ಸತ್ಯವನ್ನೇ ನುಡಿಸು ಗುರುವೇ ನರವಿಲ್ಲದ ಜಿಹ್ವೆಯೋಳ್ ! ಸ್ಥಿರವಾಗಿ ನೆಲೆಸು ಗುರುವೇ ಮರ್ಕಟ ಈ ಮನದೊಳ್ !

Thursday, 14 April 2011

ಸಂಜೆ ಮಳೆಯ ಹುಡುಗಿ..!

ರಿಬೇಕು ಅಂದುಕೊಂಡ ಕೆಲವು ನೆನಪುಗಳು ಪದೇ ಪದೇ ನೆನಪಾಗ್ತಾ ಈ ಮನಸ್ಸನ್ನ ಕೆಣಕಿ ಕಾಡುತ್ತವೆ. ಕೆಲವು ಪ್ರತಿಬಿಂಬಗಳು ಹೀಗೆ,  ನನ್ನಿಂದ ಅವಳು ದೂರ ಆದ್ಲು  ! ತಪ್ಪು ತಪ್ಪು ನನ್ನಿಂದ ಅವ್ಳು ದೂರ ಆಗ್ಲಿಲ್ಲ ಅವಳಿಂದ ನಾನೇ ದೂರ ಆದೆ, ಆದ್ರೆ ಅವಳ ನೆನಪುಗಳನ್ನ ಮಾತ್ರ ನಾ ದೂರ ಮಾಡೊಕಾಗ್ಲಿಲ್ಲ ಯಾಕಂದ್ರೆ 

"ನೆನಪುಗಳು 
ಪಾಪಾಸ್ ಕಳ್ಳಿಯಂತೆ
ಅವು ಬರಡು ಭೂಮಿಯನ್ನು
ಬಿಡೋದಿಲ್ಲ"

 ಇನ್ನು ಈ ಸಣ್ಣ ಹೃದಯನ ಬಿಡುತ್ತಾ ಹೇಳಿ ?  ಅದ್ರಲ್ಲೂ ನನ್ನಂತ ಮೃದು ಹೃದಯನ  ಬಿಡೋದುಂಟ. ಅವನ್ಯಾರೋ ತಲೆಕೆಟ್ಟು ಈ ಹೃದಯಕ್ಕೆ ಕೈ ಹಾಕಿ ಪರ ಪರ ಅಂತ ಕೆರ್ಕೊಂಡು ಬಿಟ್ನಂತೆ ಪಾಪ ಅಲ್ವ ! ಕೊನೆಗೆ ಅದರ ನೋವು ತಾಳಕಾಗ್ದೆ "ಪ್ರೀತಿ ಮಧುರ ತ್ಯಾಗ ಅಮರ" ಅಂದನಂತೆ, ಈ ಪ್ರೀತಿನೆ ಹೀಗೆ ಯಾವ ಕಾಫಿ ಶಾಪ್ ನಲ್ಲಿ ಶುರುವಾಗಿ ಯಾವ ವೈನ್ ಶಾಪ್ ನಲ್ಲಿ ಕೊನೆಯಾಗುತ್ತೆ ಅಂತ ಯಾರಿಗೂ ಗೊತ್ತಿರಲ್ಲ ಅಲ್ವ !

ಅಯ್ಯೋ ಬಿಡಿ ನಮಗ್ಯಾಕೆ ಬೇರೆಯವರ ಲವ್ ಸ್ಟೋರಿ :-) 

  ಅದೇಕೋ ಇವತ್ತು ಈ ಮುಸ್ಸಂಜೆ ಮಳೆಲಿ ಆ ಹುಡುಗಿ ನೆನಪಾದ್ಲು, ನಾನು ಅವಳ ಊರಲ್ಲಿ ಅವಳ ಜೊತೆ ಕಳೆದ ದಿನಗಳೆಲ್ಲ ಮತ್ತೆ ಈ ತುಂತುರು ಮಳೆಲಿ ಕಣ್ಣ ಮುಂದೆ ನಿಲ್ತಾ ಇದ್ವು ಯಾಕಂದ್ರೆ ಈ ತುಂತುರು ಮಳೆಯಲ್ಲೇ ಅವಳು ನನಗೆ ಸಿಕ್ಕಿದ್ದು.


"ಬಿರುಸಿನಿಂದ ಸುರಿಯುತಿತ್ತು

ತುಂತುರು ಮಳೆ

ಮೋಡದ ತುದಿಯಲಿ  

ಕೇಳುತಿತ್ತು ಒಲವಿನ ಕರೆ

ತನು ಮನವೆಲ್ಲ ತೊಯ್ದು 

ನಡುಗುತಿತ್ತು ಅವಳ ಕೆನ್ನೆ

ಕೊಡೆ ಹಿಡಿದು ಮೇಲು ನಕ್ಕ

ಹುಡುಗಿ ನೀ ನನ್ನವಳೇ ? ? ?"

( ನಮ್ಮಪ್ಪನಾಣೆ ಅಲ್ಲಾ ಅನಿಸುತ್ತೆ ...! )

ಆ ಸಂಜೆ ಅವಳು ನನಗೆ ಸಿಗದೇ ಇದ್ದಿದ್ರೆ ನನ್ನ ಬದುಕಲ್ಲಿ ಬರೋ ಪ್ರತಿ ಸಂಜೆಗಳಿಗೆ ಅರ್ಥನೇ ಇರ್ತಿರ್ಲಿಲ್ಲ ಅನಿಸುತ್ತೆ ! ಹ್ಹ... ಹ್ಹ... ಹ್ಹ...  ಆ ಥರ ಅನ್ಕೊಂಡ್ರೆ ನನ್ನ ಅಂತ ಮೂರ್ಖ ಈ ಭೂಮಿಮೇಲೆ ಯಾರು ಸಿಗೋಲ್ಲ..! ಅದಕ್ಕೆ ನನ್ನ ಆರ್ಕುಟ್ ಫ್ರೆಂಡ್ ಒಬ್ಳು ಹೇಳ್ತಾ ಇದ್ಲು ನಿಂದು ಕಲ್ಲು ಹೃದಯ ಕಣೋ ಅಂತ :-) ಅದು ನಿಜವಾಗಲು ನಿಜ :-) 

-:ಕಥೆ ಈಗ ಪ್ರಾರಂಭ :-  ಮಳೆಯಲ್ಲೇ ಮಳೆಯಾದ ಮನಸ್ಸು ;-

ಅವತ್ತು ಸಂಜೆ ಸರಿಯಾಗಿ ಐದು ಘಂಟೆ ನಾನು ನನ್ನ ಸ್ನೇಹಿತರು college ಮುಗಿಸಿಕೊಂಡು busಗಾಗಿ  ಕಾಯ್ತಾ ಇದ್ವಿ, ತುಂತುರು ಮಳೆ ಬೇರೆ ಬಸ್ ತಂಗುದಾಣ ಬೇರೆ ಇರ್ಲಿಲ್ಲ ಆಸರೆಗಾಗಿ ಮರದ ಪಕ್ಕ ಹರಟೆ ಹೊಡೆಯುತ್ತ  ನಿಂತುಕೊಂಡು ಇದ್ವಿ ಅವಳು ಅವಳ Friends ಜೊತೆ ನಾವು ನಿಂತಿದ್ದ ಮರದ ಪಕ್ಕ ಬಂದು ನಿಂತಕೊಂಡು ನನ್ನೇ ನೋಡ್ತಾ ಇದ್ಲು ..!  ಅದನ್ನ ನನ್ನ ಗೆಳೆಯ ಉಮೇಶ್ ನೋಡಿ ಲೇ,,,,, ಮಂಜು ಆ ಹುಡುಗಿ ನಿನಗೆ ಗೊತ್ತೇನೋ ಅಂತ ಕೇಳ್ದ ಯಾರೋ!  ಅಂತ ತಿರುಗಿ ನೋಡಿ ಇಲ್ಲಾ ಕಣೋ ಗೊತ್ತಿಲ್ಲ ,,,,, ಯಾಕೆ ? ಅಂದೇ ಯಾಕು ಇಲ್ಲ ತುಂಬಾ ಹೊತ್ತಿಂದ ಅವಳು ನಿನ್ನೆ ನೋಡ್ತಾ ಇದ್ಲು ಅದಕ್ಕೆ ಕೇಳಿದೆ ಅಂದ ಅಷ್ಟರಲ್ಲಿ ನಾನು ಹೋಗಬೇಕಾದ Bus ಬಂತು ಮಳೆ ತುಂಬಾ ಜೋರಾಗಿ ಬರ್ತಾ ಇತ್ತು ನಾನು ಬಸ್ ಹತ್ತಬೇಕು ಅಂತ ಹೋದಾಗ ಹಿಂದಿನಿಂದ ಯಾರೋ ನನ್ನ ಕರೆದಹಾಗೆ ಆಯ್ತು ತಿರುಗಿ ನೋಡಿದಾಗ ಅಚ್ಚರಿ ಕಾದಿತ್ತು ಅಬ್ಬಾ !! ಅಂತಹ ಚಳಿಯಲ್ಲೂ ಮೈ ಬಿಸಿಯಾಗಿ ಬೆವರು ಮಳೆ ನೀರಿನೊಂದಿಗೆ ಬೆರೆತು ಹೋಯ್ತು "ಮಳೆಯಲ್ಲಿ ಹೆಚ್ಚು ನೆನಿಬೇಡಿ ಶೀತವಾಗುತ್ತೆ" ಅಂತ ಹೇಳಿ ಕೊಡೆ ಹಿಡಿದುಕೊಂಡು ನನ್ನ ಜೊತೆ ಬಸ್ ಹತ್ತಿದ್ದು ಅವಳೇನಾ ? 

(ಹೌದು ಇಷ್ಟೋತ್ತು ನನ್ನ ನೋಡ್ತಾ ನಿಂತಿದ್ದ ಅದೇ ಹುಡುಗಿ "ಸಂಜೆ ಮಳೆಯ ಹುಡುಗಿ" ) 

ಅಲ್ಲಿಂದ 15 ನಿಮಿಷಗಳ ಪಯಣದಲ್ಲಿ ನಾನು ಅವಳ ಪರಿಚಯ ಮಾಡಿಕೊಳ್ಳುವಂತಹ ಸಾಹಸಕ್ಕೆ ಕೈಹಾಕಲಿಲ್ಲ,  ನಾನು ಇಳಿಯುವ ಸ್ಟಾಪ್ ಬಂತು ಇಳಿದು ಕೊಂಡು ಹೊರಟೆ, ಅವಳನ್ನ ನಾ ತಿರುಗಿ ಸಹ ನೋಡಲಿಲ್ಲ, ಆದರೆ ಅವಳು ನನ್ನ ಹಿಂದೆಯೇ ಬರ್ತಾ ಇರೋದು ಅವಳು ನನ್ನ ಮತ್ತೆ ಮಾತಾಡಿಸಿದಾಗಲೇ ಗೊತ್ತಾಗಿದ್ದು, ಅದೆಷ್ಟು ಬೇಗ ನನ್ನ ಪರಿಚಯ ಮಾಡಿಕೊಂಡಳು.


ನೀನು ಯಾರೋ
ನಾನು ಯಾರೋ
ನಡುವೆ ಎಷ್ಟೋ ಅಂತರ !

ಆದರು

ಬಯಸಿತೇಕೆ ನಿನ್ನ ಮನವು
ನನ್ನ ಮನದ ಪರಿಚಯ !!!,,,,,,,,

"ಕಟ್ಟಿಕೊಂಡ ಕನಸುಗಳ ನಡುವೆ ಸುಟ್ಟುಹೋದ ಅವಳ ಪ್ರೀತಿ"

ನೀನು ಸಹ ಅದೇ ಊರಿನವಳು ಅಂತ ನನಗೆ ಗೊತ್ತಾಗಿದ್ದೇ ಅಂದು, ಹೌದು,,, ಊರಿಗೆ ಹೊಸಬರ ಅಂತ ನೀ ಕೇಳಿದೆಯಲ್ಲ ಅದು ನಿಜ ನಾನು ನಿಮ್ಮ ಊರಿಗೆ ಬಂದು ಕೇವಲ ಎರಡು ತಿಂಗಳು ಕಳೆದಿತ್ತು ನನ್ನ ವಿದ್ಯಾಭ್ಯಾಸ ಮುಂದುವರೆಸಲು ನಿಮ್ಮ ಊರಿಗೆ ಬಂದು ನೆಲೆಸಿದ್ದೆ, ಅದು ಬಿಡು ನನ್ನದು ಒಂದು ಹಳೆಯ Flashback. ನೀ ಯಾವತ್ತು ನನ್ನ ಬಗ್ಗೆ ನನ್ನ ಜೀವನದ ಬಗ್ಗೆ ವಿಚಾರಿಸಲಿಲ್ಲ ಅದು ನೀನು ಮಾಡಿದ ಒಂದು ದೊಡ್ಡ ತಪ್ಪು!, ಅದೇಕೆ ನನ್ನ ಮೇಲೆ ನಿನಗೆ ಅಷ್ಟೊಂದು ಆಸಕ್ತಿ ಅಂತ ಗೊತ್ತಿಲ್ಲ  ನಾನು ಇಲ್ಲದ ಸಮಯ ನೋಡಿ ಯಾವುದೊ ಪುಸ್ತಕ ಕೇಳುವ ನೆಪದಲ್ಲಿ  ನನ್ನ ಮನೆಗೆ ಬಂದು ನನ್ನ ಅಮ್ಮ, ಅಕ್ಕ ನನ್ನ ತಮ್ಮ ಎಲ್ಲರನ್ನೂ ಪರಿಚಯ ಮಾಡಿಕೊಂಡು ಹೋದೆಯಲ್ಲ ನಿಜಕ್ಕೋ ನಿನ್ನ ಮೆಚ್ಚಲೇ ಬೇಕು ಅಲ್ವ . 

ಮೆಚ್ಚಿಕೊಂಡೆ
ಹಚ್ಚಿಕೊಂಡೆ
ನಿನ್ನನೆಕೋ ಕಾಣೆನು!

ನಿದ್ದೆಯಲ್ಲೂ
ವಿದ್ಯೆಯಲ್ಲೂ
ನಿನ್ನ ಕಂಡು ಕಾಣೆನು!

ಕನಸಿನಲ್ಲೂ
ಮನಸಿನಲ್ಲೂ
ಮರೆತು ನಿನ್ನ ಮರೆಯೇನು ! 

     ಕಂದಾ ನಿನಗೆ ನೆನಪಿದೆಯಾ ಅವತ್ತು ನಿನ್ನ Birthday ಇತ್ತು ನೀನು  ನನಗೋಸ್ಕರ ಗಣೇಶನ ದೇವಸ್ಥಾನದಲ್ಲಿ ಕಾಯ್ತಾ ಇದ್ದೆ But ನಾ ಮಾತ್ರ ಬರ್ಲಿಲ್ಲ  ನನಗೆ ಗೋತ್ತು ನನ್ನ ಮೇಲೆ ನಿನಗೆ ತುಂಬಾ ಕೋಪ ಇದೆ ಅಂತ, ನಾನೂ ಬರಬೇಕು,,,, ನಿನಗೆ wish ಮಾಡ್ಬೇಕು ಅಂತನೇ  ಇದ್ದೆ ಆದ್ರೆ  ಯಾವುದೂ ಕಾರಣದಿಂದ ನಿನ್ನ ನೋಡೋಕೆ ಆಗ್ಲಿಲ್ಲ ,Please ಬೇಜಾರ್ ಮಾಡ್ಕೋಬೇಡ.

 ನೀನು ನನಗೆ ಪರಿಚಯ ಆದ ದಿನದಿಂದ ಪ್ರತಿ ಸಂಜೆ ಆ ಮಳೆಲಿ ನಿನ್ನ ಜೊತೆ ನೆನೆಯುತ್ತ  ಅದೆಷ್ಟು ಹೊತ್ತು ಮಾತಾಡ್ತಾ ಇದ್ವಿ ನಿನಗೆ ನೆನಪಿದೆನ,  ನನಗಂತೂ ಈ ಬೆಂಗಳೂರ್ ಮುಸ್ಸಂಜೆ ಮಳೆಲಿ ನಿನ್ನ ನೆನಸಿಕೊಂಡ್ರೆ  ಇಗ್ಲು ನೀನೆ ನನ್ನ ಪಕ್ಕ ಇದ್ದೀಯ ಅನಿಸುತ್ತೆ  ಏಕೆಂದರೆ ನನಗಂತ ಉಳಿದಿರೋದು ನೀನು ಕೊಟ್ಟ ಆ ಮುಸ್ಸಂಜೆ ನೆನೆಪುಗಳು ಮಾತ್ರ. ಅದೆಷ್ಟು ಚನ್ನಾಗಿ ನೀ ನನ್ನ ಆಗಾಗ "ಮಂಜು" ಅಂತ  ಕರಿತಾ ಇದ್ದೆ  ಈ ಮಂಜು ಅಂದ್ರೆ ಅಷ್ಟೊಂದು ಇಷ್ಟನಾ, ಹುಚ್ಚಿ ಕಣೇ ನೀನು ಮಂಜು ಸ್ವಲ್ಪ ಬಿಸಿಲು ಬಿದ್ರೆ ಕೈಗೆ ಸಿಗದೇ ಕರಗಿ ಹೋಗ್ತಾನೆ ಅನ್ನೋದು ಗೊತ್ತಿರ್ಲಿಲ್ವ ? ? .

ಎಲ್ಲಾ ಹುಡುಗ್ರು ತನ್ನ ಹುಡುಗಿಗಾಗಿ ಕಾದ್ರೆ ನೀನು ಮಾತ್ರ ನನಗೋಸ್ಕರ ಪ್ರತಿ ಸಂಜೆ ಕಾಯ್ತಾ ಇದ್ದೆಲ್ಲ 
ಅದು ಯಾಕೆ ? ? ? 

ನಾನಿನ್ನ ತುಂಬಾ ಪ್ರೀತಿಸ್ತೀನಿ ಅಂದು ನನ್ನ ಮೈಯಲ್ಲಿ ವಿಧ್ಯುತ್ ಸಂಚಲನ ಮಾಡಿಸಿದೆ ಅಲ್ವ 
ಅದು ಯಾಕೆ ? ? ?

ನಿನ್ನ   ಎಲ್ಲಾ ನೋವುಗಳಿಗೆ ಸ್ಪಂದಿಸಿ ಸಾಂತ್ವಾನ ಹೇಳಿ ನಿನ್ನ ನಗುಸ್ತ ಇದ್ದ ನನ್ನ ಒಳ್ಳೆ ಫ್ರೆಂಡ್ ಅಂದು 
ಲವ್ ಯೌ ಅಂದ್ಯಲ್ಲ ಅದು ಯಾಕೆ ? 

ಈ ಪ್ರಶ್ನೆಗಳಿಗೆ ಉತ್ತರ ನನಗೆ ಸಿಗೋಲ್ಲ ಅಂತ ಗೊತ್ತು ಯಾಕದ್ರೆ ನೀ ನನ್ನ ಲವ್ ಮಾಡ್ತಾ ಇದೀನಿ ನಿನ್ನ ಒಪಿನಿಯನ್ ತಿಳಿಸು ಅಂದ ಆ ತುಂತುರು ಮಳೆಯ ಸಂಜೆಯಿಂದನೆ ನಾ ನಿನ್ನಿಂದ ತುಂಬಾ ತುಂಬಾನೇ ದೂರಾದೆ ಒಂದು ದಿನ ಟೈಮ್ ಕೊಡು ಅಂದು ಇಂದಿಗೂ ನಿನ್ನ ಕೈಸಿಗದ "ಮರೀಚಿಕೆ" ಆದೆ ,  ಅದರಲ್ಲಿ ನನ್ನ ತಪ್ಪು ಏನು ಇಲ್ಲಾ ಎಲ್ಲಾ ನಿನ್ನಿಂದ ಅಷ್ಟೇ...! 

ನಿಜ ನನ್ನ ಮುಗ್ಧತೆ, ಮಗುವಿನ ಹೃದಯ, ನನ್ನ ನಗು ಇವೆಲ್ಲ ನಿನಗೆ ಇಷ್ಟ ಅಂತ ಗೊತ್ತು, ಇಷ್ಟ ಪಟ್ಟಿದೆಲ್ಲ ನಮಗೆ ಸಿಗುತ್ತಾ ? ಕಷ್ಟ ಅಲ್ವ..! 

ನಿನ್ನ ನೆನಪುಗಳಿಗೆ ಇಂದಿಗೆ ಐದಾರು ವರ್ಷಗಳೇ ಉರುಳಿವೆ ಏಪ್ರಿಲ್ 17 ನಿನ್ನ ಬರ್ತ್ಡೇ ಅದು ನನಗೆ ಗೊತ್ತಾಗಿದ್ದು,  ಒಮ್ಮೆ ನೀನು ಬರೆದು ಕೊಟ್ಟ  "ಆಟೋಗ್ರಾಪ್" ಬುಕ್ ತಗ್ದು ನೋಡ್ತಾ ಇರುವಾಗ..! 

ಈಗ್ಲೂ ನನಗೆ ತುಂಬಾ ನೆನಪಾಗೋದು ಅವತ್ತು ನೀನು ಕೇಳ್ದೆ ಅಲ್ವ ಮಂಜು ಬೆಂಗಳೊರಿಗೆ ಹೋಗಿದ್ದೆ ಅಲ್ವ  ಕೆಲಸ ಸಿಕ್ತಾ ಅಂತ ನಾನು ಇಲ್ಲಾ ಸಿಗ್ಲಿಲ್ಲ ಬೇಜಾರಾಯ್ತು ವಾಪಸ್ ಬಂದೆ ಅಂದೇ ಅದಕ್ಕೆ ನೀನು ಹೇಳ್ದೆ "ಹಾಕಿರೋ ಚಪ್ಪಲಿ ಸವಿಬೇಕು ಕಣೋ"  ಕಷ್ಟ ಪಡ್ಡೆ ಏನು ಸಿಗೋಲ್ಲ ಅಂತ, ಆ ಮಾತು ನಿಜ ಅನಿಸುತ್ತೆ ಇವತ್ತು ಇದೇ ಬೆಂಗಳೂರ್ ನಲ್ಲಿ ನಾನು ಕೆಲಸ ಮಾಡ್ತಾ ಇದೀನಿ ಒಳ್ಳೆ ಕೆಲಸ ಕೂಡ ಸಿಕ್ಕಿದೆ..! ಆದರೆ "ನನ್ನಿಂದ ನಿನಗೆ ರಿಪ್ಲೈ ಮಾತ್ರ ಸಿಕ್ಕಿಲ್ಲ......ಸಿಗೋಲ್ಲ". ಒಂದಲ್ಲ ಒಂದು ದಿನ ನೀ ನನ್ನ ಬ್ಲಾಗ್ ನೋಡ್ತೀಯ ಆಕಸ್ಮಾತ್ ನೋಡಿದ್ರೆ ಈ ಕೆಳಗಿನ ಕವನ ಓದಿ ಸರಿಯಾಗಿ ಅರ್ಥ ಮಾಡ್ಕೋ...! ನಿನಗೆ ಬೇಕಾದ ರಿಪ್ಲೈ ಇದ್ರಲ್ಲಿ ಇದೆ ."ನಗುತಲಿರು ನಗುವಿನ ಸುಮವೇ 

ನಗಿಸೋನ ನಗುವಿನ ಜೊತೆಗೆ 
ಕರೆದಿಕೋ ಮೋಹಕ ಒಲವೇ  
ನೀನಿರುವ ಮನಸಿನ ಮನೆಗೆ
ನಾನಂತೂ ನಿನಗೆ ಮರೀಚಿಕೆ....!"

(ಇಲ್ಲಿನ ಎಲ್ಲ ಭಾವಚಿತ್ರಗಳ ಕೃಪೆ : ಅಂತರಜಾಲ)

"ಮರೆಯದಿರು ಗೆಳತಿ 
ನನ್ನ ಸವಿ ಸ್ನೇಹವ 
ಮರೆಯಲಾರೆ ಎಂದು 
ನಿನ್ನ ಜೊತೆ ಕಳೆದ ಅಮೂಲ್ಯ ಕ್ಷಣವ....! 

ಹ್ಮಂ ಹ್ಮಂ ಹ್ಮಂ ಹೀಗೆ ಹೇಳ್ತಾ ಹೋದ್ರೆ ಈ ಬರವಣೆಗೆ ಮುಗಿಯೋದಿಲ್ಲ ಇದನ್ನ ಇಲ್ಲಿಗೆ ಸ್ಟಾಪ್ ಮಾಡೋಣ ಡಿಯರ್ ಫ್ರೆಂಡ್ಸ್ ಕೊನೆದಾಗಿ ನಾನು ಏನ್ ಹೇಳೋಕೆ ಇಷ್ಟ ಪಡ್ತೀನಿ ಅಂದ್ರೆ "ಸ್ನೇಹ ಎಂದಿಗೂ ಸ್ನೇಹವಾಗಿರ್ಲಿ ಅದನ್ನ ಈ ಪ್ರೀತಿ ಪ್ರೇಮ ಅಂತ ಬದಲಾಯಿಸೋ ಪ್ರಯತ್ನ ಮಾಡ್ಬೇಡಿ....! ಪ್ರೀತಿ ಹುಟ್ಟೋಕೆ ಸ್ನೇಹ ಸಲುಗೆಗಳು ಒಂದು ರೀತಿಯಲ್ಲಿ ಕಾರಣ ಆದ್ರೆ ಎಲ್ಲಾ ಸ್ನೇಹ ನಿಮ್ಮ ಬಾಳ ಸಂಗಾತಿಯಾಗೋಲ್ಲ" 

"ನಿಮ್ಮ ಫ್ರೆಂಡ್ ಜೊತೆ ನೀವು ನಿಮ್ಮ ಎಲ್ಲಾ ರೀತಿಯ ಫೀಲಿಂಗ್ ನ ಹಚ್ಚ್ಕೋ ಬಹುದು ಬಟ್ ಅದೇ ಫ್ರೆಂಡ್ ನಿಮ್ಮ  ಜೀವನದಲ್ಲಿ ಸಂಗಾತಿ ಆಗಿ ಬಂದಾಗ  ನಿಮ್ಮೆಲ್ಲ ಫೀಲಿಗ್ ಗಳನ್ನ ಅವರ ಜೊತೆ ಶೇರ್ ಮಾಡಿಕೊಳ್ಳೋಕೆ ಆಗೋಲ್ಲ"

"ಅದೆಷ್ಟು ಜನರ ಲೈಫ್ ನಲ್ಲಿ ಇದೇ ಥರ ಎಷ್ಟೋ ಲವ್ ಅನ್ನೋ ಆಕರ್ಷಣೆ ಬಂದು ಹೋಗಿರುತ್ತೆ, ಆ ಏಜ್ ಅನ್ನೋದೇ ಹಾಗೆ ಕಣ್ಣಿಗೆ ಕಾಣೋದೆಲ್ಲ ಬೇಕು ಅನ್ನೋ ಭಾವನೆ, ಅದು ನನಗೆ ಬೇಕು ಅನ್ನೋ ಯಾತನೆ"

ಲವ್ ಅನ್ನೋ ಪದದ ಆಕರ್ಷಣೆ ಮತ್ತು ಅದ್ರಿಂದ ಉಂಟಾಗೋ ನವಿರಾದ ಸಂಚಲನ ನನ್ನಲ್ಲಿ ಹುಟ್ಟಿದ್ದೇ ಈ ಹುಡುಗಿಯ ಪ್ರೊಪೋಸ್ ಯಿಂದ ಒಂದು ಮಾತಲ್ಲಿ ಹೇಳ್ಬೇಕು ಅಂದ್ರೆ ನನ್ನ ಪ್ರೊಪೋಸ್ ಮಾಡಿದ ಮೊಟ್ಟ ಮೊದಲ ಮರೆಯದ ಗೆಳತಿ ಈ "ಸಂಜೆ ಮಳೆಯ ಹುಡುಗಿ" 

ಆಯ್ಯೋ ಬಿಡಿ ನನ್ನ ಪ್ರೊಪೋಸ್ ಗಳ ಬಗ್ಗೆ ಹೇಳ್ತಾ ಹೋದ್ರೆ ಮುಂದೆ ಓದೋಕೆ ನಿಮ್ಮ ಕಣ್ಣು ಇರಲ್ಲ ಕೇಳೋಕೆ ಕಿವಿ ಇರೋಲ್ಲ ;-)

ನಾನು ಯಾವದೇ ಲೇಖನ ಬರೆದರು ಕೊನೆಯದಾಗಿ ನನ್ನ ಕಾಡೋದು ಹೇಗೆ ಈ ಲೇಖನನ ಸಂಹಾರ (ಮುಗಿಸಬೇಕು) ಮಾಡ್ಬೇಕು ಅಂತ ಕಷ್ಟ ಆದ್ರು ಮಾಡಲೇ ಬೇಕಲ್ವ ಅದಕ್ಕೆ ಕೊನೆದಾಗಿ ಎರಡು ಲೈನ್ ಗಳಲ್ಲಿ ಈ ಲೇಖನಕ್ಕೆ ನಾಂದಿ ಹೇಳ್ತೀನಿ ಸರಿಯಾಗಿ ಓದಿ ತಿಳ್ಕೊಳ್ಳಿ..! 

"ಅಂದು ಇಂದು ಎಂದೂ ಮಂಜು ಎಂದೆಂದೂ"
ಸಿಂಗಲ್

SINGLE

ಸಿಂಗಲ್

SINGLE

ಸಿಂಗಲ್

SINGLE

ಸಿಂಗಲ್

SINGLE

ಬೇಡ ಬೇಡ ನಂಬಬೇಡಿ 

Now I am single 

But

Ready to mingle

"ಮತ್ತೆ ಸಿಗ್ತೀನಿ ರೀ ರೈಲ್ ಹುಡುಗಿ ಜೊತೆ  ಈಗಲೇ ಎಲ್ಲಾ ಟಿಕೆಟ್ ಬುಕ್ ಮಾಡಿ"


   ~$ಮರೀಚಿಕೆ$~
ದೊಡ್ಡಮನಿ.ಮಂಜು?
+919742495837   

51 comments:

 1. fine yar
  ammumallige

  ReplyDelete
 2. yen manju, idu kathe anislilla, adre Now I am single But Ready to mingle andre yaru ninna manadalliruva sundari antha.......

  ReplyDelete
 3. Hai manju edu nijana

  ReplyDelete
 4. Amazing...!!! Very Great feelings...!!!!!

  ReplyDelete
 5. waw super but nimm baggene swalpa buidup jasti ayethu

  ReplyDelete
 6. idu nijane agidre . " u missed a good girl" avalu nimna miss maadikollalilla neevu miss maadikondri. "ಹಾಕಿರೋ ಚಪ್ಪಲಿ ಸವಿಬೇಕು ಕಣೋ" ee ondu line saaku avalu entha olle hudugi endu tiliyalu. "baduku artha maadikondavara jothe badukannu hanchikondre namma baduku chennagirathe. ok next mingle ago hudugi kuda nimage thakka jodi irabahudu ankoltha. all the best. lekhana innashtu prabuddavagi bareyiri anno salahe jothe naninnu full stop hakthini. send me the invitation.:)

  ReplyDelete
 7. @SITARAM.K :- Dhanyavaadagalu sir :-) Railu anisoke time ide munde barutte idu full realllu :-)

  ReplyDelete
 8. @Satishbabu P :- thank u dear bro

  ReplyDelete
 9. ಚೆನ್ನಾಗಿದೆ ಮಂಜು... ಹೀಗೆ ನಿಮ್ಮ ಬರವಣಿಗೆ ಸಾಗಲಿ..

  ReplyDelete
 10. @mohan :- Yes idu Kathe alla JEEVANA :-) Innu sikkilla sir sikkaga heltini yaaru anta :-)

  ReplyDelete
 11. @kavana :- Nijana Nijaanaa anta kelidre yen helodu ;-)

  ReplyDelete
 12. @sba_gowdru :- Gowdre tumba thx ;-)

  ReplyDelete
 13. @Shridhar :- Bekaadre Heli next time nimma baggenu Build Up kodonaa ;-) thq

  ReplyDelete
 14. "ಸಂಜೆ ಮಳೆಯ ಹುಡುಗಿ" ಇವಳನ್ನ ನೀವು ಯಾವತ್ತು ಪ್ರೀತಿಸೇ ಇಲ್ವಾ? ನಿಮ್ಮ ಮನಸ್ಸಿಗೆ ನೀವು ಮೋಸ ಮಾಡಿಕೊಂಡಿಲ್ಲ ತಾನೆ? ನಿಮ್ಮ ಲೇಖನ ಚೆನ್ನಾಗಿದೆ... ಇಲ್ಲಿ ಪ್ರೀತಿನ ತಿರಸ್ಕರಿಸಿದ ನಿಮ್ಮ ಭಾವನೆಗಳು ಹಾಗು ನೀವು ಕೊಟ್ಟ ಕಾರಣಗಳು ಪ್ರಕಟವಾಗಿವೆ. ಆದರೆ ನನ್ನಂಥಹ ನೂರಾರು ಓದುಗರಿಗೆ ಆ "ಸಂಜೆ ಮಳೆಯ ಹುಡುಗಿ" ಯ ಭಾವನೆಗಳು, ಅವಳ ನಿರಾಸೆ, ಅವಳೀಗ ಹೇಗಿರಬಹುದು ಅಂತ ತಿಳಿದುಕೊಳ್ಳುವ ತವಕ ಹಾಗು ಎಲ್ಲೋ ಸ್ವಲ್ಪ ಆತಂಕ ಇದೆ.

  ReplyDelete
 15. @Chaithra Bhavani :- ಕಡಲ ತೀರದ ಕಾಡು ಮಲ್ಲಿಗೆ!! ವಾವ್ ವಾವ್ ನಿಜವಾಳು ನೀವು ಮಲ್ಲಿಗೆನೆ ಬಿಡಿ..!


  ನಿಜ ಆಗಿದ್ರೆ ಎಲ್ಲಿಂದ ಬಂತು ಮೇಡಂ ಇದು ನಿಜಾನೆ ಬೇಕಾದ್ರೆ ನಿಮ್ಮ ಮೇಲೆ ಅಣೆ ಇಟ್ಟು ಹೇಳಲಾ...! ಹ್ಹ ಹ್ಹ ಹ್ಹ

  ಇರಬಹುದು ನಾನು ಮಿಸ್ ಮಾಡಿಕೊಂಡ್ನೋ ಇಲ್ಲಾ ಅವಳೇ ನನ್ನ ಫ್ರೆಂಡ್ ಶಿಪ್ ಮಿಸ್ ಮಾಡಿಕೊಂಡ್ಲೋ, ಅಂದಿನ ನನ್ನ ಪರಿಸ್ಥಿತಿಗೆ ನಾನು ಮಾಡಿದ್ದು ಸರಿ ಅನಿಸುತ್ತೆ ನಿಮಗೆ ಒಂದು ಉದಾಹರಣೆ ಕೊಡ್ಲ ನಾವು ಒಂದು ಮಗುವಿನ ಹತ್ರ ಹೋಗಿ ಐ ಲವ್ ಯೌ ಅಂದ್ರೆ ಆ ಮಗು ನಗುತ್ತೆ ಹೊರೆತು ಬೇರೇನೂ ಹೇಳೋದಿಲ್ಲ ಅಂದಿನ ನನ್ನ ಸ್ಥಿತಿನೂ ಹಾಗೆ ಇತ್ತು, ಅವಳು ಅಂದು ಹೇಳಿದ ಮಾತು ಇಂದು ನನ್ನ ಮುಂದೆ ಬಂದು ಹೇಳಿದ್ರೆ ನಾನು ಕಣ್ಣು ಮುಚ್ಚಿ ಕೊಂಡು ಒಪ್ಪಿಕೊಳ್ತಾ ಇದ್ದೆ ಯಾಕಂದ್ರೆ ಇವತ್ತು ಅವಳ, ಅವಳ ಪ್ರೀತಿನ ಸಾಕು ಶಕ್ತಿ ನನ್ನಲ್ಲಿ ಇದೇ..!

  ಹ್ಮಂ ಹ್ಮಂ ಸದ್ಯಕ್ಕೆ mingle ಆಗಿಲ್ಲ, ಆ ನಿಮ್ ಹಾರೈಕೆ ಅಂತೆ ಅವಳು ಸಿಕ್ರೇ ನಿಮಗೆ ತಿಳಿಸ್ತೀನಿ..! ಯಾವ್ invitation ಸೆಂಡ್ ಮಾಡ್ಬೇಕು ಅಂತ ಗೊತ್ತಾಗ್ಲಿಲ್ಲ ಇನ್ನು ಚಿಕ್ಕವನು..!

  ReplyDelete
 16. @Rakesh S Joshi :- ಧನ್ಯವಾದ ತಮ್ಮ ಪ್ರತಿಕ್ರಿಯೆಗೆ :-)

  ReplyDelete
 17. @Vivek :- ಇಲ್ಲಾ ಗುರುಗಳೇ ನಾನು ಫ್ರೆಂಡ್ ಆಗಿ ಮಾತ್ರ ಟ್ರೀಟ್ ಮಾಡ್ತಾ ಇದ್ದೆ, ಲವ್ ಅನ್ನೋದಿರ್ಲಿಲ್ವಲ್ಲ ಮೋಸ ಎಲ್ಲಿಂದ ಬರುತ್ತೆ ಅಲ್ಲಿ, ತಿರಸ್ಕಾರಕ್ಕೆ ಮುಖ್ಯ ಕಾರಣ ಅದು ನನ್ನ ವಿಧ್ಯಾಭ್ಯಾಸದ ಜೀವನ ಲವ್ ಅನ್ನೋ ಸುಳಿಲಿ ಸಿಕ್ಕು ಎಲ್ಲಿ ಓದೋದ್ರು ಕಡೆ ಗಮನ ಕೆಡುತ್ತೋ ಅನ್ನೋ ಭಯ ಅಲ್ಲದೆ ಅದು ಲವ್ ಮಾಡೋ ವಯಸ್ಸಲ್ಲ..! ಇಲ್ಲಿಯ ಆತಂಕ ಬೇಡ ಕಾಲ ಎಲ್ಲವನ್ನು ಮರೆಸುತ್ತೆ ಎಲ್ಲವನ್ನು ನೆನಪು ಮಾಡುತ್ತೆ..! ಧನ್ಯವಾದ

  ReplyDelete
 18. thumba chennagide manju kanditha idu kathe anistha illa any way thumba chennagide

  ReplyDelete
 19. "ಅಂದು ಭಾವನೆಗಳಿಗೆ ಬೆಲೆ ಗೊತ್ತಿದ್ರೆ ಇಂದು ಸಿಂಗಲ್ ಆಗ್ತಿರ್ಲಿಲ್ಲ ಅನಿಸುತ್ತೆ." ತುಂಬಾ ಚೆನ್ನಾಗಿದೆ ಮಂಜು....

  ReplyDelete
 20. super manju.........adre ondu mathu heloke ista padthini bejar madkobeda ........ninu a hudugina kayisa baradittu.........ondu dina time kodu antha heli elli varegu ninu helilla.......pa.pa ninu hela bekittu ansutte ,adre ninna paristhithi hege etto gothilla avaga.....Nice storry.....

  ReplyDelete
 21. @Shilpa :- "ಹ್ಹ ಹ್ಹ ಹ್ಹ ಭಾವನೆಗಳೇ ಜೀವನ ಅಲ್ಲಾ..! ಅಂದು ಆ ಭಾವನೆಗಳಿಗೆ ಬೆಲೆ ಕೊಟ್ಟಿದಿದ್ರೆ ಇಂದು ಈ ಬ್ಲಾಗ್ ನಲ್ಲಿ ಅವಳ ನೆನಪು ಇರ್ತಾ ಇರ್ಲಿಲ್ಲ"

  ಥ್ಯಾಂಕ್ ಯೌ

  ReplyDelete
 22. @ಮಧು....♥:- ಹ್ಮಂ ಕಾಯಿಸ್ಬಾರ್ದಿತ್ತು ಆದ್ರೆ ಏನ್ ಮಾಡೋದು ಅಂದಿನ ಅವಳ ಮನಸ್ಥಿತಿ ನೋಡಿಕೊಂಡೆ ನಾನು ಟೈಮ್ ತಗೊಂಡಿದ್ದು ಅಲ್ದೆ ನನಗೆ ಅಂದು ಪ್ರೀತಿ ಮಾಡೋ ಯೋಗ್ಯತೆ ಇರ್ಲಿಲ್ಲ ಲವ್ ಮಾಡೋದು ಮುಖ್ಯ ಅಲ್ಲಾ ಅದನ್ನ ಉಸಿರಿರೋ ವರೆಗೂ ಕಾಪಾಡಿಕೊಳ್ಳೋದು ಮುಖ್ಯ ಅಲ್ವ...!

  ಥ್ಯಾಂಕ್ ಯೌ

  ReplyDelete
 23. good ಮಂಜು ನಿನ ಹೃದಯದ ಒಳಗಿದ್ದ ಮಂಜುಗಡ್ಡೆಯಂಥ ನೆನಪುಗಳನ ಚೆನ್ನಾಗಿ ಹದವಾಗಿ ಎಷ್ಟು ಬೇಕೋ ಅಷ್ಟೇ ಕರಗಿಸಿ ಐಸ್ ಕ್ರೀಂ ಮಾಡಿಕೊತ್ತಿದಿಯ
  ಪ್ರಭುದ್ದವಾದ ಆಲೋಚನೆ ಇಷ್ಟ ಆಯಿತು ಹುಡುಗ /ಹುಡುಗಿ ಸಿಕ್ಕಿಲ್ಲ ಅನ್ನೋ ಕೊರಗು ಇರೋರಿಗೆ ಒಳ್ಳೆ ಸಂದೇಶ ಇದೇ ಎಲ್ಲಾ ಭಾವನೆಗಳನ್ನು ಹತೋಟಿಯಲ್ಲಿ ಇಡಬೇಕು ಇಲ್ಲಾ ಅಂದ್ರೆ ಅನ್ಯಾಯವಾಗಿ ಪ್ರೀತಿ ಸ್ನೇಹ ಅನ್ನೋ ಪದಗಳಿಗೆ ತಪ್ಪು ಅರ್ಥ ಬರುತ್ತೆ .
  ನಿನ್ನ ಸಂಜೆ ಮಳೆಯ ಹುಡುಗಿ ಗೆ ಖಂಡಿತ ಜೀವನ ಅರ್ಥ ಆಗಿರುತ್ತೆ ಕೊರಗಬೇಡ
  ಮದುವೆ ಆಗಿ ಎಲ್ಲಾ ಮರ್ತು ನೆಮ್ಮದಿಯಗಿರೋ ಹೆಣ್ಮಕ್ಳು ಬಹಳಜನ ಇದಾರೆ
  ಪ್ರೀತಿ ನಿಜವಾದ ಅರ್ಥ ನ ಹೆಂಡತಿ ಸತ್ತ ಇಳಿವಯಸ್ಸಿನ ಮುದುಕ ಮತ್ತು
  ಪ್ರೀತಿಸಿದ ಹುಡುಗಿ ಬೇರೆ ಯಾರನ್ನೋ ಮದುವೆ ಆಗಿ ಎದುರುಬಂದ್ರು ನಗುನಗುತ ಮಾತಾಡಿ ನಗಿಸೋ ಹುಡುಗನ್ನ ಕೇಳಿ ಗೊತ್ತಾಗುತ್ತೆ .
  ಸ್ನೇಹ ನ ಪ್ರೀತಿನ ಏನು ಅಂತ ಗಲಿ ಬಿಲಿ ಆಗ್ಬೇಡಿ
  ಸ್ನೇಹ ಇದ್ಕಡೆ ಪ್ರೀತಿ ಇರುತೆ ಆದ್ರೆ.... ಪ್ರೀತಿ ಇರೋಕಡೆ ಸ್ನೇಹ ಇರೋಕೆ ಚಾನ್ಸ್ ಇಲ್ಲಾ ಅಲ್ಲಿ ಸ್ವಾರ್ಥ ಮಾತ್ರ ಇರುತ್ತೆ .
  ಸ್ವಾರ್ಥ ದ ಪ್ರೀತಿಗಾಗಿ ಸ್ನೇಹಾನ ದೂರ ಮಾಡ್ಕೋಬೇಡಿ
  ಪ್ರೀತಿ ಮಧುರ ಆದ್ರೆ ಸ್ನೇಹ ಅಮರ-ಮಧುರ. :)

  ReplyDelete
 24. Hi Manju,

  Vibhinna reetiya baraha, chennagide... niroopane ishta aitu...

  ReplyDelete
 25. mind blowing,,, nijwaglu adestu natural agi baritira neevu,, kelavonda sari odutha idre mande story heltidireno ansta iruthe,,,

  ReplyDelete
 26. @Vijayashree :- Dhanyavaadagalu :-)

  ReplyDelete
 27. @Anikethan :- ಹ್ಮಂ ಹ್ಮಂ ಹ್ಮಂ ನೀನು ಹೇಳಿದ್ದು ನಿಜ "ಮದುವೆ ಆಗಿ ಎಲ್ಲಾ ಮರ್ತು ನೆಮ್ಮದಿಯಗಿರೋ ಹೆಣ್ಮಕ್ಳು ಬಹಳಜನ ಇದಾರೆ" ಇರೋದ್ರಲ್ಲೇ ಅಲ್ಲೇ ತಮ್ಮ ಪ್ರೀತಿನ ಕಂಡು ಕೊಂಡಿದ್ದಾರೆ ಅದನ್ನ ಎಲ್ಲರೂ ತಿಳ್ಕೊಂಡು ನಡೆಯ ಬೇಕು

  ಒಳ್ಳೆಯ ಪ್ರತಿಕ್ರಿಯೆ ಜೊತೆಗೆ ನಿನ್ನದೊಂದು ಸಂದೇಶ ಚನ್ನಾಗಿದೆ ಧನ್ಯವಾದ ಅನಿಕೇತನ

  ReplyDelete
 28. @ashokkodlady :-) ಬರವಣಿಗೆ ಯನ್ನ ಮೆಚ್ಚಿದಕ್ಕೆ ತುಂಬಾ ಧನ್ಯವಾದಗಳು :-)

  ReplyDelete
 29. @ramesh :- thq for the comments :-) keep reading :-) ಧನ್ಯವಾದ

  ReplyDelete
 30. aa hudiya manasinalli aasey yebisi ee reethi nimadenu thapilla anno reethi mathadthideralva..... yeradu kai seridarene chappale manju. aa hudugi propose madidaga "ಅದ್ರಿಂದ ಉಂಟಾಗೋ ನವಿರಾದ ಸಂಚಲನ ನನ್ನಲ್ಲಿ ಹುಟ್ಟಿದ್ದೇ ಈ ಹುಡುಗಿಯ ಪ್ರೊಪೋಸ್ ಯಿಂದ" andideera 'so u too in love with her'.

  ReplyDelete
 31. s its really gud... Nice feelings...

  ReplyDelete
 32. Hi, manjuu,, i'm mallikarjuna gowdru,, Very nice..!

  ReplyDelete
 33. ಸಂಜೆ ಮಳೆಯ ಹುಡುಗಿಯ ನೆನಪುಗಳು ತುಂಬಾ ಚೆನ್ನಾಗಿದೆ.. ಕೆಲವು ಕಡೆ ಸ್ವಲ್ಪ ಜಾಸ್ತಿಯೆನಿಸಿತು.. "ಸಿಂಗಲ್" ಎಂಬಾ ಪದ ಅಷ್ಟು ಸಲ ಏಕೆ?.. "But ready to mingle" ಎಂದು Matrimony advertisement ಕೊಟ್ಟಿರೋ ಹಾಗಿದೆ..!! :) Just kidding.. Keep writing!

  ReplyDelete
 34. @Anonymous :- ನೀವು ಹುಡುಗನೋ ಹುಡುಗಿನೋ ಗೊತ್ತಿಲ್ಲ ಸೊ ನನಗೆ ಹೇಗೆ ರಿಪ್ಲೈ ಮಾಡ್ಬೇಕು ಅಂತ ಗೊತ್ತಾಗ್ತಾ ಇಲ್ಲಾ..!
  ನೀವು ಹೇಳೋ ಥರ ಯಾವದೇ ಆಸೆ ನಾ ಎರಲ್ಲೂ ಹುಟ್ಟಿಸಿಲ್ಲ
  ನಂದು ತಪ್ಪಿಲ್ಲ ಅನ್ನೋಕೆ ಇಲ್ಲಿ ಯಾರು ತಪ್ಪು ಮಾಡಿಲ್ಲ
  ಎರಡು ಕೈ ಇಂದ ಚಪ್ಪಾಳೆ ಹೊಡಿ ಬಹುದು ನಿಜ ಬಟ್ ಒಂದು ಕೈ ಇಂದ ಚಿಟಕೆ ಹೊಡಿ ಬಹುದಲ್ಲ ..???
  ಯಾರಿಗೆ ಆಗ್ರಿಲಿ ಪ್ರಥಮ ಅನಿಸುವ ಯಾವದೇ ಅನುಭವಗಳು ಅವರಲ್ಲಿ ನವಿರಾದ ಸಂಚಲನ ಹುಟ್ಟಿಸುತ್ತೆ ಅದನ್ನೇ ನಾನು ಹೇಳಿದ್ದು
  So
  am not In love...!

  ಧನ್ಯವಾದ Next time ನಿಮ್ಮ ಹೆಸರು ತಿಳಿಸೋದು ಬರಿಯ ಬೇಡಿ

  ReplyDelete
 35. @ಸಾಗರದಾಚೆಯ ಇಂಚರ :- thank you sir

  ReplyDelete
 36. @Rohith ;- yes..! thq for d comments ;-)

  ReplyDelete
 37. @ನೆನಪುಗಳು..!! :- thq Gowdreeee ;-)

  ReplyDelete
 38. @Pradeep Rao :- ಮೊದ್ಲು ತಾಳ್ಮೆ ಇಂದ ಈ ನನ್ನ ಲೇಖನ ಓದಿದ್ದಕ್ಕಾಗಿ ವಂದನೆಗಳು ;-)

  ನಾನಗೆ ಕಡಮೆ ಅನ್ನೋದೇ ಗೊತ್ತಿಲ್ಲ ನೋಡಿ ಅದಕ್ಕೆ ಅವಾಗವಾಗ ಜಾಸ್ತಿ ಮಾಡ್ತಾ ಇರ್ತೀನಿ ಹ್ಹ ಹ್ಹ ಹ್ಹ

  Matrimony advertisement ಕೊಟ್ಟಿರೋ ಹಾಗಿದೆ ಅಲ್ಲಾ ಸರ್ ನಿಜವಾಗಲು ಕೊಟ್ಟಿದ್ದೀನಿ ಅದಕ್ಕೆ ಅಸ್ಟೊಂದು ಸಲ ಸಿಂಗಲ್ ಸಿಂಗಲ್ ಅಂತ ಹೇಳಿರೋದು ಹ್ಹ ಹ್ಹ
  ಆಗಾಗ ಬರ್ತಾ ಇರಿ

  ReplyDelete
 39. thumba chenngidhe manju,, realy very nice,,,,,,,,,,,,,,,,,,,,,,,,,,,,,,

  ReplyDelete
 40. "ಮಳೆಹುಡುಗಿ" ಅನ್ವೇಷಣೆಯಲ್ಲಿ ಮಂಜು... ಆಗದಿರಲಿ ಅವಳು.."ಮರೀಚಿಕೆ, , "

  ReplyDelete
 41. @Varadaraj DVG ::: ಆಗುವುದು ಖಚಿತ ಹಾಗಾಗೆ ಈ ಲೇಖನ ::: thq :::

  ReplyDelete
 42. ಮಳೆ-ಹುಡುಗಿ
  ಬಂತು-ಗುಡುಗಿ
  ಅವ್ನೋ-ಹುಡುಗ
  ಇವ್ಳೋ-ಬೆಡಗಿ

  ReplyDelete