ಸತ್ಯವನ್ನೇ ನುಡಿಸು ಗುರುವೇ ನರವಿಲ್ಲದ ಜಿಹ್ವೆಯೋಳ್ ! ಸ್ಥಿರವಾಗಿ ನೆಲೆಸು ಗುರುವೇ ಮರ್ಕಟ ಈ ಮನದೊಳ್ !

Thursday 1 April 2010

ರಾ... ರಾ... ನಾಗವಲ್ಲಿಯ ಬುರುಡೆ ಪತ್ತೆ ಆದದ್ದು ಹೀಗೆ !


ಯಾರು ಈ ನಾಗವಲ್ಲಿ ?
ನೀವು ಅನ್ಕೊಂಡಿರೋ ರೀತಿ ನಾಗವಲ್ಲಿ ಕೇವಲ ಆಪ್ತ ಮಿತ್ರ ಅಥವಾ ಆಪ್ತ ರಕ್ಷಕ ಸಿನಿಮಾದ ಕತೆಯಲ್ಲಿ ಬರೋ ಕೇವಲ ಒಂದು ಪಾತ್ರ ಅಲ್ಲಾ !
ನಾಗವಲ್ಲಿ ಅನ್ನೋ ಪದನೆ ಅದ್ಬುತ ಇನ್ನು ಆ ದಂತ ಕತೆ ಕೇಳಿದ್ರೆ ಮೈ ನವಿರೆಳುತ್ತೆ !

ನಾಗವಲ್ಲಿಯ ನೆಲೆ ಎಲ್ಲಿ ?
ನಾಗವಲ್ಲಿ ಬಗ್ಗೆ ಆಪ್ತ ರಕ್ಷಕ ಸಿನಿಮಾ ನೋಡಿದ ದಿನದಿಂದ ಇಲ್ಲಿಯವರೆಗೂ ತುಂಬಾ ಕಾಡ್ತಾ ಇದ್ದ ಈ ನಾಗವಲ್ಲಿ ಯಾರು ಅಂತ ಪ್ರತಿ ಬಾರಿನು ಏನಾದ್ರು ಹೊಸದಾಗಿ ಮಾಡಿಬೇಕು ಅಂತ ಅನ್ಕೊಳ್ತಿದ್ದ ನನಗೆ ಆಪ್ತ ರಕ್ಷಕ ಸಿನಿಮಾ ನೋಡಿ ಬಂದ ಮೇಲೆ ನಾನು ಶುರು ಮಾಡಿದ್ದೆ ನಾಗವಲ್ಲಿಯ ನೆಲೆ ಎಲ್ಲಿ ?

ನಾನು ನನ್ನ ಫ್ರೆಂಡ್ಸ್ ಜೊತೆ ತಮಿಳುನಾಡಿನ "ನಾಗವೆಳು" ಅನ್ನೋ ಒಂದು ಹಳ್ಳಿಗೆ ಹೋಗಿದ್ವಿ ಅಲ್ಲಿ ಕೆಲವು ಮಾಹಿತಿಗಳು ಸಿಕ್ಕವು ಒತ್ತು ಒಂದು ಹದಿನೈದು ಬಾರಿ ನಾವು ಆ ಗ್ರಾಮಕ್ಕೆ ಬೇಟಿ ನಿಡಿದ್ವಿ, ಅಲ್ಲಿ ಒಬ್ಬರ ಮನೆಯಲ್ಲಿ ನಮಗೆ ನಾಗವಲ್ಲಿಯ ಮಾಹಿತಿ ಇರೋ ಪ್ರಾಚಿನ ಪುಸ್ತಕ ಸಿಕ್ತು ಅದನ್ನ ಅವರಿಂದ ಕೇಳಿ ತಗೆದು ಕೊಂಡು ಬಂದು ಸ್ಟಡಿ ಮಾಡೋಣ ಅಂದ್ರೆ ಅದು ಸಂಪೂರ್ಣವಾಗಿ ತಮಿಳು ಮಿಶ್ರಿತ ಸಂಸ್ಕೃತದಲ್ಲಿ ಇತ್ತು ಆಗ ಅದನ್ನ ನನಗೆ ಪರಿಚಯ ಇದ್ದ ಒಬ್ಬ ತಮಿಳು ವಿಶ್ವವಿದ್ಯಾಲಯದ ಕುಲಪತಿ ಡಾ!. ಎ.ಪ. ಮುರುಕನರಂ ಮೂರ್ತಿ ಅವರ ಹತ್ರ ಹೋಗಿ ಎಲ್ಲವನ್ನು ಕನ್ನಡಕ್ಕೆ ಅನುವಾದ ಮಾಡಿಸಿಕೊಂಡು ಬಂದ್ವಿ ಅದಕ್ಕೆ ನಾವು ತಗೊಂಡಿದ್ದು ಒಂದೂವರೆ ತಿಂಗಳು.

ನಂತರ ನಾನು ನನ್ನ ಜೊತೆ 4 ಜನ ಹಾಗೆ ಹವ್ಯಾಸಿ ಪತ್ರಕರ್ತ ರಮೇಶ್ ಅವರ ಜೊತೆ "ನಾಗವೆಳು" ಗ್ರಾಮಕ್ಕೆ ಮತ್ತೆ ಹೋದ್ವಿ ಅಲ್ಲಿಂದ 15 ಕಿ.ಮೀಟರ್ ಕಾಲು ನಡೆಗೆಯಲ್ಲಿ ಹೋದ್ರೆ ನಮಗೆ ಸಿಕ್ಕಿದ್ದು ಒಂದು ಆಲದ ಮರ ಅಲ್ಲಿ ಸ್ವಲ್ಪ ಕೂತುಕೊಂಡು ವಿಶ್ರಾಂತಿ ತಗೊಂಡು ಮತ್ತೆ ಹೊರಟ್ವಿ ಆಗ್ಲೇ ಸಂಜೆ ಆಗಿತ್ತು ಕೈಯಲ್ಲಿ ಎರಡು ಟಾರ್ಚ್ ಬಿಟ್ರೆ ಬೇರೇನೂ ಇರ್ಲಿಲ್ಲ ಹೋಗ್ತಾ ಹೋಗ್ತಾ ಕತ್ತಲಗಿದ್ದೆ ಗೊತ್ತೇ ಆಗ್ಲಿಲ್ಲ. ತುಂಬಾ ಸುಸ್ತಾಗಿತ್ತು ಅದಕ್ಕೆ ನಾವು ಅವತ್ತು ಅಲ್ಲೇ ಉಳಿದುಕೊಳ್ಳೋಣ ಅಂತ ಯಾವದಾದ್ರು ಒಂದು ಒಳ್ಳೆ ಪ್ಲೇಸ್ ನೋಡ್ತಾ ಇದ್ವಿ ಮಹಾನ್ ಬುದ್ದಿವಂತರು ಕಾಡಲ್ಲಿ ಹೋಗಿ ಒಳ್ಳೆ ಪ್ಲೇಸ್ ಗೆ ಸರ್ಚ್ ಮಾಡ್ತಾ ಇದ್ವಿ :) ಕಾಡು ಬೇರೆ ನಮ್ಮ ಮನೆ ಹತ್ರ ಯಾವದಾದ್ರು ನಾಯಿ ಬೊಗಳಿದರೆ ಹೆದರಿಕೊಳ್ಳೋ ನಾನು ಆ ಕಾಡ್ನಲ್ಲಿ ನರಿಗಳು ಕೂಗೋದು ಗೂಬೆಗಳ ಸದ್ದು ಎಲ್ಲ ಕೇಳಿ ಕೇಳಿ ಮನಸ್ಸನಲ್ಲಿ ಅನ್ಕೊಳ್ತಾ ಇದ್ದೆ ಮಂಜ ಇದೆಲ್ಲ ನಿನಗೆ ಬೇಕಾಗಿತ್ತಾ ಅಂತ ಮನೆಗೆ ಗೊತ್ತಾದ್ರೆ ನನ್ನ ಕತೆ ಅಷ್ಟೇನೆ ಹೇಗೋ ಬಂದಿದಿವಿ ಜೀವಂತವಾಗಿ ಊರಿಗೆ ಸೇರಿದರೆ ಸಾಕು ಅನಿಸ್ತ ಇತ್ತು ! ಹಾಗೋ ಹೀಗೋ ಹೇಗೋ ನಮ್ಮ ರಮೇಶ್ ಕಣ್ಣಿಗೆ ಒಂದು ಮನೆ ಕಾಣ್ತು ಅಬ್ಬಾ ಏನ್ ಧೈರ್ಯ ಅಂತಿರ ಅವಂದು ತನ್ನ ಕೈಯಲ್ಲಿ ಇದ್ದ ಕ್ಯಾಮರ ಹೊರ ತೆಗೆದು ಫೋಟೋ ತಗಿತಾ ಆ ಮನೆ ಹತ್ರ ಹೋಗ್ತಾ ಇದ್ದ ನಾವು ಅವನ ಹಿಂದೇ ಹೋಗ್ತಾ ಇದ್ವಿ ಅಂತು ಇಂತೂ ಮನೆ ಹತ್ರ ಬಂದ ಮೇಲೆ ನಮಗೆ ಗೊತ್ತಾಗಿದ್ದು ನಾವು ಬರಬೇಕಾದ ಪ್ಲೇಸ್ ಗೆ ಆಗಲೇ ಬಂದಿದಿವಿ ಅಂತ !

ಅಲ್ಲಿ ತನಕ ಇಲ್ದೆ ಇರೋ ಹೆದರಿಕೆ ಆ ಮನೆ ಹತ್ರ ಹೋದ ಮೇಲೆ ನಮಗೆ ಶುರುವಾಯ್ತು ಕತೆ ಕವನ ಬರಕೊಂಡು ಹಾಯಾಗಿದ್ದೆ ಈ ಹಾಳು ಐಡಿಯಾ ಕೊಟ್ಟು ನಾನು ಹಾಳಾದೆ ಅಂತ ಗುನುಗುತ್ತಾ ರಮೇಶನ ಹಿಂದೇ ಹಿಂದೇ ಹೋದೆ ಇನ್ನೇನು ಬಾಗಿಲ ಒಳಗೆ ಹೋಗ್ಬೇಕು ಅಷ್ಟರಲ್ಲಿ ಒಳಗಡೆ ಇಂದ ಯಾವ್ದೋ ಪಕ್ಷಿ ಹಾರಿ ಹೋಯ್ತು ಅಬ್ಬಾ ಎದೆ ಹಾಗೆ ಜಲ್ಲ ಅಂತು.

ನಾಗವಲ್ಲಿಯ ಬುರುಡೆ ಪತ್ತೆ ಆದದ್ದು ಹೀಗೆ !
ಹಾಗೂ ಹೀಗೋ ಒಳಗಡೆ ಹೋದ್ವಿ ರಮೇಶ್ ಎಲ್ಲ ಫೋಟೋ ತಗಿತಾ ಇದ್ದ ಮನೆ ಎಷ್ಟು ಚನ್ನಾಗಿತ್ತು ಅಂದ್ರೆ ಅರಮನೆ ಥರ ಇತ್ತು ಒಳಗಡೆ ಎಲ್ಲ ಆಮೇಲೆ ಗೊತ್ತಾಗಿದ್ದು ಇದು ನಾಗವೆಳು ರಾಜ್ಯದ ರಾಜನ ಅರಮನೆ ಅಂತ ನಾವು ಅನ್ಕೊಂಡ ರೀತಿ ಅಲ್ಲಿ ಏನು ಇರ್ಲಿಲ್ಲ ಆ ಮನೆಯ ಪ್ರತಿ ಒಂದು ಕೋಣೆಯನ್ನು ಬಿಡದೆ ಹುದುಕಿದ್ವಿ ಏನು ಸಿಗ್ಲಿಲ್ಲ ! ತುಂಬಾ ನಿರಾಸೆ ಆಯ್ತು ಬೆಳಗ್ಗೆ ಆಗಿದ್ದೆ ಗೊತ್ತಾಗ್ಲಿಲ್ಲ ನಮಗೆ ! ಆಗ ಬೆಳಗ್ಗೆ 4 ಇರ್ಬೇಕು ಅನಿಸುತ್ತೆ ನಾನು ಸ್ವಲ್ಪ ಅರಮನೆಯಾ ಪಕ್ಕದಲ್ಲಿ ಒಂದು ಚಿಕ್ಕ ಗೋರಿ ಥರ ಇತ್ತು ಅದನ್ನ ನೋಡೋಣ ಅಂತ ಬಂದ ಅದ್ರ ಮೇಲೆ ಅರ್ಥ ಆಗದ ಭಾಷೆಯಲ್ಲಿ ಏನೇನೊ ಬರೆದಿತ್ತು ಅದನ್ನೆಲ್ಲ ಫೋಟೋ ತಗೊಂಡು ಆಮೇಲೆ ಆ ಗೋರಿ ಉಳಗೆ ಏನಿದೆ ಅಂತ ಗೋರಿನಾ ಒಡೆದು ಬಿಟ್ಟ್ವಿ ಅಬ್ಬಾ ಭಯಾನುಕರ ನನೆಗೆ ನೋಡೋಕೆ ಆಗದೆ ಎದ್ದು ಬಿಟ್ಟು ದೊರ ಬಂದೆ ರಮೇಶ ಅದೇನೋ ಫೋಟೋ ತಗೊಂಡ, ಆಮೇಲೆ ಗೊತ್ತಾಯ್ತು ಇದು ನಾಗವಲ್ಲಿ ಆಸ್ತಿಪಂಜರ ಅಂತ ಅಲ್ದೆ ತಲೆಬುರುಡೆ ಬೇರೆ ತಗೊಂಡು ತನ್ನ ಬ್ಯಾಗ್ ನಲ್ಲಿ ಹಾಕ್ಕೊಂಡ ಅದನ್ನ ನೀವು ನೋಡಲಿ ಅಂತ ಆ ಫೋಟೋ ತಗೊಂಡು ಬಂದಿದೀನಿ ನೋಡಿ !


ಅಲ್ದೆ ಅದ್ರಲ್ಲಿ ನಮಗೆ ಒಂದು ತಾಳೆ ಗರೆ ಇತ್ತು ಅದ್ರಲ್ಲಿ ಒಂದು ವಾಕ್ಯ ಬರದಿತ್ತು ಅದೇನಪ್ಪ ಅಂದ್ರೆ

ವಿಶೇಷ ಸೂಚನೆ :- ಕೆಲವೊಮ್ಮೆ ನಿಮಗೆ ಆ ವಾಕ್ಯಗಳು ಕಾಣದೆ ಇದ್ದಾರೆ ದಯವಿಟ್ಟು ನಿಮ್ಮ ಕೀ ಬೋರ್ಡ್ ನಾ ctrl + A ಒತ್ತಿ ನೋಡಿ ಕಾಣುತ್ತೆ
!

!

!

!

!

!

!

!

!

!

!

!

!

!

!

!

!

!

!

!

!

!
"ಇದುವರೆಗೂ ನಾನು ಓದಿದ ಕತೆ ಕೇವಲ ಕಾಲ್ಪನಿಕ ! ಮತ್ತು ನಾನು ಸಂಪೂರ್ಣವಾಗಿ ಏಪ್ರಿಲ್ ಫೂಲ್ ಆಗಿದ್ದೇನೆ ಎಂದು ಈ ಮೊಲಕ ಘೋಷಿಸುತ್ತಿದ್ದೇನೆ"




Happy & Prosperous fools day
ಇಂತಿ ನಿಮ್ಮ
ಮಂಜು ದೊಡ್ಡಮನಿ

22 comments:

  1. Manju ninu helidu nagvalli story ashte adre eli fool agirodu nine kano yakandre nagavlli satilla kano avlu jivnatavagiye edale.??????

    ReplyDelete
  2. entha thrilling story.....!!

    yeh manju, fool maadod andre idappa.....super manju.!!

    ReplyDelete
  3. ushr.....
    aptamitra filminda soundrya hodlu...

    aptarakshaka filminda vishnu dada hodru...

    e story inda nin kate mugitu bidu

    ReplyDelete
  4. super story fool madoke,,

    nice manju,,

    ReplyDelete
  5. Manju avre edhu 100% nija, naninnu nimma Nagavalli story odhilla, but nan agle guess madidhe idhu foooool irboudhu antha, any way evaga nanu idhannu odtini, nanthara yenadru ansudre comment hakthini. . k na. . Adru Evaga foool agidhu yaru? nana!!! illa niva!!!!.

    ReplyDelete
  6. ಒಹ್ ಒಹ್ ಪ್ರೇಮ ನಾಗವಲ್ಲಿ ಜೀವಂತವಾಗಿದಲೇ ಅನೋದಕ್ಕೆ ನಿನ್ನ ಹತ್ರ ಏನ್ ಸರ್ಟಿಫಿಕೇಟ್ ಇದೇನಾ
    ಹ್ಹ ಹ್ಹ ಹ್ಹ ಅಂತು ಇಂತೂ ಫೂಲ್ ಆದ್ಯಲ್ಲ :)

    ReplyDelete
  7. ರವಿ ಅವರೇ ತುಂಬಾ ಧನ್ಯವಾದಗಳು
    ಸ್ವಲ್ಪ ವಿಶೇಷವಾಗಿ ಫೂಲ್ ಮಾಡೋಣ ಅಂತ ಮಾಡಿದ ಚಿಕ್ಕ ಪ್ರಯತ್ನ ಇದು !

    ReplyDelete
  8. ದೇವು ದೇವರಾಜಾ ಯಾಕಪ್ಪ ನಾನು ಚನ್ನಗಿರೋದು ನಿನಗೆ ಇಷ್ಟ ಇಲ್ವಾ ಕತೆ ಮುಗಿತು ನಂದು ಅಂತಿದಿಯಾ

    ನಿನ್ ಹೇಳೋದು ಒಂಥರಾ ಸರಿ ನೇ ನನಗೆ ನಾಗವಲ್ಲಿ ಕಾನ್ಸೆಪ್ಟ್ ಬಗ್ಗೆ ತಲೆಕೆಡಿಸ್ಕೊಂಡು ಸ್ಟೋರ್ ಬರೆದ ದಿನನೇ ಇದಕ್ಕೆ ಇದ್ದಂಗೆ ಹುಷಾರ್ ಇಲ್ದೆ ಆಸ್ಪತ್ರೆ ಸೇರಿದ್ದೇ 3 ದಿನ ಆಫೀಸ್ ಗೆ ಬಂದಿರಲಿಲ್ಲ ಗೊತ್ತಿದೆ ಅಲ್ವ ನಿನಗೂ :)

    ReplyDelete
  9. Thank u Mr. prethu ಫೂಲ್ ಆದದಕ್ಕೆ :)

    ReplyDelete
  10. ಗುರು ದೆಸೆ ಅವರೇ ಕೀ ಬೋರ್ಡ್ ನಲ್ಲಿ ಇರೋ ಅಕ್ಷರಗಳನ್ನೆಲ್ಲ ಟೈಪ್ ಮಾಡಿದಿರಾ ಏನು ಟೈಪಿಂಗ್ ಪ್ರಾಕ್ಟೀಸ್ ಮಾಡ್ತಾ ಇದ್ದೀರಾ :)

    ReplyDelete
  11. ರಾಜೇಶ್ ಗೌಡ ವರೆ ಫೂಲ್ ಮಾಡಿಬೇಕು ಅಂತಾನೆ ಮಾಡಿದ್ದು ನಾನು ಒಬ್ಬನೇ ಯಾಕೆ ಫೂಲ್ ಆಗ್ತೀನಿ ಯಾಕಂದ್ರೆ ನಾನು ಮೊದ್ಲೇ ದೊಡ್ಡ ಫೂಲ್ ಅಲ್ವ !

    ReplyDelete
  12. kate shuru maduvagle dowt ittu manju kelsa bittu aliyodu sadyana anta allade namige gottilva nam devru buddi adru enu madidane anta tilkondvi olle prayatna aste better luck next time putta...

    ReplyDelete
  13. ಹೇ ಕಿರಣ್ ನಿಮ್ಮ ದೇವರ ಬುದ್ದಿ ಗೊತ್ತಿದ್ರು ಈ ಸ್ಟೋರಿ ಓದಿದಕ್ಕೆ ಧನ್ಯವಾದ. ಇದೆಲ್ಲ ಸುಮ್ನೆ ತಮಾಷೆಗೆ :)

    ReplyDelete
  14. oh ! antu intu fool adralla saaku bidi !

    ReplyDelete
  15. hi......... manju, naanu nim nagavalli story hodhovaaga, manju e thara yella research madthara ankonde. . . adhre e reeti foool madtira antha ankondirlilla..
    nivu holle kathegaararu kanri........

    ReplyDelete
  16. @ವಸಂತ್ ::-- thank u for your comments

    ReplyDelete
  17. @balu g.k ::- ಕತೆ ಓದೋ ಯಾರಿಗೂ ಗೊತ್ತಿರೋಲ್ಲ ಇದೊಂದು ಬೋಗಸ್ ಕತೆ ಅಂತ ಅದಕ್ಕೆ ಕೊನೆಯೆಲ್ಲಿ ಫೂಲ್ ಮಾಡಿರೋದು :)

    ReplyDelete
  18. yappa yaavag barbeku nimge aa dhairya....?
    hushaaru ri flashback maadkoli ondsala
    nang swalpa bhaya aitu...dancege make-up maadkondaaga
    nan mukha nodoke nange bhaya aitu...

    ReplyDelete
  19. @Bhavya :::: ha ... Ha..... ha... haagdre make up bedaa :::

    ReplyDelete
  20. ಏನೋ ಒಂದು ವಿಚಿತ್ರ ಅನುಭವ + ಜೊತೆಯಲ್ಲಿ ಕಥೆಯ ಕೊನೆಯಲ್ಲಿ ಒಂದಷ್ಟು ಮಜಾ .. ಸಕತ್ತಾಗಿದೆ ನಿಮ್ಮ ಇಮ್ಯಾಜಿನೇಶನ್ ಮಂಜು.. :)

    ReplyDelete