ಸತ್ಯವನ್ನೇ ನುಡಿಸು ಗುರುವೇ ನರವಿಲ್ಲದ ಜಿಹ್ವೆಯೋಳ್ ! ಸ್ಥಿರವಾಗಿ ನೆಲೆಸು ಗುರುವೇ ಮರ್ಕಟ ಈ ಮನದೊಳ್ !

Tuesday, 15 June 2010

I MISS YOU

ಓದುವ ಮುನ್ನ:-
ನನ್ನ ಕಲ್ಪನೆಗೆ ಬಣ್ಣ ತುಂಬಿ ಈ ಕತೆ ಹುಟ್ಟೋಕೆ ಕಾರಣರಾದ ಆರ್ಕುಟ್ ಗೆಳತಿ ಶಿಲ್ಪ ಗೆ ತುಂಬ ಥ್ಯಾಂಕ್ಸ್ ಹೇಳ್ತಾ ಇದೀನಿ.
"ಹೂ ಬಾಡಿ ಹೋಗುತ್ತೆ ಅಂತ ಗೊತ್ತಿದ್ರು
ಪ್ರೀತಿಗೆ ಅರ್ಥನೇ ಗೊತ್ತಿಲ್ದಿರೋ ಒಂದು ಹೃದಯಕ್ಕೆ
ಪ್ರಾಣ ಲೆಕ್ಕಿಸದೆ ಆ ಹೂ ನಾ ತಂದು ಕೊಟ್ಟೆ
ಇನ್ನು ಏನು ಅರಿಯದ ಪುಟ್ಟ ಹೃದಯದ
ಈ ಪ್ರೀತಿಗೆ ಇಲ್ಲಾ ಅಂತಿನಾ ಇಲ್ಲೇ ಇರು ಬರ್ತೀನಿ"



ಅರೆ ಮಲೆನಾಡಿನ ಚಿಕ್ಕ ಊರು ಆ ಊರಲ್ಲಿ ಇದದ್ದು ಕೇವಲ ಬೆರಳೆಣಿಕೆ ಅಷ್ಟು ಜನ ಅದ್ರಲ್ಲಿ ಊರಿನ ಶ್ರೀಮಂತ ತಂದೆ ಒಬ್ಬನ ಮಗಳೇ ನವ್ಯ ಆ ಊರಿನ ಪಕ್ಕದಲ್ಲೇ ಇರೋ ಚಿಕ್ಕ ಹಳ್ಳಿಯ ಮದ್ಯಮ ವರ್ಗದ ತಾಯಿ ಒಬ್ಬಳ ಮಗ ಮನು,

ಮನು ಮತ್ತು ನವ್ಯ ತುಂಬಾ ದಿನಗಳಿಂದ ಒಳ್ಳೆ ಫ್ರೆಂಡ್ಸ್ ಹೀಗೆ ಗೆಳತನ ಮುಂದುವರೆದು ಒಳ್ಳೆ ಪ್ರೇಮಿಗಳು ಆಗ್ತಾರೆ ಒಬ್ಬರನ್ನ ಬಿಟ್ಟು ಒಬ್ರು ಇರೋದಿಲ್ಲ ಪ್ರತಿ ದಿನ ಸಂಜೆ ಊರಿಂದ ಸ್ವಲ್ಪ ದೂರ ಇರೋ ಬೆಟ್ಟದಲ್ಲೇ ಅವರಿಬ್ಬರ ಭೇಟಿ ಮನು ಮನೆಯಲ್ಲಿ ಅವನ ತಾಯಿ ಬಿಟ್ರೆ ಬೇರೆ ಯಾರು ಇಲ್ಲಾ ಮನು ಆಗ್ಲೇ ತನ್ನ ತಾಯಿಗೆ ನವ್ಯಳ ಬಗ್ಗೆ ಹೇಳಿ ಮದುವೆಗೆ ಒಪ್ಪಿಗೆ ತಗೊಂಡಿರ್ತನೆ ಆದ್ರೆ ನವ್ಯಳಗೆ ತಾಯಿರೋದಿಲ್ಲ ಎಲ್ಲಾನು ತಂದೇನೆ ಸ್ವಲ್ಪ ಕಟು ಹೃದಯದವರು ಅಲ್ದೆ ತುಂಬಾ ಶ್ರೀಮಂತ ಅನ್ನೋ ಅಹಂ ಬೇರೆ ಹಾಗಾಗಿ ನವ್ಯ ಯಾವತ್ತು ಮನು ಬಗ್ಗೆ ತನ್ನ ಲವ್ ಬಗ್ಗೆ ತಂದೆ ಹತ್ರ ಹೇಳಿರಲಿಲ್ಲ ತಾಯಿ ಇಲ್ದೆ ಬೆಳೆದ ನವ್ಯ ತನ್ನ ತಂದೆ ಎದ್ರುಗೆ ನಿಂತು ಮಾತಾಡೋಕೆ ಹೆದ್ರುತ ಇದ್ಲು

(ಸಂಜೆ ಒಂದರ ಬೆಟ್ಟದ ಮೇಲೆ)

ನವ್ಯ : ಲೋ ನಾನು ಹೇಳೋದು ಕೇಳ್ತಿಯ ಸ್ವಲ್ಪ ..!

ಮನು : ಕೇಳ್ತಾನೆ ಇದಿನಲ್ಲ ಇನ್ನು ಏನು ಕೇಳಬೇಕು ಇಲ್ಲಿಂದ ಬಿಳ್ಬೇಕಾ ..?

ನವ್ಯ : ಲೋ ಗೂಬೆ ನಾನು ಬಿಳು ಅಂತ ಹೇಳಿದ್ನಾ ! ಸ್ವಲ್ಪ ಮುಂದೆ ಹೋಗು ಕೈಗೆ ಸಿಗುತ್ತೆ ..!

ಮನು : ಇನ್ನು ಮುಂದೆ ಹೋದ್ರೆ ಅಷ್ಟೇ ನನ್ನ ಕತೆ, ಕಾಲು ಜಾರಿ ಬಿದ್ರೆ ನನ್ನ ಮುಳೇನು ಸಿಗೋಲ್ಲ

ನವ್ಯ : ನಿನಗೆ ಮೂಳೆ ಬೇರೆ ಇದೇನಾ ... ?

ಮನು : ಏನ್ ಜೋಕ್ ಮಾಡ್ತಾ ಇದಿಯಾ, ಈ ಚಿಕ್ಕ ಹೂವಿಗೋಸ್ಕರ ನಾನು ಪ್ರಾಣನು ಲೆಕ್ಕಿಸದೆ ಈ ಬೆಟ್ಟದ ತುದಿಗೆ ಬಂದಿದೀನಿ ನೀನು ನೋಡಿದ್ರೆ ಜೋಕ್ ಮಾಡ್ತಾ ಇದಿಯಾ ..!

ನವ್ಯ : ಹೇ ಇಲ್ಲಾ ಕಣೋ ಸುಮ್ನೆ ತಮಾಷೆ ಮಾಡ್ತಾ ಇದ್ದೆ ಬೇಗಾ ತಗೊಂಡು ಬಾರೋ

ಮನು : ತಾಳು ಬಂದೆ

ನವ್ಯ : ಹುಷಾರು ಕಣೋ

ಮನು : ಉಫ್ ..... ಸುಸ್ತಾಯ್ತು ಕಣೆ ತಗೋ ಹೂವು :)

ನವ್ಯ : ತುಂಬಾ ಥ್ಯಾಂಕ್ಸ್ ಕಣೋ

ಮನು : ಅಷ್ಟೇನಾ .. ?

ನವ್ಯ : ಇನ್ನೇನು ಹೇಳ್ಬೇಕು ?

ಮನು : ಅಲ್ಲಾ ನಾನು ನೀನು ಕೇಳ್ದೆ ಅಂತ ಕಷ್ಟ ಪಟ್ಟು ಹೂವು ತಂದು ಕೊಟ್ಟಿದೀನಿ ಬೇರೆ ಏನಾದ್ರು ಹೇಳ್ಬೇಕು ಅನಿಸ್ತ ಇಲ್ವಾ !

ನವ್ಯ : ಐ ಲವ್ ಯೌ ಅಂತ ಹೇಳಬೇಕಿತ್ತ .. ?

ಮನು : ನಿನಗೆ ಅಷ್ಟೊಂದು ಧೈರ್ಯ ಇಲ್ಲಾ ಬಿಡು

ನವ್ಯ : ಲೇ. . . . ಲೂಸ್ ........ ಧೈರ್ಯ ಇಲ್ದನೆ ನಿನ್ನ ಲವ್ ಮಾಡಿದ್ನ ನಾನು.. ?

ಮನು : ಒಂದು ಸಾರಿ ಐ ಲವ್ ಯೌ ಅಂತ ಹೇಳೋಕೆ ಒಂದು ಘಂಟೆ ಟೈಮ್ ತಗೊಂಡಿದ್ದೆ ನೀನು ನೆನಪಿದೆನಾ ....

ನವ್ಯ : ಹೌದು ಕಣೋ ನೀನು ಜೊತೆ ಇದ್ರೆ ನನಗೆ ಮಾತೆ ಹೊರಡಲ್ಲ ನಿನ್ನ ಜೊತೆ ಹೀಗೆ ಸುಮ್ನೆ ಕುತುಕೊಳ್ಳೋಣ ಅನಿಸುತ್ತೆ ನಾನು ನಿನ್ನಿಂದ ಎಲ್ಲಿ ದೂರ ಆಗ್ತಿನೋ ಅನ್ನೋ ಭಯ ಆದ್ರೆ ಒಂದು ನಿಜ ಕಣೋ ನಿನ್ನ ಬಿಟ್ಟು ಮಾತ್ರ ಬಾಳೋದಿಲ್ಲ ಹೇಗಾದ್ರು ಮಾಡಿ ಅಪ್ಪನ ಒಪ್ಪಿಸಿ ನಿನ್ನೆ ಮಧುವೆ ಆಗ್ತೀನಿ... :)

ಮನು : ಆಗ್ತೀನಿ ಅಲ್ಲಾ ಆಗೇ ಆಗ್ತೀನಿ ಅಂತ ಹೇಳು :)

ನವ್ಯ : ಆಯ್ತು ಬಿಡೋ ಲೋ.. ಒಂದು ವಿಷಯ ಕೇಳ್ಲ .. ?

ಮನು : ಹ್ಮ ಕೇಳು ಡಿಯರ್ ?

ನವ್ಯ : ಆಕಸ್ಮಾತ್ ನಾನೇನಾದ್ರು ನಿನ್ನ ಬಿಟ್ಟು ಬೇರೆ ಯಾರನಾದ್ರು ಮದುವೆ ಆದ್ರೆ ನೀನು ಏನೋ ಮಾಡ್ತಿಯ ? ? ?

ಮನು : ನಾನೇನು ಮಾಡ್ಲಿ ನಾನು ಬೇರೆಯಾರ್ನಾದ್ರು ಮಧುವೆ ಆಗ್ತೀನಿ ಸಿಂಪಲ್ :)

ನವ್ಯ : ಅಯ್ಯೋ ಅಷ್ಟೇನಾ ನಾನೆಲ್ಲೋ ನನ್ನ ನೆನಪಲ್ಲಿ ಬಾಟಲಿ ಹಿಡ್ಕೊಂಡು ರೋಡ್ ರೋಡ್ ಅಲಿತಿಯ ಅನ್ಕೊಂಡಿದ್ದೆ

ಮನು : ಸರಿ ಸರಿ ಬಾ ಟೈಮ್ ಆಯ್ತು ಹೋಗೋಣ ನಿಮ್ಮ ಅಪ್ಪ ಕಾಯ್ತಾ ಇರ್ತಾರೆ ನಿನಗೆ ಯಾವಗಲು ತಮಾಷೇನೆ

ನವ್ಯ : ತಮಾಷೆ ಅಲ್ಲಾ ಕಣೋ ನಿಜವಾಗಲು ಕೇಳ್ತಾ ಇದೀನಿ ಹೇಳೋ ? ಹೋಗ್ಲಿ ನಾನು ನನ್ನ ಮದುವೆಗೆ ನಿನ್ನ ಇನ್ವೈಟ್ ಮಾಡಿದ್ರೆ ಏನ್ ಅಂತ ವಿಶ್ ಮಾಡ್ತಿಯ ..?

ಮನು : ಒಳ್ಳೆ ಸಹವಾಸ ಅಯ್ತಲ್ವೆ ನಿಂದು ! ನನ್ನಿಂದ ಮಿಸ್ ಆದ ಈ ಮಿಸ್ ಗೆ ಏನು ವಿಶ್ ಮಾಡ್ಲಿ ಐ ಮಿಸ್ ಯೌ ಡಿಯರ್ ಅಂತೀನಿ ಅಸ್ಟೇ ..!

ನವ್ಯ : ಅಷ್ಟೇನಾ .. ?

ಮನು : ಮತ್ತೇನು ಹೇಳ್ಬೇಕು ಎಲ್ಲಾ ಆದಮೇಲೆ ?

ನವ್ಯ : ನಾನೆಲ್ಲೋ ನನ್ನ ಸಿಕ್ಕಾಪಟ್ಟೆ ಬೈದು ಮಧುವೆ ಮನೇಲಿ ಗಲಾಟೆ ಮಾಡ್ತಿಯ ಅನ್ಕೊಂಡಿದ್ದೆ ಹ್ಹ ಹ್ಹ ಹ್ಹ ಹ್ಹ

ಮನು : ಒಂದಂತ್ತು ನಿಜ ಕಣೆ ನನ್ನ ಜಾಗದಲ್ಲಿ ನಿನ್ನ ಜೊತೆ ನನ್ನ ಬಿಟ್ಟು ಬೇರೆಯಾರನ್ನದ್ರು ನಾ ನೋಡ್ದೆ ಅಂತ ಇಟ್ಕೋ.... ಅವತ್ತೇ ನನ್ನ ಕೊನೆ ಅಂತ ತಿಳ್ಕೋ

ನವ್ಯ : ಈಗ ಆ ಹಳೆ ಫಿಲ್ಮ್ ಡೈಲಾಗ್ ಬೇಕಾ ನಿನಗೆ ..?

ಮನು : ಅಂದ್ರೆ ನಾನು ಯಾವ್ದೋ ಫಿಲ್ಮ್ ಡೈಲಾಗ್ ಹೇಳ್ತಾ ಇದೀನಿ ಅಂತನಾ.. ?

ನವ್ಯ : ಸುಮ್ನೆ ತಮಾಷೆ ಮಾಡ್ದೆ ಕಣೋ ನಿನ್ನ ಬಿಟ್ಟು ಒಂದು ನಿಮಿಷನು ಇರೋಕೆ ಆಗೋಲ್ಲ ನನಗೆ, ಐದು ವರ್ಷದಿಂದ ಲವ್ ಮಾಡ್ತಾ ಇದೀನಿ ಅದು ಹೇಗೆ ಬೇರೆ ಮಧುವೆ ಆಗ್ತೀನಿ ಹೇಳು ..? ಅಪ್ಪನ್ನ ಬಿಟ್ಟು ಬೇಕಾದ್ರೂ ಬರ್ತೀನಿ ನಿನ್ನ ಬಿಟ್ಟು ಮಾತ್ರ ಹೋಗೋಲ್ಲ ನನ್ನಾಣೆ :) ಇವತ್ತು ತುಂಬಾ ನಿನ್ನ ನೋಯಿಸಿಬಿಟ್ಟೆ ಅನಿಸುತ್ತೆ ಬಾ ಹೋಗೋಣ ಟೈಮ್ ಆಯ್ತು !

( ಮಧ್ಯ ರಾತ್ರಿ )

ನವ್ಯ : ಹಲೋ ಮನು ಏನೋ ಮಾಡ್ತಾ ಇದೀಯ

ಮನು : ಎಲ್ಲಾ ಲೈಟ್ ಆಫ್ ಮಾಡಿಕೊಂಡು ರಾ..ರಾ...ಸರಸಕು ರಾ...ರಾ. ಸಾಂಗ್ ಗೆ ಡಾನ್ಸ್ ಮಾಡ್ತಾ ಇದೀನಿ

ನವ್ಯ : ಲೋ... ಗೂಬೆ ತಮಾಷೆ ಮಾಡ್ಬೇಡ್ವೋ

ಮನು : ತಮಾಷೆ ನಾನ್ ಮಾಡ್ತಾ ಇದಿನ ನಿನ್ ಮಾಡ್ತಾ ಇದೀಯ ಅಲ್ಲಾ ಮಧ್ಯ ರಾತ್ರಿ ಕಾಲ್ ಮಾಡಿ ಏನ್ ಮಾಡ್ತಾ ಇದೀಯ ಅಂತ ಕೇಳ್ತಿಯಲ್ಲ ರಾತ್ರಿ ಏನ್ ಮಾಡ್ತಾರೆ ..?

ನವ್ಯ : ಏನಾದ್ರು ಮಾಡು ನನಗೀಗ ಆ ಹೂವು ಬೇಕು ಅಷ್ಟೇ

ಮನು : ಯಾವ್ ಹೂವು ಡಿಯರ್ ?

ನವ್ಯ : ಅದೇ ಸಂಜೆ ನೀನು ಆ ಬೆಟ್ಟದ ತುದಿಗೆ ಹೋಗಿ ತಗೊಂಡು ಬಂದಲ್ಲ ಅದು ಕಣೋ

ಮನು : ಅದನ್ನ ಅವಗ್ಲೆ ಕೊಟ್ನಲ್ಲ ನವ್ಯ

ನವ್ಯ : Sorry ಕಣೋ ನಾನು ನಿನ್ನ್ನ ಜೊತೆ ಮಾತಾಡ್ತಾ ಅದನ್ನ ಅಲ್ಲೇ ಬಿಟ್ಟು ಬಿಟ್ಟೆ ಲೋ ಪ್ಲೀಸ್ ಕಣೋ ನನಗೆ ಅದು ಬೇಕು ಹೇಗಾದ್ರು ಮಾಡಿ ತಗೊಂಡು ಬಾರೋ

ಮನು : ಆಯ್ತು ಬೆಳಗ್ಗೆ ತಗೊಂಡು ಬಂದು ಕೊಡ್ತೀನಿ ಈಗ ಮಲ್ಕೋ

ನವ್ಯ : ಲೋ ನನಗೆ ಈಗಲೇ ಬೇಕು ಕಣೋ ನನಗೋಸ್ಕರ ಅಷ್ಟು ಮಾಡಲ್ವ ಪ್ಲೀಸ್ ಕಣೋ ನೀನು ಇಷ್ಟೇನಾ ನಿನ್ನ ಲವ್.

ಮನು : ಹೇ ಚಿನ್ನು ನನ್ನ ಲವ್ ಮೇಲೆ ನಿನಗೆ ಡೌಟಾ ತಾಳು ಇನ್ನೊಂದು ಘಂಟೆಲಿ ಆ ಹೂವು ನಿನ್ನ ಕೈಯಲ್ಲಿ ಇರುತ್ತೆ

( ಮನು ಫೋನ್ ಸ್ವಿಚ್ ಆಫ್ ಮಾಡ್ತಾನೆ )

ನವ್ಯ : ಹಲೋ... ಹಲೋ... ಮನು ನಾನು ಸುಮ್ನೆ ಹೇಳ್ದೆ ಕಣೋ ಹಲೋ...

*

*

*

*

ಸ್ವಲ್ಪ ಸಮಯದ ನಂತರ ಮನು ಮತ್ತೆ ನವ್ಯಗೆ ಫೋನ್ ಮಾಡ್ತಾನೆ

ನವ್ಯ : ಹಲೋ ಏನೋ ಮದ್ಯ ರಾತ್ರಿ ನಿಂದು

ಮನು : ಹೂವು ಬೇಕು ಅಂದೆಲ್ಲ ತಗೊಂಡು ಬಂದಿದೀನಿ ನಿಮ್ಮ ಮನೆ ಹತ್ರದಲ್ಲೆ ಇದೀನಿ ಬಾ ಅಂದ್ರೆ ಮನೆ ಗೆ ಬರ್ತೀನಿ

ನವ್ಯ : ಲೋ ಗೂಬೆ ಇಷ್ಟೊತ್ತಲ್ಲಿ ಯಾಕೋ ಮನೆಗೆ ಬರ್ತೀಯ, ಅಪ್ಪ ನೋಡಿದ್ರೆ ಕಷ್ಟ ಕಣೋ ಹೂವು ಬೇಕಾದ್ರೆ ಬೆಳಗ್ಗೆ ತಗೋತೀನಿ ಈಗ ಹೋಗು.......
ನಾನೇನು ಸುಮ್ನೆ ತಮಷೆ ಮಾಡೋಕೆ ಹೇಳ್ದೆ ಅದನ್ನೇ ನೀನು ನಿಜ ಅನ್ಕೊಂಡು ಇಷ್ಟೊತ್ತಲ್ಲಿ ಆ ಬೆಟ್ಟಕ್ಕೆ ಹೋಗಿದಿಯಲ್ಲ ಏನ ಹುಚ್ಚನೋ ನೀನು

ಮನು : ನಿಜ ಕಣೆ ನಾನು ಹುಚ್ಚನೆ ನಿನ್ನ್ನ ಲವ್ ನಲ್ಲಿ ಬಿದ್ದಿರೋ ದೊಡ್ಡ ಹುಚ್ಚ, ನೀನು ನನಗೆ ನಿನ್ನ ಲವ್ ಇಷ್ಟೇನಾ ಅಂತ ಕೇಳ್ದೆ ಅಲ್ವ ಅದಕ್ಕೆ ನನ್ನ ಲವ್ ಏನು ಅಂತ ಗೊತ್ತಾಗಲಿ ಅಂತ ತಗೊಂಡು ಬಂದೆ, ಪರವಾಗಿಲ್ಲ ನಿನ್ನು ಮಲ್ಕೋ ನಾನು ಬೆಳಗ್ಗೆನೇ ಕೊಡ್ತೀನಿ

ನವ್ಯ : ಓಕೆ ಬೈ ಕಣೋ ಹುಷಾರಾಗಿ ಹೋಗು ಹೋಗ್ತಾ ರಸ್ತೆ ಸರಿ ಇಲ್ಲಾ ಮಳೆ ಬೇರೆ ಬರೋಹಾಗಿದೆ

ಮನು : ನಿನ್ನ ಮುಂದೆ ಆ ಮಳೆ ಯಾವ ಲೆಕ್ಕ ಬಿಡು..... ಸರಿ ನಿನ್ ಮಲ್ಕೋ

ನವ್ಯ : I Miss you da

ಮನು : No chance ನಾನು ಯಾವಾಗಲು ನಿನ್ನ ಜೊತೇನೆ ಇರ್ತೀನಿ ಆರಾಮಾಗಿ ನಿದ್ದೆ ಮಾಡು

ನವ್ಯ : Really I Miss You da... .... ... ಹಲೋ... ಹಲೋ... ಮನು

ಮನು : ಒಹ್ ಬ್ಯಾಟರಿ ಲೋ ಸ್ವಿಚ್ ಆಫ್

ಮನು ಅಲ್ಲಿಂದ ಮನೆಗೆ ಹೋಗಬೇಕಾದ್ರೆ ಮಳೆ ಬರ್ತಾ ಇರುತ್ತೆ ಅಲ್ದೆ ರಸ್ತೆ ಹಾಳಾಗಿರುತ್ತೆ ಬೈಕ್ನಾ ಹೆಡ್ ಲೈಟ್ ಬೇರೆ ಕೆಡುತ್ತೆ ನಡು ರಾತ್ರಿ ಕತ್ತಲಲ್ಲಿ ದಾರಿನೇ ಕಾಣತ ಇರೋದಿಲ್ಲ ಮನೆ ಮುಟ್ಟೋಕೆ ಇನ್ನು ೧ ಕಿ.ಲೋ.ಮೀಟರ್ ಇರುತ್ತೆ ಅದರಲ್ಲೂ ಹೇಗೋ ಮನೆ ಸೇರ್ಕೊಳ್ಳೋಣ ಅಂತ ನಿದಾನಕ್ಕೆ ಬೈಕ್ ನಲ್ಲಿ ಹೋಗ್ತಾ ಇರುವಾಗ ನೋಡ್ತಾ ನೋಡ್ತಾನೆ ಹಿಂದಿಂದ ಒಂದು ಲಾರಿ ಬಂದು ಮನು ಬೈಕ್ ಮೇಲೆ ಹಾದು ಹೋಗುತ್ತೆ.....! ! !.... ? ? ?


ಮನುಗೆ ಆಕ್ಸಿಡೆಂಟ್ ಆಗಿರೋ ವಿಷಯ ನವ್ಯಗೆ ಗೊತ್ತಾಗಿದ್ದೆ ತಡ ನೋಡ್ಬೇಕು ಅಂತ ತುಂಬಾ ಪ್ರಯತ್ನ ಪಡ್ತಾಳೆ ಆದ್ರೆ ಮನೆಯಲ್ಲಿ ಇವಳ ಮನುನ ವಿಷಯ ತಿಳಿದು ನವ್ಯಗೆ 2 ದಿನದಲ್ಲೇ ಬಲವಂತವಾಗಿ ಬೇರೆ ಒಬ್ಬನ ಜೊತೆ ಮಧುವೆ ಮಾಡಿ ಬಿಡ್ತಾರೆ, ಮನಸ್ಸು ಒಪ್ಪದೆ ಇದ್ರೂ ಅಪ್ಪನ ಮಾತಿಗೆ ಹೆದರಿ ಮದುವೆ ಆಗ್ತಾಳೆ.

ಆದ್ರು ಮನಸ್ಸು ಎಲ್ಲೋ ಒಂದು ಕಡೆ ಪ್ರತಿ ನಿಮಿಷನು I MissYou ಮನು ಅಂತ ನಿಟ್ಟುಸಿರು ಬಿಡ್ತಾ ಇರುತ್ತೆ ! ಬಿಡ್ಲೇ ಬೇಕು ಅಲ್ವ !

*

*

*

*

*

*

( ಐದು ವರ್ಷಗಳ ನಂತರ )


ಮನು ಅದೇ ಬೆಟ್ಟದ ಮೇಲೆ ಏನೋ ಯೋಚನೆ ಮಾಡ್ತಾ ಕುತಿರ್ತನೆ ಕಣ್ಣಲ್ಲಿ ನೀರು ತುಂಬಿಕೊಂಡು ತನ್ನ ದುಃಖನಾ ಯಾರಿಗೂ ಹೇಳ್ದೆ ಒಬ್ಬನೇ ನೋವು ಅನುಭವಿಸುತ್ತ ಹುಚ್ಚನ್ ಥರ ಆಗಿರ್ತಾನೆ, ತನ್ನ ತಾಯಿ ಒಬ್ಬಳನ್ನ ಬಿಟ್ಟು ಯಾರ್ ಜೋತೆನು ಮಾತಾಡೋಕೆ ಇಷ್ಟ ಪಡೋಲ್ಲ ತಾನಾಯ್ತು ತನ್ನ ಕೆಲಸ ಆಯ್ತು ಆದ್ರೆ ಸ್ವಲ್ಪ ದಿನಗಳ ಹಿಂದೇ ಅವ್ಳು ಇವನ ಬಿಟ್ಟು ಹೋದ್ಲು,

ಪ್ರತಿ ಸಂಜೆ ಈ ಬೆಟ್ಟಕ್ಕೆ ಬರೋದು ಮಾತ್ರ ಮರಿಥ ಇರ್ಲಿಲ್ಲ ತನಗೆ ಸಾಕಾಗೋ ತನಕ ಇಲ್ಲಿ ಕೂತು ಒಬ್ನೇ ಕಣ್ಣೀರ್ ಹಾಕ್ತ ಇರ್ತಾನೆ ಆಮೇಲೆ ಮನೆಗೆ ಎದ್ದು ಹೋಗ್ತಾನೆ ಹೀಗಿರುವಾಗ ಒಂದು ದಿನ ಮನು ಬೆಟ್ಟದ ಮೇಲೆ ಕಣ್ಣು ಮುಚ್ಚಿ ಕುಳ್ತಿರ್ತನೆ ಯಾರು ಹಿಂದಲಿಂದ ಬಂದು ಒಂದು ಪುಟ್ಟ ಕೈಗಳು ಅವನ ಕಣ್ಣು ಮುಚ್ಚುತ್ತವೆ. ಆ ಕೈಗಳ ಸ್ಪರ್ಶದಿಂದ ಮತ್ತೆ ಮನುಗೆ ಜೀವ ಬಂದಂತೆ ಭಾಸವಾಗುತ್ತೆ ಆ ಕೈಗಳನ್ನ ಹಿಡಿದು ತಿರುಗಿ ನೋಡಿದಾಗ ಅವನಿಗೆ ತುಂಬಾ ಆಶ್ಚರ್ಯ ಆಗುತ್ತೆ ಪರಿಚಯನೇ ಇರದೆ ಇರೋ ಒಂದು ಮುದ್ದಾದ ಚಿಕ್ಕ ಮಗು ಇವನಿಗೆ ಆ ಮುಖನ ಎಲ್ಲೋ ನೋಡಿದ ನೆನಪು ಆ ಮಗುನ ತನ್ನ ಹತ್ರ ಕರ್ದು . . .

ಮನು : ಯಾರು ಕಂದಾ ನೀನು ? ನಿನ್ನ ಹೆಸರೇನು ?

ಮಗು : ಅಂಕಲ್ ನಾನು ಪ್ರೀತಿ ಅಂತ

ಮನು : (ಅಕ್ಕ ಪಕ್ಕ ನೋಡಿ) ಒಹ್ ಈ ಬೆಟ್ಟದಮೇಲೆ ಹೇಗೆ ಬಂದೆ ಯಾರು ಜೊತೆಗೆ ಇಲ್ವಾ

ಮಗು : ಇಲ್ಲಾ ಅಂಕಲ್ ನಾನು ಮಮ್ಮಿ ಡ್ಯಾಡಿ ಜೊತೆ ಬಂದಿದ್ದೆ ಅವರೆಲ್ಲ ಆ ಕಡೆ ದೇವಸ್ತಾನಕ್ಕೆ ಹೋದ್ರು

ಮನು : ಮತ್ತೆ ನೀನ್ಯಾಕೆ ಇಲ್ಲಿಗೆ ಬಂದೆ ಹಾಗೆಲ್ಲ ಅಮ್ಮನ ಬಿಟ್ಟು ಬರ್ತರ

ಮಗು : ಅಲ್ಲಿ ನೋಡಿ ಆ ಹೂ ಕಾಣುತ್ತ ಇದೆಯಲ್ಲ ಅದನ್ನ ನಾನು ದ್ಯದಿಗೆ ಕಿತ್ತು ಕೊಡು ಅಂದೇ ಹ್ಹ ಹ್ಹ ಹ್ಹ ಡ್ಯಾಡಿ ಬೆತ್ತ ಹತ್ತೋಕೆ ಆಗ್ದನೆ ಹೆದರಿಕೊಂಡು ನನಗೆ ಬೈದ್ರು ಅದಕ್ಕೆ ನಾನು ಗೊತ್ತಿಲ್ಲದಂತೆ ಇಲ್ಲಿಗೆ ಬಂದೆ ಅಂಕಲ್ ಅಂಕಲ್ ನಿವಾದ್ರು ಆ ಹುವುನಾ ತಂದು ಕೊಡ್ತೀರ ನನಗೆ ಅದು ಬೇಕು ಇಲ್ಲಾಂದ್ರೆ ನಾನೇ ಹೋಗಿ ತಗೋತೀನಿ

ಮನು : ಹೇ ನಿಂತ್ಕೋ ಪುಟ ನಾನೇ ತಂದು ಕೊಡ್ತೀನಿ ಬಾ ಇಲ್ಲಿಯ

ಮಗು : ನಿಜವಾಗಲು ತಂದು ಕೊಡ್ತಿರಾ.... ಪ್ರಾಮಿಸ್ ಹಾಕಿ

ಮನು : ನಿಜ ಕಂದಾ ಹೂಬಾಡಿ ಹೋಗುತ್ತೆ ಅಂತ ಗೊತ್ತಿದ್ರು ಪ್ರೀತಿಗೆ ಅರ್ಥನೇ ಗೊತ್ತಿಲ್ದಿರೋ ಒಂದು ಹೃದಯಕ್ಕೆ ಪ್ರಾಣ ಲೆಕ್ಕಿಸದೆ ಆ ಹೂ ನಾ ತಂದು ಕೊಟ್ಟೆ ಇನ್ನು ಏನು ಅರೆಯದು ಪುಟ್ಟ ಹೃದಯದ ಈ ಪ್ರೀತಿಗೆ ಇಲ್ಲಾ ಅಂತಿನಾ ಇಲ್ಲೇ ಇರು ಬರ್ತೀನಿ

( ಮನು ಮೇಲಕ್ಕೆ ಏಳಲಾರದೆ ಎದ್ದು ಕುಂಟುತ್ತ ಹೂವು ಕೀಳಲು ಹೋಗ್ತಾನೆ )

ಮಗು : ಅಂಕಲ್ ನಿಮ್ ಕಾಲಿಗೆ ಏನಾಗಿದೆ ಯಾಕ ಕುಂಟುತ್ತಾ ಇದಿರಾ

ಮನು : ಅದಾ 5 ವರ್ಷದ ಹಿಂದೇ ರಾತ್ರಿ ಬೈಕ್ ಅಲ್ಲಿ ಬರುವಾಗ ಆಕ್ಸಿಡೆಂಟ್ ಆಗಿ ಹೀಗಾಗಿದೆ ಎಲ್ಲಾ ಹಣೆ ಬರಹ

ಮಗು : ಅಂಕಲ್ ನನಗೆ ಹೂವು ಬೇಡ ನೀವು ಹೇಗೆ ಅಷ್ಟೊಂದು ತುದಿಗೆ ಹೋಗ್ತಿರಾ ನನಗೆ ಭಯ ಆಗುತ್ತೆ

ಮನು : ಹ್ಹ ಹ್ಹ ಹ್ಹ ನನ್ನ ನಡೆಯೋದು ನೋಡಿ ನೀನು ಹಾಗೆ ಹೇಳ್ತಾ ಇದೀಯ ನನಗೆ ಗೊತ್ತು ನನಗೆ ಆ ಬೆಟ್ಟದ ತುದಿ ಹೊಸದೇನು ಅಲ್ಲಾ ನೀನು ಇಲ್ಲೇ ಇರು ಕಂದಾ ನಾನು ಆ ಹೂವುನ ತಗೊಂಡು ಬರ್ತೀನಿ

ಮಗು : ಅಂಕಲ್ ಬೇಡ ಅಂಕಲ್ ಪ್ಲೀಸ್

(ಮಗುನಿನ ಮಾತು ಗಮನಕ್ಕೆ ಕಿವಿಗೆ ಹಾಕೊಲ್ದಾನೆ ಮನು ಹೂವಿಗಾಗಿ ಬೆಟ್ಟದ ತುದಿಗೆ ಹೋಗಿ ಹೂವುನಾ ಕಿತ್ತು ಕೈಯಲ್ಲಿ ಇಟ್ಕೊಂಡು ಇಳಿಯುವಾಗ ಕಾಲು ಜಾರಿ ಪ್ರಪಾತಕ್ಕೆ ಬಿಳೋ ಅಷ್ಟರಲ್ಲಿ ಮತ್ತೆ ಮಗು ಕುಗುತ್ತೆ

ಮಗು : ಅಂಕಲ್ I MISS YOU ಅಂಕಲ್

ಮನುಗೆ ನಾನು ಬದುಕ್ತೀನಿ ಅನ್ನೋ ನಂಬಿಕೇನೆ ಕಳ್ಕೊಂಡು ಇರ್ತಾನೆ ಮಗುವಿನ I MISS YOU ಅನ್ನೋ ಮಾತು ಕೆಲ್ದಾಕ್ಷಣ ತಾನು ಬದುಕಬೇಕು ಅಂದಕೊಂಡು ಹಾಗೂ ಹೀಗೆ ಕಷ್ಟ ಪಟ್ಟು ಮೇಲೆ ಬರ್ತಾನೆ ಬದುಕ್ತು ಬಡಪಾಯಿ ಜೀವ ಅಂತ ನಗು ಮುಖದಲ್ಲಿ ಮಗು ಕಡೆ ನೋಡ್ತಾನೆ ಸುತ್ತಲು ಸಾಯುವಾಗ ಬಂದು ಕಾಪಾಡದೆ ಇರೋ ಜನ ಅದ್ಯಾವುದರ ಅರಿವಿಲ್ಲದೆ ಮಗುವನ್ನೇ ಹುಡುಕುತ್ತ ಇರೋ ಕಣ್ಣುಗಳು.......

ಮಗು ಯಾರನ್ನೋ ಅಪ್ಪಿಕೊಂಡು ಬಿಕ್ಕಿ ಬಿಕ್ಕಿ ಅಳುತ್ತಿದೆ ಹತ್ತಿರ ಹೋಗಿ ಕೈಯಲ್ಲಿರೋ ಹೂ ಕೊಡೋಣ ಅಂತ ನಿಧಾನವಾಗಿ ಇಳಿದು ಬರ್ತಾನೆ ಅಷ್ಟರಲ್ಲಿ ಮಗು ಮನು ಹತ್ರ ಓಡಿ ಬಂದು ಅಪ್ಪಿಕೊಂಡು ಅಳುತ್ತೆ

ಮನು : ತಗೋ ಕಂದಾ ಹೂ

ಮಗು : ನಿಮಗೇನು ಆಗಿಲ್ಲ ಅಲ್ವ ! sorry ಅಂಕಲ್

ಮನು : ಇಲ್ಲಾ ಕಂದಾ ಏನು ಆಗಿಲ್ಲ ತಗೋ ಈ ಹೂ ನಾ



ಅಷ್ಟರಲ್ಲಿ ಆ ಮಗುವಿನ ತಾಯಿ ಓಡಿ ಒಮ್ಮೆ ಮನು ನಾ ನೋಡ್ತಾಳೆ ಮೊದ್ಲು ಮೊದ್ಲು ಕಣ್ಣುಗಳು ಅವನನ್ನ ಗುರುತಿಸದೆ ಇದ್ರೂ ಮನಸ್ಸು ಮಾತ್ರ ಅವನ ಗುರುತು ಹಿಡಿದು ಕಣ್ಣಲ್ಲಿ ನೀರು ತುಂಬಿಕೊಂಡು ದುಃಖದಲ್ಲಿ ಮನು ಹೇಗಿದಿಯೋ ಏನೋ ಹೇಗಾಗಿದಿಯಲ್ಲೋ ನನ್ನ ಕ್ಷಮಿಸಿ ಬಿಡೋ ನಾನು ನಿನಗೆ ಮೋಸ ಮಾಡಿದ್ಯೇ ...ಅಂತ ಒಂದೇ ಸಮನೆ ಅವನ ಕೈ ಹಿಡಿದು ಅಳ್ತಾ ಇರುವಾಗ ನವ್ಯಳ ಗಂಡ ಬಂದು ಮಗುನ ಎತ್ತಿಕೊಂಡು ಪಕ್ಕದಲ್ಲೇ ನಿಲ್ತಾನೆ

ಮನು : ಹೇ... ನವ್ಯ ನೀನು ಇಲ್ಲಿ...... ಅಂತು ಬಂದ್ಯಲ್ಲಾ ನನ್ನ ನೋಡೋಕೆ........
ಸಾಯೋಕು ಆಗದೆ ಬದುಕೊಕು ಆಗದೆ ಪ್ರತಿ ಕ್ಷಣನು ನಿನ್ನ ನೆನಪಲ್ಲೇ ಕೊರುಗ್ತಾ ಇದ್ದೆ ಮೋಸ ನಿನ್ ಮಾಡ್ಲಿಲ್ಲ ನಮ್ಮ ಲೈಫ್ ನಲ್ಲಿ ಆ ವಿಧಿ ಮಾಡ್ತು ಅಷ್ಟರಲ್ಲಿ ನವ್ಯಳ ಗಂಡ ಬಂದು ಭುಜದ ಮೇಲೆ ಕೈ ಇಟ್ಟು ನವ್ಯ ಹೋಗೋಣ್ವಾ ಅಂತ ಕರಿತನೆ ನವ್ಯನ್ನ ನೋಡ್ತಾ ನೋಡ್ತಾ ಮನು ಮಾತು ನಿಲ್ಲಿಸಿ ಸುಮ್ನಾಗ್ತಾನೆ ಈ ಕಡೆ ಮಗು ಒಂದೇ ಸಮನೆ ಅಳ್ತಾ ಇರುತ್ತೆ ಕಣ್ಣಲ್ಲಿ ನೀರು ತುಂಬಿಕೊಡು ಸುತ್ತುಗಟ್ಟಿದ ಜನ ಆಗಲೇ ನವ್ಯ ಗೆ ಮನು ಆಡಿದ್ದ ಮಾತುಗಳು ನೆನಪಾಗ್ತವೆ "ಒಂದಂತ್ತು ನಿಜ ಕಣೆ ನನ್ನ ಜಾಗದಲ್ಲಿ ನಿನ್ನ ಜೊತೆ ನನ್ನ ಬಿಟ್ಟು ಬೇರೆಯಾರನ್ನದ್ರು ನಾ ನೋಡ್ದೆ ಅಂತ ಇಟ್ಕೋ.... ಅವತ್ತೇ ನನ್ನ ಕೊನೆ ಅಂತ ತಿಳ್ಕೋ" ಅದನ್ನೇ ನೆನಪು ಮಾಡಿಕೊಳ್ತಾ ಮಾಡಿಕೊಳ್ತಾ ನವ್ಯಳ ಹೃದಯಾ ಬಡಿತ ನಿಲ್ಲುತ್ತೆ ಹಾಗೆ ಕಣ್ಣು ಮುಚ್ಚುತಾಳೆ


ಹೌದು ನವ್ಯಗೆ ಹೃದಯ ಸಂಭಂಧಿ ಕಾಯಿಲೆ ಇತ್ತು ತನ್ನ ಪ್ರಿತಿಬಗ್ಗೆ ಗಂಡ ಹತ್ರ ಎಲ್ಲಾ ಹೇಳಿಕೊಂಡಿದ್ಲು ಅದಕ್ಕೆ ಮನು ಸಿಗಬಹುದು ಒಂದು ಸರಿ ನೋಡ್ಬೇಕು ಅಂತಾನೆ ಗಂಡನೇ ಜೊತೆ ಸುಮಾರು ಐದು ವರ್ಷಗಳ ನಂತರ ಇಲ್ಲಿಗೆ ಬಂದಿದ್ಲು


ಹಾಗಾದ್ರೆ ಇಲ್ಲಿ ಮಿಸ್ ಆಗಿದ್ದು ಯಾರು ?

ಮಿಸ್ ಮಾಡಿಕೊಂಡಿದ್ದು ಯಾರು ?

ಅಮರ ಪ್ರೇಮ ಅಂದ್ರೆ ಇದೇನಾ ?

ನಿಜವಾದ ಪ್ರೀತಿ ಸಾವಲ್ಲೇ ಕೊನೆ ಕಾಣುತ್ತ ?

ಕೊನೆ ಏನು ಕಾಣುತ್ತೋ ಬಿಡುತ್ತೋ ಗೊತ್ತಿಲ್ಲ ಈ ಸ್ಟೋರಿ ಓದಿದ ನಿಮಗೆ ನಿಮ್ಮ ಕಣ್ಣಿನಲ್ಲಿರೋ ಒಂದು ಹನಿಯಾದ್ರು ಕೆನ್ನೆ ಮೇಲೆ ಜಾರಿ ಕೊನೆ ಕಂಡೆ ಕಾಣುತ್ತೆ ಯಾಕಂದ್ರೆ ನಿಮಗೂ ಹೃದಯ ಇದೇ ಅಲ್ವ !


ನಿಮ್ಮ ಹುಡುಗ
?ದೊಡ್ಡಮನಿ.ಮಂಜು

Thursday, 1 April 2010

ರಾ... ರಾ... ನಾಗವಲ್ಲಿಯ ಬುರುಡೆ ಪತ್ತೆ ಆದದ್ದು ಹೀಗೆ !


ಯಾರು ಈ ನಾಗವಲ್ಲಿ ?
ನೀವು ಅನ್ಕೊಂಡಿರೋ ರೀತಿ ನಾಗವಲ್ಲಿ ಕೇವಲ ಆಪ್ತ ಮಿತ್ರ ಅಥವಾ ಆಪ್ತ ರಕ್ಷಕ ಸಿನಿಮಾದ ಕತೆಯಲ್ಲಿ ಬರೋ ಕೇವಲ ಒಂದು ಪಾತ್ರ ಅಲ್ಲಾ !
ನಾಗವಲ್ಲಿ ಅನ್ನೋ ಪದನೆ ಅದ್ಬುತ ಇನ್ನು ಆ ದಂತ ಕತೆ ಕೇಳಿದ್ರೆ ಮೈ ನವಿರೆಳುತ್ತೆ !

ನಾಗವಲ್ಲಿಯ ನೆಲೆ ಎಲ್ಲಿ ?
ನಾಗವಲ್ಲಿ ಬಗ್ಗೆ ಆಪ್ತ ರಕ್ಷಕ ಸಿನಿಮಾ ನೋಡಿದ ದಿನದಿಂದ ಇಲ್ಲಿಯವರೆಗೂ ತುಂಬಾ ಕಾಡ್ತಾ ಇದ್ದ ಈ ನಾಗವಲ್ಲಿ ಯಾರು ಅಂತ ಪ್ರತಿ ಬಾರಿನು ಏನಾದ್ರು ಹೊಸದಾಗಿ ಮಾಡಿಬೇಕು ಅಂತ ಅನ್ಕೊಳ್ತಿದ್ದ ನನಗೆ ಆಪ್ತ ರಕ್ಷಕ ಸಿನಿಮಾ ನೋಡಿ ಬಂದ ಮೇಲೆ ನಾನು ಶುರು ಮಾಡಿದ್ದೆ ನಾಗವಲ್ಲಿಯ ನೆಲೆ ಎಲ್ಲಿ ?

ನಾನು ನನ್ನ ಫ್ರೆಂಡ್ಸ್ ಜೊತೆ ತಮಿಳುನಾಡಿನ "ನಾಗವೆಳು" ಅನ್ನೋ ಒಂದು ಹಳ್ಳಿಗೆ ಹೋಗಿದ್ವಿ ಅಲ್ಲಿ ಕೆಲವು ಮಾಹಿತಿಗಳು ಸಿಕ್ಕವು ಒತ್ತು ಒಂದು ಹದಿನೈದು ಬಾರಿ ನಾವು ಆ ಗ್ರಾಮಕ್ಕೆ ಬೇಟಿ ನಿಡಿದ್ವಿ, ಅಲ್ಲಿ ಒಬ್ಬರ ಮನೆಯಲ್ಲಿ ನಮಗೆ ನಾಗವಲ್ಲಿಯ ಮಾಹಿತಿ ಇರೋ ಪ್ರಾಚಿನ ಪುಸ್ತಕ ಸಿಕ್ತು ಅದನ್ನ ಅವರಿಂದ ಕೇಳಿ ತಗೆದು ಕೊಂಡು ಬಂದು ಸ್ಟಡಿ ಮಾಡೋಣ ಅಂದ್ರೆ ಅದು ಸಂಪೂರ್ಣವಾಗಿ ತಮಿಳು ಮಿಶ್ರಿತ ಸಂಸ್ಕೃತದಲ್ಲಿ ಇತ್ತು ಆಗ ಅದನ್ನ ನನಗೆ ಪರಿಚಯ ಇದ್ದ ಒಬ್ಬ ತಮಿಳು ವಿಶ್ವವಿದ್ಯಾಲಯದ ಕುಲಪತಿ ಡಾ!. ಎ.ಪ. ಮುರುಕನರಂ ಮೂರ್ತಿ ಅವರ ಹತ್ರ ಹೋಗಿ ಎಲ್ಲವನ್ನು ಕನ್ನಡಕ್ಕೆ ಅನುವಾದ ಮಾಡಿಸಿಕೊಂಡು ಬಂದ್ವಿ ಅದಕ್ಕೆ ನಾವು ತಗೊಂಡಿದ್ದು ಒಂದೂವರೆ ತಿಂಗಳು.

ನಂತರ ನಾನು ನನ್ನ ಜೊತೆ 4 ಜನ ಹಾಗೆ ಹವ್ಯಾಸಿ ಪತ್ರಕರ್ತ ರಮೇಶ್ ಅವರ ಜೊತೆ "ನಾಗವೆಳು" ಗ್ರಾಮಕ್ಕೆ ಮತ್ತೆ ಹೋದ್ವಿ ಅಲ್ಲಿಂದ 15 ಕಿ.ಮೀಟರ್ ಕಾಲು ನಡೆಗೆಯಲ್ಲಿ ಹೋದ್ರೆ ನಮಗೆ ಸಿಕ್ಕಿದ್ದು ಒಂದು ಆಲದ ಮರ ಅಲ್ಲಿ ಸ್ವಲ್ಪ ಕೂತುಕೊಂಡು ವಿಶ್ರಾಂತಿ ತಗೊಂಡು ಮತ್ತೆ ಹೊರಟ್ವಿ ಆಗ್ಲೇ ಸಂಜೆ ಆಗಿತ್ತು ಕೈಯಲ್ಲಿ ಎರಡು ಟಾರ್ಚ್ ಬಿಟ್ರೆ ಬೇರೇನೂ ಇರ್ಲಿಲ್ಲ ಹೋಗ್ತಾ ಹೋಗ್ತಾ ಕತ್ತಲಗಿದ್ದೆ ಗೊತ್ತೇ ಆಗ್ಲಿಲ್ಲ. ತುಂಬಾ ಸುಸ್ತಾಗಿತ್ತು ಅದಕ್ಕೆ ನಾವು ಅವತ್ತು ಅಲ್ಲೇ ಉಳಿದುಕೊಳ್ಳೋಣ ಅಂತ ಯಾವದಾದ್ರು ಒಂದು ಒಳ್ಳೆ ಪ್ಲೇಸ್ ನೋಡ್ತಾ ಇದ್ವಿ ಮಹಾನ್ ಬುದ್ದಿವಂತರು ಕಾಡಲ್ಲಿ ಹೋಗಿ ಒಳ್ಳೆ ಪ್ಲೇಸ್ ಗೆ ಸರ್ಚ್ ಮಾಡ್ತಾ ಇದ್ವಿ :) ಕಾಡು ಬೇರೆ ನಮ್ಮ ಮನೆ ಹತ್ರ ಯಾವದಾದ್ರು ನಾಯಿ ಬೊಗಳಿದರೆ ಹೆದರಿಕೊಳ್ಳೋ ನಾನು ಆ ಕಾಡ್ನಲ್ಲಿ ನರಿಗಳು ಕೂಗೋದು ಗೂಬೆಗಳ ಸದ್ದು ಎಲ್ಲ ಕೇಳಿ ಕೇಳಿ ಮನಸ್ಸನಲ್ಲಿ ಅನ್ಕೊಳ್ತಾ ಇದ್ದೆ ಮಂಜ ಇದೆಲ್ಲ ನಿನಗೆ ಬೇಕಾಗಿತ್ತಾ ಅಂತ ಮನೆಗೆ ಗೊತ್ತಾದ್ರೆ ನನ್ನ ಕತೆ ಅಷ್ಟೇನೆ ಹೇಗೋ ಬಂದಿದಿವಿ ಜೀವಂತವಾಗಿ ಊರಿಗೆ ಸೇರಿದರೆ ಸಾಕು ಅನಿಸ್ತ ಇತ್ತು ! ಹಾಗೋ ಹೀಗೋ ಹೇಗೋ ನಮ್ಮ ರಮೇಶ್ ಕಣ್ಣಿಗೆ ಒಂದು ಮನೆ ಕಾಣ್ತು ಅಬ್ಬಾ ಏನ್ ಧೈರ್ಯ ಅಂತಿರ ಅವಂದು ತನ್ನ ಕೈಯಲ್ಲಿ ಇದ್ದ ಕ್ಯಾಮರ ಹೊರ ತೆಗೆದು ಫೋಟೋ ತಗಿತಾ ಆ ಮನೆ ಹತ್ರ ಹೋಗ್ತಾ ಇದ್ದ ನಾವು ಅವನ ಹಿಂದೇ ಹೋಗ್ತಾ ಇದ್ವಿ ಅಂತು ಇಂತೂ ಮನೆ ಹತ್ರ ಬಂದ ಮೇಲೆ ನಮಗೆ ಗೊತ್ತಾಗಿದ್ದು ನಾವು ಬರಬೇಕಾದ ಪ್ಲೇಸ್ ಗೆ ಆಗಲೇ ಬಂದಿದಿವಿ ಅಂತ !

ಅಲ್ಲಿ ತನಕ ಇಲ್ದೆ ಇರೋ ಹೆದರಿಕೆ ಆ ಮನೆ ಹತ್ರ ಹೋದ ಮೇಲೆ ನಮಗೆ ಶುರುವಾಯ್ತು ಕತೆ ಕವನ ಬರಕೊಂಡು ಹಾಯಾಗಿದ್ದೆ ಈ ಹಾಳು ಐಡಿಯಾ ಕೊಟ್ಟು ನಾನು ಹಾಳಾದೆ ಅಂತ ಗುನುಗುತ್ತಾ ರಮೇಶನ ಹಿಂದೇ ಹಿಂದೇ ಹೋದೆ ಇನ್ನೇನು ಬಾಗಿಲ ಒಳಗೆ ಹೋಗ್ಬೇಕು ಅಷ್ಟರಲ್ಲಿ ಒಳಗಡೆ ಇಂದ ಯಾವ್ದೋ ಪಕ್ಷಿ ಹಾರಿ ಹೋಯ್ತು ಅಬ್ಬಾ ಎದೆ ಹಾಗೆ ಜಲ್ಲ ಅಂತು.

ನಾಗವಲ್ಲಿಯ ಬುರುಡೆ ಪತ್ತೆ ಆದದ್ದು ಹೀಗೆ !
ಹಾಗೂ ಹೀಗೋ ಒಳಗಡೆ ಹೋದ್ವಿ ರಮೇಶ್ ಎಲ್ಲ ಫೋಟೋ ತಗಿತಾ ಇದ್ದ ಮನೆ ಎಷ್ಟು ಚನ್ನಾಗಿತ್ತು ಅಂದ್ರೆ ಅರಮನೆ ಥರ ಇತ್ತು ಒಳಗಡೆ ಎಲ್ಲ ಆಮೇಲೆ ಗೊತ್ತಾಗಿದ್ದು ಇದು ನಾಗವೆಳು ರಾಜ್ಯದ ರಾಜನ ಅರಮನೆ ಅಂತ ನಾವು ಅನ್ಕೊಂಡ ರೀತಿ ಅಲ್ಲಿ ಏನು ಇರ್ಲಿಲ್ಲ ಆ ಮನೆಯ ಪ್ರತಿ ಒಂದು ಕೋಣೆಯನ್ನು ಬಿಡದೆ ಹುದುಕಿದ್ವಿ ಏನು ಸಿಗ್ಲಿಲ್ಲ ! ತುಂಬಾ ನಿರಾಸೆ ಆಯ್ತು ಬೆಳಗ್ಗೆ ಆಗಿದ್ದೆ ಗೊತ್ತಾಗ್ಲಿಲ್ಲ ನಮಗೆ ! ಆಗ ಬೆಳಗ್ಗೆ 4 ಇರ್ಬೇಕು ಅನಿಸುತ್ತೆ ನಾನು ಸ್ವಲ್ಪ ಅರಮನೆಯಾ ಪಕ್ಕದಲ್ಲಿ ಒಂದು ಚಿಕ್ಕ ಗೋರಿ ಥರ ಇತ್ತು ಅದನ್ನ ನೋಡೋಣ ಅಂತ ಬಂದ ಅದ್ರ ಮೇಲೆ ಅರ್ಥ ಆಗದ ಭಾಷೆಯಲ್ಲಿ ಏನೇನೊ ಬರೆದಿತ್ತು ಅದನ್ನೆಲ್ಲ ಫೋಟೋ ತಗೊಂಡು ಆಮೇಲೆ ಆ ಗೋರಿ ಉಳಗೆ ಏನಿದೆ ಅಂತ ಗೋರಿನಾ ಒಡೆದು ಬಿಟ್ಟ್ವಿ ಅಬ್ಬಾ ಭಯಾನುಕರ ನನೆಗೆ ನೋಡೋಕೆ ಆಗದೆ ಎದ್ದು ಬಿಟ್ಟು ದೊರ ಬಂದೆ ರಮೇಶ ಅದೇನೋ ಫೋಟೋ ತಗೊಂಡ, ಆಮೇಲೆ ಗೊತ್ತಾಯ್ತು ಇದು ನಾಗವಲ್ಲಿ ಆಸ್ತಿಪಂಜರ ಅಂತ ಅಲ್ದೆ ತಲೆಬುರುಡೆ ಬೇರೆ ತಗೊಂಡು ತನ್ನ ಬ್ಯಾಗ್ ನಲ್ಲಿ ಹಾಕ್ಕೊಂಡ ಅದನ್ನ ನೀವು ನೋಡಲಿ ಅಂತ ಆ ಫೋಟೋ ತಗೊಂಡು ಬಂದಿದೀನಿ ನೋಡಿ !


ಅಲ್ದೆ ಅದ್ರಲ್ಲಿ ನಮಗೆ ಒಂದು ತಾಳೆ ಗರೆ ಇತ್ತು ಅದ್ರಲ್ಲಿ ಒಂದು ವಾಕ್ಯ ಬರದಿತ್ತು ಅದೇನಪ್ಪ ಅಂದ್ರೆ

ವಿಶೇಷ ಸೂಚನೆ :- ಕೆಲವೊಮ್ಮೆ ನಿಮಗೆ ಆ ವಾಕ್ಯಗಳು ಕಾಣದೆ ಇದ್ದಾರೆ ದಯವಿಟ್ಟು ನಿಮ್ಮ ಕೀ ಬೋರ್ಡ್ ನಾ ctrl + A ಒತ್ತಿ ನೋಡಿ ಕಾಣುತ್ತೆ
!

!

!

!

!

!

!

!

!

!

!

!

!

!

!

!

!

!

!

!

!

!
"ಇದುವರೆಗೂ ನಾನು ಓದಿದ ಕತೆ ಕೇವಲ ಕಾಲ್ಪನಿಕ ! ಮತ್ತು ನಾನು ಸಂಪೂರ್ಣವಾಗಿ ಏಪ್ರಿಲ್ ಫೂಲ್ ಆಗಿದ್ದೇನೆ ಎಂದು ಈ ಮೊಲಕ ಘೋಷಿಸುತ್ತಿದ್ದೇನೆ"




Happy & Prosperous fools day
ಇಂತಿ ನಿಮ್ಮ
ಮಂಜು ದೊಡ್ಡಮನಿ

Thursday, 25 February 2010

"ಭಾವನೆಗಳ ಒಡತಿ ನನ್ನ ಮುದ್ದು ಗೆಳತಿ"




ಹೌದು ಈ ಜೀವನ ಅನ್ನೂದು ಎರಡು ಕಂಬಿಗಳ ಮೇಲೆ ಚಲಿಸೋ ರೈಲಿನತರಹ, ನಮ್ಮ ನಮ್ಮ ನಿಲ್ದಾಣ ಬರುವ ತನಕ ನಾವು ಕಾಯ್ಲೆ ಬೇಕು ಅಷ್ಟರೊಳಗೆ ನಮಗೆ ಎಷ್ಟೊಂದು ಅನುಭವಗಳಾಗಿರುತ್ತವೆ ಆಲ್ವಾ ! ಈ ಪಯಣದಲ್ಲಿ ಎಷ್ಟೋ ತಿರುವುಗಳು ಸಿಗ್ತವೆ, ಎಷ್ಟೋ ಜನ ಬಂದು ಇಳಿದು ಕಣ್ಮರೆಯಾಗಿ ಹೋಗ್ತಾರೆ ಅವೆಲ್ಲ ಒಂದು ಸಣ್ಣ ನೆನಪು ಅನ್ನಬಹುದು ಆದ್ರೆ ಈ ರೈಲು ಬಂಡಿಯಾ ಪಯಣದಲ್ಲಿ ಪರಿಚಯವಾಗಿ ಈ ಮನಸ್ಸಿನಲ್ಲಿ ಶಾಶ್ವತ ವಾಗಿ ಉಳಿದು ಕೊನೆಗೆ ಒಂದು ದಿನ ಈ ಬಿಳಿ ಹಾಳೆ ಮೇಲೆ ಅವರ ನೆನಪುಗಳನ್ನ ನನ್ನ ಈ ಕೈ ಗಳಿಂದ ದಾಖಲಿಸುವಂತೆ ಮಾಡ್ತಾರಲ್ಲ ಅಂತಹ ಒಬ್ಬ ಗೆಳತಿನ ನಾ ಹೇಗೆ ಮರೆಯಲಿ, No,Never ಸಾಧ್ಯವಿಲ್ಲದ ಮಾತು. ಆ ಗೆಳತಿನ ಮರೆಯೋದಕ್ಕೆ ಆಗೋಲ್ಲ ಏಕೆಂದರೆ ಅವಳು ನನ್ನ ನೆನಪಿನ ಮಡಿಲಲ್ಲಿ ನೆನಪಾಗಿ ಉಳಿದಿದ್ದಾಳೆ.

ನೆನಪಿನ ಅಂಗಳದಿ
ನೆನಪಿನ ರಂಗೋಲಿ ಇಟ್ಟು
ನೆನಪಿನ ಬಣ್ಣ ತುಂಬುವ ಮುನ್ನ
ನೆನಪಲ್ಲೇ ನೆನಪಾಗಿ ಹೋದ
"ನನ್ನ ಮುದ್ದು ಗೆಳತಿ ಭಾವನೆಗಳ ಒಡತಿ"

ನಿಜಾ, ನಾನು ಹೇಳ್ತಾ ಇರೋದು ನನ್ನ ನೆನಪುಗಳ ಮಡಿಲಲ್ಲಿ ಕೇವಲ ನೆನಪಾಗಿ ಉಳಿದಿರೋ ನನ್ನ ಗೆಳತಿ ಒಬ್ಬಳ ಬಗ್ಗೆ, ಗೆಳತಿ ಅಂದಾಕ್ಷಣ ದಿನಗಳ, ತಿಂಗಳುಗಳ ಅಥವಾ ವರ್ಷಗಳಿಂದ ಪರಿಚಯವಿರುವ ಗೆಳತಿಯ ಬಗ್ಗೆ ನಾ ಹೇಳ್ತಾ ಇಲ್ಲ, ಅವಳು ಅಮೂಲ್ಯವಾದ ಕೆಲವೇ ಕಲವು ಘಂಟೆಗಳ ಗೆಳತಿಯ ಬಗ್ಗೆ,
ಅಂದು ಭಾನುವಾರ, ಆಫೀಸ್ನಲ್ಲಿ ಎರಡು ದಿನ ರಜಾ ಹಾಕಿ ನಾನು ಬೆಂಗಳೂರಿನಿಂದ ದಾವಣಗೆರೆಗೆ ಬೆಳಗ್ಗೆ 6 ಘಂಟೆಯಾ ರೈಲಿಗೆ ಹೋಗ ಬೇಕಿತ್ತು , ಹೇಗೋ ರೈಲ್ವೆ ಸ್ಟೇಷನ್ ತಲುಪಿ ಕ್ವೀ ನಲ್ಲಿ ಟಿಕೆಟ್ ತೆಗೆದುಕೊಂಡು ಪ್ಲಾಟ್ ಫಾರ್ಮ್ ಗೆ ಬರುವಷ್ಟರಲ್ಲಿ ರೈಲ್ ಹೊರಟ್ಟಿತ್ತು ತಕ್ಷಣವೇ ನನ್ನ ಕಾಲುಗಳು ಸಕ್ರಿಯಗೊಂಡು ಓಡಲಾರಂಬಿಸಿದವು ಧೈರ್ಯಮಾಡಿ ಹತ್ತೇ ಬಿಟ್ಟೆ, ನಾನು ಹತ್ತುವುದನ್ನೇ ನೋಡುತ್ತಿದ್ದ ಕೆಲವರು ಹತ್ತಿದ ಮೇಲೆ ಸ್ವಲ್ಪ ಬುದ್ದಿವಾದ ಹೇಳಿದರು ಆ ಬುದ್ದಿವಾದದ ಮಾತುಗಳು ಇಷ್ಟೇ "ಚಲಿಸುವ ರೈಲುಗಾಡಿಯನ್ನು ಹತ್ತ ಬಾರದು" ಅಂತ, ಎಷ್ಟೇ ಅಗಲಿ ಆ ಮಾತುಗಳನ್ನು ಹೇಳಿದವರು ನನಗಿಂತ ಹಿರಿಯರು ಅಲ್ಲದೆ ನನ್ನ ಹಿತೈಷಿಗಳೆಂದುಕೊಂಡು ನಮ್ರತೆಯಿಂದ ಇನ್ನು ಮುಂದೆ ಈ ಥರ ತಪ್ಪು ಮಾಡೋದಿಲ್ಲ ಎಂದು ಹೇಳುತ್ತಾ ಬೋಗಿಯ ಒಳಗೆ ನುಸುಳಿದೆ, ಓಡಿ ಬಂದ ರಭಸಕ್ಕೆ ನನ್ನ ಬಾಯಲ್ಲಾ ಒಣಗಿ ಬಾಯಾರಿಕೆ ಯಾಗಿತ್ತು, ನೀರಿಗಾಗಿ ಬ್ಯಾಗಗೆ ಕೈ ಹಾಕಿ ವಾಟರ್ ಬಾಟಲ್ ತೆಗೆದುಕೊಂಡು ನೀರು ಕುಡಿಯೋಣವೆಂದು ಬಾಟಲ್ ಎತ್ತಿದೆ ಕಣ್ಣು ಮುಚ್ಚಿ ಮೊರ್ನಾಲ್ಕು ಗುಟುಕು ನೀರು ಕುಡಿದು ಒಂದು ನಿಮಿಷ ಅಕ್ಕ ಪಕ್ಕ ಕಣ್ಣಾಡಿಸಿದೆ ಆಗಲೇ ನನ್ನ ಬುದ್ಧಿಗೆ ಅರಿವಾಗಿದ್ದು ನಾನು ಹತ್ತಿರುವುದು ರೆಸೆರ್ವೇಶನ್ ಕೋಚ್ ಅಂತ ತಕ್ಷಣ ಕೈಯಲ್ಲಿದ್ದ ಬಾಟಲನ್ನು ಬ್ಯಾಗಿಗೆ ಹಾಕಿಕೊಂಡು ರೈಲಿನ ಬಾಗಿಲ ಬಳಿ ಹೋಗಿ ನಿಂತೆ ಅಷ್ಟರಲ್ಲಿ ಮಲ್ಲೇಶ್ವರಂ ಸ್ಟಾಪ್ ಬಂತು ಅಲ್ಲಿಂದ ಇಳಿದು ಕೊಂಡು ಹಿಂದಿನ ಜನರಲ ಕೋಚ್ ನಲ್ಲಿ ಹತ್ತಿಕೊಂಡೆ.
ಅದೇನೋ ಗಾದೆ ಇದೆಯಲ್ಲ "ಪಾಪಿ ಸಮುದ್ರಕ್ಕೊದ್ರು ಮೊಳಕಾಲ್ಮಠ ನೀರು" ಅಂದಂಗೆ ಆ ಬೋಗಿಯಲ್ಲಿ ಒಂದು ಸೀಟು ಖಾಲಿ ಇರ್ಲಿಲ್ಲ , ಏನ್ ಮಾಡೋದು ಪಾಲಿಗೆ ಬಂದಿದ್ದು ಪಂಚಾಮೃತ ಅನ್ನಕೊಂಡು ಬೋಗಿ ಒಳಗೆ ಹೋದೆ ಕೊನೇಲಿ ಒಂದೇ ಒಂದು ಸೀಟು ಖಾಲಿ ಇತ್ತು ಅಬ್ಬಾ ಅಂತು ಇಂತೂ ಸೀಟು ಸಿಕ್ತಲ್ಲ ಅಂತ ಖುಷಿಯಿಂದ ಹೋಗಿ ಕೂತುಕೊಂಡೆ, ಪಕ್ಕ ತಿರುಗಿ ನೋಡಿದೆ ನನ್ನ ಪಕ್ಕ ಒಂದು ಹುಡುಗಿ ಕೊತಿದ್ಲು, ನನಗೆ ಈ ಹುಡುಗಿರನ್ನ ಕಂಡ್ರೆ ಸ್ವಲ್ಪ ಸಂಕೋಚ ಹೇಗೋ ಅರ್ಜೆಸ್ಟ್ ಮಾಡ್ಕೊಂಡು ಕೂತುಕೊಂಡೆ, ಟೈಮ್ ಪಾಸ್ಗೆ ಅಂತ ತುಂಬಾ ದಿನಗಳ ಮೇಲೆ ಒಂದು ಕನ್ನಡ ನ್ಯೂಸ್ ಪೇಪರ್ ತಗೊಂಡಿದ್ದೆ ಅದನ್ನ ತೆಗೆದು ಓದುತ್ತ ಕುಳಿತೆ, ಯಾವ ಪೇಜ್ ನಲ್ಲಿ ನೋಡಿದ್ರು ಬರಿ ಕೊಲೆ, ಸುಲಿಗೆ,ದರೋಡೆ ಬಿಟ್ರೆ ಈ ಹಾಳು ರಾಜಕಾರಣದ ಬಗ್ಗೆನೇ ಇತ್ತು ಯಾಕೋ ಓದೋಕೆ ಇಂಟರೆಸ್ಟ್ ಬರಲಿಲ್ಲ ಆ ಪೇಪರ್ ನ ಎದರುಗಡೆ ಸೀಟಿನ ಕಂಬಿಯಲ್ಲಿ ಸಿಗಸಿ ಹಾಗೆ ಕಣ್ಣು ಮುಂಚಿಕೊಂಡು ಕೂತೆ, ಎಲ್ಲೋ ಯಾರೋ ಮಾತನಾಡಿಸಿದ ಹಾಗೆ ಆಯ್ತು , ರಾತ್ರಿ ಊರಿಗೆ ಹೋಗೋ ಸಡಗರದಲ್ಲಿ ನಿದ್ದೆ ಸರಿಯಾಗಿ ಮಾಡಿರಲಿಲ್ಲ ಹಾಗಾಗಿ ನಿದ್ದೆ ಬೇರೆ ಎಳಿತಾ ಇತ್ತು ಅಷ್ಟೊಂದು ಗಮನಕ್ಕೆ ತೆಗೆದುಕೊಳ್ಳಲಿಲ್ಲ, ಮತ್ತದೇ ಧ್ವನಿ "If You don't mind" ನಾನು ನಿಮ್ಮ ಪೇಪರ್ ಓದ ಬಹುದ ಅಂತ ನನ್ನ ಪಕ್ಕದಲ್ಲಿ ಕುಳಿತಿದ್ದ ಹುಡುಗಿ ಕೇಳಿದ್ಲು, ನನಾದ್ರು ಹೇಗೆ ಇಲ್ಲ ಅನ್ಲಿ ಹುಡುಗಿ ಬೇರೆ ಈ ಮನಸು ಕರಗಿ ನೀರಾಗಿ ಬಿಡ್ತು " ಅಯ್ಯೋ ಪೇಪರ್ ತಾನೇ ತಗೊಳ್ಳಿ " ಅಂತ ನಾನೇ ಎತ್ತಿ ಕೊಟ್ಟು ಮತ್ತೆ ಕಣ್ಣು ಮುಚ್ಚಿ ಕುಳಿತೆ ನಿದ್ದೆ ಹೇಗೆ ಬಂತೋ ಗೊತ್ತಿಲ್ಲ ಎಷ್ಟೋ ಹೊತ್ತಿನ ಮೇಲೆ ಎಚ್ಚರವಾಯಿತು ಆ ಹುಡುಗಿ ಇನ್ನು ಪೇಪರ್ ಓದುತ್ತಾನೆ ಇದ್ಲು "ದುಡ್ಡು ಕೊಟ್ಟು ತಗೊಂಡ ನಾನೇ ಓದ್ಲಿಲ್ಲ ಇವಳೇನು ಓದುತ್ತಿದ್ದಳಪ್ಪ" ಅಂತ ಮನಸ್ಸಿನಲ್ಲೇ ಅನ್ಕೊಂಡು ಆಕಳಿಸಿದೆ ಅಷ್ಟರಲ್ಲಿ ಆ ಹುಡುಗಿ ಏನ್ ಸರ್ ನಿದ್ದೆ ಆಯ್ತಾ ಅಂತ ಕೇಳ್ತಾ ಪೇಪರ್ ಮಡಚಿ ನನ್ನ ಕೈಗೆ ಕೊಟ್ಟು ಥ್ಯಾಂಕ್ಸ್ ಹೇಳಿದ್ಲು ಆಗ ನಾನು ಪ್ರತಿಯಾಗಿ ಆಯ್ತು ಮೇಡಂ ನಿಮ್ಮದು ನಿದ್ದೆ ಆಯ್ತಾ ಅಂತ ಕೇಳಿದೆ? ಆ ಹುಡುಗಿಗೆ ಸ್ವಲ್ಪ ಗಲಿಬಿಲಿ ಆಯ್ತು ಅನಿಸುತ್ತೆ, ನಂತರ ನಗ್ತಾ ಹ್ಹೋ..... ಆಯ್ತು ನಿನ್ನೆ ರಾತ್ರಿ ಅಂತ ಹೇಳಿದ್ಲು ನಾನು ಮತ್ತೇನು ಮಾತನಾಡ್ಲಿಲ್ಲಾ ಆಗ ನೀವು ತುಂಬಾ ಚನ್ನಾಗಿ ಕಾಮಿಡಿ ಮಾಡ್ತೀರಾ ಕಣ್ರೀ ಅಂದ್ಲು, ನಾನು ಕಾಮಿಡಿ ಎಲ್ಲಿ ಮಾಡ್ದೆ ಅಂದೆ. ಮತ್ತೆ ಇನ್ನೆನ್ರಿ ನಾವು ಯಾರನ್ನಾದ್ರು ಊಟ ಆಯ್ತಾ ಅಂತ ಕೇಳಿದ್ರೆ ಹ್ಹೋ ,,,,,, ಆಯ್ತು ನಿಮ್ಮದು ಆಯ್ತಾ ಅಂತ ಕೇಳ್ತಾರೆ ಆದರೆ ನಿಮಗೆ ನಿದ್ದೆ ಆಯ್ತಾ ಅಂತ ಕೇಳಿದ್ರೆ ನಿಮ್ಮದು ಆಯ್ತಾ ಅಂತ ಕೇಳ್ತಿರಲ್ಲ ಅದು ಕಾಮಿಡಿ ಅಲ್ವ! ನನಗೆ ನಗುನೆ ತಡೆಯೋಕೆ ಅಗ್ತಾ ಇಲ್ಲಾ ಅಂತ ಒಂದೇ ಉಸಿರಿನಲ್ಲಿ ಹೇಳಿ ಬಿಟ್ಲು. ಅಲ್ಲಿಂದ ಶುರುವಾಯ್ತು ನಮ್ಮಿಬ್ಬರ ಪರಿಚಯ ನನ್ನ ಬಗ್ಗೆ ಆ ಹುಡುಗ ಎಲ್ಲಾ ತಿಳಿದುಕೊಂಡಳು ನಾನು ಏನ್ ಮಾಡ್ತಾ ಇದೀನಿ?, ಎಲ್ಲಿರೋದು?,ಯಾವ ಊರು? ಅಷ್ಟೇ ಏಕೆ ನನ್ನ ಮನೇಲಿ ಯಾರ್ಯರು ಇದ್ದಾರೆ? ಅಂತ ಕೇಳಿ ತಿಳಿದು ಕೊಂಡಳು ಅವಳ ಅಷ್ಟೋ ಪ್ರೆಶ್ನೆಗಳಿಗೆ ಉತ್ತರ ಕೊಟ್ಟು ಕೊಟ್ಟು ಸುಸ್ತಾಗಿ ಬಿಟ್ತು, ಅಲ್ಲಿತನಕ ಅವಳನ್ನ ಅಷ್ಟೊಂದು ಸರಿಯಾಗಿ ನೋಡಿರಲಿಲ್ಲ ಅವಳ ಮುಖದಲ್ಲಿ ಎಷ್ಟೋ ಮುಗ್ದತೆ ಇತ್ತು ಅಂದ್ರೆ " ಬಿಳಿ ಇರೋದೆಲ್ಲ ಹಾಲು ಅಂತ ನಂಬಿರೋ ಮಗುವಿನ ಮನಸ್ಸು " ಅಂತಹ ಮನಸ್ಸಲ್ಲಿ ಎಲ್ಲೋ ಒಂದು ಕಡೆ ಹೇಳಲಾರದಷ್ಟು ದುಃಖ ತುಂಬಿದೆ ಅಂತ ಅವಳ ಮುಖವನ್ನು ದೃಷ್ಟಿಸಿ ನೋಡಿದಾಗಲೇ ನನಗೆ ಗೊತ್ತಾಗಿದ್ದು. ಯಾರನ್ನು ನಾನು ಅವರ ಜೀವನದ ಬಗ್ಗೆ ಕೇಳಿದವನು ಅಲ್ಲ ಆದ್ರೆ ಅವತ್ತೆಕು ನನ್ನ ಮನಸ್ಸು ತಡೆಯಲಿಲ್ಲ ನಾನೇ ಕೇಳಿಬಿಟ್ಟೆ

ನಗುವ ಮೊಗದ ಹೊವಲ್ಲಿ
ಮಾತು ಮಾತಿಗೂ ಯಾಕಿಷ್ಟು ಅಸಮದಾನ !
ಕೇಳು ಗೆಳತಿ ಹೇಳಬೇಕೆ
ನಾನು ಏನಾದರು ಸಮಾದಾನ !
ಹೇಳಿಕೊಳ್ಳೋ ಅಂತ ದುಃಖ ಏನು ಇಲ್ಲ, ಎಲ್ಲ ಹೆಣ್ಣಿಗೆ ಈ ವಯಸ್ಸಲ್ಲಿ ಎದುರಾಗೋ ಒಂದು ದೊಡ್ಡ ಸಮಸ್ಯೆ ನನಗು ಈಗ ಎದುರಾಗಿದೆ ಅದರಲ್ಲೂ ಈ ಮದ್ಯಮ ವರ್ಗದ ಜನರಿಗೆ ಈ ಸಮಸ್ಯೆ ಬರಬಾರದು ಅಂತ ಹೇಳಿ ಸ್ವಲ್ಪ ಹೊತ್ತು ಸುಮ್ಮನೆ ಕೂತಳು, ಮತ್ತೆ ನಾನು ಮಾತನಾಡಿದೆ ಏನಾದ್ರೂ ಮನೆಯಲ್ಲಿ ತೊಂದ್ರೆ ಇದೇನಾ ? ಸಮಸ್ಯೆ ಅಂದ್ರೆ ಯಾವರೀತಿಯದು ? ಅಂತ ಕೇಳಿದೆ, ಆಗಲೇ ಬಿಚಿಟ್ಟಿದ್ದು ನನ್ನ ಗೆಳತಿ ತನ್ನ ಭಾವನೆಗಳ ಒಳ ನೋವನ್ನ

ಗೆಳತಿ : ನಾನು ಇನ್ನು ಓದುತ್ತ ಇದೀನಿ ಅಕ್ಕನಿಗೆ ಈಗಾಗಲೇ ಮಧುವೆ ಮಾಡಿ ಎರಡು ವರ್ಷಗಳಾಯ್ತು ನನಗೆ ಒಬ್ಬಳು ತಂಗಿ ಬೇರೆ ಇದಾಳೆ ಇನ್ನು ಚಿಕ್ಕವಳು ಮನೆಯಲ್ಲಿ ಅಪ್ಪ ಅಮ್ಮ ಎಲ್ಲರು ಚನ್ನಾಗಿದಿವಿ. ಆದ್ರೆ ,,,,,!!!

ನಾನು : ಆದ್ರೆ ಇನ್ನೇನು ಎಲ್ಲ ಚನ್ನಾಗಿದ್ದಿರ ಇಲ್ಲಿ ಸಮಸ್ಯೆ ಆದರು ಏನು ?

ಗೆಳತಿ : ಮಧುವೆ............... ಮಧುವೆ............. ಇದೆ ಒಂದು ದೊಡ್ಡ ಸಮಸ್ಯೆ ಆಗಿದೆ ರೀ

ನಾನು ಮೊದ್ಲೇ ತಲೆಯಲ್ಲಿ ಹುಳ ಬಿಟ್ಕೊಂಡಿದ್ದೆ ಇವಳು ಹೇಳಿದ್ದು ಕೇಳಿ ನನಗೆ ಚನ್ನಾಗಿದ್ದ ತಲೆ ಗಿರಗಿರ ಅಂತ ತಿರಗ್ತಾ ಇತ್ತು ! ಅಲ್ಲ ರೀ ನಮ್ಮೂರಲ್ಲಿ ಎಲ್ಲ ಹುಡುಗಿರು ಮಧುವೆ ಅಂದ್ರೆ ಎಷ್ಟು ಖುಷಿಯಾಗಿರ್ತರೆ ನಿಮಗೇನ್ರಿ ಆಗಿದೆ ಮಧುವೇನೆ ಒಂದು ಸಮಸ್ಯೆ ಅಂತಿರಲ್ಲ ಯಾಕೆ ಹುಡುಗ ಚನ್ನಾಗಿಲ್ವ ?

ಗೆಳತಿ : ಹಾಗಲ್ಲ ರೀ ಹುಡುಗ ಚನ್ನಾಗಿದನೆ ಆದ್ರೆ ನಾನು ಇನ್ನು ಓದು ಬೇಕು ಅನ್ಕೊಂಡಿದ್ದೇನೆ ಆದ್ರೆ ನಮ್ಮ ಮನೇಲಿ ಎಲ್ಲರು ನನ್ನ ಮಧುವೆ ಬಗ್ಗೆನೇ ಯೋಚನೆ, ಈ ತಂದೆ ತಾಯಿಗಳೇ ಇಷ್ಟು ಮಗಳು ವಯಸ್ಸಿಗೆ ಬಂದ್ಲು ಅಂದ್ರೆ ಸಾಕು ಮೊದ್ಲು ಯೋಚನೆ ಮಾಡೋದೇ ಮಧುವೆ ಬಗ್ಗೆ , ನಮ್ಮ ಭಾವನೆಗಳಿಗೆ ಇಲ್ಲಿ ಬೆಲೆ ಇಲ್ಲ, ಒಂದು ರೀತಿ ಇದರಲ್ಲಿ ಅವರದು ತಪ್ಪೇನು ಇಲ್ಲ ಎಲ್ಲ ಈ ಬಡತನ. ಅದಕ್ಕೆ ಹೇಳಿದ್ದು ಹುಟ್ಟಿದ್ದರೆ ಈ ಮದ್ಯಮ ವರ್ಗದಲ್ಲಿ ಹುಟ್ಟುಬಾರ್ದು ಒಂದುವೇಳೆ ಹುಟ್ಟಿದ್ರು ಹೆಣ್ಣಾಗಿ ಮಾತ್ರ ಹುಟ್ಟುಬಾರ್ದು (ಕಣ್ಣಿನಲ್ಲಿ ತಡೆಯಲಾಗದ ಕಣ್ಣಿರು) ನಾನು ಹೋಗ್ಲಿ ಬಿಡಿ ಇದೆಲ್ಲ ಸಾಮಾನ್ಯ ಅಂತ ಸಮಾದಾನ ಮಾಡಿದೆ.

ಜೀವನ ಒಂದು ತೊಗುಯ್ಯಲೇ
ಮರೆಯಬೇಡಮ್ಮ
ಬಾಳಲಿ ಕದನ ನಿಲ್ಲದ ಪಯಣ
ತಾಳ್ಮೆ ಬೇಕಮ್ಮ !

ಇದು ನೆನ್ನೆ ಮೊನ್ನೆಯ ಸಮಸ್ಯೆ ಅಲ್ಲ ಯಾವಾಗ ಹೆಣ್ಣು ಈ ಭೂಮಿ ಮೇಲೆ ಕಾಲಿಟ್ಲೋ ಅಂದಿನಿಂದ ಇಂದಿನಹೊರೆಗೂ ಈ ಬಡತನ, ವರದಕ್ಷಿಣೆ, ಕಣ್ಣಿರು ಅವಳ ಬೆನ್ನ ಹಿಂದೇನೆ ಬಂದಿದೆ ಅಲ್ವ ! ಇಲ್ಲಿ ನಾನಾದರು ಬರಿ ಮಾತುಗಳಿಂದ ಸಮಾದಾನ ಮಾಡಿ ಸಾಂತ್ವನ ಹೇಳ ಬಹುದು ಆದ್ರೆ ಈ ಸಮಸ್ಯೆ ಅನ್ನೋ ಸಮಸ್ಯೆಗಳನ್ನ ಕೊನೆಗಾಣಿಸೋಕೆ ಆ ಬ್ರಮ್ಹನಿಂದಲೂ ಆಗೋಲ್ಲ ಅನಿಸುತ್ತೆ ಅಲ್ವ !

ಕೈಯಲಿದ್ದ ಕರ್ಚಿಪ್ ನಿಂದ ಕಣ್ಣಿರನ್ನು ಒರೆಸಿಕೊಂಡು ನನ್ನ ಆ ಮುದ್ದು ಗೆಳತಿ ಮತ್ತೆ ಮಾತನಾಡ ತೊಡಗಿದಳು. ಅದೇನೋ ಗೊತ್ತಿಲ್ಲ ಕಣ್ರೀ ನಿಮ್ಮ ನೋಡಿದ ತಕ್ಷಣ ನನ್ನ ಎಲ್ಲ ನೋವಗಳನ್ನ ನಿಮ್ಮ ಜೊತೆ ಶೇರ್ ಮಾಡ್ಕೊಬೇಕು ಅನಿಸಿತ್ತು ಅದಕ್ಕೆ ಎಲ್ಲ ನಿಮ್ಗೆ ಹೇಳ್ತಾ ಇದೀನಿ ಈ ಥರನಾದ್ರು ನಾನು ನನ್ನ ಭಾವನಗಳನ್ನ ನಿಮ್ಮ ಜೊತೆ ಹಂಚಿಕೊಂಡು ನನ್ನ ದುಃಖನ ಕಡಿಮೆ ಮಾಡಿಕೊಳ್ತಾ ಇದೀನಿ ಏನು ತಪ್ಪು ತಿಳ್ಕೊಬೇಡಿ ಅಂದ್ಲು ಅಷ್ಟರಲ್ಲಿ ಅವಳ ಸ್ಟಾಪ್ ಬಂತು ಕೈಯಲ್ಲಿ ಬ್ಯಾಗ್ ತಗೊಂಡು ಇಳಿದಳು ರೈಲ್ ಹೊರೋಡೋಕೆ ಇನ್ನು ಟೈಮ್ ಇತ್ತು ಅದಕ್ಕೆ ಜೊತೆಗೆ ನಾನು ಇಳಿದೆ ಮತ್ತೆ ಯಾವಾಗ್ ಸಿಗ್ತಿರ ಅಂತ ಕೇಳ್ದೆ ಅವಳು "ನನ್ನ ಕಡೆ ಒಮ್ಮೆ ನೋಡಿ ಮಂಜು ನೀವು ಯಾರು ಏನು ಅಂತ ಗೊತ್ತಿಲ್ಲ ಆದ್ರೆ ನಿನ್ನಂತ ಒಳ್ಳೆ ಹುಡುಗ ನನಗೆ ಸಿಗ್ತನೋ ಇಲ್ವೋ ! ನಿನಗೆ ಮಾತ್ರ ಒಳ್ಳೆ ಹುಡುಗಿ ಸಿಗ್ಲಿ ನಿಮ್ಮನ್ನ ನೋಡೋ ಋಣ ಇತ್ತು ಅಂದ್ರೆ ಮತ್ತೆ ನಾವಿಬ್ರು ಸಿಕ್ಕೆ ಸಿಗ್ತಿವಿ " ಅಮ್ಮನ್ನ ಚನ್ನಾಗಿ ನೋಡಿಕೊಳ್ಳಿ ನಿಮ್ಮ ಜೊತೆ ಕಳೆದ ಈ ಕೆಲವು ಕ್ಷಣಗಳು ನನ್ನ ಜೀವನ ಇರೋತನಕ ಮರೆಯೋಲ್ಲ (ನಿಲ್ಲದ ಕಣ್ಣಿರು). ಅಷ್ಟರಲ್ಲಿ ರೈಲ್ ಹೊರಡ್ತು ನನಗೆ ರೈಲ್ ಹತ್ತೋ ಮನಸ್ಸಿರಲಿಲ್ಲ ಕೈ ಕುಲಕಿ ಶುಭಕೋರಿ ಮತ್ತೆ ಮೆಲ್ಲನೆ ದ್ವನಿಯಲ್ಲಿ "ನೀವು ಎಲ್ಲೇ ಇದ್ರೂ ಚನ್ನಗಿರಿ ನಿಮ್ಮ ಮುಂದಿನ ಜೀವನ ಇನ್ನು ಚನ್ನಗಿರುತ್ತೆ " ದೇವರು ನಿಮ್ಮನ್ನ ಕಾಪಾಡ್ತಾನೆ ಅಂದೇ ರೈಲ್ ಹೋಗ್ತಾನೆ ಇತ್ತು ನಾನು ಇನ್ನು ಅವಳನ್ನೇ ನೋಡ್ತಾ ನಿಂತಿದ್ದೆ ಆಗ ಆ ಗೆಳತಿ ತನ್ನ ಕೈಯಲ್ಲಿದ ಬ್ಯಾಗ್ ಬಿಟ್ಟು ನನ್ನ ಕೈ ಹಿಡಿದು ರೈಲ್ ಹೋಗ್ತಾ ಇದೇ ಬೇಗ ಹತ್ತಿ ಅಂತ ನನ್ನ ತಳ್ಳಿದ್ಲು........

ಅದೇ ಕೊನೆ ನಾನು ಆ ಗೆಳತಿನ ನೋಡಿದ್ದು ಇಲ್ಲಿಗೆ ಒಂದುವರೆವರ್ಷ ಆಯ್ತು ಅನಿಸುತ್ತೆ ಆ ಗೆಳತಿ ಹೇಳಿದಂಗೆ ಮತ್ತೆ ಅವಳನ್ನ ನೋಡೋ ಋಣ ಬರುತ್ತಾ .................... ? ? ? ಬಂದೆ ಬರುತ್ತೆ ಅಂತ ಹೇಳ್ತಾ ಇದೇ ನನ್ನ ಮನಸ್ಸೂ ಅದಕ್ಕೆ ಇದುವರೆಗೂ ನಾನು ಅದೇ ರೈಲ್ ಗೆ ಹೋಗ್ತಾ ಇರ್ತೀನಿ ಒಂದಲ್ಲ ಒಂದು ದಿನ ಆ ಋಣ ಕೊಡಿ ಬಂದ್ರೆ ಅದೇ ರೈಲ್ ನಲ್ಲಿ ಅದೇ ಬೋಗಿನಲ್ಲಿ "ಅವಳ ಗಂಡನ ಜೊತೆ ನನ್ನ ಮುದ್ದು ಗೆಳತಿ ಕೈಯಲ್ಲೊಂದು ಮಗು" ನೋಡೇ ನೋಡ್ತೀನಿ ಇದು ಅವಳ ಕನಸ್ಸು ನನ್ನ ಕನಸ್ಸು ಕೊಡ ನಮ್ಮಿಬ್ಬರ ಸ್ನೇಹಮಯ ಕನಸು ನನಸು ಆಗುತ್ತೆ ಅಲ್ವ !

ನೆನಪಿನ ಅಂಗಳದಿ
ನೆನಪಿನ ರಂಗೋಲಿ ಇಟ್ಟು
ನೆನಪಿನ ಬಣ್ಣ ತುಂಬುವ ಮುನ್ನ
ನೆನಪಲ್ಲೇ ನೆನಪಾಗಿ ಹೋದ
"ನನ್ನ ಮುದ್ದು ಗೆಳತಿ ಭಾವನೆಗಳ ಒಡತಿ"
ಎಲ್ಲೇ ಇರು ಹೇಗೆ ಇರು ಚನ್ನಾಗಿರು
ಇಂತಿ ನಿನ್ನ ಕೆಲವೇ ಕೆಲವು ಘಂಟೆಗಳ
ಗೆಳೆಯ ನಿನ್ನ ಸ್ನೇಹದ ಸೇವಕ
ದೊಡ್ಡಮನಿ.ಎಂ.ಮಂಜು.

Monday, 18 January 2010

ಪ್ರೀತಿಕೊಂದ ಕೊಲೆ ಗಾತಿ

"ಕೇಳಿ ಪ್ರೇಮಿಗಳೇ ಒಬ್ಬಳು ಸುಂದರಿ ಇದ್ದಳು
ಪ್ರೀತಿಕೊಂದ ಕೊಲೆ ಗಾತಿ ನಾ ಹೇಳೋ ಕತೆಗೆ ಸ್ಪೂರ್ತಿ"

ಪ್ರೀಯ ಓದುಗರೇ ಈ ಮೇಲಿನ ಸಾಲುಗಳನ್ನ ಕೇಳಿದ್ದೀರಾ ಅಲ್ವ !
ಆ ಸಾಲುಗಳು ಹೇಳೋವಂತೆ ಒಂದು ರೋಮಾಂಚನಕಾರಿ ಪ್ರೇಮ ಕತೆನಾ ಇವತ್ತು ನಿಮ್ಮ ಮುಂದೆ ಇಡ್ತಾ ಇದೀನಿ please hold your brain
ಒಂದಂತ್ತು ಸತ್ಯ ಈ ಕತೇನಾ ಓದಿದಮೇಲೆ ಕಟ್ಟ ಕಡೆಯದಾಗಿ ನಿಮ್ಮನ್ನ ಕಾಡೋ ಪ್ರಶ್ನೆ ಒಂದೇ ಹೀಗೂ ಉಂಟೆ . . . ?

"ಈ ಕತೆಯನ್ನ ಓದುವುದರಿಂದ ನಿಮ್ಮ ಸಮಯ ಹಾಳಾಗುತ್ತೆ ಅಂದುಕೊಳ್ಳುವವರು ದಯವಿಟ್ಟು ಇಲ್ಲಿಗೆ ಓದುವುದನ್ನ ನಿಲ್ಲಿಸಿ"

ಕತೆ ಈಗ ಪ್ರಾರಂಭ :-
ಅವನು ತುಂಬಾ ಶ್ರೀಮಂತ ಮನೆಯ ಹುಡುಗ ರಾಜ್ ಅಂತ ಅವನಿಗೆ ಅಪ್ಪಿತಪ್ಪಿ ರೋಜ ಅನ್ನೋ ಹುಡುಗಿ ಪರಿಚಯ ಆಗ್ತಾಳೆ ಆ ಪರಿಚಯ ಸ್ನೇಹ ಆಗುತ್ತೆ ಆ ಸ್ನೇಹ ಕೊನೆಗೆ ಪ್ರೀತಿಯಾಗುತ್ತೆ ರಾಜ್ ಅವಳನ್ನ ಎಷ್ಟು ಪ್ರೀತಿ ಮಾಡ್ತಾ ಇದ್ದ ಅಂದ್ರೆ ಒಂದು ನಿಮಿಷನು ಅವಳನ್ನ ಬಿಟ್ಟು ಇರ್ತ ಇರ್ಲಿಲ್ಲ, ಅವಳು ಸಹ ಅಷ್ಟೇ ರಾಜ್ ಇಲ್ದೆ ನನಗೆ ಲೋಕಾನೆ ಇಲ್ಲಾ ಅಂತಿದ್ಲು.

ಇವರ ಪ್ರೀತಿಗೆ ಮನೆಯವರು ಒಪ್ಪಿ ಒಂದು ಒಳ್ಳೆ ದಿನನೋಡ್ಕೊಂಡು ಮಧುವೆ ಮಾಡ್ಬಿಡ್ತಾರೆ ಅದು ಬೆಟ್ಟದಮೇಲೆ ಇರೋ ಶ್ರೀ ರಾಮನ ದೇವಸ್ಥಾನದಲ್ಲಿ.

ಸ್ಟೋರಿಲಿ ಟ್ವಿಸ್ಟ್

ಡಿಯರ್ ಫ್ರೆಂಡ್ಸ್ ರೋಜ ಪ್ರೀತಿ ಮಾಡಿದ್ದು ರಾಜ್ ನಾ ಅಲ್ಲಾ ಅವನ ಜೊತೆ ಇರೋ ಅವನ ಕಾರು ಬಂಗಲೆ, ಅವನ ಆಸ್ತಿನ ಅಂತ ಗೊತ್ತಾಗೋಕೆ ತುಂಬಾ ದಿನಗಳು ಬೇಕಾಗಲಿಲ್ಲ ,
ಡಿಯರ್ ಫ್ರೆಂಡ್ಸ್ ರೋಜ ಪ್ರೀತಿ ಅನ್ನೋ ನಾಟಕ ಮಾಡಿ ರಾಜ್ ನ ಯಾರು ಇಲ್ಲದ ಸಮಯನೋಡ್ಕೊಂಡು ಬೆಟ್ಟದ ತುದಿಗೆ ಕರ್ಕೊಂಡು ಹೋಗ್ತಾಳೆ ಅವನು ಅವಳನ್ನ ನೋಡ್ತಾ ಮಾತಾಡ್ತಾ ಮೈ ಮರೆತಾಗ ರೋಜ ಚೋರಿಯಿಂದ ಚುಚ್ಚಿ ಚುಚ್ಚಿ ಕೊಲೆ ಮಾಡಿ ಸತ್ತ ರಾಜ್ ನ ಹೆಣನ ಬೆಟ್ಟದ ತುದಿ ಇಂದ ತಳ್ಳಿ ಕಾಲು ಜಾರಿ ಬಿದ್ದ ಅಂತ ಎಲ್ಲರನ್ನು ನಂಬಿಸಿ ಬಿಡ್ತಾಳೆ ಪಾಪ ಅಷ್ಟೊಂದು ದೊಡ್ಡ ಬೆಟ್ಟದಲ್ಲಿ ಅವನ ಹೆಣ ಹುಡುಕೋಕೆ ಪೊಲೀಸರು ತುಂಬಾ ಸಾಹಸ ಪಡ್ತಾರೆ ಕಡೆಗೆ ದೊಡ್ಡ ಅರಣ್ಯ ಆದ್ರಿಂದ ಈಗಾಗಲೇ ಪ್ರಾಣಿಗಳು ದೇಹನ ತಿಂದು ಬಿಟ್ಟಿರ್ತವೆ ಅಂತ ತಮ್ಮ ಹುಡುಕಾಟ ನಿಲ್ಲಿಸಿ ಬಿಡ್ತಾರೆ.

ಡಿಯರ್ ಫ್ರೆಂಡ್ ಕಳ್ಳನ ಮನಸ್ಸು ಹುಳ್ಳು ಹುಳ್ಳುಗೆ ಅನ್ನೋಹಾಗೆ ರೋಜಳಿಗೆ ಕೊಲೆ ಮಾಡುವಾಗ ಉಟ್ಟಿದ್ದ ಅವಳ ಬಿಳಿ ಸೀರಿಯಾ ಮೇಲೆ ರಕ್ತದ ಕಲೆಗಳು ಹಾಗೆ ಇರ್ತವೆ ಯಾವ ಸೋಪ್ ಹಾಕಿ ತೊಳೋದ್ರು ಕಲೆ ಹೋಗಿರೋದಿಲ್ಲ ಕೊನೆಗೆ ಮನೇಲಿ ಕೆಲಸ ಮಾಡೋ ಮಂಜನಿಗೆ ಯಾವದಾದ್ರು ಒಳ್ಳೆ ಸೋಪ್ ಇದ್ರೆ ಹೇಳೋ ನನ್ನ ಸೀರೆ ಮೇಲೆ ತುಂಬಾ ಕಲೆಗಳಿವೆ ಅಂತ ಕೇಳ್ತಾಳೆ ಡಿಯರ್ ಫ್ರೆಂಡ್ ಸ್ಟೋರಿಲಿ ಟ್ವಿಸ್ಟ್ ಶುರುವಾಗಿದ್ದೆ ಇಲ್ಲಿಂದ,

ಮಂಜ ತಕ್ಷಣ ಒಂದು ಉಪಾಯಕೊಟ್ಟ ಅದು ಏನಂದ್ರೆ

"ಶಶಿ ಇದ್ದಲ್ಲಿ ಕೊಳೆಯ ಮಾತೆಲ್ಲಿ"

@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@











ಕಟ್ಟ ಕಡೆಯದಾಗಿ ನಿಮ್ಮನ್ನ ಕಾಡೋ ಪ್ರಶ್ನೆ ಒಂದೇ ಹೀಗೂ ಉಂಟೆ . . . ? ನೋಡಿ ದಾವಣಗೆರೆಯ ಒಂದು ಸೋಪ್ ಪ್ರಚಾರ ಮಾಡೋದಕ್ಕೆ ಮಂಜು ಇಷ್ಟೇಲ್ಲ ಬಿಲ್ಡ್ಅಪ್ ಕೊಡಬೇಕಿತ್ತ !!

Tuesday, 1 December 2009

ಸಾವೆಂಬ ಸಾವು ಒಪ್ಪದ ಈ ಸಾವು !

ಕಾವ್ಯ
"ಪ್ರೀತಿಯ ಇತಿಹಾಸದ ಪುಟಕ್ಕೆ ಅಮರ ಈ ಹೆಸರು
ಪ್ರೀತಿಸುವ ಹೃದಯಗಳಿಗೆ ಎಚ್ಚರದ ಬೆಚ್ಚನೆಯ ಉಸಿರು"
ಕಾವ್ಯಳ ಮನೆಯಲ್ಲಿ ಹಿಂದೆಂದು ಕಾಣದ ಕರಾಳ ಮೌನ, ಮಧುವೆಗೆಂದು ಹಾಕಿರುವ ಚಪ್ಪರ ಗಾಳಿಯೊಂದಿಗೆ ಶೋಕ ಗೀತೆ ಹಾಡುತ್ತಿದೆ ಕಾವ್ಯಳ ಶವದ ಮುಂದೆ ಜನ ಸಾಗರವೇ ತುಂಬಿದೆ, ಕಾವ್ಯಳ ಸಾವಿನಿಂದ ದಿಕ್ಕು ತೋಚದೆ ನಿಂತಿರುವ ತಂದೆ, ಅತ್ತು ಅತ್ತು ಕಣ್ಣಿರೆಲ್ಲ ಬತ್ತಿ ಉಸಿರಾಡಲು ಉಸಿರಿಲ್ಲದಂತಾಗಿರುವ ಕಾವ್ಯಳ ತಾಯಿ, ಇನ್ನು ತಪ್ಪಿತಸ್ಥರಂತೆ ತಲೆ ಬಾಗಿ ನಿಂತಿರುವ ಕಾವ್ಯಳ ಅತ್ತೆ, ಮಾವ ಜೊತೆಗೆ ಅಪಾರ ಸ್ನೇಹಿತರ ನಿಲ್ಲದ ಆಕ್ರಂದನ ದುಃಖದ ಕಡಲೆ ಅಲ್ಲಿ ಅಲೆ ಅಲೆಯಾಗಿ ಮುಗಿಲು ಮುಟ್ಟುತ್ತಿದೆ.

"ನೆನಪಿನ ಜಾತ್ರೆಯಲ್ಲಿ ನಿಲ್ಲದ ಕಣ್ಣಿರಿನ ತೇರು
ಪ್ರೀತಿಯ ತ್ಯಾಗಕ್ಕೆ ಯಾರು ಸಹಿಸದ ಕಹಿ ನೋವು

ಆಕಾಶದಲ್ಲಿ ಸೂರ್ಯನ ಸುಳಿವಿಲ್ಲ ಸಂಜೆ ಆಗುತ್ತಿದ್ದೆ ಮುಂದೆ ಆಗುವ ಕಾರ್ಯಗಳಿಗೆ ಕಾವ್ಯಳ ಕುಟುಂಬದವರು ಸಜ್ಜಾಗಿದ್ದಾರೆ, ದೊರದಿಂದ ಬರುವ ಸಂಬಧಿಕರು, ನೆಂಟರು ಸ್ಹೆಂಹಿತರು ಎಲ್ಲ ಬಂದಿದ್ದಾರೆ, ಕಾವ್ಯ ಬರೆದ ಪತ್ರ ಮಾತ್ರ ಒಬ್ಬರ ಕೈ ಯಿಂದ ಒಬ್ಬರಿಗೆ ಸಾಗುತ್ತಲಿದೆ. ಓದಿದವರ ಕಣ್ಣುಗಳಲ್ಲಿ ಕಣ್ಣೀರಧಾರೆ ಹರಿಯುತ್ತಲಿದೆ.

ಇಲ್ಲಿ ಎಲ್ಲರ ಕಣ್ಣು ಒಬ್ಬನನ್ನೇ ಹುಡುಕುತ್ತಿತ್ತು ? ? ? ? ? ? ಎಲ್ಲಿ ಮನೋಜ ಕಾಣ್ತಾನೆ ಇಲ್ವಲ್ಲ ಅಂತ, ಎಲ್ಲಿ ಹುಡುಕಿದರೂ ಮನೋಜ ಕಾಣುತ್ತಿಲ್ಲ, ಇತ್ತ ಮನೋಜನ ಅಪ್ಪ ಅಮ್ಮ ಹಾಕುತ್ತಿರುವ ಹಿಡಿ ಶಾಪ ಬೈಗಳು, ಇದ್ಯಾವುದರ ಅರಿವಿಲ್ಲದಂತೆ ಶಾಶ್ವತವಾಗಿ ಚಿರ ನಿದ್ರೆಗೆ ಶರಣಾಗಿರುವ ಕಾವ್ಯ. ಇಷ್ಟಾದರೂ ಮನೋಜನ ಸುಳಿವಿಲ್ಲ, ಅವನಿಗಾಗಿ ಸ್ನೇಹಿತರ ನಿಲ್ಲದ ಹುಡುಕಾಟ. ಸಿಗುವ ಯಾವುದೇ ಸೂಚನೆಗಳಿಲ್ಲ. ಅಲ್ಲಿಯವರೆಗೂ ಕಾವ್ಯಳ ಶವದ ಮುಂದೆ ಜಾಗ ಕದಲದೆ ಮನುಷ್ಯನಂತೆ ಅಳುತ್ತ ಕೊತಿದ್ದ ಕಾವ್ಯಳ ಮುದ್ದಿನ ನಾಯಿಮರಿ ಎದ್ದು ಒಳಗೆ ಹೊರಟಿತು.

ಇತ್ತ ಮನೋಜನಾ ಪ್ರೀತಿಯ ನಶೆಯಲ್ಲಿ ತೇಲುತ್ತಿದ್ದ "ಪ್ರೀತಿ" ತನಗೆ ಮನೋಜ ಸಿಗೋಲ್ಲ ಅಂತ ತಿಳಿದು ತಾನು ಯಾರು ಎಂಬುದನ್ನು ತಿಳಿಯದ ಸ್ಥಿತಿಯಲ್ಲಿ ಅರೆ ಹುಚ್ಚಿ ಯಾಗಿ ಪ್ರತಿ ಒಂದು ಕ್ಷಣವೂ ಮನೋಜನನ್ನೇ ಜಪಿಸುತ್ತ ಉಸಿರಾಡೋ ಗೊಂಬೆಯಾಗಿದ್ದಾಳೆ

"ಒಲಿಯದ ಪ್ರೀತಿಯ ಹಿಂದೆ ಬಿದ್ದವಳೋಬ್ಬಳು
ಒಲಿದ ಪ್ರೀತಿಯ ಕಳೆದುಕೊಂಡವನೋಬ್ಬನು
ಇದ್ಯಾವುದನ್ನು ಅರೆಯದೆ ಪ್ರಾಣವ ಕೊಟ್ಟವಳೋಬ್ಬಳು"

ಇನ್ನೇನು ಪ್ರೇಮದ ಸುಂದರ ತೇರು ಹೊರಡುವ ಸಮಯ, ಮಧುಮಗಳಂತೆ ಸಿಂಗಾರವಾದ ಕಾವ್ಯಳ ತ್ಯಾಗದ ಮೆರವಣಿಗೆ ಹೋಗುವ ಸಮಯ.ಅಷ್ಟರಲ್ಲಿ ಮನೆಯ ಒಳಗಿಂದ ಕಾವ್ಯಳ ಮುದ್ದು ನಾಯಿಮರಿ ಕರಳು ಹಿಂಡುವಂತೆ ಕೊಗುತ್ತ ಓಡಿ ಬಂದು ಕಾವ್ಯಳ ಸೆರಗನ್ನ ಎಳೆಯುತಲಿತ್ತು ಮೊದ ಮೊದಲು ಯಾರು ಅಸ್ಟೊಂದು ಗಮನ ಕೊಡದೆ ಯಾರೋ ಒಬ್ಬರು ನಾಯಿಮರಿಯನ್ನು ಹಿಡಿದು ಕಟ್ಟಿ ಹಾಕಿದರು ಅದರ ಕೊಗು ಮತ್ತೆ ಮತ್ತೆ ಮುಗಿಲು ಮುಟ್ಟುತ್ತಿತ್ತು ಅದರ ಅಂತರಾಳವ ಯಾರು ಅರ್ಥ ಮಾಡಿಕೊಳ್ಳದಾದರು, ಕೊನೆಗೆ ಕಾವ್ಯಳ ತಾಯಿ ಕಟ್ಟಿದ್ದ ನಾಯಿ ಮರಿಯನ್ನ ಬಿಚ್ಚಿದರು ಮತ್ತೆ ಕೊಗುತ್ತ ಓಡಿ ಬಂದು ಕಾವ್ಯಳ ಸೆರಗನ್ನ ಎಳೆಯುತಲಿತ್ತು ಅಲ್ಲಿದವರು ಯಾಕಮ್ಮ ಅದನ್ನ ಬಿಟ್ರಿ ಅಂದದ್ದಕ್ಕೆ ಕಾವ್ಯಳ ತಾಯಿ ಅಳುತ್ತ "ನನ್ನ ಮಗಳು ಯಾವತ್ತು ಅದನ್ನ ಕಟ್ಟಿದವಳಲ್ಲ ಒಂದು ವೇಳೆ ಯಾರಾದ್ರೂ ಕಟ್ಟಿದ್ರೆ ಜಗಳನೇ ಮಾಡಿ ಬಿಡೋಳು" ಎಂದು ಹೇಳಿ ಅಳುತ್ತ ಕುಸಿದು ಬಿಟ್ಟರು ಅಷ್ಟರಲ್ಲೇ ಹತ್ತಿರದಲ್ಲಿದ್ದವರು ಸಂತೈಸಿದರು ನಾಯಿ ಮರಿಯ ಕೊಗು ಮಾತ್ರ ನಿಲ್ಲಲಿಲ್ಲ. ನಾಯಿ ಮರಿ ನಾಯಿ ಮರಿ ತಿಂಡಿ ಬೇಕೇ ಅನ್ನೋ ಕಾವ್ಯಳ ಹಾಡನ್ನ ನೆನಪುಮಾಡಿಕೊಂಡು ಬಿಕ್ಕಳಿಸಿ ಅಳುತ್ತಿತ್ತು ಅನಿಸುತ್ತೆ. ಕೊನೆಗೂ ಸುಮ್ಮನಿರದ ಮುದ್ದು ನಾಯಿಮರಿ ಕಾವ್ಯಳ ತಾಯಿಯ ಸೀರೆಯನ್ನು ಹಿಡಿದು ಎಳೆದು ಕೊಂಡು ಮನೆಯೊಂದರ ಕೊಠಡಿಗೆ ಕರೆದೋಯುತ್ತಿದೆ ಎಲ್ಲರೂ ಅದನ್ನೇ ಹಿಂಬಾಲಿಸುತ್ತಿದ್ದಾರೆ ನಾಯಿ ಮರಿ ಕಾವ್ಯಳ ಕೊಠಡಿಗೆ ಕರೆದೊಯ್ದು ಬಾಗಿಲ ಬಳಿ ನಿಂತು ಮತ್ತೆ ಕೊಗುತ್ತಿದೆ ಯಾರಿಗೂ ದಿಕ್ಕು ತೋಚುತ್ತಿಲ್ಲ ಕಾವ್ಯಳ ತಾಯಿ ಬಾಗಿಲನ್ನ ತೆಗೆಯಲು ಯತ್ನಿಸಿದರೆ ಒಳಗಡೆ ಇಂದ ಲಾಕ್ ಆಗಿದೆ ಎಲ್ಲರಲ್ಲೂ ಸಂಶಯ ಮತ್ತೊಷ್ಟೋ ಹೆಚ್ಚುತ್ತಿದ್ದೆ ಅಲ್ಲಿದ್ದ ಕೆಲವರು ಬಾಗಿಲನ್ನು ಒಡೆದು ಒಳಗೆ ಹೋದರೆ ಎಲ್ಲರಿಗೂ ಕಂಡಿದ್ದು ನೇತಾಡುತ್ತಿರುವ ಮನೋಜ ಹೆಣ

(ಹೌದು ಮನೋಜ ಯಾರಿಗೂ ಸಿಗದೇ ತಲೆ ಮರೆಸಿಕೊಂಡಿದ್ದ ಕಾವ್ಯಳ ಮನೆಯ ಹಿಂಬಾಗಿಲಿನಿಂದ ಒಳಗೆ ಬಂದು ಕಾವ್ಯಳ ರೂಮಿನ ಒಳಗೆ ಹೋಗಿ ಭದ್ರವಾಗಿ ಬಾಗಿಲು ಹಾಕಿಕೊಂಡ ಯಾರಿಗೂ ಗೊತ್ತಿರಲಿಲ್ಲ ಅವನನ್ನ ನಾಯಿಮರಿ ಮಾತ್ರ ಗಮನಿಸಿತು ಅದು ಎದ್ದು ಒಳಗೆ ಬಂದು ಕೂಗುವಾಗ ಯಾರಾದರು ನೋಡಿದ್ದರೆ ಇನ್ನೊದು ಸಾವನ್ನು ತಪ್ಪಿಸ ಬಹುದಿತ್ತು. ಮನೋಜನಿಗೆ ಅವಳ ಸಾವಿನಿಂದ ಯಾರಿಗೂ ಮುಖ ತೋರಿಸಲು ಮನಸ್ಸಾಗಲಿಲ್ಲಿ ಎಲ್ಲಾದರು ದೂರಹೋಗಿ ಸಾಯ ಬೇಕೆಂದರೆ ಕಾವ್ಯಳ ನೆನಪು ಅವನಿಗೆ ಕಾಡುತ್ತಿದೆ ಕೊನೆಯ ಬಾರಿ ಒಮ್ಮೆ ದೊರದಲ್ಲೇ ನಿಂತು ಅವಳ ಮುಖ ನೋಡಿ ಅವಳ ಒಂಟಿ ಹಕ್ಕಿಯ ಪಯಣದಲ್ಲಿ ತಾನು ಸೇರಿಕೊಂಡು ಜೋಡಿ ಹಕ್ಕಿಯ ಪಯಣ ಬೆಳೆಸಿದ)

ಕಾವ್ಯ
"ಪ್ರೀತಿಯ ಇತಿಹಾಸದ ಪುಟಕ್ಕೆ ಅಮರ ಈ ಹೆಸರು
ಪ್ರೀತಿಸುವ ಹೃದಯಗಳಿಗೆ ಎಚ್ಚರದ ಬೆಚ್ಚನೆಯ ಉಸಿರು"

ಹಾಗಾದ್ರೆ ಈ ಇಬ್ಬರ ಪ್ರೀತಿ ಸಾವಿನಿಂದ ಕೊನೆಯಾಗಿ ಬಿಡ್ತಾ No, Never Dear friends ಕೇಳದೆ ನಿಮಗೀಗ ದೊರದಲ್ಲಿ
ಯಾರೋ ........... ಲ ಲ ಲ ಲ ಲ ಲ ಲಾ ಲಾ ಲಾ....... ಓ ಓ ಓ .... ಲ ಲ ಲ ಲ ಲ ಲಾ ಲಾ ಲಾ


ಈ ಧ್ವನಿ ಸುರಳಿಯನ್ನು ಆಲಿಸಿ :-



ನಿಮ್ಮ "ದೊಡ್ಡಮನಿ.ಮಂಜು"
9742495837

Wednesday, 9 September 2009

ಹಾಗಾದ್ರೆ ಪ್ರೀತಿ ಅಮರ ತ್ಯಾಗ ಮಧುರ ಅಂದ್ರೆ ಇದೇನಾ ?

"ನಿನ್ನ ಸಂತೋಷಕ್ಕಾಗಿ ನಾನು ಏನು ಬೇಕಾದ್ರೂ ಮಾಡ್ತೀನಿ ಕಣೋ,
ನನಗೆ ನಿನ್ನ ಸಂತೋಷನೇ ಮುಖ್ಯ ಕಣೋ,
ನಿನ್ನ ಮುಖದಲ್ಲಿ ಈ ನಗು ಯಾವತ್ತು ಹೀಗೆ ಇರಲಿ ಕಣೋ "

ಮನೋಜ್ ಇಲ್ಲದೆ ಕಾವ್ಯಳಿಗೆ ಬೇರೆ ಏನು ಇಲ್ಲ ನಿಂತರು ಅವನೇ ಕುಂತರು ಅವನೇ ಕನಸಲ್ಲೂ ಅವನದೇ ಕನವರಿಕೆ, ಅವಳು ಅವನನ್ನ ಎಷ್ಟು ಪ್ರೀತಿ ಮಾಡ್ತಾ ಇದ್ಲು ಅನ್ನೋದು ಅವಳಿಗೂ ಗೊತ್ತಿರ್ಲಿಲ್ಲ ಅನಿಸುತ್ತೆ. ಅವನಿಗಾಗಿ ಏನು ಬೇಕಾದ್ರೂ ಮಾಡ್ತಾ ಇದ್ಲು, ದಿನಕ್ಕೆ ಒಂದು ಹತ್ತು ಸಲನಾದ್ರು ಮನೋಜನಿಗೆ "ನಿನ್ನ ಸಂತೋಷಕ್ಕೆ ನನ್ನ ಪ್ರಾಣ ಬೇಕಾದ್ರೂ ಕೊಡ್ತೀನಿ ಕಣೋ " ಅಂತಾನೆ ಇದ್ಲು.

ಮನೋಜ ಯಾವಾಗಲು ತಮಾಷೆಯ ಹುಡುಗ ಕಾವ್ಯನ ತುಂಬಾನೇ ರೆಗುಸ್ತ ಇರ್ತಾನೆ ಆದರೆ ಅಷ್ಟೇ ಪ್ರೀತಿ ಕೊಡ ಮಾಡ್ತಾ ಇರ್ತಾನೆ ಫೋನ್ ನಲ್ಲಿ ಅವಳ ದ್ವನಿ ಕೇಳದನೆ ಇವನು ಬೆಳ್ಳಗ್ಗೆ ಎಳೋದಿಲ್ಲ, ರಾತ್ರಿ ಗುಡ್ ನೈಟ್ ಇವನಿಗೆ ಅವಳು ಹೇಳ್ದನೆ ಇವನು ಮಲಗಿರೋ ದಿನಗಳೇ ಇಲ್ಲ, ಅಂತಹ ಪ್ರೀಮಿಗಳು.

ಕಾವ್ಯ ಅವನನ್ನ ಕೆಲವುದಿನ ಗಳಿಂದೇನು ಲವ್ ಮಾಡ್ತಾ ಇರ್ಲಿಲ್ಲ ನಿಜ ಹೇಳ್ಬೇಕು ಅಂದ್ರೆ ಅವನನ್ನ ಕಾವ್ಯ ಸುಮಾರು ವರ್ಷಗಳಿಂದ ಲವ್ ಮಾಡ್ತಾ ಇದ್ಲು ಅಂದ್ರೆ ಅವಳ ಬಾಲ್ಯ ದಿಂದ, ಹೌದು ಮನೋಜ್ ಕಾವ್ಯಳ ಅತ್ತೆ ಮಗ ಅಲ್ಲದೆ ಒಂದೇ ಸ್ಕೂಲ್, ಕಾವ್ಯ ಅವನನ್ನ ಎಷ್ಟು ಹಚ್ಚಿ ಕೊಂಡಿದ್ಲು ಅಂದ್ರೆ ಸ್ಕೂಲ್ ನಲ್ಲಿ ಮೇಸ್ಟ್ರು ಅವನನ್ನ ಸ್ಕೂಲ್ ನಿಂದ ನಾಲ್ಕು ದಿನ ಆಚೆ ಹಾಕಿದರು ಇವಳು ಸಹ ನಾಲ್ಕು ದಿನ ಹುಷಾರಿಲ್ಲ ಅಂತ ತಾನು ಸಹ ಸ್ಕೂಲ್ ಗೆ ಹೋಗಿರಲಿಲ್ಲ ಹಾಲಿನಂತ ಮನಸ್ಸು ಅಷ್ಟೇ ಸೂಕ್ಷ್ಮ ಎಲ್ಲ ವಿಷಯವನ್ನು ತುಂಬಾ ಸೀರೀಸ್ ಆಗಿ ತಗೋತಾ ಇದ್ಲು.

ನೀನು ಈಗ ದೊಡ್ಡ ಹುಡುಗಿ ಮನೋಜ್ ಜೊತೆ ಸುತ್ತುಬೇಡ ಅಂತ ಮನೆಯವರೆಲ್ಲ ಬೈದರು ಯಾರನ್ನು ಲೆಕ್ಕಿಸದೆ ಅವನೇ ನನ್ನ ಸರ್ವಸ್ವ ಅಂತ ನಂಬಿದ ಹುಡುಗಿ. ಅವನು ಅಪ್ಪ ಬೈದ್ರು ಅಮ್ಮ ಹೊಡೆದರು ಅಂತ ಬೇಜಾರ್ ಮಾಡ್ಕೊಂಡ್ರೆ ಕಾವ್ಯ ಅವನನ್ನ ತನ್ನ ತೊಡೆ ಮೇಲೆ ಮಲಗಿಸಿಕೊಂಡು ಸಮಾದಾನ ಮಾಡ್ತಾ ಇದ್ಲು ಅವನು ಅಷ್ಟೇ ಇವಳನ್ನ ಅಷ್ಟೇ ಪ್ರೀತಿ ಮಾಡ್ತಾ ಇದ್ದ. ಹೈಸ್ಕೂಲ್ ಮುಗಿದು ಕಾಲೇಜ್ ಹೋಗುವಾಗಲು ಜೊತೆಗೆ ಹೋಗ್ತಾ ಇದ್ರೂ ಅವನು ಒಂದು ವೇಳೆ ಫ್ರೆಂಡ್ಸ್ ಜೊತೆ ಎಲ್ಲಾದರು ಹೋದ್ರೆ ಇವಳು ಪ್ರತಿ ನಿಮಿಷಕ್ಕೂ ಎಲ್ಲಿದ ಏನು ಮಾಡ್ತಾ ಇದ್ದೀಯ ಇನ್ನು ಯಾವಾಗ ಬರೋದು ಅಂತ ಫೋನ್ ನಲ್ಲೆ ವಿಚಾರಿಸುತ್ತಾ ಇದ್ಲು. ಕಾಲೇಜ್ ಕಂಪಾಸ್ ನಲ್ಲಿ ಅವನು ಬೇರೆ ಹುಡುಗಿಯರ ಜೊತೆ ಒಬ್ಬನೇ ಇರುದನ್ನ ಎಲ್ಲಾದರು ನೋಡಿದ್ರೆ ಇವಳು ಅವನು ಹೋದ ಮೇಲೆ ಆ ಹುಡುಗಿ ಮನೆಗೆ ಹೋಗಿ ಅವರ ಅಪ್ಪ ಅಮ್ಮ ನ ಹತ್ರ ಜಗಳನೇ ಮಾಡಿ ಬಂದಿರೊಳು.

ಮನೆಯವರೆಲ್ಲ ಆದಷ್ಟು ಬೇಗ ಇವರಿಬ್ಬರನ್ನ ಗಂಟ್ಟು ಹಾಕಿ ಕೈ ಬಿಡಬೇಕಪ್ಪ ಅಂತ ತಿರ್ಮಾನ ಮಾಡಿದ್ರು ಅಲ್ಲದೆ ಇನ್ನು ನಾಲ್ಕು ತಿಂಗಳಲ್ಲೇ ಮಧುವೆ ಮಾಡಬೇಕು ಅಂತ ಎಲ್ಲರು ಒಪ್ಪಿಕೊಂಡಿದ್ದರು. ಆಗ ಇವರಿಬ್ಬರನ್ನ ಹಿಡಿಯೋರೆ ಇರ್ಲಿಲ್ಲ, ಈ ವಿಷಯ ತಿಳಿದಾಗ ಹೆಚ್ಚು ಖುಷಿ ಪಟ್ಟಿದ್ದು ಅವನಿಗಿಂತ ಕಾವ್ಯನೇ ಜಾಸ್ತಿ .

ಆದರೆ ಮನೋಜನಿಗೆ ಇದೆ ಮೊರುತಿಂಗಳ ಹಿಂದೆ ಪ್ರೀತಿ ಅನ್ನೋ ಹುಡುಗಿ ಪರಿಚಯವಾಗಿದ್ಲು ಅದೇ ಪರಿಚಯ ಮುಂದುವರೆದು ಆ ಹುಡುಗಿ ಇವನನ್ನ ಲವ್ ಮಾಡು ಅಂತ ಒತ್ತಾಯಿಸುತ್ತ ಇದ್ಲು, ಆದರೆ ಇವನಿಗೆ ಅದು ಒಪ್ಪಿಗೆ ಇರೋಲ್ಲ ನನಗೆ ಆಗಲೇ ಮಧುವೆ ನಿಶ್ಚಯ ಆಗಿದೆ ಅಂತ ತುಂಬಾನೇ ಹೇಳ್ತಾನೇ ಆದರೆ ಪ್ರೀತಿ ಇದ್ಯಾವುದನ್ನು ಕೇಳೋಕೆ ತಯಾರಿರಲಿಲ್ಲ. ಪ್ರೀತಿ ಮನೋಜನಿಗೆ ನೀನು ನನ್ನ ಮಧುವೆ ಆಗದೆ ಇದ್ರೆ ನಾನು ಇವತ್ತೇ ಸತ್ತು ಹೋಗ್ತೀನಿ ಅಂತ ಒಂದು ದಿನ ಇವನ ಎದುರುರಿಗೆ ಆತ್ಮಹತ್ಯಗೆ ಪ್ರಯತ್ನ ಪಟ್ಟಿರ್ತಳೆ ಮನೋಜ ಅವಳ ಸ್ಥಿತಿ ನೋಡೋಕೆ ಆಗದೆ ಇನ್ಮೇಲೆ ಹೀಗೆಲ್ಲ ಮಾಡ್ಕೋ ಬೇಡ ನಾನು ನಿನ್ನ ಲವ್ ಮಾಡ್ತೀನಿ ಅಂತ ಮಾತು ಕೊಟ್ಟು ಮನೆಗೆ ಬರ್ತಾನೆ ತಾನು ಮಾಡ್ತಾ ಇರೋದು ತಪ್ಪು ಅಂತ ಗೊತ್ತಿದ್ರು ಪ್ರೀತಿಗೆ ಮಾತು ಕೊಟ್ನಲ್ಲ ಅಂತ ಮನಸ್ಸಲ್ಲೇ ಕೊರಗುತ್ತ ಇರ್ತಾನೆ ಇನ್ನೇನು ಅವನ ಕಾವ್ಯ ಳ ಮಧುವೆಯ ಒಂದು ವಾರ ಇರುತ್ತೆ ಆಗ ಪ್ರೀತಿ ಇವನಿಗೆ ಒಂದು ಮಸಾಜ್ ಕಳಿಸಿರ್ತಲೇ "ನಾನು ಮಧುವೆ ಆದ್ರೆ ನಿನ್ನನ್ನೇ ಇಲ್ಲ ಅಂದ್ರೆ ನಾನು ಜೀವಂತ ವಾಗಿ ಇರೋಲ್ಲ" ಅಂತ ಕಳಿಸಿರ್ತಳೆ ಇವನಿಗೆ ದಿಕ್ಕೇ ತೋಚದ ಹಾಗೆ ಆಗುತ್ತೆ. ಈ ವಿಷಯನ ಹೇಗಾದ್ರು ಮಾಡಿ ಕಾವ್ಯಗೆ ತಿಳಿಸಿದರೆ ಅವಳೇ ಹೋಗಿ ಪ್ರೀತಿಗೆ ಬುದ್ದಿ ಹೇಳ್ತಾಳೆ ಅಂತ ಒಂದು ದಿನ ಇವನು ಕಾವ್ಯಳನ್ನ ಯಾರು ಇಲ್ಲದ ಸುಂದರವಾದ ಪ್ರದೇಶಕ್ಕೆ ಕರ್ಕೊಂಡು ಹೋಗತ್ತಾನೆ. ಪ್ರೀತಿ ಬಗ್ಗೆ ಎಲ್ಲ ಇವಳಿಗೆ ಹೇಳ್ತಾನೆ.

ಕಾವ್ಯ :- ನೀನು ಈಗ ಏನು ಮಾಡ ಬೇಕು ಅನ್ಕೊಂಡಿದ್ದಿಯ?

ಮನೋಜ :- (ಅವನು ಇವಳನ್ನ ಸುಮ್ಮನೆ ರೆಗಿಸಲೆಂದು ) ಇಲ್ಲ ಕಣೆ ನನಗೆ ಯಾಕೋ ಮನಸ್ಸು ಒಪ್ಪುತ್ತ ಇಲ್ಲ ಅವಳು ನನ್ನ ತುಂಬಾನೇ ಲವ್ ಮಾಡ್ತಾ ಇದಾಳೆ ನಾನೇನಾದ್ರು ಅವಳಿಗೆ ಸಿಗಲ್ಲ ಅಂತ ಗೊತ್ತಾದ್ರೆ ಅವಳು ಸತ್ತು ಬಿಟ್ತಳೆ ನಾನು ಏನು ಮಾಡ್ಲಿ ? ಆಗ ನಾನು ನೆಮ್ಮದಿ ಇಂದ ಇರೋಕೆ ಆಗುತ್ತ ನಾನು ಸಂತೋಷದಿಂದ ಇರೋಕೆ ಆಗುತ್ತ.

ಕಾವ್ಯ :- ಒಂದು ವೇಳೆ ನಾನು ಸತ್ತರೆ ???????

ಮನೋಜ :- ಹಾಗೇನಾದ್ರೂ ಆದರೆ ನಾನು ಅವಳನ್ನೇ ಮಧುವೆ ಆಗ ಬಿಡ್ತೀನಿ. ಆಗ ನಾನು ಅವಳ ಜೊತೆ ಖುಷಿಯಾಗಿ, ಸಂತೋಷದಿಂದ ಇರ್ತೀನಿ ಹ್ಹ ಹ್ಹ ಹ್ಹ ಹ್ಹ (ಅವನು ತಮಾಷೆಗಾಗಿ ಹೇಳ್ತಾನೆ )

ಕಾವ್ಯ :- ನೀನು ನಿಜವಾಗ್ಲೂ ನಾನು ಸತ್ತರೆ ಸಂತೋಷದಿಂದ ಇರ್ತಿಯ ?

ಮನೋಜ :- ಅಯ್ಯೋ ನಿನ್ನ ಆಣೆಗೂ ನಾನು ಸಂತೋಷದಿಂದ ಇರ್ತೀನಿ ಕಣೆ
(ಅವನು ತಮಾಷೆಗಾಗಿ ಹೇಳ್ತಾನೆ )

ವಿಧಿಯ ಆಟ ಶುರುವಾಗಿದ್ದೆ ಇಲ್ಲಿಂದ ಮನೋಜ ಹೇಳಿದ್ದೆಲ್ಲ ನಿಜ ಅಂತ ನಂಬಿದ ಕಾವ್ಯ ಒಂದು ಚೀಟಿಯಲ್ಲಿ

"ನಿನ್ನ ಸಂತೋಷಕ್ಕಾಗಿ ನಾನು ಏನು ಬೇಕಾದ್ರೂ ಮಾಡ್ತೀನಿ ಕಣೋ,
ನನಗೆ ನಿನ್ನ ಸಂತೋಷನೇ ಮುಖ್ಯ ಕಣೋ,
ನಿನ್ನ ಮುಖದಲ್ಲಿ ಈ ನಗು ಯಾವತ್ತು ಹೀಗೆ ಇರಲಿ ಕಣೋ "

ಅಂತ ಬರೆದು ಇಟ್ಟು ಶವದ ಪೆಟ್ಟಿಗೆಯಲ್ಲಿ ತಾನೇ ಶವ ವಾಗಿ ಮಲಗಿರ್ತಳೆ ನನ್ನ ಕತೆಯ ಕಥಾನಾಯಕಿ ಕಾವ್ಯ .

!


!


!


!



!


!

!






ಹಾಗಾದ್ರೆ ಪ್ರೀತಿ ಅಮರ ತ್ಯಾಗ ಮಧುರ ಅಂದ್ರೆ ಇದೇನಾ ?


ಅವಳ ದಾರಿಯಲಿ
ನಿಮ್ಮ "ದೊಡ್ಡಮನಿ.ಮಂಜು"
9742495837
ಮುಂದುವರೆಯುತ್ತದೆ........... !