ಸತ್ಯವನ್ನೇ ನುಡಿಸು ಗುರುವೇ ನರವಿಲ್ಲದ ಜಿಹ್ವೆಯೋಳ್ ! ಸ್ಥಿರವಾಗಿ ನೆಲೆಸು ಗುರುವೇ ಮರ್ಕಟ ಈ ಮನದೊಳ್ !

Wednesday 22 December 2010

ಮರೀಚಿಕೆ...♥...♥...♥



ಮೊನ್ನೆ ಹಾವೇರಿಯಿಂದ ಪ್ರಭು ಅನ್ನೋರು ನನಗೆ ಕಾಲ್ ಮಾಡಿ ಕುಶಲೋಪರಿ ವಿಚಾರಿಸಿದರು ತುಂಬಾ ಚನ್ನಾಗಿ ಮಾತಾಡಿದ್ರು ಮಾತಾಡ್ತಾ ಮಾತಾಡ್ತಾ ಏನ್ ದೊಡ್ಡಮನಿ ನಿಮ್ಮ ಮುಂದಿನ ಲೇಖನ ಯಾವ್ದು ಅಂತ ಕೇಳಿದ್ರು ನಾನು ಹೇಳ್ದೆ ಇಲ್ಲಾ ಸರ್ ಸ್ವಲ್ಪ ಬ್ಯುಸಿ ಆಗಿದಿನಿ ಯಾವದೇ ಬ್ಲಾಗ್ ಕಡೆ ಮುಖಾ ಮಾಡಿಲ್ಲ ಟೈಮ್ ಸಿಕ್ಕಾಗ ಮಾಡ್ತೀನಿ ಅಂದೇ ಸರಿ ಸರ್ ಆದಷ್ಟು ಬೇಗ ಮುಖಾ ಮಾಡಿ ಅಂತ ಹೇಳಿದ್ರು ಆಯ್ತು ಅಂದೆ ಆಮೇಲೆ ಅವರೇ ವಿಷಯಕ್ಕೆ ಬಂದ್ರು,


ಮಂಜು ಈ ಬಿಕ್ಕಳಿಕೆ ಬಂದ್ರೆ ಯಾರೋ ನಮ್ಮನ್ನ ನೆನಪು ಮಾಡಿಕೊಳ್ತಾ ಇದಾರೆ ಅಂತಾರೆ ಇದೆಲ್ಲ ನಿಜ ಅನಿಸುತ್ತಾ ನಿಮಗೆ ??????

ಪ್ರಭು ಕೇಳಿದ್ದು ಈ ಪ್ರಶ್ನೆ ಈಗ ಉತ್ತರ ಹೇಳ್ಬೇಕು ಅಲ್ವ ನಾನು ಅವರಿಗೆ ಫೋನ್ ಹೇಳಿದ ಥರ ಇಲ್ಲಿ ಹೇಳಿದ್ರೆ ಚನ್ನಾಗಿರೋಲ್ಲ ನಾನು ನನ್ನ ಬ್ಲಾಗ್ ಸ್ಟೈಲ್ ನಲ್ಲೆ ಹೇಳ್ತಾ ಹೋಗ್ತೀನಿ ಸ್ವಲ್ಪ ಕಷ್ಟ ಆದ್ರು ಇಷ್ಟಪಟ್ಟು ಓದಿ...♥...♥...♥

ಮರೀಚಿಕೆ ಈಗ ಪ್ರಾರಂಭ ...♥ ...♥ ...♥

ಹೇಮಂತ :- ಲೇ ಮಂಜು ನೀರು ಕುಡಿಯೋ ಬಿಕ್ಕಳಿಕೆ ನಿಲ್ಲುತ್ತೆ

ಉಮೇಶ :- ಲೇ.. ಹೇಮಾ ಅವ್ನು ಒಂದಲ್ಲ ಹತ್ತು ಲೋಟ ನೀರು ಕುಡಿದರು ಅವನಿಗೆ ಆ ಬಿಕ್ಕಳಿಕೆ ನಿಲ್ಲೋಲ್ಲ ಬಿಡೋ

ಹೇಮಂತ :- ಯಾಕೆ ನಿಲ್ಲಲ್ಲ ?

ಉಮೇಶ :- ಅದು ಅವನಿಗೆ ನನಗೆ ಮಾತ್ರ ಗೊತ್ತು...!

ಹೇಮಂತ :- ನನ್ನ ಮಗನೆ ತಲೇಲಿ ಹುಳ ಬಿಡಬೇಡ ಸರಿಯಾಗಿ ಹೇಳು ಅದೇನು

ಉಮೇಶ :- ನೀರು ಕುಡಿದರೆ ನಿಲ್ಲೋ ಬಿಕ್ಕಳಿಕೆ ಅಲ್ಲಾ ಅವನಿಗೆ ಬಂದಿರೋದು

ಹೇಮಂತ :- ನೀರು ಕುಡಿದನೆ ಬಿಕ್ಕಳಿಕೆ ಹೇಗೋ ನಿಲ್ಲುತ್ತೆ

ಉಮೇಶ :- ಅವನು ನೀರು ಕುಡಿದನೆ ಬಿಕ್ಕಳಿಕೆ ನುಲ್ಲುಸ್ತಾನೆ ಗೊತ್ತಾ

ಹೇಮಂತ :- ಒಹ್ ಹೌದ ಮತ್ತೆ ನಿಲ್ಲಿಸೋಕೆ ಹೇಳು ನೋಡೋಣ

ಉಮೇಶ :- ಸರಿ ನೋಡು ಈಗ, ಮಂಜಾ ಸಾಕು ನಿಲ್ಸೋ

(ಹ್ಹ ಹ್ಹ ಹ್ಹ ಅವಾಗ ನನ್ನ ಬಿಕ್ಕಳಿಕೆ ನಿಲ್ತು )

ಹೇಮಂತ :- ಲೋ ಹೇಗೋ ಸಾಧ್ಯ ಇದೆಲ್ಲ.

ನಾನು :- ಲೋ ಇಷ್ಟೇ ಕಣೋ ನಿನಗೆ ಬಿಕ್ಕಳಿಕೆ ಬಂದಾಗ ನಿನ್ನ ಯಾರೋ ನೆನಸಿಕೊಳ್ತಾ ಇರ್ತಾರೆ ಆಗ ಅವರನ್ನ ನೀನು ನೆನಪು ಮಾಡಿಕೊಂಡು ಅವರ ಹೆಸರು ಮನಸಲ್ಲೇ ಮೆಲಕು ಹಾಕು ಸಾಕು ಇಮಿಡಿಯಟ್ ನಿಲ್ಲುತ್ತೆ ಅಷ್ಟೇ

ಹೇಮಂತ :- ನನ್ನ ಮಕ್ಳ ನನ್ನೇನು ಬಕ್ರ ಅಂದುಕೊಂಡ್ರ ಇಲ್ದೆ ಇರೋದನ್ನೆಲ್ಲ ಹೇಳಿ ಡ್ರಾಮ ಮಾಡ್ತಿರ

ಉಮೇಶ :- ಅಯ್ಯೋ ಇಲ್ಲಪ್ಪ ಅದು ನಿಜಾನೆ ನಾನು ಕೆಲವೊಂದು ಸರಿ ಅದೇ ಥರ ಟ್ರೈ ಮಾಡಿದಿನಿ

ಹೇಮಂತ :- ಇಷ್ಟಕ್ಕೂ ನಮ್ಮನ ಅವರೇ ನೆನಪಿಸಿಕೊಳ್ತಾ ಇದಾರೆ ಅಂತ ಹೇಗೆ ಗೊತ್ತಾಗುತ್ತೆ ? ? ?

ನಾನು :- ನೋಡು ಈಗ ನಿನಗೆ ಬಿಕ್ಕಳಿಗೆ ಬಂತು ಅಂತ ತಿಳ್ಕ್ಕೋ ಅವಾಗ ನಿನಗೆ ಮನಸಿಗೆ ತುಂಬಾ ಹತ್ತಿರ ಅನಿಸಿರೋರ್ನ ನೆನಪು ಮಾಡೋಕೆ ಅದಾಗ ಅದೇ ನಿಲ್ಲುತ್ತೆ

ಉಮೇಶ :- ಈ ಕರಿಯಾ ಮುಂಡಾನಾ ಯಾರು ನೆನಪು ಮಾಡಿಕೊಳ್ತಾರೆ ಬಿಡೋ ಬಿಕ್ಕಳಿಕೆ ಬರೋಕೆ
(ಹೇಮಂತ್ ಗೆ ನಮ್ಮ ಕಾಲೇಜ್ ಲೆಕ್ಚರ್ ಇಟ್ಟ ಹೆಸರು ಕರಿಯಾ ಮುಂಡಾ ಅಂತ ಯಾಕಂದ್ರೆ ಅಷ್ಟೊಂದು ಬ್ಲಾಕ್ ಇದ್ದ ಅವನು, ನನಗೆ ಆ ಹೆಸರಿನ ಅರ್ಥ ಇದುವರೆಗೂ ಗೊತ್ತಾಗಿಲ್ಲ ಬಟ್ ಕರೆಯೌದ್ ಮಾತ್ರ ಯಾರು ಬಿಟ್ಟಿಲ್ಲ)

ಹೇಮಂತ :- ಥೂ ನನ್ನ ಮಕ್ಳ ಹಾಳಾಗಿ ಹೋಗ್ರಿ

ಉಮೇಶ :- ನೀನು ಅದೇ ಆಗು

ಹೇಮಂತ :- ಹ್ಮಂ ಹೋಗ್ಲಿ ನೀನು ಬಿಕ್ಕಳಿಕೆ ಬಂದಾಗ ಯಾರನ್ನ ನೆನಪು ಮಾಡಿಕೊಳ್ತಿಯ ಅವರ ಹೆಸರು ಏನು ?

ನಾನು :- ಮರೀಚಿಕೆ..♥...♥...♥ ಅಂತ

ಹೇಮಂತ :- ಈ ಥರ ಹೆಸರು ಯಾರಾದ್ರೂ ಇಟ್ಕೋಳ್ತರ

ಉಮೇಶ :- ಯಾರು ಇಟ್ಟಿದಲ್ಲ ಅವನೇ ಇಟ್ಟಿರೋದು

ಹೇಮಂತ :- ಅಂದ್ರೆ ?

ಉಮೇಶ :- ನಿಂಗೆ ನಿಜವಾದ ಹೆಸರು ಗೊತ್ತಾಗಬಾರ್ದು ಅಂತ ಆ ಹೆಸರು ಹೇಳಿದನೆ ತಮ್ದು ತಮಟೆ ಬಾಯಿ ಅಲ್ವ ಅದಕ್ಕೆ

ಹೇಮಂತ :- ಥೂ ನನ್ನ ಮಕ್ಳ ಹಾಳಾಗಿ ಹೋಗ್ರಿ

ಉಮೇಶ್ :- ಬರ್ತೀಯ ನೀನು

ಹೇಮಂತ :- ಏನಕ್ಕೆ ?

ಉಮೇಶ :- ಹಾಳಾಗೋಕೆ ಜೊತೆಗೆ

ಹೇಮಂತ :- ಹ್ಮಂ ಹಿಂಗೆ ಇದ್ರೆ ನಿಮ್ ಜೊತೆ ನನ್ನ ಹಾಳು ಮಾಡ್ತಿರ

ಉಮೇಶ :- ಒಹ್ ! ನಾವು ಆ ಥರ ಅಲ್ಲಾ ! ನಾವು ಹುಡುಗ್ರನೆಲ್ಲ ಹಾಳು ಮಾಡೋಲ್ಲ

ನಾನು :- ಸಾಕು ನಿಲ್ಲಿಸ್ರೋ ಒಬ್ಬನಿಗಾದ್ರು ಎಂ.ಎಂ.ಇದೇನಾ

ಹೇಮಂತ :- ಎಂ.ಎಂ. ಹಾಗಂದ್ರೇನು

ನಾನು :- ಮಾನ ಮರ್ಯಾದೆ ಅಂತ

ಹೇಮಂತ :- ಥೂ ನನ್ನ ಮಕ್ಳ ಹಾಳಾಗಿ ಹೋಗ್ರಿ ನಿಮ್ ಜೊತೆ ಇದ್ರೆ ನಾನು ಮೆಂಟ್ಲು ಆಗ್ತೀನಿ.

ಉಮೇಶ್ :- ಬ......ರ್ತೀ......ಯ ನೀನು..........!

ಇಲ್ಲಿದೆ ಮನಸ್ಸುಗಳ ತರಂಗ...♥...♥...♥

ಬಿಡಿ ನನ್ನ ಕಾಲೇಜ್ ಲೈಫ್ ಬಗ್ಗೆ ಹೇಳ್ತಾ ಹೋದ್ರೆ ಕೊನೇನೆ ಇರೋಲ್ಲ ಈಗ ಸೀದ ವಿಷಯಕ್ಕೆ ಬರೋಣ.

ಹೌದು ಬಿಕ್ಕಳಿಕೆ ಅನ್ನೋದೇ ಹೀಗೆ, ನಿಮ್ಮ ನಮ್ಮ ಮನೇಲಿ ಯಾರಾದ್ರೂ ಹಿರಿಯ ವಯಸ್ಸಿನೋರು ಇದ್ರೆ ಬಿಕ್ಕಳಿಕೆ ಬಂದ ತಕ್ಷಣ ಹೇಳೋ ಮಾತು ಯಾರೋ ನಿನ್ನ ನೆನಪು ಮಾಡಿಕೊಳ್ತಾ ಇದಾರೆ ಅಂತ, ಕೆಲವು ಕಡೆ ಯಾರೋ ಬೈತಾ ಇದಾರೆ ಅಂತನು ಹೇಳ್ತಾರೆ.

ಇದನ್ನ ನೀವು ಮೋಡ ನಂಬಿಕೆ ಅಂತಿರ ? ಇಲ್ಲಾ ಇದು ನಿಜ ಅಂತಿರ ?

ನೀವು ಏನ್ ಅನ್ನಿ ನಾನು ಮಾತ್ರ ಇದು ಸತ್ಯ ಅಂತಾನೆ ಹೇಳೋದು ಏಕಂದ್ರೆ ನನಗೆ ತುಂಬಾನೇ ಅನುಭವವಾಗಿದೆ ಇದರಲ್ಲಿ ಒಂದು ಸಲ ಹೀಗೆ ನಮ್ಮ ಕಾಲೇಜ್ ನಲ್ಲಿ ಬಿಕ್ಕಳಿಕೆ ಶುರುವಾಯ್ತು ಹತ್ರ ನೀರು ಇರ್ಲಿಲ್ಲ ಹೊರಗಡೆ ಹೋಗಿ ನೀರು ಕುಡಿಯೋಣ ಅಂದ್ರೆ ಲೆಕ್ಚರ್ ಕ್ಲಾಸ್ ತಗೊಂಡಿದ್ರು ಕೇಳೋಕೆ ಮನಸ್ಸು ಬರ್ಲಿಲ್ಲ ಆಗಲೇ ಸ್ವಲ್ಪ ತಲೆ ಓಡಿಸಿದೆ ನನಗೆ ಇಷ್ಟವಾದವರನೆಲ್ಲ ನೆನಪು ಮಾಡಿಕೊಳ್ತಾ ಬಂದೆ ಹ್ಮಂ ಹ್ಮಂ ನಿಲ್ಲಲಿಲ್ಲ ಆಗಲೇ ಬಿಕ್ಕಳಿಕೆ ಸೌಂಡ್ ಜಾಸ್ತಿ ಆಗಿ ಕ್ಲಾಸ್ ಗೆಲ್ಲ ಕೇಳ್ತಾ ಇತ್ತು ಅಷ್ಟರಲ್ಲಿ ಒಂದು ಹೆಸರು ನನಪಿಗೆ ಬಂತು ನೋಡಿ ನೆನಸ್ಕೊಂಡು ಬಿಟ್ಟೆ ತಕ್ಷಣ ನಿಲ್ಲೋದಾ ನನ್ನ ಪುಣ್ಯಕ್ಕೆ ಆ ಹೆಸರು ಬೇಗನೆ ನೆನಪಾಯ್ತು ಇಲ್ಲಾ ಅಂದಿದ್ರೆ ಆ ಲೆಕ್ಚರ್ ಕೈಯಲ್ಲಿ ಸಿಕ್ಕಪಟ್ಟೆ ಬೈಸ್ಕೋ ಬೇಕಿತ್ತು.

ಅವತ್ತಿಂದ ಇವತ್ತಿನ ವರೆಗೂ ನನ್ನ ಬಿಕ್ಕಳಿಕೆ ತಡೆಯೋಕೆ ಆ ಹೆಸರು ಸಾಕು ಈಗ್ಲೂ ಕೆಲವೊಮ್ಮೆ ಅಮ್ಮ ನ ಜೊತೆ ಫೋನ್ ನಲ್ಲಿ ಮಾತಾಡುವಾಗ ಬಿಕ್ಕಳಿಕೆ ಬರುತ್ತೆ ಅಮ್ಮ ಹೇಳ್ತಾ ಇರ್ತಾರೆ ನೀರು ಕುಡಿಯೋ ಅಂತ ನಾನು ಆಗ ಆ ಹೆಸರು ನೆನಸಿಕೊಳ್ತಿನಿ ಬಿಕ್ಕಳಿಕೆ ನಿಲ್ಲುತ್ತೆ ಮತ್ತೆ ಅಮ್ಮ ಕೇಳ್ತಾರೆ ನೀರು ಕುಡುದ್ಯಾ ಅಂತ ಆಗ ಹೇಳ್ತೀನಿ ಇಲ್ಲಾ ಅಮ್ಮ ಯಾರನ್ನೋ ನೆನಪು ಮಾಡಿಕೊಂಡೆ ನಿಲ್ತು ಅಂತ ನಮ್ಮ ಆಮನಿಗೆ ಅಷ್ಟು ಸಾಕು ಸ್ಟಾರ್ಟ್ ಮಾಡಿಕೊಳ್ತಾರೆ "ಯಾರನ್ನ ನೆನಸ್ಕೊಂಡೆ ? " "ಎಲ್ಲಿದಾರೆ ? " "ಹುಡುಗನ ಹುಡುಗಿನ ?" ಅಂತ ಅವಕೆಲ್ಲ ಉತ್ತರ ಕೊಟ್ರೆ ಉಳಿಗಾಲ ಇಲ್ಲಾ ಅಂತ ನನಗೆ ಗೊತ್ತು ಅದಕ್ಕೆ ಬೇರೆ ಏನೇನೊ ಮಾತಾಡಿ ಟಾಪಿಕ್ ಚೇಂಜ್ ಮಾಡ್ತೀನಿ ಯಾಕೆ ಬೇಕು ಅಲ್ವ ಆ ಮರೀಚಿಕೆ..♥...♥...♥ಹೆಸರು ಹೇಳೋದು

ನಗೆ ಅನಿಸುತ್ತೆ, ನಾವು ನೀವು ಎಲ್ಲೋ ಇರ್ತಿವಿ ಫೋನ್ ನಲ್ಲಿ ಮಾತಾಡ್ತೀವಿ ಅದು ಹೇಗೆ ಸಾದ್ಯ ???? ಯಾರೋ ಫೋನ್ ಅನ್ನೋದನ್ನ ಕಂಡು ಹಿಡಿದ್ರು ಇವತ್ತು ನಾವು ನಮ್ಮಿಂದ ಎಸ್ಟೋ ದೂರ ಇರೋರ್ ಜೊತೆ ಮಾತಡ್ತಿವಿ ಇದಕ್ಕೆಲ್ಲ ಕಾರಣ ಮನುಷ್ಯನ ಬುದ್ಧಿ ಶಕ್ತಿ, ಕಣ್ಣಿಗೆ ಕಾಣದ ತರಂಗಗಳು...!

ಹಾಗೆ "ಮನುಷ್ಯ ಅನ್ನೋ ಮನುಷ್ಯನಲ್ಲಿರುವ ಮನಸ್ಸುಗಳಿಗೂ ಮನಸ್ಸು ಅಂತ ಇರುತ್ತೆ ಆ ಮನಸುಗಳು ಸಹ ಮನಸ್ಸಲ್ಲಿ ಇರೋ ಮನಸ್ಸಿನೊಂದಿಗೆ ಮನಸ್ಸು ಕೊಟ್ಟು ಮನಸಾರೆ ಮನಸ್ಸು ಬಿಚ್ಚಿ ಮಾತಾಡುತ್ತವೆ" ಆ ಮನಸ್ಸುಗಳ ನಡುವೆ ನನಗೂ ನಿಮಗೂ ಗೊತ್ತಿಲ್ದೆ ಇರೋ ಯಾವ್ದೋ ಒಂದು ಅದ್ಬುತ ಶಕ್ತಿ ತರಂಗಗಳ ಮೂಲಕ ಮನಸುಗಳ ಮಿಲನಕ್ಕೆ ನಾಂದಿಯಾಗಿದೆ....!

ನೀವು ಗಮನಿಸಿರ್ತಿರ ಅವಳಿ ಜವಳಿ ಮಕ್ಕಳು ಇದ್ರೆ ಒಬ್ಬ ಮಗುಗೆ ಜ್ವರ ಬಂದ್ರೆ ಇನ್ನೊದು ಮಗು ಎಷ್ಟೇ ದೂರ ಇದ್ರೂ ಆ ಮಗುಗು ಜ್ವರ ಬಂದಿರುತ್ತೆ ಈ ಥರ ಉದಾಹರಣೆಗಳು ಸಿನಿಮಾಗಳಲ್ಲಿ ತುಂಬಾ ಇವೆ ಅದು ನಮಗೂ ಗೊತ್ತು ಆದರೆ ಅದಕ್ಕೆ ತಜ್ಞರು ಅವರದೇ ಆದ ರೀತಿನಲ್ಲಿ ವಿವರಣೆ ನಿಡ್ತಾರೆ ಅದಕ್ಕೆ ನಾವು ವಿಜ್ಞಾನ ಅಂತಿವಿ ಅದೇ ಒಬ್ಬ ಹಳ್ಳಿಯವ ಅದರ ಬಗ್ಗೆ ತನ್ನ ಮಾತಿನಲ್ಲಿ ಸರಳವಾಗಿ ವಿವರಣೆ ಕೊಟ್ರೆ ಅದೇ ನಾವೇ ಅಜ್ಞಾನ, ಮೋಡ ನಂಬಿಕೆ ಅಂತೆಲ್ಲ ಕರಿತಿವಿ ಅಲ್ವ ..!

ಈಗ್ಲೂ ಕಾಲ ಮಿಂಚಿಲ್ಲ ನಿಮಗೂ ಬಿಕ್ಕಳಿಕೆ ಬರುತ್ತೆ ಬಂದಾಗ ಒಂದು ಸಾರಿ ನಿಮ್ಮನ್ನ ಇಷ್ಟ ಪಡೋ ಇಲ್ಲಾ ನಿಮ್ಮ ಮನಸ್ಸಲ್ಲಿರೋ ಹೆಸರನ್ನ ನೆನೆಸಿಕೊಂಡು ನೋಡಿ ಮನಸ್ಸುಗಳ ತರಂಗದ ಅರಿವು ನಿಮಗೂ ಆಗುತ್ತೆ..!

ಮನಸ್ಸಲ್ಲಿ ಇರೋರು ಅಂದ್ರೆ ಲವರ್ ಅಂತ ಎಷ್ಟೋ ಜನ ತಪ್ಪು ಕಲ್ಪನೆಯಲ್ಲಿ ಮುಳುಗಿದರೆ, ನಿಮ್ಮನ್ನ ನೆನಪು ಮಾಡಿಕೊಳ್ಳೋಕೆ ನಿಮ್ನ ಪ್ರೀತಿ ಮಾಡ್ತಾ ಇರೋರೆ ಆಗಬೇಕು ಅಂತ ಇಲ್ಲಾ ತಾಯಿ, ತಂದೆ, ಅಕ್ಕ ತಮ್ಮ ಇಲ್ಲಾ ಎಂದೋ ಬಸ್ ಸ್ಟಾಪ್ ನಲ್ಲಿ ಸಿಕ್ಕು ಪರಿಚಯ ಆಗಿ ಇವತ್ತು ನಿಮ್ ಜೊತೆ ಸಂಪರ್ಕದಲ್ಲಿ ಇಲ್ದೇ ಇರೋರು ಆಗಿರಬಹುದು, ಇಲ್ಲಾ ನಿಮ್ಮ ಕಲ್ಪನೆಯಲ್ಲಿ ಹುಟ್ಟಿಕೊಂಡ ನಿಮ್ಮ ಬಾಳ ಸಂಗಾತಿಯಾಗಿರಬಹುದು ಅಂತಹ ಪಾತ್ರಗಳಿಗೆ ನಾನು ಮರೀಚಿಕೆ..♥...♥...♥ ಅಂತ ಕರೆಯೋಕೆ ಇಷ್ಟ ಪಡ್ತೀನಿ.

"ನಾನಂತೂ ಪ್ರೇಮಿ ಅಲ್ಲಾ, ಯಾವದೇ ಪ್ರೇಮದಲ್ಲಿ ಬಿದ್ದಿಲ್ಲ , ಆದ್ರು ಮರೆಯದ ಮರೀಚಿಕೆಯ ಹೆಸರು ಮಾತ್ರ ಇನ್ನು ಮರೆತಿಲ್ಲ"
♥...♥...♥..♥...♥...♥..♥...♥...♥
ಕಣ್ಣಿಗೆ ಕಾಣದ ಓ ಮನವೇ
ನೆನಪಿನಂಗಳದ ಓ ತನುವೇ
ನೀ ಎಂದು ನೆನಪಾಗಿರು
ನೆನಪಿನ ತೋಟದ ಹೂವಾಗಿರು
ನೀ ನನ್ನ ನೆನೆದಾಗ ಬಿಕ್ಕಳಿಕೆಯ
ಮೊದಲ ಗುರುತು ನಿನಾಗಿರು
♥...♥...♥..♥...♥...♥..♥...♥...♥

ನೀನಾಗು ಎಂದು ನನ್ನ ಕೈ ಸಿಗದ ಮರೀಚಿಕೆ
ನೀನಾಗು ಎಂದು ನನ್ನ ಮರೆಯದ ಮರೀಚಿಕೆ
ನೀನಾಗು ಎಂದು ನನ್ನ ಮನತುಂಬುವ ಮರೀಚಿಕೆ...!
♥...♥...♥..♥...♥...♥..♥...♥...♥..♥...♥..♥...♥...♥..♥...♥...♥

"ಕ್ರಿಸ್ಮಸ್ ಹಬ್ಬದ ಶುಭಾಶಯಗಳೊಂದಿಗೆ"

ಇಂತಿ
ಮರೆಯಲಾರದ ಮರೀಚಿಕೆ

?
ಮಂಜು ದೊಡ್ಡಮನಿ...♥...♥..♥
9742495837

16 comments:

  1. hi manju baraha chennagide,,howdu adu sathya kooda....next time bikkalike bandre nimmannu omme nenapu maadikondu nodtini,,nillatto jaasti aagatto,,keep writing

    ReplyDelete
  2. manassugalu saha iro manassige manasu kottu manabicchi manasare mathanaduttave....
    thumba chennagide...

    ReplyDelete
  3. @ಸಿಂಪ್ಲಿ ಸ್ಟುಪಿಡ್ ಸತ್ಯ,,::--

    ಇನ್ನು ಪ್ರಯತ್ನ ಪಟ್ಟಿದ್ರೆ ಇನ್ನು ಚನ್ನಾಗಿ ಬರಿತ ಇದ್ದೆ ಅನಿಸುತ್ತೆ

    ನಿಮಗೆ ಬಿಕ್ಕಳಿಕೆ ಬರೋಕೆ ನಾನು ನಿಮ್ನ ನೆನಪು ಮಾಡಿಕೊಂದಿರ್ಬೇಕಲ್ಲ ನಿಮ್ನ ಯಾರು ನೆನಪು ಮಾಡಿಕೊಳ್ತಾರೋ ಅವರನ್ನ ನೆನಪು ಮಾಡಿಕೊಳ್ಳಿ ಸಾಕು

    ಥ್ಯಾಂಕ್ಸ್ for the comments

    ..♥...♥..♥

    ReplyDelete
  4. @ಕಾವ್ಯ ಸುಗಂಧ :-: thank u Madam

    ReplyDelete
  5. @chandu..♥...♥..♥:-

    ಹೇಯ್ ಚಂದು ನಾನು ಯಾವ ಮರೀಚಿಕೆ ನು ಹುಡುಕ್ತ ಇಲ್ಲಾ ಸಿಗೋಕೆ ಹ್ಹ ಹ್ಹ ಹ್ಹ ಹ್ಹ

    ಥ್ಯಾಂಕ್ಸ್ ನಿನ್ನ ಹಾರೈಕೆಗೆ

    ReplyDelete
  6. ಮಂಜು, ಬಿಕ್ಕಳಿಕೆ ನಮ್ಮನ್ನ ಯಾರೋ ನೆನಪಿಸ್ಕೊಂಡ್ರು ಅಂತ ಬರೋದಲ್ಲಾ ನಾವು ಯಾರ್ನ್ನೋ ನೆನಸಿಕೊಂಡಾಗ ಬರೋದು,,,ಹಹಹ,,,ಹೋಗ್ಲಿ ಬಿಡು ನಿನ್ನ ಮರಿ-ಇಚಿಕೆ ದೂರ ಆದ್ರೆ ಸಾಕು...ಚನಾಗಿದೆ ಲೇಖನ..

    ReplyDelete
  7. @ಅಜಾದ್ ಸರ್..♥...♥..♥:-

    ಒಹ್ ಇಲ್ಲಾ ಸರ್ ತಪ್ಪು ತಪ್ಪು ನಮ್ಮನ್ನ ಯಾರೋ ನೆನಪಿಸಿಕೊಂಡಾಗ ಬರುತ್ತೆ,,,,,,, ನಾವು ಯಾರನೋ ನೆನಸಿಕೊಂದಾಗ ನಮಗೆ ಯಾಕೆ ಬಿಕ್ಕಳಿಕೆ ಬರುತ್ತೆ ? ? ?

    ನಮ್ಮ ಕಡೆ ಯಲ್ಲಿ ನಮ್ಮನ್ನ ಯಾರೋ ನೆನಪಿಸಿಕೊಂಡಾಗ ಮಾತ್ರ ಬರುತ್ತೆ ಅಂತ ನಂಬಿಕೆ ಇದೇ

    ಇರಲಿ ಬಿಡಿ ಒಂದೊಂದು ಕಡೆ ಒಂದೊಂದು ಥರ ಇರುತ್ತೆ ಹೋಗ್ಲಿ ಬಿಡಿ !

    ..♥...♥..♥

    ReplyDelete
  8. guruve engelle baritya marichike elva? enu nan mude dova? neenu heliddu nijano sullo nanu eduvaregu try madilla next time bikkalike bandaga madi nillta elva anta heltini.
    good keep it down.

    ReplyDelete
  9. @shridhar ..♥...♥..♥

    :- ಹಲೋ ಡವ್ವು ಗಿವ್ವು ಏನು ಇಲ್ಲಾ ಸತ್ಯನೇ ಹೇಳ್ತಾ ಇರೋದು

    ಹ್ಮಂ ಹ್ಮಂ ಓಕೆ ಓಕೆ ನಿಮಗೂ ಬಿಕ್ಕಳಿಕೆ ಬಂದಾಗ ಟ್ರೈ ಮಾಡಿ ನಿಜ ಆಗುತ್ತೆ

    ..♥...♥..♥

    ReplyDelete
  10. ನಮ್ಮಲ್ಲಿ ಬಿಕ್ಕಳಿಕೆ ಬರೋದು ಕಳ್ಳರಿಗೆ ಅಂತಾರೆ..?/!
    ೨೦೧೧ರಲ್ಲಿ ಸಿಹಿಕ್ಷಣಗಳು ಎದುರಾಗಲಿ...

    ReplyDelete
  11. @- ಕತ್ತಲೆ ಮನೆ.:--- ಒಹ್ ಒಹ್ ಒಹ್ ಹೌದ ರೀ ಒಂದೊಂದು ಕಡೆ ಒಂದೊಂಥರ

    ಥ್ಯಾಕ್ಸ್ ರೀ ನಿಮಗೂ ಕೊಡ 2011ಶುಭ ಕ್ಷಣಗಳನ್ನ ಹೊತ್ತು ತರಲಿ

    ReplyDelete
  12. manju ravare nimmaa lekhana mattu kavana eradu tumba chennaagide.nimaguu krismus habbada haagu "sankranti habbada shubhaashayagalu" kaaranaantaragalinda tadavaagi pratikriyisuttiddene.kshamisuttiralla? vandanegalu.

    ReplyDelete
  13. @ಕಲರವ :- thank u :) thadavaagi pratikrikisidarenante Nimma Shubhashaya endigu Nanage Idde irutte alva !

    ReplyDelete