ಸತ್ಯವನ್ನೇ ನುಡಿಸು ಗುರುವೇ ನರವಿಲ್ಲದ ಜಿಹ್ವೆಯೋಳ್ ! ಸ್ಥಿರವಾಗಿ ನೆಲೆಸು ಗುರುವೇ ಮರ್ಕಟ ಈ ಮನದೊಳ್ !

Thursday, 25 February 2010

"ಭಾವನೆಗಳ ಒಡತಿ ನನ್ನ ಮುದ್ದು ಗೆಳತಿ"
ಹೌದು ಈ ಜೀವನ ಅನ್ನೂದು ಎರಡು ಕಂಬಿಗಳ ಮೇಲೆ ಚಲಿಸೋ ರೈಲಿನತರಹ, ನಮ್ಮ ನಮ್ಮ ನಿಲ್ದಾಣ ಬರುವ ತನಕ ನಾವು ಕಾಯ್ಲೆ ಬೇಕು ಅಷ್ಟರೊಳಗೆ ನಮಗೆ ಎಷ್ಟೊಂದು ಅನುಭವಗಳಾಗಿರುತ್ತವೆ ಆಲ್ವಾ ! ಈ ಪಯಣದಲ್ಲಿ ಎಷ್ಟೋ ತಿರುವುಗಳು ಸಿಗ್ತವೆ, ಎಷ್ಟೋ ಜನ ಬಂದು ಇಳಿದು ಕಣ್ಮರೆಯಾಗಿ ಹೋಗ್ತಾರೆ ಅವೆಲ್ಲ ಒಂದು ಸಣ್ಣ ನೆನಪು ಅನ್ನಬಹುದು ಆದ್ರೆ ಈ ರೈಲು ಬಂಡಿಯಾ ಪಯಣದಲ್ಲಿ ಪರಿಚಯವಾಗಿ ಈ ಮನಸ್ಸಿನಲ್ಲಿ ಶಾಶ್ವತ ವಾಗಿ ಉಳಿದು ಕೊನೆಗೆ ಒಂದು ದಿನ ಈ ಬಿಳಿ ಹಾಳೆ ಮೇಲೆ ಅವರ ನೆನಪುಗಳನ್ನ ನನ್ನ ಈ ಕೈ ಗಳಿಂದ ದಾಖಲಿಸುವಂತೆ ಮಾಡ್ತಾರಲ್ಲ ಅಂತಹ ಒಬ್ಬ ಗೆಳತಿನ ನಾ ಹೇಗೆ ಮರೆಯಲಿ, No,Never ಸಾಧ್ಯವಿಲ್ಲದ ಮಾತು. ಆ ಗೆಳತಿನ ಮರೆಯೋದಕ್ಕೆ ಆಗೋಲ್ಲ ಏಕೆಂದರೆ ಅವಳು ನನ್ನ ನೆನಪಿನ ಮಡಿಲಲ್ಲಿ ನೆನಪಾಗಿ ಉಳಿದಿದ್ದಾಳೆ.

ನೆನಪಿನ ಅಂಗಳದಿ
ನೆನಪಿನ ರಂಗೋಲಿ ಇಟ್ಟು
ನೆನಪಿನ ಬಣ್ಣ ತುಂಬುವ ಮುನ್ನ
ನೆನಪಲ್ಲೇ ನೆನಪಾಗಿ ಹೋದ
"ನನ್ನ ಮುದ್ದು ಗೆಳತಿ ಭಾವನೆಗಳ ಒಡತಿ"

ನಿಜಾ, ನಾನು ಹೇಳ್ತಾ ಇರೋದು ನನ್ನ ನೆನಪುಗಳ ಮಡಿಲಲ್ಲಿ ಕೇವಲ ನೆನಪಾಗಿ ಉಳಿದಿರೋ ನನ್ನ ಗೆಳತಿ ಒಬ್ಬಳ ಬಗ್ಗೆ, ಗೆಳತಿ ಅಂದಾಕ್ಷಣ ದಿನಗಳ, ತಿಂಗಳುಗಳ ಅಥವಾ ವರ್ಷಗಳಿಂದ ಪರಿಚಯವಿರುವ ಗೆಳತಿಯ ಬಗ್ಗೆ ನಾ ಹೇಳ್ತಾ ಇಲ್ಲ, ಅವಳು ಅಮೂಲ್ಯವಾದ ಕೆಲವೇ ಕಲವು ಘಂಟೆಗಳ ಗೆಳತಿಯ ಬಗ್ಗೆ,
ಅಂದು ಭಾನುವಾರ, ಆಫೀಸ್ನಲ್ಲಿ ಎರಡು ದಿನ ರಜಾ ಹಾಕಿ ನಾನು ಬೆಂಗಳೂರಿನಿಂದ ದಾವಣಗೆರೆಗೆ ಬೆಳಗ್ಗೆ 6 ಘಂಟೆಯಾ ರೈಲಿಗೆ ಹೋಗ ಬೇಕಿತ್ತು , ಹೇಗೋ ರೈಲ್ವೆ ಸ್ಟೇಷನ್ ತಲುಪಿ ಕ್ವೀ ನಲ್ಲಿ ಟಿಕೆಟ್ ತೆಗೆದುಕೊಂಡು ಪ್ಲಾಟ್ ಫಾರ್ಮ್ ಗೆ ಬರುವಷ್ಟರಲ್ಲಿ ರೈಲ್ ಹೊರಟ್ಟಿತ್ತು ತಕ್ಷಣವೇ ನನ್ನ ಕಾಲುಗಳು ಸಕ್ರಿಯಗೊಂಡು ಓಡಲಾರಂಬಿಸಿದವು ಧೈರ್ಯಮಾಡಿ ಹತ್ತೇ ಬಿಟ್ಟೆ, ನಾನು ಹತ್ತುವುದನ್ನೇ ನೋಡುತ್ತಿದ್ದ ಕೆಲವರು ಹತ್ತಿದ ಮೇಲೆ ಸ್ವಲ್ಪ ಬುದ್ದಿವಾದ ಹೇಳಿದರು ಆ ಬುದ್ದಿವಾದದ ಮಾತುಗಳು ಇಷ್ಟೇ "ಚಲಿಸುವ ರೈಲುಗಾಡಿಯನ್ನು ಹತ್ತ ಬಾರದು" ಅಂತ, ಎಷ್ಟೇ ಅಗಲಿ ಆ ಮಾತುಗಳನ್ನು ಹೇಳಿದವರು ನನಗಿಂತ ಹಿರಿಯರು ಅಲ್ಲದೆ ನನ್ನ ಹಿತೈಷಿಗಳೆಂದುಕೊಂಡು ನಮ್ರತೆಯಿಂದ ಇನ್ನು ಮುಂದೆ ಈ ಥರ ತಪ್ಪು ಮಾಡೋದಿಲ್ಲ ಎಂದು ಹೇಳುತ್ತಾ ಬೋಗಿಯ ಒಳಗೆ ನುಸುಳಿದೆ, ಓಡಿ ಬಂದ ರಭಸಕ್ಕೆ ನನ್ನ ಬಾಯಲ್ಲಾ ಒಣಗಿ ಬಾಯಾರಿಕೆ ಯಾಗಿತ್ತು, ನೀರಿಗಾಗಿ ಬ್ಯಾಗಗೆ ಕೈ ಹಾಕಿ ವಾಟರ್ ಬಾಟಲ್ ತೆಗೆದುಕೊಂಡು ನೀರು ಕುಡಿಯೋಣವೆಂದು ಬಾಟಲ್ ಎತ್ತಿದೆ ಕಣ್ಣು ಮುಚ್ಚಿ ಮೊರ್ನಾಲ್ಕು ಗುಟುಕು ನೀರು ಕುಡಿದು ಒಂದು ನಿಮಿಷ ಅಕ್ಕ ಪಕ್ಕ ಕಣ್ಣಾಡಿಸಿದೆ ಆಗಲೇ ನನ್ನ ಬುದ್ಧಿಗೆ ಅರಿವಾಗಿದ್ದು ನಾನು ಹತ್ತಿರುವುದು ರೆಸೆರ್ವೇಶನ್ ಕೋಚ್ ಅಂತ ತಕ್ಷಣ ಕೈಯಲ್ಲಿದ್ದ ಬಾಟಲನ್ನು ಬ್ಯಾಗಿಗೆ ಹಾಕಿಕೊಂಡು ರೈಲಿನ ಬಾಗಿಲ ಬಳಿ ಹೋಗಿ ನಿಂತೆ ಅಷ್ಟರಲ್ಲಿ ಮಲ್ಲೇಶ್ವರಂ ಸ್ಟಾಪ್ ಬಂತು ಅಲ್ಲಿಂದ ಇಳಿದು ಕೊಂಡು ಹಿಂದಿನ ಜನರಲ ಕೋಚ್ ನಲ್ಲಿ ಹತ್ತಿಕೊಂಡೆ.
ಅದೇನೋ ಗಾದೆ ಇದೆಯಲ್ಲ "ಪಾಪಿ ಸಮುದ್ರಕ್ಕೊದ್ರು ಮೊಳಕಾಲ್ಮಠ ನೀರು" ಅಂದಂಗೆ ಆ ಬೋಗಿಯಲ್ಲಿ ಒಂದು ಸೀಟು ಖಾಲಿ ಇರ್ಲಿಲ್ಲ , ಏನ್ ಮಾಡೋದು ಪಾಲಿಗೆ ಬಂದಿದ್ದು ಪಂಚಾಮೃತ ಅನ್ನಕೊಂಡು ಬೋಗಿ ಒಳಗೆ ಹೋದೆ ಕೊನೇಲಿ ಒಂದೇ ಒಂದು ಸೀಟು ಖಾಲಿ ಇತ್ತು ಅಬ್ಬಾ ಅಂತು ಇಂತೂ ಸೀಟು ಸಿಕ್ತಲ್ಲ ಅಂತ ಖುಷಿಯಿಂದ ಹೋಗಿ ಕೂತುಕೊಂಡೆ, ಪಕ್ಕ ತಿರುಗಿ ನೋಡಿದೆ ನನ್ನ ಪಕ್ಕ ಒಂದು ಹುಡುಗಿ ಕೊತಿದ್ಲು, ನನಗೆ ಈ ಹುಡುಗಿರನ್ನ ಕಂಡ್ರೆ ಸ್ವಲ್ಪ ಸಂಕೋಚ ಹೇಗೋ ಅರ್ಜೆಸ್ಟ್ ಮಾಡ್ಕೊಂಡು ಕೂತುಕೊಂಡೆ, ಟೈಮ್ ಪಾಸ್ಗೆ ಅಂತ ತುಂಬಾ ದಿನಗಳ ಮೇಲೆ ಒಂದು ಕನ್ನಡ ನ್ಯೂಸ್ ಪೇಪರ್ ತಗೊಂಡಿದ್ದೆ ಅದನ್ನ ತೆಗೆದು ಓದುತ್ತ ಕುಳಿತೆ, ಯಾವ ಪೇಜ್ ನಲ್ಲಿ ನೋಡಿದ್ರು ಬರಿ ಕೊಲೆ, ಸುಲಿಗೆ,ದರೋಡೆ ಬಿಟ್ರೆ ಈ ಹಾಳು ರಾಜಕಾರಣದ ಬಗ್ಗೆನೇ ಇತ್ತು ಯಾಕೋ ಓದೋಕೆ ಇಂಟರೆಸ್ಟ್ ಬರಲಿಲ್ಲ ಆ ಪೇಪರ್ ನ ಎದರುಗಡೆ ಸೀಟಿನ ಕಂಬಿಯಲ್ಲಿ ಸಿಗಸಿ ಹಾಗೆ ಕಣ್ಣು ಮುಂಚಿಕೊಂಡು ಕೂತೆ, ಎಲ್ಲೋ ಯಾರೋ ಮಾತನಾಡಿಸಿದ ಹಾಗೆ ಆಯ್ತು , ರಾತ್ರಿ ಊರಿಗೆ ಹೋಗೋ ಸಡಗರದಲ್ಲಿ ನಿದ್ದೆ ಸರಿಯಾಗಿ ಮಾಡಿರಲಿಲ್ಲ ಹಾಗಾಗಿ ನಿದ್ದೆ ಬೇರೆ ಎಳಿತಾ ಇತ್ತು ಅಷ್ಟೊಂದು ಗಮನಕ್ಕೆ ತೆಗೆದುಕೊಳ್ಳಲಿಲ್ಲ, ಮತ್ತದೇ ಧ್ವನಿ "If You don't mind" ನಾನು ನಿಮ್ಮ ಪೇಪರ್ ಓದ ಬಹುದ ಅಂತ ನನ್ನ ಪಕ್ಕದಲ್ಲಿ ಕುಳಿತಿದ್ದ ಹುಡುಗಿ ಕೇಳಿದ್ಲು, ನನಾದ್ರು ಹೇಗೆ ಇಲ್ಲ ಅನ್ಲಿ ಹುಡುಗಿ ಬೇರೆ ಈ ಮನಸು ಕರಗಿ ನೀರಾಗಿ ಬಿಡ್ತು " ಅಯ್ಯೋ ಪೇಪರ್ ತಾನೇ ತಗೊಳ್ಳಿ " ಅಂತ ನಾನೇ ಎತ್ತಿ ಕೊಟ್ಟು ಮತ್ತೆ ಕಣ್ಣು ಮುಚ್ಚಿ ಕುಳಿತೆ ನಿದ್ದೆ ಹೇಗೆ ಬಂತೋ ಗೊತ್ತಿಲ್ಲ ಎಷ್ಟೋ ಹೊತ್ತಿನ ಮೇಲೆ ಎಚ್ಚರವಾಯಿತು ಆ ಹುಡುಗಿ ಇನ್ನು ಪೇಪರ್ ಓದುತ್ತಾನೆ ಇದ್ಲು "ದುಡ್ಡು ಕೊಟ್ಟು ತಗೊಂಡ ನಾನೇ ಓದ್ಲಿಲ್ಲ ಇವಳೇನು ಓದುತ್ತಿದ್ದಳಪ್ಪ" ಅಂತ ಮನಸ್ಸಿನಲ್ಲೇ ಅನ್ಕೊಂಡು ಆಕಳಿಸಿದೆ ಅಷ್ಟರಲ್ಲಿ ಆ ಹುಡುಗಿ ಏನ್ ಸರ್ ನಿದ್ದೆ ಆಯ್ತಾ ಅಂತ ಕೇಳ್ತಾ ಪೇಪರ್ ಮಡಚಿ ನನ್ನ ಕೈಗೆ ಕೊಟ್ಟು ಥ್ಯಾಂಕ್ಸ್ ಹೇಳಿದ್ಲು ಆಗ ನಾನು ಪ್ರತಿಯಾಗಿ ಆಯ್ತು ಮೇಡಂ ನಿಮ್ಮದು ನಿದ್ದೆ ಆಯ್ತಾ ಅಂತ ಕೇಳಿದೆ? ಆ ಹುಡುಗಿಗೆ ಸ್ವಲ್ಪ ಗಲಿಬಿಲಿ ಆಯ್ತು ಅನಿಸುತ್ತೆ, ನಂತರ ನಗ್ತಾ ಹ್ಹೋ..... ಆಯ್ತು ನಿನ್ನೆ ರಾತ್ರಿ ಅಂತ ಹೇಳಿದ್ಲು ನಾನು ಮತ್ತೇನು ಮಾತನಾಡ್ಲಿಲ್ಲಾ ಆಗ ನೀವು ತುಂಬಾ ಚನ್ನಾಗಿ ಕಾಮಿಡಿ ಮಾಡ್ತೀರಾ ಕಣ್ರೀ ಅಂದ್ಲು, ನಾನು ಕಾಮಿಡಿ ಎಲ್ಲಿ ಮಾಡ್ದೆ ಅಂದೆ. ಮತ್ತೆ ಇನ್ನೆನ್ರಿ ನಾವು ಯಾರನ್ನಾದ್ರು ಊಟ ಆಯ್ತಾ ಅಂತ ಕೇಳಿದ್ರೆ ಹ್ಹೋ ,,,,,, ಆಯ್ತು ನಿಮ್ಮದು ಆಯ್ತಾ ಅಂತ ಕೇಳ್ತಾರೆ ಆದರೆ ನಿಮಗೆ ನಿದ್ದೆ ಆಯ್ತಾ ಅಂತ ಕೇಳಿದ್ರೆ ನಿಮ್ಮದು ಆಯ್ತಾ ಅಂತ ಕೇಳ್ತಿರಲ್ಲ ಅದು ಕಾಮಿಡಿ ಅಲ್ವ! ನನಗೆ ನಗುನೆ ತಡೆಯೋಕೆ ಅಗ್ತಾ ಇಲ್ಲಾ ಅಂತ ಒಂದೇ ಉಸಿರಿನಲ್ಲಿ ಹೇಳಿ ಬಿಟ್ಲು. ಅಲ್ಲಿಂದ ಶುರುವಾಯ್ತು ನಮ್ಮಿಬ್ಬರ ಪರಿಚಯ ನನ್ನ ಬಗ್ಗೆ ಆ ಹುಡುಗ ಎಲ್ಲಾ ತಿಳಿದುಕೊಂಡಳು ನಾನು ಏನ್ ಮಾಡ್ತಾ ಇದೀನಿ?, ಎಲ್ಲಿರೋದು?,ಯಾವ ಊರು? ಅಷ್ಟೇ ಏಕೆ ನನ್ನ ಮನೇಲಿ ಯಾರ್ಯರು ಇದ್ದಾರೆ? ಅಂತ ಕೇಳಿ ತಿಳಿದು ಕೊಂಡಳು ಅವಳ ಅಷ್ಟೋ ಪ್ರೆಶ್ನೆಗಳಿಗೆ ಉತ್ತರ ಕೊಟ್ಟು ಕೊಟ್ಟು ಸುಸ್ತಾಗಿ ಬಿಟ್ತು, ಅಲ್ಲಿತನಕ ಅವಳನ್ನ ಅಷ್ಟೊಂದು ಸರಿಯಾಗಿ ನೋಡಿರಲಿಲ್ಲ ಅವಳ ಮುಖದಲ್ಲಿ ಎಷ್ಟೋ ಮುಗ್ದತೆ ಇತ್ತು ಅಂದ್ರೆ " ಬಿಳಿ ಇರೋದೆಲ್ಲ ಹಾಲು ಅಂತ ನಂಬಿರೋ ಮಗುವಿನ ಮನಸ್ಸು " ಅಂತಹ ಮನಸ್ಸಲ್ಲಿ ಎಲ್ಲೋ ಒಂದು ಕಡೆ ಹೇಳಲಾರದಷ್ಟು ದುಃಖ ತುಂಬಿದೆ ಅಂತ ಅವಳ ಮುಖವನ್ನು ದೃಷ್ಟಿಸಿ ನೋಡಿದಾಗಲೇ ನನಗೆ ಗೊತ್ತಾಗಿದ್ದು. ಯಾರನ್ನು ನಾನು ಅವರ ಜೀವನದ ಬಗ್ಗೆ ಕೇಳಿದವನು ಅಲ್ಲ ಆದ್ರೆ ಅವತ್ತೆಕು ನನ್ನ ಮನಸ್ಸು ತಡೆಯಲಿಲ್ಲ ನಾನೇ ಕೇಳಿಬಿಟ್ಟೆ

ನಗುವ ಮೊಗದ ಹೊವಲ್ಲಿ
ಮಾತು ಮಾತಿಗೂ ಯಾಕಿಷ್ಟು ಅಸಮದಾನ !
ಕೇಳು ಗೆಳತಿ ಹೇಳಬೇಕೆ
ನಾನು ಏನಾದರು ಸಮಾದಾನ !
ಹೇಳಿಕೊಳ್ಳೋ ಅಂತ ದುಃಖ ಏನು ಇಲ್ಲ, ಎಲ್ಲ ಹೆಣ್ಣಿಗೆ ಈ ವಯಸ್ಸಲ್ಲಿ ಎದುರಾಗೋ ಒಂದು ದೊಡ್ಡ ಸಮಸ್ಯೆ ನನಗು ಈಗ ಎದುರಾಗಿದೆ ಅದರಲ್ಲೂ ಈ ಮದ್ಯಮ ವರ್ಗದ ಜನರಿಗೆ ಈ ಸಮಸ್ಯೆ ಬರಬಾರದು ಅಂತ ಹೇಳಿ ಸ್ವಲ್ಪ ಹೊತ್ತು ಸುಮ್ಮನೆ ಕೂತಳು, ಮತ್ತೆ ನಾನು ಮಾತನಾಡಿದೆ ಏನಾದ್ರೂ ಮನೆಯಲ್ಲಿ ತೊಂದ್ರೆ ಇದೇನಾ ? ಸಮಸ್ಯೆ ಅಂದ್ರೆ ಯಾವರೀತಿಯದು ? ಅಂತ ಕೇಳಿದೆ, ಆಗಲೇ ಬಿಚಿಟ್ಟಿದ್ದು ನನ್ನ ಗೆಳತಿ ತನ್ನ ಭಾವನೆಗಳ ಒಳ ನೋವನ್ನ

ಗೆಳತಿ : ನಾನು ಇನ್ನು ಓದುತ್ತ ಇದೀನಿ ಅಕ್ಕನಿಗೆ ಈಗಾಗಲೇ ಮಧುವೆ ಮಾಡಿ ಎರಡು ವರ್ಷಗಳಾಯ್ತು ನನಗೆ ಒಬ್ಬಳು ತಂಗಿ ಬೇರೆ ಇದಾಳೆ ಇನ್ನು ಚಿಕ್ಕವಳು ಮನೆಯಲ್ಲಿ ಅಪ್ಪ ಅಮ್ಮ ಎಲ್ಲರು ಚನ್ನಾಗಿದಿವಿ. ಆದ್ರೆ ,,,,,!!!

ನಾನು : ಆದ್ರೆ ಇನ್ನೇನು ಎಲ್ಲ ಚನ್ನಾಗಿದ್ದಿರ ಇಲ್ಲಿ ಸಮಸ್ಯೆ ಆದರು ಏನು ?

ಗೆಳತಿ : ಮಧುವೆ............... ಮಧುವೆ............. ಇದೆ ಒಂದು ದೊಡ್ಡ ಸಮಸ್ಯೆ ಆಗಿದೆ ರೀ

ನಾನು ಮೊದ್ಲೇ ತಲೆಯಲ್ಲಿ ಹುಳ ಬಿಟ್ಕೊಂಡಿದ್ದೆ ಇವಳು ಹೇಳಿದ್ದು ಕೇಳಿ ನನಗೆ ಚನ್ನಾಗಿದ್ದ ತಲೆ ಗಿರಗಿರ ಅಂತ ತಿರಗ್ತಾ ಇತ್ತು ! ಅಲ್ಲ ರೀ ನಮ್ಮೂರಲ್ಲಿ ಎಲ್ಲ ಹುಡುಗಿರು ಮಧುವೆ ಅಂದ್ರೆ ಎಷ್ಟು ಖುಷಿಯಾಗಿರ್ತರೆ ನಿಮಗೇನ್ರಿ ಆಗಿದೆ ಮಧುವೇನೆ ಒಂದು ಸಮಸ್ಯೆ ಅಂತಿರಲ್ಲ ಯಾಕೆ ಹುಡುಗ ಚನ್ನಾಗಿಲ್ವ ?

ಗೆಳತಿ : ಹಾಗಲ್ಲ ರೀ ಹುಡುಗ ಚನ್ನಾಗಿದನೆ ಆದ್ರೆ ನಾನು ಇನ್ನು ಓದು ಬೇಕು ಅನ್ಕೊಂಡಿದ್ದೇನೆ ಆದ್ರೆ ನಮ್ಮ ಮನೇಲಿ ಎಲ್ಲರು ನನ್ನ ಮಧುವೆ ಬಗ್ಗೆನೇ ಯೋಚನೆ, ಈ ತಂದೆ ತಾಯಿಗಳೇ ಇಷ್ಟು ಮಗಳು ವಯಸ್ಸಿಗೆ ಬಂದ್ಲು ಅಂದ್ರೆ ಸಾಕು ಮೊದ್ಲು ಯೋಚನೆ ಮಾಡೋದೇ ಮಧುವೆ ಬಗ್ಗೆ , ನಮ್ಮ ಭಾವನೆಗಳಿಗೆ ಇಲ್ಲಿ ಬೆಲೆ ಇಲ್ಲ, ಒಂದು ರೀತಿ ಇದರಲ್ಲಿ ಅವರದು ತಪ್ಪೇನು ಇಲ್ಲ ಎಲ್ಲ ಈ ಬಡತನ. ಅದಕ್ಕೆ ಹೇಳಿದ್ದು ಹುಟ್ಟಿದ್ದರೆ ಈ ಮದ್ಯಮ ವರ್ಗದಲ್ಲಿ ಹುಟ್ಟುಬಾರ್ದು ಒಂದುವೇಳೆ ಹುಟ್ಟಿದ್ರು ಹೆಣ್ಣಾಗಿ ಮಾತ್ರ ಹುಟ್ಟುಬಾರ್ದು (ಕಣ್ಣಿನಲ್ಲಿ ತಡೆಯಲಾಗದ ಕಣ್ಣಿರು) ನಾನು ಹೋಗ್ಲಿ ಬಿಡಿ ಇದೆಲ್ಲ ಸಾಮಾನ್ಯ ಅಂತ ಸಮಾದಾನ ಮಾಡಿದೆ.

ಜೀವನ ಒಂದು ತೊಗುಯ್ಯಲೇ
ಮರೆಯಬೇಡಮ್ಮ
ಬಾಳಲಿ ಕದನ ನಿಲ್ಲದ ಪಯಣ
ತಾಳ್ಮೆ ಬೇಕಮ್ಮ !

ಇದು ನೆನ್ನೆ ಮೊನ್ನೆಯ ಸಮಸ್ಯೆ ಅಲ್ಲ ಯಾವಾಗ ಹೆಣ್ಣು ಈ ಭೂಮಿ ಮೇಲೆ ಕಾಲಿಟ್ಲೋ ಅಂದಿನಿಂದ ಇಂದಿನಹೊರೆಗೂ ಈ ಬಡತನ, ವರದಕ್ಷಿಣೆ, ಕಣ್ಣಿರು ಅವಳ ಬೆನ್ನ ಹಿಂದೇನೆ ಬಂದಿದೆ ಅಲ್ವ ! ಇಲ್ಲಿ ನಾನಾದರು ಬರಿ ಮಾತುಗಳಿಂದ ಸಮಾದಾನ ಮಾಡಿ ಸಾಂತ್ವನ ಹೇಳ ಬಹುದು ಆದ್ರೆ ಈ ಸಮಸ್ಯೆ ಅನ್ನೋ ಸಮಸ್ಯೆಗಳನ್ನ ಕೊನೆಗಾಣಿಸೋಕೆ ಆ ಬ್ರಮ್ಹನಿಂದಲೂ ಆಗೋಲ್ಲ ಅನಿಸುತ್ತೆ ಅಲ್ವ !

ಕೈಯಲಿದ್ದ ಕರ್ಚಿಪ್ ನಿಂದ ಕಣ್ಣಿರನ್ನು ಒರೆಸಿಕೊಂಡು ನನ್ನ ಆ ಮುದ್ದು ಗೆಳತಿ ಮತ್ತೆ ಮಾತನಾಡ ತೊಡಗಿದಳು. ಅದೇನೋ ಗೊತ್ತಿಲ್ಲ ಕಣ್ರೀ ನಿಮ್ಮ ನೋಡಿದ ತಕ್ಷಣ ನನ್ನ ಎಲ್ಲ ನೋವಗಳನ್ನ ನಿಮ್ಮ ಜೊತೆ ಶೇರ್ ಮಾಡ್ಕೊಬೇಕು ಅನಿಸಿತ್ತು ಅದಕ್ಕೆ ಎಲ್ಲ ನಿಮ್ಗೆ ಹೇಳ್ತಾ ಇದೀನಿ ಈ ಥರನಾದ್ರು ನಾನು ನನ್ನ ಭಾವನಗಳನ್ನ ನಿಮ್ಮ ಜೊತೆ ಹಂಚಿಕೊಂಡು ನನ್ನ ದುಃಖನ ಕಡಿಮೆ ಮಾಡಿಕೊಳ್ತಾ ಇದೀನಿ ಏನು ತಪ್ಪು ತಿಳ್ಕೊಬೇಡಿ ಅಂದ್ಲು ಅಷ್ಟರಲ್ಲಿ ಅವಳ ಸ್ಟಾಪ್ ಬಂತು ಕೈಯಲ್ಲಿ ಬ್ಯಾಗ್ ತಗೊಂಡು ಇಳಿದಳು ರೈಲ್ ಹೊರೋಡೋಕೆ ಇನ್ನು ಟೈಮ್ ಇತ್ತು ಅದಕ್ಕೆ ಜೊತೆಗೆ ನಾನು ಇಳಿದೆ ಮತ್ತೆ ಯಾವಾಗ್ ಸಿಗ್ತಿರ ಅಂತ ಕೇಳ್ದೆ ಅವಳು "ನನ್ನ ಕಡೆ ಒಮ್ಮೆ ನೋಡಿ ಮಂಜು ನೀವು ಯಾರು ಏನು ಅಂತ ಗೊತ್ತಿಲ್ಲ ಆದ್ರೆ ನಿನ್ನಂತ ಒಳ್ಳೆ ಹುಡುಗ ನನಗೆ ಸಿಗ್ತನೋ ಇಲ್ವೋ ! ನಿನಗೆ ಮಾತ್ರ ಒಳ್ಳೆ ಹುಡುಗಿ ಸಿಗ್ಲಿ ನಿಮ್ಮನ್ನ ನೋಡೋ ಋಣ ಇತ್ತು ಅಂದ್ರೆ ಮತ್ತೆ ನಾವಿಬ್ರು ಸಿಕ್ಕೆ ಸಿಗ್ತಿವಿ " ಅಮ್ಮನ್ನ ಚನ್ನಾಗಿ ನೋಡಿಕೊಳ್ಳಿ ನಿಮ್ಮ ಜೊತೆ ಕಳೆದ ಈ ಕೆಲವು ಕ್ಷಣಗಳು ನನ್ನ ಜೀವನ ಇರೋತನಕ ಮರೆಯೋಲ್ಲ (ನಿಲ್ಲದ ಕಣ್ಣಿರು). ಅಷ್ಟರಲ್ಲಿ ರೈಲ್ ಹೊರಡ್ತು ನನಗೆ ರೈಲ್ ಹತ್ತೋ ಮನಸ್ಸಿರಲಿಲ್ಲ ಕೈ ಕುಲಕಿ ಶುಭಕೋರಿ ಮತ್ತೆ ಮೆಲ್ಲನೆ ದ್ವನಿಯಲ್ಲಿ "ನೀವು ಎಲ್ಲೇ ಇದ್ರೂ ಚನ್ನಗಿರಿ ನಿಮ್ಮ ಮುಂದಿನ ಜೀವನ ಇನ್ನು ಚನ್ನಗಿರುತ್ತೆ " ದೇವರು ನಿಮ್ಮನ್ನ ಕಾಪಾಡ್ತಾನೆ ಅಂದೇ ರೈಲ್ ಹೋಗ್ತಾನೆ ಇತ್ತು ನಾನು ಇನ್ನು ಅವಳನ್ನೇ ನೋಡ್ತಾ ನಿಂತಿದ್ದೆ ಆಗ ಆ ಗೆಳತಿ ತನ್ನ ಕೈಯಲ್ಲಿದ ಬ್ಯಾಗ್ ಬಿಟ್ಟು ನನ್ನ ಕೈ ಹಿಡಿದು ರೈಲ್ ಹೋಗ್ತಾ ಇದೇ ಬೇಗ ಹತ್ತಿ ಅಂತ ನನ್ನ ತಳ್ಳಿದ್ಲು........

ಅದೇ ಕೊನೆ ನಾನು ಆ ಗೆಳತಿನ ನೋಡಿದ್ದು ಇಲ್ಲಿಗೆ ಒಂದುವರೆವರ್ಷ ಆಯ್ತು ಅನಿಸುತ್ತೆ ಆ ಗೆಳತಿ ಹೇಳಿದಂಗೆ ಮತ್ತೆ ಅವಳನ್ನ ನೋಡೋ ಋಣ ಬರುತ್ತಾ .................... ? ? ? ಬಂದೆ ಬರುತ್ತೆ ಅಂತ ಹೇಳ್ತಾ ಇದೇ ನನ್ನ ಮನಸ್ಸೂ ಅದಕ್ಕೆ ಇದುವರೆಗೂ ನಾನು ಅದೇ ರೈಲ್ ಗೆ ಹೋಗ್ತಾ ಇರ್ತೀನಿ ಒಂದಲ್ಲ ಒಂದು ದಿನ ಆ ಋಣ ಕೊಡಿ ಬಂದ್ರೆ ಅದೇ ರೈಲ್ ನಲ್ಲಿ ಅದೇ ಬೋಗಿನಲ್ಲಿ "ಅವಳ ಗಂಡನ ಜೊತೆ ನನ್ನ ಮುದ್ದು ಗೆಳತಿ ಕೈಯಲ್ಲೊಂದು ಮಗು" ನೋಡೇ ನೋಡ್ತೀನಿ ಇದು ಅವಳ ಕನಸ್ಸು ನನ್ನ ಕನಸ್ಸು ಕೊಡ ನಮ್ಮಿಬ್ಬರ ಸ್ನೇಹಮಯ ಕನಸು ನನಸು ಆಗುತ್ತೆ ಅಲ್ವ !

ನೆನಪಿನ ಅಂಗಳದಿ
ನೆನಪಿನ ರಂಗೋಲಿ ಇಟ್ಟು
ನೆನಪಿನ ಬಣ್ಣ ತುಂಬುವ ಮುನ್ನ
ನೆನಪಲ್ಲೇ ನೆನಪಾಗಿ ಹೋದ
"ನನ್ನ ಮುದ್ದು ಗೆಳತಿ ಭಾವನೆಗಳ ಒಡತಿ"
ಎಲ್ಲೇ ಇರು ಹೇಗೆ ಇರು ಚನ್ನಾಗಿರು
ಇಂತಿ ನಿನ್ನ ಕೆಲವೇ ಕೆಲವು ಘಂಟೆಗಳ
ಗೆಳೆಯ ನಿನ್ನ ಸ್ನೇಹದ ಸೇವಕ
ದೊಡ್ಡಮನಿ.ಎಂ.ಮಂಜು.

50 comments:

 1. ಗೆಳೆಯ ನಿನ್ನ ಭಾವನೆಗಳು ತುಂಬಾ ಚನ್ನಗಿಧೆ ..ಆದರೆ ಆ ಹುಡುಗಿ ಅಳುವ ಪ್ರಮೇಯ ಎಲ್ಲೇ ಬೇಕಿಲ್ಲ

  ಯಾಕೆ ಅಂದ್ರೆ ಪ್ರತಿಯೊಬ್ಬ ತಂದೆ ತಾಯಿಗೆ ತಮ್ಮ ಮಗಳಿಗೆ ಒಂದು ಭವಿಷ್ಯ ರೂಪಿಸುವ ಗುರಿ ಇರುತೆ

  ಅವರು ಸಹ ಅದೇ ಕೆಲಸವನ್ನು ಮಾಡಿದರೆ ...ಅವಳಿಗೆ ಇಸ್ಟ ಇಲ್ಲ ಬೇಗ ಮದುವೆ ಅಗೊದಿಕ್ಕೆ ಅಂದ್ರೆ
  ಅವರ ಮನೆಯಲ್ಲಿ ಕುಳಿತು ಮಾತನಾಡ ಬಹುದಿತ್ತು ..ಅಳುವಿನ ಸಿರಿ ಯಾಕೆ ??
  ಹುಡುಗಿರೆಲ್ಲ ಹೇಗೆ ..ಅವಳೊಬ್ಬಳು ಮಾತ್ರವಲ್ಲ
  ಯಾವುದು ಏನೆ ಅಗಲಿ ನಿನ್ನ ಗೆಳತಿ ಮತ್ತೆ ನಿನ್ನ ಬೇಟಿ ಮಾಡಲಿ


  ಇಂತಿ ನಿನ್ನ ಗೆಳೆಯ
  --------------
  ಬಾಬು ಯಾದವ್

  ReplyDelete
 2. ತುಂಬಾ ಸೊಗಸಾದ ಅನುಭವ ಮಂಜು....ಕಂಡಿತ ನಿನ್ನ ನಂಬಿಕೆ ಹುಸಿಯಾಗಲಾರದು....! ಒಳ್ಳೆಯ ಮನಸಿರೋ ಪ್ರತಿ ಜೀವಿಗೂ ಒಳ್ಳೆಯದಾಗಲೆ ಬೇಕು.....!!

  ReplyDelete
 3. ಬಾಬು ಯಾದವ್ ತುಂಬಾ ಧನ್ಯವಾದ ನಿನ್ನ ಅನಿಸಿಕೆ ತಿಳಿಸಿದಕ್ಕೆ

  ನೀನು ಹೇಳೋದರಲ್ಲಿ ಅರ್ಥ ಇದೆ ಆದ್ರೆ ಆ ಗೆಳತಿ ಎಲ್ಲವನ್ನು
  ಮನೆಯವರೊಂದಿಗೆ ಹೇಳಿಕೊಂಡಿದ್ದಾಳೆ ಆಗಲು ಅವಳ ಭಾವನೆಗಳಿಗೆ
  ಬೆಲೆ ಇಲ್ಲ ಅಂತ ಗೊತ್ತಾದ ಮೇಲೆ ಅವಳಾದರು ಏನು ಮಾಡಿಯಾಳು
  ಎಲ್ಲ ಮುಗಿದ ಮೇಲೆ ಹೆಣ್ಣಿಗೆ ಈ ಸಮಾಜದಲ್ಲಿ ಉಳಿಯೋದು
  ಕಣ್ಣಿರು ಒಂದೇ ಅಲ್ವ !

  ReplyDelete
 4. ಧನ್ಯವಾದಗಳು ರವಿ ಅವರೇ !

  ನೀವು ಹೇಳಿದ್ದು ನಿಜ ಆದ್ರೆ ಆ ಸಿಹಿ ಸುದ್ದಿನ ಮತ್ತೆ ನನ್ನ ಬ್ಲಾಗ್ ನಲ್ಲಿ ಹಾಕ್ತೀನಿ !

  ReplyDelete
 5. manju in this comp kannad font not supporting ,some how i red it ,
  good narration of ur xpeerience ellu bore aagothara kuydilla atishaya anisde idru(yake andre iduvaregu jeevanadalli ommenu bhetiyaagade clse aagiro eshto jana nanjote frnds agidare including u ) olle parichaya aa friend ship uluskodiddre chenda ittu

  aa gelati matte sikki ninna matadisdaga mattondu olle baraha barutte anno nabikeli -anikethana

  ReplyDelete
 6. Yenri Manju avre nimge a hudgi siktare antha nimge nambike idheya, alla ree nimge a hudgi maduve hagi 1 magu jothene sigli antha yak ankotira. .

  ReplyDelete
 7. ಬಹಳ ಚೆನ್ನಾಗಿದೆ ನನಗಂತು ಎಲ್ಲೋ ದೂರದಿ ಹೋದ ಅನುಭವ .ನಮ್ಮ ಜೀವನದಲ್ಲಿ ಇಂಥಹ ಗೆಳತಿ ಗೆಳೆಯರು ಬೇಕು. "ಒಂದೇ ಬಾರಿ ನನ್ನ ನೋಡಿ ಮಂದ ನಗಿ ಹಂಗ ಬೀರಿ ಹೋದ ಆ ಹುಡುಗ" , ನಿನ್ನ ಸಮಾಧಾನದಲ್ಲಿ ತನ್ನ ಬದುಕಿನ ಕೆಲ ಕ್ಷಣ ಕಂಡ ಆಕೆಯ ಬದುಕಿನ ಕಂಗಳಲ್ಲಿ , ಬದುಕಿನ ಪ್ರೀತಿ,ಭರವಸೆ,ನಿರಾಸೆ ಗಳಿವೆ, ಆ ಗೆಳತಿ ನಿನಗೆ ಮತ್ತೆ ಸಿಗಬಾರದು ಎಂದು ನನ್ನ ಅಸೆ ಏಕೆಂದರೆ ಹೋದವರು ಕೇವಲ ನೆನಪಾಗಿ ಅಷ್ಟೇ ಉಳಿಯಬೇಕು ,ಮತ್ತೆ ಕಾಣಬಾರದು ಅಲ್ಲಿ ಬದುಕಿನ ಅಸಂಗತ ಕ್ಷಣಗಳು ಭಾವನೆಯ ಸಿಂಹಾಸನದ ಮೇಲೆ ನೆನಪಿನ ಮಣಿ ಮಾಲೆಯಲ್ಲಿ ರಾ ರಾ ಜಿಸುವುದೇ ಅನುಪಮ ಆನಂದ.ದಿಗಂತ ದಚೆ ಕಾಣುವ ಚುಕ್ಕಿ ಚಂದ್ರನ ಬಿಂಬದಂತೆ ," ಯಾವ ರಾಗಕೋ ಏನೋ ನನ್ನೆದೆ ವೀಣೆ ಮಿಡಿಯುತ ನರಳಿದೆ"

  ReplyDelete
 8. ಧನ್ಯವಾದ ಗೆಳೆಯ Anikethana,

  ನಿಜ ಗಳೆಯ ನನ್ನ ನಿನ್ನ ಸ್ನೇಹ ಇದುವರೆಗೂ ಫೋನ್ ನಲ್ಲೆ ಒಮ್ಮೆನು ಭೇಟಿ ಯಾಗಿಲ್ಲ ಅದ್ರು ಸ್ನೇಹ ಸ್ನೇಹ ಅಲ್ವ ಒಂದಲ್ಲ ಒಂದು ದಿನ ನಿನ್ನ ಭೇಟಿ ಆಗ್ತೀನಿ ಯಾಕಂದ್ರೆ ನಿನ್ನ Contact no. ನನ್ನ ಹತ್ರ ಇದೇ ನನ್ನ contact no ನಿನ್ನ ಹತ್ರ ಇದೇ ಆದ್ರೆ ಅವತ್ತು ನನ್ನಲ್ಲಿ ಯಾವದೇ contact no.ಇರ್ಲಿಲ್ಲ ಆ ಗೆಳತಿ ಹತ್ರನು ಯಾವದೇ no ಇರ್ಲಿಲ್ಲ ಇದಿದ್ದರೆ ಇವತ್ತು ಈ ನನ್ನ ಅವಳ ನೆನಪಿನ ಪುಟ್ಟ ಬರಹ ಹುಟ್ಟುತ ಇರ್ಲಿಲ್ಲ ಅನಿಸುತ್ತೆ .

  ReplyDelete
 9. nimma bavane galu adbuta vagide edu kate annodakinta ondu bava na cr8 madutte nimma jote kaala kaledavara matu edara bagge nimma hedeyalada pisunudigalu sakkatgide!!.... pratisalau mudiro sannivesha hodidare kanna mundene kampisaidange hagutte really chennagi barddira neev ankondiro haage avru nimge matte sikke sikke siktare!! Gud Luk

  ReplyDelete
 10. ಮಂಜು
  ತುಂಬಾ ಚೆನ್ನಾಗಿ ಬರೆದಿದ್ದಿರಾ
  ಆ ಭಾವನೆಗಳ ವ್ಯಕ್ತಪಡಿಸುವ ಶೈಲಿ ಸೊಗಸಾಗಿದೆ

  ReplyDelete
 11. Wow nice post manju....

  its really amazing....

  Nimage avalu mattomme sigtale anno nambike nanagu kooda ide.....

  thnx for sharing with us....

  ReplyDelete
 12. illi kannada option illa so nanu english nalli massage madiiddene ,nimma e ondu story thumba chennagi mudibandidhe ,edhe rithi prathiobbara jeevanadalli baruthe adare nimma aghe ah gatanegallannu e rithi baraha roopadalli tilisalu sadyavilla
  ,

  ene agali thumba chebnnagidhe,, thumba danyavadagalu nimma e ondu gataneyannu nammellarondi hanchi kondidakke,,

  nimma geleyua
  venkatachala

  ReplyDelete
 13. Great Manju

  E nimma Gelathi mathomme nimage sigali antha aa devaralli kelikollona Haagu aa nimma gelathi yella kashthagalu doravagali antha kelikollona,

  your friend M Sree

  ReplyDelete
 14. Great Manju

  E nimma Gelathi mathomme nimage sigali antha aa devaralli kelikollona Haagu aa nimma gelathi yella kashthagalu doravagali antha kelikollona,

  your friend M Sree

  ReplyDelete
 15. ನಿಮ್ಮ ಮುದ್ದು ಗೆಳತಿ ಮತ್ತೆ ಸಿಗಲಿ ನಿಮ ಕನಸುಗಳು ಎಲ್ಲ ನನಸಾಗಿ ಒಂದು ರೀತಿಯ ಸಮದಾನವು ನಿಮಗೆ ಸಿಗಲಿ, ಕಂಡಿತ ನಿಮ್ಮ ಕನಸು ನನಸಾಗುವ ಸಮಯ ಕೆಲವೇ ದೊರದಲ್ಲಿದೆ ಕಂಡಿತವಾಗಿಯು ನಿಮ್ಮ ಅ ಮುದ್ದು ಗೆಳತಿ ನಿಮ್ಮ ಇಷ್ಟದಂತೆ ಮತ್ತೆ ಸಿಗಲಿ ಎಂದು ಹರಾಯ್ಸುವ ನಿಮ್ಮ ಗೆಳೆಯ ರಾಕೇಶ್ ಗೌಡ ಕನ್ನಡಿಗ

  ReplyDelete
 16. ರಾಜೇಶ್ ..... ಮೊದ್ಲು ನಿಮಗೆ ಧನ್ಯವಾದ ಹೇಳ್ತಾ ಇದೀನಿ !

  ಶಭಾಷ್..... ರಾಜೇಶ್ ತುಂಬಾ ಒಳ್ಳೆಯ ಪ್ರಶ್ನೇನೆ ಕೇಳಿದ್ದಿರ ತುಂಬಾ ಸಂತೋಷ !
  ಅಂದು ನನಗೆ ಸಿಕ್ಕ ಆ ಗೆಳತಿ ಜೀವನದಲ್ಲಿ ತಾನು ಇನ್ನು ಓದ ಬೇಕು ಏನಾದ್ರು ಸಾದಿಸ್ಬೇಕು ಅನ್ನೋದು ಅದು ಮನೆಯವರಿಂದ ಸಾದ್ಯ ಇಲ್ಲಾ ಅದೇ ಜೊತೆಗೆ ಇರೋ ಗಂಡನಾದ್ರು ಅವಳಿಗೆ ಒಂದು ಒಳ್ಳೆ ದಾರಿ ಆಗ್ತಾನೆ ಅನ್ನೋ ಒಂದು ನಂಬಿಕೆ ಅಸ್ಟೇ ! ಅದಕ್ಕೆ ನಾನು ಅವಳ ಜೊತೆ ಅವಳ ಗಂಡ ಮತ್ತು ಮಗುನ ನೋಡ್ಬೇಕು ಅನ್ಕೊಳ್ಳೋದು...

  ReplyDelete
 17. ಒಹ್ ! Rj Chaitra ನೀವು ಇಲ್ಲಿ !
  ನೀವು ನನ್ನ ಬ್ಲಾಗ್ ಇದಿರೋದೆ ನನಗೆ ದೊಡ್ಡ ಖುಷಿ !
  ಆ ಖುಷಿಯಲ್ಲಿ ನಿಮ್ಮ ಅನಿಸಿಕೆಗೆ ನಾನು ಏನು ಹೇಳ್ಬೇಕು ಗೊತ್ತಾಗ್ತಾ ಇಲ್ಲಾ ! ತುಂಬಾ ತುಂಬಾ ಧನ್ಯವಾದಗಳು !

  ಆ ಗೆಳತಿ ಮತ್ತೆ ನನಗೆ ಸಿಗಬಾರದು ಅನ್ನೋ ನಿಮ್ಮ ಅಭಿಪ್ರಾಯಕ್ಕೆ ನಾನು ತಲೆಬಾಗುತ್ತೇನೆ !
  "ಬದುಕಿನ ಅಸಂಗತ ಕ್ಷಣಗಳು ಭಾವನೆಯ ಸಿಂಹಾಸನದ ಮೇಲೆ ನೆನಪಿನ ಮಣಿ ಮಾಲೆಯಲ್ಲಿ ರಾ ರಾ ಜಿಸುವುದೇ ಅನುಪಮ ಆನಂದ.ದಿಗಂತ ದಚೆ ಕಾಣುವ ಚುಕ್ಕಿ ಚಂದ್ರನ ಬಿಂಬದಂತೆ" ಅನ್ನೋ ನಿಮ್ಮ ಮಾತು ಮನಸ್ಸಿಗೆ ತುಂಬಾ ಹಿಡಿಸ್ತು. ನನ್ನ ನಾಲ್ಕು ಸಾತ್ವನದ ಮಾತುಗಳಲ್ಲಿ ಅವಳ ಬಾಳು ಸುಖಕರವಾಗಿದ್ದರೆ ಅಷ್ಟೇ ಸಾಕು !

  ನೆನಪಿನ ಮಡಿಲಲ್ಲಿ
  ನೆನಪಾಗಿ ಉಳಿದ
  ನೆನಪಿನ ಗೆಳತಿ
  ನೆನಪಾದಾಗ
  ನೆನಪಾದ ಹಾಡು
  "ಯಾವ ರಾಗಕೋ ಏನೋ ನನ್ನೆದೆ ವೀಣೆ ಮಿಡಿಯುತ ನರಳಿದೆ"

  ReplyDelete
 18. ತುಂಬಾ ಧನ್ಯವಾದಗಳು ಚೇತನ್ ರವರೆ ನಿಮ್ಮ ಅನಿಸಿಕೆ ಮತ್ತು ಹಾರೈಕೆಗೆ ! ಆಗಾಗ ಮತ್ತೆ ಇತ್ತ ಬರುತ್ತಾ ಇರಿ !

  ReplyDelete
 19. ತುಂಬಾ ಧನ್ಯವಾದಗಳು ಸಾಗರದಾಚೆಯ ಇಂಚರದ ಮಾಲಿಕರೆ !
  ಇಲ್ಲಿ ಅಲ್ಪನ ಅಲ್ಪ ಪ್ರಯತ್ನಕ್ಕೆ ಭಾವನೆಗಳು ವ್ಯಕ್ತ !

  ReplyDelete
 20. ಮೇಘ ತುಂಬಾ ಥ್ಯಾಂಕ್ಸ್ !

  ನನಗಿರೋ ನಂಬಿಕೆ ನಿಮಗೂ ಇದೇ ಅದರಲ್ಲ ಅದಕ್ಕೆ ಮತ್ತೊಂದು ಥ್ಯಾಂಕ್ಸ್ !

  ಭಾವನೆಗಳನ್ನ ನಿಮ್ಮ (ಫ್ರೆಂಡ್ಸ್ ) ಜೊತೆ ಹಂಚಿಕೊಳ್ದೆ ಯಾರ ಜೊತೆ ಹಂಚಿಕೊಳ್ಳೋದಕ್ಕೆ ಆಗುತ್ತೆ ಹೇಳಿ ?

  ReplyDelete
 21. ನಿಮಗೂ ಸಹ ತುಂಬು ಹೃದಯದ ಧನ್ಯವಾದಗಳು ವೆಂಕಟಾಚಲ ರವರೆ !
  ಸಮಯ ಸಿಕ್ಕಾಗ ಇತ್ತ ಬರುತ್ತಾ ಇರಿ !

  ReplyDelete
 22. ಧನ್ಯವಾದ ರಾಕೇಶ್ !

  ReplyDelete
 23. Thumba Channgi bardideeya manju,life nalli inta akasmika sehiyada anubhava,jeevanada ondu dina nenpagi kadtare,aganta yallru kadolla,navu namma lifenalli yeshto jananna beti agteevi,but kelavaru mattra mansali stiravagi huldu bidrare alla?
  addru ha nenapugalu 1 kashnakaddru nammge sehi nenapana tandu kodate.


  life thumba chikkdu kano manju,ondalla ondu dina sigbhavdu ha hudugi,sigdenu irbavd.nambike idkondideeya allva?ade jeevana so kandita ondu dina ha hudugi sike sigtare,ninnge nenpidashtu ha hudugige nenpirato illvo gottila,but ninnge nenpadaga ha hudugine e hudugi ansutala haga sigo kushi saku ansute ninnge allva manju,


  e sehiyada nenapana namma tanaka tandalla manju,adu ninu ha hudugige kodo,preethiya muddada gelatiya sehiyada nenapu,bavane ect

  ReplyDelete
 24. ದೀಪ ತುಂಬಾ ಸಿಹಿಯಾದ ನಿನ್ನ ಪ್ರತಿಕ್ರಿಯೆಗೆ ನಾನು ಏನು ಬರೀಬೇಕು ಅಂತ ಗೊತ್ತಾಗ್ತಾ ಇಲ್ಲಾ !
  ಹಾಗಂತ ಸುಮ್ನೆ ಇರೋಕು ಆಗಲ್ಲ ಆಮೇಲೆ ನೀನು ನನ್ನ ಮೇಲೆ ಜಗಳ ಕಾದ್ರೆ ಹ್ಹ ಹ್ಹ ಹ್ಹ ಹ್ಹ

  ನಿಜ ದೀಪ ಲೈಫ್ ತುಂಬಾ ಚಿಕ್ಕದು ಆದ್ರೆ ಅದು ಕೊಡು ಒಂದೊಂದು ಅನುಭವನು ದೊಡ್ಡದ್ದು ಅದನ್ನ ಮರೆಯೋಕೆ ಆಗುತ್ತ ? ಇಲ್ಲಾ ಅಲ್ವ !
  ಆ ಅನುಭವಗಳನ್ನ ಕಲೆ ಹಾಕ್ತ ಹಾಕ್ತ ಸಮಯ ಕಳೆಯುವಾಗ ಅನಿಸುತ್ತೆ ಜೀವನ ಅಂದ್ರೆ ಇದೇನಾ ಅಂತ !
  ನೂರಾರು ಜನ ಪ್ರತಿ ದಿನ ನಮಗೆ ಪರಿಚಯ ಆಗ್ತಾರೆ ಹೋಗ್ತಾರೆ ಆದ್ರೆ ಕೊನೆ ತನಕ ಉಳಿಯೋರು ಕೆಲವೊಬ್ರು ಮಾತ್ರ ಅದ್ರಲ್ಲಿ ಆ ಗೆಳತಿ ಒಬ್ಬಳು ನನಗೆ !

  ReplyDelete
 25. Manju good attempt,
  Story cehnnagide,,,kelavu sanna putta tappugalive saripadisinko
  shubha vaaagali

  ReplyDelete
 26. ಅಜಾದ್ ಸರ್ ತುಂಬಾ ಧನ್ಯವಾದಗಳು
  ತಪ್ಪು ಮಾಡೋದ್ರಲ್ಲಿ ನಾನು ಫಸ್ಟ್ ಅಂತ ನಿಮಗೆ ಗೊತ್ತು ! ಹ್ಹ ಹ್ಹ ಹ್ಹ
  ತಿದ್ದಿಕೊಳ್ತಿನಿ ಸರ್

  ReplyDelete
 27. ಮಂಜು ಅವ್ರೆ ನಿಮ್ಮದು ವಿಶಾಲವಾದ ಹೃದಯ ಕಣ್ರೀ

  ReplyDelete
 28. ಮಂಜು,
  ಭಾವನೆಗಳು ಚೆನ್ನಾಗಿ ಮೂಡಿ ಬಂದಿದೆ

  ReplyDelete
 29. ಮನ್ಜು ಅವರೆ,
  ಚೆನ್ನಾಗಿ ಬರೆದಿದ್ದೀರಿ..
  ಮತ್ತೂ ಬರೆಯುತ್ತಿರಿ.

  ReplyDelete
 30. ಅಬ್ಬಾ ನಿಮಗಾದ್ರು ಗೊತ್ತಾಯ್ತಲ್ಲ ನಂದು ವಿಶಾಲ ಹೃದಯ ಅಂತ ತುಂಬಾ ಧನ್ಯವಾದಗಳು ಮಲ್ಲೇಶ್ ರವರೆ !

  ReplyDelete
 31. ಧನ್ಯವಾದಗಳು ಸವಿಗನಸು ಬ್ಲಾಗ್ನ ಮಾಲಿಕರಿಗೆ !

  ReplyDelete
 32. ಧನ್ಯವಾದಗಳು ಮನಮುಕ್ತ ರವರಿಗೆ !
  ನಿಮ್ಮ ಆಗಮನ ಹೀಗೆ ಇದ್ದಾರೆ
  ಮತ್ತೆ ನಾನು ಬರೆಯುತ್ತೇನ.....
  ಬರೆಯುತ್ತ ಇರುತ್ತೇನೆ !

  ReplyDelete
 33. 'doddamanimanju' ಅವ್ರೆ..,

  ನೆನಪಿನ ಪುಟಗಳು ಎಷ್ಟುಚೆನ್ನ!

  ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ:http://manasinamane.blogspot.com/

  ReplyDelete
 34. ಧನ್ಯವಾದಗಳು ಗುರು ದೆಸೆ ಅವರೇ !

  ReplyDelete
 35. enantha helali manju innu naan ade feelingnalle idini kelav nenapu estondu kaadutte alva

  ReplyDelete
 36. ಹೌದು ಕಿರಣ್ ನೆನಪುಗಳು ಹಾಗೇನೆ ಅವು ಒಂಥರಾ ಪಾಪಸ್ಸ ಕಲಿ ಇದ್ದ ಹಾಗೆ ಮರುಭುಮಿಯನ್ನೇ ಬಿಡೋಲ್ಲ ಇನ್ನು ನಮ್ಮಣ್ಣ ಬಿಡ್ತವ ????

  ReplyDelete
 37. geleya,,ninna katha,niroopana shaili adbutha,,,,nijavaagiyu,,ninage,,matte,,aa hudugi sikke siguttale...ade nanna haarike...keep writing,,

  ReplyDelete
 38. haai, naanu jyothi antha... sumne hosa friends sigtareno antha check madta idde...sikke bitri... u r an interesting person kanri...idi blog odta kutre, ondu sundaravada kavite odi mugisida khushi, saviyada nidre madi edde freshness anubhava aitu...tumba thanks... keep it up......

  ReplyDelete
 39. Thank u ಚುಕ್ಕಿಚಿತ್ತಾರ & Sathya ravareeeeee :)

  Matte ittaa baruttiri

  ReplyDelete
 40. ಹಾಯ್ , ಜ್ಯೋತಿ
  ಸ್ನೇಹ ಬಯಸಿದಕ್ಕೆ ಮತ್ತೆ ನಿಮ್ಮ ಅನಿಸಿಕೆ ತಿಳಿಸಿದಕ್ಕೆ ನನ್ನ ಧನ್ಯವಾದ.
  ಮತ್ತೆ ಮತ್ತೆ ಇತ್ತ ಬರುತ್ತಿರಿ.

  ReplyDelete
 41. beautiful...........everybosy will forget if something happen like this but u still remember ........great i like sentimental guy like u ..........so nice of u

  ReplyDelete
 42. super manju....
  katheyallina a ondhu bhavane thumbha estta aythu. Manju ge a nenapina gelathi adhasttu bega sigli antha kelikolthene. super keep it up dear frnd keep it up.....


  rgrds
  pooja shetty

  ReplyDelete
 43. thank u very much Anonymous ! Next time nimma Name mention maadi

  ReplyDelete
 44. ಧನ್ಯವಾದಗಳು ಪೂಜಾರವರೆ !
  ಮಂಜು ಅಂದ್ರೆ ಭಾವನೆಗಳ ಲಹರಿ ಅಲ್ವ ! ಅದಕ್ಕೆ ಇಲ್ಲಿನ ಎಲ್ಲ ಭಾವನೆಗಳು ನಿಮಗೆ ಇಷ್ಟ ಆಗಿದೆ ಅನಿಸುತ್ತೆ ! :)

  ReplyDelete
 45. its nice sir u will definetly meet her..

  ReplyDelete
 46. @prajwini

  thank u for the comments :)

  ReplyDelete
 47. @sandeep ::-- thank u keep reading :)

  ReplyDelete