ಸತ್ಯವನ್ನೇ ನುಡಿಸು ಗುರುವೇ ನರವಿಲ್ಲದ ಜಿಹ್ವೆಯೋಳ್ ! ಸ್ಥಿರವಾಗಿ ನೆಲೆಸು ಗುರುವೇ ಮರ್ಕಟ ಈ ಮನದೊಳ್ !

Sunday 30 September 2012

ಆತ ಚಂದಿರ ಈಕೆ ನೈದಿಲೆ...!

ಕಾಲೇಜ್ ಡೈರಿ ಮಾಸ ಪತ್ರಿಕೆಯಲ್ಲಿ ಪ್ರಕಟಿತ ನನ್ನ ಲೇಖನ 


ಕೆ ಅಪ್ಪಟ ಮಲೆನಾಡಿನ ಹುಡುಗಿ, ಕಷ್ಟಗಳಲ್ಲೇ ತನ್ನ ಜೀವನವನ್ನ ಕಟ್ಟಿಕೊಂಡವಳು ತಾಯಿಯ ಮಡಿಲಲ್ಲಿ ತಂದೆ ಇಲ್ಲದೆ ಬೆಳೆದ ಅವಳು ದಿನವೂ ಕಟ್ಟುತ್ತಿದ್ದ ಕನಸುಗಳಿಗೆ ಲೆಕ್ಕವಿರಲಿಲ್ಲ.. ನಿಜ ಕನಸು ಕಟ್ಟುವ ವಯಸ್ಸೇ ಅದು.. ಕಾಲೇಜು ದಿನಗಳಲ್ಲಿ ಅವನ ಜೊತೆ ಕಟ್ಟಿದ ಕನಸುಗಳು ಇನ್ನೂ ಹಾಗೆ ಉಳಿದಿವೆ,  ಹೌದು ಅವನೆಂದರೆ ಅವನೇ ಇವಳ ಕನಸುಗಳ ನನಸಾಗಿಸೋ ಭರವಸೆ ಮೂಡಿಸಿದ ಬೇವಿನಂತ ಬದುಕಿನ ದಾರಿಯಲ್ಲಿ ಅಪರೂಪವೆಂಬಂತೆ  ಬೆಲ್ಲದ ಕಣವಾಗಿ ಸಿಕ್ಕ ಅವಳ ಭವಿಷ್ಯದ ನಾಯಕ.. ಹ್ಮಂ ಅವನೆಂದರೆ ಅವನೇ ಅವಳ ಒಂಟಿ ಬದುಕ ದೋಣಿಯ ನಾವಿಕ, 

ಮಲೆನಾಡಿನ ಸುಂದರ ದಿನಗಳು ಜೊತೆಗೆ ಚಿಟಪಟ ಮಳೆ,  ಅವನ ಪರಿಚಯ ಆಗಿದ್ದೆ ಅವಳಿಗೆ ಅಂತಹ ಚಿಟಪಟ ಮಳೆಯಲ್ಲಿ, ಕಾಲೇಜು ಮುಗಿಸಿಕೊಂಡು ಬಸ್ ಸ್ಟಾಪ್ ಗೆ ಮಳೆಯಲ್ಲಿ ತೊಯ್ದುಕೊಂಡು ಹೋಗುತ್ತಿದ್ದವವನ ಇವಳಾಗಿಗೆ ಮಾತನಾಡಿಸಿ ಒಂದೇ ಛತ್ರಿ ಯಲ್ಲಿ ಇಬ್ಬರು ನಡೆದ ದಿನದಿಂದ ಮುಂದೆ ಕೈ ಕೈ ಹಿಡಿದು ಭುಜಕ್ಕೆ ಭುಜ ತಾಗಿಸಿಕೊಂಡು ನಡೆದ ದಿನಗಳ ಲೆಕ್ಕವಿಲ್ಲ,  ಕಾಲೇಜಿಗೂ ಬಸ್ ಸ್ಟಾಪ್ ಗೂ ಹತ್ತಿರವಲ್ಲದ ಹತ್ತಿರದ ಮದ್ಯದಲ್ಲಿ  ಒಂದು ಹಳ್ಳಿಮರ ಅದಕ್ಕೆ ಸುತ್ತಲು ಕೂತು ಹರಟಲೆಂದೇ ಕಟ್ಟಿರುವ ಕಲ್ಲಿನ ಕಟ್ಟೆ, ಅಲ್ಲಿ ಪ್ರತಿ ದಿನ ಕಾಲೇಜು ಮುಗಿದ ಕೂಡಲೇ ಅವಳು ಅವನಿಗಾಗಿ ಕೂರುತ್ತಾಳೆ, ತುಸು ಹೊತ್ತು ಅವನೊಂದಿಗೆ ಚಲ್ಲಾಡಲು ಹೇಳಿ ಮಾಡಿಸಿದ ಸೂಕ್ತ ಜಾಗವೆಂದರೆ ಆ ಹಳ್ಳಿಮರದ ಕಟ್ಟೆ , ಅವನು ಕೂಡ ತಪ್ಪದೆ ಬರುತ್ತಿದ್ದ,  ಎಷ್ಟು ಧನ ಕರ ಕಾರು ಬಸ್ಸು ಸ್ನೇಹಿತರು ಊರಿನ ಜನರು ಅದೇ ದಾರಿಯಲ್ಲೇ ಹಾದು ಹೋದರು ಅದ್ಯಾವುದರ ಚಿಂತೆಯ ಗೋಜು ಇವರಿಗಿರಲಿಲ್ಲ, ಪವಿತ್ರ ಪ್ರೇಮದ ಗುಂಗಿನಲಿ ಮುಳುಗಿದ ಯಾರಿಗಾದರು ಅಷ್ಟೇ ಅಲ್ವ..!? ಜಗತ್ತೇ ಕಣ್ ಮುಚ್ಚಿರುತ್ತದೆ ಎಂಬ ಭಾವ ಅವರಲ್ಲಿ... ಇವರಿಬ್ಬರ ಪ್ರೀತಿ ಇಡಿ ಊರಿಗೆ ಗೊತ್ತಿತ್ತು ಮನೆಯವರಿಂದ ಯಾವುದೇ Restriction ಇರಲಿಲ್ಲ ಬದಲಿಗೆ ಮನೆಯವರೇ ಇಬ್ಬರ ಸಂಭಂದ ಒಪ್ಪಿ ಇಬ್ಬರ ಓದಿನ ನಂತರ ಮದುವೆ ಮಾಡಲು ತೀರ್ಮಾನಿಸಿದ್ದರು... ಅದಕ್ಕಾಗಿ ಅವಳು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಳು ಅಂದುಕೊಂಡಂತೆ ತಮ್ಮ ಓದಿನ ಕೊನೆಯದಿನಗಳು ಬಂದವು.. 



ವಿಧಿಯ ಪಗಡೆಯಾಟ ಶುರುವಾಗಿದ್ದೆ ಅಲ್ಲಿಂದ...
ಮನೆಯವರೆಲ್ಲ ಮದುವೆಯ ಬಗ್ಗೆ ಪ್ರಸ್ತಾಪಿಸಿದರು ಆದರೆ ಇವನು ಸಮ್ಮತಿಸಲಿಲ್ಲ, ಈಗತಾನೇ ಓದು ಮುಗಿದಿದೆ ಎಲ್ಲಾದರು ಒಂದು ಕೆಲಸ ಸಿಗುವವರೆಗೂ ಮದುವೆ ಬೇಡ, ದುಡಿಮೆ ಇಲ್ಲದೆ ಮದುವೆ ಮಾಡಿಕೊಂಡು ನಾಳೆ ಜೀವನ ಕಷ್ಟವಾದೀತು ತಂದೆ ಮಾಡಿದ ಆಸ್ತಿ ಕೂತು ತಿಂದರು ಕರಗೋದಿಲ್ಲ ಆದರು ಗಂಡಿಗೊಂದು ಕೆಲಸ ಅಂತ ಬೇಕಲ್ಲ ಅದಕ್ಕಾಗಿಯಾದರು ತಾನು ದುಡಿಯ ಬೇಕು ಎಂದೂ ಒಂದೇ  ಹಠ ಹಿಡಿದು ಕೂತ, ಅವಳ ಹೂ ಕನಸುಗಳ ಮೇಲೆ ದೊಡ್ಡ ಕಲ್ಲೇ ಬಿದ್ದಂತಾಯಿತು ಆದರು ನಿರಾಶೆಗೆ ಒಳಗಾಗದೆ ಅವನ ಮಾತಲ್ಲಿ ಸತ್ವವಿದೆ ಅವನ ನಿರ್ಧಾರ ಎಂದಿಗೂ ಸರಿಯಾಗಿರುತ್ತದೆ ಎಂದೂ ಅವಳು ತನ್ನ ಕನಸುಗಳನ್ನ ಯಾರಿಗೂ ಕಾಣದೆ ತನ್ನ ಕಣ್ಣಂಚಿನ ಹನಿಗಳಲ್ಲೇ ಬಚ್ಚಿಟ್ಟಳು. ದೊಡ್ಡವರೆಲ್ಲ ಅವನ ಮಾತಿಗೆ ತಲೆಯಾಡಿಸಿದರು. ಕೆಲವು ದಿನಗಳು ಹಾಗೆ ಕಳೆಯಿತು ಅವನ ಆಸೆಯಂತೆಯೇ ಬೆಂಗಳೂರಿನಿಂದ ಸ್ನೇಹಿತನ ಮೂಲಕ ಕೆಲಸದ ಆಹ್ವಾನ ಬಂತು ತಡಮಾಡದೆ ಅವನು ತನ್ನ ಲಗೇಜಿನೊಂದಿಗೆ ಬೆಂಗಳೂರಿಗೆ ಹೊಂಟು ನಿಂತು ಮನೆಯವರಿಗೆಲ್ಲ ನಮಸ್ಕರಿಸಿದ ಮನೆಯಿಂದ ಹೊರ ಹೋರಟು ಅವಳ ಮನೆ ಕಡೆ ಬಂದ ಅವಳು ಕಾಣಲಿಲ್ಲ ಭಾವಿ ಅತ್ತೆ-ಮಾವರಿಗೆ ನಮಸ್ಕರಿಸಿ ಅಲ್ಲಿಂದ ಸೀದಾ ಹಳ್ಳಿಮರದ ಕಟ್ಟೆಗೆ ಹೋದ ಅವನ ಊಹೇ  ಸರಿಯಾಗಿಯೇ ಇತ್ತು ಅವನಗಾಗಿ ಅವಳು ಅಲ್ಲೇ ಕಾಯುತ್ತ ಕೂತಿದ್ದಳು ಕಣ್ಣಲಿ ಪ್ರೇಮಗಂಗೆ ತುಂಬಿಕೊಂಡು.. ಅಂದು ಅವಳನ್ನ ಸಮಾಧಾನಿಸಿ ಬೇಗನೆ ಬಂದು ಬಿಡುವೆ ಚಿಂತಿಸ ಬೇಡ ಬಂದು ನಿನ್ನನ್ನು ಕರೆದುಕೊಂಡು ಹೋಗುವೆ ಎಂದೂ ಹೋದವನು ಮತ್ತೆ ಬರಲೇ ಇಲ್ಲಾ...  ದುರದೃಷ್ಟ ಅಂದು ಬೆಂಗಳೂರಿಗೆ ಹೋರಾಟ ಬಸ್ ಬೆಂಗಳೂರನ್ನು ತಲುಪಲೇ ಇಲ್ಲಾ ಡ್ರೈವೆರ್ ನ ನಿರ್ಲಕ್ಷದಿಂದ ಬಸ್ ಚಲನೆ ತಪ್ಪಿ ಕಾಣಲಾರದಷ್ಟು ಪ್ರಪಾತಕ್ಕೆ ಉರಳಿ ಬಿತ್ತು.. 

ಅತ್ತು ಅತ್ತು ಕಣ್ಣಿರು ಬತ್ತಿ ಹೋಗಿವೆ, ಊಟ ನಿದ್ದೆ ಎಲ್ಲಾ ಬಿಟ್ಟು ಗುಡಿಯೋಳಗಿನ ದೇವತೆಯಂತೆ ಇವಳು ಸುಮ್ಮನೆ ಕಾಯುತ್ತಾ ಕೂತ್ತಿದ್ದಾಳೆ ಅದೇ ಹಳ್ಳಿ ಮರದ ಕೆಳಗೆ ಅವನು ಬಂದೆ ಬರುತ್ತಾನೆಂದು ನಂಬಿ, ಅವಳ ನಂಬಿಕೆ ಹುಸಿ ಎಂಬುದು ತಿಳಿದ ವಿಷಯ ಆದರು ಕಾಯುತ್ತೇನೆಂದು ಕೂತ ಮನಸ್ಸಿಗೆ ಮತ್ತೊಂದು ಮನಸ್ಸಿನ ಅಧ್ಯಾಯದ ಅವಶ್ಯಕತೆ ಇದೇ ಅವನಿನ್ನೂ ಕೇವಲ ನೆನಪು ಅವಳ ಕಾಯುವಿಕೆ ನಿಲ್ಲಬೇಕು ಹೊಸ ಜೀವನದ ಅಧ್ಯಾಯ ಶುರುವಾಗಬೇಕು ಅಲ್ಲಿಯವರೆಗೂ ಅವಳ ಕಾಯುವಿಕೆ ನಿಲ್ಲದು ಆ ಕಾಯುವಿಕೆ ನಿಂತರು ಅವನ ನೆನಪು ಅಳಿಸದು ...  

-  ಇಲ್ಲಿ ಆತ ಚಂದಿರ ಈಕೆ ನೈದಿಲೆ, ಇವಳು ದಿನನಿತ್ಯ ಅವನಿಗಾಗಿ ಕಾಯುತ್ತಾಳೆ ಅವನು ತಪ್ಪದೆ ಬರುತ್ತಾನೆ ಒಬ್ಬರನೊಬ್ಬರು ಹೇಳಲಾರದಷ್ಟು ಪ್ರೀತಿಸುತ್ತಾರೆ ಒಂದಾಗುವ ಆಸೆಯೇಲ್ಲೇ ಕನಸು ಕಾಣುತ್ತಾರೆ ಆದರೆ ತಮ್ಮ ನಡುವೆ ಹೇಳದೆ ಕೇಳದೆ ಬರುವ ಅಮವಾಸೆಯನ್ನೇಕೆ ಮರೆಯುತ್ತಾರೆ..?  ಪ್ರೀತಿಸುವ ಹೃದಯಗಳಿಗೆ ಕಾಯುವಿಕೆಯೇನು ದೊಡ್ಡ ಮಾತಲ್ಲ... ಅದೊಂದು ಮದ್ದಿಲ್ಲದ ಕಾಯಿಲೆ..  ಆದರೆ ಎಲ್ಲಾ ಕಾಯುವಿಕೆಗೂ ಅರ್ಥವಿರಬೇಕಲ್ಲ..!? ನ್ಯಾಯ ಸಿಗಬೇಕಲ್ಲ..!? ಕೆಲವೊಮ್ಮೆ ಆ ದೇವರೇ ಕೆಲವರ ಪಾಲಿಗೆ ವೈರಿಯಾಗಿ ಎದುರು ನಿಲ್ಲುತ್ತಾನೆ.. ಪ್ರವಾಹದಲ್ಲಿ ಅಂಬಿಗನನ್ನೇ ನಂಬಿ ಕೊಂಡಾಗ ಅವನು ಕೈ ಕೊಟ್ಟರೆ ಕೊನೆಯದಾಗಿ ಕೂತ ದೋಣಿಯ ಮೇಲಾದರೂ ನಂಬಿಕೆ ಇರುತ್ತದೆ ಮುಳುಗದಂತೆ ತೇಲುಸುತ್ತದೆ ಎಂದೂ,  ಆ ದೋಣೆ ಕೂಡ ಒಂದು ದೊಡ್ಡ ಅಲೆಗೆ ಬುಡಮೇಲಾದರೆ ನಂಬಿಕೆ ಇನ್ನೆಲ್ಲಿ !?  ಈಜು ಬಂದರೆ ಅಲೆಗಳನ್ನು ಎದುರಿಸಿ ಹೇಗೋ ಉಳಿದು ಬರಬಹುದು ಆದರೆ ಸಾವೆಂಬ ಸಾವೇ ಬೆನ್ನೇರಿ ಕೂತು ಬದುಕು ನರವೇ ನೋಡೋಣ ಎಂದೂ ಸುಳಿಗೆ ಸಿಲುಕಿಸಿ ಸವಾಲು ಎಸೆದರೆ ಬದುಕುವ ಮಾತೆಲ್ಲಿ..!? 


- ದೊಡ್ಡಮನಿ.ಎಂ.ಮಂಜುನಾಥ

ದಾವಣಗೆರೆ... 

1 comment:

  1. ನವಿರಾದ ಪ್ರೇಮ ಕತೆಯ ನಿರೂಪಣೆ.. ಚೆನ್ನಾಗಿದೆ Bro...

    ReplyDelete