ಸತ್ಯವನ್ನೇ ನುಡಿಸು ಗುರುವೇ ನರವಿಲ್ಲದ ಜಿಹ್ವೆಯೋಳ್ ! ಸ್ಥಿರವಾಗಿ ನೆಲೆಸು ಗುರುವೇ ಮರ್ಕಟ ಈ ಮನದೊಳ್ !

Monday 4 October 2010

ಗೋವಿಂದನ ಗಾದೆ ಪುರಾಣ ...!





ಪಾತಿ ಕತೆ ಮುಗಿದು ಹೋಯ್ತು ಸರ್ ಬೇರೆಯೇನಾದ್ರು ಬರೀರಿ ಅಂತ ತುಂಬಾ ಫ್ರೆಂಡ್ಸ್ ಮೇಲ್ ಮಾಡಿದ್ರು ಚಾಟ್ ಮಾಡಿದ್ರು ಕಾಲ್ ಮಾಡಿ ಕೂಡ ಹೇಳಿದ್ರು ನಾನು ಅವರಿಗೆಲ್ಲ ತಾಳಿ ತಾಳಿ ಒಂದು ಮೂವತ್ತು ದಿನ ಓಡಲಿ ಆಮೇಲೆ ಏನಾದ್ರು ಬರೆಯೋಣ ಅಂತ ಹೇಳಿ ಸಮಾಧಾನ ಮಾಡಿದ್ದೆ ಈಗ ನೋಡಿ 30 ದಿನ ಆಗಿದೆ ಏನ್ ಬರೀಬೇಕು ಅಂತ ಗೊತ್ತಾಗ್ತಾ ಇಲ್ಲಾ ಆದ್ರು ಬರಿಲೇ ಬೇಕು ಅಂತ ಇರೋ ಬರೋ ಎನರ್ಜಿನೆಲ್ಲ ಉಪಯೋಗಿಸಿ ಇದನ್ನ ಬರ್ದಿದೀನಿ ಕಾರಣ ಮೂನ್ನೆ ಯಾರೋ ನನಗೆ ಫೋನ್ ಮಾಡಿ "ಮಲ್ಟಿ ಟ್ಯಾಲೆಂಟ್ ಮಂಜು" ಅಂತ ಬಿರುದು ಕೊಟ್ರು ಅಲ್ದೆ ಯಾರೋ ಒಬ್ರು ಕಾಮೆಂಟ್ಸ್ ಕೊಡ ಹಾಕಿದ್ರು, ಈ ಕಂದಾ, ಮುದ್ದು, ಬಂಗಾರ, ಚಿನ್ನ, ರನ್ನ ಇನ್ನು ಹೇಳ್ಬೇಕು ಅಂದ್ರೆ ಪೊರ್ಕಿ, ಲೂಸು, ಮೆಂಟ್ಲು, ಪೋಲಿ ಅಂತೆಲ್ಲಾ ಕೊಟ್ಟ ಹುಡುಗೀರ ಬಿರುದುಗಳಿಗಿಂತ ಇದ್ಯಾಕೋ ಹಾರ್ಟ್ ಟಚ್ ಮಾಡ್ತು ರೀ ಅದಕ್ಕೆ ಒಂದು ಕಾನ್ಸೆಪ್ಟ್  ತಗೊಂಡು ಈ ಪುರಾಣ ಬರ್ದಿದೀನಿ. ನೀವು ಕಷ್ಟ ಪಟ್ಟಾದರು ಓದಿ ಮುಗಿಯೋ ತನಕ ಬಿಡುಬೇಡಿ ಒಂದೇ ಟೈಮ್ ಓದುಬೇಕು ಗಮನ ಇಟ್ಟು ಓದಿ ಓದುವಾಗ ಎಲ್ಲೂ ನಿಲ್ಲಿಸಬಾರ್ದು ತುಂಬಾ ಹುಷಾರು ಯಾಕಂದ್ರೆ ನಾನು ಒಂದು ನಿಮಗೆ ಪ್ರಶ್ನೆ ಕೇಳ್ತೀನಿ ಜಾಗ್ರತೆ ಉತ್ತರ ಕೊಟ್ಟವರಿಗೆ ಸೂಕ್ತ ಬಹುಮಾನ ಇದೆ. 

     ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಅಂತ ಹೇಳ್ತಾರಲ್ಲ ಅದು ನಿಜ ಇರ್ಬೇಕು ಕಣ್ರೀ ಆನೆ ನಡೆದದ್ದೇ ದಾರಿ ಅನ್ನೋ ಹಾಗೆ ನಮ್ಮ ಗೋವಿಂದ ನಡೆದದ್ದೇ ದಾರಿ ಯಾರು ಮಾತು ಕೇಳೋನಲ್ಲ ಅವನದೇ ಹಠ...... ಹೀಗಿರುವಾಗ ಕೆಲವೊಬ್ರು ಅವನಿಗೆ ಊರಿಗೊಂದು ದಾರಿ ಆದ್ರೆ ಎಡವಟ್ಟನಿಗೆ ಒಂದು ದಾರಿ ಅಂತ ಬೆನ್ನು ಹಿಂದೇ ಹೇಳ್ತಾ ಇದ್ರೂ ಅವನು ಕೇಳಿದ್ರು ಕೇಳ್ದೆ ಇರೋ ಥರ ಇರ್ತಾ ಇದ್ದಾ . ಯಾಕಂದ್ರೆ ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತ ? ? ? ? 

ಈಗ ನೇರವಾಗಿ ವಿಷಯಕ್ಕೆ ಬರೋಣ ಕುಂತು ತಿಂದರೆ ಕುಡಿಕೆ ಹೊನ್ನು ಸಾಲದು ಅಂತ ದೊಡ್ಡವರು ಹೇಳಿದರೆ ಅಲ್ವ  ಅಲ್ದೆ  ಕೈ ಕೆಸರಾದರೆ ಬಾಯಿ ಮೊಸರು ಅಂತ ನಾನು ಚಿಕ್ಕವನಿರುವಾಗ ನಮ್ಮ ಟೀಚರ್ ಹೇಳ್ತಾ ಇದ್ರೂ  ಈಗ ನಮ್ಮ ಗೋವಿಂದ ಓದಿದ್ದು ಆಯ್ತು ಎಲ್ಲಾದ್ರು ಕೆಲಸ ಹುಡುಕೋಣ ಅಂತ ಯೋಚನೆ ಮಾಡ್ತಾ ಕೂತಿದ್ದ   ಅದೇನೋ ಹೇಳ್ತಾರಲ್ಲ ಕೆಟ್ಟು ಪಟ್ಟಣ ಸೇರು ಅಂತ ಆದರೆ ಇವನು ಇನ್ನು ಕೆಟ್ಟು ಹೋಗಿರಲಿಲ್ಲ...! ನೋಡೋಕೆ ಸಾದು ಥರ ಇದ್ದಾ, ತನ್ನ ಊರಲ್ಲಿ ಕೆಲಸ ಮಾಡೋಕೆ ಇಷ್ಟ ಇರಲಿಲ್ಲ ಅವನಿಗೆ ಅದಕ್ಕೆ ಬೆಂಗಳೂರಿಗೆ ಹೋಗಿ ಏನಾದ್ರು ಮಾಡೋಣ ಅಂತ ಯೋಚನೆ ಮಾಡ್ತಾ ಇರುವಾಗಲೇ ರೋಗಿ ಬಯಸಿದ್ದು ಹಾಲು ಅನ್ನ ವೈದ್ಯ ಹೇಳಿದ್ದು ಹಾಲು ಅನ್ನ ಅನ್ನೋ ಹಾಗೆ ಹಾಗೋ ಹೀಗೋ ಒಬ್ಬ ಪರಿಚಯ ಆಗಿ ಗೋವಿಂದನ್ನ ಬೆಂಗಳೂರಿಗೆ ಕರ್ಕೊಂಡು ಬಂದ, ಅವ್ನೋ.... ಮಾತು ಬೆಳ್ಳಿ ಮೌನ ಬಂಗಾರ ಥರ ಹೊಸ ಜಾಗ... ಹೊಸ ಫ್ರೆಂಡ್ಸ್.... ಹೇಗೋ ಹೊಂದಿ ಕೊಂಡಿದ್ದ ಬಂದು ಸ್ವಲ್ಪ ದಿನದಲ್ಲೇ ಕೆಲಸ ಸಿಕ್ತು,  ಪಾಲಿಗೆ ಬಂದಿದ್ದು ಪಂಚಾಮೃತ ಅಲ್ವ ಸಿಕ್ಕ ಕೆಲಸ ಸರಿಯಾಗಿ ಮಾಡಿಕೊಂಡು ಹೋಗ್ತಾ ತಿಂಗಳಿಗೆ ಸರಿಯಾಗಿ ಸಂಬಳ ತಗೊಂಡು ಆರಾಮಗಿದ್ದ. ಈ ಬೆಂಗಳೂರ್ ಸಿಟಿಗೆ ಬಂದಮೇಲೆ ಅವನಿಗೆ ದುಡಿಮೆಯೇ ದುಡ್ಡಿನ ತಾಯಿ ಅನ್ನೋದು ಅರಿವಾಯ್ತು, ಅವನಾದ್ರು ಒಂದೇ ಹತ್ರ ಎಷ್ಟು ದಿನ ಅಂತ ಕೆಲಸ ಮಾಡ್ತಾನೆ ಬೆರಳು ತೋರಿಸಿದರೆ ಹಸ್ತ ನುಂಗೋ ವಂಶ ಅವಂದು ಆಗಲೇ ಫುಲ್ ಕೆಲಸ ಕಲ್ತಿದ್ದ ನಯಶಾಲಿ ಆದವನು ಜಯಶಾಲಿ ಆದನು ಅಂತ  ಬೇರೆಕಡೆ ಎಲ್ಲೇ ಹೋದ್ರು ಬದುಕ್ತೀನಿ ಅನ್ನೋ ಧೈರ್ಯದಿಂದ ಬೇರೆ ಕೆಲಸಕ್ಕೆ ಸೇರ್ಕೊಂಡ. 

ರವಿ ಕಾಣದನ್ನ ಕವಿ ಕಂಡ ಅನ್ನೋ ಮಾತು ಎಷ್ಟು ನಿಜ ರೀ ಒಂದು ದಿನ ಗೋವಿಂದ ಹೊಟ್ಟೆ ತುಂಬಾ ಊಟ ಮಾಡಿ ಮಲ್ಕೊಂಡಿದ್ದ ರಾತ್ರಿ ಕನಸಲ್ಲಿ ಕಾಜೋಲ್ ಜೊತೆ ಶೂಟಿಂಗ್ ಇತ್ತು  ಐಶ್ವರ್ಯ  ಆಕಡೆ ಇಂದ ಗೋ...ಗೋ....ಗೋ... ಗೋವಿಂದಾ........... ಅಂತ ಓಡಿ ಬರ್ತಾ ಇದ್ಲು ಈ ಕಡೆ ಇಂದ ಗೋವಿಂದ .............ಐಶ್ವರ್ಯ  ಅಂತ ಓಡಿ ಬರ್ತಾ ಇದ್ದ ಇನ್ನೇನು ಇಬ್ರು ಹತ್ರ ಬಂದ್ರು ಬಂದ್ರು ಬಂದೆ ಬಿಟ್ರು ಅನ್ನೋ ಅಷ್ಟರಲ್ಲಿ  ಶಿವ ಪೂಜೆಲಿ ಕರಡಿ ಬಿಟ್ಟಂತೆ  ಅವ್ನ ಫ್ರೆಂಡ್ ಗೋವಿಂದ ಯಾಕೋ ಈ ಥರ ಕೂಗ್ತಾ ಇದೀಯ ಬೆಳಗ್ಗೆ 8 ಘಂಟೆ ಆಯ್ತು ಎದ್ದೇಳೋ ಅಂತ ಎಬ್ಬಿಸಿ ಬಿಟ್ಟ ಕಣ್ರೀ ಪಾಪ ಗೋವಿಂದನ ಕನಸು ಅಲ್ಲಿಗೆ ಮುಕ್ತಯಾ ಆಯ್ತು ಹಿಂಗಾಗಬಾರ್ದಿತ್ತು ಅಲ್ವ !  ಹೋಗ್ಲಿ ಬಿಡಿ ಅದ್ಯಾಕೆ ಈಗ ಕೊಂಕಣ ಸುತ್ತಿ ಮೈಲಾರಕ್ಕೆ ಯಾಕ ಬರೋದು ನೇರ ವಿಷ್ಯಕ್ಕೆ ಬರೋಣ, ಹುಟ್ಟು ಗುಣ ಸುಟ್ರು ಹೋಗೋಲ್ಲ ಅಂತಾರೆ ಅಂತದ್ರಲ್ಲಿ ಈ ಗೋವಿಂದನಿಗೆ  ರಾತ್ರಿ ಮಲ್ಗೊವಾಗ ಒಂದು ಬೀಡಿ ಸೇದೋ ಅಭ್ಯಾಸ ಇತ್ತು ಅವತ್ತೊಂದು ದಿನ ಹೊರಗಡೆ ಹೋಗಿ ಬೀಡಿ ಸೇದೋಣ ಅಂತ ಅನ್ಕೊಂಡ ಆದ್ರೆ ತುಂಬಾ ಮಳೆ ಬರ್ತಾ ಇತ್ತು ಫ್ರೆಂಡ್ಸ್ ಎಲ್ಲಾ ಮಲ್ಕೊಂಡಿರೋದು ನೋಡಿ ತಾನು ಇದ್ದಲ್ಲೇ ಬೀಡಿ ಹಚ್ಚಿಕೊಂಡು ಸೇದುತ್ತ ಕೂತ, ಬೀಡಿ ಹಾಚ್ಚೋವಾಗಿ ಬೆಂಕಿ ಕಡ್ಡಿ ಗೀರಿ ಅದೆಲ್ಲಿ ಎಸೆದ್ನೋ ಏನೋ ಸ್ವಲ್ಪ ಹೊತ್ತಲ್ಲೇ ಇಡಿ ಮನೆಗೆ ಬೆಂಕಿ ಹತ್ತಿ ಹೋಯ್ತು ಕೋತಿ ತಾನು ಕೆಡೋದಲ್ದೆ ವನನೆಲ್ಲ ಕೆಡಿಸ್ತು ಅನ್ನೊ ಮಾತು ಜೊತೆಗಿದ್ದ ಫ್ರೆಂಡ್ಸ್ ಬಾಯಲ್ಲಿ ಬಂದ್ರು ಯಾರು ಅವನಿಗೆ ಏನು ಅನ್ಲಿಲ್ಲ ಯಾಕಂದ್ರೆ ಅವನನ್ನ ಕೆಡೋಥರ ಮಾಡಿದ್ದೆ ಅವರು. ನಾಯಿ ಬಾಲ ಯಾವತ್ತಿದ್ರೂ ಡೊಂಕು ಅಲ್ವ ಕಡ್ಡಿನ ಗುಡ್ಡ ಮಾಡೋ ಸ್ವಭಾವ ನಮ್ಮ ಗೋವಿಂದಂದು ಪಕ್ಕದ ಮನೆ ಪದ್ಮಕ್ಕನ ಮಗಳು ಕಾಲೇಜ್ ಮುಗಿಸ್ಕೊಂಡು ಬೈಕ್ ನಲ್ಲಿ ಒಬ್ಬ ಹುಡುಗನ ಜೊತೆ ಸುತ್ತೊದನ್ನ ನೋಡಿ ಸೀದಾ ಪದ್ಮಕ್ಕನ ಮನೆಗೆ ಹೋಗಿ ನಿಮ್ಮ ಮಗಳು ಇದಾಳಲ್ಲ ಅವಳು ಅದ್ಯಾರೋ ಹುಡುಗುನ್ ಜೊತೆ ಹಾಗೆ ಹೀಗೆ ಅಂತೆಲ್ಲ ಇಲ್ದೆ ಇರೋದನ್ನೆಲ್ಲ ಹೇಳಿ ಪದ್ಮಕ್ಕನ ಕೈಲಿ ನಾಯಿ ಥರ ಹೊಡಿಸ್ಕೊಂಡಿದ್ದ ಯಾಕಂದ್ರೆ ಪದ್ಮಕ್ಕನ ಮಗಳ ಜೊತೆ ಇದ್ದದ್ದು ಪದ್ಮಕ್ಕನ ಅಳಿಯ ಮಗಳಿಗೆ ಮದುವೆ ಮಾಡಿ ಇನ್ನು 3 ತಿಂಗಳು ಆಗಿರಲಿಲ್ಲ..! ಕೆಲಸವಿಲ್ಲದ ಆಚಾರಿ ಮಗನ ತಲೆ ಕೆತ್ತಿದಂತೆ ಇವನು ಏನಾದ್ರು ಒಂದು ಮಾಡ್ತಾ ಇರ್ತಾನೆ ಕೊಚ್ಚೆ ಮೇಲೆ ಕಲ್ಲು ಹಾಕಿ ಸಿಡಿಸ್ಕೊಳ್ಳೋದು ನಮ್ಮ ಗೋವಿಂದನಿಗೆ ಹೊಸದಲ್ಲ ಬಿಡಿ.

ಗೋವಿಂದನ ಈ ಆಟಗಳನ್ನ ನೋಡಿ ಬೆಂಗಳೂರು ಬಿಡಿಸಿ ಊರಲ್ಲಿ ಹೊಲ ಗದ್ದೆ ನೋಡ್ಕೊಂಡು ಇರು ಅಂತ ಹೇಳಿ ಅಪ್ಪ ಅಮ್ಮ ಅವನಿಗೆ ಒಂದು ಮದುವೆ ಮಾಡ್ತಾರೆ ಮದುವೆ ಆದ ಸ್ವಲ್ಪ ದಿನದಲ್ಲೇ ಹೆಣ್ಣು ಕೊಟ್ಟ ತಂದೆ ತಾಯಿ ಗಿಣಿ ಸಾಕಿ ಗಿದಗನ ಕೈಗೆ ಕೊಟ್ವಿ ಅಂತ ಗೊತ್ತಾಗುತ್ತೆ ಹೀಗಿರುವಾಗ ಹಬ್ಬಕ್ಕೆ ಅಂತ ಹೆಂಡ್ತಿ ಜೊತೆ ಮಾವನ ಮನೆಗೆ ಹೋದ್ರೆ ಅತ್ತೆ ಗೌರಿ ಹಬ್ಬಕ್ಕೆ ಬಂದ ಗತಿಗೆಟ್ಟ ಅಳಿಯ ಅಂತ ಮನಸ್ಸಲ್ಲೇ ಅನ್ಕೊಂಡು ಸ್ನಾನಕ್ಕೆ ಅಂತ ಬಚ್ಚಲ ಮನೆಗೆ ಕಳಿಸಿದ್ರೆ ತಾನು ಸ್ನಾನ ಮಾಡೋದು ಬಿಟ್ಟು ಹಂಚು ತಗೆದು ಪಕ್ಕದ ಮನೆಯವರು ಸ್ನಾನ ಮಾಡೋದು ನೋಡಿ ಸಿಕ್ಕು ಬಿದ್ದು ಊರೆಲ್ಲ ಸೇರಿ ಹೊಡಿಯೋಕು ಮುಂಚೆ ಹೆಂಡ್ತಿ ಕರ್ಕೊಂಡು ಹೇಳ್ದೆ ಕೇಳ್ದೆ ಊರು ಬಿಟ್ಟು ತನ್ನೂರಿಗೆ ಬಂದಿದ್ದ. ಇವನ ತರ್ಲೆಗಳನ್ನ ನೋಡಿ ನೋಡಿ ಸಾಕಾಗಿದ್ದ ಅವನ ಹೆಂಡ್ತಿಗೆ ಜೀವನ ತಾಳ ತಪ್ಪಿದ ಬಾಳು ತಾಳಲಾರದ ಗೋಳು ಆಗಿತ್ತು.

ಹಂಗು ಹಿಂಗು ಗೋವಿಂದ ಕಷ್ಟ ಪಟ್ಟು ಒಂದು ಮಗುನ ತನ್ನ ಹೆಂಡ್ತಿ ಕೈಗೆ ಕೊಟ್ಟಿದ್ದ. ಅದೋ ಗಂಡು ಮಗು ಆ ಮಗು ಬಗ್ಗೆ ಹೇಳ್ಬೇಕು ಅಂದ್ರೆ ಎಲ್ಲಾ ಗೋವಿಂದನ ಥರಾನೆ ಅಪ್ಪ ಗುಡಿ ಕಟ್ಟಿದರೆ ಮಗ ಕಳಸ ಇಟ್ಟ ಅನ್ನೋದಕ್ಕೆ ಆ ಮಗುನೆ ಸಾಕು. ಇನ್ನು ನಮ್ಮ ಗೋವಿಂದನ ಕಂಡ್ರೆ  ಹೆತ್ತೋರ್ಗೆ ಹೆಗ್ಗಣ ಮುದ್ದು ಕಟ್ಗೊಂಡೋರ್ಗೆ ಕೋಡಂಗಿ ಮುದ್ದು ಅನ್ನೋದನ್ನ ಅವನ ತಂದೆ ತಾಯಿ ಅಲ್ದೆ ಹೆಂಡ್ತಿ ಕೊಡ ನಿಜ ಮಾಡಿ ಬಿಟ್ಟಿದ್ರು ಅವನು ಬದಲಾಗೊಲ್ಲ ಅಂತ ಗೊತ್ತಿದ್ದೇ ಅವರು ಅವನಿಗೆ ಬುದ್ಧಿ ಹೇಳೋಕೆ ಹೋಗ್ತಾ ಇರ್ಲಿಲ್ಲ ಯಾಕಂದ್ರೆ ಬೋರ್ಗಲ್ಲ ಮೇಲೆ ನೀರು ಸುರಿದಂತೆ ಏನೆ ಹೇಳಿದ್ರು ಉಪಯೋಗ ಇಲ್ಲಾ ಅಂತ ಸುಮ್ನೆ ಇರ್ತಾ ಇದ್ರೂ. 

ಹೋಗ್ಲಿ ಬಿಡಿ ನಿಮಗ್ಯಾಕೆ  ಆ ಮುಸಿಕಿನೊಳಗೆ ಗುದ್ದಿಸಿಕೊಳ್ಳೋ ಗೋವಿಂದನ ವಿಚಾರ ಓದಿದ್ದು ಆಯ್ತಲ್ಲ ಅವನ ಕಥೆ,  ನಾನು ನಿಮಗೆ ಮೊದ್ಲೇ ಹೇಳಿದ್ದೆ ಒಂದು ಪ್ರಶ್ನೆ ಕೇಳ್ತೀನಿ ಅಂತ ಆ ಟೈಮ್ ಬಂದಿದ್ದೆ ಈಗ ಹೇಳಿ 

1. ಈ ಪುರಾಣದಲ್ಲಿ ಒಟ್ಟು ಎಷ್ಟು ಗಾದೆಗಳು ಇವೆ ?
2. ಇಲ್ಲಿ ಇರುವ ಗಾದೆಗಳಲ್ಲಿ ಅತಿ ಚಿಕ್ಕ ಗಾದೆ ಯಾವ್ದು ?

 ಸರಿಯಾಗಿ ಹೇಳಿದ ಮೊದಲ 3 ಆತ್ಮೀಯರಿಗೆ ಸೂಕ್ತ ಬಹುಮಾನ ಇರುತ್ತೆ ಮರೆಯ ಬೇಡಿ ತ್ವರೆ ಮಾಡಿ ...!






       ನಿಮ್ಮ ಹುಡುಗ

?ದೊಡ್ಡಮನಿ.ಮಂಜು

         97424 95837

27 comments:

  1. 24 gadegalu. adaralli "yavattidru nayi baala donku" chikka gaade.

    ReplyDelete
  2. Super manju
    29 gadegalu ede. ane nadeddide dari

    ReplyDelete
  3. ೩೦ ಗಾದೆಗಳು "ಕೆಟ್ಟು ಪಟ್ನಾ ಸೇರು"

    ReplyDelete
  4. hmmm super maga... yelli sikkudo istodu gade.. bejan colection..............

    ReplyDelete
  5. 29 gadegalu "ಕೆಟ್ಟು ಪಟ್ನಾ ಸೇರು

    ReplyDelete
  6. @Vinu :- ಹ್ಮಂ ಪರವಾಗಿಲ್ಲ ಪ್ರಯತ್ನ ಪಟ್ಟಿದ್ದಿರ ಸ್ವಲ್ಪದರಲ್ಲೇ ಇದ್ದೀರಾ ಅನಿಸುತ್ತೆ ಇನ್ನೊಮ್ಮೆ ಓದಿ ನೋಡಿ ಧನ್ಯವಾದ ;)

    ReplyDelete
  7. @Nagaraj :- ಪರವಾಗಿಲ್ಲ ರೀ ಕಷ್ಟ ಪಟ್ಟಿದಿರ ಆದ್ರೆ ಸಿಕ್ಕಪಟ್ಟೆ ಸರಿಯಾಗಿ ಹೇಳಿ ಸ್ವಲ್ಪ ತಪ್ಪು ಹೇಳಿದ್ರಿ ಅನಿಸುತ್ತೆ

    ReplyDelete
  8. @ಸೀತಾರಾಮ. ಕೆ. :- ಏನ್ ಸರ್ ಆ ಕತೇಲಿ ಬರೀ ೩೦ ಗಾದೆಗಳು ಅಷ್ಟೇನಾ ಸಿಕ್ಕಿದ್ದು ನೋಡಿ ಸರ್ ಇನ್ನೊಮ್ಮೆ ಬಹುಮಾನ ನಿಮಗೆ ಕೊಡೋಣ ಅಂತ ಇದೀನಿ ಸರಿಯಾಗಿ ನೋಡಿ

    ReplyDelete
  9. @ತರುಣ್ :- ಥ್ಯಾಂಕ್ ಯು ಮಗ ಅಲ್ಲಾ ನಾನು ಕೇಳಿದ್ದ ಪ್ರಶ್ನೆಗೆ ನೀನೇನು ಉತ್ತರನೆ ಹೇಳಿಲ್ವಲ್ಲ ಟೈಮ್ ಇಲ್ವಾ ಗಾದೆ ಎಷ್ಟಿವೆ ಅಂತ ಎಣಿಸೋಕೆ :P

    ReplyDelete
  10. @ಪ್ರಕಾಶ್ :- ಏನ್ರೀ ನೀವು ಎಸ್ಟೊಂದು ತಮಾಷೆ ಮಾಡ್ತಿರ ಹ್ಹ ಹ್ಹ ಹ್ಹ ನಿಮ್ಮ ಕಾಂಟಾಕ್ಟ್ ID ಮೇಲ್ ಮಾಡಿ ನನಗೆ (ಇದು ನನ್ನ ID anjumanju7@gmail.com)

    ReplyDelete
  11. ಓ..ಬರ್ಲಿಕ್ಕೆ ತಡ ಮಾಡ್ಬಿಟ್ಟೆ...:(
    ಮಾತಿಗೊ೦ದು ಗಾದೆ ಗಳನ್ನ ಬರೆದಿದ್ದೀರಿ.ಚೆನ್ನಾಗಿದೆ.ಸರಿ ಉತ್ರಾನ ನೀವೆ ಹೇಳ್ಬಿಡಿ. :)

    ReplyDelete
  12. @ಮನಮುಕ್ತಾ :- ತಡವಾದರೂ ಚಿಂತೆ ಸಮಯವಿದೆ ನಾನು ಉತ್ತರ ಹೇಳೋಕು ಇನ್ನು ಟೈಮ್ ಇದೇ ಕಾದು ನೋಡಿ :)

    ReplyDelete
  13. ಗಾದೆ ಚೆನ್ನಾಗಿ ಬಳಕೆ ಆಗಿದೆ

    ಇಷ್ಟ ಆಯಿತು

    ReplyDelete
  14. Hi Manjunath, Gaadegalannu Super agi balisikondidira.. Very good! Matte uttaragalannu neevu sikkaagale kodona anta..

    ReplyDelete
  15. @ಸಾಗರದಾಚೆಯ ಇಂಚರ :- thank u sir :)

    ReplyDelete
  16. @Pradeep Rao :- ಹ್ಹ ಹ್ಹ ಹ್ಹ ತುಂಬಾ ಜಾರಣರಲ್ವ ನೀವು ಅದಕ್ಕೆ ನಾ ಸಿಕ್ಕಾಗ್ಲೆ ಹೇಳ್ತೀನಿ ಅಂತಿರೋದು ಅಷ್ಟರಲ್ಲೇ ಯಾರಾದ್ರೂ ಹೇಳ್ತಾರೆ ಬಿಡಿ ಬಹುಮಾನ ಸಿಗೋದು ನಿಂಗೆ ಡೌಟ್ ಅನಿಸುತ್ತೆ :)

    ReplyDelete
  17. guru time sikkaga ennomme odhi utra heltini
    adre bahumana kodle beku

    ReplyDelete
  18. ಗೋವಿಂದನ ಗಾದೆ ಪುರಾಣ ದಲ್ಲಿ ಒತ್ತು 29 ಗಾದೆಗಳು ಇವೆ ಅತಿ ಚಿಕ್ಕ ಗಾದೆ ಅಂದ್ರೆ "ಕೆಟ್ಟು ಪಟ್ಟಣ ಸೇರು"
    ವಿಜೇತರು
    ೧. ಸುಗುಣ ಮಹೇಶ (ಬುಜ್ಜ್ ಫ್ರೆಂಡ್)
    ೨. ಪ್ರಕಾಶ್ (ಶ್ವೇತ ಪ್ರಕಾಶ್) (ಬ್ಲಾಗ್ )
    ೩. ಅನಾಮಿಕ

    ಪುರಾಣದಲ್ಲಿರುವ ಗಾದೆಗಳು

    1ವೇದ ಸುಳ್ಳಾದರೂ ಗಾದೆ ಸುಳ್ಳಾಗದು
    2ಆನೆ ನಡೆದದ್ದೇ ದಾರಿ
    3ಊರಿಗೊಂದು ದಾರಿ ಆದ್ರೆ ಎಡವಟ್ಟನಿಗೆ ಒಂದು ದಾರಿ
    4ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತ ? ? ? ?
    5ಕುಂತು ತಿಂದರೆ ಕುಡಿಕೆ ಹೊನ್ನು ಸಾಲದು
    6ಕೈ ಕೆಸರಾದರೆ ಬಾಯಿ ಮೊಸರು
    7ಕೆಟ್ಟು ಪಟ್ಟಣ ಸೇರು
    8ರೋಗಿ ಬಯಸಿದ್ದು ಹಾಲು ಅನ್ನ ವೈದ್ಯ ಹೇಳಿದ್ದು ಹಾಲು ಅನ್ನ
    9ಮಾತು ಬೆಳ್ಳಿ ಮೌನ ಬಂಗಾರ
    10ಪಾಲಿಗೆ ಬಂದಿದ್ದು ಪಂಚಾಮೃತ
    11ದುಡಿಮೆಯೇ ದುಡ್ಡಿನ ತಾಯಿ
    12ಬೆರಳು ತೋರಿಸಿದರೆ ಹಸ್ತ ನುಂಗೋ ವಂಶ
    13ನಯಶಾಲಿ ಆದವನು ಜಯಶಾಲಿ ಆದನು
    14ರವಿ ಕಾಣದನ್ನ ಕವಿ ಕಂಡ
    15ಶಿವ ಪೂಜೆಲಿ ಕರಡಿ ಬಿಟ್ಟಂತೆ
    16ಕೊಂಕಣ ಸುತ್ತಿ ಮೈಲಾರಕ್ಕೆ ಯಾಕ ಬರೋದು
    17ಹುಟ್ಟು ಗುಣ ಸುಟ್ರು ಹೋಗೋಲ್ಲ
    18ಕೋತಿ ತಾನು ಕೆಡೋದಲ್ದೆ ವನನೆಲ್ಲ ಕೆಡಿಸ್ತು
    19ನಾಯಿ ಬಾಲ ಯಾವತ್ತಿದ್ರೂ ಡೊಂಕು
    20ಕಡ್ಡಿನ ಗುಡ್ಡ ಮಾಡೋ ಸ್ವಭಾವ
    21ಕೆಲಸವಿಲ್ಲದ ಆಚಾರಿ ಮಗನ ತಲೆ ಕೆತ್ತಿದಂತೆ
    22ಕೊಚ್ಚೆ ಮೇಲೆ ಕಲ್ಲು ಹಾಕಿ ಸಿಡಿಸ್ಕೊಳ್ಳೋದು
    23ಗಿಣಿ ಸಾಕಿ ಗಿದಗನ ಕೈಗೆ ಕೊಟ್ವಿ
    24ಗೌರಿ ಹಬ್ಬಕ್ಕೆ ಬಂದ ಗತಿಗೆಟ್ಟ ಅಳಿಯ
    25ತಾಳ ತಪ್ಪಿದ ಬಾಳು ತಾಳಲಾರದ ಗೋಳು
    26ಅಪ್ಪ ಗುಡಿ ಕಟ್ಟಿದರೆ ಮಗ ಕಳಸ ಇಟ್ಟ
    27ಹೆತ್ತೋರ್ಗೆ ಹೆಗ್ಗಣ ಮುದ್ದು ಕಟ್ಗೊಂಡೋರ್ಗೆ ಕೋಡಂಗಿ ಮುದ್ದು
    28ಬೋರ್ಗಲ್ಲ ಮೇಲೆ ನೀರು ಸುರಿದಂತೆ
    29 ಮುಸಿಕಿನೊಳಗೆ ಗುದ್ದಿಸಿಕೊಳ್ಳೋ

    ಬಹುಮಾನ ಬಿತರಣೆ "ನೀವು ಸಿಕ್ಕಾಗ ನಾನು ಕೊಟ್ಟಾಗ"

    ~$Manju$~

    ReplyDelete
  19. thnq thq... nane modalane winner ... hahah neevu sikkagale kodi hahaha tondre illa allivaregu nimma hattirane irali bahumana... oLLeya lekhana heege barita iri

    -suguna

    ReplyDelete
  20. @Sugana Mahesh :- ಹ್ಹ ಹ್ಹ ಹ್ಹ ನೀವು ಬರೋತನಕ ನ್ನತ ಹತ್ರನೇ ಇರುತ್ತೆ ನೀವು ಕರುನಾಡಿಗೆ ಬಂದ್ರೆ ನನಗೊಂದು ಕರೆ ಮಾಡಿ ಹ್ಹ ಹ್ಹ ಹ್ಹ
    ಲೇಖನ ಮೆಚ್ಚಿದಕ್ಕೆ ಧನ್ಯವಾದಗಳು
    ಶುಭವಾಗಲಿ

    ReplyDelete
  21. @shri :- ಹ್ಹ ಹ್ಹ ಹ್ಹ ನಾನು ಆಗಲೇ ಉತ್ತರ ಹೇಳಿದೀನಿ ಗುರುವೇ ಮತ್ತೆ ಓದೋದದ್ರೆ ಓದಿ ಆದ್ರೆ ಬಹುಮಾನ ಬೇರೆ ಅವರಿಗೆ ಹೋಗಿದೆ
    ಲೇಖನ ಓದಿದಕ್ಕೆ ಧನ್ಯವಾದ

    ReplyDelete
  22. Manju,

    Naanu helta idde alva, ist bega uttra helidre hege ???

    ReplyDelete
  23. @ashokkodlady :- ನೀವು ಇದ್ದೀರಾ ಅಂತ ಗೊತ್ತಾಗ್ಲಿಲ್ಲ ಗೊತ್ತಾಗಿದ್ರೆ ಹೇಳ್ತಾ ಇರ್ಲಿಲ್ಲ :P

    ReplyDelete
  24. ಏನಪ್ಪಾ ಮಂಜು ನೀನು ಗಾದೆಗಳ ಸೆಂಚುರಿ ಮೇಲೆ ಸೆಂಚುರಿ ಹೊಡಿ ಆದ್ರೆ ಉರಿ ಬೇಡ...ಹಹಹ ಒಂದಂತೂ ನಿಜ ನಮ್ಮ ಯುವ ಪೀಳಿಗೆಗೆ ಒಂದು ಒಳ್ಳೆಯ GK ಸೋರ್ಸು...ಹಹಹ

    ReplyDelete
  25. ಹ್ಹ ಹ್ಹ ಹ್ಹ ಪರವಾಗಿಲ್ಲ ಸರ್ ತುಂಬಾ ಬೇಗನೆ ಬಂದಿದಿರ ಹ್ಹ ಹ್ಹ ಹ್ಹ :) ಉರಿ ನಾ ಇಲ್ಲಾ ಸರ್ ನನಗೆ ಉರಿಯೋದು ಬರೋಲ್ಲ ಉರಿಸೋದು ಮಾತ್ರ ಗೊತ್ತು

    ReplyDelete
  26. ಶಿವಪೂಜೆಯಲ್ಲಿ ಕರಡಿ ಬಿಟ್ಟ ಹಾಗೆ ಅಲ್ಲ ಅದು ಶಿವಪೂಜೆಯಲ್ಲಿ ಕರಡಿಗೆ ಬಿಟ್ಟ ಹಾಗೆ.

    ReplyDelete