ಸತ್ಯವನ್ನೇ ನುಡಿಸು ಗುರುವೇ ನರವಿಲ್ಲದ ಜಿಹ್ವೆಯೋಳ್ ! ಸ್ಥಿರವಾಗಿ ನೆಲೆಸು ಗುರುವೇ ಮರ್ಕಟ ಈ ಮನದೊಳ್ !

Tuesday 1 December 2009

ಸಾವೆಂಬ ಸಾವು ಒಪ್ಪದ ಈ ಸಾವು !

ಕಾವ್ಯ
"ಪ್ರೀತಿಯ ಇತಿಹಾಸದ ಪುಟಕ್ಕೆ ಅಮರ ಈ ಹೆಸರು
ಪ್ರೀತಿಸುವ ಹೃದಯಗಳಿಗೆ ಎಚ್ಚರದ ಬೆಚ್ಚನೆಯ ಉಸಿರು"
ಕಾವ್ಯಳ ಮನೆಯಲ್ಲಿ ಹಿಂದೆಂದು ಕಾಣದ ಕರಾಳ ಮೌನ, ಮಧುವೆಗೆಂದು ಹಾಕಿರುವ ಚಪ್ಪರ ಗಾಳಿಯೊಂದಿಗೆ ಶೋಕ ಗೀತೆ ಹಾಡುತ್ತಿದೆ ಕಾವ್ಯಳ ಶವದ ಮುಂದೆ ಜನ ಸಾಗರವೇ ತುಂಬಿದೆ, ಕಾವ್ಯಳ ಸಾವಿನಿಂದ ದಿಕ್ಕು ತೋಚದೆ ನಿಂತಿರುವ ತಂದೆ, ಅತ್ತು ಅತ್ತು ಕಣ್ಣಿರೆಲ್ಲ ಬತ್ತಿ ಉಸಿರಾಡಲು ಉಸಿರಿಲ್ಲದಂತಾಗಿರುವ ಕಾವ್ಯಳ ತಾಯಿ, ಇನ್ನು ತಪ್ಪಿತಸ್ಥರಂತೆ ತಲೆ ಬಾಗಿ ನಿಂತಿರುವ ಕಾವ್ಯಳ ಅತ್ತೆ, ಮಾವ ಜೊತೆಗೆ ಅಪಾರ ಸ್ನೇಹಿತರ ನಿಲ್ಲದ ಆಕ್ರಂದನ ದುಃಖದ ಕಡಲೆ ಅಲ್ಲಿ ಅಲೆ ಅಲೆಯಾಗಿ ಮುಗಿಲು ಮುಟ್ಟುತ್ತಿದೆ.

"ನೆನಪಿನ ಜಾತ್ರೆಯಲ್ಲಿ ನಿಲ್ಲದ ಕಣ್ಣಿರಿನ ತೇರು
ಪ್ರೀತಿಯ ತ್ಯಾಗಕ್ಕೆ ಯಾರು ಸಹಿಸದ ಕಹಿ ನೋವು

ಆಕಾಶದಲ್ಲಿ ಸೂರ್ಯನ ಸುಳಿವಿಲ್ಲ ಸಂಜೆ ಆಗುತ್ತಿದ್ದೆ ಮುಂದೆ ಆಗುವ ಕಾರ್ಯಗಳಿಗೆ ಕಾವ್ಯಳ ಕುಟುಂಬದವರು ಸಜ್ಜಾಗಿದ್ದಾರೆ, ದೊರದಿಂದ ಬರುವ ಸಂಬಧಿಕರು, ನೆಂಟರು ಸ್ಹೆಂಹಿತರು ಎಲ್ಲ ಬಂದಿದ್ದಾರೆ, ಕಾವ್ಯ ಬರೆದ ಪತ್ರ ಮಾತ್ರ ಒಬ್ಬರ ಕೈ ಯಿಂದ ಒಬ್ಬರಿಗೆ ಸಾಗುತ್ತಲಿದೆ. ಓದಿದವರ ಕಣ್ಣುಗಳಲ್ಲಿ ಕಣ್ಣೀರಧಾರೆ ಹರಿಯುತ್ತಲಿದೆ.

ಇಲ್ಲಿ ಎಲ್ಲರ ಕಣ್ಣು ಒಬ್ಬನನ್ನೇ ಹುಡುಕುತ್ತಿತ್ತು ? ? ? ? ? ? ಎಲ್ಲಿ ಮನೋಜ ಕಾಣ್ತಾನೆ ಇಲ್ವಲ್ಲ ಅಂತ, ಎಲ್ಲಿ ಹುಡುಕಿದರೂ ಮನೋಜ ಕಾಣುತ್ತಿಲ್ಲ, ಇತ್ತ ಮನೋಜನ ಅಪ್ಪ ಅಮ್ಮ ಹಾಕುತ್ತಿರುವ ಹಿಡಿ ಶಾಪ ಬೈಗಳು, ಇದ್ಯಾವುದರ ಅರಿವಿಲ್ಲದಂತೆ ಶಾಶ್ವತವಾಗಿ ಚಿರ ನಿದ್ರೆಗೆ ಶರಣಾಗಿರುವ ಕಾವ್ಯ. ಇಷ್ಟಾದರೂ ಮನೋಜನ ಸುಳಿವಿಲ್ಲ, ಅವನಿಗಾಗಿ ಸ್ನೇಹಿತರ ನಿಲ್ಲದ ಹುಡುಕಾಟ. ಸಿಗುವ ಯಾವುದೇ ಸೂಚನೆಗಳಿಲ್ಲ. ಅಲ್ಲಿಯವರೆಗೂ ಕಾವ್ಯಳ ಶವದ ಮುಂದೆ ಜಾಗ ಕದಲದೆ ಮನುಷ್ಯನಂತೆ ಅಳುತ್ತ ಕೊತಿದ್ದ ಕಾವ್ಯಳ ಮುದ್ದಿನ ನಾಯಿಮರಿ ಎದ್ದು ಒಳಗೆ ಹೊರಟಿತು.

ಇತ್ತ ಮನೋಜನಾ ಪ್ರೀತಿಯ ನಶೆಯಲ್ಲಿ ತೇಲುತ್ತಿದ್ದ "ಪ್ರೀತಿ" ತನಗೆ ಮನೋಜ ಸಿಗೋಲ್ಲ ಅಂತ ತಿಳಿದು ತಾನು ಯಾರು ಎಂಬುದನ್ನು ತಿಳಿಯದ ಸ್ಥಿತಿಯಲ್ಲಿ ಅರೆ ಹುಚ್ಚಿ ಯಾಗಿ ಪ್ರತಿ ಒಂದು ಕ್ಷಣವೂ ಮನೋಜನನ್ನೇ ಜಪಿಸುತ್ತ ಉಸಿರಾಡೋ ಗೊಂಬೆಯಾಗಿದ್ದಾಳೆ

"ಒಲಿಯದ ಪ್ರೀತಿಯ ಹಿಂದೆ ಬಿದ್ದವಳೋಬ್ಬಳು
ಒಲಿದ ಪ್ರೀತಿಯ ಕಳೆದುಕೊಂಡವನೋಬ್ಬನು
ಇದ್ಯಾವುದನ್ನು ಅರೆಯದೆ ಪ್ರಾಣವ ಕೊಟ್ಟವಳೋಬ್ಬಳು"

ಇನ್ನೇನು ಪ್ರೇಮದ ಸುಂದರ ತೇರು ಹೊರಡುವ ಸಮಯ, ಮಧುಮಗಳಂತೆ ಸಿಂಗಾರವಾದ ಕಾವ್ಯಳ ತ್ಯಾಗದ ಮೆರವಣಿಗೆ ಹೋಗುವ ಸಮಯ.ಅಷ್ಟರಲ್ಲಿ ಮನೆಯ ಒಳಗಿಂದ ಕಾವ್ಯಳ ಮುದ್ದು ನಾಯಿಮರಿ ಕರಳು ಹಿಂಡುವಂತೆ ಕೊಗುತ್ತ ಓಡಿ ಬಂದು ಕಾವ್ಯಳ ಸೆರಗನ್ನ ಎಳೆಯುತಲಿತ್ತು ಮೊದ ಮೊದಲು ಯಾರು ಅಸ್ಟೊಂದು ಗಮನ ಕೊಡದೆ ಯಾರೋ ಒಬ್ಬರು ನಾಯಿಮರಿಯನ್ನು ಹಿಡಿದು ಕಟ್ಟಿ ಹಾಕಿದರು ಅದರ ಕೊಗು ಮತ್ತೆ ಮತ್ತೆ ಮುಗಿಲು ಮುಟ್ಟುತ್ತಿತ್ತು ಅದರ ಅಂತರಾಳವ ಯಾರು ಅರ್ಥ ಮಾಡಿಕೊಳ್ಳದಾದರು, ಕೊನೆಗೆ ಕಾವ್ಯಳ ತಾಯಿ ಕಟ್ಟಿದ್ದ ನಾಯಿ ಮರಿಯನ್ನ ಬಿಚ್ಚಿದರು ಮತ್ತೆ ಕೊಗುತ್ತ ಓಡಿ ಬಂದು ಕಾವ್ಯಳ ಸೆರಗನ್ನ ಎಳೆಯುತಲಿತ್ತು ಅಲ್ಲಿದವರು ಯಾಕಮ್ಮ ಅದನ್ನ ಬಿಟ್ರಿ ಅಂದದ್ದಕ್ಕೆ ಕಾವ್ಯಳ ತಾಯಿ ಅಳುತ್ತ "ನನ್ನ ಮಗಳು ಯಾವತ್ತು ಅದನ್ನ ಕಟ್ಟಿದವಳಲ್ಲ ಒಂದು ವೇಳೆ ಯಾರಾದ್ರೂ ಕಟ್ಟಿದ್ರೆ ಜಗಳನೇ ಮಾಡಿ ಬಿಡೋಳು" ಎಂದು ಹೇಳಿ ಅಳುತ್ತ ಕುಸಿದು ಬಿಟ್ಟರು ಅಷ್ಟರಲ್ಲೇ ಹತ್ತಿರದಲ್ಲಿದ್ದವರು ಸಂತೈಸಿದರು ನಾಯಿ ಮರಿಯ ಕೊಗು ಮಾತ್ರ ನಿಲ್ಲಲಿಲ್ಲ. ನಾಯಿ ಮರಿ ನಾಯಿ ಮರಿ ತಿಂಡಿ ಬೇಕೇ ಅನ್ನೋ ಕಾವ್ಯಳ ಹಾಡನ್ನ ನೆನಪುಮಾಡಿಕೊಂಡು ಬಿಕ್ಕಳಿಸಿ ಅಳುತ್ತಿತ್ತು ಅನಿಸುತ್ತೆ. ಕೊನೆಗೂ ಸುಮ್ಮನಿರದ ಮುದ್ದು ನಾಯಿಮರಿ ಕಾವ್ಯಳ ತಾಯಿಯ ಸೀರೆಯನ್ನು ಹಿಡಿದು ಎಳೆದು ಕೊಂಡು ಮನೆಯೊಂದರ ಕೊಠಡಿಗೆ ಕರೆದೋಯುತ್ತಿದೆ ಎಲ್ಲರೂ ಅದನ್ನೇ ಹಿಂಬಾಲಿಸುತ್ತಿದ್ದಾರೆ ನಾಯಿ ಮರಿ ಕಾವ್ಯಳ ಕೊಠಡಿಗೆ ಕರೆದೊಯ್ದು ಬಾಗಿಲ ಬಳಿ ನಿಂತು ಮತ್ತೆ ಕೊಗುತ್ತಿದೆ ಯಾರಿಗೂ ದಿಕ್ಕು ತೋಚುತ್ತಿಲ್ಲ ಕಾವ್ಯಳ ತಾಯಿ ಬಾಗಿಲನ್ನ ತೆಗೆಯಲು ಯತ್ನಿಸಿದರೆ ಒಳಗಡೆ ಇಂದ ಲಾಕ್ ಆಗಿದೆ ಎಲ್ಲರಲ್ಲೂ ಸಂಶಯ ಮತ್ತೊಷ್ಟೋ ಹೆಚ್ಚುತ್ತಿದ್ದೆ ಅಲ್ಲಿದ್ದ ಕೆಲವರು ಬಾಗಿಲನ್ನು ಒಡೆದು ಒಳಗೆ ಹೋದರೆ ಎಲ್ಲರಿಗೂ ಕಂಡಿದ್ದು ನೇತಾಡುತ್ತಿರುವ ಮನೋಜ ಹೆಣ

(ಹೌದು ಮನೋಜ ಯಾರಿಗೂ ಸಿಗದೇ ತಲೆ ಮರೆಸಿಕೊಂಡಿದ್ದ ಕಾವ್ಯಳ ಮನೆಯ ಹಿಂಬಾಗಿಲಿನಿಂದ ಒಳಗೆ ಬಂದು ಕಾವ್ಯಳ ರೂಮಿನ ಒಳಗೆ ಹೋಗಿ ಭದ್ರವಾಗಿ ಬಾಗಿಲು ಹಾಕಿಕೊಂಡ ಯಾರಿಗೂ ಗೊತ್ತಿರಲಿಲ್ಲ ಅವನನ್ನ ನಾಯಿಮರಿ ಮಾತ್ರ ಗಮನಿಸಿತು ಅದು ಎದ್ದು ಒಳಗೆ ಬಂದು ಕೂಗುವಾಗ ಯಾರಾದರು ನೋಡಿದ್ದರೆ ಇನ್ನೊದು ಸಾವನ್ನು ತಪ್ಪಿಸ ಬಹುದಿತ್ತು. ಮನೋಜನಿಗೆ ಅವಳ ಸಾವಿನಿಂದ ಯಾರಿಗೂ ಮುಖ ತೋರಿಸಲು ಮನಸ್ಸಾಗಲಿಲ್ಲಿ ಎಲ್ಲಾದರು ದೂರಹೋಗಿ ಸಾಯ ಬೇಕೆಂದರೆ ಕಾವ್ಯಳ ನೆನಪು ಅವನಿಗೆ ಕಾಡುತ್ತಿದೆ ಕೊನೆಯ ಬಾರಿ ಒಮ್ಮೆ ದೊರದಲ್ಲೇ ನಿಂತು ಅವಳ ಮುಖ ನೋಡಿ ಅವಳ ಒಂಟಿ ಹಕ್ಕಿಯ ಪಯಣದಲ್ಲಿ ತಾನು ಸೇರಿಕೊಂಡು ಜೋಡಿ ಹಕ್ಕಿಯ ಪಯಣ ಬೆಳೆಸಿದ)

ಕಾವ್ಯ
"ಪ್ರೀತಿಯ ಇತಿಹಾಸದ ಪುಟಕ್ಕೆ ಅಮರ ಈ ಹೆಸರು
ಪ್ರೀತಿಸುವ ಹೃದಯಗಳಿಗೆ ಎಚ್ಚರದ ಬೆಚ್ಚನೆಯ ಉಸಿರು"

ಹಾಗಾದ್ರೆ ಈ ಇಬ್ಬರ ಪ್ರೀತಿ ಸಾವಿನಿಂದ ಕೊನೆಯಾಗಿ ಬಿಡ್ತಾ No, Never Dear friends ಕೇಳದೆ ನಿಮಗೀಗ ದೊರದಲ್ಲಿ
ಯಾರೋ ........... ಲ ಲ ಲ ಲ ಲ ಲ ಲಾ ಲಾ ಲಾ....... ಓ ಓ ಓ .... ಲ ಲ ಲ ಲ ಲ ಲಾ ಲಾ ಲಾ


ಈ ಧ್ವನಿ ಸುರಳಿಯನ್ನು ಆಲಿಸಿ :-



ನಿಮ್ಮ "ದೊಡ್ಡಮನಿ.ಮಂಜು"
9742495837

Wednesday 9 September 2009

ಹಾಗಾದ್ರೆ ಪ್ರೀತಿ ಅಮರ ತ್ಯಾಗ ಮಧುರ ಅಂದ್ರೆ ಇದೇನಾ ?

"ನಿನ್ನ ಸಂತೋಷಕ್ಕಾಗಿ ನಾನು ಏನು ಬೇಕಾದ್ರೂ ಮಾಡ್ತೀನಿ ಕಣೋ,
ನನಗೆ ನಿನ್ನ ಸಂತೋಷನೇ ಮುಖ್ಯ ಕಣೋ,
ನಿನ್ನ ಮುಖದಲ್ಲಿ ಈ ನಗು ಯಾವತ್ತು ಹೀಗೆ ಇರಲಿ ಕಣೋ "

ಮನೋಜ್ ಇಲ್ಲದೆ ಕಾವ್ಯಳಿಗೆ ಬೇರೆ ಏನು ಇಲ್ಲ ನಿಂತರು ಅವನೇ ಕುಂತರು ಅವನೇ ಕನಸಲ್ಲೂ ಅವನದೇ ಕನವರಿಕೆ, ಅವಳು ಅವನನ್ನ ಎಷ್ಟು ಪ್ರೀತಿ ಮಾಡ್ತಾ ಇದ್ಲು ಅನ್ನೋದು ಅವಳಿಗೂ ಗೊತ್ತಿರ್ಲಿಲ್ಲ ಅನಿಸುತ್ತೆ. ಅವನಿಗಾಗಿ ಏನು ಬೇಕಾದ್ರೂ ಮಾಡ್ತಾ ಇದ್ಲು, ದಿನಕ್ಕೆ ಒಂದು ಹತ್ತು ಸಲನಾದ್ರು ಮನೋಜನಿಗೆ "ನಿನ್ನ ಸಂತೋಷಕ್ಕೆ ನನ್ನ ಪ್ರಾಣ ಬೇಕಾದ್ರೂ ಕೊಡ್ತೀನಿ ಕಣೋ " ಅಂತಾನೆ ಇದ್ಲು.

ಮನೋಜ ಯಾವಾಗಲು ತಮಾಷೆಯ ಹುಡುಗ ಕಾವ್ಯನ ತುಂಬಾನೇ ರೆಗುಸ್ತ ಇರ್ತಾನೆ ಆದರೆ ಅಷ್ಟೇ ಪ್ರೀತಿ ಕೊಡ ಮಾಡ್ತಾ ಇರ್ತಾನೆ ಫೋನ್ ನಲ್ಲಿ ಅವಳ ದ್ವನಿ ಕೇಳದನೆ ಇವನು ಬೆಳ್ಳಗ್ಗೆ ಎಳೋದಿಲ್ಲ, ರಾತ್ರಿ ಗುಡ್ ನೈಟ್ ಇವನಿಗೆ ಅವಳು ಹೇಳ್ದನೆ ಇವನು ಮಲಗಿರೋ ದಿನಗಳೇ ಇಲ್ಲ, ಅಂತಹ ಪ್ರೀಮಿಗಳು.

ಕಾವ್ಯ ಅವನನ್ನ ಕೆಲವುದಿನ ಗಳಿಂದೇನು ಲವ್ ಮಾಡ್ತಾ ಇರ್ಲಿಲ್ಲ ನಿಜ ಹೇಳ್ಬೇಕು ಅಂದ್ರೆ ಅವನನ್ನ ಕಾವ್ಯ ಸುಮಾರು ವರ್ಷಗಳಿಂದ ಲವ್ ಮಾಡ್ತಾ ಇದ್ಲು ಅಂದ್ರೆ ಅವಳ ಬಾಲ್ಯ ದಿಂದ, ಹೌದು ಮನೋಜ್ ಕಾವ್ಯಳ ಅತ್ತೆ ಮಗ ಅಲ್ಲದೆ ಒಂದೇ ಸ್ಕೂಲ್, ಕಾವ್ಯ ಅವನನ್ನ ಎಷ್ಟು ಹಚ್ಚಿ ಕೊಂಡಿದ್ಲು ಅಂದ್ರೆ ಸ್ಕೂಲ್ ನಲ್ಲಿ ಮೇಸ್ಟ್ರು ಅವನನ್ನ ಸ್ಕೂಲ್ ನಿಂದ ನಾಲ್ಕು ದಿನ ಆಚೆ ಹಾಕಿದರು ಇವಳು ಸಹ ನಾಲ್ಕು ದಿನ ಹುಷಾರಿಲ್ಲ ಅಂತ ತಾನು ಸಹ ಸ್ಕೂಲ್ ಗೆ ಹೋಗಿರಲಿಲ್ಲ ಹಾಲಿನಂತ ಮನಸ್ಸು ಅಷ್ಟೇ ಸೂಕ್ಷ್ಮ ಎಲ್ಲ ವಿಷಯವನ್ನು ತುಂಬಾ ಸೀರೀಸ್ ಆಗಿ ತಗೋತಾ ಇದ್ಲು.

ನೀನು ಈಗ ದೊಡ್ಡ ಹುಡುಗಿ ಮನೋಜ್ ಜೊತೆ ಸುತ್ತುಬೇಡ ಅಂತ ಮನೆಯವರೆಲ್ಲ ಬೈದರು ಯಾರನ್ನು ಲೆಕ್ಕಿಸದೆ ಅವನೇ ನನ್ನ ಸರ್ವಸ್ವ ಅಂತ ನಂಬಿದ ಹುಡುಗಿ. ಅವನು ಅಪ್ಪ ಬೈದ್ರು ಅಮ್ಮ ಹೊಡೆದರು ಅಂತ ಬೇಜಾರ್ ಮಾಡ್ಕೊಂಡ್ರೆ ಕಾವ್ಯ ಅವನನ್ನ ತನ್ನ ತೊಡೆ ಮೇಲೆ ಮಲಗಿಸಿಕೊಂಡು ಸಮಾದಾನ ಮಾಡ್ತಾ ಇದ್ಲು ಅವನು ಅಷ್ಟೇ ಇವಳನ್ನ ಅಷ್ಟೇ ಪ್ರೀತಿ ಮಾಡ್ತಾ ಇದ್ದ. ಹೈಸ್ಕೂಲ್ ಮುಗಿದು ಕಾಲೇಜ್ ಹೋಗುವಾಗಲು ಜೊತೆಗೆ ಹೋಗ್ತಾ ಇದ್ರೂ ಅವನು ಒಂದು ವೇಳೆ ಫ್ರೆಂಡ್ಸ್ ಜೊತೆ ಎಲ್ಲಾದರು ಹೋದ್ರೆ ಇವಳು ಪ್ರತಿ ನಿಮಿಷಕ್ಕೂ ಎಲ್ಲಿದ ಏನು ಮಾಡ್ತಾ ಇದ್ದೀಯ ಇನ್ನು ಯಾವಾಗ ಬರೋದು ಅಂತ ಫೋನ್ ನಲ್ಲೆ ವಿಚಾರಿಸುತ್ತಾ ಇದ್ಲು. ಕಾಲೇಜ್ ಕಂಪಾಸ್ ನಲ್ಲಿ ಅವನು ಬೇರೆ ಹುಡುಗಿಯರ ಜೊತೆ ಒಬ್ಬನೇ ಇರುದನ್ನ ಎಲ್ಲಾದರು ನೋಡಿದ್ರೆ ಇವಳು ಅವನು ಹೋದ ಮೇಲೆ ಆ ಹುಡುಗಿ ಮನೆಗೆ ಹೋಗಿ ಅವರ ಅಪ್ಪ ಅಮ್ಮ ನ ಹತ್ರ ಜಗಳನೇ ಮಾಡಿ ಬಂದಿರೊಳು.

ಮನೆಯವರೆಲ್ಲ ಆದಷ್ಟು ಬೇಗ ಇವರಿಬ್ಬರನ್ನ ಗಂಟ್ಟು ಹಾಕಿ ಕೈ ಬಿಡಬೇಕಪ್ಪ ಅಂತ ತಿರ್ಮಾನ ಮಾಡಿದ್ರು ಅಲ್ಲದೆ ಇನ್ನು ನಾಲ್ಕು ತಿಂಗಳಲ್ಲೇ ಮಧುವೆ ಮಾಡಬೇಕು ಅಂತ ಎಲ್ಲರು ಒಪ್ಪಿಕೊಂಡಿದ್ದರು. ಆಗ ಇವರಿಬ್ಬರನ್ನ ಹಿಡಿಯೋರೆ ಇರ್ಲಿಲ್ಲ, ಈ ವಿಷಯ ತಿಳಿದಾಗ ಹೆಚ್ಚು ಖುಷಿ ಪಟ್ಟಿದ್ದು ಅವನಿಗಿಂತ ಕಾವ್ಯನೇ ಜಾಸ್ತಿ .

ಆದರೆ ಮನೋಜನಿಗೆ ಇದೆ ಮೊರುತಿಂಗಳ ಹಿಂದೆ ಪ್ರೀತಿ ಅನ್ನೋ ಹುಡುಗಿ ಪರಿಚಯವಾಗಿದ್ಲು ಅದೇ ಪರಿಚಯ ಮುಂದುವರೆದು ಆ ಹುಡುಗಿ ಇವನನ್ನ ಲವ್ ಮಾಡು ಅಂತ ಒತ್ತಾಯಿಸುತ್ತ ಇದ್ಲು, ಆದರೆ ಇವನಿಗೆ ಅದು ಒಪ್ಪಿಗೆ ಇರೋಲ್ಲ ನನಗೆ ಆಗಲೇ ಮಧುವೆ ನಿಶ್ಚಯ ಆಗಿದೆ ಅಂತ ತುಂಬಾನೇ ಹೇಳ್ತಾನೇ ಆದರೆ ಪ್ರೀತಿ ಇದ್ಯಾವುದನ್ನು ಕೇಳೋಕೆ ತಯಾರಿರಲಿಲ್ಲ. ಪ್ರೀತಿ ಮನೋಜನಿಗೆ ನೀನು ನನ್ನ ಮಧುವೆ ಆಗದೆ ಇದ್ರೆ ನಾನು ಇವತ್ತೇ ಸತ್ತು ಹೋಗ್ತೀನಿ ಅಂತ ಒಂದು ದಿನ ಇವನ ಎದುರುರಿಗೆ ಆತ್ಮಹತ್ಯಗೆ ಪ್ರಯತ್ನ ಪಟ್ಟಿರ್ತಳೆ ಮನೋಜ ಅವಳ ಸ್ಥಿತಿ ನೋಡೋಕೆ ಆಗದೆ ಇನ್ಮೇಲೆ ಹೀಗೆಲ್ಲ ಮಾಡ್ಕೋ ಬೇಡ ನಾನು ನಿನ್ನ ಲವ್ ಮಾಡ್ತೀನಿ ಅಂತ ಮಾತು ಕೊಟ್ಟು ಮನೆಗೆ ಬರ್ತಾನೆ ತಾನು ಮಾಡ್ತಾ ಇರೋದು ತಪ್ಪು ಅಂತ ಗೊತ್ತಿದ್ರು ಪ್ರೀತಿಗೆ ಮಾತು ಕೊಟ್ನಲ್ಲ ಅಂತ ಮನಸ್ಸಲ್ಲೇ ಕೊರಗುತ್ತ ಇರ್ತಾನೆ ಇನ್ನೇನು ಅವನ ಕಾವ್ಯ ಳ ಮಧುವೆಯ ಒಂದು ವಾರ ಇರುತ್ತೆ ಆಗ ಪ್ರೀತಿ ಇವನಿಗೆ ಒಂದು ಮಸಾಜ್ ಕಳಿಸಿರ್ತಲೇ "ನಾನು ಮಧುವೆ ಆದ್ರೆ ನಿನ್ನನ್ನೇ ಇಲ್ಲ ಅಂದ್ರೆ ನಾನು ಜೀವಂತ ವಾಗಿ ಇರೋಲ್ಲ" ಅಂತ ಕಳಿಸಿರ್ತಳೆ ಇವನಿಗೆ ದಿಕ್ಕೇ ತೋಚದ ಹಾಗೆ ಆಗುತ್ತೆ. ಈ ವಿಷಯನ ಹೇಗಾದ್ರು ಮಾಡಿ ಕಾವ್ಯಗೆ ತಿಳಿಸಿದರೆ ಅವಳೇ ಹೋಗಿ ಪ್ರೀತಿಗೆ ಬುದ್ದಿ ಹೇಳ್ತಾಳೆ ಅಂತ ಒಂದು ದಿನ ಇವನು ಕಾವ್ಯಳನ್ನ ಯಾರು ಇಲ್ಲದ ಸುಂದರವಾದ ಪ್ರದೇಶಕ್ಕೆ ಕರ್ಕೊಂಡು ಹೋಗತ್ತಾನೆ. ಪ್ರೀತಿ ಬಗ್ಗೆ ಎಲ್ಲ ಇವಳಿಗೆ ಹೇಳ್ತಾನೆ.

ಕಾವ್ಯ :- ನೀನು ಈಗ ಏನು ಮಾಡ ಬೇಕು ಅನ್ಕೊಂಡಿದ್ದಿಯ?

ಮನೋಜ :- (ಅವನು ಇವಳನ್ನ ಸುಮ್ಮನೆ ರೆಗಿಸಲೆಂದು ) ಇಲ್ಲ ಕಣೆ ನನಗೆ ಯಾಕೋ ಮನಸ್ಸು ಒಪ್ಪುತ್ತ ಇಲ್ಲ ಅವಳು ನನ್ನ ತುಂಬಾನೇ ಲವ್ ಮಾಡ್ತಾ ಇದಾಳೆ ನಾನೇನಾದ್ರು ಅವಳಿಗೆ ಸಿಗಲ್ಲ ಅಂತ ಗೊತ್ತಾದ್ರೆ ಅವಳು ಸತ್ತು ಬಿಟ್ತಳೆ ನಾನು ಏನು ಮಾಡ್ಲಿ ? ಆಗ ನಾನು ನೆಮ್ಮದಿ ಇಂದ ಇರೋಕೆ ಆಗುತ್ತ ನಾನು ಸಂತೋಷದಿಂದ ಇರೋಕೆ ಆಗುತ್ತ.

ಕಾವ್ಯ :- ಒಂದು ವೇಳೆ ನಾನು ಸತ್ತರೆ ???????

ಮನೋಜ :- ಹಾಗೇನಾದ್ರೂ ಆದರೆ ನಾನು ಅವಳನ್ನೇ ಮಧುವೆ ಆಗ ಬಿಡ್ತೀನಿ. ಆಗ ನಾನು ಅವಳ ಜೊತೆ ಖುಷಿಯಾಗಿ, ಸಂತೋಷದಿಂದ ಇರ್ತೀನಿ ಹ್ಹ ಹ್ಹ ಹ್ಹ ಹ್ಹ (ಅವನು ತಮಾಷೆಗಾಗಿ ಹೇಳ್ತಾನೆ )

ಕಾವ್ಯ :- ನೀನು ನಿಜವಾಗ್ಲೂ ನಾನು ಸತ್ತರೆ ಸಂತೋಷದಿಂದ ಇರ್ತಿಯ ?

ಮನೋಜ :- ಅಯ್ಯೋ ನಿನ್ನ ಆಣೆಗೂ ನಾನು ಸಂತೋಷದಿಂದ ಇರ್ತೀನಿ ಕಣೆ
(ಅವನು ತಮಾಷೆಗಾಗಿ ಹೇಳ್ತಾನೆ )

ವಿಧಿಯ ಆಟ ಶುರುವಾಗಿದ್ದೆ ಇಲ್ಲಿಂದ ಮನೋಜ ಹೇಳಿದ್ದೆಲ್ಲ ನಿಜ ಅಂತ ನಂಬಿದ ಕಾವ್ಯ ಒಂದು ಚೀಟಿಯಲ್ಲಿ

"ನಿನ್ನ ಸಂತೋಷಕ್ಕಾಗಿ ನಾನು ಏನು ಬೇಕಾದ್ರೂ ಮಾಡ್ತೀನಿ ಕಣೋ,
ನನಗೆ ನಿನ್ನ ಸಂತೋಷನೇ ಮುಖ್ಯ ಕಣೋ,
ನಿನ್ನ ಮುಖದಲ್ಲಿ ಈ ನಗು ಯಾವತ್ತು ಹೀಗೆ ಇರಲಿ ಕಣೋ "

ಅಂತ ಬರೆದು ಇಟ್ಟು ಶವದ ಪೆಟ್ಟಿಗೆಯಲ್ಲಿ ತಾನೇ ಶವ ವಾಗಿ ಮಲಗಿರ್ತಳೆ ನನ್ನ ಕತೆಯ ಕಥಾನಾಯಕಿ ಕಾವ್ಯ .

!


!


!


!



!


!

!






ಹಾಗಾದ್ರೆ ಪ್ರೀತಿ ಅಮರ ತ್ಯಾಗ ಮಧುರ ಅಂದ್ರೆ ಇದೇನಾ ?


ಅವಳ ದಾರಿಯಲಿ
ನಿಮ್ಮ "ದೊಡ್ಡಮನಿ.ಮಂಜು"
9742495837
ಮುಂದುವರೆಯುತ್ತದೆ........... !

Wednesday 5 August 2009

"ಕಳೆಗೊಂದುತ್ತಿರುವ ರಕ್ಷಾ ಬಂದನ"

ಅಣ್ಣ-ತಂಗಿಯರ, ಅಕ್ಕ-ತಮ್ಮಂದಿರ ಪವಿತ್ರ ದಿನ ರಕ್ಷಾ ಬಂದನ ! ಅದೆಷ್ಟು ಸರಿ ಇವತ್ತು ನನಗೆ ನನ್ನ ಬಾಲ್ಯದ ನೆನಪಾಗಿದೆ ಅಂದ್ರೆ ನಾನು ಎಷ್ಟು ಹೇಳಿದ್ರು ಕಡಿಮೆ ಅನಿಸುತ್ತೆ , ಇವತ್ತಿನ ದಿನ ಅಮ್ಮ ನನ್ನನ್ನು ಸ್ವಲ್ಪ ಬೇಗನೆ ಎದ್ದೇಳಿಸಿ ಶುಭ್ರವಾಗಿ ಸ್ನಾನ ಮಾಡಿಸಿ ಮಡಿಬಟ್ಟೆ ತೊಡಿಸಿ ದೇವರ ಮುಂದೆ ಕೂರಿಸಿ ಬಿಡ್ತಾ ಇದ್ರೂ, ಅಕ್ಕ ಪೂಜೆಗೆ ಎಲ್ಲ ತಯಾರಿ ಮಾಡಿಕೊಂದಿರ್ತಿದ್ರು ದೇವರ ಮುಂದೆ ಒಂದು ದಿನದ ಮುಂಚೇನೆ ನಾಲ್ಕೈದು ರಾಕಿ ತಂದು ಇಡ್ತಾ ಇದ್ರೂ ನನ್ನ ಕಣ್ಣು ರಾಕಿ ಮೇಲೆ ಇಟ್ಟು ಏಕೆಂದರೆ ನನ್ನ ಪಕ್ಕ ನನ್ನ ತಮ್ಮ ಮಹಾನ್ ಕಿರಾತಕ ಕುಳ್ತಿರ್ತಿದ್ದ ಅವನಿಗೆ ನನ್ನ ಮೇಲೆ ತುಂಬಾನೆ ಸಿಟ್ಟು ನನಗೆ ಬೇಕಾದೆಲ್ಲ ಅವನೇ ತಗೊಳ್ತಿದ್ದ ಇನ್ನೆನು ಅಕ್ಕ ರಾಕಿ ನನ್ನ ಕೈ ಗೆ ಕಟ್ಟಬೇಕು ಅಷ್ಟರಲ್ಲಿ ರಗಳೆ ತಗುದು ಬಿಡ್ತಾ ಇದ್ದ ನನಗೆ ದೊಡ್ಡ ರಾಕಿನೆ ಬೇಕು ಅಂತ ಅಮ್ಮ ನನಗೆ ಸಮಾದಾನ ಮಾಡಿ ಅವನು ಸಣ್ಣನು ನಿನ್ನ ತಮ್ಮ ಅಂತ ಹೇಳಿ ಅವನಿಗೆ ಕಡ್ತಾ ಇದ್ರೂ ನೆನಸಿಕೊಂಡ್ರೆ ನನಗೆ ನಗು ಬರುತ್ತೆ ನನ್ನ ತಮ್ಮ ತುಂಟಾಟ, ಚೀಷ್ಟೇ, ಗಲಾಟೆಗಳ ಬಗ್ಗೆ ಹೇಳ್ತಾ ಹೋದ್ರೆ ಒಂದು ದೊಡ್ಡ ಕಾದಂಬರಿನೇ ಬರಿ ಬಹುದು ! ಅದು ಬಿಡಿ ಅಕ್ಕ ಹತ್ರ ಕೈ ಗೆ ರಾಕಿ ಕಟ್ಟಿಸಿಕೊಂಡು ಆರತಿ ಮಾಡೋವಾಗ ಅಕ್ಕನಿಗೆ ೧೦೦/- ಕೊಡು ಅಂತ ಅಮ್ಮ ಮೊದ್ಲೇ ನನ್ನ ಕೈಯಲ್ಲಿ ಕೊಟ್ಟಿರ್ತ ಇದ್ರೂ ನಾನು ಅದೇ ತಾರಾ ಮಾಡ್ತಾ ಇದ್ದೆ ಆಮೇಲೆ ಸಿಹಿ ತಿಂಡಿ ತಿಂದು ಅಮ್ಮ ಹತ್ರ ಮತ್ತೆ ಒಂದು ೫೦/- ಚಿಲ್ಲರೆ ಇಸ್ಕೊಂಡು ಸೀದಾ ನಾನು ಸ್ಕೂಲ್ ಹೋಗ್ತಾ ಇದ್ದೆ ಯಾವತ್ತು ಸ್ಕೂಲ್ ಗೆ ಬೇಗ ಹೋದೊನು ಕತ್ತಲ್ಲ ಆದ್ರೆ ಕತ್ತಲ್ಲ ಕತ್ತಲ್ಲನನ್ನನ್ನೇ ದಿನ ಸ್ವಲ್ಪ ಮುಂಚಿತವಾಗಿ ಹೋಗ್ತಾ ಇದ್ದೆ ಏಕೆಂದರೆ ಶಾಲೇಲಿ ಎಲ್ಲ ಹುಡುಗಿರು ನನಗೆ ರಾಕಿ ಕಟ್ತಾರೆ ಅಂತ ಅವ್ರು ಕಟ್ಟಿದ ತಕ್ಷಣ ಅವರಿಗೆಲ್ಲ ರಿಂದ ೧೦ ಕೊಡ್ತಾ ಇದ್ದೆ ಆದ್ರೆ ಅದು ಯಾವಾಗ ನಾನು ಹೈ-ಸ್ಕೂಲ್ ಮೆಟ್ಟಲು ಹತ್ತಿದೆ ನೋಡಿ ಅವತಿಂದ ಇವತ್ತಿನ ವರೆಗೂ ಹೇಳಿಕೊಳ್ಳೋ ಅಷ್ಟು ರಾಕಿ ಗಳು ನನ್ನ ಕೈ ಗೆ ಯಾರು ಕಾಟದ ಇಲ್ಲ ನಾನು ತಲೆ ಕೆಟ್ಟು ಒಂದು ದಿನ ನನ್ನ ಸ್ಕೂಲ್ ನಲ್ಲಿ ಎದ್ದು ನಿಂತು ಎಲ್ಲ ನನ್ನ ಫ್ರೆಂಡ್ ಒಬ್ಬಳನ್ನ ಕೇಳಿದೆ ನನ್ನ ಜೊತೆ ಇರೋ ನನ್ನ ಫ್ರೆಂಡ್ ಎರನ್ನಗೆ ನೀವು ರಾಕಿ ಕಡ್ತಿರ ನನಗೆ ಯಾಕ್ರೆ ಅಂತ ಜೋರಾಗಿ ಕೇಳೆ ಬಿಟ್ಟೆ ! ಆಗ ಎಲ್ಲರು

Friday 24 July 2009

“ಬತ್ತಿ ಹೋದ ಸಂಗೀತ "ಗಂಗೆ"


ಬತ್ತಿ ಹೋದ ಸಂಗೀತ "ಗಂಗೆ" ಗಂಗೂಬಾಯಿ ಹಾನಗಲ್ ರವರನ್ನು ಮೌನದಲ್ಲಿ ಸ್ಮರಿಸುತ್ತ
ಹಿಂದೂಸ್ತಾನಿ ಸಂಗೀತ ಲೋಕದ ಶ್ರೇಷ್ಟ ಗಾಯಕಿ ಗಂಗೂಬಾಯಿ ಹಾನಗಲ್ ಬಗ್ಗೆ ನಾನು ನನ್ನ ಸಣ್ಣ ವಯಸ್ಸಿನಲ್ಲಿ ಪಠ್ಯ ಒಂದರ ಮೊಲಕ ತಿಳಿದುಕೊಂಡಿದ್ದೆ ಹಿಂದೂಸ್ತಾನಿ ಸಂಗೀತ ಮಯಾವಾಗುತ್ತಿರುವ ಈ ಸಮಯದಲ್ಲಿ ಸಂಗಿತದ ಕೋಟೆ ಕಟ್ಟಿ ಮೆರೆದ ಮಹಾನ್ ವ್ಯಕ್ತಿ ನಮ್ಮ ನಾಡಿನ ಗಂಗೊಬಾಯಿ ಹಾನಗಲ್.


ಆಗ ನಂದು ತುಂಬಾ ಸಣ್ಣ ವಯಸ್ಸು ಅದೇನೋ ಹೇಳ್ತಾರಲ್ಲ "ಬಾಯಲ್ಲಿ ಬೇರಲಿಟ್ರೆ ಕಚ್ಚೋಕು ಬರಲ್ಲ" ಅಂತಹ ವಯಸ್ಸು ನನ್ನದು, ಅಂದು ಒಂದು ದಿನ ನನ್ನ ಶಾಲೆಯಲ್ಲಿ ತುಂಬಾ ನಿಶ್ಯಾಬ್ದದಿಂದ ಕೂಡಿತ್ತು ಅದೇನೋ ಗೊತ್ತಿಲ್ಲ ಎಲ್ಲರು ಅಂದು ಉತ್ಸಾಹದಿಂದ ಕೊತಿದ್ವಿ ಈ ದಿನಕ್ಕಾಗಿ ಕಾಯ್ತಾ ಇದ್ವಿ ಏಕೆಂದರೆ ಅಂದಿನ ವಿಷಯ ಕನ್ನಡ ಗದ್ಯ ಭಾಗದ ಗಂಗೂಬಾಯಿ ಹಾನಗಲ್ ಅವರ ಜೀವನದ
ಬಗ್ಗೆ ಪಾಠ ಮಾಡ್ತಾ ಇದ್ರು ನಿಜಾ ಹೇಳ್ಬೇಕು ಅಂದ್ರೆ ಅಂದಿನ ಪಾಠನಮ್ಮ ಜೊತೆ ಇದ್ದರೆಗಂಗೂಬಾಯಿ ಹಾನಗಲ್ ನಮ್ಮ ಜೊತೆ ಇದ್ದರೆ ಅನಿಸುತ್ತೆ ಅಲ್ವ !

ಅವರನ್ನ ನಾನು ತುಂಬಾ ಹತ್ತಿರದಿಂದ ನೋಡ್ಬೇಕು ಅಂತ ನನಗೆ ತುಂಬಾನೆ ಆಸೆ ಇತ್ತು ಏಕೆಂದರೆ ಅವರ ಅಭಿಮಾನಿಗಳಲ್ಲಿ ನಾನು ಒಬ್ಬ, ಅಭಿಮಾನಿ ಅಂದಾಕ್ಷಣ ನನಗೆ ಶಾಸ್ತ್ರೀಯ ಸಂಗೀತದ ಬಗ್ಗೆ ಜ್ಞಾನ ಏನು ಇಲ್ಲ ಆದ್ರೆ ಸಂಗೀತ ಕೇಳುವ ಹುಚ್ಚು ಕೇಳುತ್ತಾ ಹಾಡುವ ಹವ್ಯಾಸ ನನಗಿದೆ ಹಾಗಾಗಿ ನಾನು ಸಂಗೀತ ಯಾವುದೇ ಒಂದು ಎಳೆಯನ್ನು ಸಹ ಗೌರವಿಸುತಿನಿ. ಈ ನಾಲ್ಕು ಸಾಲುಗಳು ನನ್ನ ಬ್ಲಾಗ್ ನಲ್ಲಿ ಬರೀಬೇಕು ಅದನ್ನ ಎಲ್ಲರು ಓದಿ ನನ್ನ ಕಾಮೆಂಟ್ಸ್ ಗಳ ಲಿಸ್ಟ್ ಬೆಳಿಬೇಕು ಅಂತ ನಾನು ಬರಿತ ಇಲ್ಲ ನಮ್ಮ ನಿಮ್ಮೆಲ್ಲರನ್ನು ಅಗಲಿದ
ಗಂಗೂಬಾಯಿ ಹಾನಗಲ್ ಅವರಿಗೆ ಈ ಮೊಲಕ ನಾನು ಶ್ರದ್ದಾಂಜಲಿ ಸಲ್ಲಿಸುತ್ತಿದ್ದೇನೆ.

ಪ್ರೀತಿಯ ನನ್ನ ಗೆಳೆಯ/ಗೆಳತಿಯರೆ ಇವತ್ತು ನಾವೇನಾದರೂ ಸಾದಿಸ ಬೇಕು ಅಂದು ಕೊಂಡು ಹೊರಟರೆ ನಮ್ಮ ಹಿಂದೆ ಮಾದ್ಯಮಗಳ ಮುಖಾಂತರ ಪ್ರಚಾರ ಸಿಗುತ್ತೆ ಆದರೆ ಯವುದೇ ಪ್ರಚಾರವಿಲ್ಲದೆ ಇಡಿ ವಿಶ್ವವನ್ನೇ ತನ್ನ ಕಡೆಗೆ ಸೆಳೆದುಕೊಂಡ
ಸಂಗೀತ ಲೋಕದ ಶ್ರೇಷ್ಟ ಗಾಯಕಿ ನಮ್ಮ ಗಂಗೂಬಾಯಿ ಹಾನಗಲ್ . ಇದೋ ತಾಯಿ ನಿನಗೆ ನನ್ನ ನಮನ.

ನನ್ನಿಂದ ಇದಿನಿಯ ವರೆಗೂ ಏನನ್ನು ಸಾಡಿಸಲು ಆಗಿಲ್ಲ ಅಂತ ನಾನು ಯಾವತ್ತು ಕೊರಗುವುದಿಲ್ಲ ಏಕೆಂದರೆ "
ಸಾದನೆ ಮಾಡಿದವರ ಸ್ಮರಿಸುವುದೇ ಒಂದು ದೊಡ್ಡ ಸಾದನೆ ಅಲ್ವ !


ಬತ್ತಿ ಹೋದ ಸಂಗೀತದ ನದಿಯನ್ನು "ಗಂಗೆ"ಯಂತೆ ತುಂಬಿಸಲು ಮತ್ತೆ ನೀ ಹುಟ್ಟಿಬಾ"

ಇಂತಿ

ತೇವವಾದ ಕಣ್ಣೀರಿನ ರೆಪ್ಪೆಯಲ್ಲಿ
ನಿಮ್ಮ ದೊಡಮನಿ.ಮಂಜು

Monday 20 July 2009

ಈ ಪ್ರೀತಿನೆ ಹೀಗೆ !

ನಿಜಾ ಅಲ್ವ !
ಈ ಪ್ರೀತಿನೆ ಹೀಗೆ ಯಾವಾಗ ಯಾರಿಂದ ಯಾರಿಗೆ ಹೇಗೆ ಹುಟ್ಟುತ್ತೆ ಅನ್ನೋದು ಯಾರಿಗೂ ಗೊತ್ತಿರಲ್ಲ ! ಪ್ರೀತಿ ಮಾಡೋರ್ನ ಕೇಳಿ ನೋಡಿ ಅವರೆಲ್ಲ ಹೇಳೋದು ಇಷ್ಟೇ "ಮಗ ಅವಳನ್ನ ನೋಡಿದ ತಕ್ಷಣ ನನಗೆ ಅವಳು ಇಷ್ಟ ಆಗಿಬಿಟ್ಲು " ಇನ್ನು ಕೆಲವರ್ನ ಕೇಳಿ ನೋಡಿ "ಅದೇಕೋ ಗೊತ್ತಿಲ್ಲ ಕಣೆ ಅವನು ಅಂದ್ರೆ ನನಗೆ ತುಂಬಾ ಇಷ್ಟ " ಅಂತಾರೆ ನಿಜಾ ಹೇಳಬೇಕು ಅಂದ್ರೆ ಅವರಲ್ಲಿ ಈ ಪ್ರೀತಿ ಹುಟ್ಟೋಕೆ ಏನು ಕಾರಣ ಅಂತ ಅವರಿಗೆ ಗೊತ್ತಿರಲ್ಲ ಅಥವಾ ನಾನು ಅವನ/ಅವಳನ್ನ ಯಾಕೆ ಲವ್ ಮಾಡ್ತಾ ಇದೀನಿ ಅಂತ ಗೊತ್ತಿರಲ್ಲ ಆದ್ರು ಅವರೆಲ್ಲ ಲವ್ ಮಾಡ್ತಾನೆ ಇರ್ತಾರೆ ಅಲ್ವ !

ಒಂದು ಸರ್ವೇ ಪ್ರಕಾರ ಒಬ್ಬ ಹುಡುಗಿ ಒಬ್ಬ ಹುಡುಗನ್ನ ಇಷ್ಟ ಪಡ್ತಾ ಇದ್ದಾಳೆ ಅಂದ್ರೆ ಅವನಲ್ಲಿ ಇರೋ ಒಳ್ಳೆಯ ತನ, ನಿಸ್ವರ್ತ ಸ್ನೇಹ, ಪರಿಶುದ್ದ ಮನಸ್ಸು ಅಥವಾ ಯಾವುದೊ ಒಂದು ಕಾರಣಕ್ಕೆ ಅವಳಿಗೆ ಇಷ್ಟ ಆಗಿರ್ತಾನೆ ಆದ್ರೆ ಇನ್ನು ಕೆಲವರು ಹಾಗಲ್ಲ "ದಿನಕೊಂದು ಬೈಕ್ ತಗೊಂಡು ಫಿಲಂ ತೋರಿಸಿ ಅಲ್ಲಿ ಇಲ್ಲಿ ಸುತ್ತುಹರಿಸಿ ಕೇಳಿದನ್ನೆಲ್ಲ ಕೊಡಿಸುವಂತ ಹುಡುಗನ್ನೇ ಇಷ್ಟ ಪಡ್ತಾರೆ "
ಹಾಗಾದ್ರೆ ಪ್ರೀತಿ ಅಂದ್ರೆ ಇದೇನಾ ?

ಅಲ್ಲ !
ಅದು ಕೇವಲ ಆಕರ್ಷಣೆ ಮಾತ್ರ "ಪ್ರೀತಿ ಅನ್ನೋದು ಒಂದು ತಪಸ್ಸು". ಅದು ನಮಗೆ ಬೇಕೆಂದಾಗ ಬಯಸೋಕೆ, ಬೇಡ ಅಂದಾಗ ಬಿಸಾಡೋಕೆ ಮರದಲ್ಲಿ ಇರೋ ಹಣ್ಣು ಅಲ್ಲ ಮನೇಲಿ ಸಾಕೋ ಗಿಳಿನು ಅಲ್ಲ . ಈ ಪ್ರೀತಿ ಹುಟ್ಟುಬೇಕಾದ್ರೆ ಯಾರಿಗೂ ಹೇಳಿ ಕೇಳಿ ಹುಟ್ಟಲ್ಲ ಹುಟ್ಟೋಕೆ ಯಾರ ಅಪ್ಪಣೆನು ಬೇಕಿಲ್ಲ ಯಾಕೆಂದರೆ

ಹೇಳಿ ಬರುವುದು ಜೀವನ.
ಹೇಳದೆ ಬರುವುದು ಸಾವು.
ತಿಳಿದು ತಿಳಿಯದೆ ಆಗುವುದು ಪ್ರೀತಿ.

ಪ್ರೀತಿನ ಪ್ರೀತಿಯಿಂದ ಪ್ರೀತಿಸಿದರೆ ಪ್ರೀತಿ ಪ್ರೀತಿಯಾಗಿರುತ್ತೆ ಏಕೆಂದರೆ ಪ್ರೀತಿಯನ್ನು ಪ್ರೀತಿಸುವ ಪ್ರೀತಿ ಪ್ರೀತಿಗಾಗಿ ಪ್ರೀತಿಸುವ ಪ್ರೀತಿಯನ್ನು ಪ್ರೀತಿಸುತ್ತದೆ ! ಅಲ್ವ !

Saturday 18 July 2009

ನಿನ್ನ ಕಿರು ನಗೆ !



ನನ್ನ ನೀ
ಒಂದು ಕ್ಷಣವೂ
ಪ್ರೀತಿಸದಿದ್ದರು ಚಿಂತೆಯಿಲ್ಲ
ಕಡೆಯ ಪಕ್ಷ
ನಿನ್ನ ಕಿರು ನಗೆಯ ವರವ
ಕೊಡುವುದಾದರೆ ಚಿತೆಯಿಂದ
ಎದ್ದು ಬಂದು ಸ್ವೀಕರಿಸುವೆ
ಮರು ಜನ್ಮಕೆ ಕರುಣಿಸುವುದಾದರೆ
ಈ ಕ್ಷಣವೇ ಮಡಿದು
ನನ್ನೊಲವಿನ ಗೋರಿಯಾಗುವೆ,,,,,

"ದೇವರಲ್ಲೊಂದು ಪ್ರಾರ್ಥನೆ"


ನನ್ನ ಎರಡು ಕಣ್ಣುಗಳು
ಕುರುಡಾಗಿ ಹೋಗಲಿ ದೇವರೇ,,,,,
ನನ್ನವಳ ಸೌಂದರ್ಯ ನಾ ಕಂಡ ದಿನವೇ,,,,,

ನನ್ನ ಎರಡು ಕಿವಿಗಳು
ಕಿವುಡಾಗಿ ಹೋಗಲಿ ದೇವರೇ,,,,,
ನನ್ನವಳ ಮಧುರ ಸ್ವರವನ್ನು
ಕೇಳಿದ ತಕ್ಷಣವೇ,,,,,

ನಾ ನಾಡುವ ಮಾತುಗಳೆಲ್ಲ
ನಿಂತು ಹೋಗಲಿ ದೇವರೇ,,,,,
ನನ್ನ ಪ್ರೀತಿ ನನ್ನವಳಿಗೆ ಹೇಳಿದ
ಮರುಕ್ಷಣವೇ,,,,,

ನನ್ನ ಈ ಉಸಿರೇ
ನಿಂತು ಹೋಗಲಿ ದೇವರೇ,,,,,
ನನ್ನವಳು ನನ್ನ ನೋಡಿ
ನಕ್ಕ ಕ್ಷಣವೇ,,,,,

ನನ್ನ ಉಸಿರುನಿಂತ ಬಳಿಕ
ಅವಳ ದಾರಿಯಲಿ ನನ್ನನ್ನು
ಶಿಲೆಯಾಗಿ ಮಾಡು ದೇವರೇ,,,,,
ಆ ಶಿಲೆಯಲ್ಲು ನನ್ನ ಹೃದಯ
ಅವಳ ಹೆಸರನ್ನೇ ಜಪಿಸುತದ್ದೆ,,,,,

*******

Friday 17 July 2009

ಸದ್ದು ಗೆಳತಿ


ನೀ ಬರುವ ದಾರಿಯಲಿ
ಮಾಡಬೇಡ ಗೆಳತಿ
ನಿನ್ನ ಕೈ ಬಳೆಗಳ ಸದ್ದು

ಅದಕ್ಕೂ
ಕಾದು ಕೊತಿರುತ್ತವೆ
ನರಹದ್ದು

*******

ಗೋರಿ !


ಅವಳಿಗಾಗಿ ಕಾಯುತಿದ್ದೆ ನಾ ಅಂದು
ಅವಳಂದುಕೊಂಡಿದ್ದಳು ನನ್ನ ಪ್ರೀತಿ ಸುಳ್ಳೆಂದು
ನನಗಾಗಿ ಕಾಯುತ್ತಾ ಕುಳಿತಿದ್ದಾಳೆ ನನಗಿಂದು
ಅವಳಿಗೇನು ಗೊತ್ತು ತಾನು ನಿಂತಿರುವುದು
ನನ್ನ ಗೋರಿಯ ಮೇಲೆಂದು

Thursday 16 July 2009

ಯಾರವರು ?

ಯಾರೋ ನನ್ನ ಕರೆದರು
ಕರೆದು ಕರವ ಹಿಡಿದರು
ಕರವ ಹಿಡಿದು ಅರಿವಿನೆಡೆಗೆ ತಳ್ಳಿ ದೂರವಾದರು
ಎಲ್ಲಿಯವರು ಯಾರವರು ?


ದುಗುಡವೆಲ್ಲ ತೊಳೆದರು
ನಗೆಯ ಹೊನಲ ಹರಿಸಿದರು
ನವಿಲಗರಿಯ ಮೇಲೆ ನಡೆಸಿ ಹಾಲು-ತುಪ್ಪ ಎರೆದರು
ಎಲ್ಲಿಯವರು ಯಾರವರು ?


ಬರಡು ಭೂಮಿ ನಡುವೆ ನಿಲಿಸಿ
ಫಲದ ಬೀಜಾ ಬೀತ್ತಿಸಿದರು
ನೇಗಿಲ ಹಿಡಿವ ಯೋಗಿಯಮಾಡಿ ಮಳೆಯಾಗಿ ಸುರಿದರು
ಎಲ್ಲಿಯವರು ಯಾರವರು ?


ಮುಗ್ದ ಮುಖದ ಮನಸಿನಲ್ಲಿ
ಮಡಿಲ ಮಮತೆ ತೋರಿದರು
ಒಮ್ಮೆ ಕೊಗಿ ತಿರುಗುವಲ್ಲಿ ಯಾಕೆ ಮಾಯವಾದರು
ಎಲ್ಲಿಯವರು
ಯಾರವರು ?


ಕಡಲ
ತೀರದಲ್ಲಿ ಹಿಡಿದು
ಕೈಯ ಕಾಡ ಅಡವಿಯಲ್ಲಿ
ಬಿಟ್ಟರು ಬೆಚ್ಚಿ ಕೊಗಿ ಕರೆದರೊನು ಯಾಕೆ ಕೇಳದಾದರು
ಎಲ್ಲಿಯವರು ಯಾರವರು ?

* * * * * * *