ಸತ್ಯವನ್ನೇ ನುಡಿಸು ಗುರುವೇ ನರವಿಲ್ಲದ ಜಿಹ್ವೆಯೋಳ್ ! ಸ್ಥಿರವಾಗಿ ನೆಲೆಸು ಗುರುವೇ ಮರ್ಕಟ ಈ ಮನದೊಳ್ !

Monday, 18 January 2010

ಪ್ರೀತಿಕೊಂದ ಕೊಲೆ ಗಾತಿ

"ಕೇಳಿ ಪ್ರೇಮಿಗಳೇ ಒಬ್ಬಳು ಸುಂದರಿ ಇದ್ದಳು
ಪ್ರೀತಿಕೊಂದ ಕೊಲೆ ಗಾತಿ ನಾ ಹೇಳೋ ಕತೆಗೆ ಸ್ಪೂರ್ತಿ"

ಪ್ರೀಯ ಓದುಗರೇ ಈ ಮೇಲಿನ ಸಾಲುಗಳನ್ನ ಕೇಳಿದ್ದೀರಾ ಅಲ್ವ !
ಆ ಸಾಲುಗಳು ಹೇಳೋವಂತೆ ಒಂದು ರೋಮಾಂಚನಕಾರಿ ಪ್ರೇಮ ಕತೆನಾ ಇವತ್ತು ನಿಮ್ಮ ಮುಂದೆ ಇಡ್ತಾ ಇದೀನಿ please hold your brain
ಒಂದಂತ್ತು ಸತ್ಯ ಈ ಕತೇನಾ ಓದಿದಮೇಲೆ ಕಟ್ಟ ಕಡೆಯದಾಗಿ ನಿಮ್ಮನ್ನ ಕಾಡೋ ಪ್ರಶ್ನೆ ಒಂದೇ ಹೀಗೂ ಉಂಟೆ . . . ?

"ಈ ಕತೆಯನ್ನ ಓದುವುದರಿಂದ ನಿಮ್ಮ ಸಮಯ ಹಾಳಾಗುತ್ತೆ ಅಂದುಕೊಳ್ಳುವವರು ದಯವಿಟ್ಟು ಇಲ್ಲಿಗೆ ಓದುವುದನ್ನ ನಿಲ್ಲಿಸಿ"

ಕತೆ ಈಗ ಪ್ರಾರಂಭ :-
ಅವನು ತುಂಬಾ ಶ್ರೀಮಂತ ಮನೆಯ ಹುಡುಗ ರಾಜ್ ಅಂತ ಅವನಿಗೆ ಅಪ್ಪಿತಪ್ಪಿ ರೋಜ ಅನ್ನೋ ಹುಡುಗಿ ಪರಿಚಯ ಆಗ್ತಾಳೆ ಆ ಪರಿಚಯ ಸ್ನೇಹ ಆಗುತ್ತೆ ಆ ಸ್ನೇಹ ಕೊನೆಗೆ ಪ್ರೀತಿಯಾಗುತ್ತೆ ರಾಜ್ ಅವಳನ್ನ ಎಷ್ಟು ಪ್ರೀತಿ ಮಾಡ್ತಾ ಇದ್ದ ಅಂದ್ರೆ ಒಂದು ನಿಮಿಷನು ಅವಳನ್ನ ಬಿಟ್ಟು ಇರ್ತ ಇರ್ಲಿಲ್ಲ, ಅವಳು ಸಹ ಅಷ್ಟೇ ರಾಜ್ ಇಲ್ದೆ ನನಗೆ ಲೋಕಾನೆ ಇಲ್ಲಾ ಅಂತಿದ್ಲು.

ಇವರ ಪ್ರೀತಿಗೆ ಮನೆಯವರು ಒಪ್ಪಿ ಒಂದು ಒಳ್ಳೆ ದಿನನೋಡ್ಕೊಂಡು ಮಧುವೆ ಮಾಡ್ಬಿಡ್ತಾರೆ ಅದು ಬೆಟ್ಟದಮೇಲೆ ಇರೋ ಶ್ರೀ ರಾಮನ ದೇವಸ್ಥಾನದಲ್ಲಿ.

ಸ್ಟೋರಿಲಿ ಟ್ವಿಸ್ಟ್

ಡಿಯರ್ ಫ್ರೆಂಡ್ಸ್ ರೋಜ ಪ್ರೀತಿ ಮಾಡಿದ್ದು ರಾಜ್ ನಾ ಅಲ್ಲಾ ಅವನ ಜೊತೆ ಇರೋ ಅವನ ಕಾರು ಬಂಗಲೆ, ಅವನ ಆಸ್ತಿನ ಅಂತ ಗೊತ್ತಾಗೋಕೆ ತುಂಬಾ ದಿನಗಳು ಬೇಕಾಗಲಿಲ್ಲ ,
ಡಿಯರ್ ಫ್ರೆಂಡ್ಸ್ ರೋಜ ಪ್ರೀತಿ ಅನ್ನೋ ನಾಟಕ ಮಾಡಿ ರಾಜ್ ನ ಯಾರು ಇಲ್ಲದ ಸಮಯನೋಡ್ಕೊಂಡು ಬೆಟ್ಟದ ತುದಿಗೆ ಕರ್ಕೊಂಡು ಹೋಗ್ತಾಳೆ ಅವನು ಅವಳನ್ನ ನೋಡ್ತಾ ಮಾತಾಡ್ತಾ ಮೈ ಮರೆತಾಗ ರೋಜ ಚೋರಿಯಿಂದ ಚುಚ್ಚಿ ಚುಚ್ಚಿ ಕೊಲೆ ಮಾಡಿ ಸತ್ತ ರಾಜ್ ನ ಹೆಣನ ಬೆಟ್ಟದ ತುದಿ ಇಂದ ತಳ್ಳಿ ಕಾಲು ಜಾರಿ ಬಿದ್ದ ಅಂತ ಎಲ್ಲರನ್ನು ನಂಬಿಸಿ ಬಿಡ್ತಾಳೆ ಪಾಪ ಅಷ್ಟೊಂದು ದೊಡ್ಡ ಬೆಟ್ಟದಲ್ಲಿ ಅವನ ಹೆಣ ಹುಡುಕೋಕೆ ಪೊಲೀಸರು ತುಂಬಾ ಸಾಹಸ ಪಡ್ತಾರೆ ಕಡೆಗೆ ದೊಡ್ಡ ಅರಣ್ಯ ಆದ್ರಿಂದ ಈಗಾಗಲೇ ಪ್ರಾಣಿಗಳು ದೇಹನ ತಿಂದು ಬಿಟ್ಟಿರ್ತವೆ ಅಂತ ತಮ್ಮ ಹುಡುಕಾಟ ನಿಲ್ಲಿಸಿ ಬಿಡ್ತಾರೆ.

ಡಿಯರ್ ಫ್ರೆಂಡ್ ಕಳ್ಳನ ಮನಸ್ಸು ಹುಳ್ಳು ಹುಳ್ಳುಗೆ ಅನ್ನೋಹಾಗೆ ರೋಜಳಿಗೆ ಕೊಲೆ ಮಾಡುವಾಗ ಉಟ್ಟಿದ್ದ ಅವಳ ಬಿಳಿ ಸೀರಿಯಾ ಮೇಲೆ ರಕ್ತದ ಕಲೆಗಳು ಹಾಗೆ ಇರ್ತವೆ ಯಾವ ಸೋಪ್ ಹಾಕಿ ತೊಳೋದ್ರು ಕಲೆ ಹೋಗಿರೋದಿಲ್ಲ ಕೊನೆಗೆ ಮನೇಲಿ ಕೆಲಸ ಮಾಡೋ ಮಂಜನಿಗೆ ಯಾವದಾದ್ರು ಒಳ್ಳೆ ಸೋಪ್ ಇದ್ರೆ ಹೇಳೋ ನನ್ನ ಸೀರೆ ಮೇಲೆ ತುಂಬಾ ಕಲೆಗಳಿವೆ ಅಂತ ಕೇಳ್ತಾಳೆ ಡಿಯರ್ ಫ್ರೆಂಡ್ ಸ್ಟೋರಿಲಿ ಟ್ವಿಸ್ಟ್ ಶುರುವಾಗಿದ್ದೆ ಇಲ್ಲಿಂದ,

ಮಂಜ ತಕ್ಷಣ ಒಂದು ಉಪಾಯಕೊಟ್ಟ ಅದು ಏನಂದ್ರೆ

"ಶಶಿ ಇದ್ದಲ್ಲಿ ಕೊಳೆಯ ಮಾತೆಲ್ಲಿ"

@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@
@ಕಟ್ಟ ಕಡೆಯದಾಗಿ ನಿಮ್ಮನ್ನ ಕಾಡೋ ಪ್ರಶ್ನೆ ಒಂದೇ ಹೀಗೂ ಉಂಟೆ . . . ? ನೋಡಿ ದಾವಣಗೆರೆಯ ಒಂದು ಸೋಪ್ ಪ್ರಚಾರ ಮಾಡೋದಕ್ಕೆ ಮಂಜು ಇಷ್ಟೇಲ್ಲ ಬಿಲ್ಡ್ಅಪ್ ಕೊಡಬೇಕಿತ್ತ !!

34 comments:

 1. ha ha ha ha :) manjuvina kathe heegoo unte !!!!

  ReplyDelete
 2. Thank u,

  ಹೌದು ಪ್ರವೀಣ ಇನ್ನು ಹೇಗೇಗೋ ಉಂಟು ಕಾದು ನೋಡಿ :)

  ReplyDelete
 3. ಸಾಗರದಾಚೆಯ ಇಂಚರ ಮಾಲಿಕರಿಗೆ ಧನ್ಯವಾದಗಳು :)

  ReplyDelete
 4. ಮಂಜು ಸರ್,
  ನಿಮ್ಮ ಬರಹವನ್ನ, '' ಹೀಗೂ ಉಂಟೆ'' ಧಾಟಿಯಲ್ಲೇ ಓದಿಕೊಂಡರೆ ಇನ್ನೂ ಮಜವಾಗಿರತ್ತೆ.....

  ReplyDelete
 5. ಹೌದು ದಿನಕರ್ ರವರೆ ನಾನು ಬರ್ದಿದ್ದು ಅದೇ ಕಾನ್ಸೆಪ್ಟ್ ಇಟ್ಕೊಂಡು ಅಂದ್ರೆ ಹೀಗೂ ಉಂಟೆ ಧಾಟಿಯಲ್ಲೇ :) :)

  ReplyDelete
 6. ha ha ha :-) heegu unte dhatili odidre sakkathagiruthe. Konege olle twist ide.

  ReplyDelete
 7. ree,,,,manju avrare,,,,neevu, TV9 alli baruva heegu unte anchor avara kevii all beralu haki allasdbitralriii,,,

  paapa a manushya heegu unte anta yochista ertare

  ReplyDelete
 8. ತುಂಬಾ ಥ್ಯಾಂಕ್ಸ್ ನಿಶಾರವರೆ...... ಆಗಾಗ ಈ ದಾರಿಯಲ್ಲಿ ಬರುತ್ತಾ ಇರಿ :)

  ReplyDelete
 9. ಗೌತಮ್ ಹೆಗಡೆ ರವರೆ ತುಂಬಾ ನಗು ಬಂತಾ. . . . .:-)

  ReplyDelete
 10. katheyalli tumba twists ide alva...?

  ReplyDelete
 11. ರೀ ರೀ ಸವಿ ಅವರೇ ಯಾರನ್ನ ಕೇಳ್ತಾ ಇದ್ದೀರಾ
  ಕತೆಯಲ್ಲಿ ಟ್ವಿಸ್ಟ್ ಇದೆ ಅಲ್ವ ??? ಅಂತ
  ನನ್ನ ಕೇಳಿದ್ರ,
  ಹೌದು ರೀ ಕತೆಯಲ್ಲಿ ಸಿಕ್ಕಾಪಟ್ಟೆ ಟ್ವಿಸ್ಟ್ ಇದೆ....ಹ್ಹ ಹ್ಹ ಹ್ಹ
  ಹೀಗೆ ಆಗಾಗ ಬರ್ತಾ ಇರೀ ಇನ್ನೋಷ್ಟು ಟ್ವಿಸ್ಟ್ ಗಳು ಬರ್ತಾ ಇವೆ......ಹ್ಹ ಹ್ಹ ಹ್ಹ

  ReplyDelete
 12. ಹೀಗೂ ಉಂಟೆ, ಸತ್ಯಕ್ಕೆ ನಿಲುಕದ್ದು,,,,,ಹಃ ಹ ಹ ಹಾ ಹ್ಹ ಹಹ್ಹ ಹ್ಹ ಹ ಹ್ಹ ಹ್ಹ


  good dear keep it up

  ಮಂಜು ಸತ್ಯ ಕಣೋ ನಿನ್ನ ಶಶಿ ಸೋಪ್ ಜಾಹಿರಾತಿಗೆ ತಗೋ ಬಹುದು ಕಣೋ ಆಮೇಲೆ ಜನ ನಿನ್ ಮೇಲೆ ಹರಿ ಬಿದ್ದರು ಉಷಾರು ಗೆಳಯ

  ReplyDelete
 13. ಮೈ ಡಿಯರ್ ಲತಾ ಹ್ಹ ಹ್ಹ ಹ್ಹ ಶಶಿ ಸೋಪ್ ಜಾಹಿರಾತಿಗೆ ನಾನು ಹೋದ್ರೆ ದಾವಣಗೆರೆ ಹುಡುಗಿರೆಲ್ಲಾ ಬಟ್ಟೆ ಸೆಳೆಯೋದ್ರು ಬದಲು ನನ್ನೇ ಸೆಳೆದು ಬಿಡ್ತಾರೆ ಅಷ್ಟೇ :) :-)

  *ಎಲ್ಲಾ ತಮಾಷೆಗಾಗಿ

  ReplyDelete
 14. ಏನ್ರೀ ಮಂಜು ಅವರೇ ನಿಮ್ಮ Creativity ತುಂಬಾ ಚೆನ್ನಾಗಿದೆ, ಕಾರಣ ಏನೇ ಇರಲಿ ಅದು ಮುಖ್ಯ ಅಲ್ಲ.

  ReplyDelete
 15. Thank u Rajesh Creativity ಅಂತ ಏನು ಇಲ್ಲ just for a change ಅಷ್ಟೇ

  ReplyDelete
 16. ಹಹಹ... ತುಂಬಾ ಚೆನ್ನಾಗಿ ಬರ್ದಿದ್ದಿರ .. ನಿಮ್ಮ ಈ ಹೀಗು ಉಂಟೆ ಅನ್ನೋ ದಾಟಿಲಿ ನಾನು ರೋಜ ಕಥೆ ಏನಾಯಿತು ಅಂತ ಆಶ್ಚರ್ಯವಾಗಿ ಓದ್ತಾ ಹೋದ್ರೆ ಅದು ಜಾಹಿರಾತು ಪ್ರಕಟಣೆ .. ಒಂಥರಾ ಬಕ್ರ ಆಗ್ಬಿಟ್ಟೆ ರೀ ಮಂಜು ಅವ್ರೆ ತುಂಬಾ ಚೆನ್ನಾಗಿ ಬರ್ದಿದ್ದಿರ ..ಇದನ್ನು ನಾನು ಓದಿದ್ದಲ್ಲದೆ ನನ್ ಗೆಳಥಿಯಿಗೂ ಇದನ್ನು ತೋರಿಸಿದೆ

  ReplyDelete
 17. ಹ್ಹ ಹ್ಹ ಹ್ಹ ಬಕ್ರ ಮಾಡ್ಬೇಕು ಅಂತ ಬರ್ದಿದ್ದಲ್ಲ ಸುಮ್ನೆ ಸ್ವಲ್ಪ ಮಸಾಲ ಇರ್ಲಿ ಅಂತ ಅಲ್ದೆ ನೀವು ನಗಬೇಕು ಅಂತ anyway thank u so much Chinnu ಅವರೇ.
  ನಿಮ್ಮ ಗೆಳತಿಗೂ ತೋರಿಸಿದೆ ಅಂತ ಹೇಳಿದ್ರೆ ತುಂಬ ಸಂತೋಷ.
  ಹಾ ಹಾ ಒಂದು ಮಾತು ನಿಮ್ಮ ಗೆಳತಿಗೆ ಹೇಳಿ ಇನ್ಮುಂದೆ ಶಶಿ ಸೋಪ್ ನೆ ಬಳಿಸಿ ಅಂತ ಹ್ಹ ಹ್ಹ ಹ್ಹ

  ~$Manju$~
  9742495837

  ReplyDelete
 18. nagbeko atava alabeko gottagtilla. intrest inda oduvaga eee riti madbardappa ninu . idanna april nalli blog madidre tummba channagirtittu ansutte enatira .

  ReplyDelete
 19. ಅಳೋಕೆ ಹೋಗಬೇಡಿ Kiran ಸರ್ ನಗ್ತಾನೆ ಇರಿ ಇಲ್ಲಿ ಸ್ವಲ್ಪ ಎಲ್ಲರನ್ನು ನಗಿಸಬೇಕು ಅಂತ ಈ ಕಾನ್ಸೆಪ್ಟ್ ತಗೊಂಡೆ ಬೇಸರ ಮಾಡ್ಕೋಬೇಡಿ ನವರಸ ಗಳಿದ್ರೇನೆ ಜೀವನ ಅಲ್ವ ! ಏಪ್ರಿಲ್ ನಲ್ಲಿ ಇದಕ್ಕೂ ದೊಡ್ಡದಾಗಿ ಮಾಡಿದ್ರಾಯ್ತು ಏನಂತಿರ !

  ReplyDelete
 20. Dodda drama masteru antha gothu

  ReplyDelete
 21. LO devarajaaaaaa Naanu Drama chanangi kalistini baaro ninagu kaliskodtini :)

  ReplyDelete
 22. HI,

  MANJU
  ಮಂಜ ತಕ್ಷಣ ಒಂದು ಉಪಾಯಕೊಟ್ಟ ಅದು ಏನಂದ್ರೆ

  WT NEXT FRIEND I AM WAITING FOR NEXT UPDATE ...........,

  NIMMA GELEYA
  M Sree

  ReplyDelete
 23. ಮೊದಮೊದಲು ತುಂಬಾ ಇನ್ತ್ರಸ್ತಿಂಗ್ ಇತ್ತು ಕಥೆ ಓದಿದಮೇಲೆ ತುಂಬಾ ನಗು ಬಂತು ....... ಒಳ್ಳೆ ಹಾಸ್ಯ ಬರವಣಿಗೆ ಕಣ್ರೀ ಮಂಜು .... KEEP WRITING....

  ReplyDelete
 24. ಇಷ್ಟು ಬಿಲ್ಡ್ ಅಪ್ ಬೇಕಿತ್ತಾ?????????

  ReplyDelete
 25. hi Manju enri nim story thumba chenagide, nanu konege klaimax enagutthe antha kuthuhaladinda nodtidde, adre konege neev kotta twist super kanri

  ReplyDelete