ಸತ್ಯವನ್ನೇ ನುಡಿಸು ಗುರುವೇ ನರವಿಲ್ಲದ ಜಿಹ್ವೆಯೋಳ್ ! ಸ್ಥಿರವಾಗಿ ನೆಲೆಸು ಗುರುವೇ ಮರ್ಕಟ ಈ ಮನದೊಳ್ !

Friday, 24 July 2009

“ಬತ್ತಿ ಹೋದ ಸಂಗೀತ "ಗಂಗೆ"


ಬತ್ತಿ ಹೋದ ಸಂಗೀತ "ಗಂಗೆ" ಗಂಗೂಬಾಯಿ ಹಾನಗಲ್ ರವರನ್ನು ಮೌನದಲ್ಲಿ ಸ್ಮರಿಸುತ್ತ
ಹಿಂದೂಸ್ತಾನಿ ಸಂಗೀತ ಲೋಕದ ಶ್ರೇಷ್ಟ ಗಾಯಕಿ ಗಂಗೂಬಾಯಿ ಹಾನಗಲ್ ಬಗ್ಗೆ ನಾನು ನನ್ನ ಸಣ್ಣ ವಯಸ್ಸಿನಲ್ಲಿ ಪಠ್ಯ ಒಂದರ ಮೊಲಕ ತಿಳಿದುಕೊಂಡಿದ್ದೆ ಹಿಂದೂಸ್ತಾನಿ ಸಂಗೀತ ಮಯಾವಾಗುತ್ತಿರುವ ಈ ಸಮಯದಲ್ಲಿ ಸಂಗಿತದ ಕೋಟೆ ಕಟ್ಟಿ ಮೆರೆದ ಮಹಾನ್ ವ್ಯಕ್ತಿ ನಮ್ಮ ನಾಡಿನ ಗಂಗೊಬಾಯಿ ಹಾನಗಲ್.


ಆಗ ನಂದು ತುಂಬಾ ಸಣ್ಣ ವಯಸ್ಸು ಅದೇನೋ ಹೇಳ್ತಾರಲ್ಲ "ಬಾಯಲ್ಲಿ ಬೇರಲಿಟ್ರೆ ಕಚ್ಚೋಕು ಬರಲ್ಲ" ಅಂತಹ ವಯಸ್ಸು ನನ್ನದು, ಅಂದು ಒಂದು ದಿನ ನನ್ನ ಶಾಲೆಯಲ್ಲಿ ತುಂಬಾ ನಿಶ್ಯಾಬ್ದದಿಂದ ಕೂಡಿತ್ತು ಅದೇನೋ ಗೊತ್ತಿಲ್ಲ ಎಲ್ಲರು ಅಂದು ಉತ್ಸಾಹದಿಂದ ಕೊತಿದ್ವಿ ಈ ದಿನಕ್ಕಾಗಿ ಕಾಯ್ತಾ ಇದ್ವಿ ಏಕೆಂದರೆ ಅಂದಿನ ವಿಷಯ ಕನ್ನಡ ಗದ್ಯ ಭಾಗದ ಗಂಗೂಬಾಯಿ ಹಾನಗಲ್ ಅವರ ಜೀವನದ
ಬಗ್ಗೆ ಪಾಠ ಮಾಡ್ತಾ ಇದ್ರು ನಿಜಾ ಹೇಳ್ಬೇಕು ಅಂದ್ರೆ ಅಂದಿನ ಪಾಠನಮ್ಮ ಜೊತೆ ಇದ್ದರೆಗಂಗೂಬಾಯಿ ಹಾನಗಲ್ ನಮ್ಮ ಜೊತೆ ಇದ್ದರೆ ಅನಿಸುತ್ತೆ ಅಲ್ವ !

ಅವರನ್ನ ನಾನು ತುಂಬಾ ಹತ್ತಿರದಿಂದ ನೋಡ್ಬೇಕು ಅಂತ ನನಗೆ ತುಂಬಾನೆ ಆಸೆ ಇತ್ತು ಏಕೆಂದರೆ ಅವರ ಅಭಿಮಾನಿಗಳಲ್ಲಿ ನಾನು ಒಬ್ಬ, ಅಭಿಮಾನಿ ಅಂದಾಕ್ಷಣ ನನಗೆ ಶಾಸ್ತ್ರೀಯ ಸಂಗೀತದ ಬಗ್ಗೆ ಜ್ಞಾನ ಏನು ಇಲ್ಲ ಆದ್ರೆ ಸಂಗೀತ ಕೇಳುವ ಹುಚ್ಚು ಕೇಳುತ್ತಾ ಹಾಡುವ ಹವ್ಯಾಸ ನನಗಿದೆ ಹಾಗಾಗಿ ನಾನು ಸಂಗೀತ ಯಾವುದೇ ಒಂದು ಎಳೆಯನ್ನು ಸಹ ಗೌರವಿಸುತಿನಿ. ಈ ನಾಲ್ಕು ಸಾಲುಗಳು ನನ್ನ ಬ್ಲಾಗ್ ನಲ್ಲಿ ಬರೀಬೇಕು ಅದನ್ನ ಎಲ್ಲರು ಓದಿ ನನ್ನ ಕಾಮೆಂಟ್ಸ್ ಗಳ ಲಿಸ್ಟ್ ಬೆಳಿಬೇಕು ಅಂತ ನಾನು ಬರಿತ ಇಲ್ಲ ನಮ್ಮ ನಿಮ್ಮೆಲ್ಲರನ್ನು ಅಗಲಿದ
ಗಂಗೂಬಾಯಿ ಹಾನಗಲ್ ಅವರಿಗೆ ಈ ಮೊಲಕ ನಾನು ಶ್ರದ್ದಾಂಜಲಿ ಸಲ್ಲಿಸುತ್ತಿದ್ದೇನೆ.

ಪ್ರೀತಿಯ ನನ್ನ ಗೆಳೆಯ/ಗೆಳತಿಯರೆ ಇವತ್ತು ನಾವೇನಾದರೂ ಸಾದಿಸ ಬೇಕು ಅಂದು ಕೊಂಡು ಹೊರಟರೆ ನಮ್ಮ ಹಿಂದೆ ಮಾದ್ಯಮಗಳ ಮುಖಾಂತರ ಪ್ರಚಾರ ಸಿಗುತ್ತೆ ಆದರೆ ಯವುದೇ ಪ್ರಚಾರವಿಲ್ಲದೆ ಇಡಿ ವಿಶ್ವವನ್ನೇ ತನ್ನ ಕಡೆಗೆ ಸೆಳೆದುಕೊಂಡ
ಸಂಗೀತ ಲೋಕದ ಶ್ರೇಷ್ಟ ಗಾಯಕಿ ನಮ್ಮ ಗಂಗೂಬಾಯಿ ಹಾನಗಲ್ . ಇದೋ ತಾಯಿ ನಿನಗೆ ನನ್ನ ನಮನ.

ನನ್ನಿಂದ ಇದಿನಿಯ ವರೆಗೂ ಏನನ್ನು ಸಾಡಿಸಲು ಆಗಿಲ್ಲ ಅಂತ ನಾನು ಯಾವತ್ತು ಕೊರಗುವುದಿಲ್ಲ ಏಕೆಂದರೆ "
ಸಾದನೆ ಮಾಡಿದವರ ಸ್ಮರಿಸುವುದೇ ಒಂದು ದೊಡ್ಡ ಸಾದನೆ ಅಲ್ವ !


ಬತ್ತಿ ಹೋದ ಸಂಗೀತದ ನದಿಯನ್ನು "ಗಂಗೆ"ಯಂತೆ ತುಂಬಿಸಲು ಮತ್ತೆ ನೀ ಹುಟ್ಟಿಬಾ"

ಇಂತಿ

ತೇವವಾದ ಕಣ್ಣೀರಿನ ರೆಪ್ಪೆಯಲ್ಲಿ
ನಿಮ್ಮ ದೊಡಮನಿ.ಮಂಜು

5 comments:

 1. ಚೆನ್ನಾಗಿ ಬರೆದಿದ್ದೀಯ. ಒಳ್ಳೆ ಕೆಲಸ. ಜನ ತಿಳಿದುಕೊಳ್ಳಬೇಕು ಇವರ ಬಗ್ಗೆ,

  ReplyDelete
 2. ತುಂಬು ಹೃದಯದ ಧನ್ಯವಾದಗಳು ಸರ್
  ನಿಮ್ಮ ಸಲಹೆ ಯಾವತ್ತು ನನಗೆ ಹೀಗೆ ಇರಲಿ !

  ಇಂತಿ
  ದೊಡ್ಡಮನಿ.ಮಂಜು

  ReplyDelete
 3. ಹೃದಯದ ಮೇಲೆ ದೇವರ ಸ್ವಂತಃ ಕೈ ಬರಹದ ಸಹಿಯುಳ್ಳ ಹುಡುಗಿ ನೀನು ...

  ಬಾವುಕತೆಯೆಂಬುದು ನಿನ್ನ ಅಡಿಯಾಳಾಗಿದೆಯೋ, ಇಲ್ಲಾ ನೀನೇ ಬಾವುಕತೆಯನ್ನು ಹೈಜಾಕ್ ಮಾಡಿ ಬಚ್ಚಿಟ್ಟುಕೊಂಡಿದ್ದೀಯೋ ಗೊತ್ತಾಗುತ್ತಿಲ್ಲ . ಹಾಗೆಂದು.......

  ಬಾವನೆಗಳೇ ಇರಬಾರದೆಂದೇನೊ ಇಲ್ಲಾ..ಆದರೆ

  ಬರೀ ಬಾವನೆಗಳೇ ಜೀವನವಾಗಬಾರದು ಅಲ್ಲವೇ?

  ಆ ಮಟ್ಟಗೆ ಇದೊಂದು ವಿಭಿನ್ನ ಸ್ನೇಹವೇ ಸರೀ..ಯಾಕೆಂದರೆ ?

  ಒಬ್ಬ ಹುಡುಗ+ಹುಡುಗ, ಒಬ್ಬಳು ಹುಡುಗಿ+ ಹುಡುಗಿ,

  ಮಾತ್ರ ಪ್ರಾಣ ಸ್ನೇಹಿತರಾಗಿರಬಹುದು. ವಿನಃ

  ಹುಡುಗ + ಹುಡುಗಿ ಅಲ್ಲಾ ಇದು ಈ ಲೋಕದ ಅ ಲಿಖಿತ ನಿಯಮ..
  ಅದೇನೇ ಇರಲಿ...ನಮ್ಮ ಸ್ನೇಹದ ಆರಂಭದ ದಿನಗಳ

  ಈ ಅನುಬಂಧ ಕೊನೆಯವರೆಗೆ ಕಾಯ್ದುಕೊಂಡು

  ಹೋಗಬೇಕಾದದ್ದು ಕೂಡ ಅಗತ್ಯ . ಅಲ್ಲವೇ?

  ReplyDelete
 4. gangu bayi hanagal avara sangeetha nangu thumba ista, avara gayanada bagge barediruvudakke thumba thanks.

  ReplyDelete