ಸತ್ಯವನ್ನೇ ನುಡಿಸು ಗುರುವೇ ನರವಿಲ್ಲದ ಜಿಹ್ವೆಯೋಳ್ ! ಸ್ಥಿರವಾಗಿ ನೆಲೆಸು ಗುರುವೇ ಮರ್ಕಟ ಈ ಮನದೊಳ್ !

Tuesday, 3 January 2012

ನವಿಲ್ ಹುಡುಗಿ...!

ನಿದ್ದೆ ಕಣ್ಣ ಮಂಪರಿನಲ್ಲಿ 
ಮೃದುವಾಗಿ ತಲೆಸವರಿ 
ಮುದ್ದು ಮಗುವಿನ ಮಂದಹಾಸವ  
ಬೆಳದಿಂಗಳಂತೆ ಚಲ್ಲಿ 
ದಾರಿ ತೋರಿದ ಸ್ನೇಹವೇ 
ನೀನೆಂದು ಅನಂತವಾಗಿರು...! 
 ಸ್ನೇಹ ಯಾರಿಂದ ಯಾವಾಗ ಎಲ್ಲಿ ಹೇಗೆ ಶುರುವಾಗುತ್ತೆ ಅಂತ ಯಾರಿಗೂ ಗೊತ್ತಿರೋದಿಲ್ಲ .... ಆ ಸ್ನೇಹದ ಬಗ್ಗೆ ಯಾರು ಎಷ್ಟೇ ಬರೆದರೂ ಕಮ್ಮಿ ಅನಿಸುತ್ತೆ ... ಕಷ್ಟ ದುಖಗಳಲ್ಲಿ ಸಮನಾಗಿ ಹಚ್ಹಿಕೊಂಡು ನಮ್ಮನ್ನು ಕಾಪಾಡುವ ಈ ಸ್ನೇಹಕ್ಕೆ ಜಾತಿ, ಧರ್ಮ, ದೊಡ್ಡವರು ಚಿಕ್ಕವರು ಅಲ್ಲದೆ ಹುಡುಗ ಹುಡುಗಿ ಅನ್ನೋ ಯಾವುದೇ ಭೇದವಿಲ್ಲ, ಎಲ್ಲೋ ಇದ್ದವರನ್ನ ಎಲ್ಲೋ ಕೂಡಿಸಿ ಇನ್ನೆಲ್ಲೋ ಜೊತೆ ಮಾಡಿ ಕೈಗೆ ಕೈ ಜೋಡಿಸುವ ಈ ಸ್ನೇಹ ಎಂದಿಗೂ ಅಮರ, ಅನಂತ ಅಲ್ವ...?ಕೆಲವು ದಿನಗಳ ಹಿಂದೇ.........

ಆಕೆ ಯಾರೆಂದು ನನಗೆ ಗೊತ್ತಿರಲಿಲ್ಲ..... ನನ್ನ ಲೇಖನವನ್ನ ಓದಿ ಒಮ್ಮೆ ನನಗೆ ಕಾಲ್ ಮಾಡಿದ್ದಳು....ಇಂತಹ ದೂರವಾಣಿ ಕರೆಗಳು ನನ್ನ ಮೊಬೈಲ್ ಗೆ ಸರ್ವೇ ಸಾಮಾನ್ಯ, ಕಾಲ್ ಮಾಡಿದ ಆ ಹುಡುಗಿ ನನ್ನ ಅಪರಿಚಿತ ದ್ವನಿಯನ್ನು ಪರಿಚಿತ ಮಾಡಿಕೊಳ್ಳಲು ಎಲ್ಲರೂ ಮಾತನಾಡುವಂತೆ ಮೊದಲು ನನ್ನ ಬರವಣಿಗೆಯ ಬಗ್ಗೆ ಒಂದಿಷ್ಟು ಮಾತನಾಡಿದಳು, ಅದು ಮೊದಲ ಸಲ ಆದ್ದರಿಂದ ಅವಳ ಮಾತುಗಳಲ್ಲಿ ಅಂಜಿಕೆ ಇತ್ತು.... ತಡವರಿಸಿಕೊಂಡು ಮಾತಾಡುತ್ತಿದ್ದವಳಿಗೆ ನಾನು ಸಹ ಉತ್ಸಾಹದಲ್ಲೇ ಪ್ರತಿಕ್ರಿಯಿಸುತ್ತಿದ್ದೇ ... ಏಕೆಂದರೆ ಪರಿಚಯವಿಲ್ಲದ ವ್ಯಕ್ತಿಯೊಂದಿಗೆ ಮಾತಾಡುವುದು ಯಾರಿಗಾದರು ಸ್ವಲ್ಪ ಕಷ್ಟಸಾದ್ಯವೇ.. ಅದರಲ್ಲೂ ಹುಡುಗಿಯರಿಗೆ ಸ್ವಲ್ಪ ಅಂಜಿಕೆ ಇದ್ದೆ ಇರುತ್ತದೆ ಅಲ್ವ ..? ಆ ಹುಡುಗಿ ಮಾತನಾಡುತ್ತಲೇ ಇದ್ದಳು, ಬೆಂಗಳೂರಿನ ಟ್ರಾಫಿಕ್ ನಲ್ಲಿ ಸಿಕ್ಕಿ ಆಫೀಸಿಗೆ ಬಂದದ್ದು ತಡವಾಗಿತ್ತು ಅಲ್ಲದೆ ಎಂದೂ ಇಲ್ಲದ ಎಲ್ಲಾ ಕೆಲಸಗಳು ನನ್ನ ಟೇಬಲ್ ಮೇಲೆ ಬಂದು ಬಿದ್ದಿದ್ದವು, ಇತ್ತ ಈ ಹುಡುಗಿಯ ಜೊತೆ ಮಾತಾಡುವುದೋ ಅತ್ತ ಕೆಲಸವನ್ನು ಕೈಗೆ ಎತ್ತಿಕೊಳ್ಳುವುದೋ ಎಂಬ ಚಿಂತೆ ನನ್ನ ತಲೆಯ ಸುತ್ತ ಸುತ್ತುತಿತ್ತು ... ಆ ಹುಡುಗಿ ಮಾತಾಡುತ್ತಿರುವ ಉತ್ಸಾಹ ನೋಡಿದರೆ ಇವತ್ತು ಪೂರ್ತಿ ಫೋನ್ ಕಟ್ ಮಾಡುವುದಿಲ್ಲ ಅನ್ನೋ ಪಣತೊಟ್ಟಂತಿತ್ತು ನನಗೂ ಬೇರೆ ವಿಧಿ ಇರಲಿಲ್ಲ.. ನಾನು ಅವಳ ಜೊತೆ ಮಾತಿಗಿಳಿದೆ.. ನನ್ನ ಮುಂದೆ ಹಾಗೂ ಹಿಂದೇ ನನ್ನನ್ನೇ ಸೆರೆ ಹಿಡಿಯುತ್ತಿದ್ದಾ ಕ್ಯಾಮರಗಳಲ್ಲಿ ಒಳಗಡೆ ಕೂತು ನನ್ನ ಬಾಸ್ ನನ್ನನ್ನು ಕಾರ್ಟುನ್ ಶೋ ಥರ ನೋಡುತ್ತಲೇ ಇದ್ದರೂ ಅನಿಸುತ್ತೆ, ಅವರಿಗೆ ಕೆಲಸಗಾರರನ್ನು ಗಮನಿಸುವುದೇ ಒಂದು ಕೆಲಸ ನನಗೆ ಅದ್ಯಾವುದರ ಭಯ-ಬಂಧ ಇರಲಿಲ್ಲ ಸುಮ್ಮನೆ ಮಾತನಾಡುತ್ತಲೇ ಇದ್ದೆ....  ಸುಮಾರು ಹೊತ್ತು ಮಾತನಾಡಿದ ನಂತರ ವಾಸ್ತವದ ಅರಿವಾಗಿ ನಾನೇ ಮತ್ತೆ ಮಾತನಾಡೋಣ ಬಿಡುವಿನವೇಳೆ ಎಂದೂ ಹೇಳಿ ಹೇಗೋ ತಪ್ಪಿಸಿಕೊಂಡೆ..... ಕೇಳುವವರ್ಯಾರು ಸುಡು ಬಿಸಿಲಲಿ
ಗುನುಗುವ ಒಂಟಿ ಹಕ್ಕಿಯ ಹಾಡು ..! 
ಕಂಡರೂ ಕಾಣದಂತೆ ಸುಮ್ಮನಾದರು 
ನಿನ್ನ ನಗೆಯ ಹಿಂದಿನ ನೋವಿನಪಾಡು ...! 
ಆ ಹುಡುಗಿ ಪರಿಚಯವಾದ ಕೇವಲ ಮೂರು ದಿನಗಳಲ್ಲೇ ಅದೆಷ್ಟು ಹಚ್ಚಿಕೊಂಡಿದ್ದಳು ಅಂದರೆ ಆಕೆಯ ಕಾಲ್ ದಿನಕ್ಕೆ ಒಂದಿಂತು ಬರಬರುತ್ತಾ ಅದು ಮೂರಾಯ್ತು.. ಒಂದು ದಿನ ತನ್ನ ಜೀವನದ ಬಗ್ಗೆ ತಾನು ಪಟ್ಟ ಕಷ್ಟ ಸುಖಗಳ ಬಗ್ಗೆ ಜೀವನ ಕಲಿಸಿದ ಪಾಠಗಳ ಬಗ್ಗೆ ನನ್ನಲ್ಲಿ ಹೇಳಿಕೊಂಡಳು, ಹೇಳುವಾಗ ಎಲ್ಲೋ ಒಂದಿಷ್ಟು ಬಿಕ್ಕಳಿಸಿದಳು, ಅತ್ತಳು ನನ್ನ ಸಂತ್ವಾನದ ಮಾತುಗಳು ಮನಸಿಗೆ ಹತ್ತಿರವಾದಂತೆ ನಗುತ್ತಲೇ ಮತ್ತೆ ಮಾತು ಮುಂದುವರೆಸಿದಳು, ಹೌದು ಅವಳದು ತುಂಬಾ ಮುಗ್ದತೆಯ ಸ್ವಭಾವ, ಸ್ನೇಹವನ್ನೇ ನಂಬದ ಸ್ನೇಹಿತರೆ ಇಲ್ಲದ ಜೀವನ ಅವಳದು..! ಈಗಲೂ ಅಷ್ಟೇ ಫೇಸ್ ಬುಕ್ ನಲ್ಲಿ ಆ ಹುಡುಗಿಗೆ ಇರುವ ಸ್ನೇಹಿತರ ಪಟ್ಟಿ ಮಾಡಿದರೆ ನಿಮಗೆ ಸಿಗುವುದು ಕೇವಲ ನಾಲ್ಕೈದು ಪ್ರೊಫೈಲ್ ಗಳು ಮಾತ್ರ, ಮನುಷ್ಯರನ್ನು ಬಿಡಿ ಆಕೆ ತನ್ನ ಮೇಲೆ ತನಗಿಂತ ಹೆಚ್ಚು ಕಣ್ಣಿಗೆ ಕಾಣದ ಗುಡಿ ಗುಂಡಾರಗಳಲ್ಲಿರುವ ಕಲ್ಲು ದೇವರುಗಳನ್ನೇ ನಂಬುತ್ತಿದ್ದಳು, ಆ ನಂಬಿಕೆಯ ಬೆನ್ನಲ್ಲೇ ಅಗಾದವಾದ ಭಕ್ತಿ ಕೂಡ ಇತ್ತು, ಆ ಪುಟ್ಟ ಹೃದಯದ ನಗುವಲಿ ಅದೆಷ್ಟು ದೊಡ್ಡ ದೊಡ್ಡ ನೋವುಗಳು...? 
ಕೆಲವು ದಿನದ ನಂತರ ಮತ್ತೆ ಕಾಲ್ ಮಾಡಿ ಕೇಳಿದಳು ಮಂಜು I want to meet you ಯಾವಾಗ ಸಿಗ್ತಿಯಾ..? ನನಗೆ ಸ್ವಲ್ಪ ಕಷ್ಟವೇ, ಸಮಯ ಇರೋದಿಲ್ಲ  ನೋಡೋಣ ಆ ಗಳಿಗೆ ಬಂದರೆ ಸಿಗೋಣ ಅಂತ ದೊಡ್ಡದಾಗಿ ಹೇಳಿದ್ದೆ.. ಅವಳದು ಮೊಂಡತನ ಜಾಸ್ತಿ ನನ್ನಂತೆಯೇ.... ಸಿಗಲೇ ಬೇಕು ಇದೇ ವಾರದಲ್ಲಿ ಅನ್ನೋ  ಹಠ, ನಾನು ಒಪ್ಪಬೇಕಾಯಿತು ಸರಿ ಸಿಗೋಣ ಆದರೆ ಎಲ್ಲಿ..? ಹೇಗೆ..? ಯಾವಾಗ..? ಅಂತೆಲ್ಲ ಕೇಳಿದೆ ಅವಳು ಆಗಲೇ ಎಲ್ಲವನ್ನು ಪ್ಲಾನ್ ಮಾಡಿಕೊಂಡೆ ನನಗೆ ಕಾಲ್ ಮಾಡಿದ್ದಳು ಅನಿಸುತ್ತೆ ಸಿಗುವ ಸ್ಥಳ ಮತ್ತು ಸಮಯ ಹೇಳಿಬಿಟ್ಟಳು... ನಾನು ಆ ಕ್ಷಣಕ್ಕೆ ಹ್ಮಂ ಅಂದು ಸುಮ್ಮನಾದೆ. ಆಕೆ ಬಿಡಬೇಕಲ್ಲಾ.....ಹ್ಮಂ ನನ್ನ ಆಕೆ ಬರ ಹೇಳಿದ್ದು ಯಾವುದೇ ಕಾಫಿ ಡೇ, ಶಾಪಿಂಗ್ ಮಾಲ್ ಹೋಟೆಲ್ ಗಳಿಗಲ್ಲ ಒಂದು ದೇವಸ್ಥಾನಕ್ಕೆ....  ಹುಡುಗಿ ಕರೆದ ತಕ್ಷಣ ಹೋಗುವ ಜಾಯಿಮಾನದವನಲ್ಲ ಆದರು ತುಂಬಾ ಯೋಚಿಸಿ ಅಲ್ಲಿಗೆ ಹೋಗಲು ನಿರ್ಧರಿಸಿದ್ದೆ ಅಲ್ಲದೆ ನನಗೆ ಹತ್ತಿರದ ಸ್ಥಳ ಮತ್ತು ಇಷ್ಟವಾದ ಸ್ಥಳ ಅದಾಗಿತ್ತು, ಅವಳು ಹೇಳಿದ ದಿನ ಬಂತು ಲೆಕ್ಕವಿಲ್ಲದಷ್ಟು ಅವಳ ಕರೆಗಳು ಅಂದು, "ಏನೇ ಆಗ್ಲಿ ನೀ ಬರಲೇಬೇಕು" ಅನ್ನೊ ಅವಳ ಹಠ... ಅವಳಿಗೂ ನನಗೂ ಅದು ಮೊದಲ ಭೇಟಿ....!  


3 ವರ್ಷ ಅವಧಿಯ ನನ್ನ ಆನ್ಲೈನ್ ಲೈಫ್ ನಲ್ಲಿ ಅಂದರೆ ಇಲ್ಲಿಯವರೆಗೂ ನಾನು ಅದೆಷ್ಟೋ ಸ್ನೇಹಿತರನ್ನ ಭೇಟಿಯಾಗಿದ್ದೇನೆ ಮಾತನಾಡಿಸಿದ್ದೇನೆ, ಇನ್ನೂ ಹೆಚ್ಚು ಅಂದ್ರೆ ಅವರ ಪ್ರೀತಿಯ ಆಹ್ವಾನಕ್ಕೆ ಅವರವರ ಮೆನೆಗೆ ಹೋಗಿದ್ದೇನೆ ಮಧುವೆಗಳಿಗೆ ಹೋಗಿದ್ದೇನೆ ಜನ್ಮದಿನದ ಪಾರ್ಟಿಗಳಿಗೂ ಹೋಗಿದ್ದೇನೆ ಅವರ ಮನೆಯವರೊಂದಿಗೆ ಮನೆಯ ಮಗನಾಗಿದ್ದೇನೆ ಖುಷಿ ಹಂಚಿದ್ದೇನೆ ಅಷ್ಟೇ ಖುಷಿ ಪಟ್ಟಿದ್ದೇನೆ... ಆದರೆ ಅಂತ ಎಲ್ಲಾ ಖುಷಿಗಳನ್ನು ಒಮ್ಮೆಲೇ ತಂದುಕೊಟ್ಟದ್ದು ಆಕೆಯ ಭರ್ಜರಿ ಭೇಟಿ...  ಎಲ್ಲವನ್ನು ಮೀರಿ ನಿಂತ ಸ್ನೇಹದ ಅತಿ ಮಧುರ ಕ್ಷಣಗಳವು... ..

ಅವಳ ನನ್ನ ಸ್ನೇಹ ಹೇಗೆ ಅಂದ್ರೆ ವಿ.ರವಿಂದ್ರನ್ ಅವರ ಒಂದು ಫಿಲ್ಮ್ ಇದೇ "ಹೂ" ಅಂತ ಅದ್ರಲ್ಲಿ ಬರೋ ಪಾತ್ರಗಳ ಥರ....ನಮ್ಮ ಸ್ನೇಹಕ್ಕೆ ವರ್ಷಕಳೆದಿದೆ ಇಂದಿಗೂ ಜೊತೆಗಿದ್ದೇವೆ ಅದೇ ಸ್ನೇಹ ಅದೇ ಮನಸು ಅದೇ ಮಾತು ಎಲ್ಲದರಲ್ಲೂ ಒಂದೇ ಟೆಸ್ಟು...ಫ್ರೆಂಡ್ ಅಂದ್ರೆ ಹಾಗಿರಬೇಕು ಅಲ್ವ...? 

ಇಂದು ಅವಳ ಹುಟ್ಟು ಹಬ್ಬ ಅದಕ್ಕೆ ಈ ಪಾಟಿ ಬರವಣೆಗೆ ಬನ್ನಿ ಎಲ್ಲಾ ವಿಶ್ ಮಾಡೋಣ ನನ್ನ ನವಿಲ್ಗರೆ ಹುಡುಗಿಗೆ  Many More Happy returns Of the day "ನಂದು" 


"ನಿನ್ನ ಜೀವನದ ಪ್ರತಿಯೊಂದು ಹೆಜ್ಜೆಯು ಹೂವಿನ ದಾರಿಯಿಂದ ಕೂಡಿರಲಿ, ಜನ್ಮದಿನದ ಶುಭಾಶಯಗಳು"


ಹ್ಮಂ ಹೇಳೋದು ಮರೆತಿದ್ದೆ  ನನಗೆ ನವಿಲ ಗರಿ ಅಂದ್ರೆ ತುಂಬಾ ಇಷ್ಟ ಒನ್ ಟೈಮ್ ನಂದುಗೆ ಹೇಳಿದ್ದೆ ಅವಳು ಹುಡುಕೊಂಡು ನನಗಾಗಿ ಎರಡು ನಾವಿಲ್ ಗರಿ ತಂದು ಕೊಟ್ಟಿದ್ಲು ಈಗ್ಲೂ ಅವು ಹಾಗೆ ಇವೆ ಅವಳ ನಗುವಿನ ಜೊತೆಗೆ.... ಅಲ್ದೆ ಅವಳು ನವಿಲ ಥರಾನೆ ತುಂಬಾ ಚನ್ನಾಗಿ ಡ್ಯಾನ್ಸ್  ಮಾಡ್ತಾಳೆ.... ಅದ್ಕೆ ನಾ ನವಿಲ್ ಹುಡುಗಿ ಅನ್ನೋದು... ನಾನು ಒಂದೆರಡು ಟೈಮ್ ಜೊತೆಗೆ ಸ್ಟೆಪ್ ಹಾಕಿದಿನಿ..... !

ನಿನ್ನ ಕಂಗಳ ಕಾಂತಿಯ 
ಹೊಳಪನ್ನೇ ಹೋಲುವ ಆ ಗರಿಗಳು 
ಬೆಳದಿಂಗಳ ಬೆಳಕಲಿ ಇಂದಿಗೂ 
ಮಿನುಗುತ್ತಿವೆ  ಹೃದಯದ ಕೋಣೆಯ 
ಸ್ನೇಹದ ಕಿಟಕಿಯಲಿ...!

                                                 :::: Moral of the story ::::
"ಸ್ನೇಹವೇ ಅನಂತ ಸ್ನೇಹವೇ ಶಾಶ್ವತ "

~$ಮರೀಚಿಕೆ$~
ದೊಡ್ಡಮನಿ.ಮಂಜು?
+919742495837   17 comments:

 1. ಜನ್ಮದಿನದ ಶುಭಾಶಯಗಳು :)

  ReplyDelete
 2. Manju nanna paravagi nim navila gari hudugi wishes tilisi
  Naguminchu

  ReplyDelete
 3. thq so much @Mohan & Naguminchu Nimma wish na naa nanduge tilistini

  ReplyDelete
 4. manju nimma lekhana snehada bagge, nandu bagge tumbaa ishta aytu..

  happy birthday to nandu..

  ReplyDelete
 5. @ಮೌನರಾಗ..:::: thq for like :::: Nim wish na naa nanduge tilistini :::

  ReplyDelete
 6. ಸ್ನೇಹ ಚಿರಾಯು.. ಸದಾ ನಿಮ್ಮಿಬ್ಬರ ಸ್ನೇಹ ಹಸಿರಾಗಿರಲಿ.
  ನಂದು ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು..

  ReplyDelete
 7. my good wishes to your good friend.

  ReplyDelete
 8. ನಿಮ್ಮ ನವಿಲು ಗರಿ ನಂದು ಗೆ ನನ್ನ ಕಡೆಯಿಂದ ಶಭಾಶಯಗಳು....... ನನಗು ಯಾರು ಸ್ನೇಹಿತರಿಲ್ಲ.....ನಿಮ್ಮನ್ನು ಪಡೆದ ಅವರೇ ಧನ್ಯರು........

  ReplyDelete
 9. Nimma Friend Navilu Gari Hudigigi Huutu Habbada Hardik Subashayagalu

  ReplyDelete
 10. wish u many more happy returns of the day nandu

  ReplyDelete
 11. "ಸ್ನೇಹವೇ ಅನಂತ ಸ್ನೇಹವೇ ಶಾಶ್ವತ "

  ReplyDelete
 12. ನಿಮ್ಮ ನವಿಲುಗರಿ ಸ್ನೇಹಿತೆ(ನಂದಿತ)ಗೆ ಹುಟ್ಟುಹಬ್ಬದ ಶುಭಾಶಯಗಳು.......

  ಎಲ್ಲ ಬಂದಗಳಿಗೂ ಮೀರಿದ ಬಂದ ಈ ಸ್ನೇಹಬಂದ,ನಿಮ್ಮ ಸ್ನೇಹ ಚಿರವಾಗಿರಲಿ

  ReplyDelete
 13. ವಿಶ್ ಮಾಡಿದ ನಿಮ್ಮೆಲ್ಲರಿಗೂ ಧನ್ಯವಾದಗಳು :-)

  ReplyDelete
 14. ಚಿರಕಾಲ ಇರಲಿ ಈ ಸ್ನೇಹ

  ಫ್ರೆಂಡ್ ಮತ್ತು ಫ್ರೆಂಡ್ ಶಿಪ್
  ಅನ್ನೋದು ಭಾವನೆಗಳ ಪ್ಯಾಕೇಜ್,ಅದನ್ನು ಯಾರು ಸೃಷ್ಟಿಸಲಾರರು,ಯಾರು ಕೂಡ ಮುರಿಯಲಾರರು,ಯಾರು ಕೂಡ ವಿವರಿಸಲಾರರು,ಆದರೆ,
  ಎಲ್ಲಾರು ಅನುಭವಿಸಬಲ್ಲರು

  ReplyDelete