ನನ್ನ ಒಲವ ದಾರಿಯಲ್ಲಿ ಬಂದ ತಮಗೆಲ್ಲರಿಗೂ ನನ್ನ ವಂದನೆಗಳು ಮತ್ತೆ ಈ ದಾರಿಯಲ್ಲಿ ಹೀಗೆ ಬರುತ್ತಿರಿ ! ಹಾ. . . ಹಾ. . . ನಿಮ್ಮ ಅನಿಸಿಕೆಗಳನ್ನು ಬರೆಯಲು ಮರೆಯಬೇಡಿ ! ಇಂತಿ ನಿಮ್ಮ ~$ಮಂಜು$~

Monday, 12 March 2012

ಇದು ಕಥೆಯಲ್ಲ ಜೀವನ....

ಮೈಸೂರಿನ ಆಂದೋಲನ ದಿನ ಪತ್ರಿಕೆಯಲ್ಲಿ ಪ್ರಕಟಗೊಂಡ ನೈಜ್ಯ ಘಟನೆಯ ನನ್ನ ಸಣ್ಣ ಲೇಖನ 




ಇದು ಕಥೆಯಲ್ಲ ಜೀವನ....

ಆಕೆ ವಿದ್ಯಾವಂತೆ ಬೆಂಗಳೊರಿನ ಪ್ರತಿಷ್ಠಿತ ಕಂಪನಿ ಒಂದರ ಉದ್ಯೋಗಿ, ಕೆಲವು ವರ್ಷಗಳ ಹಿಂದೇ ಸುಟ್ಟು ಹೋದ ಭಾವನೆಗಳ ಮರೆತು ನೆನಪುಗಳ ಜೊತೆ ಜೀವನ ನಡೆಸುತ್ತಿದ್ದ ಚಿಕ್ಕ ವಯಸ್ಸಿನ ವಿಧುರೆ, ಜೀವನದ ದಾರಿಯಲ್ಲಿ  ಹೊಸ ಬೆಳಕ ಕಾಣುವ ಹೊತ್ತಿಗಾಗಲೇ ಅವಳ ಪಾಲಿಗೆ ಕತ್ತಲು ತುಂಬಿ ತುಳುಕುತ್ತಿತ್ತು ಇಂತಹ ಸ್ಥಿತಿಯಲ್ಲೂ ದೃತಿಗೆಡದೆ ಧೈರ್ಯದಿಂದ ಹೆಜ್ಜೆ ಹಾಕುತ್ತಿದ್ದಳು.



ಹೀಗೆ ಕೆಲವು ದಿನಗಳ ಹಿಂದೇ ಇಂಟರ್ನೆಟ್ ಚಾಟಿಂಗ್ ಮುಖಾಂತರ ಬರುಡಾದ ಅವಳ ಬಾಳಲ್ಲಿ ತಂಗಾಳಿಯಂತೆ ಒಬ್ಬ ಪರಿಚಯ ಆದ, ಅವಳ ನೋವುಗಳೆಲ್ಲವನ್ನು ಹಂಚಿಕೊಳ್ಳಲು ಒಬ್ಬ ಗೆಳಯ ಸಿಕ್ಕ ಅವಳ ಎಲ್ಲಾ ಭಾವನೆಗಳಿಗೆ ಸ್ಪಂದಿಸುತ್ತಾ ಹೋದ, ದಿನಂ ಪ್ರತಿ ಅವಳ ಕೆನ್ನೆಯನ್ನು ಸೇರುತ್ತಿದ್ದ ಕಣ್ಣಿರು ನಿಧಾನವಾಗಿ ತನಗೆ ಅರಿವಿಲ್ಲದೆ ಕಣ್ಮರೆಯಾಗಿತ್ತು, ಅವನ ಪರಿಚಯ ತನ್ನನ್ನೇ ತಾನು ನಂಬಲಾರದಷ್ಟು ನಗು, ಸಂತೋಷಗಳನ್ನೂ ಅವಳಿಗೆ ತಂದು ಕೊಟ್ಟಿತು. ಒಂಟಿ ಜೀವ ಒಬ್ಬಂಟಿ ಅನ್ನೋ ಭಾವ ಅವಳಿಂದ ಓಡಿ ಹೋಗಿತ್ತು ಸ್ನೇಹದ ಪ್ರಭಾವವೇ ಅಂತಹದ್ದು  ಯಾರನ್ನ ಹೇಗೆ ಯಾವಾಗ ಬೇಕಾದರು ಜೀವಕ್ಕೆ ಹತ್ತಿರ ಮಾಡುತ್ತೆ ಅಲ್ವ ..! 

ಬೆಳಗ್ಗಿನ ಗುಡ್ ಮಾರ್ನಿಂಗ್ ಯಿಂದ ರಾತ್ರಿಯ ಗುಡ್ ನೈಟ್ ತನಕ ಅವಳ ಮೊಬೈಲ್ ನಲ್ಲಿ ಅವನ ಮೆಸೇಜ್ ಗಳೆ ತುಂಬಿ ಹೋಗಿದ್ದವು, ಅವನ ಸರಳತೆಗೆ ಇವಳ ಮುಗ್ದತೆ ಎಂದೋ ಸೋತು ಶರಣಾಗಿತ್ತು, ಹೌದು ಅವರಿಬ್ಬರ ಆನ್ಲೈನ್  ಚಾಟಿಂಗ್ ಮುಂದುವರೆದು ಮೊಬೈಲ್ ಸಂದೇಶಗಳ ಗಡಿ ದಾಟಿ ಮೂರು ತಿಂಗಳಲ್ಲೇ ದಿನಕ್ಕೆ  3 ಬಾರಿಯಾದರೂ ಮಾತನಾಡುವಷ್ಟು ಸ್ನೇಹ ಬೆಳೆದಿತ್ತು ಆ ಸ್ನೇಹ ಬರೀ ಸ್ನೇಹವಾಗಿ ಉಳಿದಿರಲಿಲ್ಲ ಎಲ್ಲೋ ಒಂದು ಕಡೆ ಪ್ರೇಮದ ಕಂಪು ಆವರಿಸಿತು ಅತಿದೊಡ್ಡ ಸ್ನೇಹದ ನೆರಳಲ್ಲಿ ಪ್ರೀತಿಯ ಚಿಕ್ಕ ಗಿಡ ಚಿಗುರಿ ಒಲವಿನ ಲತೆ ಅರಳಿ ಹೊಸ ಹೊಸ ಭರವಸೆಯ ಪರಿಮಳ ಹರಡಿತು. 

ಆಕೆ ಮತ್ತೆ ಎಲ್ಲದಕ್ಕೂ ಸಿದ್ದಳಾಗಿದ್ದಳು ಧರ್ಮ ಕರ್ಮಗಳ ಗೊಡ್ಡು ಸಂಪ್ರದಾಯ ಮೂಡನಂಬಿಕೆಗಳ ಎದುರು ನಿಂತು  ವಿದಾಯ ಹೇಳಲು ತುದಿಗಾಲಲ್ಲಿ ಕಾತುರದಿಂದ ಕಾಯುತ್ತಿದ್ದಳು, ಅದೊಂದು ದಿನ ಅವನಿಂದ ಇವಳಿಗೆ ಕಾಲ್ ಬಂತು " ತಂದೆಗೆ ಹುಷಾರಿಲ್ಲ ಅರೋಗ್ಯ ಕೈ ಕೊಟ್ಟಿದೆ ತುರ್ತಾಗಿ ಅಪರೇಷನ್ ಮಾಡ್ಬೇಕು ಸ್ವಲ್ಪ ಹಣ ಬೇಕಾಗಿತ್ತು ಎಂದೂ ಬಿಕ್ಕಳಿಸುತ್ತ ಆತ ನುಡಿದ " ಹೆಚ್ಚು ಮಾತನಾಡದೆ ಆಕೆ ಆತನ ಬ್ಯಾಂಕ್ ಅಕೌಂಟ್ ನಂಬರ್ ಪಡೆದು ಕೂತಲ್ಲೇ ನೆಟ್ ಬ್ಯಾಂಕಿಂಗ್ ನಿಂದ 10 ಸಾವಿರ ಹಣವನ್ನ ವರ್ಗಾಯಿಸಿ ಅವನಿಗೆ ಕಾಲ್ ಮಾಡಿದಳು 
"ಯಾವದಕ್ಕೂ ತಲೆ ಕೆಡಿಸ್ಕೋ ಬೇಡ ಡಿಯರ್  ನಿಮ್ಮ ತಂದೆ ಹುಷಾರ್ ಆಗ್ತಾರೆ ಆದಷ್ಟು ಬೇಗ ಮನೆಯಲ್ಲಿ ನಮ್ಮ ವಿಷಯ ಪ್ರಸ್ತಾಪಿಸುತ್ತೇನೆ ಇದುವರೆಗೂ ನಾನಿನ್ನ ನೋಡಿರೋದು ಕೇವಲ ಫೋಟೋದಲ್ಲಿ, ನಿನ್ನ Exam ಮುಗಿದ ತಕ್ಷಣ ಬಿಡುವು ಮಾಡಿಕೊಂಡು ಬೆಂಗಳೊರಿಗೆ ಬಂದು ಬಿಡು ನಿನಗಾಗಿ ಕಾಯ್ತೀನಿ ಈಗ ಟೆನ್ ಥೌಸಂಡ್ ನಿನ್ನ ಅಕೌಂಟ್ ಗೆ ಹಾಕಿದ್ದೇನೆ ಇನ್ನೂ ಬೇಕಾದಲ್ಲಿ ಸಂಕೋಚ ಇಲ್ಲದೆ ಕೇಳು ಮತ್ತೆ ಸಂಜೆ ಕಾಲ್ ಮಾಡು ಓಕೆ " ಈಕೆಯ ಇಷ್ಟುದ್ದ ಮಾತುಗಳಿಗೆ ಅವನು ಹೇಳಿದ್ದು ಕೇವಲ "ಓಕೆ",,,,,... ಬಹುಷಃ ಅದು ಅವಳಿಗೆ ಅವನ ಕೊನೆಯ ಮಾತಾಗಿತ್ತು ಅನ್ನುವ ಯಾವುದೇ ಸುಳಿವು ಅವಳಿಗೆ ಇರಲಿಲ್ಲ...! 

ಹೌದು.... ಅವನು ಕೇವಲ ಹಣಕ್ಕಾಗಿ ಪ್ರೀತಿಯ ಬಲೆ ಬೀಸಿದ್ದ ಸಾಂತ್ವಾನದ ಮುಖವಾಡ ತೊಟ್ಟು ಅವಳನ್ನ ನಂಬಿಸಿದ್ದ ಇಲ್ಲಸಲ್ಲದ ಒಲವ ಕತೆಗಳನ್ನು ಕಟ್ಟಿದ್ದ ಎಲ್ಲದಕ್ಕೂ ಹೆಚ್ಚಾಗಿ ಅವಳ ಭಾವನೆಗಳ ಹೊಲದಲ್ಲಿ ಪ್ರೀತಿಯ ಬೀಜಬಿತ್ತಿ  ಮೋಸದ ಫಲವ ಕೊಟ್ಟು ಹೆಸರಿಲ್ಲದೆ ಹೋದ....  ಅವನನ್ನ ಹಿಡಿಯುವುದು ಅವಳಿಗೆ ದೊಡ್ಡ ವಿಷಯವಾಗಿರಲಿಲ್ಲ ಅದರಿಂದ ಯಾವುದೇ ಪ್ರಯೋಜನವೂ ಅವಳಿಗೆ ಬೇಕಾಗಿರಿಲಿಲ್ಲ,  ಜೀವನ ಅವಳಿಗೆ ಈಗ ಮತ್ತೊಮ್ಮೆ ಮರೆಯಲಾಗದ ಪಾಠ ಕಲಿಸಿದೆ,  ಈಗ ಅವಳೊಂದಿಗೆ ಹೇಳಿಕೊಳ್ಳಲು ಉಳಿದಿರುವುದು ಅವಳ ಅವೇ ಕಣ್ಣಿರು ಮಾತ್ರ, ನಂಬಿಕೆ ಇರಬೇಕು ಆದರೆ ಅತಿನಂಬಿಕೆ ಮೋಸಕ್ಕೆ ಕಾರಣ.

ಪ್ರೀತಿಯ ಹೆಸರಲ್ಲಿ ನಂಬಿದವರನ್ನು ಮೋಸ ಮಾಡೋದು ಎಷ್ಟು ಸರಿ...?

ಅವಳ ಧೈರ್ಯವೇ ಅವಳ ಬೆನ್ನೆಲುಬು, ಅಪರಿಚಿತರ ಆಶ್ರಯಕ್ಕೆ ಆಸೆ ಪಡುವ ಮುಗ್ಧ ಹೆಣ್ಣಿನ ಕಣ್ಣಿರು ಎಂದೂ ಕೊನೆಯಾಗದು.ಒಂದು ಬಾರಿ ಎಡವುದಕ್ಕೆ ಮುಂಚೆಯೇ ಎಚ್ಚೆತ್ತರೆ ಈ ಅನಾಹುತಗಳಿಗೆ ದಾರಿಯಾಗದು. ಒಂದು ಮಾತ್ರ ಸತ್ಯ. ಅವಳ ಕಥೆ ಕೇಳಬೇಕಾದರೆ ನನಗೆ ತಿಳಿದಿದ್ದು ಇಷ್ಟೇ, ಅವಳು ಇನ್ನೊಬ್ಬನ ಆಶ್ರಯ ಪಡೆಯ ಬೇಕೆನ್ನೋದನ್ನ ಬಿಟ್ಟು, ಅವಳ ಮೊದಲ ಜೀವನದ ಕಡೆ ಗಮನ ಕೊಡಬಹುದು, ನನ್ನ ಆತ್ಮಿಯ ಸ್ನೇಹಿತ ಸ್ನೇಹಿತೆಯರಿಗೆ ನಾನು ಹೇಳುವುದಿಷ್ಟೇ, ನೊಂದ ಜೀವಗಳನ್ನು ಮತ್ತೆ ನೋಯಿಸ ಬೇಡಿ, ಪ್ರೀತಿ ಹೆಸರಲ್ಲಿ ಮೋಸ ಮಾಡಬೇಡಿ.

ಎಲ್ಲದಕ್ಕೂ ಸಾವೆಂಬುದೇ ಕೊನೆಯಲ್ಲ ಬದುಕಿ ನಿಮ್ಮ ಜೀವನದಲ್ಲಿ ಸಾಧಿಸಿ ತೋರಿಸಿ (ಗೆಳತಿ ಭಾನುಮತಿ)  



ಪ್ರೀತಿಯಿಂದ
?ಮಂಜು,ಎಂ,ದೊಡ್ಡಮನಿ
(ಮರೀಚಿಕೆ)

Tuesday, 3 January 2012

ನವಿಲ್ ಹುಡುಗಿ...!





ನಿದ್ದೆ ಕಣ್ಣ ಮಂಪರಿನಲ್ಲಿ 
ಮೃದುವಾಗಿ ತಲೆಸವರಿ 
ಮುದ್ದು ಮಗುವಿನ ಮಂದಹಾಸವ  
ಬೆಳದಿಂಗಳಂತೆ ಚಲ್ಲಿ 
ದಾರಿ ತೋರಿದ ಸ್ನೇಹವೇ 
ನೀನೆಂದು ಅನಂತವಾಗಿರು...! 
 ಸ್ನೇಹ ಯಾರಿಂದ ಯಾವಾಗ ಎಲ್ಲಿ ಹೇಗೆ ಶುರುವಾಗುತ್ತೆ ಅಂತ ಯಾರಿಗೂ ಗೊತ್ತಿರೋದಿಲ್ಲ .... ಆ ಸ್ನೇಹದ ಬಗ್ಗೆ ಯಾರು ಎಷ್ಟೇ ಬರೆದರೂ ಕಮ್ಮಿ ಅನಿಸುತ್ತೆ ... ಕಷ್ಟ ದುಖಗಳಲ್ಲಿ ಸಮನಾಗಿ ಹಚ್ಹಿಕೊಂಡು ನಮ್ಮನ್ನು ಕಾಪಾಡುವ ಈ ಸ್ನೇಹಕ್ಕೆ ಜಾತಿ, ಧರ್ಮ, ದೊಡ್ಡವರು ಚಿಕ್ಕವರು ಅಲ್ಲದೆ ಹುಡುಗ ಹುಡುಗಿ ಅನ್ನೋ ಯಾವುದೇ ಭೇದವಿಲ್ಲ, ಎಲ್ಲೋ ಇದ್ದವರನ್ನ ಎಲ್ಲೋ ಕೂಡಿಸಿ ಇನ್ನೆಲ್ಲೋ ಜೊತೆ ಮಾಡಿ ಕೈಗೆ ಕೈ ಜೋಡಿಸುವ ಈ ಸ್ನೇಹ ಎಂದಿಗೂ ಅಮರ, ಅನಂತ ಅಲ್ವ...?



ಕೆಲವು ದಿನಗಳ ಹಿಂದೇ.........

ಆಕೆ ಯಾರೆಂದು ನನಗೆ ಗೊತ್ತಿರಲಿಲ್ಲ..... ನನ್ನ ಲೇಖನವನ್ನ ಓದಿ ಒಮ್ಮೆ ನನಗೆ ಕಾಲ್ ಮಾಡಿದ್ದಳು....ಇಂತಹ ದೂರವಾಣಿ ಕರೆಗಳು ನನ್ನ ಮೊಬೈಲ್ ಗೆ ಸರ್ವೇ ಸಾಮಾನ್ಯ, ಕಾಲ್ ಮಾಡಿದ ಆ ಹುಡುಗಿ ನನ್ನ ಅಪರಿಚಿತ ದ್ವನಿಯನ್ನು ಪರಿಚಿತ ಮಾಡಿಕೊಳ್ಳಲು ಎಲ್ಲರೂ ಮಾತನಾಡುವಂತೆ ಮೊದಲು ನನ್ನ ಬರವಣಿಗೆಯ ಬಗ್ಗೆ ಒಂದಿಷ್ಟು ಮಾತನಾಡಿದಳು, ಅದು ಮೊದಲ ಸಲ ಆದ್ದರಿಂದ ಅವಳ ಮಾತುಗಳಲ್ಲಿ ಅಂಜಿಕೆ ಇತ್ತು.... ತಡವರಿಸಿಕೊಂಡು ಮಾತಾಡುತ್ತಿದ್ದವಳಿಗೆ ನಾನು ಸಹ ಉತ್ಸಾಹದಲ್ಲೇ ಪ್ರತಿಕ್ರಿಯಿಸುತ್ತಿದ್ದೇ ... ಏಕೆಂದರೆ ಪರಿಚಯವಿಲ್ಲದ ವ್ಯಕ್ತಿಯೊಂದಿಗೆ ಮಾತಾಡುವುದು ಯಾರಿಗಾದರು ಸ್ವಲ್ಪ ಕಷ್ಟಸಾದ್ಯವೇ.. ಅದರಲ್ಲೂ ಹುಡುಗಿಯರಿಗೆ ಸ್ವಲ್ಪ ಅಂಜಿಕೆ ಇದ್ದೆ ಇರುತ್ತದೆ ಅಲ್ವ ..? ಆ ಹುಡುಗಿ ಮಾತನಾಡುತ್ತಲೇ ಇದ್ದಳು, ಬೆಂಗಳೂರಿನ ಟ್ರಾಫಿಕ್ ನಲ್ಲಿ ಸಿಕ್ಕಿ ಆಫೀಸಿಗೆ ಬಂದದ್ದು ತಡವಾಗಿತ್ತು ಅಲ್ಲದೆ ಎಂದೂ ಇಲ್ಲದ ಎಲ್ಲಾ ಕೆಲಸಗಳು ನನ್ನ ಟೇಬಲ್ ಮೇಲೆ ಬಂದು ಬಿದ್ದಿದ್ದವು, ಇತ್ತ ಈ ಹುಡುಗಿಯ ಜೊತೆ ಮಾತಾಡುವುದೋ ಅತ್ತ ಕೆಲಸವನ್ನು ಕೈಗೆ ಎತ್ತಿಕೊಳ್ಳುವುದೋ ಎಂಬ ಚಿಂತೆ ನನ್ನ ತಲೆಯ ಸುತ್ತ ಸುತ್ತುತಿತ್ತು ... ಆ ಹುಡುಗಿ ಮಾತಾಡುತ್ತಿರುವ ಉತ್ಸಾಹ ನೋಡಿದರೆ ಇವತ್ತು ಪೂರ್ತಿ ಫೋನ್ ಕಟ್ ಮಾಡುವುದಿಲ್ಲ ಅನ್ನೋ ಪಣತೊಟ್ಟಂತಿತ್ತು ನನಗೂ ಬೇರೆ ವಿಧಿ ಇರಲಿಲ್ಲ.. ನಾನು ಅವಳ ಜೊತೆ ಮಾತಿಗಿಳಿದೆ.. ನನ್ನ ಮುಂದೆ ಹಾಗೂ ಹಿಂದೇ ನನ್ನನ್ನೇ ಸೆರೆ ಹಿಡಿಯುತ್ತಿದ್ದಾ ಕ್ಯಾಮರಗಳಲ್ಲಿ ಒಳಗಡೆ ಕೂತು ನನ್ನ ಬಾಸ್ ನನ್ನನ್ನು ಕಾರ್ಟುನ್ ಶೋ ಥರ ನೋಡುತ್ತಲೇ ಇದ್ದರೂ ಅನಿಸುತ್ತೆ, ಅವರಿಗೆ ಕೆಲಸಗಾರರನ್ನು ಗಮನಿಸುವುದೇ ಒಂದು ಕೆಲಸ ನನಗೆ ಅದ್ಯಾವುದರ ಭಯ-ಬಂಧ ಇರಲಿಲ್ಲ ಸುಮ್ಮನೆ ಮಾತನಾಡುತ್ತಲೇ ಇದ್ದೆ....  ಸುಮಾರು ಹೊತ್ತು ಮಾತನಾಡಿದ ನಂತರ ವಾಸ್ತವದ ಅರಿವಾಗಿ ನಾನೇ ಮತ್ತೆ ಮಾತನಾಡೋಣ ಬಿಡುವಿನವೇಳೆ ಎಂದೂ ಹೇಳಿ ಹೇಗೋ ತಪ್ಪಿಸಿಕೊಂಡೆ.....



 ಕೇಳುವವರ್ಯಾರು ಸುಡು ಬಿಸಿಲಲಿ
ಗುನುಗುವ ಒಂಟಿ ಹಕ್ಕಿಯ ಹಾಡು ..! 
ಕಂಡರೂ ಕಾಣದಂತೆ ಸುಮ್ಮನಾದರು 
ನಿನ್ನ ನಗೆಯ ಹಿಂದಿನ ನೋವಿನಪಾಡು ...! 
ಆ ಹುಡುಗಿ ಪರಿಚಯವಾದ ಕೇವಲ ಮೂರು ದಿನಗಳಲ್ಲೇ ಅದೆಷ್ಟು ಹಚ್ಚಿಕೊಂಡಿದ್ದಳು ಅಂದರೆ ಆಕೆಯ ಕಾಲ್ ದಿನಕ್ಕೆ ಒಂದಿಂತು ಬರಬರುತ್ತಾ ಅದು ಮೂರಾಯ್ತು.. ಒಂದು ದಿನ ತನ್ನ ಜೀವನದ ಬಗ್ಗೆ ತಾನು ಪಟ್ಟ ಕಷ್ಟ ಸುಖಗಳ ಬಗ್ಗೆ ಜೀವನ ಕಲಿಸಿದ ಪಾಠಗಳ ಬಗ್ಗೆ ನನ್ನಲ್ಲಿ ಹೇಳಿಕೊಂಡಳು, ಹೇಳುವಾಗ ಎಲ್ಲೋ ಒಂದಿಷ್ಟು ಬಿಕ್ಕಳಿಸಿದಳು, ಅತ್ತಳು ನನ್ನ ಸಂತ್ವಾನದ ಮಾತುಗಳು ಮನಸಿಗೆ ಹತ್ತಿರವಾದಂತೆ ನಗುತ್ತಲೇ ಮತ್ತೆ ಮಾತು ಮುಂದುವರೆಸಿದಳು, ಹೌದು ಅವಳದು ತುಂಬಾ ಮುಗ್ದತೆಯ ಸ್ವಭಾವ, ಸ್ನೇಹವನ್ನೇ ನಂಬದ ಸ್ನೇಹಿತರೆ ಇಲ್ಲದ ಜೀವನ ಅವಳದು..! ಈಗಲೂ ಅಷ್ಟೇ ಫೇಸ್ ಬುಕ್ ನಲ್ಲಿ ಆ ಹುಡುಗಿಗೆ ಇರುವ ಸ್ನೇಹಿತರ ಪಟ್ಟಿ ಮಾಡಿದರೆ ನಿಮಗೆ ಸಿಗುವುದು ಕೇವಲ ನಾಲ್ಕೈದು ಪ್ರೊಫೈಲ್ ಗಳು ಮಾತ್ರ, ಮನುಷ್ಯರನ್ನು ಬಿಡಿ ಆಕೆ ತನ್ನ ಮೇಲೆ ತನಗಿಂತ ಹೆಚ್ಚು ಕಣ್ಣಿಗೆ ಕಾಣದ ಗುಡಿ ಗುಂಡಾರಗಳಲ್ಲಿರುವ ಕಲ್ಲು ದೇವರುಗಳನ್ನೇ ನಂಬುತ್ತಿದ್ದಳು, ಆ ನಂಬಿಕೆಯ ಬೆನ್ನಲ್ಲೇ ಅಗಾದವಾದ ಭಕ್ತಿ ಕೂಡ ಇತ್ತು, ಆ ಪುಟ್ಟ ಹೃದಯದ ನಗುವಲಿ ಅದೆಷ್ಟು ದೊಡ್ಡ ದೊಡ್ಡ ನೋವುಗಳು...? 




ಕೆಲವು ದಿನದ ನಂತರ ಮತ್ತೆ ಕಾಲ್ ಮಾಡಿ ಕೇಳಿದಳು ಮಂಜು I want to meet you ಯಾವಾಗ ಸಿಗ್ತಿಯಾ..? ನನಗೆ ಸ್ವಲ್ಪ ಕಷ್ಟವೇ, ಸಮಯ ಇರೋದಿಲ್ಲ  ನೋಡೋಣ ಆ ಗಳಿಗೆ ಬಂದರೆ ಸಿಗೋಣ ಅಂತ ದೊಡ್ಡದಾಗಿ ಹೇಳಿದ್ದೆ.. ಅವಳದು ಮೊಂಡತನ ಜಾಸ್ತಿ ನನ್ನಂತೆಯೇ.... ಸಿಗಲೇ ಬೇಕು ಇದೇ ವಾರದಲ್ಲಿ ಅನ್ನೋ  ಹಠ, ನಾನು ಒಪ್ಪಬೇಕಾಯಿತು ಸರಿ ಸಿಗೋಣ ಆದರೆ ಎಲ್ಲಿ..? ಹೇಗೆ..? ಯಾವಾಗ..? ಅಂತೆಲ್ಲ ಕೇಳಿದೆ ಅವಳು ಆಗಲೇ ಎಲ್ಲವನ್ನು ಪ್ಲಾನ್ ಮಾಡಿಕೊಂಡೆ ನನಗೆ ಕಾಲ್ ಮಾಡಿದ್ದಳು ಅನಿಸುತ್ತೆ ಸಿಗುವ ಸ್ಥಳ ಮತ್ತು ಸಮಯ ಹೇಳಿಬಿಟ್ಟಳು... ನಾನು ಆ ಕ್ಷಣಕ್ಕೆ ಹ್ಮಂ ಅಂದು ಸುಮ್ಮನಾದೆ. ಆಕೆ ಬಿಡಬೇಕಲ್ಲಾ.....



ಹ್ಮಂ ನನ್ನ ಆಕೆ ಬರ ಹೇಳಿದ್ದು ಯಾವುದೇ ಕಾಫಿ ಡೇ, ಶಾಪಿಂಗ್ ಮಾಲ್ ಹೋಟೆಲ್ ಗಳಿಗಲ್ಲ ಒಂದು ದೇವಸ್ಥಾನಕ್ಕೆ....  ಹುಡುಗಿ ಕರೆದ ತಕ್ಷಣ ಹೋಗುವ ಜಾಯಿಮಾನದವನಲ್ಲ ಆದರು ತುಂಬಾ ಯೋಚಿಸಿ ಅಲ್ಲಿಗೆ ಹೋಗಲು ನಿರ್ಧರಿಸಿದ್ದೆ ಅಲ್ಲದೆ ನನಗೆ ಹತ್ತಿರದ ಸ್ಥಳ ಮತ್ತು ಇಷ್ಟವಾದ ಸ್ಥಳ ಅದಾಗಿತ್ತು, ಅವಳು ಹೇಳಿದ ದಿನ ಬಂತು ಲೆಕ್ಕವಿಲ್ಲದಷ್ಟು ಅವಳ ಕರೆಗಳು ಅಂದು, "ಏನೇ ಆಗ್ಲಿ ನೀ ಬರಲೇಬೇಕು" ಅನ್ನೊ ಅವಳ ಹಠ... ಅವಳಿಗೂ ನನಗೂ ಅದು ಮೊದಲ ಭೇಟಿ....!  


3 ವರ್ಷ ಅವಧಿಯ ನನ್ನ ಆನ್ಲೈನ್ ಲೈಫ್ ನಲ್ಲಿ ಅಂದರೆ ಇಲ್ಲಿಯವರೆಗೂ ನಾನು ಅದೆಷ್ಟೋ ಸ್ನೇಹಿತರನ್ನ ಭೇಟಿಯಾಗಿದ್ದೇನೆ ಮಾತನಾಡಿಸಿದ್ದೇನೆ, ಇನ್ನೂ ಹೆಚ್ಚು ಅಂದ್ರೆ ಅವರ ಪ್ರೀತಿಯ ಆಹ್ವಾನಕ್ಕೆ ಅವರವರ ಮೆನೆಗೆ ಹೋಗಿದ್ದೇನೆ ಮಧುವೆಗಳಿಗೆ ಹೋಗಿದ್ದೇನೆ ಜನ್ಮದಿನದ ಪಾರ್ಟಿಗಳಿಗೂ ಹೋಗಿದ್ದೇನೆ ಅವರ ಮನೆಯವರೊಂದಿಗೆ ಮನೆಯ ಮಗನಾಗಿದ್ದೇನೆ ಖುಷಿ ಹಂಚಿದ್ದೇನೆ ಅಷ್ಟೇ ಖುಷಿ ಪಟ್ಟಿದ್ದೇನೆ... ಆದರೆ ಅಂತ ಎಲ್ಲಾ ಖುಷಿಗಳನ್ನು ಒಮ್ಮೆಲೇ ತಂದುಕೊಟ್ಟದ್ದು ಆಕೆಯ ಭರ್ಜರಿ ಭೇಟಿ...  ಎಲ್ಲವನ್ನು ಮೀರಿ ನಿಂತ ಸ್ನೇಹದ ಅತಿ ಮಧುರ ಕ್ಷಣಗಳವು... ..

ಅವಳ ನನ್ನ ಸ್ನೇಹ ಹೇಗೆ ಅಂದ್ರೆ ವಿ.ರವಿಂದ್ರನ್ ಅವರ ಒಂದು ಫಿಲ್ಮ್ ಇದೇ "ಹೂ" ಅಂತ ಅದ್ರಲ್ಲಿ ಬರೋ ಪಾತ್ರಗಳ ಥರ....ನಮ್ಮ ಸ್ನೇಹಕ್ಕೆ ವರ್ಷಕಳೆದಿದೆ ಇಂದಿಗೂ ಜೊತೆಗಿದ್ದೇವೆ ಅದೇ ಸ್ನೇಹ ಅದೇ ಮನಸು ಅದೇ ಮಾತು ಎಲ್ಲದರಲ್ಲೂ ಒಂದೇ ಟೆಸ್ಟು...ಫ್ರೆಂಡ್ ಅಂದ್ರೆ ಹಾಗಿರಬೇಕು ಅಲ್ವ...? 

ಇಂದು ಅವಳ ಹುಟ್ಟು ಹಬ್ಬ ಅದಕ್ಕೆ ಈ ಪಾಟಿ ಬರವಣೆಗೆ ಬನ್ನಿ ಎಲ್ಲಾ ವಿಶ್ ಮಾಡೋಣ ನನ್ನ ನವಿಲ್ಗರೆ ಹುಡುಗಿಗೆ  Many More Happy returns Of the day "ನಂದು" 


"ನಿನ್ನ ಜೀವನದ ಪ್ರತಿಯೊಂದು ಹೆಜ್ಜೆಯು ಹೂವಿನ ದಾರಿಯಿಂದ ಕೂಡಿರಲಿ, ಜನ್ಮದಿನದ ಶುಭಾಶಯಗಳು"


ಹ್ಮಂ ಹೇಳೋದು ಮರೆತಿದ್ದೆ  ನನಗೆ ನವಿಲ ಗರಿ ಅಂದ್ರೆ ತುಂಬಾ ಇಷ್ಟ ಒನ್ ಟೈಮ್ ನಂದುಗೆ ಹೇಳಿದ್ದೆ ಅವಳು ಹುಡುಕೊಂಡು ನನಗಾಗಿ ಎರಡು ನಾವಿಲ್ ಗರಿ ತಂದು ಕೊಟ್ಟಿದ್ಲು ಈಗ್ಲೂ ಅವು ಹಾಗೆ ಇವೆ ಅವಳ ನಗುವಿನ ಜೊತೆಗೆ.... ಅಲ್ದೆ ಅವಳು ನವಿಲ ಥರಾನೆ ತುಂಬಾ ಚನ್ನಾಗಿ ಡ್ಯಾನ್ಸ್  ಮಾಡ್ತಾಳೆ.... ಅದ್ಕೆ ನಾ ನವಿಲ್ ಹುಡುಗಿ ಅನ್ನೋದು... ನಾನು ಒಂದೆರಡು ಟೈಮ್ ಜೊತೆಗೆ ಸ್ಟೆಪ್ ಹಾಕಿದಿನಿ..... !

ನಿನ್ನ ಕಂಗಳ ಕಾಂತಿಯ 
ಹೊಳಪನ್ನೇ ಹೋಲುವ ಆ ಗರಿಗಳು 
ಬೆಳದಿಂಗಳ ಬೆಳಕಲಿ ಇಂದಿಗೂ 
ಮಿನುಗುತ್ತಿವೆ  ಹೃದಯದ ಕೋಣೆಯ 
ಸ್ನೇಹದ ಕಿಟಕಿಯಲಿ...!

                                                 :::: Moral of the story ::::
"ಸ್ನೇಹವೇ ಅನಂತ ಸ್ನೇಹವೇ ಶಾಶ್ವತ "

~$ಮರೀಚಿಕೆ$~
ದೊಡ್ಡಮನಿ.ಮಂಜು?
+919742495837   



Tuesday, 6 December 2011

Why this Facebook ri....

ವೈ ದಿಸ್ ಕೊಲವೇರಿ ಹಾಡಿನ ಟ್ಯೂನ್ ಗೆ ಕನ್ನಡ ಸಾಹಿತ್ಯ.....
ಫ್ರೆಂಡ್ಸ್ ಇದು ನನ್ನ ಮೊದಲ ಪ್ರಯತ್ನ... ಸಾಹಿತ್ಯ ಮತ್ತು ಹಿನ್ನಲೆಗಾಯನ ನಂದೇ (ಮಂಜು.ಎಂ.ದೊಡ್ಡಮನಿ) ನನಗೆ ಹಾಡೋಕೆ ಬರೋದಿಲ್ಲ ಆದ್ರು ಟ್ರೈ ಮಾಡಿದಿನಿ ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಿ.....

~$ಮರೀಚಿಕೆ$~




Thursday, 22 September 2011

"ನೆಲವ ತಬ್ಬುವ ಕಣ್ಣೀರು ಕಣ್ಣಿಗಲ್ಲ ಅದು ಎಂದಿಗೂ ನೆಲಕ್ಕೆ"




ನಂಬಲು ಆಗುತ್ತಿಲ್ಲ ಒಂದೇ ಒಂದುವಾರದಲ್ಲಿ ಏನೆಲ್ಲ ಆಗಿ ಹೋಯಿತು ನನ್ನ ಜೀವನದಲ್ಲಿ , ಎಲ್ಲಾ ಒಂದು ಕೆಟ್ಟ ಕನಸು ಅಂದು ಕೊಂಡು ನಿದ್ದೆಯಿಂದ ಎದ್ದು ಬಿಡೋಣ ಅಂತ ಅನಿಸುತ್ತೆ ಅಜ್ಜಿ, ಆದರೆ ಅದೆಲ್ಲವೂ ವಾಸ್ತವ ಅನಿಸಿದಾಗ ಆದ ನೋವು ಅಷ್ಟಿಷ್ಟಲ್ಲ . ಅಷ್ಟೊಂದು ಅವಸರವೆನಿತ್ತು ಅಜ್ಜಿ ಒಂದು ಮಾತು ಹೇಳದೆ ನಿದ್ರೆಯಿಂದ ಚಿರ ನಿದ್ರೆಗೆ ಜಾರುವಷ್ಟು...! 

ಹೇಳದೆ ಹೋದೆ ನೀ ಯಾರಿಗೂ
ನಿದ್ರೆಗೂ ಚಿರ ನಿದ್ರೆಗೂ 
ಇರುವ ಅಂತರವ 
ತಿಳಿಸುವ ನೆಪದಲ್ಲಿ
ತಿರುಗಿ ಬಾರದ ಊರಿಗೆ..! 

(My grand mother )
ಅಪ್ಪ ಕೈಬಿಟ್ಟಾಗ ಜೀವನಕ್ಕೆ ಹೆದರಲಿಲ್ಲ, ಮಾಮ ದೂರಾದಾಗ ಅತಿ ದುಃಖದಲ್ಲಿ ಮುಳುಗಲಿಲ್ಲ, ಕೆಲಸವಿಲ್ಲದೇ ಕೆಲಸಕ್ಕಾಗಿ ಅಲೆಯುವಾಗ ವಿಚಲಿತನಾಗಲಿಲ್ಲ ಆದರೆ ಅಂದು ನಡು ರಾತ್ರಿ ಬಂದ ನೀ ತಿರುಗಿ ಬಾರದ ದಾರಿಯಲ್ಲಿ ಒಬ್ಬಳೇ ಹೋದೆ ಅನ್ನೋ ಒಂದು ಭಯಂಕರ ಫೋನ್ ಕಾಲ್ ಗೆ ನಾ ಕಟ್ಟಿದ್ದ ಎಲ್ಲಾ ಕನಸುಗಳು ಆಸೆಗಳು ನನ್ನಲ್ಲಿನ ಆಸಕ್ತಿ ಉತ್ಸಾಹಗಳು ಕ್ಷಣಾರ್ಧದಲ್ಲೇ ತಡೆಯಲಾಗದ ನೋವಿನ ಸುನಾಮಿಯಲ್ಲಿ ಕೊಚ್ಚಿ ಹೋದವು..!  ಎಂದೋ ಆಗುವ ಪ್ರಪಂಚದ ಅಂತ್ಯ ಆಗಬಾರದೇಕೆ ಈ ಕ್ಷಣವೇ ಅಂತ ಅನಿಸಿದ್ದು  ವಿಜಯನಗರ ಬಸ್ ಸ್ಟಾಪ್ ನಲ್ಲಿ ರಾತ್ರಿ ಒಂದು ಗಂಟೆಗೆ ಮಜೆಸ್ಟಿಕ್ ಬಸ್ ಗಾಗಿ ಕಾದು ಕೂತಾಗ....! 

ಉಕ್ಕಿ ಬರುವ ದುಃಖವ 
ತಡೆದು ಕೂತೆ ನಾನು 
ನಿನ್ನ ನೋಡೋ ಅವಸರದಿ 
ಎಷ್ಟು ಮೈಲಿಗಳ ದೂರದಲ್ಲಿ....! 

ಇನ್ನೂ ನೆನಪಿದೆ ಅಜ್ಜಿ ನನಗಾಗಿ ನೀ ಪಟ್ಟ ಕಷ್ಟ ಸುಡೋ ಬಿಸಿಲಲ್ಲಿ ನಡು ರಾತ್ರಿ ಕತ್ತಲಲ್ಲಿ ಅದು ಎಷ್ಟು ಬಾರಿ ನನ್ನ ಹೊತ್ತುಕೊಂಡು ಆಸ್ಪತ್ರೆಯ ಮೆಟ್ಟಿಲ್ಲು ಹತ್ತಿದ್ದಿ, ಅದೆಷ್ಟು ದೇವರಿಗೆ ಹರಕೆಗಳನ್ನೂ ಹೊತ್ತು ಪೂಜೆ ಸಲ್ಲಿಸಿದ್ದಿ,  ಈಗ್ಲೂ ನೀನಿಲ್ಲ ಅಂತ ಅಂದುಕೊಂಡರೆ ತುಂಬಾ ನೋವಾಗುತ್ತೆ, ಸಮುದ್ರದ ಮಧ್ಯೆ ನಾ ನಿಂತ ಹಡಗು ಧಿಡಿರನೆ ಮುಳುಗಿ ಹೋದರೆ ದಡ ತಲುಪುವುದಾದರೂ ಹೇಗೆ..? ನೀನೆಲ್ಲೋ ಇದ್ದೀಯ ನನ್ನ ಕಾಯುತ್ತಿದ್ದಿಯ, ಹುಟ್ಟು ಹಾಕಿ ತಲುಪಿಸಬೇಕಾದ ದಡಕ್ಕೆ ನನ್ನನ್ನು ತಲುಪಿಸುತ್ತಿಯಾ ಅನ್ನೋ ನಂಬಿಕೆ ನನಗೆ ಅಂದಿಗೂ ಇಂದಿಗೂ ಇದ್ದೆ ಇದೇ..!  

ನೀನಿರುವೆ ಅನ್ನೋ 
ಕಹಿ ನಂಬಿಕೆ ಸಾಕು 
ಆಳೆತ್ತರದ ಅಲೆಗಳ ದಾಟಿ
ಕನಸುಗಳ ದೋಣಿ ಮುಳುಗದಂತೆ 
ನಾವಿಕನಾಗಿ ದಡ ಸೇರುವೆ...! 

ನೀನಿದ್ದಗೆಲ್ಲ ಹೇಳ್ತಾ ಇದ್ದೆ ಅಜ್ಜಿ "ಪ್ರತಿ ದಿನ ದೇವರ ಫೋಟೋಗೆ ಕೈ ಮುಗಿ ಅಂತ ಬಟ್ ಈಗ ಅಮ್ಮ ಹೇಳ್ತಾಳೆ ಅಜ್ಜಿ ಫೋಟೋಗೆ ಕೈ ಮುಗಿದು ಹೋಗು ಅಂತ" ಕಾಲಾಯ ತಸ್ಮೈ ನಮಃ  ಅನ್ನೋದು ಇದಕ್ಕೇನಾ...? ಮಮತೆ ಪ್ರೀತಿ ವಾತ್ಸಲ್ಯ ಸಂಕಟ ನೋವು ಕಣ್ಣಿರು ದುಃಖ ಇವುಗಳ ಮೌಲ್ಯ ಈಗ ನನಗೆ ಅರಿವಾಗಿದೆ ಅಜ್ಜಿ, ದುಃಖದಲ್ಲಿ ಇದ್ದ ನನ್ನ ಎಲ್ಲಾ ಸ್ನೇಹಿತರಿಗೂ ನಾನು ಸಾಂತ್ವಾನ ಈಜಿ ಆಗಿ ಹೇಳ್ತಾ ಇದ್ದೆ ಬಟ್ ಅದನ್ನ ಅನುಭವಿದಾಗಲೇ ನನಗೆ ಗೊತ್ತಾಗಿದ್ದು "ನೆಲವ ತಬ್ಬುವ ಕಣ್ಣೀರು ಕಣ್ಣಿಗಲ್ಲ ಅದು ಎಂದಿಗೂ ನೆಲಕ್ಕೆ" ಅಂತ.

ನೀನಿಲ್ಲದ ಮನೆಯಲ್ಲಿ 
ನಿಲ್ಲಲಾರದ ಕಣ್ಣಿರು 
ತುತ್ತು ತುತ್ತಿಗೂ ನಿನ್ನ ನೆನಪು
ಬಂದು ಹೋಗು ಅಜ್ಜಿ ಮತ್ತೆ ಒಮ್ಮೆ
ಮಡಿಲಲ್ಲಿ ನಾ ಮಲಗಿ ನಿದ್ರಿಸುವೆ...! 



ಪ್ರೀತಿಯಿಂದ
ದೊಡ್ಡಮನಿ.ಎಂ.ಮಂಜುನಾಥ
~$ಮರೀಚಿಕೆ$~

Thursday, 8 September 2011

"ದಚ್ಚು"

ತುಂಬಾ ದಿನಗಳಾಗಿತ್ತು ಬರೆದು...! ನನ್ನ ಕವನ ಸಂಕಲನ ಬಿಡುಗಡೆಯ ಖುಷಿಯಲ್ಲಿ ಕಳೆದು ಹೋಗಿದ್ದೆ ಮತ್ತೆ ಈಗ ಬೇಡವೆಂದರೂ ಮನಸ್ಸು ಬರೆಯುವಂತೆ ಒತ್ತಯಿಸುತ್ತಿದ್ದೆ ಏನನ್ನ ಬರೆಯಲಿ ....? ಬೆಂಗಳೊರಿನ ಬ್ಯುಸಿ ಲೈಫ್ ನಲ್ಲಿ...! ಆದರು ಬರೆಯ ಹೊರಟ್ಟಿದ್ದೇನೆ ಮತ್ತೊಂದು ಹೊಸ ಬ್ಲಾಗ್ ನಲ್ಲಿ ಬನ್ನಿ ಒಮ್ಮೆ ಭೇಟಿ ಕೊಡಿ ನನ್ನ "ದಚ್ಚು" ಅನ್ನೋ ಬ್ಲಾಗ್ ಗೆ...

"ದಚ್ಚು"ವಿಗಾಗಿ ಈ ಕೆಳಗಿನ ಲಿಂಕ್ ನೋಡಿ 
http://dacchudoddamani.blogspot.com
  

ಪ್ರೀತಿಯಿಂದ 
~$ಮರೀಚಿಕೆ$~

Wednesday, 24 August 2011

ಪುಸ್ತಕಗಳ ಬಿಡುಗಡೆಯ ಸಂತಸದ ಕ್ಷಣಗಳ ಕೆಲವು ಫೋಟೋಗಳು..!


ಬೆಂಗಳೂರು : ದಿನಾಕ 21.08.2011 ರಂದು ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ದೊಡ್ಡಮನಿ ಎಂ.ಮಂಜುನಾಥ ಅವರ "ಮಂಜು ಕರಗುವ ಮುನ್ನ" ಕವನ ಸಂಕಲನದ ಜೊತೆ ರೂಪ ಎಲ್ ರಾವ್ ಅವರ ಪ್ರೀತಿ ಏನೆನ್ನಲ್ಲಿ ನಿನ್ನ..? ಹಾಗೂ ಸುದೇಶ್ ಶೆಟ್ಟಿ ಅವರ "ಹೆಜ್ಜೆ ಮೂಡದ ಹಾದಿ" ಪುಸ್ತಕಗಳನ್ನ ಖ್ಯಾತ ಕಥೆಗಾರ ಕುಂ.ವೀರಭದ್ರಪ್ಪ, ಸಾಹಿತಿ ರಮೇಶ್ ಕಾಮತ್ ಹಾಗೂ ಚಿತ್ರ ಸಾಹಿತಿ ಹೃದಯ ಶಿವ ಅವರುಗಳು ಏಕಕಾಲದಲ್ಲಿ ಲೋಕಾರ್ಪಣೆ ಮಾಡಿದರು.

ಕಾರ್ಯಕ್ರಮದಲ್ಲಿ ತೆಗೆದ ಕೆಲವು ಭಾವ ಚಿತ್ರಗಳು ನಿಮಗಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು ಹಾಗೆ ಫೋಟೋ ಕ್ಲಿಕಿಸಿದ ಪ್ರಕಾಶ್ ಸರ್ ಶಿವು ಸರ್ ಬಾಲು ಸರ್ ಮತ್ತು ಗುರುಪ್ರಸಾದ, ಮಲ್ಲಿಕಾರ್ಜುನ್ ಸರ್ ಎಲ್ಲರಿಗೂ ತುಂಬಾ ಥ್ಯಾಕ್ಸ್ ...!







Tuesday, 16 August 2011

3 ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಹ್ವಾನ..!



"ಯಾವುದೇ ಯಾರದೇ ಪುಸ್ತಕ ಬಿಡುಗಡೆ ಸಮಾರಂಭಗಳ ಆಹ್ವಾನಕ್ಕೆ ಕಾಯಬೇಡಿ

ನಿಸ್ವಾರ್ಥತೆ ಯಿಂದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಏಕೆಂದರೆ ಅದು ಸಾಹಿತ್ಯಲೋಕಕ್ಕೆ

ನೀವು ನೀಡುವ ಅತಿ ದೊಡ್ಡ ಗೌರವ"

~$ಮರೀಚಿಕೆ$~




ಬ್ಲಾಗ್ ಲೋಕದ ಎಲ್ಲಾ ಸಜ್ಜನರಿಗೂ ಈ ಚಿಕ್ಕವನ ಚಿಕ್ಕ ನಮಸ್ಕಾರಗಳು...!

ತುಂಬಾ ದಿನಗಳ ನನ್ನ ಕನಸು ಇದೀಗ ನೆರವೇರುತ್ತಿದೆ ಎಂದೋ ಹೊರಬರ ಬೇಕಿದ್ದ ನನ್ನ ಕವನ ಸಂಕಲನದ ಪುಸ್ತಕ ಈಗ ಲೋಕಾರ್ಪಣೆಗೆ ಸಿದ್ಧವಾಗಿದೆ ತಡವಾಗಲು ಕಾರಣ ನನ್ನ ಮೊಂಡತ...! ಹೌದು ನನ್ನ ಕಲ್ಪನೆಗೆ ತಕ್ಕ ಹಾಗೆ ಪುಸ್ತಕವನ್ನ ಹೊರತರಬೇಕು ಪುಸ್ತಕದಲ್ಲಿ ಹೊಸತನ ತುಂಬಬೇಕು ಅನ್ನೋ ಹಠದಲ್ಲಿ ನಾನು ಇಷ್ಟು ದಿನ ನನ್ನ ಕನಸನ್ನ ನನ್ನಲ್ಲಿ ಇಟ್ಟು ಕಾಪಾಡಿದೆ ಕೊನೆಗೆ ಎಲ್ಲಾ ನನ್ನ ಕನಸುಗಳು ಮಂಜಿನಂತೆ ಕರಗುವ ಮುನ್ನ ಕೆ.ಗಣೇಶ್ ಕೋಡೂರು" ಹಾಗೂ "ಬೆನಕ ಬುಕ್ ಬ್ಯಾಂಕ್"ನ ಬಳಗ ಮುಂದೆ ಬಂದು ನನ್ನ ಕಲ್ಪನೆಗಳಿಗೆ ಸ್ಪಂದಿಸಿ ಇಂದು "ಮಂಜು ಕರಗುವ ಮುನ್ನ" ಅನ್ನೋ ಹೆಸರಿನಡಿ ಕನ್ನಡ ಸಾಹಿತ್ಯ ಲೋಕದ ಹಿತಿಹಾಸದಲ್ಲೇ ವಿನೂತನ (Different) ಅನಿಸೋ ಪುಸ್ತಕವನ್ನ ಲೋಕಾರ್ಪಣೆ ಮಾಡಲು ಸಹಕರಿಸಿದ್ದಾರೆ ಅವರಿಗೆ ಈ ಮೂಲಕ ಒಂದು ಚಿಕ್ಕ ಧನ್ಯವಾದಗಳನ್ನು ಹೇಳುತ್ತಿದ್ದೇನೆ..!

ಹಾಗೆಯೇ ನಮ್ಮ ನಿಮ್ಮೆಲ್ಲರ ಬ್ಲಾಗ್ ಲೋಕದ ವಿಜ್ಞಾನಿ ಜ್ಞಾನಿ ಡಾಕ್ಟರ್ ಅಜಾದ್ ಅವರು ಈ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದರೆ ಅಲ್ಲದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರ ಪಾತ್ರ ಅಪಾರ ಅವರಿಗೆ ಎಷ್ಟು ಥ್ಯಾಂಕ್ಸ್ ಹೇಳಿದರು ಸಾಲದು ಹಾಗೆ ಖ್ಯಾತ ಕವಿ ಮತ್ತು ಸಿನಿಮಾ ಸಾಹಿತಿ ಹೃದಯ ಶಿವ ಅವರು ಬೆನ್ನುಡಿ ಬರೆದು ಈ ಪುಸ್ತಕವನ್ನು ಲೋಕಾರ್ಪಣೆ ಮಾಡುತ್ತಿದ್ದಾರೆ ಅವರಿಗೂ ಕೂಡ ಅನಂತ ವಂದನೆಗಳು.

ಇನ್ನೂ ನನ್ನ ಎಲ್ಲಾ ಕವನಗಳಲ್ಲೂ ಓದಿ ಪ್ರೋತ್ಸಹಿಸಿ ಕವಿಯಾಗಿಸಿದ ಬಜ್ಜ್. ಆರ್ಕುಟ್ , ಫೇಸ್ ಬುಕ್ ಅಲ್ಲದೆ ಎಸ್.ಎಂ.ಎಸ್. ಗೆಳೆಯ ಗೆಳತಿಯರೆಲ್ಲರಿಗೂ ನಾನು ಚಿರಋಣಿ...!

ಅಂದಹಾಗೆ ನನ್ನ ಕವನ ಸಂಕಲನ "ಮಂಜು ಕರಗುವ ಮುನ್ನ" ಮತ್ತು ರೂಪ ಎಲ್ ರಾವ್ ಅವರ "ಪ್ರೀತಿ..! ಏನೆನ್ನಲ್ಲಿ ನಿನ್ನಾ..?" ಅಲ್ಲದೆ ಸುಧೇಶ್ ಶೆಟ್ಟಿ ಅವರ "ಹೆಜ್ಜೆ ಮೂಡದ ಹಾದಿ" ಪುಸ್ತಕಗಳು ಏಕಕಾಲದಲ್ಲಿ ಲೋಕಾರ್ಪಣೆ ಹೊಂದಲಿವೆ ತಾವೆಲ್ಲರೂ ಬಂದು ಕಾರ್ಯಕ್ರಮವನ್ನ ಯಶಸ್ವೀ ಆಗಿ ನಡೆಸಿಕೊಡಬೇಕೆಂದು ಕೇಳಿಕೊಳ್ಳುತ್ತಿದ್ದೇನೆ...! ಬರ್ತಿರ ಅಲ್ವ...!

ಈ ಕಾರ್ಯಕ್ರಮಕ್ಕೆ ಸಹಕರಿಸಿ ನಮ್ಮನೆಲ್ಲ ಹುರಿದುಂಬಿಸುತ್ತಿರುವ ಕೆ.ಶಿವು ಸರ್ ಅವರಿಗೂ ಒಂದು ಥ್ಯಾಂಕ್ಸ್ ಹೇಳ್ದೆ ಇರೋಕೆ ಆಗುತ್ತಾ....? ತುಂಬಾ ಧನ್ಯವಾದಗಳು ಶಿವು ಸರ್ ನಿಮ್ಮ ಬ್ಯುಸಿ ಲೈಫ್ ನಲ್ಲೂ ಬಿಡುವು ಮಾಡಿಕೊಂಡು ಕಾರ್ಯಕ್ರಮಕ್ಕೆ ತುಂಬಾ ಸಹಕರಿಸಿದ್ದಿರ ನಿಮಗೆ ನನ್ನ ಕಡೆಯಿಂದ ಚಿಕ್ಕ ಧನ್ಯವಾದ..!

ದಿನಾಂಕ : 21.08.2011. (ಭಾನುವಾರ ಆಗಸ್ಟ್ 2011)
ಸಮಯ : ಬೆಳಗ್ಗೆ 10:30
ಸ್ಥಳ : ಕನ್ನಡ ಸಾಹಿತ್ಯ ಪರಿಷತ್, ಚಾಮರಾಜಪೇಟೆ, ಬೆಂಗಳೂರು.

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ : 9742495837

ನಿಮ್ಮ ಆಗಮನದ ನಿರೀಕ್ಷೆಯಲ್ಲಿ
~$ಮರೀಚಿಕೆ$~

ಸುಧೇಶ್ ಶೆಟ್ಟಿ ಅವರ "ಹೆಜ್ಜೆ ಮೂಡದ ಹಾದಿ"

ರೂಪ ಎಲ್ ರಾವ್ ಅವರ "ಪ್ರೀತಿ..! ಏನೆನ್ನಲ್ಲಿ ನಿನ್ನಾ..?"

"ಮಂಜು ಕರಗುವ ಮುನ್ನ"

Friday, 5 August 2011

ಮಂಜು ಕರಗುವ ಮುನ್ನ ಪುಸ್ತಕದ ಬಗ್ಗೆ "ಮಾನಸ" ಪತ್ರಿಕೆಯಲ್ಲಿ

"ಮಾನಸ" ಪತ್ರಿಕೆಯ ಸಂಪಾದಕರಾದ ಕೆ. ಗಣೇಶಕೋಡೂರು ರವರು ಮನತುಂಬಿ ನನ್ನ  "ಮಂಜು ಕರಗುವ ಮುನ್ನ" ಕವನಸಂಕಲನದ ಬಗ್ಗೆ "ಮಾನಸ" ಪತ್ರಿಕೆಯಲ್ಲಿ ಬರೆದಿದ್ದರೆ.... ಒಮ್ಮೆ ನೀವು ಓದಿ......! 



Tuesday, 2 August 2011

"ಮಂಜು ಕರಗುವ ಮುನ್ನ"


"ಪುಸ್ತಕಗಳ ಇತಿಹಾಸದಲ್ಲೇ (ನನಗೆ ತಿಳಿದ ಮಟ್ಟಿಗೆ) ವಿನೂತನ ಮಾದರಿಯ ಕವನ ಸಂಕಲನದ ಪುಸ್ತಕ ಸದ್ಯದಲ್ಲೇ ನಿಮ್ಮ ಕೈಗಳಲ್ಲಿ " 

ಚಲನಚಿತ್ರ ಸಾಹಿತಿ ಹೃದಯ ಶಿವ ಅವರ ಬೆನ್ನುಡಿ & ಡಾಕ್ಟರ್ ಅಜಾದ್ ಅವರ ಮುನ್ನುಡಿ ಹೊಂದಿರುವ "ಮಂಜು ಕರಗುವ ಮುನ್ನ" ಕವನ ಸಂಕಲನ...!

ಎಂದಿನಂತೆ ಸ್ವಾಗತಿಸಿ ಹರಸಿ ಹಾರೈಸಿ ಆಶೀರ್ವದಿಸಿ ಪ್ರೋತ್ಸಹಿಸಿ ...! 

  ಪ್ರೀತಿಯಿಂದ
~$ಮರೀಚಿಕೆ$~