ ಮನವು
ನನ್ನ ಮನದ ಪರಿಚಯ !!!,,,,,,,,

"ಕಟ್ಟಿಕೊಂಡ ಕನಸುಗಳ ನಡುವೆ ಸುಟ್ಟುಹೋದ ಅವಳ ಪ್ರೀತಿ"

ನೀನು ಸಹ ಅದೇ ಊರಿನವಳು ಅಂತ ನನಗೆ ಗೊತ್ತಾಗಿದ್ದೇ ಅಂದು, ಹೌದು,,, ಊರಿಗೆ ಹೊಸಬರ ಅಂತ ನೀ ಕೇಳಿದೆಯಲ್ಲ ಅದು ನಿಜ ನಾನು ನಿಮ್ಮ ಊರಿಗೆ ಬಂದು ಕೇವಲ ಎರಡು ತಿಂಗಳು ಕಳೆದಿತ್ತು ನನ್ನ ವಿದ್ಯಾಭ್ಯಾಸ ಮುಂದುವರೆಸಲು ನಿಮ್ಮ ಊರಿಗೆ ಬಂದು ನೆಲೆಸಿದ್ದೆ, ಅದು ಬಿಡು ನನ್ನದು ಒಂದು ಹಳೆಯ Flashback. ನೀ ಯಾವತ್ತು ನನ್ನ ಬಗ್ಗೆ ನನ್ನ ಜೀವನದ ಬಗ್ಗೆ ವಿಚಾರಿಸಲಿಲ್ಲ ಅದು ನೀನು ಮಾಡಿದ ಒಂದು ದೊಡ್ಡ ತಪ್ಪು!, ಅದೇಕೆ ನನ್ನ ಮೇಲೆ ನಿನಗೆ ಅಷ್ಟೊಂದು ಆಸಕ್ತಿ ಅಂತ ಗೊತ್ತಿಲ್ಲ  ನಾನು ಇಲ್ಲದ ಸಮಯ ನೋಡಿ ಯಾವುದೊ ಪುಸ್ತಕ ಕೇಳುವ ನೆಪದಲ್ಲಿ  ನನ್ನ ಮನೆಗೆ ಬಂದು ನನ್ನ ಅಮ್ಮ, ಅಕ್ಕ ನನ್ನ ತಮ್ಮ ಎಲ್ಲರನ್ನೂ ಪರಿಚಯ ಮಾಡಿಕೊಂಡು ಹೋದೆಯಲ್ಲ ನಿಜಕ್ಕೋ ನಿನ್ನ ಮೆಚ್ಚಲೇ ಬೇಕು ಅಲ್ವ . 

ಮೆಚ್ಚಿಕೊಂಡೆ
ಹಚ್ಚಿಕೊಂಡೆ
ನಿನ್ನನೆಕೋ ಕಾಣೆನು!

ನಿದ್ದೆಯಲ್ಲೂ
ವಿದ್ಯೆಯಲ್ಲೂ
ನಿನ್ನ ಕಂಡು ಕಾಣೆನು!

ಕನಸಿನಲ್ಲೂ
ಮನಸಿನಲ್ಲೂ
ಮರೆತು ನಿನ್ನ ಮರೆಯೇನು ! 

     ಕಂದಾ ನಿನಗೆ ನೆನಪಿದೆಯಾ ಅವತ್ತು ನಿನ್ನ Birthday ಇತ್ತು ನೀನು  ನನಗೋಸ್ಕರ ಗಣೇಶನ ದೇವಸ್ಥಾನದಲ್ಲಿ ಕಾಯ್ತಾ ಇದ್ದೆ But ನಾ ಮಾತ್ರ ಬರ್ಲಿಲ್ಲ  ನನಗೆ ಗೋತ್ತು ನನ್ನ ಮೇಲೆ ನಿನಗೆ ತುಂಬಾ ಕೋಪ ಇದೆ ಅಂತ, ನಾನೂ ಬರಬೇಕು,,,, ನಿನಗೆ wish ಮಾಡ್ಬೇಕು ಅಂತನೇ  ಇದ್ದೆ ಆದ್ರೆ  ಯಾವುದೂ ಕಾರಣದಿಂದ ನಿನ್ನ ನೋಡೋಕೆ ಆಗ್ಲಿಲ್ಲ ,Please ಬೇಜಾರ್ ಮಾಡ್ಕೋಬೇಡ.

 ನೀನು ನನಗೆ ಪರಿಚಯ ಆದ ದಿನದಿಂದ ಪ್ರತಿ ಸಂಜೆ ಆ ಮಳೆಲಿ ನಿನ್ನ ಜೊತೆ ನೆನೆಯುತ್ತ  ಅದೆಷ್ಟು ಹೊತ್ತು ಮಾತಾಡ್ತಾ ಇದ್ವಿ ನಿನಗೆ ನೆನಪಿದೆನ,  ನನಗಂತೂ ಈ ಬೆಂಗಳೂರ್ ಮುಸ್ಸಂಜೆ ಮಳೆಲಿ ನಿನ್ನ ನೆನಸಿಕೊಂಡ್ರೆ  ಇಗ್ಲು ನೀನೆ ನನ್ನ ಪಕ್ಕ ಇದ್ದೀಯ ಅನಿಸುತ್ತೆ  ಏಕೆಂದರೆ ನನಗಂತ ಉಳಿದಿರೋದು ನೀನು ಕೊಟ್ಟ ಆ ಮುಸ್ಸಂಜೆ ನೆನೆಪುಗಳು ಮಾತ್ರ. ಅದೆಷ್ಟು ಚನ್ನಾಗಿ ನೀ ನನ್ನ ಆಗಾಗ "ಮಂಜು" ಅಂತ  ಕರಿತಾ ಇದ್ದೆ  ಈ ಮಂಜು ಅಂದ್ರೆ ಅಷ್ಟೊಂದು ಇಷ್ಟನಾ, ಹುಚ್ಚಿ ಕಣೇ ನೀನು ಮಂಜು ಸ್ವಲ್ಪ ಬಿಸಿಲು ಬಿದ್ರೆ ಕೈಗೆ ಸಿಗದೇ ಕರಗಿ ಹೋಗ್ತಾನೆ ಅನ್ನೋದು ಗೊತ್ತಿರ್ಲಿಲ್ವ ? ? .

ಎಲ್ಲಾ ಹುಡುಗ್ರು ತನ್ನ ಹುಡುಗಿಗಾಗಿ ಕಾದ್ರೆ ನೀನು ಮಾತ್ರ ನನಗೋಸ್ಕರ ಪ್ರತಿ ಸಂಜೆ ಕಾಯ್ತಾ ಇದ್ದೆಲ್ಲ 
ಅದು ಯಾಕೆ ? ? ? 

ನಾನಿನ್ನ ತುಂಬಾ ಪ್ರೀತಿಸ್ತೀನಿ ಅಂದು ನನ್ನ ಮೈಯಲ್ಲಿ ವಿಧ್ಯುತ್ ಸಂಚಲನ ಮಾಡಿಸಿದೆ ಅಲ್ವ 
ಅದು ಯಾಕೆ ? ? ?

ನಿನ್ನ   ಎಲ್ಲಾ ನೋವುಗಳಿಗೆ ಸ್ಪಂದಿಸಿ ಸಾಂತ್ವಾನ ಹೇಳಿ ನಿನ್ನ ನಗುಸ್ತ ಇದ್ದ ನನ್ನ ಒಳ್ಳೆ ಫ್ರೆಂಡ್ ಅಂದು 
ಲವ್ ಯೌ ಅಂದ್ಯಲ್ಲ ಅದು ಯಾಕೆ ? 

ಈ ಪ್ರಶ್ನೆಗಳಿಗೆ ಉತ್ತರ ನನಗೆ ಸಿಗೋಲ್ಲ ಅಂತ ಗೊತ್ತು ಯಾಕದ್ರೆ ನೀ ನನ್ನ ಲವ್ ಮಾಡ್ತಾ ಇದೀನಿ ನಿನ್ನ ಒಪಿನಿಯನ್ ತಿಳಿಸು ಅಂದ ಆ ತುಂತುರು ಮಳೆಯ ಸಂಜೆಯಿಂದನೆ ನಾ ನಿನ್ನಿಂದ ತುಂಬಾ ತುಂಬಾನೇ ದೂರಾದೆ ಒಂದು ದಿನ ಟೈಮ್ ಕೊಡು ಅಂದು ಇಂದಿಗೂ ನಿನ್ನ ಕೈಸಿಗದ "ಮರೀಚಿಕೆ" ಆದೆ ,  ಅದರಲ್ಲಿ ನನ್ನ ತಪ್ಪು ಏನು ಇಲ್ಲಾ ಎಲ್ಲಾ ನಿನ್ನಿಂದ ಅಷ್ಟೇ...! 

ನಿಜ ನನ್ನ ಮುಗ್ಧತೆ, ಮಗುವಿನ ಹೃದಯ, ನನ್ನ ನಗು ಇವೆಲ್ಲ ನಿನಗೆ ಇಷ್ಟ ಅಂತ ಗೊತ್ತು, ಇಷ್ಟ ಪಟ್ಟಿದೆಲ್ಲ ನಮಗೆ ಸಿಗುತ್ತಾ ? ಕಷ್ಟ ಅಲ್ವ..! 

ನಿನ್ನ ನೆನಪುಗಳಿಗೆ ಇಂದಿಗೆ ಐದಾರು ವರ್ಷಗಳೇ ಉರುಳಿವೆ ಏಪ್ರಿಲ್ 17 ನಿನ್ನ ಬರ್ತ್ಡೇ ಅದು ನನಗೆ ಗೊತ್ತಾಗಿದ್ದು,  ಒಮ್ಮೆ ನೀನು ಬರೆದು ಕೊಟ್ಟ  "ಆಟೋಗ್ರಾಪ್" ಬುಕ್ ತಗ್ದು ನೋಡ್ತಾ ಇರುವಾಗ..! 

ಈಗ್ಲೂ ನನಗೆ ತುಂಬಾ ನೆನಪಾಗೋದು ಅವತ್ತು ನೀನು ಕೇಳ್ದೆ ಅಲ್ವ ಮಂಜು ಬೆಂಗಳೊರಿಗೆ ಹೋಗಿದ್ದೆ ಅಲ್ವ  ಕೆಲಸ ಸಿಕ್ತಾ ಅಂತ ನಾನು ಇಲ್ಲಾ ಸಿಗ್ಲಿಲ್ಲ ಬೇಜಾರಾಯ್ತು ವಾಪಸ್ ಬಂದೆ ಅಂದೇ ಅದಕ್ಕೆ ನೀನು ಹೇಳ್ದೆ "ಹಾಕಿರೋ ಚಪ್ಪಲಿ ಸವಿಬೇಕು ಕಣೋ"  ಕಷ್ಟ ಪಡ್ಡೆ ಏನು ಸಿಗೋಲ್ಲ ಅಂತ, ಆ ಮಾತು ನಿಜ ಅನಿಸುತ್ತೆ ಇವತ್ತು ಇದೇ ಬೆಂಗಳೂರ್ ನಲ್ಲಿ ನಾನು ಕೆಲಸ ಮಾಡ್ತಾ ಇದೀನಿ ಒಳ್ಳೆ ಕೆಲಸ ಕೂಡ ಸಿಕ್ಕಿದೆ..! ಆದರೆ "ನನ್ನಿಂದ ನಿನಗೆ ರಿಪ್ಲೈ ಮಾತ್ರ ಸಿಕ್ಕಿಲ್ಲ......ಸಿಗೋಲ್ಲ". ಒಂದಲ್ಲ ಒಂದು ದಿನ ನೀ ನನ್ನ ಬ್ಲಾಗ್ ನೋಡ್ತೀಯ ಆಕಸ್ಮಾತ್ ನೋಡಿದ್ರೆ ಈ ಕೆಳಗಿನ ಕವನ ಓದಿ ಸರಿಯಾಗಿ ಅರ್ಥ ಮಾಡ್ಕೋ...! ನಿನಗೆ ಬೇಕಾದ ರಿಪ್ಲೈ ಇದ್ರಲ್ಲಿ ಇದೆ .



"ನಗುತಲಿರು ನಗುವಿನ ಸುಮವೇ 

ನಗಿಸೋನ ನಗುವಿನ ಜೊತೆಗೆ 
ಕರೆದಿಕೋ ಮೋಹಕ ಒಲವೇ  
ನೀನಿರುವ ಮನಸಿನ ಮನೆಗೆ
ನಾನಂತೂ ನಿನಗೆ ಮರೀಚಿಕೆ....!"

(ಇಲ್ಲಿನ ಎಲ್ಲ ಭಾವಚಿತ್ರಗಳ ಕೃಪೆ : ಅಂತರಜಾಲ)

"ಮರೆಯದಿರು ಗೆಳತಿ 
ನನ್ನ ಸವಿ ಸ್ನೇಹವ 
ಮರೆಯಲಾರೆ ಎಂದು 
ನಿನ್ನ ಜೊತೆ ಕಳೆದ ಅಮೂಲ್ಯ ಕ್ಷಣವ....! 

ಹ್ಮಂ ಹ್ಮಂ ಹ್ಮಂ ಹೀಗೆ ಹೇಳ್ತಾ ಹೋದ್ರೆ ಈ ಬರವಣೆಗೆ ಮುಗಿಯೋದಿಲ್ಲ ಇದನ್ನ ಇಲ್ಲಿಗೆ ಸ್ಟಾಪ್ ಮಾಡೋಣ ಡಿಯರ್ ಫ್ರೆಂಡ್ಸ್ ಕೊನೆದಾಗಿ ನಾನು ಏನ್ ಹೇಳೋಕೆ ಇಷ್ಟ ಪಡ್ತೀನಿ ಅಂದ್ರೆ "ಸ್ನೇಹ ಎಂದಿಗೂ ಸ್ನೇಹವಾಗಿರ್ಲಿ ಅದನ್ನ ಈ ಪ್ರೀತಿ ಪ್ರೇಮ ಅಂತ ಬದಲಾಯಿಸೋ ಪ್ರಯತ್ನ ಮಾಡ್ಬೇಡಿ....! ಪ್ರೀತಿ ಹುಟ್ಟೋಕೆ ಸ್ನೇಹ ಸಲುಗೆಗಳು ಒಂದು ರೀತಿಯಲ್ಲಿ ಕಾರಣ ಆದ್ರೆ ಎಲ್ಲಾ ಸ್ನೇಹ ನಿಮ್ಮ ಬಾಳ ಸಂಗಾತಿಯಾಗೋಲ್ಲ" 

"ನಿಮ್ಮ ಫ್ರೆಂಡ್ ಜೊತೆ ನೀವು ನಿಮ್ಮ ಎಲ್ಲಾ ರೀತಿಯ ಫೀಲಿಂಗ್ ನ ಹಚ್ಚ್ಕೋ ಬಹುದು ಬಟ್ ಅದೇ ಫ್ರೆಂಡ್ ನಿಮ್ಮ  ಜೀವನದಲ್ಲಿ ಸಂಗಾತಿ ಆಗಿ ಬಂದಾಗ  ನಿಮ್ಮೆಲ್ಲ ಫೀಲಿಗ್ ಗಳನ್ನ ಅವರ ಜೊತೆ ಶೇರ್ ಮಾಡಿಕೊಳ್ಳೋಕೆ ಆಗೋಲ್ಲ"

"ಅದೆಷ್ಟು ಜನರ ಲೈಫ್ ನಲ್ಲಿ ಇದೇ ಥರ ಎಷ್ಟೋ ಲವ್ ಅನ್ನೋ ಆಕರ್ಷಣೆ ಬಂದು ಹೋಗಿರುತ್ತೆ, ಆ ಏಜ್ ಅನ್ನೋದೇ ಹಾಗೆ ಕಣ್ಣಿಗೆ ಕಾಣೋದೆಲ್ಲ ಬೇಕು ಅನ್ನೋ ಭಾವನೆ, ಅದು ನನಗೆ ಬೇಕು ಅನ್ನೋ ಯಾತನೆ"

ಲವ್ ಅನ್ನೋ ಪದದ ಆಕರ್ಷಣೆ ಮತ್ತು ಅದ್ರಿಂದ ಉಂಟಾಗೋ ನವಿರಾದ ಸಂಚಲನ ನನ್ನಲ್ಲಿ ಹುಟ್ಟಿದ್ದೇ ಈ ಹುಡುಗಿಯ ಪ್ರೊಪೋಸ್ ಯಿಂದ ಒಂದು ಮಾತಲ್ಲಿ ಹೇಳ್ಬೇಕು ಅಂದ್ರೆ ನನ್ನ ಪ್ರೊಪೋಸ್ ಮಾಡಿದ ಮೊಟ್ಟ ಮೊದಲ ಮರೆಯದ ಗೆಳತಿ ಈ "ಸಂಜೆ ಮಳೆಯ ಹುಡುಗಿ" 

ಆಯ್ಯೋ ಬಿಡಿ ನನ್ನ ಪ್ರೊಪೋಸ್ ಗಳ ಬಗ್ಗೆ ಹೇಳ್ತಾ ಹೋದ್ರೆ ಮುಂದೆ ಓದೋಕೆ ನಿಮ್ಮ ಕಣ್ಣು ಇರಲ್ಲ ಕೇಳೋಕೆ ಕಿವಿ ಇರೋಲ್ಲ ;-)

ನಾನು ಯಾವದೇ ಲೇಖನ ಬರೆದರು ಕೊನೆಯದಾಗಿ ನನ್ನ ಕಾಡೋದು ಹೇಗೆ ಈ ಲೇಖನನ ಸಂಹಾರ (ಮುಗಿಸಬೇಕು) ಮಾಡ್ಬೇಕು ಅಂತ ಕಷ್ಟ ಆದ್ರು ಮಾಡಲೇ ಬೇಕಲ್ವ ಅದಕ್ಕೆ ಕೊನೆದಾಗಿ ಎರಡು ಲೈನ್ ಗಳಲ್ಲಿ ಈ ಲೇಖನಕ್ಕೆ ನಾಂದಿ ಹೇಳ್ತೀನಿ ಸರಿಯಾಗಿ ಓದಿ ತಿಳ್ಕೊಳ್ಳಿ..! 

"ಅಂದು ಇಂದು ಎಂದೂ ಮಂಜು ಎಂದೆಂದೂ"
ಸಿಂಗಲ್

SINGLE

ಸಿಂಗಲ್

SINGLE

ಸಿಂಗಲ್

SINGLE

ಸಿಂಗಲ್

SINGLE

ಬೇಡ ಬೇಡ ನಂಬಬೇಡಿ 

Now I am single 

But

Ready to mingle

"ಮತ್ತೆ ಸಿಗ್ತೀನಿ ರೀ ರೈಲ್ ಹುಡುಗಿ ಜೊತೆ  ಈಗಲೇ ಎಲ್ಲಾ ಟಿಕೆಟ್ ಬುಕ್ ಮಾಡಿ"


   ~$ಮರೀಚಿಕೆ$~
ದೊಡ್ಡಮನಿ.ಮಂಜು?
+919742495837   

Wednesday, 22 December 2010

ಮರೀಚಿಕೆ...♥...♥...♥



ಮೊನ್ನೆ ಹಾವೇರಿಯಿಂದ ಪ್ರಭು ಅನ್ನೋರು ನನಗೆ ಕಾಲ್ ಮಾಡಿ ಕುಶಲೋಪರಿ ವಿಚಾರಿಸಿದರು ತುಂಬಾ ಚನ್ನಾಗಿ ಮಾತಾಡಿದ್ರು ಮಾತಾಡ್ತಾ ಮಾತಾಡ್ತಾ ಏನ್ ದೊಡ್ಡಮನಿ ನಿಮ್ಮ ಮುಂದಿನ ಲೇಖನ ಯಾವ್ದು ಅಂತ ಕೇಳಿದ್ರು ನಾನು ಹೇಳ್ದೆ ಇಲ್ಲಾ ಸರ್ ಸ್ವಲ್ಪ ಬ್ಯುಸಿ ಆಗಿದಿನಿ ಯಾವದೇ ಬ್ಲಾಗ್ ಕಡೆ ಮುಖಾ ಮಾಡಿಲ್ಲ ಟೈಮ್ ಸಿಕ್ಕಾಗ ಮಾಡ್ತೀನಿ ಅಂದೇ ಸರಿ ಸರ್ ಆದಷ್ಟು ಬೇಗ ಮುಖಾ ಮಾಡಿ ಅಂತ ಹೇಳಿದ್ರು ಆಯ್ತು ಅಂದೆ ಆಮೇಲೆ ಅವರೇ ವಿಷಯಕ್ಕೆ ಬಂದ್ರು,


ಮಂಜು ಈ ಬಿಕ್ಕಳಿಕೆ ಬಂದ್ರೆ ಯಾರೋ ನಮ್ಮನ್ನ ನೆನಪು ಮಾಡಿಕೊಳ್ತಾ ಇದಾರೆ ಅಂತಾರೆ ಇದೆಲ್ಲ ನಿಜ ಅನಿಸುತ್ತಾ ನಿಮಗೆ ??????

ಪ್ರಭು ಕೇಳಿದ್ದು ಈ ಪ್ರಶ್ನೆ ಈಗ ಉತ್ತರ ಹೇಳ್ಬೇಕು ಅಲ್ವ ನಾನು ಅವರಿಗೆ ಫೋನ್ ಹೇಳಿದ ಥರ ಇಲ್ಲಿ ಹೇಳಿದ್ರೆ ಚನ್ನಾಗಿರೋಲ್ಲ ನಾನು ನನ್ನ ಬ್ಲಾಗ್ ಸ್ಟೈಲ್ ನಲ್ಲೆ ಹೇಳ್ತಾ ಹೋಗ್ತೀನಿ ಸ್ವಲ್ಪ ಕಷ್ಟ ಆದ್ರು ಇಷ್ಟಪಟ್ಟು ಓದಿ...♥...♥...♥

ಮರೀಚಿಕೆ ಈಗ ಪ್ರಾರಂಭ ...♥ ...♥ ...♥

ಹೇಮಂತ :- ಲೇ ಮಂಜು ನೀರು ಕುಡಿಯೋ ಬಿಕ್ಕಳಿಕೆ ನಿಲ್ಲುತ್ತೆ

ಉಮೇಶ :- ಲೇ.. ಹೇಮಾ ಅವ್ನು ಒಂದಲ್ಲ ಹತ್ತು ಲೋಟ ನೀರು ಕುಡಿದರು ಅವನಿಗೆ ಆ ಬಿಕ್ಕಳಿಕೆ ನಿಲ್ಲೋಲ್ಲ ಬಿಡೋ

ಹೇಮಂತ :- ಯಾಕೆ ನಿಲ್ಲಲ್ಲ ?

ಉಮೇಶ :- ಅದು ಅವನಿಗೆ ನನಗೆ ಮಾತ್ರ ಗೊತ್ತು...!

ಹೇಮಂತ :- ನನ್ನ ಮಗನೆ ತಲೇಲಿ ಹುಳ ಬಿಡಬೇಡ ಸರಿಯಾಗಿ ಹೇಳು ಅದೇನು

ಉಮೇಶ :- ನೀರು ಕುಡಿದರೆ ನಿಲ್ಲೋ ಬಿಕ್ಕಳಿಕೆ ಅಲ್ಲಾ ಅವನಿಗೆ ಬಂದಿರೋದು

ಹೇಮಂತ :- ನೀರು ಕುಡಿದನೆ ಬಿಕ್ಕಳಿಕೆ ಹೇಗೋ ನಿಲ್ಲುತ್ತೆ

ಉಮೇಶ :- ಅವನು ನೀರು ಕುಡಿದನೆ ಬಿಕ್ಕಳಿಕೆ ನುಲ್ಲುಸ್ತಾನೆ ಗೊತ್ತಾ

ಹೇಮಂತ :- ಒಹ್ ಹೌದ ಮತ್ತೆ ನಿಲ್ಲಿಸೋಕೆ ಹೇಳು ನೋಡೋಣ

ಉಮೇಶ :- ಸರಿ ನೋಡು ಈಗ, ಮಂಜಾ ಸಾಕು ನಿಲ್ಸೋ

(ಹ್ಹ ಹ್ಹ ಹ್ಹ ಅವಾಗ ನನ್ನ ಬಿಕ್ಕಳಿಕೆ ನಿಲ್ತು )

ಹೇಮಂತ :- ಲೋ ಹೇಗೋ ಸಾಧ್ಯ ಇದೆಲ್ಲ.

ನಾನು :- ಲೋ ಇಷ್ಟೇ ಕಣೋ ನಿನಗೆ ಬಿಕ್ಕಳಿಕೆ ಬಂದಾಗ ನಿನ್ನ ಯಾರೋ ನೆನಸಿಕೊಳ್ತಾ ಇರ್ತಾರೆ ಆಗ ಅವರನ್ನ ನೀನು ನೆನಪು ಮಾಡಿಕೊಂಡು ಅವರ ಹೆಸರು ಮನಸಲ್ಲೇ ಮೆಲಕು ಹಾಕು ಸಾಕು ಇಮಿಡಿಯಟ್ ನಿಲ್ಲುತ್ತೆ ಅಷ್ಟೇ

ಹೇಮಂತ :- ನನ್ನ ಮಕ್ಳ ನನ್ನೇನು ಬಕ್ರ ಅಂದುಕೊಂಡ್ರ ಇಲ್ದೆ ಇರೋದನ್ನೆಲ್ಲ ಹೇಳಿ ಡ್ರಾಮ ಮಾಡ್ತಿರ

ಉಮೇಶ :- ಅಯ್ಯೋ ಇಲ್ಲಪ್ಪ ಅದು ನಿಜಾನೆ ನಾನು ಕೆಲವೊಂದು ಸರಿ ಅದೇ ಥರ ಟ್ರೈ ಮಾಡಿದಿನಿ

ಹೇಮಂತ :- ಇಷ್ಟಕ್ಕೂ ನಮ್ಮನ ಅವರೇ ನೆನಪಿಸಿಕೊಳ್ತಾ ಇದಾರೆ ಅಂತ ಹೇಗೆ ಗೊತ್ತಾಗುತ್ತೆ ? ? ?

ನಾನು :- ನೋಡು ಈಗ ನಿನಗೆ ಬಿಕ್ಕಳಿಗೆ ಬಂತು ಅಂತ ತಿಳ್ಕ್ಕೋ ಅವಾಗ ನಿನಗೆ ಮನಸಿಗೆ ತುಂಬಾ ಹತ್ತಿರ ಅನಿಸಿರೋರ್ನ ನೆನಪು ಮಾಡೋಕೆ ಅದಾಗ ಅದೇ ನಿಲ್ಲುತ್ತೆ

ಉಮೇಶ :- ಈ ಕರಿಯಾ ಮುಂಡಾನಾ ಯಾರು ನೆನಪು ಮಾಡಿಕೊಳ್ತಾರೆ ಬಿಡೋ ಬಿಕ್ಕಳಿಕೆ ಬರೋಕೆ
(ಹೇಮಂತ್ ಗೆ ನಮ್ಮ ಕಾಲೇಜ್ ಲೆಕ್ಚರ್ ಇಟ್ಟ ಹೆಸರು ಕರಿಯಾ ಮುಂಡಾ ಅಂತ ಯಾಕಂದ್ರೆ ಅಷ್ಟೊಂದು ಬ್ಲಾಕ್ ಇದ್ದ ಅವನು, ನನಗೆ ಆ ಹೆಸರಿನ ಅರ್ಥ ಇದುವರೆಗೂ ಗೊತ್ತಾಗಿಲ್ಲ ಬಟ್ ಕರೆಯೌದ್ ಮಾತ್ರ ಯಾರು ಬಿಟ್ಟಿಲ್ಲ)

ಹೇಮಂತ :- ಥೂ ನನ್ನ ಮಕ್ಳ ಹಾಳಾಗಿ ಹೋಗ್ರಿ

ಉಮೇಶ :- ನೀನು ಅದೇ ಆಗು

ಹೇಮಂತ :- ಹ್ಮಂ ಹೋಗ್ಲಿ ನೀನು ಬಿಕ್ಕಳಿಕೆ ಬಂದಾಗ ಯಾರನ್ನ ನೆನಪು ಮಾಡಿಕೊಳ್ತಿಯ ಅವರ ಹೆಸರು ಏನು ?

ನಾನು :- ಮರೀಚಿಕೆ..♥...♥...♥ ಅಂತ

ಹೇಮಂತ :- ಈ ಥರ ಹೆಸರು ಯಾರಾದ್ರೂ ಇಟ್ಕೋಳ್ತರ

ಉಮೇಶ :- ಯಾರು ಇಟ್ಟಿದಲ್ಲ ಅವನೇ ಇಟ್ಟಿರೋದು

ಹೇಮಂತ :- ಅಂದ್ರೆ ?

ಉಮೇಶ :- ನಿಂಗೆ ನಿಜವಾದ ಹೆಸರು ಗೊತ್ತಾಗಬಾರ್ದು ಅಂತ ಆ ಹೆಸರು ಹೇಳಿದನೆ ತಮ್ದು ತಮಟೆ ಬಾಯಿ ಅಲ್ವ ಅದಕ್ಕೆ

ಹೇಮಂತ :- ಥೂ ನನ್ನ ಮಕ್ಳ ಹಾಳಾಗಿ ಹೋಗ್ರಿ

ಉಮೇಶ್ :- ಬರ್ತೀಯ ನೀನು

ಹೇಮಂತ :- ಏನಕ್ಕೆ ?

ಉಮೇಶ :- ಹಾಳಾಗೋಕೆ ಜೊತೆಗೆ

ಹೇಮಂತ :- ಹ್ಮಂ ಹಿಂಗೆ ಇದ್ರೆ ನಿಮ್ ಜೊತೆ ನನ್ನ ಹಾಳು ಮಾಡ್ತಿರ

ಉಮೇಶ :- ಒಹ್ ! ನಾವು ಆ ಥರ ಅಲ್ಲಾ ! ನಾವು ಹುಡುಗ್ರನೆಲ್ಲ ಹಾಳು ಮಾಡೋಲ್ಲ

ನಾನು :- ಸಾಕು ನಿಲ್ಲಿಸ್ರೋ ಒಬ್ಬನಿಗಾದ್ರು ಎಂ.ಎಂ.ಇದೇನಾ

ಹೇಮಂತ :- ಎಂ.ಎಂ. ಹಾಗಂದ್ರೇನು

ನಾನು :- ಮಾನ ಮರ್ಯಾದೆ ಅಂತ

ಹೇಮಂತ :- ಥೂ ನನ್ನ ಮಕ್ಳ ಹಾಳಾಗಿ ಹೋಗ್ರಿ ನಿಮ್ ಜೊತೆ ಇದ್ರೆ ನಾನು ಮೆಂಟ್ಲು ಆಗ್ತೀನಿ.

ಉಮೇಶ್ :- ಬ......ರ್ತೀ......ಯ ನೀನು..........!

ಇಲ್ಲಿದೆ ಮನಸ್ಸುಗಳ ತರಂಗ...♥...♥...♥

ಬಿಡಿ ನನ್ನ ಕಾಲೇಜ್ ಲೈಫ್ ಬಗ್ಗೆ ಹೇಳ್ತಾ ಹೋದ್ರೆ ಕೊನೇನೆ ಇರೋಲ್ಲ ಈಗ ಸೀದ ವಿಷಯಕ್ಕೆ ಬರೋಣ.

ಹೌದು ಬಿಕ್ಕಳಿಕೆ ಅನ್ನೋದೇ ಹೀಗೆ, ನಿಮ್ಮ ನಮ್ಮ ಮನೇಲಿ ಯಾರಾದ್ರೂ ಹಿರಿಯ ವಯಸ್ಸಿನೋರು ಇದ್ರೆ ಬಿಕ್ಕಳಿಕೆ ಬಂದ ತಕ್ಷಣ ಹೇಳೋ ಮಾತು ಯಾರೋ ನಿನ್ನ ನೆನಪು ಮಾಡಿಕೊಳ್ತಾ ಇದಾರೆ ಅಂತ, ಕೆಲವು ಕಡೆ ಯಾರೋ ಬೈತಾ ಇದಾರೆ ಅಂತನು ಹೇಳ್ತಾರೆ.

ಇದನ್ನ ನೀವು ಮೋಡ ನಂಬಿಕೆ ಅಂತಿರ ? ಇಲ್ಲಾ ಇದು ನಿಜ ಅಂತಿರ ?

ನೀವು ಏನ್ ಅನ್ನಿ ನಾನು ಮಾತ್ರ ಇದು ಸತ್ಯ ಅಂತಾನೆ ಹೇಳೋದು ಏಕಂದ್ರೆ ನನಗೆ ತುಂಬಾನೇ ಅನುಭವವಾಗಿದೆ ಇದರಲ್ಲಿ ಒಂದು ಸಲ ಹೀಗೆ ನಮ್ಮ ಕಾಲೇಜ್ ನಲ್ಲಿ ಬಿಕ್ಕಳಿಕೆ ಶುರುವಾಯ್ತು ಹತ್ರ ನೀರು ಇರ್ಲಿಲ್ಲ ಹೊರಗಡೆ ಹೋಗಿ ನೀರು ಕುಡಿಯೋಣ ಅಂದ್ರೆ ಲೆಕ್ಚರ್ ಕ್ಲಾಸ್ ತಗೊಂಡಿದ್ರು ಕೇಳೋಕೆ ಮನಸ್ಸು ಬರ್ಲಿಲ್ಲ ಆಗಲೇ ಸ್ವಲ್ಪ ತಲೆ ಓಡಿಸಿದೆ ನನಗೆ ಇಷ್ಟವಾದವರನೆಲ್ಲ ನೆನಪು ಮಾಡಿಕೊಳ್ತಾ ಬಂದೆ ಹ್ಮಂ ಹ್ಮಂ ನಿಲ್ಲಲಿಲ್ಲ ಆಗಲೇ ಬಿಕ್ಕಳಿಕೆ ಸೌಂಡ್ ಜಾಸ್ತಿ ಆಗಿ ಕ್ಲಾಸ್ ಗೆಲ್ಲ ಕೇಳ್ತಾ ಇತ್ತು ಅಷ್ಟರಲ್ಲಿ ಒಂದು ಹೆಸರು ನನಪಿಗೆ ಬಂತು ನೋಡಿ ನೆನಸ್ಕೊಂಡು ಬಿಟ್ಟೆ ತಕ್ಷಣ ನಿಲ್ಲೋದಾ ನನ್ನ ಪುಣ್ಯಕ್ಕೆ ಆ ಹೆಸರು ಬೇಗನೆ ನೆನಪಾಯ್ತು ಇಲ್ಲಾ ಅಂದಿದ್ರೆ ಆ ಲೆಕ್ಚರ್ ಕೈಯಲ್ಲಿ ಸಿಕ್ಕಪಟ್ಟೆ ಬೈಸ್ಕೋ ಬೇಕಿತ್ತು.

ಅವತ್ತಿಂದ ಇವತ್ತಿನ ವರೆಗೂ ನನ್ನ ಬಿಕ್ಕಳಿಕೆ ತಡೆಯೋಕೆ ಆ ಹೆಸರು ಸಾಕು ಈಗ್ಲೂ ಕೆಲವೊಮ್ಮೆ ಅಮ್ಮ ನ ಜೊತೆ ಫೋನ್ ನಲ್ಲಿ ಮಾತಾಡುವಾಗ ಬಿಕ್ಕಳಿಕೆ ಬರುತ್ತೆ ಅಮ್ಮ ಹೇಳ್ತಾ ಇರ್ತಾರೆ ನೀರು ಕುಡಿಯೋ ಅಂತ ನಾನು ಆಗ ಆ ಹೆಸರು ನೆನಸಿಕೊಳ್ತಿನಿ ಬಿಕ್ಕಳಿಕೆ ನಿಲ್ಲುತ್ತೆ ಮತ್ತೆ ಅಮ್ಮ ಕೇಳ್ತಾರೆ ನೀರು ಕುಡುದ್ಯಾ ಅಂತ ಆಗ ಹೇಳ್ತೀನಿ ಇಲ್ಲಾ ಅಮ್ಮ ಯಾರನ್ನೋ ನೆನಪು ಮಾಡಿಕೊಂಡೆ ನಿಲ್ತು ಅಂತ ನಮ್ಮ ಆಮನಿಗೆ ಅಷ್ಟು ಸಾಕು ಸ್ಟಾರ್ಟ್ ಮಾಡಿಕೊಳ್ತಾರೆ "ಯಾರನ್ನ ನೆನಸ್ಕೊಂಡೆ ? " "ಎಲ್ಲಿದಾರೆ ? " "ಹುಡುಗನ ಹುಡುಗಿನ ?" ಅಂತ ಅವಕೆಲ್ಲ ಉತ್ತರ ಕೊಟ್ರೆ ಉಳಿಗಾಲ ಇಲ್ಲಾ ಅಂತ ನನಗೆ ಗೊತ್ತು ಅದಕ್ಕೆ ಬೇರೆ ಏನೇನೊ ಮಾತಾಡಿ ಟಾಪಿಕ್ ಚೇಂಜ್ ಮಾಡ್ತೀನಿ ಯಾಕೆ ಬೇಕು ಅಲ್ವ ಆ ಮರೀಚಿಕೆ..♥...♥...♥ಹೆಸರು ಹೇಳೋದು

ನಗೆ ಅನಿಸುತ್ತೆ, ನಾವು ನೀವು ಎಲ್ಲೋ ಇರ್ತಿವಿ ಫೋನ್ ನಲ್ಲಿ ಮಾತಾಡ್ತೀವಿ ಅದು ಹೇಗೆ ಸಾದ್ಯ ???? ಯಾರೋ ಫೋನ್ ಅನ್ನೋದನ್ನ ಕಂಡು ಹಿಡಿದ್ರು ಇವತ್ತು ನಾವು ನಮ್ಮಿಂದ ಎಸ್ಟೋ ದೂರ ಇರೋರ್ ಜೊತೆ ಮಾತಡ್ತಿವಿ ಇದಕ್ಕೆಲ್ಲ ಕಾರಣ ಮನುಷ್ಯನ ಬುದ್ಧಿ ಶಕ್ತಿ, ಕಣ್ಣಿಗೆ ಕಾಣದ ತರಂಗಗಳು...!

ಹಾಗೆ "ಮನುಷ್ಯ ಅನ್ನೋ ಮನುಷ್ಯನಲ್ಲಿರುವ ಮನಸ್ಸುಗಳಿಗೂ ಮನಸ್ಸು ಅಂತ ಇರುತ್ತೆ ಆ ಮನಸುಗಳು ಸಹ ಮನಸ್ಸಲ್ಲಿ ಇರೋ ಮನಸ್ಸಿನೊಂದಿಗೆ ಮನಸ್ಸು ಕೊಟ್ಟು ಮನಸಾರೆ ಮನಸ್ಸು ಬಿಚ್ಚಿ ಮಾತಾಡುತ್ತವೆ" ಆ ಮನಸ್ಸುಗಳ ನಡುವೆ ನನಗೂ ನಿಮಗೂ ಗೊತ್ತಿಲ್ದೆ ಇರೋ ಯಾವ್ದೋ ಒಂದು ಅದ್ಬುತ ಶಕ್ತಿ ತರಂಗಗಳ ಮೂಲಕ ಮನಸುಗಳ ಮಿಲನಕ್ಕೆ ನಾಂದಿಯಾಗಿದೆ....!

ನೀವು ಗಮನಿಸಿರ್ತಿರ ಅವಳಿ ಜವಳಿ ಮಕ್ಕಳು ಇದ್ರೆ ಒಬ್ಬ ಮಗುಗೆ ಜ್ವರ ಬಂದ್ರೆ ಇನ್ನೊದು ಮಗು ಎಷ್ಟೇ ದೂರ ಇದ್ರೂ ಆ ಮಗುಗು ಜ್ವರ ಬಂದಿರುತ್ತೆ ಈ ಥರ ಉದಾಹರಣೆಗಳು ಸಿನಿಮಾಗಳಲ್ಲಿ ತುಂಬಾ ಇವೆ ಅದು ನಮಗೂ ಗೊತ್ತು ಆದರೆ ಅದಕ್ಕೆ ತಜ್ಞರು ಅವರದೇ ಆದ ರೀತಿನಲ್ಲಿ ವಿವರಣೆ ನಿಡ್ತಾರೆ ಅದಕ್ಕೆ ನಾವು ವಿಜ್ಞಾನ ಅಂತಿವಿ ಅದೇ ಒಬ್ಬ ಹಳ್ಳಿಯವ ಅದರ ಬಗ್ಗೆ ತನ್ನ ಮಾತಿನಲ್ಲಿ ಸರಳವಾಗಿ ವಿವರಣೆ ಕೊಟ್ರೆ ಅದೇ ನಾವೇ ಅಜ್ಞಾನ, ಮೋಡ ನಂಬಿಕೆ ಅಂತೆಲ್ಲ ಕರಿತಿವಿ ಅಲ್ವ ..!

ಈಗ್ಲೂ ಕಾಲ ಮಿಂಚಿಲ್ಲ ನಿಮಗೂ ಬಿಕ್ಕಳಿಕೆ ಬರುತ್ತೆ ಬಂದಾಗ ಒಂದು ಸಾರಿ ನಿಮ್ಮನ್ನ ಇಷ್ಟ ಪಡೋ ಇಲ್ಲಾ ನಿಮ್ಮ ಮನಸ್ಸಲ್ಲಿರೋ ಹೆಸರನ್ನ ನೆನೆಸಿಕೊಂಡು ನೋಡಿ ಮನಸ್ಸುಗಳ ತರಂಗದ ಅರಿವು ನಿಮಗೂ ಆಗುತ್ತೆ..!

ಮನಸ್ಸಲ್ಲಿ ಇರೋರು ಅಂದ್ರೆ ಲವರ್ ಅಂತ ಎಷ್ಟೋ ಜನ ತಪ್ಪು ಕಲ್ಪನೆಯಲ್ಲಿ ಮುಳುಗಿದರೆ, ನಿಮ್ಮನ್ನ ನೆನಪು ಮಾಡಿಕೊಳ್ಳೋಕೆ ನಿಮ್ನ ಪ್ರೀತಿ ಮಾಡ್ತಾ ಇರೋರೆ ಆಗಬೇಕು ಅಂತ ಇಲ್ಲಾ ತಾಯಿ, ತಂದೆ, ಅಕ್ಕ ತಮ್ಮ ಇಲ್ಲಾ ಎಂದೋ ಬಸ್ ಸ್ಟಾಪ್ ನಲ್ಲಿ ಸಿಕ್ಕು ಪರಿಚಯ ಆಗಿ ಇವತ್ತು ನಿಮ್ ಜೊತೆ ಸಂಪರ್ಕದಲ್ಲಿ ಇಲ್ದೇ ಇರೋರು ಆಗಿರಬಹುದು, ಇಲ್ಲಾ ನಿಮ್ಮ ಕಲ್ಪನೆಯಲ್ಲಿ ಹುಟ್ಟಿಕೊಂಡ ನಿಮ್ಮ ಬಾಳ ಸಂಗಾತಿಯಾಗಿರಬಹುದು ಅಂತಹ ಪಾತ್ರಗಳಿಗೆ ನಾನು ಮರೀಚಿಕೆ..♥...♥...♥ ಅಂತ ಕರೆಯೋಕೆ ಇಷ್ಟ ಪಡ್ತೀನಿ.

"ನಾನಂತೂ ಪ್ರೇಮಿ ಅಲ್ಲಾ, ಯಾವದೇ ಪ್ರೇಮದಲ್ಲಿ ಬಿದ್ದಿಲ್ಲ , ಆದ್ರು ಮರೆಯದ ಮರೀಚಿಕೆಯ ಹೆಸರು ಮಾತ್ರ ಇನ್ನು ಮರೆತಿಲ್ಲ"
♥...♥...♥..♥...♥...♥..♥...♥...♥
ಕಣ್ಣಿಗೆ ಕಾಣದ ಓ ಮನವೇ
ನೆನಪಿನಂಗಳದ ಓ ತನುವೇ
ನೀ ಎಂದು ನೆನಪಾಗಿರು
ನೆನಪಿನ ತೋಟದ ಹೂವಾಗಿರು
ನೀ ನನ್ನ ನೆನೆದಾಗ ಬಿಕ್ಕಳಿಕೆಯ
ಮೊದಲ ಗುರುತು ನಿನಾಗಿರು
♥...♥...♥..♥...♥...♥..♥...♥...♥

ನೀನಾಗು ಎಂದು ನನ್ನ ಕೈ ಸಿಗದ ಮರೀಚಿಕೆ
ನೀನಾಗು ಎಂದು ನನ್ನ ಮರೆಯದ ಮರೀಚಿಕೆ
ನೀನಾಗು ಎಂದು ನನ್ನ ಮನತುಂಬುವ ಮರೀಚಿಕೆ...!
♥...♥...♥..♥...♥...♥..♥...♥...♥..♥...♥..♥...♥...♥..♥...♥...♥

"ಕ್ರಿಸ್ಮಸ್ ಹಬ್ಬದ ಶುಭಾಶಯಗಳೊಂದಿಗೆ"

ಇಂತಿ
ಮರೆಯಲಾರದ ಮರೀಚಿಕೆ

?
ಮಂಜು ದೊಡ್ಡಮನಿ...♥...♥..♥
9742495837

Monday, 4 October 2010

ಗೋವಿಂದನ ಗಾದೆ ಪುರಾಣ ...!





ಪಾತಿ ಕತೆ ಮುಗಿದು ಹೋಯ್ತು ಸರ್ ಬೇರೆಯೇನಾದ್ರು ಬರೀರಿ ಅಂತ ತುಂಬಾ ಫ್ರೆಂಡ್ಸ್ ಮೇಲ್ ಮಾಡಿದ್ರು ಚಾಟ್ ಮಾಡಿದ್ರು ಕಾಲ್ ಮಾಡಿ ಕೂಡ ಹೇಳಿದ್ರು ನಾನು ಅವರಿಗೆಲ್ಲ ತಾಳಿ ತಾಳಿ ಒಂದು ಮೂವತ್ತು ದಿನ ಓಡಲಿ ಆಮೇಲೆ ಏನಾದ್ರು ಬರೆಯೋಣ ಅಂತ ಹೇಳಿ ಸಮಾಧಾನ ಮಾಡಿದ್ದೆ ಈಗ ನೋಡಿ 30 ದಿನ ಆಗಿದೆ ಏನ್ ಬರೀಬೇಕು ಅಂತ ಗೊತ್ತಾಗ್ತಾ ಇಲ್ಲಾ ಆದ್ರು ಬರಿಲೇ ಬೇಕು ಅಂತ ಇರೋ ಬರೋ ಎನರ್ಜಿನೆಲ್ಲ ಉಪಯೋಗಿಸಿ ಇದನ್ನ ಬರ್ದಿದೀನಿ ಕಾರಣ ಮೂನ್ನೆ ಯಾರೋ ನನಗೆ ಫೋನ್ ಮಾಡಿ "ಮಲ್ಟಿ ಟ್ಯಾಲೆಂಟ್ ಮಂಜು" ಅಂತ ಬಿರುದು ಕೊಟ್ರು ಅಲ್ದೆ ಯಾರೋ ಒಬ್ರು ಕಾಮೆಂಟ್ಸ್ ಕೊಡ ಹಾಕಿದ್ರು, ಈ ಕಂದಾ, ಮುದ್ದು, ಬಂಗಾರ, ಚಿನ್ನ, ರನ್ನ ಇನ್ನು ಹೇಳ್ಬೇಕು ಅಂದ್ರೆ ಪೊರ್ಕಿ, ಲೂಸು, ಮೆಂಟ್ಲು, ಪೋಲಿ ಅಂತೆಲ್ಲಾ ಕೊಟ್ಟ ಹುಡುಗೀರ ಬಿರುದುಗಳಿಗಿಂತ ಇದ್ಯಾಕೋ ಹಾರ್ಟ್ ಟಚ್ ಮಾಡ್ತು ರೀ ಅದಕ್ಕೆ ಒಂದು ಕಾನ್ಸೆಪ್ಟ್  ತಗೊಂಡು ಈ ಪುರಾಣ ಬರ್ದಿದೀನಿ. ನೀವು ಕಷ್ಟ ಪಟ್ಟಾದರು ಓದಿ ಮುಗಿಯೋ ತನಕ ಬಿಡುಬೇಡಿ ಒಂದೇ ಟೈಮ್ ಓದುಬೇಕು ಗಮನ ಇಟ್ಟು ಓದಿ ಓದುವಾಗ ಎಲ್ಲೂ ನಿಲ್ಲಿಸಬಾರ್ದು ತುಂಬಾ ಹುಷಾರು ಯಾಕಂದ್ರೆ ನಾನು ಒಂದು ನಿಮಗೆ ಪ್ರಶ್ನೆ ಕೇಳ್ತೀನಿ ಜಾಗ್ರತೆ ಉತ್ತರ ಕೊಟ್ಟವರಿಗೆ ಸೂಕ್ತ ಬಹುಮಾನ ಇದೆ. 

     ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಅಂತ ಹೇಳ್ತಾರಲ್ಲ ಅದು ನಿಜ ಇರ್ಬೇಕು ಕಣ್ರೀ ಆನೆ ನಡೆದದ್ದೇ ದಾರಿ ಅನ್ನೋ ಹಾಗೆ ನಮ್ಮ ಗೋವಿಂದ ನಡೆದದ್ದೇ ದಾರಿ ಯಾರು ಮಾತು ಕೇಳೋನಲ್ಲ ಅವನದೇ ಹಠ...... ಹೀಗಿರುವಾಗ ಕೆಲವೊಬ್ರು ಅವನಿಗೆ ಊರಿಗೊಂದು ದಾರಿ ಆದ್ರೆ ಎಡವಟ್ಟನಿಗೆ ಒಂದು ದಾರಿ ಅಂತ ಬೆನ್ನು ಹಿಂದೇ ಹೇಳ್ತಾ ಇದ್ರೂ ಅವನು ಕೇಳಿದ್ರು ಕೇಳ್ದೆ ಇರೋ ಥರ ಇರ್ತಾ ಇದ್ದಾ . ಯಾಕಂದ್ರೆ ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತ ? ? ? ? 

ಈಗ ನೇರವಾಗಿ ವಿಷಯಕ್ಕೆ ಬರೋಣ ಕುಂತು ತಿಂದರೆ ಕುಡಿಕೆ ಹೊನ್ನು ಸಾಲದು ಅಂತ ದೊಡ್ಡವರು ಹೇಳಿದರೆ ಅಲ್ವ  ಅಲ್ದೆ  ಕೈ ಕೆಸರಾದರೆ ಬಾಯಿ ಮೊಸರು ಅಂತ ನಾನು ಚಿಕ್ಕವನಿರುವಾಗ ನಮ್ಮ ಟೀಚರ್ ಹೇಳ್ತಾ ಇದ್ರೂ  ಈಗ ನಮ್ಮ ಗೋವಿಂದ ಓದಿದ್ದು ಆಯ್ತು ಎಲ್ಲಾದ್ರು ಕೆಲಸ ಹುಡುಕೋಣ ಅಂತ ಯೋಚನೆ ಮಾಡ್ತಾ ಕೂತಿದ್ದ   ಅದೇನೋ ಹೇಳ್ತಾರಲ್ಲ ಕೆಟ್ಟು ಪಟ್ಟಣ ಸೇರು ಅಂತ ಆದರೆ ಇವನು ಇನ್ನು ಕೆಟ್ಟು ಹೋಗಿರಲಿಲ್ಲ...! ನೋಡೋಕೆ ಸಾದು ಥರ ಇದ್ದಾ, ತನ್ನ ಊರಲ್ಲಿ ಕೆಲಸ ಮಾಡೋಕೆ ಇಷ್ಟ ಇರಲಿಲ್ಲ ಅವನಿಗೆ ಅದಕ್ಕೆ ಬೆಂಗಳೂರಿಗೆ ಹೋಗಿ ಏನಾದ್ರು ಮಾಡೋಣ ಅಂತ ಯೋಚನೆ ಮಾಡ್ತಾ ಇರುವಾಗಲೇ ರೋಗಿ ಬಯಸಿದ್ದು ಹಾಲು ಅನ್ನ ವೈದ್ಯ ಹೇಳಿದ್ದು ಹಾಲು ಅನ್ನ ಅನ್ನೋ ಹಾಗೆ ಹಾಗೋ ಹೀಗೋ ಒಬ್ಬ ಪರಿಚಯ ಆಗಿ ಗೋವಿಂದನ್ನ ಬೆಂಗಳೂರಿಗೆ ಕರ್ಕೊಂಡು ಬಂದ, ಅವ್ನೋ.... ಮಾತು ಬೆಳ್ಳಿ ಮೌನ ಬಂಗಾರ ಥರ ಹೊಸ ಜಾಗ... ಹೊಸ ಫ್ರೆಂಡ್ಸ್.... ಹೇಗೋ ಹೊಂದಿ ಕೊಂಡಿದ್ದ ಬಂದು ಸ್ವಲ್ಪ ದಿನದಲ್ಲೇ ಕೆಲಸ ಸಿಕ್ತು,  ಪಾಲಿಗೆ ಬಂದಿದ್ದು ಪಂಚಾಮೃತ ಅಲ್ವ ಸಿಕ್ಕ ಕೆಲಸ ಸರಿಯಾಗಿ ಮಾಡಿಕೊಂಡು ಹೋಗ್ತಾ ತಿಂಗಳಿಗೆ ಸರಿಯಾಗಿ ಸಂಬಳ ತಗೊಂಡು ಆರಾಮಗಿದ್ದ. ಈ ಬೆಂಗಳೂರ್ ಸಿಟಿಗೆ ಬಂದಮೇಲೆ ಅವನಿಗೆ ದುಡಿಮೆಯೇ ದುಡ್ಡಿನ ತಾಯಿ ಅನ್ನೋದು ಅರಿವಾಯ್ತು, ಅವನಾದ್ರು ಒಂದೇ ಹತ್ರ ಎಷ್ಟು ದಿನ ಅಂತ ಕೆಲಸ ಮಾಡ್ತಾನೆ ಬೆರಳು ತೋರಿಸಿದರೆ ಹಸ್ತ ನುಂಗೋ ವಂಶ ಅವಂದು ಆಗಲೇ ಫುಲ್ ಕೆಲಸ ಕಲ್ತಿದ್ದ ನಯಶಾಲಿ ಆದವನು ಜಯಶಾಲಿ ಆದನು ಅಂತ  ಬೇರೆಕಡೆ ಎಲ್ಲೇ ಹೋದ್ರು ಬದುಕ್ತೀನಿ ಅನ್ನೋ ಧೈರ್ಯದಿಂದ ಬೇರೆ ಕೆಲಸಕ್ಕೆ ಸೇರ್ಕೊಂಡ. 

ರವಿ ಕಾಣದನ್ನ ಕವಿ ಕಂಡ ಅನ್ನೋ ಮಾತು ಎಷ್ಟು ನಿಜ ರೀ ಒಂದು ದಿನ ಗೋವಿಂದ ಹೊಟ್ಟೆ ತುಂಬಾ ಊಟ ಮಾಡಿ ಮಲ್ಕೊಂಡಿದ್ದ ರಾತ್ರಿ ಕನಸಲ್ಲಿ ಕಾಜೋಲ್ ಜೊತೆ ಶೂಟಿಂಗ್ ಇತ್ತು  ಐಶ್ವರ್ಯ  ಆಕಡೆ ಇಂದ ಗೋ...ಗೋ....ಗೋ... ಗೋವಿಂದಾ........... ಅಂತ ಓಡಿ ಬರ್ತಾ ಇದ್ಲು ಈ ಕಡೆ ಇಂದ ಗೋವಿಂದ .............ಐಶ್ವರ್ಯ  ಅಂತ ಓಡಿ ಬರ್ತಾ ಇದ್ದ ಇನ್ನೇನು ಇಬ್ರು ಹತ್ರ ಬಂದ್ರು ಬಂದ್ರು ಬಂದೆ ಬಿಟ್ರು ಅನ್ನೋ ಅಷ್ಟರಲ್ಲಿ  ಶಿವ ಪೂಜೆಲಿ ಕರಡಿ ಬಿಟ್ಟಂತೆ  ಅವ್ನ ಫ್ರೆಂಡ್ ಗೋವಿಂದ ಯಾಕೋ ಈ ಥರ ಕೂಗ್ತಾ ಇದೀಯ ಬೆಳಗ್ಗೆ 8 ಘಂಟೆ ಆಯ್ತು ಎದ್ದೇಳೋ ಅಂತ ಎಬ್ಬಿಸಿ ಬಿಟ್ಟ ಕಣ್ರೀ ಪಾಪ ಗೋವಿಂದನ ಕನಸು ಅಲ್ಲಿಗೆ ಮುಕ್ತಯಾ ಆಯ್ತು ಹಿಂಗಾಗಬಾರ್ದಿತ್ತು ಅಲ್ವ !  ಹೋಗ್ಲಿ ಬಿಡಿ ಅದ್ಯಾಕೆ ಈಗ ಕೊಂಕಣ ಸುತ್ತಿ ಮೈಲಾರಕ್ಕೆ ಯಾಕ ಬರೋದು ನೇರ ವಿಷ್ಯಕ್ಕೆ ಬರೋಣ, ಹುಟ್ಟು ಗುಣ ಸುಟ್ರು ಹೋಗೋಲ್ಲ ಅಂತಾರೆ ಅಂತದ್ರಲ್ಲಿ ಈ ಗೋವಿಂದನಿಗೆ  ರಾತ್ರಿ ಮಲ್ಗೊವಾಗ ಒಂದು ಬೀಡಿ ಸೇದೋ ಅಭ್ಯಾಸ ಇತ್ತು ಅವತ್ತೊಂದು ದಿನ ಹೊರಗಡೆ ಹೋಗಿ ಬೀಡಿ ಸೇದೋಣ ಅಂತ ಅನ್ಕೊಂಡ ಆದ್ರೆ ತುಂಬಾ ಮಳೆ ಬರ್ತಾ ಇತ್ತು ಫ್ರೆಂಡ್ಸ್ ಎಲ್ಲಾ ಮಲ್ಕೊಂಡಿರೋದು ನೋಡಿ ತಾನು ಇದ್ದಲ್ಲೇ ಬೀಡಿ ಹಚ್ಚಿಕೊಂಡು ಸೇದುತ್ತ ಕೂತ, ಬೀಡಿ ಹಾಚ್ಚೋವಾಗಿ ಬೆಂಕಿ ಕಡ್ಡಿ ಗೀರಿ ಅದೆಲ್ಲಿ ಎಸೆದ್ನೋ ಏನೋ ಸ್ವಲ್ಪ ಹೊತ್ತಲ್ಲೇ ಇಡಿ ಮನೆಗೆ ಬೆಂಕಿ ಹತ್ತಿ ಹೋಯ್ತು ಕೋತಿ ತಾನು ಕೆಡೋದಲ್ದೆ ವನನೆಲ್ಲ ಕೆಡಿಸ್ತು ಅನ್ನೊ ಮಾತು ಜೊತೆಗಿದ್ದ ಫ್ರೆಂಡ್ಸ್ ಬಾಯಲ್ಲಿ ಬಂದ್ರು ಯಾರು ಅವನಿಗೆ ಏನು ಅನ್ಲಿಲ್ಲ ಯಾಕಂದ್ರೆ ಅವನನ್ನ ಕೆಡೋಥರ ಮಾಡಿದ್ದೆ ಅವರು. ನಾಯಿ ಬಾಲ ಯಾವತ್ತಿದ್ರೂ ಡೊಂಕು ಅಲ್ವ ಕಡ್ಡಿನ ಗುಡ್ಡ ಮಾಡೋ ಸ್ವಭಾವ ನಮ್ಮ ಗೋವಿಂದಂದು ಪಕ್ಕದ ಮನೆ ಪದ್ಮಕ್ಕನ ಮಗಳು ಕಾಲೇಜ್ ಮುಗಿಸ್ಕೊಂಡು ಬೈಕ್ ನಲ್ಲಿ ಒಬ್ಬ ಹುಡುಗನ ಜೊತೆ ಸುತ್ತೊದನ್ನ ನೋಡಿ ಸೀದಾ ಪದ್ಮಕ್ಕನ ಮನೆಗೆ ಹೋಗಿ ನಿಮ್ಮ ಮಗಳು ಇದಾಳಲ್ಲ ಅವಳು ಅದ್ಯಾರೋ ಹುಡುಗುನ್ ಜೊತೆ ಹಾಗೆ ಹೀಗೆ ಅಂತೆಲ್ಲ ಇಲ್ದೆ ಇರೋದನ್ನೆಲ್ಲ ಹೇಳಿ ಪದ್ಮಕ್ಕನ ಕೈಲಿ ನಾಯಿ ಥರ ಹೊಡಿಸ್ಕೊಂಡಿದ್ದ ಯಾಕಂದ್ರೆ ಪದ್ಮಕ್ಕನ ಮಗಳ ಜೊತೆ ಇದ್ದದ್ದು ಪದ್ಮಕ್ಕನ ಅಳಿಯ ಮಗಳಿಗೆ ಮದುವೆ ಮಾಡಿ ಇನ್ನು 3 ತಿಂಗಳು ಆಗಿರಲಿಲ್ಲ..! ಕೆಲಸವಿಲ್ಲದ ಆಚಾರಿ ಮಗನ ತಲೆ ಕೆತ್ತಿದಂತೆ ಇವನು ಏನಾದ್ರು ಒಂದು ಮಾಡ್ತಾ ಇರ್ತಾನೆ ಕೊಚ್ಚೆ ಮೇಲೆ ಕಲ್ಲು ಹಾಕಿ ಸಿಡಿಸ್ಕೊಳ್ಳೋದು ನಮ್ಮ ಗೋವಿಂದನಿಗೆ ಹೊಸದಲ್ಲ ಬಿಡಿ.

ಗೋವಿಂದನ ಈ ಆಟಗಳನ್ನ ನೋಡಿ ಬೆಂಗಳೂರು ಬಿಡಿಸಿ ಊರಲ್ಲಿ ಹೊಲ ಗದ್ದೆ ನೋಡ್ಕೊಂಡು ಇರು ಅಂತ ಹೇಳಿ ಅಪ್ಪ ಅಮ್ಮ ಅವನಿಗೆ ಒಂದು ಮದುವೆ ಮಾಡ್ತಾರೆ ಮದುವೆ ಆದ ಸ್ವಲ್ಪ ದಿನದಲ್ಲೇ ಹೆಣ್ಣು ಕೊಟ್ಟ ತಂದೆ ತಾಯಿ ಗಿಣಿ ಸಾಕಿ ಗಿದಗನ ಕೈಗೆ ಕೊಟ್ವಿ ಅಂತ ಗೊತ್ತಾಗುತ್ತೆ ಹೀಗಿರುವಾಗ ಹಬ್ಬಕ್ಕೆ ಅಂತ ಹೆಂಡ್ತಿ ಜೊತೆ ಮಾವನ ಮನೆಗೆ ಹೋದ್ರೆ ಅತ್ತೆ ಗೌರಿ ಹಬ್ಬಕ್ಕೆ ಬಂದ ಗತಿಗೆಟ್ಟ ಅಳಿಯ ಅಂತ ಮನಸ್ಸಲ್ಲೇ ಅನ್ಕೊಂಡು ಸ್ನಾನಕ್ಕೆ ಅಂತ ಬಚ್ಚಲ ಮನೆಗೆ ಕಳಿಸಿದ್ರೆ ತಾನು ಸ್ನಾನ ಮಾಡೋದು ಬಿಟ್ಟು ಹಂಚು ತಗೆದು ಪಕ್ಕದ ಮನೆಯವರು ಸ್ನಾನ ಮಾಡೋದು ನೋಡಿ ಸಿಕ್ಕು ಬಿದ್ದು ಊರೆಲ್ಲ ಸೇರಿ ಹೊಡಿಯೋಕು ಮುಂಚೆ ಹೆಂಡ್ತಿ ಕರ್ಕೊಂಡು ಹೇಳ್ದೆ ಕೇಳ್ದೆ ಊರು ಬಿಟ್ಟು ತನ್ನೂರಿಗೆ ಬಂದಿದ್ದ. ಇವನ ತರ್ಲೆಗಳನ್ನ ನೋಡಿ ನೋಡಿ ಸಾಕಾಗಿದ್ದ ಅವನ ಹೆಂಡ್ತಿಗೆ ಜೀವನ ತಾಳ ತಪ್ಪಿದ ಬಾಳು ತಾಳಲಾರದ ಗೋಳು ಆಗಿತ್ತು.

ಹಂಗು ಹಿಂಗು ಗೋವಿಂದ ಕಷ್ಟ ಪಟ್ಟು ಒಂದು ಮಗುನ ತನ್ನ ಹೆಂಡ್ತಿ ಕೈಗೆ ಕೊಟ್ಟಿದ್ದ. ಅದೋ ಗಂಡು ಮಗು ಆ ಮಗು ಬಗ್ಗೆ ಹೇಳ್ಬೇಕು ಅಂದ್ರೆ ಎಲ್ಲಾ ಗೋವಿಂದನ ಥರಾನೆ ಅಪ್ಪ ಗುಡಿ ಕಟ್ಟಿದರೆ ಮಗ ಕಳಸ ಇಟ್ಟ ಅನ್ನೋದಕ್ಕೆ ಆ ಮಗುನೆ ಸಾಕು. ಇನ್ನು ನಮ್ಮ ಗೋವಿಂದನ ಕಂಡ್ರೆ  ಹೆತ್ತೋರ್ಗೆ ಹೆಗ್ಗಣ ಮುದ್ದು ಕಟ್ಗೊಂಡೋರ್ಗೆ ಕೋಡಂಗಿ ಮುದ್ದು ಅನ್ನೋದನ್ನ ಅವನ ತಂದೆ ತಾಯಿ ಅಲ್ದೆ ಹೆಂಡ್ತಿ ಕೊಡ ನಿಜ ಮಾಡಿ ಬಿಟ್ಟಿದ್ರು ಅವನು ಬದಲಾಗೊಲ್ಲ ಅಂತ ಗೊತ್ತಿದ್ದೇ ಅವರು ಅವನಿಗೆ ಬುದ್ಧಿ ಹೇಳೋಕೆ ಹೋಗ್ತಾ ಇರ್ಲಿಲ್ಲ ಯಾಕಂದ್ರೆ ಬೋರ್ಗಲ್ಲ ಮೇಲೆ ನೀರು ಸುರಿದಂತೆ ಏನೆ ಹೇಳಿದ್ರು ಉಪಯೋಗ ಇಲ್ಲಾ ಅಂತ ಸುಮ್ನೆ ಇರ್ತಾ ಇದ್ರೂ. 

ಹೋಗ್ಲಿ ಬಿಡಿ ನಿಮಗ್ಯಾಕೆ  ಆ ಮುಸಿಕಿನೊಳಗೆ ಗುದ್ದಿಸಿಕೊಳ್ಳೋ ಗೋವಿಂದನ ವಿಚಾರ ಓದಿದ್ದು ಆಯ್ತಲ್ಲ ಅವನ ಕಥೆ,  ನಾನು ನಿಮಗೆ ಮೊದ್ಲೇ ಹೇಳಿದ್ದೆ ಒಂದು ಪ್ರಶ್ನೆ ಕೇಳ್ತೀನಿ ಅಂತ ಆ ಟೈಮ್ ಬಂದಿದ್ದೆ ಈಗ ಹೇಳಿ 

1. ಈ ಪುರಾಣದಲ್ಲಿ ಒಟ್ಟು ಎಷ್ಟು ಗಾದೆಗಳು ಇವೆ ?
2. ಇಲ್ಲಿ ಇರುವ ಗಾದೆಗಳಲ್ಲಿ ಅತಿ ಚಿಕ್ಕ ಗಾದೆ ಯಾವ್ದು ?

 ಸರಿಯಾಗಿ ಹೇಳಿದ ಮೊದಲ 3 ಆತ್ಮೀಯರಿಗೆ ಸೂಕ್ತ ಬಹುಮಾನ ಇರುತ್ತೆ ಮರೆಯ ಬೇಡಿ ತ್ವರೆ ಮಾಡಿ ...!






       ನಿಮ್ಮ ಹುಡುಗ

?ದೊಡ್ಡಮನಿ.ಮಂಜು

         97424 95837

Wednesday, 8 September 2010

ಮಂಜು ಹೀಗೇನೆ ..!

ಪಂಚರಂಗಿ ಚಿತ್ರದ "ಲೈಫು ಇಷ್ಟೇನೇ" for a change
"ಮಂಜು ಹೀಗೇನೆ"