ಸತ್ಯವನ್ನೇ ನುಡಿಸು ಗುರುವೇ ನರವಿಲ್ಲದ ಜಿಹ್ವೆಯೋಳ್ ! ಸ್ಥಿರವಾಗಿ ನೆಲೆಸು ಗುರುವೇ ಮರ್ಕಟ ಈ ಮನದೊಳ್ !

Tuesday 1 December 2009

ಸಾವೆಂಬ ಸಾವು ಒಪ್ಪದ ಈ ಸಾವು !

ಕಾವ್ಯ
"ಪ್ರೀತಿಯ ಇತಿಹಾಸದ ಪುಟಕ್ಕೆ ಅಮರ ಈ ಹೆಸರು
ಪ್ರೀತಿಸುವ ಹೃದಯಗಳಿಗೆ ಎಚ್ಚರದ ಬೆಚ್ಚನೆಯ ಉಸಿರು"
ಕಾವ್ಯಳ ಮನೆಯಲ್ಲಿ ಹಿಂದೆಂದು ಕಾಣದ ಕರಾಳ ಮೌನ, ಮಧುವೆಗೆಂದು ಹಾಕಿರುವ ಚಪ್ಪರ ಗಾಳಿಯೊಂದಿಗೆ ಶೋಕ ಗೀತೆ ಹಾಡುತ್ತಿದೆ ಕಾವ್ಯಳ ಶವದ ಮುಂದೆ ಜನ ಸಾಗರವೇ ತುಂಬಿದೆ, ಕಾವ್ಯಳ ಸಾವಿನಿಂದ ದಿಕ್ಕು ತೋಚದೆ ನಿಂತಿರುವ ತಂದೆ, ಅತ್ತು ಅತ್ತು ಕಣ್ಣಿರೆಲ್ಲ ಬತ್ತಿ ಉಸಿರಾಡಲು ಉಸಿರಿಲ್ಲದಂತಾಗಿರುವ ಕಾವ್ಯಳ ತಾಯಿ, ಇನ್ನು ತಪ್ಪಿತಸ್ಥರಂತೆ ತಲೆ ಬಾಗಿ ನಿಂತಿರುವ ಕಾವ್ಯಳ ಅತ್ತೆ, ಮಾವ ಜೊತೆಗೆ ಅಪಾರ ಸ್ನೇಹಿತರ ನಿಲ್ಲದ ಆಕ್ರಂದನ ದುಃಖದ ಕಡಲೆ ಅಲ್ಲಿ ಅಲೆ ಅಲೆಯಾಗಿ ಮುಗಿಲು ಮುಟ್ಟುತ್ತಿದೆ.

"ನೆನಪಿನ ಜಾತ್ರೆಯಲ್ಲಿ ನಿಲ್ಲದ ಕಣ್ಣಿರಿನ ತೇರು
ಪ್ರೀತಿಯ ತ್ಯಾಗಕ್ಕೆ ಯಾರು ಸಹಿಸದ ಕಹಿ ನೋವು

ಆಕಾಶದಲ್ಲಿ ಸೂರ್ಯನ ಸುಳಿವಿಲ್ಲ ಸಂಜೆ ಆಗುತ್ತಿದ್ದೆ ಮುಂದೆ ಆಗುವ ಕಾರ್ಯಗಳಿಗೆ ಕಾವ್ಯಳ ಕುಟುಂಬದವರು ಸಜ್ಜಾಗಿದ್ದಾರೆ, ದೊರದಿಂದ ಬರುವ ಸಂಬಧಿಕರು, ನೆಂಟರು ಸ್ಹೆಂಹಿತರು ಎಲ್ಲ ಬಂದಿದ್ದಾರೆ, ಕಾವ್ಯ ಬರೆದ ಪತ್ರ ಮಾತ್ರ ಒಬ್ಬರ ಕೈ ಯಿಂದ ಒಬ್ಬರಿಗೆ ಸಾಗುತ್ತಲಿದೆ. ಓದಿದವರ ಕಣ್ಣುಗಳಲ್ಲಿ ಕಣ್ಣೀರಧಾರೆ ಹರಿಯುತ್ತಲಿದೆ.

ಇಲ್ಲಿ ಎಲ್ಲರ ಕಣ್ಣು ಒಬ್ಬನನ್ನೇ ಹುಡುಕುತ್ತಿತ್ತು ? ? ? ? ? ? ಎಲ್ಲಿ ಮನೋಜ ಕಾಣ್ತಾನೆ ಇಲ್ವಲ್ಲ ಅಂತ, ಎಲ್ಲಿ ಹುಡುಕಿದರೂ ಮನೋಜ ಕಾಣುತ್ತಿಲ್ಲ, ಇತ್ತ ಮನೋಜನ ಅಪ್ಪ ಅಮ್ಮ ಹಾಕುತ್ತಿರುವ ಹಿಡಿ ಶಾಪ ಬೈಗಳು, ಇದ್ಯಾವುದರ ಅರಿವಿಲ್ಲದಂತೆ ಶಾಶ್ವತವಾಗಿ ಚಿರ ನಿದ್ರೆಗೆ ಶರಣಾಗಿರುವ ಕಾವ್ಯ. ಇಷ್ಟಾದರೂ ಮನೋಜನ ಸುಳಿವಿಲ್ಲ, ಅವನಿಗಾಗಿ ಸ್ನೇಹಿತರ ನಿಲ್ಲದ ಹುಡುಕಾಟ. ಸಿಗುವ ಯಾವುದೇ ಸೂಚನೆಗಳಿಲ್ಲ. ಅಲ್ಲಿಯವರೆಗೂ ಕಾವ್ಯಳ ಶವದ ಮುಂದೆ ಜಾಗ ಕದಲದೆ ಮನುಷ್ಯನಂತೆ ಅಳುತ್ತ ಕೊತಿದ್ದ ಕಾವ್ಯಳ ಮುದ್ದಿನ ನಾಯಿಮರಿ ಎದ್ದು ಒಳಗೆ ಹೊರಟಿತು.

ಇತ್ತ ಮನೋಜನಾ ಪ್ರೀತಿಯ ನಶೆಯಲ್ಲಿ ತೇಲುತ್ತಿದ್ದ "ಪ್ರೀತಿ" ತನಗೆ ಮನೋಜ ಸಿಗೋಲ್ಲ ಅಂತ ತಿಳಿದು ತಾನು ಯಾರು ಎಂಬುದನ್ನು ತಿಳಿಯದ ಸ್ಥಿತಿಯಲ್ಲಿ ಅರೆ ಹುಚ್ಚಿ ಯಾಗಿ ಪ್ರತಿ ಒಂದು ಕ್ಷಣವೂ ಮನೋಜನನ್ನೇ ಜಪಿಸುತ್ತ ಉಸಿರಾಡೋ ಗೊಂಬೆಯಾಗಿದ್ದಾಳೆ

"ಒಲಿಯದ ಪ್ರೀತಿಯ ಹಿಂದೆ ಬಿದ್ದವಳೋಬ್ಬಳು
ಒಲಿದ ಪ್ರೀತಿಯ ಕಳೆದುಕೊಂಡವನೋಬ್ಬನು
ಇದ್ಯಾವುದನ್ನು ಅರೆಯದೆ ಪ್ರಾಣವ ಕೊಟ್ಟವಳೋಬ್ಬಳು"

ಇನ್ನೇನು ಪ್ರೇಮದ ಸುಂದರ ತೇರು ಹೊರಡುವ ಸಮಯ, ಮಧುಮಗಳಂತೆ ಸಿಂಗಾರವಾದ ಕಾವ್ಯಳ ತ್ಯಾಗದ ಮೆರವಣಿಗೆ ಹೋಗುವ ಸಮಯ.ಅಷ್ಟರಲ್ಲಿ ಮನೆಯ ಒಳಗಿಂದ ಕಾವ್ಯಳ ಮುದ್ದು ನಾಯಿಮರಿ ಕರಳು ಹಿಂಡುವಂತೆ ಕೊಗುತ್ತ ಓಡಿ ಬಂದು ಕಾವ್ಯಳ ಸೆರಗನ್ನ ಎಳೆಯುತಲಿತ್ತು ಮೊದ ಮೊದಲು ಯಾರು ಅಸ್ಟೊಂದು ಗಮನ ಕೊಡದೆ ಯಾರೋ ಒಬ್ಬರು ನಾಯಿಮರಿಯನ್ನು ಹಿಡಿದು ಕಟ್ಟಿ ಹಾಕಿದರು ಅದರ ಕೊಗು ಮತ್ತೆ ಮತ್ತೆ ಮುಗಿಲು ಮುಟ್ಟುತ್ತಿತ್ತು ಅದರ ಅಂತರಾಳವ ಯಾರು ಅರ್ಥ ಮಾಡಿಕೊಳ್ಳದಾದರು, ಕೊನೆಗೆ ಕಾವ್ಯಳ ತಾಯಿ ಕಟ್ಟಿದ್ದ ನಾಯಿ ಮರಿಯನ್ನ ಬಿಚ್ಚಿದರು ಮತ್ತೆ ಕೊಗುತ್ತ ಓಡಿ ಬಂದು ಕಾವ್ಯಳ ಸೆರಗನ್ನ ಎಳೆಯುತಲಿತ್ತು ಅಲ್ಲಿದವರು ಯಾಕಮ್ಮ ಅದನ್ನ ಬಿಟ್ರಿ ಅಂದದ್ದಕ್ಕೆ ಕಾವ್ಯಳ ತಾಯಿ ಅಳುತ್ತ "ನನ್ನ ಮಗಳು ಯಾವತ್ತು ಅದನ್ನ ಕಟ್ಟಿದವಳಲ್ಲ ಒಂದು ವೇಳೆ ಯಾರಾದ್ರೂ ಕಟ್ಟಿದ್ರೆ ಜಗಳನೇ ಮಾಡಿ ಬಿಡೋಳು" ಎಂದು ಹೇಳಿ ಅಳುತ್ತ ಕುಸಿದು ಬಿಟ್ಟರು ಅಷ್ಟರಲ್ಲೇ ಹತ್ತಿರದಲ್ಲಿದ್ದವರು ಸಂತೈಸಿದರು ನಾಯಿ ಮರಿಯ ಕೊಗು ಮಾತ್ರ ನಿಲ್ಲಲಿಲ್ಲ. ನಾಯಿ ಮರಿ ನಾಯಿ ಮರಿ ತಿಂಡಿ ಬೇಕೇ ಅನ್ನೋ ಕಾವ್ಯಳ ಹಾಡನ್ನ ನೆನಪುಮಾಡಿಕೊಂಡು ಬಿಕ್ಕಳಿಸಿ ಅಳುತ್ತಿತ್ತು ಅನಿಸುತ್ತೆ. ಕೊನೆಗೂ ಸುಮ್ಮನಿರದ ಮುದ್ದು ನಾಯಿಮರಿ ಕಾವ್ಯಳ ತಾಯಿಯ ಸೀರೆಯನ್ನು ಹಿಡಿದು ಎಳೆದು ಕೊಂಡು ಮನೆಯೊಂದರ ಕೊಠಡಿಗೆ ಕರೆದೋಯುತ್ತಿದೆ ಎಲ್ಲರೂ ಅದನ್ನೇ ಹಿಂಬಾಲಿಸುತ್ತಿದ್ದಾರೆ ನಾಯಿ ಮರಿ ಕಾವ್ಯಳ ಕೊಠಡಿಗೆ ಕರೆದೊಯ್ದು ಬಾಗಿಲ ಬಳಿ ನಿಂತು ಮತ್ತೆ ಕೊಗುತ್ತಿದೆ ಯಾರಿಗೂ ದಿಕ್ಕು ತೋಚುತ್ತಿಲ್ಲ ಕಾವ್ಯಳ ತಾಯಿ ಬಾಗಿಲನ್ನ ತೆಗೆಯಲು ಯತ್ನಿಸಿದರೆ ಒಳಗಡೆ ಇಂದ ಲಾಕ್ ಆಗಿದೆ ಎಲ್ಲರಲ್ಲೂ ಸಂಶಯ ಮತ್ತೊಷ್ಟೋ ಹೆಚ್ಚುತ್ತಿದ್ದೆ ಅಲ್ಲಿದ್ದ ಕೆಲವರು ಬಾಗಿಲನ್ನು ಒಡೆದು ಒಳಗೆ ಹೋದರೆ ಎಲ್ಲರಿಗೂ ಕಂಡಿದ್ದು ನೇತಾಡುತ್ತಿರುವ ಮನೋಜ ಹೆಣ

(ಹೌದು ಮನೋಜ ಯಾರಿಗೂ ಸಿಗದೇ ತಲೆ ಮರೆಸಿಕೊಂಡಿದ್ದ ಕಾವ್ಯಳ ಮನೆಯ ಹಿಂಬಾಗಿಲಿನಿಂದ ಒಳಗೆ ಬಂದು ಕಾವ್ಯಳ ರೂಮಿನ ಒಳಗೆ ಹೋಗಿ ಭದ್ರವಾಗಿ ಬಾಗಿಲು ಹಾಕಿಕೊಂಡ ಯಾರಿಗೂ ಗೊತ್ತಿರಲಿಲ್ಲ ಅವನನ್ನ ನಾಯಿಮರಿ ಮಾತ್ರ ಗಮನಿಸಿತು ಅದು ಎದ್ದು ಒಳಗೆ ಬಂದು ಕೂಗುವಾಗ ಯಾರಾದರು ನೋಡಿದ್ದರೆ ಇನ್ನೊದು ಸಾವನ್ನು ತಪ್ಪಿಸ ಬಹುದಿತ್ತು. ಮನೋಜನಿಗೆ ಅವಳ ಸಾವಿನಿಂದ ಯಾರಿಗೂ ಮುಖ ತೋರಿಸಲು ಮನಸ್ಸಾಗಲಿಲ್ಲಿ ಎಲ್ಲಾದರು ದೂರಹೋಗಿ ಸಾಯ ಬೇಕೆಂದರೆ ಕಾವ್ಯಳ ನೆನಪು ಅವನಿಗೆ ಕಾಡುತ್ತಿದೆ ಕೊನೆಯ ಬಾರಿ ಒಮ್ಮೆ ದೊರದಲ್ಲೇ ನಿಂತು ಅವಳ ಮುಖ ನೋಡಿ ಅವಳ ಒಂಟಿ ಹಕ್ಕಿಯ ಪಯಣದಲ್ಲಿ ತಾನು ಸೇರಿಕೊಂಡು ಜೋಡಿ ಹಕ್ಕಿಯ ಪಯಣ ಬೆಳೆಸಿದ)

ಕಾವ್ಯ
"ಪ್ರೀತಿಯ ಇತಿಹಾಸದ ಪುಟಕ್ಕೆ ಅಮರ ಈ ಹೆಸರು
ಪ್ರೀತಿಸುವ ಹೃದಯಗಳಿಗೆ ಎಚ್ಚರದ ಬೆಚ್ಚನೆಯ ಉಸಿರು"

ಹಾಗಾದ್ರೆ ಈ ಇಬ್ಬರ ಪ್ರೀತಿ ಸಾವಿನಿಂದ ಕೊನೆಯಾಗಿ ಬಿಡ್ತಾ No, Never Dear friends ಕೇಳದೆ ನಿಮಗೀಗ ದೊರದಲ್ಲಿ
ಯಾರೋ ........... ಲ ಲ ಲ ಲ ಲ ಲ ಲಾ ಲಾ ಲಾ....... ಓ ಓ ಓ .... ಲ ಲ ಲ ಲ ಲ ಲಾ ಲಾ ಲಾ


ಈ ಧ್ವನಿ ಸುರಳಿಯನ್ನು ಆಲಿಸಿ :-



ನಿಮ್ಮ "ದೊಡ್ಡಮನಿ.ಮಂಜು"
9742495837

14 comments:

  1. Hi Manju,

    Katheyeko nanage astondu ista agalilla... but konege barediruva kavana super..

    Pravi!!

    ReplyDelete
  2. ನಿಮ್ಮ ಈ ಕತೆ ವಾಸ್ತವನೋ ಅಥವ ಕಲ್ಪನೆಯೂ ಗೊತ್ತಿಲ್ಲ, ಆದ್ರೆ ಇದ್ರಲ್ಲಿರೋ ವ್ಯಕ್ತವಾಗಿರೋ ಪ್ರೀತಿಯ ಬಾವನೆಗಳು ಎಂಥವರ ಮನಸ್ಸನ್ನು ಕಲಕಿಬಿಡುತ್ತದೆ. ನಿಮ್ಮ ಕತೆ ಅದ್ಬುತವಾಗಿದೆ

    ReplyDelete
  3. ಧನ್ಯವಾದಗಳು ಇಂಥ ಒಂದು ಸುಂದರ ಕಥೆಯನ್ನ ಬರೆದಿರೋಕೆ,,,,,, ನಿಜವಾಗಲು ಪ್ರೀತಿ ಅಂದ್ರೆ ಇದೇನಾ ಅಂತ ಅನ್ನಿಸುತೆ??? ಅದ್ಭುತವಾಗಿದೆ.....

    ReplyDelete
  4. ಮಂಜು, ಕಥೆ ಓದಿಸಿಕೊಂಡುಹೋಗುವ ಗುಣ ಹೊಂದಿದ್ದು, ನಿನಗೆ ಕಥೆ ಮತ್ತು ಕವನ (ವಿಶೇಷ ಏಕೆಂದರೆ ಚಿತ್ರದ ಹಿನ್ನೆಲೆಗೆ ಹೊಂದಿರುವ ಭಾವ ಚಿತ್ರಣ ಕವನದ ಮೂಲಕ....) ಎರಡರಲ್ಲೂ ಸಮಾನ ಹಿಡಿತ ಸಿಗಲಾರಂಭಿಸಿದೆ..ಕತ್ತಿಯನ್ನು ಸ್ವಲ್ಪ ಸಾನೇ ಹಿಡಿದರೆ..ಬಹಳ ಪ್ರಭಾವೀ ಲೇಖಕನಾಗುವುದರಲ್ಲಿ ಸಂಶಯವಿಲ್ಲ...

    ReplyDelete
  5. hello manju nimma kathe nannge thubha eata aytu dost supar kavana also supar dost

    ReplyDelete
  6. ಜಲನಯನದ ಅಜಾದ ಅಣ್ಣ, ಪ್ರವೀಣ ಭಟ್, ಗೆಳತಿ ಸ್ನೇಹ, ಅಮ್ಮು ಮತ್ತೆ ಮಂಜು ಅವರೇ ತಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ಅನಿಸಿಕೆಗಳನ್ನ ತಿಳಿಸಿದಕ್ಕೆ.

    ನಿಮ್ಮ
    ದೊಡ್ಡಮನಿ.ಮಂಜು.

    ReplyDelete
  7. hi manju, nanige nimma kathe tumba ishta aitu kandri idu vastavano athava kalpaneno gottilla adre nimmalliro e talent nanige tumba ishta aitu , kavana kuda aste tumba channagide , kavyala kathe keli manassige tumba bejar aitu , preeti mado hrudhayagalige e tarahada kashta bedappa devre anta nan a devralli kelkotini,

    ReplyDelete
  8. ತುಂಬಾ ಧನ್ಯವಾದಗಳು ಸಹನಾ ಅವರೇ ಕತೆ ಮೆಚ್ಚಿ ಕೊಂಡಿದಿರ ಹಾಗೆ ಇಲ್ಲಿ ವಾಸ್ತವ ಅಥವಾ ಕಲ್ಪನೆನು ಅಂತ ಕೇಳ್ತಾ ಇದ್ದೀರಾ ನಿಜ ಇಲ್ಲ ಬರುವ ಕೆಲವೊಂದು ಸನ್ನಿವೇಶಗಳು ನಿಜ ಜೀವನದಲ್ಲಿ ನಾನು ನೋಡಿದವುಗಳೇ:)

    ನಿಮ್ಮ
    ದೊಡ್ಡಮನಿ.ಮಂಜು.

    ReplyDelete
  9. Namasthe Gelaya
    ninna kavyasakti thumba spastavide akshara jodane, kalpane kavanada ithi mithi ellavu sundaravide.
    ninna e saadane ige munduvareyali.

    inthi,
    Mahesh M
    9036010789

    ReplyDelete
  10. Lots of Thank u For u r comments Gelaya Mahesh.M

    ReplyDelete
  11. ಆತ್ಮೀಯ
    ನಿಮ್ಮ ಕಥೆಯ ಶೈಲಿ ಸೊಗಸಾಗಿದೆ
    ಬರುವ ಪ್ರತಿ ಪಾತ್ರವೂ ಕಣ್ಣನ್ನು ಕಟ್ಟುವಂತಿದೆ
    ಆಳವಾಗಿ ಹ್ರದಯಕ್ಕೆ ಹೋಗಿ ಅಲ್ಲೇ ಉಳಿದುಬಿಡುವ ಶಾಶ್ವತತೆ ನಿಮ್ಮ ಕಥೆ ಹೊಂದಿದೆ
    ಅಬಿನಂದನೆಗಳು ಸುಂದರ ಕಥೆಗೆ

    ReplyDelete
  12. Dr.Gurumurthy Hegde ರವರೆ ನಿಮ್ಮ ಆತ್ಮೀಯತೆಗೆ ನನ್ನ ನಮನಗಳು
    ಹೀಗೆ ಇತ್ತ ಬರುತ್ತಿರಿ

    ನಿಮ್ಮ
    ದೊಡ್ಡಮನಿ.ಮಂಜು.

    ReplyDelete
  13. hi manju chnnagide nimma kavanagalannu odikondu nanu kavanagalanna bareyodanna kalitiddene omme nodi plese cannagiddare bennu tatti
    iam satish
    nodalu illi klikkisi
    www.nannavalaloka.blogspot.com

    ReplyDelete
  14. hmm satish thank u :)

    nimma blog nodidini channgide munduvaresi

    ReplyDelete