ಸತ್ಯವನ್ನೇ ನುಡಿಸು ಗುರುವೇ ನರವಿಲ್ಲದ ಜಿಹ್ವೆಯೋಳ್ ! ಸ್ಥಿರವಾಗಿ ನೆಲೆಸು ಗುರುವೇ ಮರ್ಕಟ ಈ ಮನದೊಳ್ !

Monday 19 November 2012

ವಿಜಯ ಕರ್ನಾಟಕದಲ್ಲೊಂದು ಲೇಖನ....





ದಿಹರಿಯದ ಬಡಪಾಯಿ ಮನಸ್ಸಿನ ಕಣ್ಣುಗಳಿಗೆ ಕಾಣೋದೆಲ್ಲ ಸುಂದರವೇ,ಆ ವಯಸ್ಸಿನ ಮನಸುಗಳೇ ಹಾಗೆ ಏನೇ ಮಾಡಿದರು ಎಷ್ಟೇ ತಡೆ ಹಿಡಿದರು ಒಲವ ಬಳ್ಳಿಯ ಎಳೆಗಳ ಮೇಲೆ ಇಬ್ಬನಿಯಂತೆ ತಬ್ಬಲು ಹಾತೊರಿಯುತ್ತವೆ, ಎಲ್ಲೊ ಒಂದು ಕಡೆ ಅವಳ /ಅವನ ಅತಿಯಾದ ಕ್ಲೊಸೆನೆಸ್, ಮಾತು, ಮಾತಿನ ಶೈಲಿ, ನಗು, ಸ್ಪರ್ಶ, ಉಡುಗೆ, ತುಂಟತನ ಇವುಗಳಿಂದ ಮನಸ್ಸು ಆಕರ್ಷಣೆಗೆ ಒಳಗಾಗುತ್ತದೆ ಇಂತಹ ಸಣ್ಣ ಸಣ್ಣ ಕ್ರಷ್ ಗಳನ್ನ ನಾವು ಸರಿಯಾಗಿ ಅರ್ಥೈಸಿಕೊಳ್ಳದೆ ಮುಂದೆ ಒಂದು ದಿನ ಐ  ಆಮ್  ಇನ್  ಲವ್ ಎಂದು ನಿರ್ಧರಿಸಿ ಬಿಡುತ್ತೇವೆ.. ಇಂತಹ ಎಷ್ಟೋ ಕ್ರಷ್ ಗಳು ನಮ್ಮಲ್ಲಿ ಮೂಡಿ ಹೇಳ ಹೆಸರಿಲ್ಲದೆ ಹೋಗಿರುತ್ತವೆ ಇಲ್ಲಿ ಎಲ್ಲಿಯೂ ನಮಗೆ ನಿಜವಾದ ಪ್ರೀತಿ ಸಿಗುವುದಿಲ್ಲ ಅದು ಕೇವಲ ಆಕರ್ಷಣೆಯ ಸೆಳೆತ ಅಷ್ಟೇ.. ಹಾಗಾದ್ರೆ ನಿಜವಾದ ಪ್ರೀತಿ ಅಂತ ಗೊತ್ತಾಗುವುದು ಹೇಗೆ ಇದಕ್ಕೆ ಉತ್ತರ ಹುಡುಕುವುದು ಕಷ್ಟಸಾದ್ಯ...

ನಿಜವಾದ ಪ್ರೀತಿ ತನ್ನ ಛಾಯೆಯನ್ನ ಹಾಗೆ ಉಳಿಸಿರುತ್ತದೆ ಅದನ್ನ ಸೂಕ್ಷ್ಮವಾಗಿ  ಗಮನಿಸುವ ಮನಸು ಬೇಕು, ಒಮ್ಮೆ ಈ ಕೆಳಗಿನ ಅಂಶಗಳನ್ನು ಓದಿ

ನಿಜವಾದ ಪ್ರೀತಿಯೆಂದರೆ ಅವಳ/ಅವನ ಮೇಲೆ ಅವನು/ಅವಳು ಇಟ್ಟಿರುವ ಅಪಾರವಾದ ನಂಬಿಕೆ

ನಿಜವಾದ ಪ್ರೀತಿಯಲ್ಲಿ ಮೋಹಕ್ಕಿಂತ ಆಸರೆಯ ನೆರಳು ಹೆಚ್ಚಾಗಿರುತ್ತದೆ

ನಿಜವಾದ ಪ್ರೀತಿಯಲ್ಲಿ ಅಧಿಕಾರದ ಬದಲು ಪ್ರಾಮಾಣಿಕತೆ ಇರುತ್ತದೆ.

ನೀನಿಲ್ಲದೆ ಬದುಕಲಾರೆ ಅನ್ನೋವುದಕ್ಕಿಂತ ಬದುಕಿದರೆ ನಿನ್ನೊಂದಿಗೆ ಮಾತ್ರ ಬದುಕುವೆ ಅನ್ನೋ ಭಾವಲಹರಿಯೇ ನಿಜವಾದ ಪ್ರೀತಿ.

ಅತಿಯಾದ ವ್ಯಾಮೋಹಕ್ಕಿಂತ ಮುಕ್ತವಾದ ಸ್ವಾತಂತ್ರವೇ ನಿಜವಾದ ಪ್ರೀತಿ.

 ಆಡುವ ಮಾತಿಗಿಂತ ನೀವು ತೆಗೆದುಕೊಳ್ಳುವ ಜವಾಬ್ದಾರಿ ಕೆಲಸಗಳಲ್ಲಿ ನಿಮ್ಮ ನಿಜ ಪ್ರೀತಿ ಕಾಣುತ್ತದೆ.

ನಿಜವಾದ ಪ್ರೀತಿ ನಿಮ್ಮನ್ನು ಯಾವುದರಿಂದಲೂ ಬಂದಿಸುವುದಿಲ್ಲ.

ಎಲ್ಲದಕ್ಕೂ ಮಿಗಿಲಾಗಿ ಪೋಸೆಸಿವ್ ನೆಸ್ ನಿಜ ಪ್ರೀತಿಯಲ್ಲಿ ಇರುವುದಿಲ್ಲ

ನಿಮ್ಮಲ್ಲಿ ಯಾವುದೇ ಬದಲಾವಣೆಯನ್ನು ಅಪೇಕ್ಷಿಸದೆ ಪ್ರೀತಿಸುವುದು ನಿಜ ಪ್ರೀತಿ.

ಕಾಮುಕತೆಯಿಲ್ಲದೆ ಮಮತೆ ವಾತ್ಸಲ್ಯ ತೋರುವ ಪ್ರೀತಿ ನಿಜವಾದ ಪ್ರೀತಿ.

ಹೀಗೆ ನೀವೇ ಹುಡುಕುತ್ತ ಹೋಗಿ ನಿಮಗೆ ಆಗಿ ಹೋಗಿರುವ ಕ್ರಷ್ ಗಳಲ್ಲಿ  ನಿಜವಾದ ಪ್ರತಿ ಯಾವ್ದು ಅಂತ ಗೊತ್ತಾಗುತ್ತದೆ...



?ಮಂಜು.ಎಂ.ದೊಡ್ಡಮನಿ.

          ದಾವಣಗೆರೆ


2 comments: