ಸತ್ಯವನ್ನೇ ನುಡಿಸು ಗುರುವೇ ನರವಿಲ್ಲದ ಜಿಹ್ವೆಯೋಳ್ ! ಸ್ಥಿರವಾಗಿ ನೆಲೆಸು ಗುರುವೇ ಮರ್ಕಟ ಈ ಮನದೊಳ್ !

Wednesday, 9 September 2009

ಹಾಗಾದ್ರೆ ಪ್ರೀತಿ ಅಮರ ತ್ಯಾಗ ಮಧುರ ಅಂದ್ರೆ ಇದೇನಾ ?

"ನಿನ್ನ ಸಂತೋಷಕ್ಕಾಗಿ ನಾನು ಏನು ಬೇಕಾದ್ರೂ ಮಾಡ್ತೀನಿ ಕಣೋ,
ನನಗೆ ನಿನ್ನ ಸಂತೋಷನೇ ಮುಖ್ಯ ಕಣೋ,
ನಿನ್ನ ಮುಖದಲ್ಲಿ ಈ ನಗು ಯಾವತ್ತು ಹೀಗೆ ಇರಲಿ ಕಣೋ "

ಮನೋಜ್ ಇಲ್ಲದೆ ಕಾವ್ಯಳಿಗೆ ಬೇರೆ ಏನು ಇಲ್ಲ ನಿಂತರು ಅವನೇ ಕುಂತರು ಅವನೇ ಕನಸಲ್ಲೂ ಅವನದೇ ಕನವರಿಕೆ, ಅವಳು ಅವನನ್ನ ಎಷ್ಟು ಪ್ರೀತಿ ಮಾಡ್ತಾ ಇದ್ಲು ಅನ್ನೋದು ಅವಳಿಗೂ ಗೊತ್ತಿರ್ಲಿಲ್ಲ ಅನಿಸುತ್ತೆ. ಅವನಿಗಾಗಿ ಏನು ಬೇಕಾದ್ರೂ ಮಾಡ್ತಾ ಇದ್ಲು, ದಿನಕ್ಕೆ ಒಂದು ಹತ್ತು ಸಲನಾದ್ರು ಮನೋಜನಿಗೆ "ನಿನ್ನ ಸಂತೋಷಕ್ಕೆ ನನ್ನ ಪ್ರಾಣ ಬೇಕಾದ್ರೂ ಕೊಡ್ತೀನಿ ಕಣೋ " ಅಂತಾನೆ ಇದ್ಲು.

ಮನೋಜ ಯಾವಾಗಲು ತಮಾಷೆಯ ಹುಡುಗ ಕಾವ್ಯನ ತುಂಬಾನೇ ರೆಗುಸ್ತ ಇರ್ತಾನೆ ಆದರೆ ಅಷ್ಟೇ ಪ್ರೀತಿ ಕೊಡ ಮಾಡ್ತಾ ಇರ್ತಾನೆ ಫೋನ್ ನಲ್ಲಿ ಅವಳ ದ್ವನಿ ಕೇಳದನೆ ಇವನು ಬೆಳ್ಳಗ್ಗೆ ಎಳೋದಿಲ್ಲ, ರಾತ್ರಿ ಗುಡ್ ನೈಟ್ ಇವನಿಗೆ ಅವಳು ಹೇಳ್ದನೆ ಇವನು ಮಲಗಿರೋ ದಿನಗಳೇ ಇಲ್ಲ, ಅಂತಹ ಪ್ರೀಮಿಗಳು.

ಕಾವ್ಯ ಅವನನ್ನ ಕೆಲವುದಿನ ಗಳಿಂದೇನು ಲವ್ ಮಾಡ್ತಾ ಇರ್ಲಿಲ್ಲ ನಿಜ ಹೇಳ್ಬೇಕು ಅಂದ್ರೆ ಅವನನ್ನ ಕಾವ್ಯ ಸುಮಾರು ವರ್ಷಗಳಿಂದ ಲವ್ ಮಾಡ್ತಾ ಇದ್ಲು ಅಂದ್ರೆ ಅವಳ ಬಾಲ್ಯ ದಿಂದ, ಹೌದು ಮನೋಜ್ ಕಾವ್ಯಳ ಅತ್ತೆ ಮಗ ಅಲ್ಲದೆ ಒಂದೇ ಸ್ಕೂಲ್, ಕಾವ್ಯ ಅವನನ್ನ ಎಷ್ಟು ಹಚ್ಚಿ ಕೊಂಡಿದ್ಲು ಅಂದ್ರೆ ಸ್ಕೂಲ್ ನಲ್ಲಿ ಮೇಸ್ಟ್ರು ಅವನನ್ನ ಸ್ಕೂಲ್ ನಿಂದ ನಾಲ್ಕು ದಿನ ಆಚೆ ಹಾಕಿದರು ಇವಳು ಸಹ ನಾಲ್ಕು ದಿನ ಹುಷಾರಿಲ್ಲ ಅಂತ ತಾನು ಸಹ ಸ್ಕೂಲ್ ಗೆ ಹೋಗಿರಲಿಲ್ಲ ಹಾಲಿನಂತ ಮನಸ್ಸು ಅಷ್ಟೇ ಸೂಕ್ಷ್ಮ ಎಲ್ಲ ವಿಷಯವನ್ನು ತುಂಬಾ ಸೀರೀಸ್ ಆಗಿ ತಗೋತಾ ಇದ್ಲು.

ನೀನು ಈಗ ದೊಡ್ಡ ಹುಡುಗಿ ಮನೋಜ್ ಜೊತೆ ಸುತ್ತುಬೇಡ ಅಂತ ಮನೆಯವರೆಲ್ಲ ಬೈದರು ಯಾರನ್ನು ಲೆಕ್ಕಿಸದೆ ಅವನೇ ನನ್ನ ಸರ್ವಸ್ವ ಅಂತ ನಂಬಿದ ಹುಡುಗಿ. ಅವನು ಅಪ್ಪ ಬೈದ್ರು ಅಮ್ಮ ಹೊಡೆದರು ಅಂತ ಬೇಜಾರ್ ಮಾಡ್ಕೊಂಡ್ರೆ ಕಾವ್ಯ ಅವನನ್ನ ತನ್ನ ತೊಡೆ ಮೇಲೆ ಮಲಗಿಸಿಕೊಂಡು ಸಮಾದಾನ ಮಾಡ್ತಾ ಇದ್ಲು ಅವನು ಅಷ್ಟೇ ಇವಳನ್ನ ಅಷ್ಟೇ ಪ್ರೀತಿ ಮಾಡ್ತಾ ಇದ್ದ. ಹೈಸ್ಕೂಲ್ ಮುಗಿದು ಕಾಲೇಜ್ ಹೋಗುವಾಗಲು ಜೊತೆಗೆ ಹೋಗ್ತಾ ಇದ್ರೂ ಅವನು ಒಂದು ವೇಳೆ ಫ್ರೆಂಡ್ಸ್ ಜೊತೆ ಎಲ್ಲಾದರು ಹೋದ್ರೆ ಇವಳು ಪ್ರತಿ ನಿಮಿಷಕ್ಕೂ ಎಲ್ಲಿದ ಏನು ಮಾಡ್ತಾ ಇದ್ದೀಯ ಇನ್ನು ಯಾವಾಗ ಬರೋದು ಅಂತ ಫೋನ್ ನಲ್ಲೆ ವಿಚಾರಿಸುತ್ತಾ ಇದ್ಲು. ಕಾಲೇಜ್ ಕಂಪಾಸ್ ನಲ್ಲಿ ಅವನು ಬೇರೆ ಹುಡುಗಿಯರ ಜೊತೆ ಒಬ್ಬನೇ ಇರುದನ್ನ ಎಲ್ಲಾದರು ನೋಡಿದ್ರೆ ಇವಳು ಅವನು ಹೋದ ಮೇಲೆ ಆ ಹುಡುಗಿ ಮನೆಗೆ ಹೋಗಿ ಅವರ ಅಪ್ಪ ಅಮ್ಮ ನ ಹತ್ರ ಜಗಳನೇ ಮಾಡಿ ಬಂದಿರೊಳು.

ಮನೆಯವರೆಲ್ಲ ಆದಷ್ಟು ಬೇಗ ಇವರಿಬ್ಬರನ್ನ ಗಂಟ್ಟು ಹಾಕಿ ಕೈ ಬಿಡಬೇಕಪ್ಪ ಅಂತ ತಿರ್ಮಾನ ಮಾಡಿದ್ರು ಅಲ್ಲದೆ ಇನ್ನು ನಾಲ್ಕು ತಿಂಗಳಲ್ಲೇ ಮಧುವೆ ಮಾಡಬೇಕು ಅಂತ ಎಲ್ಲರು ಒಪ್ಪಿಕೊಂಡಿದ್ದರು. ಆಗ ಇವರಿಬ್ಬರನ್ನ ಹಿಡಿಯೋರೆ ಇರ್ಲಿಲ್ಲ, ಈ ವಿಷಯ ತಿಳಿದಾಗ ಹೆಚ್ಚು ಖುಷಿ ಪಟ್ಟಿದ್ದು ಅವನಿಗಿಂತ ಕಾವ್ಯನೇ ಜಾಸ್ತಿ .

ಆದರೆ ಮನೋಜನಿಗೆ ಇದೆ ಮೊರುತಿಂಗಳ ಹಿಂದೆ ಪ್ರೀತಿ ಅನ್ನೋ ಹುಡುಗಿ ಪರಿಚಯವಾಗಿದ್ಲು ಅದೇ ಪರಿಚಯ ಮುಂದುವರೆದು ಆ ಹುಡುಗಿ ಇವನನ್ನ ಲವ್ ಮಾಡು ಅಂತ ಒತ್ತಾಯಿಸುತ್ತ ಇದ್ಲು, ಆದರೆ ಇವನಿಗೆ ಅದು ಒಪ್ಪಿಗೆ ಇರೋಲ್ಲ ನನಗೆ ಆಗಲೇ ಮಧುವೆ ನಿಶ್ಚಯ ಆಗಿದೆ ಅಂತ ತುಂಬಾನೇ ಹೇಳ್ತಾನೇ ಆದರೆ ಪ್ರೀತಿ ಇದ್ಯಾವುದನ್ನು ಕೇಳೋಕೆ ತಯಾರಿರಲಿಲ್ಲ. ಪ್ರೀತಿ ಮನೋಜನಿಗೆ ನೀನು ನನ್ನ ಮಧುವೆ ಆಗದೆ ಇದ್ರೆ ನಾನು ಇವತ್ತೇ ಸತ್ತು ಹೋಗ್ತೀನಿ ಅಂತ ಒಂದು ದಿನ ಇವನ ಎದುರುರಿಗೆ ಆತ್ಮಹತ್ಯಗೆ ಪ್ರಯತ್ನ ಪಟ್ಟಿರ್ತಳೆ ಮನೋಜ ಅವಳ ಸ್ಥಿತಿ ನೋಡೋಕೆ ಆಗದೆ ಇನ್ಮೇಲೆ ಹೀಗೆಲ್ಲ ಮಾಡ್ಕೋ ಬೇಡ ನಾನು ನಿನ್ನ ಲವ್ ಮಾಡ್ತೀನಿ ಅಂತ ಮಾತು ಕೊಟ್ಟು ಮನೆಗೆ ಬರ್ತಾನೆ ತಾನು ಮಾಡ್ತಾ ಇರೋದು ತಪ್ಪು ಅಂತ ಗೊತ್ತಿದ್ರು ಪ್ರೀತಿಗೆ ಮಾತು ಕೊಟ್ನಲ್ಲ ಅಂತ ಮನಸ್ಸಲ್ಲೇ ಕೊರಗುತ್ತ ಇರ್ತಾನೆ ಇನ್ನೇನು ಅವನ ಕಾವ್ಯ ಳ ಮಧುವೆಯ ಒಂದು ವಾರ ಇರುತ್ತೆ ಆಗ ಪ್ರೀತಿ ಇವನಿಗೆ ಒಂದು ಮಸಾಜ್ ಕಳಿಸಿರ್ತಲೇ "ನಾನು ಮಧುವೆ ಆದ್ರೆ ನಿನ್ನನ್ನೇ ಇಲ್ಲ ಅಂದ್ರೆ ನಾನು ಜೀವಂತ ವಾಗಿ ಇರೋಲ್ಲ" ಅಂತ ಕಳಿಸಿರ್ತಳೆ ಇವನಿಗೆ ದಿಕ್ಕೇ ತೋಚದ ಹಾಗೆ ಆಗುತ್ತೆ. ಈ ವಿಷಯನ ಹೇಗಾದ್ರು ಮಾಡಿ ಕಾವ್ಯಗೆ ತಿಳಿಸಿದರೆ ಅವಳೇ ಹೋಗಿ ಪ್ರೀತಿಗೆ ಬುದ್ದಿ ಹೇಳ್ತಾಳೆ ಅಂತ ಒಂದು ದಿನ ಇವನು ಕಾವ್ಯಳನ್ನ ಯಾರು ಇಲ್ಲದ ಸುಂದರವಾದ ಪ್ರದೇಶಕ್ಕೆ ಕರ್ಕೊಂಡು ಹೋಗತ್ತಾನೆ. ಪ್ರೀತಿ ಬಗ್ಗೆ ಎಲ್ಲ ಇವಳಿಗೆ ಹೇಳ್ತಾನೆ.

ಕಾವ್ಯ :- ನೀನು ಈಗ ಏನು ಮಾಡ ಬೇಕು ಅನ್ಕೊಂಡಿದ್ದಿಯ?

ಮನೋಜ :- (ಅವನು ಇವಳನ್ನ ಸುಮ್ಮನೆ ರೆಗಿಸಲೆಂದು ) ಇಲ್ಲ ಕಣೆ ನನಗೆ ಯಾಕೋ ಮನಸ್ಸು ಒಪ್ಪುತ್ತ ಇಲ್ಲ ಅವಳು ನನ್ನ ತುಂಬಾನೇ ಲವ್ ಮಾಡ್ತಾ ಇದಾಳೆ ನಾನೇನಾದ್ರು ಅವಳಿಗೆ ಸಿಗಲ್ಲ ಅಂತ ಗೊತ್ತಾದ್ರೆ ಅವಳು ಸತ್ತು ಬಿಟ್ತಳೆ ನಾನು ಏನು ಮಾಡ್ಲಿ ? ಆಗ ನಾನು ನೆಮ್ಮದಿ ಇಂದ ಇರೋಕೆ ಆಗುತ್ತ ನಾನು ಸಂತೋಷದಿಂದ ಇರೋಕೆ ಆಗುತ್ತ.

ಕಾವ್ಯ :- ಒಂದು ವೇಳೆ ನಾನು ಸತ್ತರೆ ???????

ಮನೋಜ :- ಹಾಗೇನಾದ್ರೂ ಆದರೆ ನಾನು ಅವಳನ್ನೇ ಮಧುವೆ ಆಗ ಬಿಡ್ತೀನಿ. ಆಗ ನಾನು ಅವಳ ಜೊತೆ ಖುಷಿಯಾಗಿ, ಸಂತೋಷದಿಂದ ಇರ್ತೀನಿ ಹ್ಹ ಹ್ಹ ಹ್ಹ ಹ್ಹ (ಅವನು ತಮಾಷೆಗಾಗಿ ಹೇಳ್ತಾನೆ )

ಕಾವ್ಯ :- ನೀನು ನಿಜವಾಗ್ಲೂ ನಾನು ಸತ್ತರೆ ಸಂತೋಷದಿಂದ ಇರ್ತಿಯ ?

ಮನೋಜ :- ಅಯ್ಯೋ ನಿನ್ನ ಆಣೆಗೂ ನಾನು ಸಂತೋಷದಿಂದ ಇರ್ತೀನಿ ಕಣೆ
(ಅವನು ತಮಾಷೆಗಾಗಿ ಹೇಳ್ತಾನೆ )

ವಿಧಿಯ ಆಟ ಶುರುವಾಗಿದ್ದೆ ಇಲ್ಲಿಂದ ಮನೋಜ ಹೇಳಿದ್ದೆಲ್ಲ ನಿಜ ಅಂತ ನಂಬಿದ ಕಾವ್ಯ ಒಂದು ಚೀಟಿಯಲ್ಲಿ

"ನಿನ್ನ ಸಂತೋಷಕ್ಕಾಗಿ ನಾನು ಏನು ಬೇಕಾದ್ರೂ ಮಾಡ್ತೀನಿ ಕಣೋ,
ನನಗೆ ನಿನ್ನ ಸಂತೋಷನೇ ಮುಖ್ಯ ಕಣೋ,
ನಿನ್ನ ಮುಖದಲ್ಲಿ ಈ ನಗು ಯಾವತ್ತು ಹೀಗೆ ಇರಲಿ ಕಣೋ "

ಅಂತ ಬರೆದು ಇಟ್ಟು ಶವದ ಪೆಟ್ಟಿಗೆಯಲ್ಲಿ ತಾನೇ ಶವ ವಾಗಿ ಮಲಗಿರ್ತಳೆ ನನ್ನ ಕತೆಯ ಕಥಾನಾಯಕಿ ಕಾವ್ಯ .

!


!


!


!!


!

!


ಹಾಗಾದ್ರೆ ಪ್ರೀತಿ ಅಮರ ತ್ಯಾಗ ಮಧುರ ಅಂದ್ರೆ ಇದೇನಾ ?


ಅವಳ ದಾರಿಯಲಿ
ನಿಮ್ಮ "ದೊಡ್ಡಮನಿ.ಮಂಜು"
9742495837
ಮುಂದುವರೆಯುತ್ತದೆ........... !

42 comments:

 1. nivu bareda kathe tumba chenagide adre.....munde manoj enagtane antha gottagilla...?

  e kathe nange swalpa mattige ondatte....

  ReplyDelete
 2. ನಿಮಗೆ ನನ್ನ ತುಂಬು ಹೃದಯದ ಧನ್ಯವಾದಗಳು. :)
  ನಿಮ್ಮಿಂದ ಇನ್ನು ಹೆಚ್ಚಿನ ಸಲಹೆಗಳನ್ನ ಬಯಸುತ್ತೇನೆ : )
  ಮುಂದೆ ಮನೋಜ ಏನಾಗ್ತಾನೆ ಅನ್ನೋ ನಿಮ್ಮ ಪ್ರೇಶ್ನೆಗೆ
  ಸದ್ಯದಲ್ಲೇ ಉತ್ತರ ಸಿಗುತ್ತೆ ? !

  ನನ್ನ ಕತೆ ನಿಮಗೆ ಅಂತ ಅಲ್ಲ ಪ್ರೀತಿಸೋ ಎಲ್ಲ ಹೃದಯಗಳಿಗೂ ಹೊಂದುತ್ತೆ ಅನ್ಕೊಳ್ತಿನಿ : )

  ReplyDelete
 3. ತಮಾಷೆ ಹೋಗಿ ...ಷೆ ಆದಂತೆ...!?
  ತಮಾಷೆ ಮಾಡುವಾಗ ಮಾಡಬೇಕಿತ್ತು,
  ನಾಯಕನ ಹುಡುಗಾಟಿಕೆಯಲ್ಲಿ ನಾಯಕಿಯು ಮಾಡಿದ ಪ್ರಾಣತ್ಯಾಗ ಅಮೋಘ..
  ಈ ರೋಚಕ ಪ್ರೇಮಕಥೆಯೂ ನೆನಪಲ್ಲಿ ಮಾಸದೆ ಉಳಿಯುವಂತಹದ್ದು..


  -- ಗುರುಪ್ರಸಾದಗೌಡ.ಎ.ಕಾ.:- balipashu.blogspot.com, hanebaraha@gmail.com

  ReplyDelete
 4. ನಿಮ್ಮ ಅನಿಸಿಕೆ ಹಂಚಿ ಕೊಂಡದಕ್ಕೆ ತುಂಬಾ ಧನ್ಯವಾದಗಳು ಗುರುಪ್ರಸಾದಗೌಡ.ರವರೆ : )
  ಹೀಗೆ ಮತ್ತೆ ಮತ್ತೆ ಇದೆ ದಾರಿ ಯಲ್ಲಿ ಬರ್ತಾ ಇರಿ ಏಕೆಂದರೆ ನಾನು ಕಾಯ್ತಾ ಇರ್ತೀನಿ ಅವಳಿಗಾಗಿ : )

  ಅವಳ ಒಲವ ದಾರಿಯಲಿ
  ನಿಮ್ಮ "ದೊಡ್ಡಮನಿ.ಮಂಜು"

  ReplyDelete
 5. good narration imagination ಅನ್ನೋ ration ಒಳ್ಳೆ stock ಇಟ್ಟಿದಿರ

  ಆದರು ಒಂದು ಸಲಹೆ ಈ ಥರ ಬರಿಯೋಕೆ ಹೋಗಿ ನಿಮ್ heart ಗೆ load ಜಾಸ್ತಿ ಆದ್ರೆ ತುಂಬಾ hurt ಆಗುತ್ತೆ

  nice take care ಗೆಳೆಯ

  ReplyDelete
 6. ತುಂಬಾ ಧನ್ಯವಾದಗಳು :-

  ನಿಮ್ಮ ಸಲಹೆಗೆ ನಾನು ಮತ್ತೊಮ್ಮೆ ಥ್ಯಾಂಕ್ಸ್ ಹೇಳ್ತಾ ಇದೀನಿ

  ಮತ್ತೆ ಇತ್ತ ಬರುತ್ತಿರಿ :
  ನಿಮ್ಮ "ದೊಡ್ಡಮನಿ.ಮಂಜು"

  ReplyDelete
 7. EXCELENT MANJU SOMVAARA SIKKU , MANGALVAARA PRAPOSE MAADI,BUDHAVAARA CINEMA PARKU ANTHA SUTTI, GURUVAARA KAIKOTTU HOGUVA HUDGEERU IRO EE KAALADALLI INTHA HUDGEERU IRTAARE ANTHA TORISIKOTTIDDERA "PREETHISALU BAARADA NAPUMSAKARU HENNANNU MAAYE ENDU JARIDAVARIGE SARIYAADA UTTARA. GREAT STORY PLEASE CONTINUE

  ReplyDelete
 8. ಚೆನ್ನಾಗಿದೆ ಮಂಜು ಮತ್ತೆ ಓದಬೇಕು ಅನ್ಸ್ತು, ಈಕಾಲದಲ್ಲಿ ಇಂಥ ಪ್ರೀತಿ(ಪ್ರೇಮಿ) ಸಿಗೋದು ಅಸಾಧ್ಯ ಅನ್ಕೊತಿನಿ,
  ಜಾಸ್ತಿ ಹೇಳಿದ್ರೆ ನಿಮ್ creativity ಕಡಿಮೆ ಆಗಬಹುದು . ಅಪರೂಪಕ್ಕೊಂದು ಅಮರ ಪ್ರೇಮ ಕಥೆ .

  ReplyDelete
 9. ಆದ್ರೆ , ಕಳ್ದು ಹೋಗ್ತಿಯ ಕನಸಿನ ಜಾತ್ರೆಯಲಿ ಅನುಸ್ತಿದೆ

  ReplyDelete
 10. Do you guys really feel that Kavya loved Manoj? avlu nijvaglu avnanna pritistidre, she wud have known him very clearly.. avnu sullu heltidana ilva anta avlige gotagbekitu anta ansalva? balyadinda pritistiro hudgige tanna hudgan priti yenu anta gotirlilva? ashtena avlu tanna Manoj na arta madkondidu..

  ReplyDelete
 11. ನಿಮ್ಮೆಲ್ಲರಿಗೂ ನನ್ನ ಒಂದು ಸಣ್ಣ ಥ್ಯಾಂಕ್ಸ್ ನಿಮ್ಮ ಅನಿಸಿಕೆಗಳನ್ನ ತಿಳಿಸಿದ್ದಕ್ಕೆ : )

  ReplyDelete
 12. This comment has been removed by the author.

  ReplyDelete
 13. ಸುಮಾ ಮೇಡಂ

  ಈ ದಾರಿಯಲ್ಲಿ ಬಂದು ನನ್ನ ಗುರುತಿಸಿ ನಿಮ್ಮ ಅನಿಸಿಕೆಗಳನ್ನ ತಿಲಿಸಿದ್ದಿರ ಅದಕ್ಕಾಗಿ ನನ್ನಿಂದ ಒಂದು ಚಿಕ್ಕ ಧನ್ಯವಾದ ಹೇಳ್ತಾ ಇದೀನಿ.

  ನೀವು ಹೇಳ್ತಾ ಇರೋದು ನಿಜ ಅವಳು ಅಷ್ಟು ವರ್ಷದಿಂದ ಲವ್ ಮಾಡ್ತ ಇದ್ರೂ ಅವನ ಏನು ಅಂತ ಅವಳಿಗೆ ಗೊತ್ತಿತ್ತು ಆದ್ರೆ ಎಲ್ಲ ನಾವು ಅಂದು ಕೊಂಡಗ್ಗೆ ಆಗಲ್ವಲ್ಲ : ) ಯಾರೇ ಅಗಲಿ ತನ್ನ ಹುಡುಗ ಇನ್ನೊಂದು ಹುಡುಗಿ ಬಗ್ಗೆ ಹೇಳ್ತಾ ಇದ್ರೆ ಎಂತ ಹುಡುಗಿಗಾದ್ರು, ಆ ಹುಡಗನ್ನ ಎಷ್ಟೇ ಅರ್ಥ ಮಾಡ್ಕೊಂಡಿದ್ರು, ಒಂದು ಥರ ಮನಸ್ಸಲ್ಲಿ ಅನುಮಾನ ಬಂದೆ ಬರುತ್ತೆ ಅಲ್ವ ! :) ಆದ್ರೆ ಇಲ್ಲಿ ಕಾವ್ಯಳಿಗೆ ಆ ಥರದ ಅನುಮಾನ ಮನೋಜನ ಮೇಲೆ ಬರ್ಲಿಲ್ಲ ಅವಳು ಬಯಸಿದ್ದು ಅವನ ಸಂತೋಷ ಅಷ್ಟೇ ! ಅಲ್ಲದೆ ಅದೇನೋ ಹೇಳ್ತಾರಲ್ಲ "ಪ್ರೀತಿ ಕುರುಡು" ಅಂತ, ಅದು ಏಷ್ಟು ನಿಜ ಅಲ್ವ !

  ಕಾವ್ಯ ಮನೋಜನ ಬಗ್ಗೆ ಎಲ್ಲ ಅರ್ಥ ಮಾಡ್ಕೊಡಿದ್ಲು ಅದಕ್ಕೆ ಅವ್ಳು ಕೇಳಿದ್ದು "ನೀನು ನಿಜವಾಗ್ಲೂ ನಾನು ಸತ್ತರೆ ಸಂತೋಷದಿಂದ ಇರ್ತಿಯ ?" ಅಂತ ಆದ್ರೆ ಮನೋಜ ಉತ್ತರ ಅವಳನ್ನ ಪರೀಕ್ಷೆಗೆ ಒಡ್ಡುತ್ತೆ ! ನೀನು ಸತ್ತರೆ ನಾನು ಸಂತೋಷದಿಂದ ಇರ್ತೀನಿ ಅಂತ ಮನೋಜನೇ ಹೇಳಿದ ಮೇಲೆ ಕಾವ್ಯ ಮಾಡಿದ್ದು ತಪ್ಪು ಅಂತ ನನಗೆ ಅನಿಸ್ತ ಇಲ್ಲ ಅವಳು ಮಾಡಿದ್ದು ಸರಿನೇ ಅಲ್ವ !

  ಇಂತಿ ನಿಮ್ಮ
  ದೊಡ್ಡಮನಿ.ಮಂಜು

  ReplyDelete
 14. well, i wont agree with u Mr. Manju. Pritige kanniralla nija, bt buddinu iralva? bare muru tingalu parichayada hudgi manoj sigadidre saitini anta helidke tension madkondu adna Kavyalige tilistiro Manoj, balyadinda pritistro Kavya savininda santoshavagirtane anta yochane madokadru manassu hege barutte Kavyage.. Priti - e banda gattiyagi nillode nambike anno adipayada mele.[infact yella relationsu ashte including frdship]... Manoj swataha helida nija bt Kavya Manoj ondu hudugi adrallu taanu balyadinda pritistiro hudugiya savinda santoshavagi irtane anta nambidu nangeno aashcharya vuntu madate.. hagadre Kavyala prakara Manoj asthtondu kannina hrudayi ne?

  ReplyDelete
 15. This comment has been removed by the author.

  ReplyDelete
 16. well, i wont agree with u Mr. Manju. ಅಂತ ಹೇಳಿದಿರ ತುಂಬಾ ಥ್ಯಾಂಕ್ಸ್,

  ಪ್ರೀತಿಗೆ ಕಣ್ಣಿಲ್ಲ ಅಂತ ಒಪ್ಪಿಕೊಂಡಿದ್ದಿರ : ) ಬುದ್ದಿ ಇರೋರ್ಯರು ಪ್ರೀತಿ ಅನ್ನೋದಕ್ಕೆ ಕೈ ಹಾಕಲ್ಲ, ಕೈ ಹಾಕಿದ ಮೇಲೆ ಬುದ್ದಿ ಬರುತ್ತೆ. ಹೌದು ಅವನಿಗೆ ಅವಳು ೩ ತಿಂಗಳುಗಳ ಪರಿಚಯಾ ಅವಳು ಬರಿ ಸಾಯ್ತಿನಿ ಅಂತ ಹೇಳಿದ್ರೆ ಇಲ್ಲಿ ಟೆನ್ಶನ್ ಅನ್ನೋ ಮಾತೆ ಬರ್ತಾ ಇರ್ಲಿಲ್ಲ ಆದರೆ ಅವಳು ಅವನ ಮುಂದೆ ಒಂದು ಸಲ ಆತ್ಮ ಹತ್ಯೆ ಮಾಡ್ಕೊಳ್ಳೋಕೆ ಹೋಗಿರ್ತಳೇ ಓದಿದಿರಾ ಅನ್ಕೊಳ್ತಿನಿ. ಯಾರೇ ಆಗಲಿ ನನ್ನಿಂದ ಒಂದು ಸಾವು ಆಗುತ್ತೆ ಅಂದ್ರೆ ಮನುಷ್ಯರಾದ ಯಾರು ಅದನ್ನು ಬಯಸೋಲ್ಲ ಅಲ್ವ ! ಅದನ್ನ ಸರಿ ಪಡಿಸಲು ಅವನು ಕಾವ್ಯನ ಹತ್ರ ಎಲ್ಲ ಹೇಳ್ತಾನೆ ಆದರೆ ಅವನು ಹೇಳು ರೀತಿ ಮಾತ್ರ ಯಾರಿಗೂ ಹಿಡಿಸೋಲ್ಲ ಆದರೆ ಅವನ ವ್ಯಕ್ತಿತ್ವನೇ ಅಂತಹದ್ದು ಯಾವಾಗಲು ಕಾವ್ಯ ನ ಕಾಡಿಸೋದು ರೇಗಿಸೋದು ಅಳಿಸಿ ಮತ್ತೆ ಮುದ್ದು ಮಾಡೋದು,

  ಇಲ್ಲಿ ಬಾಲ್ಯದಿಂದಲೂ ಪ್ರೀತಿಸ್ತಾ ಇರೋ ಕಾವ್ಯಳಿಗೆ ತನ್ನ ಸಾವಿನಿಂದ ಮನೋಜ ಸಂತೋಷವಗಿರ್ತನೆ ಅಂತ ಯೋಚನೆ ಹೇಗೆ ಬರುತ್ತೆ ಅಂತ ಕೇಳಿದಿರಾ ಅದೇ ಮುಂದೆ ನೀವೇ ಹೇಳಿದ್ದಿರ ಈ ಪ್ರೀತಿ ಈ-ಬಂದ ಗಟ್ಟಿಯಾಗಿ ನಿಲ್ಲೋದು ನಂಬಿಕೆ ಅನ್ನೋ ಅಡಿಪಾಯದ ಮೇಲೆ ಅಂತ ಅವಳಿಗು ಇವನ ಮೇಲೆ ಅದೇ ನಂಬಿಕೆ ಇತ್ತು "ನಂಬಿಕೆಗೆ ಮತ್ತೊಂದು ನಂಬಿಕೆ ಬೇಕ" ?

  ತಪ್ಪು.............. ನಾನು ಎಲ್ಲಿ ಹೇಳಿದೀನಿ ಮನೋಜ ಬಾಲ್ಯದಿಂದ ಪ್ರೀತಿಸುವ ಹುಡುಗಿ ಸತ್ತರೆ ತಾನು ಸಂತೋಷದಿಂದ ಇರಬಹುದು ಅಂತ ನಂಬಿದ್ದ ಅಂತ. ಅವಳ ಒಂದು ಮಧುರ ದ್ವನಿ ಕೇಳದನೆ ಮಲ್ಗೊಲ್ಲ ಹಾಸಿಗೆ ಬಿಟ್ಟು ಎಳೋಲ್ಲ, ಅಂತ ಹುಡುಗ ಇನ್ನು ಕಾವ್ಯಳ ಸಾವು ಬಯಸ್ತಾನ ನೀವು ಯೋಚನೆ ಮಾಡಿ !? ಅವನು ಇಲ್ಲಿ ಕೇವಲ ಅವಳನ್ನ ರೇಗಿಸಲು ಹೇಳಿದ ಕೆಲವೇ ಕೆಲವು ಡೈಲಾಗ್ ಗಳು ಕಾವ್ಯಳ ಗೋರಿಗೆ ಸಿದ್ಧವಾದ ಇಟ್ಟಿಗೆ ಗಳು ಅಂತ ಅವನಿಗೆ ಗೊತಿರ್ಲಿಲ್ಲ ಗೊತ್ತಿದ್ರೆ ಅವನು ಈ ಥರ ತಮಾಷೇನೆ ಮಾಡ್ತಾ ಇರ್ಲಿಲ್ಲ. ಮನೋಜನದು ಕಲ್ಲಿನ ಹೃದಯ ಆಗಿದ್ರೆ ಅವನು ಇವಳಿಗೆ ಪ್ರೀತಿಯ ವಿಷಯ ಹೇಳ್ತಾ ಇರ್ಲಿಲ್ಲ .

  ಇಂತಿ ನಿಮ್ಮ
  ದೊಡ್ಡಮನಿ.ಮಂಜು
  9742495837

  ReplyDelete
 17. Mr. Manju, dayavittu nanu bardirodna swalpa sariyagi odi amele utra kodi pls. Manoj bage nanenu prashne ne madila. na heltirodu keltirodu Kavya bagge matra... Kavyala prakara Manoj kattina hrudayi na? avnu tamashe madtidano or serious agi heltidano anta arta madkoloke Kavyange saadya aglila andre...avlu Manoj na artane madkondirlila anodu nan abipraya... i feel if i was in her place i am sure i wud make out that Manoj regsoke heltidane anta.. and if at all Manoj ashtondu serious agi helide adre avna yedurige saibekite vinaha avnige gotilada hage sayo agathya irlila.. alva?

  ReplyDelete
 18. ಮಂಜು ಅವರೆ,
  ಈ ಪ್ರೇಮತ್ರಿಕೋಣ ಯಾವ ತಿರುವು ತೆಗೆದುಕೊಳ್ಳುತ್ತೊ ಅಂತ ನೋಡ್ತಿರೋವಾಗಲೆ, ಕಾವ್ಯಳ ಆತ್ಮಹತ್ಯೆ ನನ್ನನ್ನು ಶೋಕಕ್ಕೀಡು ಮಾಡಿತು. ಇನ್ನು ಮುಂದಾದರೂ ಮನೋಜ ಸುಖವಾಗಿ ಇರಲು ಸಾಧ್ಯವೆ?

  ReplyDelete
 19. Money...Big Money...ದೊಡ್ದ ಮನಿ..ಏನ್ರೀ Manju..ಇಷ್ಟೊಂದು anti-climax ಗೆ ತಂದುಬಿಟ್ರಿ ಕಥೇನಾ?? ಕಾವ್ಯಳ ನಿರ್ಧಾರ ತಪ್ಪು ಅಮ್ತ ನಾವು ಹೇಳೋದು ಸರೀನೇ..ಮತ್ತೆ ಕೆಲವರು..ಕೆಲವರೇನು..?? ನಾನೇ ಅಂದ್ಕೊಂಡೇ ಮೊದಲಿಗೆ.. ಇದೊಂದು ನಾಟಕೀಯ ಅಂತ್ಯ ಅಂತ..ಬಾಲಿಶ thinking and decision ಅಂತ...ಆದ್ರೆ ಅದೇ ಬಾಲಿಶ ಪ್ರೇಮ..ಯಾವುದೋ ಒಂದು ಮನೋಸ್ಥಿತಿಯಲ್ಲಿ ಇಂತಹ ಅತಿ ಎನಿಸುವ ನಿರ್ಧಾರಗಲನ್ನು ಮಾಡುತ್ತೆ. ಆತ್ಮೆಹತ್ಯೆ ಒಂದು ಬಹು ಗೋಜಲು ಮನಸಿನ ಕ್ಷಣಿಕ ನಿರ್ಧಾರದ ಫಲ ..ಹೀಗಂತ ಮನೋಶಾಸ್ತ್ರವೇತ್ತರೂ ಹೇಳ್ತಾರೆ..ಹುಚ್ಚರಲ್ಲಿ ಈ ಮನೋಸ್ಥಿತಿ ಪದೆ ಪದೇ ಬರುವ ಕಾರಣ ಅದು ಆಗೇ ತೀರುತ್ತೆ ಅನ್ನೋದು ವಿದಿತ...ಅದೇ ಮತಿವಂತರು ವಿಷಮ ಘಳಿಗೆಗೆ ಸೋತಾಗಲೂ ಆಗುತ್ತೆ..ಅತೀವ ಪ್ರೇಮದ ಜೊತೆಗೆ ಕಾವ್ಯ ಮನೋಜನ ಸುಖವನ್ನೇ ಹೆಚ್ಚು ಬಯಸಿದ್ದಳು ಆ ಪ್ರೇಮ ಇಲ್ಲವೆಂದು ಅನ್ನಿಸಿ ಅವನಾದರೂ ಸುಖಿಯಾಗಿರಲಿ ಎಂದು ಯೋಚಿಸುವ ಮನಸ್ಥಿತಿಯಲ್ಲಿದ್ದು..ಅವನಿಲ್ಲದೇ ನನ್ನ ಬದುಕು ಬದುಕೇ..? ಎನ್ನುವಷ್ಟು ಉತ್ಕಟತೆಗೆ ಹೋದಾಗ...ಆತ್ಮ ಹತ್ಯೆ ಅನಿವಾರ್ಯ ಅವಳಿಗೆ...
  ನನಗನ್ನಿಸಿದ್ದನ್ನು ಹೇಳಿದ್ದೀನಿ....ಚನ್ನಾಗಿದೆ ನಿಮ್ಮ ಬರೆಯುವ ಶೈಲಿ..ಓದಿಸಿಕೊಂಡು ಹೋಗುತ್ತೆ..Good future..ಮತ್ತು ಶುಭವಾಗಲಿ

  ReplyDelete
 20. ನಮಸ್ತೆ ಸುಮಾ ಮೇಡಂ,

  ಕ್ಷಮಿಸಿ ಇಲ್ಲಿ ನನಗೆ ನಿಮ್ಮ ಕೆಲವೊಂದು ಮಾತುಗಳು ಅರ್ಥ ಆಗ್ತಾ ಇಲ್ಲ ಏಕೆಂದರೆ ಇಲ್ಲಿ ನೋಡಿ ಮೊದಲು ನೀವು ಬರೆದಿದ್ದು "kannina hrudayi ne?" ಮತ್ತೊಂದರಲ್ಲಿ ಹೀಗಿದೆ "kattina hrudayi na?" ನನಗೆ ಇಲ್ಲಿ ಸ್ವಲ್ಪ ಅರ್ಥ ಆಗ್ಲಿಲ್ಲ ನಾನು ತಿಳ್ಕೊಲ್ತಿನಿ ಅದು "ಕಠಿಣ ಹೃದಯಿ ನಾ" ಅಂತ. ನಾನು ಚಿಕ್ಕವನು ತಪ್ಪಾದಲ್ಲಿ ಕ್ಷಮೆ ಇರಲಿ.

  ಕಾವ್ಯಳ ಪ್ರಕಾರ ಅವನದು ಕಠಿಣ ಹೃದಯ ಅಲ್ಲ. ತುಂಬಾ ಸೂಕ್ಷ್ಮ ಹೃದಯ ಏಕೆಂದರೆ ಅವನಿಗೆ ಬೇಕಾಗಿದ್ದು ಸಿಗಲ್ಲ ಅಥವಾ ನನ್ನಿಂದ ಇನ್ನೊಬ್ಬರಿಗೆ ನೋವು ಆಗುತ್ತೆ ಅಂತ ಗೊತ್ತಾದ್ರೆ ತನಗೆ ತಾನೇ ನೋವು ಪಡ್ತಾನೆ ಅನ್ನೋದು ಕಾವ್ಯಳಿಗೆ ಗೊತ್ತು. ಅವಳು ಅವನನ್ನ ಚನ್ನಾಗಿ ಅರ್ಥ ಮಾಡ್ಕೊಂಡಿದ್ಲು ಯಾಕೆಂದರೆ ಮನೋಜ ಅಸ್ಟೊಂದು ಸೀರಿಯಸ್ ಆಗಿ ಯಾವತ್ತು ಇದ್ದೊನಲ್ಲ ಎಂತಹ ವಿಷಯವಾದ್ರು ಕೂಲ್ ಆಗಿ ತಗೊಳ್ತ ಇದ್ದ. ಆ ಪ್ಲೇಸ್ ನಲ್ಲಿ ನೀವು ಅಂತ ಅಲ್ಲ ಬೇರೆಯರೇ ಇದ್ರೂ ಯೋಚನೆ ಮಾಡೋಕೆ ಅಲ್ಲ, ಬರೀ ಮಾತಾಡೋಕೆ ಆಗಲ್ಲ ಯಾಕೆಂದರೆ ತನ್ನ ಪ್ರೀತಿ ತನ್ನ ಮರೆಯುತ್ತೆ ಅಂದ್ರೆ ಯಾರಿಗೂ ನಂಬೋಕೆ ಆಗಲ್ಲ ಅಲ್ವ :) ಆಗಲೇ ಕಾವ್ಯ ಹಿಡಿದಿದ್ದು "ತ್ಯಾಗ" ಅನ್ನೋ ದಾರಿ ! ಫೀಲ್ ಮಾಡ್ಕೊಂಡು ನೋಡಿ.

  ಸಾಯೋರ್ಯರು ಎದುರಿಗೆ ಸಾಯೋದಿಲ್ಲ ಕಣ್ರೀ ಆ ಥರ ಮಾಡಿದ್ರೆ "ಪ್ರೀತಿಗೂ" ಕಾವ್ಯಳಿಗೂ ಏನು ವ್ಯತ್ಯಾಸ ಇರುತ್ತೆ ಹೇಳಿ ?


  ಇಂತಿ ನಿಮ್ಮ
  ದೊಡ್ಡಮನಿ.ಮಂಜು
  9742495837

  ReplyDelete
 21. Mr. Manju, niv helodu nijane, sayoru yaru heli keli sayalla... adu yavaga? manassige besara agi, e jivana beda anisdaga.. be illi kavya sayoke horatidu Manoj na santoshakagi.. avlu satre Manoj santoshavagirtane anno nambike avaligitu andmele avna mundene sayabahuditu anta na helidu... nan adna feel madoke saadya agidke nim jote ishtella prashnotara nadista irodu.. nivene heli.. nan prakara Kavya madidu muttaltana, tanna pritige aake madida mosa.. adu avla innocence indane irbodu bt ondu kshanada avala duduku, Manoj ge life long punishment agatala... Kavya sattu hodlu.. got free from the trobles and pains bt Manoj? Manoj badkidu satta hage madbitlu...

  ReplyDelete
 22. avana vishy helthini antha karkondu bhandhu joke ge antha { ninu sathare nanu kushi endha irthini antha } helidhu thapu ......... haa hudgi thalme kalkondidhu thapu.......... so katheya mundhina bhaga huduganu sathre chanagiruthey................. edhu nana aniseke......inthi nim preethiya??????????

  ReplyDelete
 23. preethi ithey vina hoondhanike irralilla antha gothaguthadhey

  ReplyDelete
 24. Waw really thumba chnagidey rii edu experiance athava kalpaneyya

  ReplyDelete
 25. ತುಂಬಾ ಥ್ಯಾಂಕ್ಸ್ ರೀ..........Bhavya

  ಇದನ್ನ ಕಲ್ಪನೆ ಅಂತನು ಹೇಳೋಕೆ ಆಗಲ್ಲ ವಾಸ್ತವ ಅಂತನು ಹೇಳೋಕೆ ಆಗಲ್ಲ ಯಾಕೆಂದರೆ ಇಲ್ಲಿ ಅಂದರೆ ನನ್ನ ಕತೆಯಲ್ಲಿ ಬರುವ ಕೆಲವೊಂದು ಸನ್ನಿವೇಶಗಳು ವಾಸ್ತವ. ನಿಜ ಜೀವನದ ಸತ್ಯ ಘಟನೆಗಳು.
  ಮತ್ತೆ ಇತ್ತ ಬರುತ್ತಾ ಇರಿ.

  ಇಂತಿ ನಿಮ್ಮ
  ದೊಡ್ಡಮನಿ.ಮಂಜು
  9742495837

  ReplyDelete
 26. Thejasvi ಅವರೆ ನಿಮ್ಮ ಅನಿಸಿಕೆಗಳನ್ನ ತಿಳಿಸಿದಕ್ಕೆ ತುಂಬಾ ಥ್ಯಾಂಕ್ಸ್ ರೀ.....................
  ಮುಂದಿನ ಭಾಗದಲ್ಲಿ ಮನೋಜನ ಸತ್ತರೆ ಚನ್ನಾಗಿರುತ್ತೆ ಅಂತ ಹೇಳ್ತಾ ಇದ್ದೀರಾ. ನೋಡೋಣ ಮುಂದಿನ ಭಾಗದಲ್ಲಿ ಏನಾಗುತ್ತೆ ಅಂತ

  ಇಂತಿ ನಿಮ್ಮ
  ದೊಡ್ಡಮನಿ.ಮಂಜು
  9742495837

  ReplyDelete
 27. ಸುಮಾ ಮೇಡಂ

  ನಿಮ್ಮ ಎಲ್ಲ ಪ್ರೇಶ್ನೆಗಳಿಗೂ ನನ್ನ ಪ್ರತ್ತುತ್ತರ ಇದ್ದೆ ಇದೆ.ಎಂದಿಗೂ ಹೀಗೆ ಇರುತ್ತೆ. ನಿಮ್ಮ ಪ್ರಕಾರ ಕಾವ್ಯ ಮಾಡಿದ್ದು ಮುಠ್ಠಾಳತನ ತನ್ನ ಪ್ರೀತಿಗೆ ಅವಳು ಮಾಡಿದ ಮೋಸ ಅಂತಿದ್ದಿರ ಅದನ್ನ ನಾನು "ತ್ಯಾಗ" ಅಂತೀನಿ. ಅವಳ ಒಂದು ದುಡುಕುತನ ದಿಂದ ಮನೋಜ ಇವತ್ತು ಬದುಕಿದ್ದು ಸತ್ತಹಾಗೆ ಅದು ನೂರಕ್ಕೆ ನೂರರಷ್ಟು ಸತ್ಯದ ಮಾತು. ಆದರೆ ಅದು ದುಡುಕುತನ ಅಲ್ಲ ತನ್ನ ಪ್ರೀತಿಗಾಗಿ ಮಾಡಿದ "ಧೀರತನ".

  ಇಂತಿ ನಿಮ್ಮ
  ದೊಡ್ಡಮನಿ.ಮಂಜು
  9742495837

  ReplyDelete
 28. Hai super.. Preethi andre ede....Kavya prakara ade preethi and manoj prakara kavya ne regusode preethi... super love story e tara agbardithu... so 2 half bega barire.... I am wating...

  ReplyDelete
 29. l like very much, Dhayattu yenu thilkobedi, Kavyara story yannu Manojge needidhare yanaguthe,neev yanakke avarige a role story needbekithu. . .


  Mathe baruthene, Dhanyavadhagalu

  ReplyDelete
 30. Nanna prakara adhu dheerathana Alla, avalu Nishkalmash Prethigagi Sallisidha Namana. . . .

  ReplyDelete
 31. Rajesh ರವರೆ ನಿಮಗೆ ನನ್ನ ಧನ್ಯವಾದಗಳು :)

  ನಿಮ್ಮ ಸಲಹೆಗೆ ನಾನಾ ಸ್ವಾಗತ ನೀವು ಹೇಳಿದ ಥರ ಕತೆನ ನಾನು ಬರ್ದಿದ್ರೆ ಇವತ್ತು ಯಾರು ನನ್ನ ಸ್ಟೋರಿ ಲೈಕ್ ಮಾಡ್ತಾ ಇರ್ಲಿಲಿಲ್ಲ ಆಗ ಅದೊಂದು ಯಾವ್ದೋ ಹಳೆಯ ಕನ್ನಡ ಫಿಲಂ ಸ್ಟೋರ್ ಅನಿಸ್ಕೊಳ್ತಾ ಇತ್ತು ಅಲ್ವ ಯೋಚನೆ ಮಾಡಿ ! ಸ್ವಲ್ಪ ವಿಭ್ಹಿನ್ನವಾಗಿ ಕತೆನ ಪೋಣಿಸಿದ್ದಿನಿ.

  ReplyDelete
 32. chennagide story:) araamavaagi oadisikondu hoayitu nimma baraha..

  ReplyDelete
 33. ಧನ್ಯವಾದಗಳು ಗೌತಮ್ ಹೆಗಡೆರವರೆ ಮತ್ತೆ ಇತ್ತ ಬರುತ್ತಿರಿ :)

  ReplyDelete
 34. hai . nanu nimmunna , ninu anta kariboda . yakandre innu hatra agbekalla adikke. sari, kate tumba channagide, odutta idre nanagu ondu kate baribeku anno prerane siktide.adella andukolloke chanda madoke nintara talent bekalla alwa.kate bagge helbeku andre, kate odida ellaru katena kelavu dikkininda savidiruttare, andare nimma nayaka n nayaki ritiya jana oppikondaru kelavu varga katena prashnisabahudu ene adru kate channagide dayavittu mundina kate bega bareiri kaita iruva ninna geleya, kitti....

  ReplyDelete
 35. thank u kiran, nanage call maadi maatadidakke koda danyavada kiran

  ReplyDelete
 36. its u ra good writer..........i like it dear m also writer bt nw m not writing so and so......irli bidi nananthu ivathu nevu bardiro hella writing nu hodidini nange tumba ista agidhe......mathe nanu bariyodikke start madla anstidhe yako bariyodikke manasilla....any way ur a good writer all the best my dear friend m also davangere dear.....

  ReplyDelete
 37. kavyala preeti nishkalmashavadaddu. kavya sayabaradittu. manojana santoshakkagi avlu tanna preetina tyaga madabahudittalla. atmahatya madkobaradittu. yene aagli nivu barediruva kathe mana kulukuvantide manju. hat's of to you manju. adre manoja yenu agtane anta gottaglilla. yenagtane anta heli.

  ReplyDelete
 38. ಪ್ರೀತಿ ಎಂದರೆ

  ಒಂದು ಹುಡುಗ
  ಹುಡುಗಿಗೆ
  ಕಣ್ಣು
  ಹೊಡೆದಂಗಲ್ಲ
  ಅಥವಾ...
  ಆಕಾಶ
  ಭೂಮಿಗೆ
  ಸಿಡಿಲು
  ಸಿಡಿಲು
  ಬಡಿದಂತಲ್ಲ
  ಬದಲಾಗಿ
  ಕತ್ತಲೆ
  ಮನೆಯೋಳೆಗೂ
  ಬೆಳಕು ನೀಡುವ
  ದೀಪವಿದ್ದಂತೆ.
  ಪ್ರೀತಿಸಿ ನೋಡು
  ಕನ್ನಡಿಯೊಳಗೆ
  ನೀ ನಿನ್ನ
  ಬಿಂಬ
  ಕಾಣುವಂತೆ
  ಪ್ರೀತಿಯಲ್ಲೂ
  ನೀ ನಿನ್ನ
  ಪ್ರೀತಿಯ
  ಪ್ರತಿಬಿಂಬ
  ಕಾಣುತ್ತಿಯ.

  superagide manju.....

  ReplyDelete
 39. ಪ್ರೀತಿ ಮಧುರ ! ತ್ಯಾಗ ಅಮರ !
  ಆದ್ರೆ ಕಾವ್ಯ ಮನೋಜ ಹೇಳಿದ್ದನ್ನ ನಂಬಬಾರದಿತ್ತು, ತಮಾಷೆಗೆ ಹೇಳಿದ ಮಾತನ್ನ ನಂಬಿ ಸಾಯುವ ನಿರ್ಧಾರ ಮಾಡಬಾರದಿತ್ತು
  ಅಂತ ನನ್ನ ಅನಿಸಿಕೆ..ಹಾಗೆ ಪ್ರೀತಿಗಾಗಿ, ಅವನ ಸಂತೋಷಕ್ಕಾಗಿ ಕಾವ್ಯ ಮಾಡಿದ ತ್ಯಾಗ ನಿಜಕ್ಕು ಅಮರ..!

  ReplyDelete
 40. This comment has been removed by the author.

  ReplyDelete
 41. ಸೂಪರ್ ಸೂಪರ್ ಸೂಪರ್....

  ReplyDelete
 42. ಪ್ರೀತಿಯಿಲ್ಲದ ಬಾಳಿನಲ್ಲಿ ನಗುವೆ ಇಲ್ಲ...

  ReplyDelete