ಸತ್ಯವನ್ನೇ ನುಡಿಸು ಗುರುವೇ ನರವಿಲ್ಲದ ಜಿಹ್ವೆಯೋಳ್ ! ಸ್ಥಿರವಾಗಿ ನೆಲೆಸು ಗುರುವೇ ಮರ್ಕಟ ಈ ಮನದೊಳ್ !

Tuesday, 15 June 2010

I MISS YOU

ಓದುವ ಮುನ್ನ:-
ನನ್ನ ಕಲ್ಪನೆಗೆ ಬಣ್ಣ ತುಂಬಿ ಈ ಕತೆ ಹುಟ್ಟೋಕೆ ಕಾರಣರಾದ ಆರ್ಕುಟ್ ಗೆಳತಿ ಶಿಲ್ಪ ಗೆ ತುಂಬ ಥ್ಯಾಂಕ್ಸ್ ಹೇಳ್ತಾ ಇದೀನಿ.
"ಹೂ ಬಾಡಿ ಹೋಗುತ್ತೆ ಅಂತ ಗೊತ್ತಿದ್ರು
ಪ್ರೀತಿಗೆ ಅರ್ಥನೇ ಗೊತ್ತಿಲ್ದಿರೋ ಒಂದು ಹೃದಯಕ್ಕೆ
ಪ್ರಾಣ ಲೆಕ್ಕಿಸದೆ ಆ ಹೂ ನಾ ತಂದು ಕೊಟ್ಟೆ
ಇನ್ನು ಏನು ಅರಿಯದ ಪುಟ್ಟ ಹೃದಯದ
ಈ ಪ್ರೀತಿಗೆ ಇಲ್ಲಾ ಅಂತಿನಾ ಇಲ್ಲೇ ಇರು ಬರ್ತೀನಿ"ಅರೆ ಮಲೆನಾಡಿನ ಚಿಕ್ಕ ಊರು ಆ ಊರಲ್ಲಿ ಇದದ್ದು ಕೇವಲ ಬೆರಳೆಣಿಕೆ ಅಷ್ಟು ಜನ ಅದ್ರಲ್ಲಿ ಊರಿನ ಶ್ರೀಮಂತ ತಂದೆ ಒಬ್ಬನ ಮಗಳೇ ನವ್ಯ ಆ ಊರಿನ ಪಕ್ಕದಲ್ಲೇ ಇರೋ ಚಿಕ್ಕ ಹಳ್ಳಿಯ ಮದ್ಯಮ ವರ್ಗದ ತಾಯಿ ಒಬ್ಬಳ ಮಗ ಮನು,

ಮನು ಮತ್ತು ನವ್ಯ ತುಂಬಾ ದಿನಗಳಿಂದ ಒಳ್ಳೆ ಫ್ರೆಂಡ್ಸ್ ಹೀಗೆ ಗೆಳತನ ಮುಂದುವರೆದು ಒಳ್ಳೆ ಪ್ರೇಮಿಗಳು ಆಗ್ತಾರೆ ಒಬ್ಬರನ್ನ ಬಿಟ್ಟು ಒಬ್ರು ಇರೋದಿಲ್ಲ ಪ್ರತಿ ದಿನ ಸಂಜೆ ಊರಿಂದ ಸ್ವಲ್ಪ ದೂರ ಇರೋ ಬೆಟ್ಟದಲ್ಲೇ ಅವರಿಬ್ಬರ ಭೇಟಿ ಮನು ಮನೆಯಲ್ಲಿ ಅವನ ತಾಯಿ ಬಿಟ್ರೆ ಬೇರೆ ಯಾರು ಇಲ್ಲಾ ಮನು ಆಗ್ಲೇ ತನ್ನ ತಾಯಿಗೆ ನವ್ಯಳ ಬಗ್ಗೆ ಹೇಳಿ ಮದುವೆಗೆ ಒಪ್ಪಿಗೆ ತಗೊಂಡಿರ್ತನೆ ಆದ್ರೆ ನವ್ಯಳಗೆ ತಾಯಿರೋದಿಲ್ಲ ಎಲ್ಲಾನು ತಂದೇನೆ ಸ್ವಲ್ಪ ಕಟು ಹೃದಯದವರು ಅಲ್ದೆ ತುಂಬಾ ಶ್ರೀಮಂತ ಅನ್ನೋ ಅಹಂ ಬೇರೆ ಹಾಗಾಗಿ ನವ್ಯ ಯಾವತ್ತು ಮನು ಬಗ್ಗೆ ತನ್ನ ಲವ್ ಬಗ್ಗೆ ತಂದೆ ಹತ್ರ ಹೇಳಿರಲಿಲ್ಲ ತಾಯಿ ಇಲ್ದೆ ಬೆಳೆದ ನವ್ಯ ತನ್ನ ತಂದೆ ಎದ್ರುಗೆ ನಿಂತು ಮಾತಾಡೋಕೆ ಹೆದ್ರುತ ಇದ್ಲು

(ಸಂಜೆ ಒಂದರ ಬೆಟ್ಟದ ಮೇಲೆ)

ನವ್ಯ : ಲೋ ನಾನು ಹೇಳೋದು ಕೇಳ್ತಿಯ ಸ್ವಲ್ಪ ..!

ಮನು : ಕೇಳ್ತಾನೆ ಇದಿನಲ್ಲ ಇನ್ನು ಏನು ಕೇಳಬೇಕು ಇಲ್ಲಿಂದ ಬಿಳ್ಬೇಕಾ ..?

ನವ್ಯ : ಲೋ ಗೂಬೆ ನಾನು ಬಿಳು ಅಂತ ಹೇಳಿದ್ನಾ ! ಸ್ವಲ್ಪ ಮುಂದೆ ಹೋಗು ಕೈಗೆ ಸಿಗುತ್ತೆ ..!

ಮನು : ಇನ್ನು ಮುಂದೆ ಹೋದ್ರೆ ಅಷ್ಟೇ ನನ್ನ ಕತೆ, ಕಾಲು ಜಾರಿ ಬಿದ್ರೆ ನನ್ನ ಮುಳೇನು ಸಿಗೋಲ್ಲ

ನವ್ಯ : ನಿನಗೆ ಮೂಳೆ ಬೇರೆ ಇದೇನಾ ... ?

ಮನು : ಏನ್ ಜೋಕ್ ಮಾಡ್ತಾ ಇದಿಯಾ, ಈ ಚಿಕ್ಕ ಹೂವಿಗೋಸ್ಕರ ನಾನು ಪ್ರಾಣನು ಲೆಕ್ಕಿಸದೆ ಈ ಬೆಟ್ಟದ ತುದಿಗೆ ಬಂದಿದೀನಿ ನೀನು ನೋಡಿದ್ರೆ ಜೋಕ್ ಮಾಡ್ತಾ ಇದಿಯಾ ..!

ನವ್ಯ : ಹೇ ಇಲ್ಲಾ ಕಣೋ ಸುಮ್ನೆ ತಮಾಷೆ ಮಾಡ್ತಾ ಇದ್ದೆ ಬೇಗಾ ತಗೊಂಡು ಬಾರೋ

ಮನು : ತಾಳು ಬಂದೆ

ನವ್ಯ : ಹುಷಾರು ಕಣೋ

ಮನು : ಉಫ್ ..... ಸುಸ್ತಾಯ್ತು ಕಣೆ ತಗೋ ಹೂವು :)

ನವ್ಯ : ತುಂಬಾ ಥ್ಯಾಂಕ್ಸ್ ಕಣೋ

ಮನು : ಅಷ್ಟೇನಾ .. ?

ನವ್ಯ : ಇನ್ನೇನು ಹೇಳ್ಬೇಕು ?

ಮನು : ಅಲ್ಲಾ ನಾನು ನೀನು ಕೇಳ್ದೆ ಅಂತ ಕಷ್ಟ ಪಟ್ಟು ಹೂವು ತಂದು ಕೊಟ್ಟಿದೀನಿ ಬೇರೆ ಏನಾದ್ರು ಹೇಳ್ಬೇಕು ಅನಿಸ್ತ ಇಲ್ವಾ !

ನವ್ಯ : ಐ ಲವ್ ಯೌ ಅಂತ ಹೇಳಬೇಕಿತ್ತ .. ?

ಮನು : ನಿನಗೆ ಅಷ್ಟೊಂದು ಧೈರ್ಯ ಇಲ್ಲಾ ಬಿಡು

ನವ್ಯ : ಲೇ. . . . ಲೂಸ್ ........ ಧೈರ್ಯ ಇಲ್ದನೆ ನಿನ್ನ ಲವ್ ಮಾಡಿದ್ನ ನಾನು.. ?

ಮನು : ಒಂದು ಸಾರಿ ಐ ಲವ್ ಯೌ ಅಂತ ಹೇಳೋಕೆ ಒಂದು ಘಂಟೆ ಟೈಮ್ ತಗೊಂಡಿದ್ದೆ ನೀನು ನೆನಪಿದೆನಾ ....

ನವ್ಯ : ಹೌದು ಕಣೋ ನೀನು ಜೊತೆ ಇದ್ರೆ ನನಗೆ ಮಾತೆ ಹೊರಡಲ್ಲ ನಿನ್ನ ಜೊತೆ ಹೀಗೆ ಸುಮ್ನೆ ಕುತುಕೊಳ್ಳೋಣ ಅನಿಸುತ್ತೆ ನಾನು ನಿನ್ನಿಂದ ಎಲ್ಲಿ ದೂರ ಆಗ್ತಿನೋ ಅನ್ನೋ ಭಯ ಆದ್ರೆ ಒಂದು ನಿಜ ಕಣೋ ನಿನ್ನ ಬಿಟ್ಟು ಮಾತ್ರ ಬಾಳೋದಿಲ್ಲ ಹೇಗಾದ್ರು ಮಾಡಿ ಅಪ್ಪನ ಒಪ್ಪಿಸಿ ನಿನ್ನೆ ಮಧುವೆ ಆಗ್ತೀನಿ... :)

ಮನು : ಆಗ್ತೀನಿ ಅಲ್ಲಾ ಆಗೇ ಆಗ್ತೀನಿ ಅಂತ ಹೇಳು :)

ನವ್ಯ : ಆಯ್ತು ಬಿಡೋ ಲೋ.. ಒಂದು ವಿಷಯ ಕೇಳ್ಲ .. ?

ಮನು : ಹ್ಮ ಕೇಳು ಡಿಯರ್ ?

ನವ್ಯ : ಆಕಸ್ಮಾತ್ ನಾನೇನಾದ್ರು ನಿನ್ನ ಬಿಟ್ಟು ಬೇರೆ ಯಾರನಾದ್ರು ಮದುವೆ ಆದ್ರೆ ನೀನು ಏನೋ ಮಾಡ್ತಿಯ ? ? ?

ಮನು : ನಾನೇನು ಮಾಡ್ಲಿ ನಾನು ಬೇರೆಯಾರ್ನಾದ್ರು ಮಧುವೆ ಆಗ್ತೀನಿ ಸಿಂಪಲ್ :)

ನವ್ಯ : ಅಯ್ಯೋ ಅಷ್ಟೇನಾ ನಾನೆಲ್ಲೋ ನನ್ನ ನೆನಪಲ್ಲಿ ಬಾಟಲಿ ಹಿಡ್ಕೊಂಡು ರೋಡ್ ರೋಡ್ ಅಲಿತಿಯ ಅನ್ಕೊಂಡಿದ್ದೆ

ಮನು : ಸರಿ ಸರಿ ಬಾ ಟೈಮ್ ಆಯ್ತು ಹೋಗೋಣ ನಿಮ್ಮ ಅಪ್ಪ ಕಾಯ್ತಾ ಇರ್ತಾರೆ ನಿನಗೆ ಯಾವಗಲು ತಮಾಷೇನೆ

ನವ್ಯ : ತಮಾಷೆ ಅಲ್ಲಾ ಕಣೋ ನಿಜವಾಗಲು ಕೇಳ್ತಾ ಇದೀನಿ ಹೇಳೋ ? ಹೋಗ್ಲಿ ನಾನು ನನ್ನ ಮದುವೆಗೆ ನಿನ್ನ ಇನ್ವೈಟ್ ಮಾಡಿದ್ರೆ ಏನ್ ಅಂತ ವಿಶ್ ಮಾಡ್ತಿಯ ..?

ಮನು : ಒಳ್ಳೆ ಸಹವಾಸ ಅಯ್ತಲ್ವೆ ನಿಂದು ! ನನ್ನಿಂದ ಮಿಸ್ ಆದ ಈ ಮಿಸ್ ಗೆ ಏನು ವಿಶ್ ಮಾಡ್ಲಿ ಐ ಮಿಸ್ ಯೌ ಡಿಯರ್ ಅಂತೀನಿ ಅಸ್ಟೇ ..!

ನವ್ಯ : ಅಷ್ಟೇನಾ .. ?

ಮನು : ಮತ್ತೇನು ಹೇಳ್ಬೇಕು ಎಲ್ಲಾ ಆದಮೇಲೆ ?

ನವ್ಯ : ನಾನೆಲ್ಲೋ ನನ್ನ ಸಿಕ್ಕಾಪಟ್ಟೆ ಬೈದು ಮಧುವೆ ಮನೇಲಿ ಗಲಾಟೆ ಮಾಡ್ತಿಯ ಅನ್ಕೊಂಡಿದ್ದೆ ಹ್ಹ ಹ್ಹ ಹ್ಹ ಹ್ಹ

ಮನು : ಒಂದಂತ್ತು ನಿಜ ಕಣೆ ನನ್ನ ಜಾಗದಲ್ಲಿ ನಿನ್ನ ಜೊತೆ ನನ್ನ ಬಿಟ್ಟು ಬೇರೆಯಾರನ್ನದ್ರು ನಾ ನೋಡ್ದೆ ಅಂತ ಇಟ್ಕೋ.... ಅವತ್ತೇ ನನ್ನ ಕೊನೆ ಅಂತ ತಿಳ್ಕೋ

ನವ್ಯ : ಈಗ ಆ ಹಳೆ ಫಿಲ್ಮ್ ಡೈಲಾಗ್ ಬೇಕಾ ನಿನಗೆ ..?

ಮನು : ಅಂದ್ರೆ ನಾನು ಯಾವ್ದೋ ಫಿಲ್ಮ್ ಡೈಲಾಗ್ ಹೇಳ್ತಾ ಇದೀನಿ ಅಂತನಾ.. ?

ನವ್ಯ : ಸುಮ್ನೆ ತಮಾಷೆ ಮಾಡ್ದೆ ಕಣೋ ನಿನ್ನ ಬಿಟ್ಟು ಒಂದು ನಿಮಿಷನು ಇರೋಕೆ ಆಗೋಲ್ಲ ನನಗೆ, ಐದು ವರ್ಷದಿಂದ ಲವ್ ಮಾಡ್ತಾ ಇದೀನಿ ಅದು ಹೇಗೆ ಬೇರೆ ಮಧುವೆ ಆಗ್ತೀನಿ ಹೇಳು ..? ಅಪ್ಪನ್ನ ಬಿಟ್ಟು ಬೇಕಾದ್ರೂ ಬರ್ತೀನಿ ನಿನ್ನ ಬಿಟ್ಟು ಮಾತ್ರ ಹೋಗೋಲ್ಲ ನನ್ನಾಣೆ :) ಇವತ್ತು ತುಂಬಾ ನಿನ್ನ ನೋಯಿಸಿಬಿಟ್ಟೆ ಅನಿಸುತ್ತೆ ಬಾ ಹೋಗೋಣ ಟೈಮ್ ಆಯ್ತು !

( ಮಧ್ಯ ರಾತ್ರಿ )

ನವ್ಯ : ಹಲೋ ಮನು ಏನೋ ಮಾಡ್ತಾ ಇದೀಯ

ಮನು : ಎಲ್ಲಾ ಲೈಟ್ ಆಫ್ ಮಾಡಿಕೊಂಡು ರಾ..ರಾ...ಸರಸಕು ರಾ...ರಾ. ಸಾಂಗ್ ಗೆ ಡಾನ್ಸ್ ಮಾಡ್ತಾ ಇದೀನಿ

ನವ್ಯ : ಲೋ... ಗೂಬೆ ತಮಾಷೆ ಮಾಡ್ಬೇಡ್ವೋ

ಮನು : ತಮಾಷೆ ನಾನ್ ಮಾಡ್ತಾ ಇದಿನ ನಿನ್ ಮಾಡ್ತಾ ಇದೀಯ ಅಲ್ಲಾ ಮಧ್ಯ ರಾತ್ರಿ ಕಾಲ್ ಮಾಡಿ ಏನ್ ಮಾಡ್ತಾ ಇದೀಯ ಅಂತ ಕೇಳ್ತಿಯಲ್ಲ ರಾತ್ರಿ ಏನ್ ಮಾಡ್ತಾರೆ ..?

ನವ್ಯ : ಏನಾದ್ರು ಮಾಡು ನನಗೀಗ ಆ ಹೂವು ಬೇಕು ಅಷ್ಟೇ

ಮನು : ಯಾವ್ ಹೂವು ಡಿಯರ್ ?

ನವ್ಯ : ಅದೇ ಸಂಜೆ ನೀನು ಆ ಬೆಟ್ಟದ ತುದಿಗೆ ಹೋಗಿ ತಗೊಂಡು ಬಂದಲ್ಲ ಅದು ಕಣೋ

ಮನು : ಅದನ್ನ ಅವಗ್ಲೆ ಕೊಟ್ನಲ್ಲ ನವ್ಯ

ನವ್ಯ : Sorry ಕಣೋ ನಾನು ನಿನ್ನ್ನ ಜೊತೆ ಮಾತಾಡ್ತಾ ಅದನ್ನ ಅಲ್ಲೇ ಬಿಟ್ಟು ಬಿಟ್ಟೆ ಲೋ ಪ್ಲೀಸ್ ಕಣೋ ನನಗೆ ಅದು ಬೇಕು ಹೇಗಾದ್ರು ಮಾಡಿ ತಗೊಂಡು ಬಾರೋ

ಮನು : ಆಯ್ತು ಬೆಳಗ್ಗೆ ತಗೊಂಡು ಬಂದು ಕೊಡ್ತೀನಿ ಈಗ ಮಲ್ಕೋ

ನವ್ಯ : ಲೋ ನನಗೆ ಈಗಲೇ ಬೇಕು ಕಣೋ ನನಗೋಸ್ಕರ ಅಷ್ಟು ಮಾಡಲ್ವ ಪ್ಲೀಸ್ ಕಣೋ ನೀನು ಇಷ್ಟೇನಾ ನಿನ್ನ ಲವ್.

ಮನು : ಹೇ ಚಿನ್ನು ನನ್ನ ಲವ್ ಮೇಲೆ ನಿನಗೆ ಡೌಟಾ ತಾಳು ಇನ್ನೊಂದು ಘಂಟೆಲಿ ಆ ಹೂವು ನಿನ್ನ ಕೈಯಲ್ಲಿ ಇರುತ್ತೆ

( ಮನು ಫೋನ್ ಸ್ವಿಚ್ ಆಫ್ ಮಾಡ್ತಾನೆ )

ನವ್ಯ : ಹಲೋ... ಹಲೋ... ಮನು ನಾನು ಸುಮ್ನೆ ಹೇಳ್ದೆ ಕಣೋ ಹಲೋ...

*

*

*

*

ಸ್ವಲ್ಪ ಸಮಯದ ನಂತರ ಮನು ಮತ್ತೆ ನವ್ಯಗೆ ಫೋನ್ ಮಾಡ್ತಾನೆ

ನವ್ಯ : ಹಲೋ ಏನೋ ಮದ್ಯ ರಾತ್ರಿ ನಿಂದು

ಮನು : ಹೂವು ಬೇಕು ಅಂದೆಲ್ಲ ತಗೊಂಡು ಬಂದಿದೀನಿ ನಿಮ್ಮ ಮನೆ ಹತ್ರದಲ್ಲೆ ಇದೀನಿ ಬಾ ಅಂದ್ರೆ ಮನೆ ಗೆ ಬರ್ತೀನಿ

ನವ್ಯ : ಲೋ ಗೂಬೆ ಇಷ್ಟೊತ್ತಲ್ಲಿ ಯಾಕೋ ಮನೆಗೆ ಬರ್ತೀಯ, ಅಪ್ಪ ನೋಡಿದ್ರೆ ಕಷ್ಟ ಕಣೋ ಹೂವು ಬೇಕಾದ್ರೆ ಬೆಳಗ್ಗೆ ತಗೋತೀನಿ ಈಗ ಹೋಗು.......
ನಾನೇನು ಸುಮ್ನೆ ತಮಷೆ ಮಾಡೋಕೆ ಹೇಳ್ದೆ ಅದನ್ನೇ ನೀನು ನಿಜ ಅನ್ಕೊಂಡು ಇಷ್ಟೊತ್ತಲ್ಲಿ ಆ ಬೆಟ್ಟಕ್ಕೆ ಹೋಗಿದಿಯಲ್ಲ ಏನ ಹುಚ್ಚನೋ ನೀನು

ಮನು : ನಿಜ ಕಣೆ ನಾನು ಹುಚ್ಚನೆ ನಿನ್ನ್ನ ಲವ್ ನಲ್ಲಿ ಬಿದ್ದಿರೋ ದೊಡ್ಡ ಹುಚ್ಚ, ನೀನು ನನಗೆ ನಿನ್ನ ಲವ್ ಇಷ್ಟೇನಾ ಅಂತ ಕೇಳ್ದೆ ಅಲ್ವ ಅದಕ್ಕೆ ನನ್ನ ಲವ್ ಏನು ಅಂತ ಗೊತ್ತಾಗಲಿ ಅಂತ ತಗೊಂಡು ಬಂದೆ, ಪರವಾಗಿಲ್ಲ ನಿನ್ನು ಮಲ್ಕೋ ನಾನು ಬೆಳಗ್ಗೆನೇ ಕೊಡ್ತೀನಿ

ನವ್ಯ : ಓಕೆ ಬೈ ಕಣೋ ಹುಷಾರಾಗಿ ಹೋಗು ಹೋಗ್ತಾ ರಸ್ತೆ ಸರಿ ಇಲ್ಲಾ ಮಳೆ ಬೇರೆ ಬರೋಹಾಗಿದೆ

ಮನು : ನಿನ್ನ ಮುಂದೆ ಆ ಮಳೆ ಯಾವ ಲೆಕ್ಕ ಬಿಡು..... ಸರಿ ನಿನ್ ಮಲ್ಕೋ

ನವ್ಯ : I Miss you da

ಮನು : No chance ನಾನು ಯಾವಾಗಲು ನಿನ್ನ ಜೊತೇನೆ ಇರ್ತೀನಿ ಆರಾಮಾಗಿ ನಿದ್ದೆ ಮಾಡು

ನವ್ಯ : Really I Miss You da... .... ... ಹಲೋ... ಹಲೋ... ಮನು

ಮನು : ಒಹ್ ಬ್ಯಾಟರಿ ಲೋ ಸ್ವಿಚ್ ಆಫ್

ಮನು ಅಲ್ಲಿಂದ ಮನೆಗೆ ಹೋಗಬೇಕಾದ್ರೆ ಮಳೆ ಬರ್ತಾ ಇರುತ್ತೆ ಅಲ್ದೆ ರಸ್ತೆ ಹಾಳಾಗಿರುತ್ತೆ ಬೈಕ್ನಾ ಹೆಡ್ ಲೈಟ್ ಬೇರೆ ಕೆಡುತ್ತೆ ನಡು ರಾತ್ರಿ ಕತ್ತಲಲ್ಲಿ ದಾರಿನೇ ಕಾಣತ ಇರೋದಿಲ್ಲ ಮನೆ ಮುಟ್ಟೋಕೆ ಇನ್ನು ೧ ಕಿ.ಲೋ.ಮೀಟರ್ ಇರುತ್ತೆ ಅದರಲ್ಲೂ ಹೇಗೋ ಮನೆ ಸೇರ್ಕೊಳ್ಳೋಣ ಅಂತ ನಿದಾನಕ್ಕೆ ಬೈಕ್ ನಲ್ಲಿ ಹೋಗ್ತಾ ಇರುವಾಗ ನೋಡ್ತಾ ನೋಡ್ತಾನೆ ಹಿಂದಿಂದ ಒಂದು ಲಾರಿ ಬಂದು ಮನು ಬೈಕ್ ಮೇಲೆ ಹಾದು ಹೋಗುತ್ತೆ.....! ! !.... ? ? ?


ಮನುಗೆ ಆಕ್ಸಿಡೆಂಟ್ ಆಗಿರೋ ವಿಷಯ ನವ್ಯಗೆ ಗೊತ್ತಾಗಿದ್ದೆ ತಡ ನೋಡ್ಬೇಕು ಅಂತ ತುಂಬಾ ಪ್ರಯತ್ನ ಪಡ್ತಾಳೆ ಆದ್ರೆ ಮನೆಯಲ್ಲಿ ಇವಳ ಮನುನ ವಿಷಯ ತಿಳಿದು ನವ್ಯಗೆ 2 ದಿನದಲ್ಲೇ ಬಲವಂತವಾಗಿ ಬೇರೆ ಒಬ್ಬನ ಜೊತೆ ಮಧುವೆ ಮಾಡಿ ಬಿಡ್ತಾರೆ, ಮನಸ್ಸು ಒಪ್ಪದೆ ಇದ್ರೂ ಅಪ್ಪನ ಮಾತಿಗೆ ಹೆದರಿ ಮದುವೆ ಆಗ್ತಾಳೆ.

ಆದ್ರು ಮನಸ್ಸು ಎಲ್ಲೋ ಒಂದು ಕಡೆ ಪ್ರತಿ ನಿಮಿಷನು I MissYou ಮನು ಅಂತ ನಿಟ್ಟುಸಿರು ಬಿಡ್ತಾ ಇರುತ್ತೆ ! ಬಿಡ್ಲೇ ಬೇಕು ಅಲ್ವ !

*

*

*

*

*

*

( ಐದು ವರ್ಷಗಳ ನಂತರ )


ಮನು ಅದೇ ಬೆಟ್ಟದ ಮೇಲೆ ಏನೋ ಯೋಚನೆ ಮಾಡ್ತಾ ಕುತಿರ್ತನೆ ಕಣ್ಣಲ್ಲಿ ನೀರು ತುಂಬಿಕೊಂಡು ತನ್ನ ದುಃಖನಾ ಯಾರಿಗೂ ಹೇಳ್ದೆ ಒಬ್ಬನೇ ನೋವು ಅನುಭವಿಸುತ್ತ ಹುಚ್ಚನ್ ಥರ ಆಗಿರ್ತಾನೆ, ತನ್ನ ತಾಯಿ ಒಬ್ಬಳನ್ನ ಬಿಟ್ಟು ಯಾರ್ ಜೋತೆನು ಮಾತಾಡೋಕೆ ಇಷ್ಟ ಪಡೋಲ್ಲ ತಾನಾಯ್ತು ತನ್ನ ಕೆಲಸ ಆಯ್ತು ಆದ್ರೆ ಸ್ವಲ್ಪ ದಿನಗಳ ಹಿಂದೇ ಅವ್ಳು ಇವನ ಬಿಟ್ಟು ಹೋದ್ಲು,

ಪ್ರತಿ ಸಂಜೆ ಈ ಬೆಟ್ಟಕ್ಕೆ ಬರೋದು ಮಾತ್ರ ಮರಿಥ ಇರ್ಲಿಲ್ಲ ತನಗೆ ಸಾಕಾಗೋ ತನಕ ಇಲ್ಲಿ ಕೂತು ಒಬ್ನೇ ಕಣ್ಣೀರ್ ಹಾಕ್ತ ಇರ್ತಾನೆ ಆಮೇಲೆ ಮನೆಗೆ ಎದ್ದು ಹೋಗ್ತಾನೆ ಹೀಗಿರುವಾಗ ಒಂದು ದಿನ ಮನು ಬೆಟ್ಟದ ಮೇಲೆ ಕಣ್ಣು ಮುಚ್ಚಿ ಕುಳ್ತಿರ್ತನೆ ಯಾರು ಹಿಂದಲಿಂದ ಬಂದು ಒಂದು ಪುಟ್ಟ ಕೈಗಳು ಅವನ ಕಣ್ಣು ಮುಚ್ಚುತ್ತವೆ. ಆ ಕೈಗಳ ಸ್ಪರ್ಶದಿಂದ ಮತ್ತೆ ಮನುಗೆ ಜೀವ ಬಂದಂತೆ ಭಾಸವಾಗುತ್ತೆ ಆ ಕೈಗಳನ್ನ ಹಿಡಿದು ತಿರುಗಿ ನೋಡಿದಾಗ ಅವನಿಗೆ ತುಂಬಾ ಆಶ್ಚರ್ಯ ಆಗುತ್ತೆ ಪರಿಚಯನೇ ಇರದೆ ಇರೋ ಒಂದು ಮುದ್ದಾದ ಚಿಕ್ಕ ಮಗು ಇವನಿಗೆ ಆ ಮುಖನ ಎಲ್ಲೋ ನೋಡಿದ ನೆನಪು ಆ ಮಗುನ ತನ್ನ ಹತ್ರ ಕರ್ದು . . .

ಮನು : ಯಾರು ಕಂದಾ ನೀನು ? ನಿನ್ನ ಹೆಸರೇನು ?

ಮಗು : ಅಂಕಲ್ ನಾನು ಪ್ರೀತಿ ಅಂತ

ಮನು : (ಅಕ್ಕ ಪಕ್ಕ ನೋಡಿ) ಒಹ್ ಈ ಬೆಟ್ಟದಮೇಲೆ ಹೇಗೆ ಬಂದೆ ಯಾರು ಜೊತೆಗೆ ಇಲ್ವಾ

ಮಗು : ಇಲ್ಲಾ ಅಂಕಲ್ ನಾನು ಮಮ್ಮಿ ಡ್ಯಾಡಿ ಜೊತೆ ಬಂದಿದ್ದೆ ಅವರೆಲ್ಲ ಆ ಕಡೆ ದೇವಸ್ತಾನಕ್ಕೆ ಹೋದ್ರು

ಮನು : ಮತ್ತೆ ನೀನ್ಯಾಕೆ ಇಲ್ಲಿಗೆ ಬಂದೆ ಹಾಗೆಲ್ಲ ಅಮ್ಮನ ಬಿಟ್ಟು ಬರ್ತರ

ಮಗು : ಅಲ್ಲಿ ನೋಡಿ ಆ ಹೂ ಕಾಣುತ್ತ ಇದೆಯಲ್ಲ ಅದನ್ನ ನಾನು ದ್ಯದಿಗೆ ಕಿತ್ತು ಕೊಡು ಅಂದೇ ಹ್ಹ ಹ್ಹ ಹ್ಹ ಡ್ಯಾಡಿ ಬೆತ್ತ ಹತ್ತೋಕೆ ಆಗ್ದನೆ ಹೆದರಿಕೊಂಡು ನನಗೆ ಬೈದ್ರು ಅದಕ್ಕೆ ನಾನು ಗೊತ್ತಿಲ್ಲದಂತೆ ಇಲ್ಲಿಗೆ ಬಂದೆ ಅಂಕಲ್ ಅಂಕಲ್ ನಿವಾದ್ರು ಆ ಹುವುನಾ ತಂದು ಕೊಡ್ತೀರ ನನಗೆ ಅದು ಬೇಕು ಇಲ್ಲಾಂದ್ರೆ ನಾನೇ ಹೋಗಿ ತಗೋತೀನಿ

ಮನು : ಹೇ ನಿಂತ್ಕೋ ಪುಟ ನಾನೇ ತಂದು ಕೊಡ್ತೀನಿ ಬಾ ಇಲ್ಲಿಯ

ಮಗು : ನಿಜವಾಗಲು ತಂದು ಕೊಡ್ತಿರಾ.... ಪ್ರಾಮಿಸ್ ಹಾಕಿ

ಮನು : ನಿಜ ಕಂದಾ ಹೂಬಾಡಿ ಹೋಗುತ್ತೆ ಅಂತ ಗೊತ್ತಿದ್ರು ಪ್ರೀತಿಗೆ ಅರ್ಥನೇ ಗೊತ್ತಿಲ್ದಿರೋ ಒಂದು ಹೃದಯಕ್ಕೆ ಪ್ರಾಣ ಲೆಕ್ಕಿಸದೆ ಆ ಹೂ ನಾ ತಂದು ಕೊಟ್ಟೆ ಇನ್ನು ಏನು ಅರೆಯದು ಪುಟ್ಟ ಹೃದಯದ ಈ ಪ್ರೀತಿಗೆ ಇಲ್ಲಾ ಅಂತಿನಾ ಇಲ್ಲೇ ಇರು ಬರ್ತೀನಿ

( ಮನು ಮೇಲಕ್ಕೆ ಏಳಲಾರದೆ ಎದ್ದು ಕುಂಟುತ್ತ ಹೂವು ಕೀಳಲು ಹೋಗ್ತಾನೆ )

ಮಗು : ಅಂಕಲ್ ನಿಮ್ ಕಾಲಿಗೆ ಏನಾಗಿದೆ ಯಾಕ ಕುಂಟುತ್ತಾ ಇದಿರಾ

ಮನು : ಅದಾ 5 ವರ್ಷದ ಹಿಂದೇ ರಾತ್ರಿ ಬೈಕ್ ಅಲ್ಲಿ ಬರುವಾಗ ಆಕ್ಸಿಡೆಂಟ್ ಆಗಿ ಹೀಗಾಗಿದೆ ಎಲ್ಲಾ ಹಣೆ ಬರಹ

ಮಗು : ಅಂಕಲ್ ನನಗೆ ಹೂವು ಬೇಡ ನೀವು ಹೇಗೆ ಅಷ್ಟೊಂದು ತುದಿಗೆ ಹೋಗ್ತಿರಾ ನನಗೆ ಭಯ ಆಗುತ್ತೆ

ಮನು : ಹ್ಹ ಹ್ಹ ಹ್ಹ ನನ್ನ ನಡೆಯೋದು ನೋಡಿ ನೀನು ಹಾಗೆ ಹೇಳ್ತಾ ಇದೀಯ ನನಗೆ ಗೊತ್ತು ನನಗೆ ಆ ಬೆಟ್ಟದ ತುದಿ ಹೊಸದೇನು ಅಲ್ಲಾ ನೀನು ಇಲ್ಲೇ ಇರು ಕಂದಾ ನಾನು ಆ ಹೂವುನ ತಗೊಂಡು ಬರ್ತೀನಿ

ಮಗು : ಅಂಕಲ್ ಬೇಡ ಅಂಕಲ್ ಪ್ಲೀಸ್

(ಮಗುನಿನ ಮಾತು ಗಮನಕ್ಕೆ ಕಿವಿಗೆ ಹಾಕೊಲ್ದಾನೆ ಮನು ಹೂವಿಗಾಗಿ ಬೆಟ್ಟದ ತುದಿಗೆ ಹೋಗಿ ಹೂವುನಾ ಕಿತ್ತು ಕೈಯಲ್ಲಿ ಇಟ್ಕೊಂಡು ಇಳಿಯುವಾಗ ಕಾಲು ಜಾರಿ ಪ್ರಪಾತಕ್ಕೆ ಬಿಳೋ ಅಷ್ಟರಲ್ಲಿ ಮತ್ತೆ ಮಗು ಕುಗುತ್ತೆ

ಮಗು : ಅಂಕಲ್ I MISS YOU ಅಂಕಲ್

ಮನುಗೆ ನಾನು ಬದುಕ್ತೀನಿ ಅನ್ನೋ ನಂಬಿಕೇನೆ ಕಳ್ಕೊಂಡು ಇರ್ತಾನೆ ಮಗುವಿನ I MISS YOU ಅನ್ನೋ ಮಾತು ಕೆಲ್ದಾಕ್ಷಣ ತಾನು ಬದುಕಬೇಕು ಅಂದಕೊಂಡು ಹಾಗೂ ಹೀಗೆ ಕಷ್ಟ ಪಟ್ಟು ಮೇಲೆ ಬರ್ತಾನೆ ಬದುಕ್ತು ಬಡಪಾಯಿ ಜೀವ ಅಂತ ನಗು ಮುಖದಲ್ಲಿ ಮಗು ಕಡೆ ನೋಡ್ತಾನೆ ಸುತ್ತಲು ಸಾಯುವಾಗ ಬಂದು ಕಾಪಾಡದೆ ಇರೋ ಜನ ಅದ್ಯಾವುದರ ಅರಿವಿಲ್ಲದೆ ಮಗುವನ್ನೇ ಹುಡುಕುತ್ತ ಇರೋ ಕಣ್ಣುಗಳು.......

ಮಗು ಯಾರನ್ನೋ ಅಪ್ಪಿಕೊಂಡು ಬಿಕ್ಕಿ ಬಿಕ್ಕಿ ಅಳುತ್ತಿದೆ ಹತ್ತಿರ ಹೋಗಿ ಕೈಯಲ್ಲಿರೋ ಹೂ ಕೊಡೋಣ ಅಂತ ನಿಧಾನವಾಗಿ ಇಳಿದು ಬರ್ತಾನೆ ಅಷ್ಟರಲ್ಲಿ ಮಗು ಮನು ಹತ್ರ ಓಡಿ ಬಂದು ಅಪ್ಪಿಕೊಂಡು ಅಳುತ್ತೆ

ಮನು : ತಗೋ ಕಂದಾ ಹೂ

ಮಗು : ನಿಮಗೇನು ಆಗಿಲ್ಲ ಅಲ್ವ ! sorry ಅಂಕಲ್

ಮನು : ಇಲ್ಲಾ ಕಂದಾ ಏನು ಆಗಿಲ್ಲ ತಗೋ ಈ ಹೂ ನಾಅಷ್ಟರಲ್ಲಿ ಆ ಮಗುವಿನ ತಾಯಿ ಓಡಿ ಒಮ್ಮೆ ಮನು ನಾ ನೋಡ್ತಾಳೆ ಮೊದ್ಲು ಮೊದ್ಲು ಕಣ್ಣುಗಳು ಅವನನ್ನ ಗುರುತಿಸದೆ ಇದ್ರೂ ಮನಸ್ಸು ಮಾತ್ರ ಅವನ ಗುರುತು ಹಿಡಿದು ಕಣ್ಣಲ್ಲಿ ನೀರು ತುಂಬಿಕೊಂಡು ದುಃಖದಲ್ಲಿ ಮನು ಹೇಗಿದಿಯೋ ಏನೋ ಹೇಗಾಗಿದಿಯಲ್ಲೋ ನನ್ನ ಕ್ಷಮಿಸಿ ಬಿಡೋ ನಾನು ನಿನಗೆ ಮೋಸ ಮಾಡಿದ್ಯೇ ...ಅಂತ ಒಂದೇ ಸಮನೆ ಅವನ ಕೈ ಹಿಡಿದು ಅಳ್ತಾ ಇರುವಾಗ ನವ್ಯಳ ಗಂಡ ಬಂದು ಮಗುನ ಎತ್ತಿಕೊಂಡು ಪಕ್ಕದಲ್ಲೇ ನಿಲ್ತಾನೆ

ಮನು : ಹೇ... ನವ್ಯ ನೀನು ಇಲ್ಲಿ...... ಅಂತು ಬಂದ್ಯಲ್ಲಾ ನನ್ನ ನೋಡೋಕೆ........
ಸಾಯೋಕು ಆಗದೆ ಬದುಕೊಕು ಆಗದೆ ಪ್ರತಿ ಕ್ಷಣನು ನಿನ್ನ ನೆನಪಲ್ಲೇ ಕೊರುಗ್ತಾ ಇದ್ದೆ ಮೋಸ ನಿನ್ ಮಾಡ್ಲಿಲ್ಲ ನಮ್ಮ ಲೈಫ್ ನಲ್ಲಿ ಆ ವಿಧಿ ಮಾಡ್ತು ಅಷ್ಟರಲ್ಲಿ ನವ್ಯಳ ಗಂಡ ಬಂದು ಭುಜದ ಮೇಲೆ ಕೈ ಇಟ್ಟು ನವ್ಯ ಹೋಗೋಣ್ವಾ ಅಂತ ಕರಿತನೆ ನವ್ಯನ್ನ ನೋಡ್ತಾ ನೋಡ್ತಾ ಮನು ಮಾತು ನಿಲ್ಲಿಸಿ ಸುಮ್ನಾಗ್ತಾನೆ ಈ ಕಡೆ ಮಗು ಒಂದೇ ಸಮನೆ ಅಳ್ತಾ ಇರುತ್ತೆ ಕಣ್ಣಲ್ಲಿ ನೀರು ತುಂಬಿಕೊಡು ಸುತ್ತುಗಟ್ಟಿದ ಜನ ಆಗಲೇ ನವ್ಯ ಗೆ ಮನು ಆಡಿದ್ದ ಮಾತುಗಳು ನೆನಪಾಗ್ತವೆ "ಒಂದಂತ್ತು ನಿಜ ಕಣೆ ನನ್ನ ಜಾಗದಲ್ಲಿ ನಿನ್ನ ಜೊತೆ ನನ್ನ ಬಿಟ್ಟು ಬೇರೆಯಾರನ್ನದ್ರು ನಾ ನೋಡ್ದೆ ಅಂತ ಇಟ್ಕೋ.... ಅವತ್ತೇ ನನ್ನ ಕೊನೆ ಅಂತ ತಿಳ್ಕೋ" ಅದನ್ನೇ ನೆನಪು ಮಾಡಿಕೊಳ್ತಾ ಮಾಡಿಕೊಳ್ತಾ ನವ್ಯಳ ಹೃದಯಾ ಬಡಿತ ನಿಲ್ಲುತ್ತೆ ಹಾಗೆ ಕಣ್ಣು ಮುಚ್ಚುತಾಳೆ


ಹೌದು ನವ್ಯಗೆ ಹೃದಯ ಸಂಭಂಧಿ ಕಾಯಿಲೆ ಇತ್ತು ತನ್ನ ಪ್ರಿತಿಬಗ್ಗೆ ಗಂಡ ಹತ್ರ ಎಲ್ಲಾ ಹೇಳಿಕೊಂಡಿದ್ಲು ಅದಕ್ಕೆ ಮನು ಸಿಗಬಹುದು ಒಂದು ಸರಿ ನೋಡ್ಬೇಕು ಅಂತಾನೆ ಗಂಡನೇ ಜೊತೆ ಸುಮಾರು ಐದು ವರ್ಷಗಳ ನಂತರ ಇಲ್ಲಿಗೆ ಬಂದಿದ್ಲು


ಹಾಗಾದ್ರೆ ಇಲ್ಲಿ ಮಿಸ್ ಆಗಿದ್ದು ಯಾರು ?

ಮಿಸ್ ಮಾಡಿಕೊಂಡಿದ್ದು ಯಾರು ?

ಅಮರ ಪ್ರೇಮ ಅಂದ್ರೆ ಇದೇನಾ ?

ನಿಜವಾದ ಪ್ರೀತಿ ಸಾವಲ್ಲೇ ಕೊನೆ ಕಾಣುತ್ತ ?

ಕೊನೆ ಏನು ಕಾಣುತ್ತೋ ಬಿಡುತ್ತೋ ಗೊತ್ತಿಲ್ಲ ಈ ಸ್ಟೋರಿ ಓದಿದ ನಿಮಗೆ ನಿಮ್ಮ ಕಣ್ಣಿನಲ್ಲಿರೋ ಒಂದು ಹನಿಯಾದ್ರು ಕೆನ್ನೆ ಮೇಲೆ ಜಾರಿ ಕೊನೆ ಕಂಡೆ ಕಾಣುತ್ತೆ ಯಾಕಂದ್ರೆ ನಿಮಗೂ ಹೃದಯ ಇದೇ ಅಲ್ವ !


ನಿಮ್ಮ ಹುಡುಗ
?ದೊಡ್ಡಮನಿ.ಮಂಜು

58 comments:

 1. ಎಸ್ ಸರ್ ಹೃದಯ ಇದೆ ...,.,..,.,.,...,
  ಹೃದಯದಿಂದ ಹುಟ್ಟಿ ಕಣ್ಣಿನಲ್ಲಿ ಹರಿಸಿದ ಕೆನ್ನೆಯನ್ನು ಮಾತಾಡಿಸಿದ ಈ ನಿಮ್ಮ ಸ್ಟೋರಿ ಕಂ ಫೀಲಿಂಗ್ ಗೆ ಧನ್ಯವಾದಗಳು
  ಇಂತಿ ನಿಮ್ಮ ಕನ್ನಡಿಗ
  ರಾಕೇಶ್ ಗೌಡ
  ಇವನು ತೀರ್ಥಹಳ್ಳಿ ಹುಡುಗ

  ReplyDelete
 2. HEART TOUCHING MANJU,
  SUPER

  ReplyDelete
 3. yendri Manju Kanninalli Neer Barsi Bitri. super kathe ri..............
  Pooja Shttty

  ReplyDelete
 4. ರಾಕೇಶ್ ನಿನ್ನ ಅನಿಸಿಕೆಗೆ ಧನ್ಯವಾದ ಹೀಗೆ ಓದುತ್ತ ಇತ್ತ ಬರುತ್ತಿರು :) :)

  ReplyDelete
 5. ಥ್ಯಾಂಕ್ ಯೌ ಮ್.ಶ್ರೀ

  ನಿಮ್ಮ ಪ್ರೋತ್ಸಾಹ ಹೀಗೆ ಇರಲಿ

  ReplyDelete
 6. ಹ್ಹ ಹ್ಹ ಹ್ಹ My friend Pooja Shttty

  ಪ್ರಿತ್ಸೋ ಪ್ರತಿ ಹೃದಯಕ್ಕೂ ಕಣ್ಣಿರು ಬಂದೆ ಬರುತ್ತೆ ನಾನು ಬರಿಸಿಲ್ಲ !

  ನಿಮ್ಮ ಈ ಅಭಿಮಾನಕ್ಕೆ ಧನ್ಯವಾದ :)

  ReplyDelete
 7. ಗುರುಮೂರ್ತಿ ಸರ್ ತುಂಬಾ ಧನ್ಯವಾದಗಳು !

  ReplyDelete
 8. ತುಂಬಾ ಚೆನ್ನಾಗಿ ಬರೆದಿದ್ದಿರಾ ಮಂಜು ಹೀಗೆ ಬರಿತಾಯಿರಿ

  ReplyDelete
 9. Nice simply superb....

  ReplyDelete
 10. nijavaagiyu kannalli neera hani...... banthu,,,,,,,

  ReplyDelete
 11. I MISS U, miss agirornella kan munde barustha ide, preethili bidorge saave kone na, sari naa???

  ReplyDelete
 12. Hi Manju..

  Kathe concept tumba chennagide.. tagondiro reeti vivarane ella chennagide.. adare matinalli innu swalpa feelings tumbabekittu.. uttamavada kathe

  Pravi

  ReplyDelete
 13. manju thumba channagide nim love stori hats up 2u (manju writing nalli swalpa spelling misteck ide ondu sari odi dayavittu tappu tilko bedi )

  ReplyDelete
 14. thumba chanagide manju supper

  ReplyDelete
 15. ಧನ್ಯವಾದಗಳು ಕುಮಾರ್ ಹೀಗೆ ಓದುತ್ತ ಇರಿ :)

  ReplyDelete
 16. Shettಯಾರಿಗಾದ್ರೆ ಬಂದೆ ಬರುತ್ತೆ ಅಲ್ವ ಕಣಲ್ಲಿ ಕಣ್ಣೀರ ಹನಿ !
  ತುಂಬಾ ಧನ್ಯವಾದ ಮತ್ತೆ ಇತ್ತ ಬರುತ್ತಿರಿ ಕಣ್ಣೀರ ಹನಿಗಲ್ಲ ನಗುವಿನ ಹೊಳೆಗೆ :) :) :)

  ReplyDelete
 17. ಮಂಜು, ನಿನ್ನ ಕಥೆ ಹೇಳುವ ರೀತಿ ಬಹಳ ಇಷ್ಟ ಆಯ್ತು...ಮತ್ತೆ ನಿಜಕ್ಕೂ ನನಗೆ ಕಣ್ಣು ತುಂಬಿದ್ದು...ಆ ಮಗು ಬೇಡ ಅಂಕಲ್ ನಾನು ಸುಮ್ನೆ ಹೇಳಿದ್ದು...ಅಂದಾಗ..ಮತ್ತೆ ಹೂವು ತಗೊಂಡು ನಿಮಗೇನೂ ಆಗ್ಲಿಲ್ಲವಲ್ಲಾ ಅಂತ ಮುಗ್ದತೆ ತುಂಬಿ ಕಾಳಜಿ ತೋರಿಸಿದರ ಚಿತ್ರಣ.... ಒಳ್ಳೆ ಕಥೆಗಾರನಾಗುವ ಲಕ್ಷಣಗಳಿವೆ

  ReplyDelete
 18. ಮಿಸ್ ಅನಿತಾ ನೀವು ನನಗೆ ನಾನು ನಿಮಗೆ ಪ್ರಶ್ನೆ ಕೇಳಿದ್ರೆ ನೀವು ನನಗೆ ಕೇಳ್ತಾ ಇದಿರಲ್ಲ ! ಮಿಸ್ ಆಗಿರೋದೆಲ್ಲ ನೆನಮಾಡಿಕೊಳ್ತಾ ಆಮೇಲೆ ನನ್ನ ಮಿಸ್ ಮಾಡ್ಕೋಬೇಡಿ ಹ್ಹ ಹ್ಹ ಹ್ಹ ಸುಮ್ನೆ ತಮಾಷೆಗೆ ಹೇಳ್ದೆ :)

  ReplyDelete
 19. ಧನ್ಯವಾದಗಳು ಪ್ರವೀಣ
  ನಿಮ್ಮ ಸಲಹೆ ಅಂತೆ ಪ್ರಯತ್ನಿಸುತ್ತೀನಿ :) :)

  ReplyDelete
 20. ತುಂಬಾ ಥ್ಯಾಂಕ್ಸ್ ಸತೀಶ್
  ನೀವು ಹೇಳಿದ್ದು ಸರಿ ಇದೇ ತಪ್ಪುಗಳು ಇವೆ ಮುಂದೆ ತಿದ್ದಿಕೊಳ್ತಿನಿ :) :)

  ReplyDelete
 21. ತುಂಬು ಹೃದಯದ ಧನ್ಯವಾದಗಳು ಜಯಂತಿ ಅವರಿಗೆ ಮತ್ತೆ ಇತ್ತ ಬರುತ್ತಿರಿ ನಿಮ್ಮ ಪ್ರೋತ್ಸಾಹ ಅಗತ್ಯ

  ReplyDelete
 22. ಅಜಾದ್ ಸರ್
  ನಿಮ್ಮ ಅನಿಸಿಕೆಗೆ ಧನ್ಯವಾದಗಳು
  ನಾನು ಇನ್ನು ಸ್ವಲ್ಪ ಪ್ರಯತ್ನ ಪಟ್ಟಿದ್ದರೆ ಇನ್ನು ಫೀಲಿಂಗ್ ಕೊಟ್ಟಿದ್ದಾರೆ ಕತೆ ಇನ್ನು ಹದವಾಗಿ ಬರುತ್ತಿತ್ತು ಅನಿಸುತ್ತೆ.:) :)

  ReplyDelete
 23. manju evagenu bariyokagtilla nange, ollenarrator kano neenu

  good keep it up

  ReplyDelete
 24. ಪ್ರೀತಿ ಎಂದರೆ

  ಒಂದು ಹುಡುಗ
  ಹುಡುಗಿಗೆ
  ಕಣ್ಣು
  ಹೊಡೆದಂಗಲ್ಲ
  ಅಥವಾ...
  ಆಕಾಶ
  ಭೂಮಿಗೆ
  ಸಿಡಿಲು
  ಸಿಡಿಲು
  ಬಡಿದಂತಲ್ಲ
  ಬದಲಾಗಿ
  ಕತ್ತಲೆ
  ಮನೆಯೋಳೆಗೂ
  ಬೆಳಕು ನೀಡುವ
  ದೀಪವಿದ್ದಂತೆ.
  ಪ್ರೀತಿಸಿ ನೋಡು
  ಕನ್ನಡಿಯೊಳಗೆ
  ನೀ ನಿನ್ನ
  ಬಿಂಬ
  ಕಾಣುವಂತೆ
  ಪ್ರೀತಿಯಲ್ಲೂ
  ನೀ ನಿನ್ನ
  ಪ್ರೀತಿಯ
  ಪ್ರತಿಬಿಂಬ
  ಕಾಣುತ್ತಿಯ.

  ಮಂಜು ನಿಮ್ಮ ಸ್ಟೊರಿ ತುಂಬಾ ಚನ್ನಗಿದೆ ಕಣ್ರಿ ಅಲ್ಮೋಸ್ಟ ನಂದು ಇದೇ ಸ್ಟೋರಿ ಮಂಜು ಹಾಟ್ಸ್ ಅಪ್ ಟು ಯು.......

  ReplyDelete
 25. @Anikethan baribeku anta yenu illa oduttiralla ashtu saaku :)

  ReplyDelete
 26. @SATISH N GOWDA Nimma kavana chanangide

  Nimdu ide story naa namba bahudaa ???

  ReplyDelete
 27. ತುಂಬಾ ಚೆನ್ನಾಗಿ ಬರೆದಿದ್ದಿರಾ ಮಂಜು.............

  ReplyDelete
 28. @SATISH N GOWDA Nimma kavana chanangide

  Nimdu ide story naa namba bahudaa ???


  s ನಂಬಿ ಮಂಜು ರಿಯಲಿ ....! ನಿಮ್ಮ ಕಥೆಯ ಹಿರೋಯಿನ್ ಥರಾ ಅಷ್ಟೇನೂ ಇಲ್ಲ ಆದರೆ ನನ್ನ ಹೆಸರನ್ನ ಅವಳು ಅವಳ ಗಂಡನಿಗೆ ಕಡಿ -ಬೇಡಿ ತನ್ನ ಮಗನಿಗೆ ಇಟ್ಟು ಕೊಂಡಿದ್ದಾಳೆ

  ReplyDelete
 29. thumba chennagide manju.............

  ReplyDelete
 30. @SANGETHA
  ನಿಮ್ಮ ಅನಿಸಿಕೆಗೆ ಧನ್ಯವಾದಗಳು ಆದ್ರೆ ನಾನು ಇನ್ನು ಚನ್ನಾಗಿ ಬರಿಬೇಕಿತ್ತು ಅನಿಸುತ್ತೆ ನಂಗೆ ..:)

  ReplyDelete
 31. @SATISH N GOWDA

  ಒಹ್ ...! ನಿಮ್ಮ ಹೆಸರನ್ನ ಅವರ ಮಗುಗೆ ಇಟ್ಟಿದರಲ್ಲ ಖುಷಿ ಪಡಿ ಲೈಫ್ ಅಂದ್ರೆ ಹೀಗೆ ಎಲ್ಲಾ ಮಿಸ್ ಆಗ್ತಾ ಇರುತ್ತವೆ
  ಒಂದು ನಿಮಿಷ I MISS U ಅಂದು ಹಳೆದನೆಲ್ಲ ಮರೆತು ಹೊಸ ಜೀವನದ ಕಡೆ ದಾರಿ ಮಾಡಿಕೊಳ್ಳಿ..:)

  ReplyDelete
 32. ಮಂಜು,
  ತಡವಾಗಿ ಬಂದಿದ್ದಕ್ಕೆ ಕ್ಷಮೆಯಿರಲಿ,
  ನಿಮ್ಮ ಕತೆ ಓದಿ ಒಂದು ಕ್ಷಣ ನನ್ನ ಮನ ರೋದಿಸಿತು, ಕಣ್ಣಂಚಿನಲ್ಲಿ ಹನಿಯೊಂದು ಸದ್ಧಿಲ್ಲದೆ ಜಾರಿತು.......
  ಎಲ್ಲಾ ಹುಡುಗಿಯರೂ ಒಂದೇ ತಾರಾ ಇರುವುದಿಲ್ಲ, ಕೆಲವರು ಹೆತ್ತವರ ಒತ್ತಾಯಕ್ಕೆ, ಪ್ರೀತಿಗೆ ಕಟ್ಟುಬಿದ್ದು ಮೆಚ್ಚಿದವನನ್ನು ಮರೆಯಬೇಕಾಗುತ್ತದೆ(ಮರೆತಂತೆ ನಾಟಕವಾದಬೇಕಾಗುತ್ತದೆ!), ಆದರೆ ಇನ್ನೂ ಕೆಲವರಿರ್ತಾರೆ, ಯಾವುದೋ ಅತೀ ಆಸೆ, ಬದಲಾಗುವ ಮನಸ್ಥಿತಿಯಿಂದ ನಂಬಿದ ಪ್ರೀತಿಯನ್ನೇ ದಿಕ್ಕರಿಸಿ, ಪ್ರೀತಿಸಿದ ಹೃದಯಕ್ಕೆ ಬರೆ ಹಾಕುತ್ತಾರೆ........
  ಇರಲಿ ಬಿಡಿ,
  ಕತೆ ಚನ್ನಾಗಿದೆ, ಹೃದಯ ಸ್ಪರ್ಶಿ ಬರಹ.........

  ReplyDelete
 33. Really its heart touching sir........
  Pls keep going ..............

  ReplyDelete
 34. Bahal dinagal nantra kannali niru baro hage PREETI bage enu tilko hage madidari
  tumba Thanks kanri............

  ReplyDelete
 35. @ಮನದಾಳದಿಂದ:::- ತಡವಾಗಗಾದ್ರು ಅಂತು ಬಂದ್ರಲ್ಲ next time ಬೇಗ ಬನ್ನಿ ಹ್ಹ ಹ್ಹ ಹ್ಹ ಹ್ಹ
  ನಿಮ್ಮ ಅನಿಸಿಕೆಗೆ ಧನ್ಯವಾದಗಳು :)

  ReplyDelete
 36. @Premkumar::-:: ನಿಮ್ಮ ಕಣ್ಣಲ್ಲಿ ನೀರು ಬಂದಿದಕ್ಕೆ ಕ್ಷಮೆ ಇರಲಿ ...!
  ನಿಮ್ಮ ಪರ್ತಿಕ್ರಿಕೆ ಎಂದು ಹೀಗೆ ಇರಲಿ...!

  ReplyDelete
 37. Super manju. nijavaglu kannalle neer banthu . Avla mele jeeva ittiro manuge e tara agbard ettu. adru navya kuda enu madlik agalla bidi.A devru ellrigu preethiso avkasha kodtane but koneyalli kai kodtane vidhi ata but kasta matra preethisorige alva.

  ReplyDelete
 38. @Ramya ::-- :: thank u for your comments :) keep reading ;)

  ReplyDelete
 39. ನಿಮ್ಮ ಬ್ಲಾಗ್ ಗೆ ಮೊದಲ ಬೇಟಿ .ತುಂಬಾ ಸೊಗಸಾಗಿದೆ ಕತೆ

  ReplyDelete
 40. @Shashi jois ::-- ನಿಮ್ಮ ಆಗಮನಕ್ಕೆ ಧನ್ಯವಾದಗಳು ಹೀಗೆ ಬರುತ್ತಾ ಇರಿ..! ನಿಮ್ಮ ಮೊದಲಿಗೆ ಕೊನೆ ಸಿಗದಿರಲಿ :)

  ReplyDelete
 41. @ಸಿಮೆಂಟು ಮರಳಿನ ಮಧ್ಯೆ :-- ಧನ್ಯವಾದಗಳು ;)

  ReplyDelete
 42. Re manju extrodinary re enri nim feeling super re devr kotta nim talent ge tale bagbeku re innu olle olle stories barire a devru nimna chenagittirli re ........simply superb.....
  nangantu thumba alu banthu re....... hats off manju

  ReplyDelete
 43. @thank u very much :) next time nim Name haakodu miss maadbedi :)

  ReplyDelete
 44. hiiiiiii manju. e kathe tumba chennagide. nijwaglu kannalli niru tmbi barta ede. hatsup to you manju....

  ReplyDelete
 45. @Vinu :- thank u for your comments ;) keep reading ;)

  ReplyDelete
 46. ಮರೆಯದ ನೆನಪುಗಳ ತೊಳಲಾಟದಲ್ಲಿ ಹುಟ್ಟಿದ ಕಥೆಯೋ .ಬಾವನೆಯ ಬತ್ತಳಿಕೆ ಇಂದ ಮೂಡಿದ ಕಥೆಯೋ.ಎಷ್ಟು ಸುಂದರವಾದ ಮಂಜನ್ನು ಬೀಳಿಸಿ ಮನಸಿನ ಭಾವನೆಯನ್ನು ತಟ್ಟಿ ಏಳಿಸಿರುವ ಮಂಜು .ತುಂಬ ಸುಂದರವಾಗಿ ಇದೆ ಕಥೆ .ತುಂಬ ಇಷ್ಟ ಆಯಿತು .ಗುಡ್ ಆಲ್ ದಿ ಬೆಸ್ಟ್.

  ReplyDelete
 47. @ನೆನಪಿನ ನಾವಿಕ :-
  "ಯಾವುದೇ ತೊಳಲಾಟವಿಲ್ಲದೆ
  ಭಾವನೆಗಳಿಗೆ ಬಣ್ಣ ಕೊಟ್ಟು
  ಕಲ್ಪನೆಗಳಿಕೆ ರೆಕ್ಕೆ ಕೊಟ್ಟು
  ಮಂಜಿನ ಮಧ್ಯ ಹಾರಿ ಬಂದ ಕಥೆ ಇದು"

  ಇದು ಸುಮ್ಮನೆ ಬರೆಯಬೇಕು ಅಂತ ಬರೆದ ಕಥೆ ಅಷ್ಟೇ..!
  ಚಂದದ ನಿಮ್ಮ ಮಾತುಗಳಿಗೆ ಧನ್ಯವಾದಗಳು ಮತ್ತೆ ಇತ್ತ ಬರುತ್ತಾ ಇರಿ..!

  ReplyDelete
 48. ha ha ha ..
  nice..
  yenu anthiya..
  ade ninna kalpane.
  vond vishya kelale.. geleya..
  idu kalpaneyo..
  illa
  nija no..
  heli bidu..
  kannina kadalaaladinda
  birugaalige thatharisi baruva aleyanthe
  barale beku kenne mele kanneeru..
  yaakendre namagu rudya ide alve..
  naavu preethisthivi alve..
  konege namgu mosa aaguthe alve..
  anda mele namgu hariyale beku kanneeru..

  ReplyDelete
 49. @Shishir :- ಹಾ ಹಾ ಇದು ಕೇವಲ ಕಾಲ್ಪನಿಕ ಕತೆ ಅಸ್ಟೇ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ ನಿಮ್ಮ ಕವನ ರೂಪದ ಕಾಮೆಂಟ್ಸ್ ಚನ್ನಾಗಿದೆ ಆಗಾಗ ಬರುತ್ತಾ ಇರಿ

  ReplyDelete
 50. manju,
  your concept, presentation, characters, situations everything is awesome. Hats off Manju.
  Really my eyes filled with water.
  Its really touching story.
  I wish, you to complete the story, dont ask questions to readers, let the reader enjoy the story, let them to feel the story, you give the end concept to it. please add few more lines to it.

  ReplyDelete
 51. @Amit :- thank you so much for your Comments :-)

  ReplyDelete
 52. Super Story Sir,

  Love is Great
  But Lovers are not great

  ReplyDelete